ಮಂಗಳವಾರ, ಆಗಸ್ಟ್ 03, 2010

Kavalu: A Pre-Publication Review - ಸ್ವರೂಪ ಹಾಗೂ ಸಿದ್ಧಾಂತಗಳ ಸಂಘರ್ಷ

 (Published in SK much before the official release of the novel.)




ಡಾ. ಎಸ್. ಎಲ್. ಭೈರಪ್ಪನವರ 300 ಪುಟಗಳ ಹೊಸ ಕಾದಂಬರಿ `ಕವಲು' ಹೊಸ ಸಾಮಾಜಿಕ ಸನ್ನಿವೇಶಗಳತ್ತ ಪರಿಣಾಮಕಾರಿಯಾಗಿ ನಮ್ಮ ಗಮನ ಸೆಳೆಯುತ್ತದೆ. ತುಂಬ ಗಟ್ಟಿತನದ, ಗಂಭೀರ ಆಲೋಚನೆಯನ್ನು ಅತ್ಯಗತ್ಯವಾಗಿಸುವ ಕಾದಂಬರಿ.

ವಿಕೃತ `ಸೆಕ್ಯುಲರಿಸಂ'ನ ಪ್ರಯೋಗಗಳನ್ನು ಭೈರಪ್ಪನವರ ಹಿಂದಿನ ಕಾದಂಬರಿ `ಆವರಣ' ಕಾಣಿಸಿದರೆ, `ಕವಲು' ವಿಕೃತ `ಫೆಮಿನಿಸಂ'ನ ಹಾಗೂ ಮಹಿಳಾ ಪರ ಕಾನೂನುಗಳ ಪರಿಣಾಮಗಳ ವಿಶ್ಲೇಷಣೆಯನ್ನು ಜೀವನ ಘಟನಾವಳಿಯ ಮೂಲಕ ನಡೆಸುತ್ತದೆ. ಇವೆರಡೂ ಓದಿದವರನ್ನು ಹಲವಿಧಗಳಲ್ಲಿ `ಕಾಡುವ' ಕಾದಂಬರಿಗಳು.

ಸಾಮಾಜಿಕ ಹಾಗೂ ರಾಜಕೀಯ ನೆಲೆಗಳಲ್ಲಿ ಸೈದ್ಧಾಂತಿಕ ಸ್ಥಿತ್ಯಂತರಗಳಾಗುವ ಸಮಯದಲ್ಲಿ ತಲೆದೋರುವ ವೈಯಕ್ತಿಕ ಹಾಗೂ ವ್ಯವಸ್ಥೆಗಳ ಮಟ್ಟದ ಪತನಗಳು ಭೈರಪ್ಪನವರ ಈ ಹಿಂದಿನ `ತಂತು' ಹಾಗೂ `ಮಂದ್ರ' ಕಾದಂಬರಿಗಳಲ್ಲಿ ಎಳೆ ಎಳೆಯಾಗಿ ಬಿಂಬಿತವಾಗಿದ್ದವು. ಇಲ್ಲಿ ಈ ಅಂಶಗಳು ಇನ್ನೂ ಹೆಚ್ಚಿನ ಸಾಂದ್ರತೆ ಹಾಗೂ ವಿಸ್ತರಣೆಗಳನ್ನು ಪಡೆದುಕೊಂಡಿವೆ.
ಅಸ್ತಿತ್ವವಾದಕ್ಕೆ ತಳುಕು ಹಾಕಿಕೊಂಡ ಸ್ತ್ರೀವಾದ, ಮಾಕ್ಸರ್್ವಾದ, ಫ್ರಾಯ್ಡ್ ಸಿದ್ಧಾಂತ, ಎಡಪಂಥ - ಇವುಗಳನ್ನು ವೈಯಕ್ತಿಕ ಜೀವನದಲ್ಲಿ ಪ್ರಯೋಗಿಸಿಕೊಳ್ಳುವುದು, ಜೊತೆಗೆ ಕಲಿತವರ ಸ್ವ-ಕೇಂದ್ರಿತ ಸಂಕುಚಿತ ಮನೋಭಾವ, ಅವಕಾಶವಾದ, ಅನುಕೂಲವಾದ, ಸ್ವೇಚ್ಛಾಚಾರ, ವಿವಾಹಪೂರ್ವ ಹಾಗೂ ವಿವಾಹೇತರ ಕಾಮ, ಸ್ತ್ರೀ ಸಲಿಂಗಕಾಮ, ಡೈವೋಸರ್್, ಅವುಗಳ ಪರಿಣಾಮಗಳು  - ಇವುಗಳೆಲ್ಲ ಒಟ್ಟಾರೆಯಾಗಿ ಭಾರತೀಯ ಕುಟುಂಬ ವ್ಯವಸ್ಥೆಯ ಮೇಲೆ, ಅದರ ಒಟ್ಟಾರೆ ಆರೋಗ್ಯ ಹಾಗೂ ಸಂತುಲನದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತಿವೆ ಎಂಬುದು ಮೂಲ ಕಥಾವಸ್ತು.

* ಬುದ್ಧಿಕುಂಠಿತ ಮಗಳಿರುವ, ಹೆಂಡತಿ ಸತ್ತ ಮೂರು ವರ್ಷಗಳ ನಂತರ ಕಾಮಪೀಡನೆ ಸಹಿಸಲಾರದೆ ಆಪ್ತ ಸಹಾಯಕಿ ಮಂಗಳೆಯ ಸಂಗ ಬಯಸುವ, ನಂತರ ಆಕೆಯ ಬ್ಲ್ಯಾಕ್ಮೇಲ್ಗೆ ಸಿಕ್ಕಿ ಅವಳನ್ನು ಮದುವೆಯಾಗುವ, ತದನಂತರ ಕರೆವೆಣ್ಣುಗಳ ಆಕರ್ಷಣೆಗೂ ಒಳಗಾಗಿ ಕಾನೂನು ಕಪಿಮುಷ್ಠಿಯಲ್ಲಿ ಸಿಲುಕಿಕೊಳ್ಳುವ ಉದ್ಯಮಿ ಜಯಕುಮಾರ್ -

* ವಿಶ್ವವಿದ್ಯಾಲಯದಲ್ಲಿ ಪಶ್ಚಿಮದ ಸ್ವಕೇಂದ್ರಿತ ಸ್ವೇಚ್ಛಾಚಾರ ಹಾಗೂ ಸ್ತ್ರೀವಾದಗಳನ್ನು ಮೈಗೂಡಿಸಿಕೊಂಡಿರುವ `ಬರಿ ಹಣೆಯ, ಸೂತಕದ ಕಳೆಯಿರುವ', ಅನುಕೂಲವಾದಿ, ಮಂಗಳೆ-

*  ಫೆಮಿನಿಸಂ, ಫ್ರೀಸೆಕ್ಸ್ಗಳನ್ನು ತರಗತಿಯಲ್ಲಿ ಬೋಧಿಸುವ ಹಾಗೂ ಅವುಗಳನ್ನು ತನ್ನ ವೈಯಕ್ತಿಕ ಜೀವನದಲ್ಲೂ ಪ್ರಯೋಗಿಸಿಕೊಳ್ಳುವ ಡಾ. ಇಳಾ -

* ಪಶ್ಚಿಮದ ಸಂಪರ್ಕವಿರುವ ಉನ್ನತ ಹುದ್ದೆಯಲ್ಲಿದ್ದರೂ ತನ್ನ ಬುದ್ಧಿಭಾವಗಳ ಸಹಜ ಸ್ವರೂಪವನ್ನು ತ್ಯಜಿಸದ ಆಕೆಯ ಪತಿ ವಿನಯಚಂದ್ರ -

* ಒಟ್ಟು ಕುಟುಂಬದ ಹಿತಕ್ಕೆ ಕಂಟಕವಾಗುವ ಸೊಸೆಯನ್ನು `ನಿಮ್ಮಪನ ಮನೆಯಿಂದೇನು ತಂದಿದ್ದೀಯ?' ಎಂದು ಕೇಳಿ ವರದಕ್ಷಿಣೆ ಕೇಸಿನಲ್ಲಿ ಜೈಲಿಗೆ ಹೋಗುವ ವೃದ್ಧೆ ರಾಜಮ್ಮ -

* `ಲಿವಿಂಗ್ ಟುಗೆದರ್' ಸಂಬಂಧದಲ್ಲಿ ದಾಂಪತ್ಯದ ಬದ್ಧತೆ ಹಾಗೂ ಸ್ಥಿರತೆಗಳನ್ನು ಬಯಸುವ, ನಂತರ ಪ್ರಿನಪ್ಷಲ್ ಅಗ್ರಿಮೆಂಟ್ ಇಲ್ಲದೇ ಎರಡು ಮಕ್ಕಳ ತಾಯಿಯೊಬ್ಬಳನ್ನು ಮದುವೆಯಾಗಿ ಅನಂತರ ವಿಚ್ಚೇದಿತನಾಗಿ ತನ್ನ ಸಂಬಳದ ಮುಕ್ಕಾಲು ಪಾಲನ್ನು ಕಳೆದುಕೊಂಡು ಇತ್ತ ಭಾರತೀಯನೂ ಅಲ್ಲದ, ಅತ್ತ ಪೂರ್ಣ ಅಮೆರಿಕನ್ನೂ ಅಲ್ಲದ ಸ್ಥಿತಿ ತಲುಪುವ ಅಮೆರಿಕದ ಪಸ್ಟ್ ಜನರೇಷನ್ ಇಮಿಗ್ರೆಂಟ್ ನಚಿಕೇತ -

* ಬುದ್ಧಿಕುಂಠಿತ ಮುಗ್ಧ ಹುಡುಗಿ ವತ್ಸಲೆ (ಪುಟ್ಟಕ್ಕ) ಹಾಗೂ ತನ್ನ ಸಮಾಜದ ಸಹಜ ಮೌಲ್ಯಗಳನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಸಾಗುವ ಹುಡುಗಿ ಸುಜಯಾ -

* ಸ್ತ್ರೀಲೋಲ ಹಾಗೂ ವ್ಯವಹಾರ ಚತುರನಾದ ಟ್ರಾನ್ಸ್ಪೋಟರ್್ ಅಧಿಕಾರಿ ಪ್ರಭಾಕರ, ಮಂತ್ರಿ ದೊರೆರಾಜು; ಫೆಮಿನಿಸ್ಟ್ ಅಡ್ವೋಕೇಟ್ಗಳಾದ ಮಾಲಾ ಕೆರೂರ್ ಮತ್ತು ಚಿತ್ರಾ ಹೊಸೂರ್ -

- ಇವರೆಲ್ಲ ಓದುಗರ ಬುದ್ಧಿಭಾವಗಳ ಪ್ರಚೋದಕರಾಗುವಂತೆ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.

`ಸಮಾಜೋನ್ನತ' ವರ್ಗದ ಈ ವ್ಯಕ್ತಿಗಳ ಜೀವನ-ದರ್ಶನ ಮಾಡಿಸುತ್ತ ಕಥೆ ಸಾಗುತ್ತದೆ. ಕೆಲವು ವರ್ಷಗಳ ಅವಧಿಯಲ್ಲಿ ನಡೆಯುವ ಘಟನಾವಳಿಗಳು ಬಿಚ್ಚಿಕೊಂಡಂತೆ, `ಅಬಲೆ'ಯರ ಹಿತರಕ್ಷಣೆಗೆಂದು ಪಶ್ಚಿಮದ ದೇಶಗಳಿಂದ ಸ್ಫೂತರ್ಿ ಪಡೆದು ರಚಿಸಲಾಗಿರುವ ಕಾನೂನುಗಳ `ಡ್ರೆಕೋನಿಯನ್' ಸ್ವರೂಪ; ಅವುಗಳನ್ನು ವಿದ್ಯಾವಂತ `ಸಬಲೆ'ಯರು, ದುರುಪಯೋಗ ಮಾಡಿಕೊಳ್ಳುತ್ತಿರುವ ರೀತಿಗಳು; ವೃತ್ತಿಪರ ವಕೀಲರ ಹಾಗೂ ಸೈದ್ಧಾಂತಿಕ ಚಳವಳಿಗಾರರ ಅಣತಿಗೊಳಪಟ್ಟು ನಿಮರ್ಾಣವಾಗುವ ಕೌಟುಂಬಿಕ ಸನ್ನಿವೇಶಗಳು, ಕಾನೂನುಗಳು ಹಾಗೂ ತೀಪರ್ುಗಳು - ಇವೆಲ್ಲದರ ವಿಶ್ಲೇಷಣೆ ಬರುತ್ತದೆ.

ವರದಕ್ಷಿಣೆ, ಕೌಟುಂಬಿಕ ಹಿಂಚಾಚಾರ ಮುಂತಾದ ಕೆಲವು ಕೌಟುಂಬಿಕ ವಿಷಯಗಳಲ್ಲಿ ಕೇವಲ ಆರೋಪವೇ ಸಾಕು, ಶಿಕ್ಷೆಯಾಗಲು' ಎಂಬಂತಹ ಪರಿಸ್ಥಿತಿಯ ದುಲರ್ಾಭವನ್ನು ಹೇಗೆಲ್ಲ ಪಡೆಯಬಹುದು ಎಂಬುದು ಕಥೆಯೊಳಗೆ ಹಾಸುಹೊಕ್ಕಾಗಿ ಮೂಡಿಬರುತ್ತದೆ.

`ಬೇರೆ ಹೆಣ್ಣಿನ ಸಂಪರ್ಕ ಸಿಗದಂತೆ ವಿವಾಹದ ಬಂಧನನಲ್ಲಿ ಸಿಕ್ಕಿಸಿಕೋಬೇಕು... ಮರು ಮದುವೆ ಸಾಧ್ಯವಿಲ್ಲದಂತೆ ಮಾಡಲು ವಿಚ್ಚೇದನ ಕೊಡದೇ ನರಳಿಸಬೇಕು.. ಮದುವೆಯಾದ ಕ್ಷಣದಿಂದ ಗಂಡನ ಸಮಸ್ತ ಸ್ವಯಾಜರ್ಿತ ಹಾಗೂ ಪಿತ್ರಾಜರ್ಿತ ಆಸ್ತಿಯ ಅರ್ಧಭಾಗದ ಯಜಮಾನಿಕೆ ಹಕ್ಕು ಹೆಂಡತಿಗೆ ತಂತಾನೆ ಬಂದುಬಿಡುವಂತೆ ಕಾನೂನು ತರಬೇಕು... ವರದಕ್ಷಿಣೆ ಕಾನೂನಿನಡಿ ಅವನ ಸಂಬಂಧಿಕರನ್ನೆಲ್ಲ ನರಳಿಸಬೇಕು..' - ನವ ಸ್ತ್ರೀವಾದಿಗಳ ಈ ಮಾನಸಿಕತೆಗಳು, ಲಾಲಸೆಗಳು ಸೃಷ್ಟಿಸುತ್ತಿರುವ ತಾಕಲಾಟಗಳ, ಸಮಸ್ಯೆಗಳ ಚಿತ್ರಣವಿದೆ.

`ಯಾವ ಭಾರತೀಯ ಹೆಂಗಸೂ ತನ್ನ ಶೀಲದ ವಿಷಯದಲ್ಲಿ ಸುಳ್ಳು ಹೇಳಲ್ಲ' ಎಂದು ಈಚೆಗೆ ಸುಪ್ರೀಮ್ ಕೋಟರ್್ ನ್ಯಾಯಾಧೀಶರು (ಮುಗ್ಧವಾಗಿ?) ಅಭಿಪ್ರಾಯಪಟ್ಟಿರುವುದನ್ನು ನೆನಪಿಸುವ ಸನ್ನಿವೇಶಗಳು ಬರುತ್ತವೆ.

`ಕೋಟರ್ು ಹೆಂಗಸಿನ ಕಡೆ ವಾಲುತ್ತೆ. ಯಾಕೆಂದರೆ ನಮ್ಮ ಮಹಿಳೆ ಇನ್ನೂ ಸೀತಾ ಸಾವಿತ್ರಿಯ ಅಪರಾವತಾರ ಅನ್ನುವ ಗ್ರಹಿಕೆಯಿಂದ ಕಾನೂನು ರೂಪಿಸಿದಾರೆ' ಎನ್ನುವ ವಕೀಲ ಶಿವಪ್ರಕಾಶರ ಹೇಳಿಕೆ; `ನ್ಯಾಯ, ಅನ್ಯಾಯ, ಮೌಲ್ಯ, ಅಪಮೌಲ್ಯಗಳಾವುವೂ ಕಾನೂನಿಗೆ ಸಂಬಂಧಿಸಿದ್ದಲ್ಲ, ಇರುವ ಕಾನೂನನ್ನು ಬಳಸಿಕೊಂಡೇ ಪ್ರತಿಯೊಂದು ಪಾಟರ್ಿಯೂ ಸಾಧ್ಯವಿದ್ದಷ್ಟನ್ನು ಗುಂಜಿಕೊಳ್ಳುವುದಷ್ಟೇ ಎಲ್ಲೆಲ್ಲಿಯೂ ನಡೆಯೂದು. ಈ ವಿಷಯದಲ್ಲಿ ನ್ಯಾಯಾಧೀಶರಿಗೆ ಯಾವ ಸ್ವಾತಂತ್ರ್ಯವೂ ಇಲ್ಲ... ಇಂಥ ಯಾವ ವಿವಾದದಲ್ಲೂ ಕೋಟರ್ು ಹೆಂಗಸಿನ ಮಾತನ್ನ ನಂಬುತ್ತೆಯೇ ಹೊರತು, ಗಂಡಸಿನ ಮಾತಿಗೆ ಬೆಲೆಕೊಡುಲ್ಲ ' ಎಂಬ ವಕೀಲ ಸುಬ್ಬರಾಮಯ್ಯನ ವಿಶ್ಲೇಷಣೆ; `ಓದಿದ ಗಂಡಸರೆಲ್ಲ ಎಂಗಸರಾಗ್ತಾರೆ. ಓದಿದ ಎಂಗಸರೆಲ್ಲ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ ಎಂಗಸರು ಎಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು' ಎಂಬ ಕಾನ್ಸ್ಟೇಬಲ್ ನಂಜುಂಡೇಗೌಡನ ಅನಿಸಿಕೆ - ಇವೆಲ್ಲ ಹೊಸ ಕ್ರೂರ ಸನ್ನಿವೇಶಗಳಿಗೆ ವಿವಿಧ ಸ್ತರಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯ-ಪ್ರತಿಕ್ರಿಯೆಗಳು.

ಆಧುನಿಕ ಹೆಂಗಸರಿಂದ ಹಾಗೂ ಏಕಮುಖಿ ಕಾನೂನುಗಳಿಂದ ಒಟ್ಟು ಕುಟುಂಬ, ಗಂಡಸರು ಹಾಗೂ ವಯೋವೃದ್ಧರು ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿಶ್ಲೇಷಿಸುತ್ತ ಭಾರತೀಯ ಕುಟುಂಬದ ಸೌಹಾರ್ದತೆ, ಸುಸ್ಥಿರತೆಗಳಿಗೆ ಉಂಟಾಗುತ್ತಿರುವ ಭಂಗವನ್ನು `ಕವಲು' ಅನ್ವೇಷಿಸುತ್ತದೆ.

`ನಮ್ಮಪ್ಪ ನಿಮ್ಮಪ್ಪ ಅಣ್ಣ-ತಮ್ಮಂದಿರು. ಆದ್ದರಿಂದ ನಾವು ಅಣ್ಣ-ತಂಗಿಯರೇ ಹೊರತು `ಕಸಿನ್'ಗಳಲ್ಲ' ಎಂಬರ್ಥದಲ್ಲಿ ಬರುವ ಹುಡುಗ ಸತೀಶನ ಮಾತುಗಳು ಭಾರತೀಯ ಕುಟುಂಬದ ಕಲ್ಪನೆಯನ್ನು ಕಾಣಿಸುತ್ತದೆ.

`ಪಿತ್ರಾಜರ್ಿತ ಆಸ್ತಿಯನ್ನು ಕಷ್ಟದಲ್ಲಿರುವ ತಮ್ಮನಿಗೆ ಬಿಟ್ಟುಕೊಡಕೂಡದು ಅಂತ ನಿನ್ನ ಆಧುನಿಕ ಧರ್ಮಶಾಸ್ತ್ರವಾದ ಸಂವಿಧಾನ ಹೇಳಿಲ್ಲ. ಕಾಹಿಲೆ ಬಿದ್ದ ಅವನ ಹೆಂಡತಿಗೆ ಚಿಕಿತ್ಸೆ ಮಾಡಿಸಿ ಬದುಕಿಸಬಾರದು ಅಂತ ನಿನ್ನ ಸಂವಿಧಾನ ಹೇಳುತ್ತೆಯೆ?' - ಎಂಬ ವಿನಯನ ಪ್ರಶ್ನೆ ಭಾರತೀಯ ಸಮಾಜದ್ದೂ ಆಗುತ್ತದೆ.

ಭಾರತೀಯ ಜೀವನ ಕ್ರಮದಲ್ಲಿ ಸಹಜವಾಗಿ ಬೆಳೆದುಬಂದಿರುವ ಮೌಲ್ಯ, ಬದ್ಧತೆ, ಬಾಧ್ಯತೆಗಳ ಮತ್ತು ಹೊಸ ಲಾಲಸ ಸನ್ನಿವೇಶಗಳು ಸೃಷ್ಟಿಸುತ್ತಿರುವ ಸ್ವಕೇಂದ್ರಿತ ಹಕ್ಕೊತ್ತಾಯಗಳ ನಡುವಣ ಸಂಘರ್ಷವನ್ನು ಘಟನಾವಳಿಯ ಮೂಲಕ ಭೈರಪ್ಪ ಕಾಣಿಸುತ್ತ ಹೋಗುತ್ತಾರೆ. ವಿವಿಧ ರೀತಿಯ ನಂಬಿಕೆ, ಚಿಂತನೆಗಳಿರುವ ಪಾತ್ರಗಳು ತಮ್ಮದೇ ದೃಷ್ಟಿಯಿಂದ ನಿರೂಪಣೆ ಮಾಡುತ್ತ ಹೋಗುತ್ತವೆ. ಭೈರಪ್ಪ ತಾವೇ ಸ್ವತಃ `ಜಜ್ಮೆಂಟಲ್' ಆಗದಿದ್ದರೂ ಕಡೆಗೆ ಕೆಲವು ಪಾತ್ರಗಳಿಗೆ ಯಾವುದೋ ರೀತಿಯ ನೆಲೆಗಳನ್ನು ಒದಗಿಸಿಕೊಡುತ್ತಾರೆ. ಕೆಲವು `ಶೋಷಿತ' ಪಾತ್ರಗಳನ್ನು ನೈತಿಕವಾಗಿ `ಗೆಲ್ಲಿಸುತ್ತಾರೆ' ಎನ್ನಬಹುದು.

ಸಿದ್ಧಾಂತ ಪ್ರವರ್ತನೆ, ಕಾಮ, ಸ್ವಕೇಂದ್ರಿತ ಚಿಂತನೆಗಳಂತಹ ಸೂಕ್ಷ್ಮ ವಿಷಯಗಳನ್ನು ಹಲವು ದಿಕ್ಕುಗಳಿಂದ ವಿಶ್ಲೇಷಿಸುವ ಪ್ರೌಢಿಮೆ ಹಾಗೂ ಜಾಣ್ಮೆ ಅವರಿಗೆ ಕರಗತವಾಗಿದೆ. ಅವರ ಲೋಕಾನುಭವ, ಕೌಶಲ ಎದ್ದುಕಾಣುತ್ತವೆ.

`ತಂತು' ಹಾಗೂ `ಮಂದ್ರ'ಗಳಲ್ಲಿ ಬಳಕೆಯಾಗಿರುವ ತಂತ್ರದ ಮುಂದುವರಿದ ರೂಪ `ಕವಲು'ವಿನಲ್ಲಿ ಕಾಣುತ್ತದೆ. ಹಾಗೆಯೇ ಈ ಕಾದಂಬರಿಯ ಹಲವು ಪಾತ್ರಗಳು ಭೈರಪ್ಪನವರ ಓದುಗರಿಗೆ ಪರಿಚಿತವಿರುವಂತೆ (ಉದಾ: ಇಳಾ ಹಾಗೂ ಮಂಗಳೆಯರಲ್ಲಿ `ತಂತು'ವಿನ ಕಾಂತಿ, `ಅಂಚು'ವಿನ ಅಮೃತಾ ಛಾಯೆಗಳು ಕಾಣುತ್ತವೆ) ಕಂಡುಬರುತ್ತವೆ. ಆದರೂ ನಿರೂಪಣೆಯಲ್ಲಿ ಹೊಸ ಆಳ, ವಿಶ್ಲೇಷಣೆ ಹಾಗೂ ಒಳನೋಟಗಳನ್ನು ಕಾಣಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಆಧುನಿಕ ಸ್ತ್ರೀವಾದದಂತಹ `ಸ್ಫೋಟಕ' ವಿಷಯದ ಮೇಲೆ ಬರೆಯುವಾಗ ತಮ್ಮ ಎಂದಿನ ನೇರವಂತಿಕೆ, ಹಾಗೂ ಧೈರ್ಯಗಳನ್ನು ಮೆರೆದಿದ್ದಾರೆ.

`ಕಿಂದರಿ ಜೋಗಿ' ಹಾಗೂ `ಕಿಂದರಿ ಜೋಗಿ ಹಬ್ಬ'

* ಕನರ್ಾಟಕದ ಇತಿಹಾಸದಲ್ಲಿ ಹಲವು ಪ್ರಥಮಗಳನ್ನು ಸೃಷ್ಟಿಸಿರುವ ಹೆಗ್ಗಳಿಕೆ ನಾಡಿನ ಹಿರಿಯ ಪತ್ರಿಕೆಯಾದ `ಸಂಯುಕ್ತ ಕನರ್ಾಟಕ'ದ್ದು. 2007ರಲ್ಲಿ ನಾವು ಆರಂಭಿಸಿದ ಮಕ್ಕಳ ವಿಶೇಷ ಪುರವಣಿ `ಕಿಂದರಿ ಜೋಗಿ' ಇಂದು ನಾಡೆಲ್ಲ ಮನೆಮಾತಾಗಿದೆ. ಪ್ರತಿ ಶನಿವಾರ ಪ್ರಕಟವಾಗುವ ಇದು ನಾಡಿನಲ್ಲೇ ವಿಶಿಷ್ಟ ಪುರವಣಿ ಎನಿಸಿದೆ. ಕನ್ನಡದ ಯಾವ ಪತ್ರಿಕೆಯೂ ಮಕ್ಕಳಿಗಾಗಿ ಇಂತಹ ಒಂದು ಅತ್ಯುಪಯುಕ್ತ ಪುರವಣಿಯನ್ನು ಇದುವರೆಗೆ ಆರಂಭಿಸಿಲ್ಲ, ಇಷ್ಟು ಯಶಸ್ವಿಯಾಗಿ ನಡೆಸಿಲ್ಲ.

* ಪ್ರತಿವಾರ ಸುಮಾರು 10-12 ಲಕ್ಷ ಮಕ್ಕಳು `ಕಿಂದರಿ ಜೋಗಿ' ಪುರವಣಿಯನ್ನು ಓದುತ್ತಾರೆ. ಅವರ ಪಠ್ಯಕ್ಕೆ ಪೂರಕವಾದ ಹಾಗೂ ಪಠ್ಯವನ್ನು ಮೀರಿದ ಅದ್ಭುತ ಮಾಹಿತಿ ಹಾಗೂ ಮನೋರಂಜನೆಗಳನ್ನು ಪಡೆಯುತ್ತಿದ್ದಾರೆ.

* 12 ವರ್ಣಮಯ ಪುಟಗಳು, ಆಕರ್ಷಕ ವಿನ್ಯಾಸ ಹೊಂದಿರುವ `ಕಿಂದರಿ ಜೋಗಿ'ಯಲ್ಲಿ ಪ್ರತಿವಾರವೂ ಹೊಸ ಹೊಸ ವೈಜ್ಞಾನಿಕ ಸಂಶೋಧನೆಗಳು, ಆಯಾ ವಾರದ ವೈಜ್ಞಾನಿಕ ಕ್ಷೇತ್ರದ ಬೆಳವಣಿಗೆಗಳು, ಬುದ್ಧಿಗೆ ಕಸರತ್ತು ಕೊಡುವ ಆಟಗಳು, ನೈತಿಕ ಶಿಕ್ಷಣ, ವಿಶ್ವಕೋಶ, ವ್ಯಕ್ತಿತ್ವ ಬೆಳವಣಿಗೆಯ ಮಾರ್ಗದರ್ಶನ, ವೈವಿಧ್ಯಮಯ ವಿಷಯಗಳನ್ನು ತಿಳಿಸುವ `ಸಂಜೀವನ' ಅಂಕಣ, ಕಥೆ-ಕವನ, ಸಂಸೃತಿ, ಇತಿಹಾಸ - ಇವೆಲ್ಲ ಇರುತ್ತವೆ. ಆದರೆ ಇವು ಪಠ್ಯಪುಸ್ತಕದ ರೀತಿ ಇರದೇ, ಮಕ್ಕಳೇ ಮುಗಿಬಿದ್ದು ಓದಲು ತವಕ ಪಡುವ ಹಾಗಿರುವುದು `ಕಿಂದರಿ ಜೋಗಿ'ಯ ವಿಶೇಷತೆ.

* ಮಕ್ಕಳ ಶಿಕ್ಷಣ, ಜ್ಞಾನ ಹಾಗೂ ಮನೋರಂಜನೆಗಳಿಗೆ ಇಷ್ಟೆಲ್ಲ ವಿಷಯಗಳನ್ನು ಒಂದೇ ಪುರವಣಿಯಲ್ಲಿ ನೀಡುತ್ತಿರುವುದು ಕೇವಲ ನಾವು ಮಾತ್ರ. ಇದರ ಜೊತೆಗೆ ಮಕ್ಕಳು ತಮ್ಮ ಸ್ವಂತ ಬರಹಗಾರಿಕೆ ಹಾಗೂ ಚಿತ್ರರಚನೆಯ ಪ್ರತಿಭೆಯನ್ನು ತೋರಲೂ ಸಹ ಪುರವಣಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

* ನಮಗೆ ತಿಳಿದಿರುವ ಹಾಗೆ, ದೇಶವ್ಯಾಪಿ ಪ್ರಸಾರವಿರುವ ಕೆಲವು ಹಿಂದಿ ಹಾಗೂ ಇಂಗ್ಲಿಷ್ ಪತ್ರಿಕೆಗಳು ಮಕ್ಕಳ ಪುರವಣಿಗಳನ್ನು ಹೊರತರುತ್ತಿವೆ. ಆದರೆ ಈ ಪೈಕಿ ಬಹುತೇಕ ಪತ್ರಿಕೆಗಳು ತಾವೇ ನೇರವಾಗಿ ಈ ಪುರವಣಿಗಳನ್ನು ತಯಾರಿಸುತ್ತಿಲ್ಲ. ಇತರ ವೃತ್ತಿಪರ ವ್ಯಾಪಾರೀ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡಿ ತಮ್ಮ ಬ್ರಾಂಡ್ ನೇಮ್ನಲ್ಲಿ ತಯಾರಿಸಿಕೊಳ್ಳುತ್ತಿವೆ. ಆದರೆ `ಕಿಂದರಿ ಜೋಗಿ' ನೂರಕ್ಕೆ ನೂರರಷ್ಟು ನಮ್ಮ ಸ್ವಂತ ತಯಾರಿಕೆ. ಸಂಪಾದಕೀಯ, ವಿನ್ಯಾಸ ಹಾಗೂ ಮುದ್ರಣ - ಎಲ್ಲವೂ ನಮ್ಮದೇ ಎಂದು ಈ ಸಂದರ್ಭದಲ್ಲಿ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.

* ಪ್ರತಿದಿನ ನಮ್ಮ ಕಾಯರ್ಾಲಯಕ್ಕೆ ವಿದ್ಯಾಥರ್ಿಗಳಿಂದ ನೂರಾರು ಪತ್ರಗಳು ಬರುತ್ತವೆ. ಚಿತ್ರಗಳು, ಲೇಖನಗಳು, ಕವನಗಳು ಬರುತ್ತವೆ. ಅಷ್ಟರ ಮಟ್ಟಿಗೆ ಪುರವಣಿಯು ಜನಪ್ರಿಯತೆ ಗಳಿಸಿದೆ.

* `ಕಿಂದರಿ ಜೋಗಿ'ಗೆ ಇನ್ನೂ ಒಂದು ವಿಶೇಷತೆಯಿದೆ. ಇದು ಬಹಳ ಮುಖ್ಯವಾದದ್ದು. ಅದೇನೆಂದರೆ, ಈ ಪುರವಣಿ ಕನರ್ಾಟಕದಾದ್ಯಂತ ನೇರವಾಗಿ ಶಾಲೆಗಳನ್ನು, ಶಾಲೆಯ ಮೂಲಕ ಮಕ್ಕಳನ್ನು ತಲುಪುತ್ತಿರುವುದು.

* ಶಾಲೆಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ನಾವು ಪ್ರತಿ ಶನಿವಾರ `ಸಂಯುಕ್ತ ಕನರ್ಾಟಕ'ವನ್ನು ನೀಡುತ್ತಿದ್ದೇವೆ. ಅನೇಕ ಬಡವಿದ್ಯಾಥರ್ಿಗಳಿಗೆ ಉಚಿತವಾಗಿಯೂ ತಲುಪಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾಡಿನ ಹಲವು ಗಣ್ಯರ ಹಾಗೂ ಸಂಸ್ಥೆಗಳ ನೆರವು ನಮಗೆ ಸಿಕ್ಕಿದೆ.

* ಶಾಲೆಗಳನ್ನು ತಲುಪುವುದೆಂದರೆ, ಶಾಲೆಯ ಲೈಬ್ರರಿಯನ್ನೋ, ಪ್ರಿನ್ಸಿಪಾಲರ ಕೋಣೆಯನ್ನೋ ತಲುಪುವುದಲ್ಲ. ಪ್ರತಿ ಶಾಲೆಗೂ ನಾವು ರಿಯಾಯಿತಿ ದರದಲ್ಲಿ ನೂರಾರು ಪ್ರತಿಗಳನ್ನು ಕಳುಹಿಸುತ್ತೇವೆ. ಅವುಗಳನ್ನು ವಿದ್ಯಾಥರ್ಿಗಳು ಶಾಲೆಯಿಂದ ಪಡೆದುಕೊಂಡು ಮನೆಗೆ ತೆಗೆದುಕೊಂಡು ಹೋಗಿ ಇಟ್ಟುಕೊಳ್ಳುತ್ತಾರೆ. ಈ ಪ್ರಸರಣಾ ಮಾದರಿ ತುಂಬ ಯಶಸ್ವಿಯಾಗಿದೆ.

* `ಸಂಯುಕ್ತ ಕನರ್ಾಟಕ'ವು ತನ್ನ ದೈನಂದಿನ ಪ್ರಸಾರ ಸಂಖ್ಯೆಗಿಂತಲೂ ಶನಿವಾರದಂದು ಸುಮಾರು 54,000 ದಷ್ಟು ಹೆಚ್ಚಿನ ಪ್ರಸಾರ ಸಂಖ್ಯೆಯನ್ನು ಹೊಂದಿದೆ. ಇದು ಶನಿವಾರಗಳಲ್ಲಿ ನಾವು ಹೊಂದಿರುವ ಹೆಚ್ಚುವರಿ ಪ್ರಸರಣೆ. ಇದಕ್ಕೆ ಕಾರಣ, `ಕಿಂದರಿ ಜೋಗಿ'ಯು ಹೊಂದಿರುವ ವಿಶೇಷ ಆಕರ್ಷಣೆ.




* ಈ ಕುರಿತ ನಿಖರವಾದ ಅಂಕಿಅಂಶವನ್ನು ನೋಡೋಣ. `ಸಂಯುಕ್ತ ಕನರ್ಾಟಕ'ವು ಪ್ರತಿದಿನ ಐದು ಭಿನ್ನ ಆವೃತ್ತಿಗಳಲ್ಲಿ ರಾಜ್ಯದ 5 ಸ್ಥಳಗಳಿಂದ ಪ್ರಕಟವಾಗುತ್ತದೆ. ಬೆಂಗಳೂರು, ಹುಬ್ಬಳ್ಳಿ, ಗುಲ್ಬಗರ್ಾ, ದಾವಣಗೆರೆ ಹಾಗೂ ಮಂಗಳುರು - ಇವೇ ಆ 5 ಕೇಂದ್ರಗಳು. ಈ ಎಲ್ಲ 5 ಘಟಕಗಳಲ್ಲೂ `ಕಿಂದರಿ ಜೋಗಿ'ಗೆ ವಿಶೇಷ ಪ್ರಸರಣೆ ಇದೆ. ಈ ಘಟಕಗಳ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಿಗೆ, ಬಹುತೇಕ ತಾಲ್ಲೂಕುಗಳಿಗೆ ಹಾಗೂ ಅಸಂಖ್ಯಾತ ಗ್ರಾಮಗಳಿಗೆ ಪುರವಣಿಯನ್ನು ತಲುಪಿಸುತ್ತಿದ್ದೇವೆ.

* ಬೆಂಗಳೂರು ನಗರದಲ್ಲಿ 69 ಶಾಲೆಗಳಿಗೆ ಹಾಗೂ ಸಂಸ್ಥೆಗಳಿಗೆ ನಾವು `ಕಿಂದರಿ ಜೋಗಿ'ಯನ್ನು ಸರಬರಾಜು ಮಾಡುತ್ತಿದ್ದೇವೆ. ಇಲ್ಲಿ 15,116 ಪ್ರತಿಗಳು ಸರಬರಾಜಾಗುತ್ತಿವೆ. ಮಂಗಳೂರಿಗೂ ಬೆಂಗಳೂರಿನ  ಘಟಕದಿಂದಲೇ `ಕಿಂದರಿ ಜೋಗಿ'ಯ ಪ್ರತಿಗಳು ಹೋಗುತ್ತವೆ (ದೈನಿಕದ ಮಂಗಳೂರು ಆವೃತ್ತಿ ಅಲ್ಲೇ ಮುದ್ರಣಗೊಳ್ಳುತ್ತದೆ). ಮಂಗಳೂರು ವಿಭಾಗದಲ್ಲಿ 109 ಶಾಲೆಗಳಿಗೆ ಒಟ್ಟು 7,918 ಪ್ರತಿಗಳು ಹೋಗುತ್ತಿವೆ. ಒಟ್ಟಾರೆಯಾಗಿ ನಮ್ಮ ಬೆಂಗಳೂರಿನ ಘಟಕದಿಂದ 23,034 ಪ್ರತಿಗಳು ಪ್ರಸಾರಗೊಳ್ಳುತ್ತಿವೆ. ಹಾಗೆಯೇ ನಮ್ಮ ಹುಬ್ಬಳ್ಳಿ ಕೇಂದ್ರದಿಂದ 409 ಶಾಲೆಗಳಿಗೆ 23,322 ಪ್ರತಿಗಳು ಹೋಗುತ್ತಿವೆ. ದಾವಣಗೆರೆ ಕೇಂದ್ರದಿಂದ 14 ಶಾಲೆಗಳಿಗೆ 1,258 ಪ್ರತಿಗಳನ್ನು ಕಳುಹಿಸುತ್ತಿದ್ದೇವೆ. ಒಟ್ಟಾರೆಯಾಗಿ ಹುಬ್ಬಳ್ಳಿಯ ಘಟಕದಿಂದ 454 ಶಾಲೆಗಳಿಗೆ 24,580 ಪ್ರತಿಗಳು ಹೋಗುತ್ತಿವೆ. ಗುಲ್ಬಗರ್ಾ ಘಟಕದಿಂದ 283 ಶಾಲೆಗಳಿಗೆ 7,343 `ಕಿಂದರಿ ಜೋಗಿ'ಯ ಪ್ರತಿಗಳು ರವಾನೆಯಾಗುತ್ತಿವೆ.

* ಒಟ್ಟಾರೆಯಾಗಿ ರಾಜ್ಯಮಟ್ಟದಲ್ಲಿ ಹೇಳುವುದಾರೆ, ಪ್ರತಿ ಶನಿವಾರ ರಾಜ್ಯದ 915 ಶಾಲೆಗಳಿಗೆ ಒಟ್ಟು 54,957 `ಕಿಂದರಿ ಜೋಗಿ'ಯ ಪ್ರತಿಗಳು ಸರಬರಾಜಾಗುತ್ತಿವೆ. ಅಂದರೆ ಇದು ಶನಿವಾರ ಮಾತ್ರ ಸಂಯುಕ್ತ ಕನರ್ಾಟಕ ಕೊಳ್ಳುವವರನ್ನು ಕುರಿತ ಮಾಹಿತಿ. ಇದರ ಜೊತೆಗೆ ನಮ್ಮ ದೈನಂದಿನ ಪ್ರಸಾರ ಸಂಖ್ಯೆಯನ್ನು ಸೇರಿಸಿಕೊಳ್ಳಬೇಕು.

* ಒಟ್ಟಾರೆಯಾಗಿ ರಾಜ್ಯಮಟ್ಟದಲ್ಲಿ ಹೇಳುವುದಾರೆ, ಪ್ರತಿ ಶನಿವಾರ ರಾಜ್ಯದ 915 ಶಾಲೆಗಳಿಗೆ ಒಟ್ಟು 54,957 `ಕಿಂದರಿ ಜೋಗಿ'ಯ ಪ್ರತಿಗಳು ಸರಬರಾಜಾಗುತ್ತಿವೆ. ಅಂದರೆ ಇದು ಶನಿವಾರ ಮಾತ್ರ ಸಂಯುಕ್ತ ಕನರ್ಾಟಕ ಕೊಳ್ಳುವವರನ್ನು ಕುರಿತ ಮಾಹಿತಿ. ಇದರ ಜೊತೆಗೆ ನಮ್ಮ ದೈನಂದಿನ ಪ್ರಸಾರ ಸಂಖ್ಯೆಯನ್ನು ಸೇರಿಸಿಕೊಳ್ಳಬೇಕು.

* ಇನ್ನು `ಕಿಂದರಿ ಜೋಗಿ ಹಬ್ಬ'ದ ವಿಷಯ. ಬರೀ ಓದುವ ಸಾಮಗ್ರಿಯನ್ನು ಮಾತ್ರ ನೀಡದೇ, `ಕಿಂದರಿ ಜೋಗಿ ಹಬ್ಬ'ಗಳ ಮೂಲಕ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಹೊಸ ಆಂದೋಲನವನ್ನೇ ನಾವೀಗ ಆರಂಭಿಸಿದ್ದೇವೆ. 2009 ರಿಂದ ಈ ಆಂದೋಲನ ಆರಂಭವಾಗಿದೆ. ಇದನ್ನು ನಿರಂತರವಾಗಿ ನಡೆಸಿಕೊಂಡು ಹೋಗಬೇಕು ಎಂಬ ಇಚ್ಛೆ ನಮ್ಮದು.

* ಕಳೆದ ಶೈಕ್ಷಣಿಕ ವರ್ಷದಲ್ಲಿ `ಕಿಂದರಿ ಜೋಗಿ ಹಬ್ಬ'ದ ಮೂಲಕ ರಾಜ್ಯದ ಪ್ರೌಢಶಾಲಾ ವಿದ್ಯಾಥರ್ಿಗಳಿಗಾಗಿ ರಾಜ್ಯದ 12 ಮುಖ್ಯ ಸ್ಥಳಗಳಲ್ಲಿ ಜಿಲ್ಲಾ/ವಲಯ ಮಟ್ಟದ ಚಚರ್ಾಸ್ಪಧರ್ೆಗಳನ್ನು ನಾವು ನಡೆಸಿದ್ದೇವೆ.

* 30-8-2009 ರಂದು ಬಿಜಾಪುರದಲ್ಲಿ ಈ ಸ್ಪಧರ್ೆಗಳು ಆರಂಭವಾದವು. ಅನಂತರ ಕ್ರಮವಾಗಿ ಗುಲ್ಬಗರ್ಾ, ಕೋಲಾರ, ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು, ಬಳ್ಳಾರಿ, ದಾವಣಗೆರೆ, ಹಾಸನ, ತುಮಕೂರು, ಮಂಗಳೂರು ಹಾಗೂ ಮೈಸೂರುಗಳಲ್ಲಿ ಸ್ಪಧರ್ೆಗಳನ್ನು ನಡೆಸಲಾಯಿತು. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸೇರಿದ ಒಟ್ಟು 278 ಶಾಲೆಗಳ 392 ಸ್ಪಧರ್ಿಗಳು ವಲಯ ಮಟ್ಟದ ಸ್ಪಧರ್ೆಗಳಲ್ಲಿ ಪಾಲ್ಗೊಂಡರು.

* ಇದಲ್ಲದೇ ಶಿಕ್ಷಣ ಇಲಾಖೆಯ ಸಹಕಾರದಿಂದ ತಾಲ್ಲೂಕು ಮಟ್ಟಗಳಲ್ಲೂ ನೂರಾರು ಸ್ಪಧರ್ೆಗಳು ನಡೆದವು. ಅಲ್ಲಿ ಆಯ್ಕೆಯಾದವರು ವಲಯ ಮಟ್ಟಗಳಲ್ಲಿ ಪಾಲ್ಗೊಂಡರು. ವಲಯ ಮಟ್ಟಗಳಲ್ಲಿ ಆಯ್ಕೆಯಾದ 28 ಸ್ಪಧರ್ಿಗಳು 27-02-2010ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪದರ್ೆಯಲ್ಲಿ ಪಾಲ್ಗೊಂಡರು. ಆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ. ಎಸ್, ಯಡಿಯೂರಪ್ಪ ಉದ್ಘಾಟಿಸಿದರು.

* ಇದು ಕನ್ನಡ ಭಾಷೆಯಲ್ಲಿ ನಡೆದ/ನಡೆಯುವ ಚಚರ್ಾಸ್ಪಧರ್ೆಯಾದರೂ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮಗಳ ಶಾಲೆಗಳು ಇದರಲ್ಲಿ ಭಾಗವಹಿಸಿದ್ದು ವಿಶೇಷ. ಗ್ರಾಮೀಣ/ನಗರ/ಸಕರ್ಾರಿ/ಅನುದಾನಿತ/ಖಾಸಗಿ - ಹೀಗೆ ಎಲ್ಲ ರೀತಿಯ ಶಾಲೆಗಳೂ ಇದರಲ್ಲಿ ಭಾಗವಹಿಸಿದ್ದವು. ಸಾಮಯಿಕ, ರಾಷ್ಟ್ರೀಯ ಹಾಗೂ ಶೈಕ್ಷಣಿಕ ಮಹತ್ವವುಳ್ಳ ಅನೇಕ ಉತ್ತಮ ವಿಷಯಗಳನ್ನು ಚಚರ್ೆಗೆ ಇಡಲಾಗಿತ್ತು.

* ಮಕ್ಕಳಲ್ಲಿ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂಬುದನ್ನು `ಕಿಂದರಿ ಜೋಗಿ' ಸುಳ್ಳಾಗಿಸಿದೆ. ಪತ್ರಿಕೆಗಳು ಹೇಗೆ ಸಮಾಜಮುಖಿಗಳಾಗಬೇಕು ಎಂಬುದನ್ನು `ಕಿಂದರಿ ಜೋಗಿ ಹಬ್ಬ'ದ ಮೂಲಕ  ತೋರಿಸಿಕೊಟ್ಟಿದ್ದೇವೆ. ಭವಿಷ್ಯದ ಪೀಳಿಗೆಯತ್ತ ಅಗತ್ಯ ಗಮನ ಹರಿಸುವ ಮೂಲಕ `ಲೋಕ ಶಿಕ್ಷಣ ಟ್ರಸ್ಟ್' ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ.

ಚಂದಮಾಮಾದಿಂದ `ಕಿಂದರಿ ಜೋಗಿ'ವರೆಗೆ

(25-9-2009 ರಂದು ಕನರ್ಾಟಕ ಸಕರ್ಾರದ ಧಾರವಾಡ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್) ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಮಾಡಿದ ಭಾಷಣ)


ಈ ವಿಷಯದ ಬಗ್ಗೆ ಮಾತನಾಡುವಾಗ ನಾನು `ಅಕ್ಯಾಡೆಮಿಕ್' ಆಗಿ ವಿಮಶರ್ೆ ಮಾಡುತ್ತಿಲ್ಲ. ಮಕ್ಕಳ ಪತ್ರಿಕೆ ತಯಾರಿಸುವ ಒಬ್ಬ ಸಂಪಾದಕನಾಗಿ ಪ್ರಾಯೋಗಿಕ ಅನುಭವದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ವಿವಿಧ ಬೆಳವಣಿಗೆಗಳನ್ನು ಗುರುತಿಸುವ ಕೆಲಸವನ್ನು ಮಾಡುತ್ತಿದ್ದೇನೆ.

ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಮಕ್ಕಳ ಪತ್ರಿಕೆಗಳು ಐತಿಹಾಸಿಕವಾಗಿ ಗಣನೀಯ ಪಾತ್ರವನ್ನು ವಹಿಸಿಕೊಂಡು ಬಂದಿವೆ. ಮೊದಮೊದಲು ನೀತಿ ಕಥೆಗಳನ್ನು ಹೇಳುವುದೇ ಮಕ್ಕಳ ಪತ್ರಿಕೋದ್ಯಮದ ಮೂಲ ಕಸುಬಾಗಿತ್ತು. ಈಗ ಜ್ಞಾನ ಸಂವಹನ ಹಾಗೂ ಮನೋರಂಜನೆಗಳು ಆ ಸ್ಥಳವನ್ನು ಆಕ್ರಮಿಸಿಕೊಂಡಿವೆ. ಕೀಳು ಮಟ್ಟದ ಮನೋರಂಜನೆಯೂ ಮಕ್ಕಳ ಸಾಹಿತ್ಯದ ಹೆಸರಿನಲ್ಲಿ ವಕ್ಕರಿಸಿದೆ. ಈಗ ಜಾಗತಿಕ ಮಟ್ಟದಲ್ಲಿ ಮಕ್ಕಳ ವ್ಯಕ್ತಿತ್ವಕ್ಕೆ ಹಾನಿ ಎಸಗುವ ಪತ್ರಿಕೆಗಳೂ ಹಲವಾರಿವೆ. ಈಗ ಕೆಲವು ಮಕ್ಕಳ ಕಾಮಿಕ್ಸ್ಗಳು ಪೋನರ್ೋಗ್ರಫಿಯ ಹಂತವನ್ನೂ ಮುಟ್ಟಿವೆ. ಕನ್ನಡದ ಮಟ್ಟಿಗೆ ಪರಿಸ್ಥಿತಿ ಅಷ್ಟು ಹದಗೆಟ್ಟಿಲ್ಲ.

ವಾಸ್ತವವಾಗಿ `ಮಕ್ಕಳ ಸಾಹಿತ್ಯ'ಕ್ಕೆ ಜನ್ಮ ನೀಡಿದ ದೇಶ ಭಾರತ. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ರಚಿತವಾದ `ಪಂಚತಂತ್ರ' ಯುವ ಓದುಗರಿಗೆ ಜೀವನ ಶಿಕ್ಷಣ ನೀಡಲು ಬಹಳ ಉಪಯೋಗಕ್ಕೆ ಬಂದಿತು. ಅದು ಕಥೆಗಳ ಮೂಲಕ ವಯಸ್ಕರಿಗೂ ಮಾರ್ಗದರ್ಶನ ನೀಡುವ ಪ್ರಬುದ್ಧ ಗ್ರಂಥವೂ ಸಹ. ರಣನೀತಿ, ಯುದ್ಧನೀತಿ, ಸಂಧಿ ನೀತಿ ಇತ್ಯಾದಿಗಳನ್ನು ರಾಜರಿಗೆ ಬೋಧಿಸುವ ಗ್ರಂಥವೂ ಹೌದು. ಅನಂತರದ `ಜಾತಕ ಕಥೆಗಳು'; 12ನೇ ಶತಮಾನದ `ಹಿತೋಪದೇಶ' - ಇವೆಲ್ಲ ಮಕ್ಕಳಿಗೆ ಜೀವನ ಶಿಕ್ಷಣ ನೀಡಬಲ್ಲ ಕೆಲವು ಸಾಹಿತ್ಯಕೃತಿಗಳು.

ಪಶ್ಚಿಮದಲ್ಲಿ `ಮಕ್ಕಳ ಸಾಹಿತ್ಯ' ಎಂಬ ಪ್ರಕಾರ ಆರಂಭವಾಗಿದ್ದು 15ನೇ ಶತಮಾನದಲ್ಲಿ. ಆದರೆ ಮಕ್ಕಳಿಗಾಗಿ ಪತ್ರಿಕೆಗಳನ್ನು ಆರಂಭಿಸಿದ ಶ್ರೇಯ ಪಶ್ಚಿಮಕ್ಕೇ ಸಲ್ಲುತ್ತದೆ. ಮಕ್ಕಳಿಗಾಗಿ ಪ್ರಕಟವಾದ ಮೊದಲ ಇಂಗ್ಲಿಷ್ ನಿಯತಕಾಲಿಕ `ದಿ ಲಿಲಿಪುಟಿಯನ್ ಮ್ಯಾಗಜೀನ್'. 1751 ರಲ್ಲಿ ಆರಂಭವಾದ ಇದು ಒಂದು ವರ್ಷ ನಡೆಯಿತು. ಅನಂತರ 1788ರಲ್ಲಿ `ದಿ ಜುವೆನೈಲ್ ಮ್ಯಾಗಜೀನ್' ಹೊರಬಂತು. ಇದೂ ಸಹ ಒಂದು ವರ್ಷ ನಡೆಯಿತು. ಅದನ್ನೇ ಸ್ವಲ್ಪ ಮಾರ್ಪಡಿಸಿ, `ಚಿಲ್ಡ್ರನ್ಸ್ ಮ್ಯಾಗಜೀನ್' ಎಂಬ ಹೆಸರಿನಲ್ಲಿ, ಅಮೆರಿಕದಲ್ಲಿ ಮರು ಮುದ್ರಿಸಲಾಯಿತು.

*********

ಕನ್ನಡದ ವಿಷಯಕ್ಕೆ ಬಂದರೆ, 11ನೇ ಶತಮಾನದಲ್ಲೇ `ಪಂಚತಂತ್ರ'ವನ್ನು ದುರ್ಗಸಿಂಹ ಹಳೆಗನ್ನಡಕ್ಕೆ ತಂದಿದ್ದ. ಭಾರತದ ಪ್ರ್ರಾದೇಶಿಕ ಭಾಷೆಯೊಂದಕ್ಕೆ `ಪಂಚತಂತ್ರ'ದ ಮೊಟ್ಟಮೊದಲ ಅನುವಾದ ಅಥವಾ ರೂಪಾಂತರ ಇದು ಎನ್ನಲಾಗುತ್ತದೆ. 1865ರಲ್ಲಿ ಮೈಸೂರಿನ ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ `ಪಂಚತಂತ್ರ'ವನ್ನು ಕನ್ನಡಕ್ಕೆ ಅನುವಾದಿಸಿದ್ದರು. 1836ರಲ್ಲಿ `ಹಿತೋಪದೇಶ' ಸಹ ಕನ್ನಡಕ್ಕೆ ಬಂದಿತು. ಎಸ್. ಜಿ. ನರಸಿಂಹಾಚಾರ್ ಅದನ್ನು ಕನ್ನಡದ ಮಕ್ಕಳಿಗಾಗಿ ಸರಳವಾದ ಭಾಷೆಯಲ್ಲಿ ಅನುವಾದಿಸಿದ್ದರು.

1840ರಲ್ಲಿ ವಾಲ್ಟರ್ ಎಲಿಯಟ್ ಎಂಬ ಬ್ರಿಟಿಷ್ ಅಧಿಕಾರಿ ಈಸೋಪನ ನೀತಿಕಥೆಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿಸಿ ಪಠ್ಯಪುಸ್ತಕವನ್ನಾಗಿ ಮಾಡಿದ್ದ. ಅದನ್ನು ಬಾಸೆಲ್ ಮಿಷನ್ ಪ್ರಕಟಿಸಿತ್ತು. ಈ ಅವಧಿಯಲ್ಲಿ ಅನೇಕ ನೀತಿ ಕಥೆಗಳು ಕನ್ನಡದಲ್ಲಿ ಪ್ರಕಟವಾದವು. ಆದರೆ ಅತಿ ಹೆಚ್ಚು ಪ್ರಭಾವಶಾಲಿಯಾದದ್ದು 1884ರಲ್ಲಿ ಎಂ. ಎಸ್. ಪುಟ್ಟಣ್ಣನವರು ತಿಳಿಯಾದ ಹೊಸಗನ್ನಡದಲ್ಲಿ ರಚಿಸಿದ `ನೀತಿ ಚಿಂತಾಮಣಿ'. 150 ನೀತಿ ಕಥೆಗಳ `ನೀತಿ ಚಿಂತಾಮಣಿ' ಈಗಲೂ ಅನನ್ಯವೆನಿಸಿದೆ.

ಈ ರೀತಿಯ ಕಥೆಗಳು ಕನ್ನಡ ಪತ್ರಿಕೆಗಳಲ್ಲಿ, `ಕರ್ಮವೀರ' ಮುಂತಾದ ಕನ್ನಡದ ಹಳೆಯ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿದ್ದವು. ಆದರೆ ಇವುಗಳಿಗೊಂದು ಪರಿಣಾಮಕಾರಿ ಶಕ್ತಿಯನ್ನು ತಂದುಕೊಟ್ಟಿದ್ದು `ಚಂದಮಾಮಾ' ಮಾಸಪತ್ರಿಕೆ. ಇದು ಕನ್ನಡ ಮಕ್ಕಳ ಮೇಲೆ ಬಹಳ ಪ್ರಭಾವ ಬೀರಿತು. ಈಗ ಅಂತಹ ಹಲವು ನಿಯತಕಾಲಿಕಗಳಿವೆ.

ಈಗ ಕನ್ನಡನಾಡಲ್ಲಿ ತೀವ್ರವಾದ ಸಂಚಲನ ಹಾಗೂ ಪ್ರಭಾವ ಸೃಷ್ಟಿಸಿರುವ ಮಕ್ಕಳ ಪ್ರಕಟಣೆ ಎಂದರೆ, ನಾಡಿನ ಹಿರಿಯ ದಿನಪತ್ರಿಕೆ `ಸಂಯುಕ್ತ ಕನರ್ಾಟಕ' ಪ್ರತಿ ಶನಿವಾರ ಹೊರತರುತ್ತಿರುವ ವಿಶಿಷ್ಟ ಪುರವಣಿ `ಕಿಂದರಿ ಜೋಗಿ'. ಅದರದು ಅಭೂತಪೂರ್ವ ಪರಿಣಾಮ ಹೇಗೆ ಎಂದು ನಂತರ ಹೇಳುತ್ತೇನೆ. `ಕಿಂದರಿ ಜೋಗಿ'ಯ ಸಂಸ್ಥಾಪಕ ಸಂಪಾದಕನಾಗಿ ಅದರ ಹಿನ್ನೆಲೆ ಹಾಗೂ ಪ್ರಭಾವಗಳನ್ನು ದಾಖಲಿಸಬೇಕಾದ್ದು ನನ್ನ ಹೊಣೆ. ಅದಕ್ಕೂ ಮೊದಲು `ಚಂದಮಾಮಾ' ಕುರಿತು, ಅದರ ನಂತರದ ಕೆಲವು ನಿಯತಕಾಲಿಕಗಳನ್ನು ಕುರಿತು ಸ್ಥೂಲವಾಗಿ ನೋಡೋಣ.

`ಚಂದಮಾಮಾ' ಬಹಳ ದೀರ್ಘಕಾಲದಿಂದ ನಡೆದುಕೊಂಡು ಬರುತ್ತಿರುವ ಮಕ್ಕಳ ಮ್ಯಾಗಜೀನ್. ಈಗ ಅದು 13 ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. ಅದರ 2 ಲಕ್ಷ ಪ್ರತಿಗಳು ಮಾರಾಟವಾಗುತ್ತಿವೆ ಎನ್ನಲಾಗಿದೆ. `ಸಂಥಾಲಿ' ಎಂಬ ವನವಾಸಿ ಜನರ ಭಾಷೆಯಲ್ಲೂ ಪ್ರಕಟವಾಗುತ್ತಿರುವುದು ಅದರ ವಿಶೇಷ.

1947ರ ಜುಲೈ ತಿಂಗಳಿನಲ್ಲಿ ತೆಲುಗು ಚಲನಚಿತ್ರ ನಿಮರ್ಾಪಕರಾದ ನಾಗಿರೆಡ್ಡಿ ಹಾಗೂ ಅವರ ಮಿತ್ರ ಚಕ್ರಪಾಣಿ ಎನ್ನುವವರು ಮಕ್ಕಳಿಗಾಗಿ ಆರಂಭಿಸಿದ ಈ ನಿಯತಕಾಲಿಕದ ಪ್ರಕಟಣೆ ಈಗಲೂ ಮುಂದುವರಿದಿದೆ. 1998ರಲ್ಲಿ ವಾವಹಾರಿಕ ವ್ಯಾಜ್ಯಕ್ಕೆ ಸಿಲುಕಿ ಅದರ ಪ್ರಕಟನೆ ಕೆಲಕಾಲ ಸ್ಥಗಿತಗೊಂಡಿತ್ತು. ನಂತರ ಹೊಸ ಸ್ವರೂಪದಲ್ಲಿ ಪ್ರಕಟಣೆಯನ್ನು ಮುಂದುವರಿಸಲಾಯಿತು. 2007ರಿಂದ ಜಿಯೋಡೇಸಿಕ್ ಎಂಬ ಹೊಸ ಕಂಪೆನಿಯ ಒಡೆತನದಲ್ಲಿ ಅದನ್ನು ಹೊರತರಲಾಗುತ್ತಿದೆ. ಈಗಲೂ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಅತ್ಯಂತ ಹಳೆಯ ಮಕ್ಕಳ ಪತ್ರಿಕೆ `ಚಂದಮಾಮಾ' ಎಂಬುದು ನನ್ನ ಭಾವನೆ.

ದೇಶ ಸ್ವಾತಂತ್ರ್ಯ ಗಳಿಸಿದ ಸಮಯದಲ್ಲಿ ಮಕ್ಕಳಿಗೆ ಭಾರತೀಯ ಪೌರಾಣಿಕ, ಜಾನಪದ ಸಾಹಿತ್ಯವನ್ನು, ನೀತಿ ಕಥೆಗಳನ್ನು ಪರಿಚಯಿಸುವ ಕೆಲಸವನ್ನು `ಚಂದಮಾಮಾ' ಅದ್ಭುತವಾಗಿ ಮಾಡಿತು. ಈಗ ವಿಜ್ಞಾನ, ತಂತ್ರಜ್ಞಾನ - ಹೀಗೆ ಹೊಸ ಅಗತ್ಯಗಳ ಅನುಸಾರ ಜ್ಞಾನಾಧಾರಿತ ವಾಚನಾ ಸಾಮಗ್ರಿಗಳನ್ನೂ ಒಂದಿಷ್ಟು ಸೇರಿಸಿ ಅದನ್ನು ವೈವಿಧ್ಯಮಯವಾಗಿಸುವ ಯತ್ನ ನಡೆದಿದೆ.

`ಚಂದಮಾಮಾ'ದ ಬೆನ್ನಲ್ಲೇ 1949ರಲ್ಲಿ ಪ್ರಕಟಣೆ ಆರಂಭಿಸಿದ ಇನ್ನೊಂದು ಬಹುಭಾಷಾ ನಿಯತಕಾಲಿಕ ಎಂದರೆ `ಬಾಲಮಿತ್ರ'. ವಾಸ್ತವವಾಗಿ 1941ರಲ್ಲೇ `ಬಾಲ ಕೇಸರಿ' ಎಂಬ ತೆಲುಗು ಪತ್ರಿಕೆ ಹೆಸರಾಗಿತ್ತು. ತೆಲುಗು ಶಾಲಾ ಶಿಕ್ಷಕರೊಬ್ಬರು ಅದನ್ನು ಆರಂಭಿಸಿದ್ದರು. ಅನಂತರ 1945ರಲ್ಲಿ  `ಬಾಲ' ಎಂಬ ಪತ್ರಿಕೆ ಹೊರಬಂತು. ಆದರೆ ಅವೆಲ್ಲ `ಚಂದಮಾಮಾ'ದ ಪ್ರಭಾವದ ಮುಂದೆ ಮಸುಕಾದವು. 1949ರಲ್ಲಿ `ಬಾಲಮಿತ್ರ' ಹೊರಬಂದಿತು. ಅದೂ ಸಹ ಮೊದಲು ತೆಲುಗು ಅವತರಣಿಕೆಯ ಮೂಲಕ ಹೊರಬಂದು ಅನಂತರ ಇತರ ಕೆಲವು ಭಾರತೀಯ ಭಾಷೆಗಳಲ್ಲಿ ಪ್ರಕಟವಾಗತೊಡಗಿತು. ಸ್ವರೂಪದಲ್ಲಿನ `ಚಂದಮಾಮಾ'ವನ್ನೇ `ಬಾಲಮಿತ್ರ' ಅನುಕರಿಸಿದ್ದರಿಂದ ಮಕ್ಕಳಿಗೆ ಕಥಾ ಸಾಮಗ್ರಿ ಹೇರಳವಾಗಿ ದೊರೆಯಿತು.

********

1920-30ರ ದಶಕದಲ್ಲಿ ಕಾಮಿಕ್ಸ್ ಪ್ರಕಾರ ಅಮೆರಿಕದಲ್ಲಿ ಜನಪ್ರಿಯವಾಗತೊಡಗಿತು. ಎಲ್ಲ ಪ್ರಮುಖ ದಿನ ಪತ್ರಿಕೆಗಳು ಕಾಮಿಕ್ ಸ್ಟ್ರಿಪ್ಗಳನ್ನು ಪ್ರಕಟಿಸತೊಡಗಿದವು. ಮುದ್ರಣ ಮಾಧ್ಯಮದಲ್ಲಿ ದೃಶ್ಯ ಮಾಧ್ಯಮದಷ್ಟು ತೀವ್ರವಾದ ಪರಿಣಾಮ ಉಂಟುಮಾಡುವ ಶಕ್ತಿ ಇರುವ ವಿಶಿಷ್ಟ ಪ್ರಕಾರವಾಗಿ ಅದು ಬೆಳೆಯುತ್ತ ಬಂದಿತು. ಸೂಪರ್ಮ್ಯಾನ್, ಫ್ಯಾಂಟಮ್ - ಹೀಗೆ ತಾರಾವರ್ಚಸ್ಸಿನ ಕಾಮಿಕ್ ಹೀರೋ ಪಾತ್ರಗಳು ಸೃಷ್ಟಿಯಾದವು.

ಈಗ ಕಾಮಿಕ್ ಪ್ರಕಾರ ಎಲ್ಲ ರಂಗಗಳಲ್ಲೂ ಬಳಸಲ್ಪಡುತ್ತಿದೆ. ಜಾಹಿರಾತು ಮುಂತಾದ ವಾಣಿಜ್ಯಿಕ ಉದ್ದೇಶಗಳಿಂದ ಹಿಡಿದು ಅಶ್ಲೀಲ ಸಾಹಿತ್ಯಕ್ಕೂ ಅದು ಶಕ್ತಿ ಒದಗಿಸುತ್ತಿದೆ. ಹೀಗಿರುವಾಗ ನಮ್ಮ ಶಿಕ್ಷಣ ಇಲಾಖೆ ಹಿಮದೆ ಬೀಳದೇ ಕಾಮಿಕ್ಸ್ ಪ್ರಕಾರವನ್ನು ಬಳಸಿಕೊಳ್ಳುವುದು ಸೂಕ್ತ. ಅದು ಹೊಂದಿರುವ ಅಪರಿಮಿತ ಶಕ್ತಿಯನ್ನು ನಮ್ಮ ಮಕ್ಕಳ ಶಿಕ್ಷಣಕ್ಕೆ ಬಳಸಿಕೊಂಡರೆ ಕಲಿಕೆ ಹೆಚ್ಚು ಆಕರ್ಷಕ ಹಾಗೂ ಸುಲಭವಾಗುತ್ತದೆ ಎಂಬುದು ನನ್ನ ಸಲಹೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತಗಳಲ್ಲಿ ಅನೇಕ ವಿಷಯಗಳ ಪಠ್ಯಪುಸ್ತಕಗಳನ್ನು ಕಾಮಿಕ್ಸ್ ರೂಪದಲ್ಲಿ ಹೊರತರುವುದು ಬಹಳ ಪ್ರಯೋಜನಕಾರಿಯಾಗುತ್ತದೆ.

ಕಾಮಿಕ್ಸ್ ಪತ್ರಿಕೆಗಳ ವಿಷಯಕ್ಕೆ ಬರೋಣ. ಭಾರತೀಯ ಸಾಹಿತ್ಯದ ಶ್ರೇಷ್ಠ ಕಥೆಗಳನ್ನು, ಇತಿಹಾಸಗಳನ್ನು ಕಾಮಿಕ್ ರೂಪದಲ್ಲಿ ಹೊರತರಬಹುದು ಎನ್ನುವ ಆಸೆ ಹಲವರಲ್ಲಿ ಇದ್ದಿರಬಹುದು. ಆದರೆ ಇದು ಹಲವು ದಶಕಗಳ ಕಾಲ ಕಾರ್ಯಗತವಾಗಿರಲೇ ಇಲ್ಲ. ಈ ವಿಶಿಷ್ಟ ಪ್ರಯೋಗ ಮಾಡಿದ್ದು `ಅಮರ ಚಿತ್ರಕಥೆ'. 1967ರಿಂದ ಈವರೆಗೆ 400ಕ್ಕೂ ಹೆಚ್ಚು ಶೀಷರ್ಿಕೆಗಳನ್ನು ಅದು ಹೊರತಂದಿದೆ. ಎರಡು-ಮೂರು ತಲೆಮಾರಿನ ಮಕ್ಕಳು ಅದರ ಶುದ್ಧ ಸಾಹಿತ್ಯದಿಂದ ಪ್ರಭಾವಿತರಾಗಿದ್ದಾರೆ. ಈವರೆಗೆ `ಅಮರ ಚಿತ್ರ ಕಥೆ'ಯ 9 ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿ ದಾಖಲೆ ಸೃಷ್ಟಿಯಾಗಿದೆ.

ಪ್ರಭಾವದ ದೃಷ್ಟಿಯಿಂದ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ದೃಷ್ಟಿಯಿಂದ ನೋಡಿದಾಗ, `ಅಮರ ಚಿತ್ರಕಥೆ' ಅತ್ಯಂತ ತೀವ್ರವಾದ ಪರಿಣಾಮ ಉಂಟು ಮಾಡುತ್ತಿರುವ ಪ್ರಕಟಣೆ ಎನಿಸುತ್ತದೆ. ಕಾಮಿಕ್ಸ್ ಸ್ವರೂಪದಲ್ಲಿ ಕನ್ನಡವನ್ನೂ ಒಳಗೊಂಡಂತೆ 20 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ, ನಿಯತಕಾಲಿಕದಂತೆಯೇ `ಅಮರ ಚಿತ್ರಕಥೆ' ಕಾಮಿಕ್ಸ್ ಸರಣಿ ಪ್ರಕಟವಾಗುತ್ತಿದೆ. `ಕಾಮಿಕ್ಸ್' ಪದಕ್ಕೆ `ಚಿತ್ರಕಥೆ' ಎಂಬ ಸುಂದರ ಹೆಸರನ್ನು ಜನಪ್ರಿಯಗೊಳಿಸಿದ್ದೂ ಅದೇ.

`ಅಮರ ಚಿತ್ರಕಥೆ'ಯ ಪ್ರಕಟಣೆಯಾದ `ಟಿಂಕಲ್' ಈಗ ಅತಿ ಹೆಚ್ಚು ಓದುಗರನ್ನು ಹೊಂದಿರುವ ಭಾರತೀಯ ಮಕ್ಕಳ ಪತ್ರಿಕೆ ಎನ್ನಲಾಗುತ್ತದೆ. ಈ ನಿಯತಕಾಲಿಕ ಸುಮಾರು 12 ಲಕ್ಷ ಓದುಗರನ್ನು ಪಡೆದಿದೆ ಎಂದು ಅಂದಾಜಿಸಲಾಗಿದೆ. ಈ ರೀತಿಯ ಮಾರುಕಟ್ಟೆ ಸದ್ಯಕ್ಕೆ ಕನ್ನಡದ ಯಾವ ಮಕ್ಕಳ ಪತ್ರಿಕೆಗೂ ಇಲ್ಲ. ಆದರೆ ದೊಡ್ಡ ದಿನಪತ್ರಿಕೆಗಳ ಮಕ್ಕಳ ಪುರವಣಿಗಳು ಈ ರೀತಿಯ ಕೊರಗನ್ನು ನಿವಾರಿಸಬಲ್ಲವು. `ಕಿಂದರಿ ಜೋಗಿ' ಅಂತಹ ಅದ್ಭುತ ಕ್ರಾಂತಿ ಮಾಡಿದೆ.

*********

ಯಾವ ಕನ್ನಡ ಪತ್ರಿಕೆಯೂ ನೀಡದಷ್ಟು ಪ್ರಾಮುಖ್ಯತೆಯನ್ನು `ಸಂಯುಕ್ತ ಕನರ್ಾಟಕ' ಮುಂದಿನ ತಲೆಮಾರಿಗೆ ನೀಡಿದೆ. ಸುಮಾರು ಎರಡೂವರೆ ವರ್ಷಗಳ ಹಿಂದೆ ಪತ್ರಿಕೆ 74 ವರ್ಷಗಳನ್ನು ಪೂರೈಸಿ 75ನೇ ವರ್ಷಕ್ಕೆ ಕಾಲಿಟ್ಟಾಗ ಹಾಕಿಕೊಂಡ ವಿಶಿಷ್ಟ ಯೋಜನೆ `ಕಿಂದರಿ ಜೋಗಿ'ಯ ಪ್ರಕಟಣೆ. ನೈತಿಕ ಶಿಕ್ಷಣ ಹಾಗೂ ಮೌಲ್ಯಯುತ ಸಂಸ್ಕಾರದ ಜೊತೆಗೆ, ವಿಜ್ಞಾನ, ತಂತ್ರಜ್ಞಾನ, ಇತಿಹಾಸ, ಜಾಗತಿಕ ವಿಷಯಗಳು, ಸಾಮಾನ್ಯ ಜ್ಞಾನ - ಹೀಗೆ ಜ್ಞಾನಧಾರಿತ, ಮಾಹಿತಿಪೂರ್ಣ ಪುರವಣಿಯಾಗಿ ಅದನ್ನು ರೂಪುಗೊಳಿಸಿದ್ದೇವೆ. ಇಷ್ಟು ವೈವಿಧ್ಯಮಯ ವಿಷಯಗಳು ಒಂದೇ ಪತ್ರಿಕೆಯಲ್ಲಿ ಸಿಗುವುದು ಕಷ್ಟ.

ದಿನಪತ್ರಿಕೆಗಳು ನ್ಯೂಸ್ಪ್ರಿಂಟ್ ಕಾಗದವನ್ನು ಬಳಸುವುದು ವಾಣಿಜ್ಯಿಕ ದೃಷ್ಟಿಯಿಂದ ಅನಿವಾರ್ಯ.  ಹೀಗಾಗಿ ಕಾಗದವೊಂದನ್ನು ಬಿಟ್ಟು ಉಳಿದೆಲ್ಲವೂ - ಅಂದರೆ,  ಮಾಹಿತಿ, ವಿನ್ಯಾಸ, ಶೈಲಿ - ಎಲ್ಲವೂ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿರುವಂತೆ ನೋಡಿಕೊಳ್ಳುತ್ತಿದ್ದೇವೆ.

ಅತ್ಯಂತ ಕಡಿಮೆ ಬೆಲೆಗೆ ಜ್ಞಾನಾಧಾರಿತ ಮಾಹಿತಿಯನ್ನು `ಕಿಂದರಿ ಜೋಗಿ' ಒದಗಿಸುತ್ತಿದೆ. ಅದರಲ್ಲಿ ಜಾಹೀರಾತು ಹಾಕುತ್ತಿಲ್ಲ. ಇದರಿಂದ ಆಥರ್ಿಕವಾಗಿ ಕಷ್ಟವಾಗುತ್ತದೆ. ಆದರೂ ಮಕ್ಕಳಿಗೆ ಪ್ರತಿ ಶನಿವಾರ `ಸಂಯುಕ್ತ ಕನರ್ಾಟಕ'ವನ್ನು ಅದರ ಮುಖಬೆಲೆಗಿಂತಲೂ ಬಹಳ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಅಷ್ಟು ಮಾತ್ರವಲ್ಲ, ವಿವಿಧ ಸಂಸ್ಥೆಗಳ ನೆರವಿನಿಂದ ಬಡ ಮಕ್ಕಳಿಗೆ ಉಚಿತವಾಗಿಯೂ `ಕಿಂದರಿ ಜೋಗಿ'ಯನ್ನು ವಿತರಿಸಲಾಗುತ್ತಿದೆ. ಹೀಗೆ ಧನಲಾಭದ ಅಪೇಕ್ಷೆ ಇಲ್ಲದೇ ಮಕ್ಕಳ ಪುರವಣಿಗಳನ್ನು ಹೊರತರುತ್ತಿರುವ ದಿನಪತ್ರಿಕೆಗಳು ಜಗತ್ತಿನಲ್ಲೇ ಬಹಳ ಕಡಿಮೆ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ಭಾವಿಸಿದ್ದೇನೆ. ಇಂತಹ ಪ್ರಯೋಗ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಈವರೆಗೆ ಎಂದೂ ಆಗಿರಲಿಲ್ಲ.

ಈಗ `ಕಿಂದರಿ ಜೋಗಿ'ಯನ್ನು ನಾಡಿನ ಸಾವಿರಾರು ಶಾಲೆಗಳು ಪಠ್ಯಪುಸ್ತಕಗಳಿಗೆ ಪೂರಕವಾದ ಸಾಹಿತ್ಯದ ರೀತಿ ಸ್ವಾಗತಿಸಿ ಸ್ವೀಕರಿಸಿವೆ. ಲಕ್ಷಾಂತರ ಮಕ್ಕಳು ಅದರ ಲಾಭ ಪಡೆಯುತ್ತಿದ್ದಾರೆ. ಅದರಿಂದಾಗಿ ಅವರ ತಿಳಿವಳಿಕೆಯ ಮಟ್ಟ ಉತ್ತಮಗೊಂಡಿದೆ ಹಾಗೂ ಅಧ್ಯಯನ ಸಾಮಥ್ರ್ಯ ಬಹಳ ಸುಧಾರಿಸಿದೆ ಎಂದು ಮೆಚ್ಚುಗೆಯ ಪತ್ರಗಳು ನಮಗೆ ಬರುತ್ತಿವೆ. ವಯಸ್ಕರೂ ಸಹ `ಕಿಂದರಿ ಜೋಗಿ'ಯನ್ನು ಆಸಕ್ತಿಯಿಂದ ಓದುತ್ತಿದ್ದಾರೆ. ಅದರ ಪ್ರಸಾರ ಸಂಖ್ಯೆ ಏರುಗತಿಯಲ್ಲಿದೆ. ಮಕ್ಕಳಲ್ಲಿ ನಾವು ಓದುವ, ಅದರಲ್ಲೂ ಮಕ್ಕಳಲ್ಲಿ ಕನ್ನಡವನ್ನು ಓದುವ ಅಭ್ಯಾಸ, ರುಚಿ `ಕಿಂದರಿ ಜೋಗಿ'ಯಿಂದಾಗಿ ಹೆಚ್ಚಾಗಿದೆ. ಇದು ಕನ್ನಡದ ಮಟ್ಟಿಗೆ ಒಳ್ಳೆಯ, ಅಭೂತಪೂರ್ವ ಬೆಳವಣಿಗೆ.

ಅನೇಕ ರೀಡರ್ಶಿಪ್ ಸವರ್ೆಗಳ ಪ್ರಕಾರ, `ಸಂಯುಕ್ತ ಕನರ್ಾಟಕ'ದ ಸರಾಸರಿ ಓದುಗರ ಸಂಖ್ಯೆ ಸುಮಾರು 10 ಲಕ್ಷಕ್ಕೂ ಹೆಚ್ಚು. ಶನಿವಾರದ ಪುರವಣಿ `ಕಿಂದರಿ ಜೋಗಿ'ಗೆ ನಮ್ಮ ದೈನಂದಿನ ಪ್ರಸಾರಕ್ಕಿಂತಲೂ ಹೆಚ್ಚು ಪ್ರಸಾರವಿದೆ. ಹೀಗಾಗಿ ಅದು `ಟಿಂಕಲ್'ನಷ್ಟೇ, ಅಥವಾ ಬಹುಶಃ ಇನ್ನೂ ಹೆಚ್ಚು ಓದುಗರನ್ನು ತಲುಪುತ್ತಿದೆ. ಇದು ದೊಡ್ಡ ದಿನಪತ್ರಿಕೆಗಳಿಗೆ ಇರುವ ಅನುಕೂಲತೆ. ಮಕ್ಕಳ ಪತ್ರಿಕೆಗಳಿಗಿಂತಲೂ ನಮ್ಮ `ರೀಚ್' ಜಾಸ್ತಿ. ಅದನ್ನು `ಸಂಯುಕ್ತ ಕನರ್ಾಟಕ' ಸಮರ್ಥವಾದ, ಸಾರ್ಥಕವಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ.

*********

ಒಮ್ಮೊಮ್ಮೆ ನೈತಿಕವಾಗಿ, ಬೌದ್ಧಿಕವಾಗಿ ಬಹಳ ಉಪಯುಕ್ತವಾದ ಅನೇಕ ಮಕ್ಕಳ ಪತ್ರಿಕೆಗಳು ಪಡೆಯಬೇಕಿರುವಷ್ಟು ಪ್ರಸರಣವನ್ನು ಪಡೆಯುತ್ತಿಲ್ಲ. ಒಂದು ಉದಾಹರಣೆಯನ್ನು ನೋಡೊಣ. ಉಪಯುಕ್ತತೆಯ ದೃಷ್ಟಿಯಿಂದ ತುಂಬ ಮಹತ್ವದ್ದೆನಿಸಿದ್ದರೂ ಅಗತ್ಯವಿರುವಷ್ಟು ಪ್ರಸಾರ ಸಂಖ್ಯೆಯನ್ನು ಹೊಂದಿಲ್ಲದ ಮಕ್ಕಳ ಮಾಸಿಕ ಎಂದರೆ, `ಬಾಲ ವಿಜ್ಞಾನ'. ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತು ಅದನ್ನು 1977 ರಿಂದ ನಡೆಸಿಕೊಂಡು ಬರುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ವೈಜ್ಞಾನಿಕ ವಾಚನಾ ಸಾಮಗ್ರಿ ಒದಗಿಸುವುದು ಅದರ ಉದ್ದೇಶ. ಅದರ ಬೆಲೆ 10-12 ರೂಪಾಯಿಗಳು ಇರಬಹುದು ಅಷ್ಟೇ.

ಒಳ್ಳೆಯ ಲೇಖನಗಳಿರುವ ಈ ನಿಯತಕಾಲಿಕದ ಪ್ರಸಾರ ಸಂಖ್ಯೆ ಅದರ ಗುಣಮಟ್ಟವನ್ನು ಆಧರಿಸಿಲ್ಲ. ಹಾಗೆಂದು ಅದರ ಪ್ರಸಾರ ಸಂಖ್ಯೆ ತೀರಾ ಕಡಿಮೆಯೂ ಅಲ್ಲ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದೇ ಬಗೆಯ ಪ್ರತಿಕೆಗಳೇ ತುಂಬಿಕೊಂಡಾಗ ಓದುಗರು ಎಲ್ಲವನ್ನೂ ಕೊಳ್ಳಲಾರರು. ಹಾಗೆ ಎಲ್ಲವನ್ನೂ ಖರೀದಿಸುವ ಅಗತ್ಯವೂ ಇಲ್ಲ. ಆದರೆ `ಬಾಲ ವಿಜ್ಞಾನ' ಹಾಗಲ್ಲ. ಅದೊಂದು ವಿಶಿಷ್ಟ ನಿಯತಕಾಲಿಕ. ಅದರ ಪ್ರಸಾರ ಸಂಖ್ಯೆ ಸುಮಾರು 20,000 ದಷ್ಟು ಇರಬಹುದು ಎಂಬುದು ನನಗೆ ಸಿಕ್ಕಿರುವ ಮಾಹಿತಿ. ಈ ಕುರಿತು ಖಚಿತ ಅಂಕಿಅಂಶ ನನ್ನ ಬಳಿ ಇಲ್ಲ.

ಆದರೂ ಇದನ್ನು ತೀರಾ ಕಡಿಮೆ ಪ್ರಸಾರ ಸಂಖ್ಯೆ ಎಂದುಕೊಳ್ಳುವಂತಿಲ್ಲ. ಏಕೆಂದರೆ ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತು ವಾಣಿಜ್ಯ ಸಂಸ್ಥೆಯಲ್ಲ. ಹೀಗಾಗಿ ವೃತ್ತಿಪರ ಪ್ರಸಾರ ವಿಭಾಗ ಅದಕ್ಕೆ ಇಲ್ಲದಿರುವುದು ಸಹಜ. ಸುಮಾರು 20,000 ಶಾಲೆಗಳನ್ನು ಈ ಪತ್ರಿಕೆ ತಲುಪುತ್ತಿದೆ ಎಂದು ಕೇಳಿದ್ದೇನೆ. ರೀಟೇಲ್ ಮಾಕರ್ೆಟಿಂಗ್ಗೆ ಬದಲಾಗಿ ಶಾಲೆಗಳನ್ನು ತಲುಪಬೇಕೆನ್ನುವ ನೀತಿಯನ್ನು ಸಂಸ್ಥೆ ಹೊಂದಿರಬಹುದು. ಉತ್ತಮ ಬರಹಗಳ ಕಾರಣದಿಂದ ಈ ಪತ್ರಿಕೆ ಅದನ್ನು ಓದಿದವರ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಉಂಟುಮಾಡುತ್ತಿದೆ.

**********

ಈಗ ಮಕ್ಕಳ ಪತ್ರಿಕೆಗಳಿಗೆ ಸಂಬಂದಿಸಿದಂತೆ ಹೆಚ್ಚಿನ ಮಂದಿಗೆ ಗೊತ್ತಿಲ್ಲದ ಮುಖ್ಯವಾದ ಸಂಗತಿಯತ್ತ ನಿಮ್ಮ ಗಮನ ಸೆಳೆಯಬಯಸುತ್ತೇನೆ. ಇಂದು ಬಹುತೇಕ ಪ್ರತಿಷ್ಠಿತ ಮಕ್ಕಳ ಪತ್ರಿಕೆಗಳನ್ನು ಅದರ ಪ್ರಕಾಶಕರು ತಾವೇ ತಯಾರಿಸುತ್ತಿಲ್ಲ. ಮಕ್ಕಳ ಪುರವಣಿಗಳನ್ನೂ ಅಷ್ಟೇ. ಔಟ್ಸೋಸರ್ಿಂಗ್ (ಹೊರಗುತ್ತಿಗೆ) ಈ ಕ್ಷೇತ್ರದಲ್ಲೂ ಕಾಲಿಟ್ಟಿದೆ. ಇದು ಒಂದು ರೀತಿಯಲ್ಲಿ ಅನುಕೂಲಕರವೂ ಹೌದು. ಹಾಗೆಯೇ ಅನಗತ್ಯ ಬೆಳವಣಿಗೆಯೂ ಹೌದು.

ಇಂದು ಮಕ್ಕಳ ಪತ್ರಿಕೆಗಳನ್ನು ತಯಾರಿಸಿಕೊಡುವ ವೃತ್ತಿಪರ ಸಂಸ್ಥೆಗಳಿವೆ. ಈ ಸಂಸ್ಥೆಗಳು ಪ್ರತ್ಯೇಕ ಸಿಬ್ಬಂದಿಯನ್ನು ಹೊಂದಿರುತ್ತವೆ. ಒಂದಿಷ್ಟು ಮಾಹಿತಿಯನ್ನು, ಕಥೆಗಳನ್ನು, ಕಾಟರ್ೂನುಗಳನ್ನು ಒಳಗೊಂಡ ಡೇಟಾಬ್ಯಾಂಕ್ ಅನ್ನು ಇಂತಹ ಸಂಸ್ಥೆಗಳು ತಯಾರಿಸಿ ಇಟ್ಟುಕೊಂಡಿರುತ್ತವೆ. ಅದೇ ಈ ಸಂಸ್ಥೆಗಳ ಆಸ್ತಿ. ಅದನ್ನೇ ಪುನರಾವತರ್ಿಸಿ, ಅಲ್ಪ ಸ್ವಲ್ಪ ಮಾಪರ್ಾಡು ಮಾಡಿ ಅವು ಪತ್ರಿಕೆಯ ಪುಟಗಳನ್ನು ತಯಾರಿಸುತ್ತವೆ. ಈ ಪುಟಗಳನ್ನು ನಾನಾ ಭಾಷೆಗಳಲ್ಲಿ ವಿವಿಧ ಪ್ರಕಾಶಕರಿಗೆ ಮಾರುತ್ತವೆ. ನೀವು ಹಣ ಕೊಟ್ಟರೆ ಸಾಕು. ನಿಮ್ಮ ಹೆಸರಿನಲ್ಲಿಯೂ ಪತ್ರಿಕೆ ತಯಾರಿಸಿಕೊಡುತ್ತವೆ!

ಇದರಿಂದ ನಿಮಗೆ ಉತ್ಪಾದನೆಯ ಕಷ್ಟವೇನೋ ತಪ್ಪುತ್ತದೆ. ಪ್ರತಿಭಾವಂತರನ್ನು ಕಲೆಹಾಕುವ ಕಷ್ಟ ತಪ್ಪುತ್ತದೆ. ಆದರೆ ಪತ್ರಿಕೆಯ ಯೋಜನೆಯಲ್ಲಿ ನಿಮ್ಮ ಪಾತ್ರ ಅಷ್ಟಾಗಿ ಇರುವುದಿಲ್ಲ. ಹೆಸರಿಗಷ್ಟೇ ನೀವು ಸಂಪಾದಕರು. ಪತ್ರಿಕೆ ತಯಾರಿಸಿದ ಅನುಭವವೇ ನಿಮಗಿರುವುದಿಲ್ಲ. ನಿಮ್ಮ ಓದುಗರು ಯಾರು? ಅವರ ಅಗತ್ಯಗಳೇನು ಎಂಬ ಸ್ಪಷ್ಟ ಕಲ್ಪನೆ ನಿಮ್ಮಲ್ಲಿ ಮೂಡುವುದಿಲ್ಲ.

ಈ ತರಹದ ಹೊರಗುತ್ತಿಗೆ ಸಂಸ್ಥೆಗಳು ನಿಮಗೆ ನೀಡಿದ `ಕಂಟೆಂಟ್' ಅನ್ನೇ ಇನ್ನೊಂದು ಪ್ರದೇಶದಲ್ಲಿ, ಅಥವಾ ನಿಮ್ಮ ಪ್ರದೇಶದಲ್ಲೇ ಬೇರೆ ಭಾಷೆಯಲ್ಲಿ, ಇತರ ಪ್ರಕಾಶಕರಿಗೂ ನೀಡುತ್ತವೆ! ಪುಟವಿನ್ಯಾಸ, ಲೇಖನ ಸಾಮಗ್ರಿ ಎಲ್ಲ ಒಂದೇ! ಒಂದೇ ರೀತಿಯ ಪುಟಗಳು ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಭಾಷೆಗಳಲ್ಲಿ, ವಿಭಿನ್ನ ಪತ್ರಿಕಾ ಶೀಷರ್ಿಕೆಗಳ ಅಡಿಯಲ್ಲಿ ರಾರಾಜಿಸುತ್ತಿರುತ್ತವೆ! ಇದರಿಂದ ಪತ್ರಿಕೆಗಳ ಗುಣಮಟ್ಟ ಹಾಳಾಗುತ್ತದೆ. ವೈವಿಧ್ಯತೆ ಹಾಳಾಗುತ್ತದೆ. ಇಂದು ನೀವು ವಿವಿಧ ಪತ್ರಿಕೆಗಳ ನಡುವೆ ಕಾಣುತ್ತಿರುವ ಏಕತಾನತೆಗೆ ಈ ರೀತಿಯ ವ್ಯಾಪಾರಿ ಆಯಾಮವೇ ಕಾರಣ. ಅನೇಕರು ಇಂದು ಹೆಸರಿಗೆ ಮಾತ್ರ ಮಕ್ಕಳ ಪತ್ರಿಕೆಯ ಸಂಪಾದಕರು. ಪತ್ರಿಕೆ ಬೇರೆಲ್ಲೋ ತಯಾರಾಗುತ್ತಿರುತ್ತದೆ!

ಅನೇಕ ಪ್ರತಿಷ್ಠಿತ ದಿನಪತ್ರಿಕೆಗಳೂ ಸಹ ತಮ್ಮ ಮಕ್ಕಳ ಪುರವಣಿಗಳನ್ನು ಹೀಗೇ ತಯಾರಿಸುತ್ತಿವೆ. ಅವುಗಳ ಹೆಸರುಗಳನ್ನು ಇಲ್ಲಿ ಹೇಳುವುದು ಬೇಡ. ಆದರೆ ಇದು ವಾಸ್ತವ ಸ್ಥಿತಿ. ಈ ಟ್ರೆಂಡಿಗೆ ನಮ್ಮ `ಕಿಂದರಿ ಜೋಗಿ' ಒಂದು ಅಪವಾದ ಎಂದು ಸಂತೋಷದಿಂದ ಹೇಳಬಯಸುತ್ತೇನೆ. ಅದು ಸಂಪೂರ್ಣವಾಗಿ ನಮ್ಮದೇ ಸಂಸ್ಥೆಯ ಸ್ವಂತ ತಯಾರಿಕೆ. ಅದರಲ್ಲಿರುವ ಒಂದೊಂದು ಚುಕ್ಕಿಗೂ ಒಂದೊಂದು ಗೆರೆಗೂ ಅದರ ಸಂಪಾದಕನಾಗಿ ನಾನೇ ಹೊಣೆಗಾರ. ಅಷ್ಟರ ಮಟ್ಟಿಗೆ ನಾವು ಸ್ವಾತಂತ್ರ್ಯ ಇಟ್ಟುಕೊಂಡಿದ್ದೇವೆ. ತನ್ಮೂಲಕ ಕನ್ನಡದ ಮಕ್ಕಳ ಒಳಿತಿಗಾಗಿ ಶ್ರಮಿಸುತ್ತಿದ್ದೇವೆ.

*********

`ಕಿಂದರಿ ಜೋಗಿ'ಗೆ `ಚಂದಮಾಮ'ದ ಗುಣವೂ ಇದೆ. `ಬಾಲ ವಿಜ್ಞಾನ'ದ ಗುಣವೂ ಇದೆ. `ಬಾಲ ವಿಜ್ಞಾನ'ಕ್ಕೂ `ಕಿಂದರಿ ಜೋಗಿ'ಗೂ ಎಷ್ಟೋ ಸಾಮ್ಯತೆಗಳಿವೆ. `ಕಿಂದರಿ ಜೋಗಿ'ಯೂ ಸಹ ಜ್ಞಾನಾಧಾರಿತ ಪತ್ರಿಕೆ, ಅಥವಾ ಪುರವಣಿ. ಅದೂ ಸಹ `ಬಾಲ ವಿಜ್ಞಾನ'ದಂತೆ ಸಾವಿರಾರು ಶಾಲೆಗಳನ್ನು ತಲುಪುತ್ತಿದೆ. ಆದರೆ ಇಲ್ಲಿ ಒಂದು ಪ್ರಮುಖ ವ್ಯತ್ಯಾಸವಿದೆ. ನಮ್ಮದು ಕನ್ನಡದ ಹಿರಿಯ ದೈನಿಕವಾದ್ದರಿಂದ ಸಹಜವಾಗಿ ನಮಗೆ ಉತ್ತಮ ಪ್ರಸಾರ ವಿಭಾಗದ ನೆರವಿದೆ. ವಿಭಿನ್ನ ಪ್ರಸಾರ ನೀತಿಗಳಿವೆ. ಹೀಗಾಗಿ ನಾವು ಶಾಲೆಗಳ ಲೈಬ್ರರಿಗಳನ್ನು ಮಾತ್ರ ತಲುಪುತ್ತಿಲ್ಲ. ಶಾಲಾ ಮುಖ್ಯಸ್ಥರಿಗೆ ಮಾತ್ರ `ಕಿಂದರಿ ಜೋಗಿ'ಯ ಪ್ರತಿಗಳು ಹೋಗುತ್ತಿಲ್ಲ. ಒಂದು ಶಾಲೆಗೆ `ಕಿಂದರಿ ಜೋಗಿ' ಹೋಯಿತು ಎಂದರೆ ಅಲ್ಲಿನ ಬಹುಪಾಲು ವಿದ್ಯಾಥರ್ಿಗಳ ಮನೆಗೆ ಶಾಲೆಯ ಮೂಲಕ ಸರಬರಾಜಾಯಿತು ಎಂದರ್ಥ.

ಒಂದೊಂದು ಶಾಲೆಗೂ ನಾವು 300-400, 1000-1500, ಹೀಗೆ ಪ್ರತಿಗಳನ್ನು ಕಳುಹಿಸುತ್ತಿದ್ದೇವೆ. `ಕಿಂದರಿ ಜೋಗಿ'ಯ ಪ್ರಭಾವ ಹೆಚ್ಚುತ್ತಿದೆ. ಅದರ ಶೈಕ್ಷಣಿಕ ಕೊಡುಗೆ ಸರ್ವತ್ರ ಮಾನ್ಯವಾಗಿ ರಾಜ್ಯಾದ್ಯಂತ ಒಂದು ಆಂದೋಲನದ ಸ್ವರೂಪ ಗಳಿಸಿಕೊಂಡಿದೆ. ಎಲ್ಲರ ಗಮನಕ್ಕೂ ತರುವ ಉದ್ದೇಶದಿಂದ ಮಾತ್ರ ಈ ಮಾತನ್ನು ಈ ಸಂದರ್ಭದಲ್ಲಿ ಹೇಳುತ್ತಿದ್ದೇನೆ.

*********

ಇನ್ನು, ಕನ್ನಡದಲ್ಲಿ ನಾನಾ ಪತ್ರಿಕೆಗಳು ಮಕ್ಕಳಿಗಾಗಿ ನಡೆಸಲ್ಪಡುತ್ತಿವೆ. ಕೇರಳದ ಮಂಗಳಂ ಪ್ರಕಾಶನ ಸಂಸ್ಥೆ ಮಲಯಾಳಂ ಹಾಗೂ ಕನ್ನಡದಲ್ಲಿ `ಬಾಲಮಂಗಳ' ಪಾಕ್ಷಿಕ ನಿಯತಕಾಲಿಕವನ್ನು ಹೊರತರುತ್ತಿದೆ.

`ಚಂದಮಾಮಾ', `ಬಾಲಮಿತ್ರ', `ಬೊಂಬೆಮನೆ', `ಪುಟಾಣಿ', `ಗಿಳಿವಿಂಡು', `ತುಂತುರು', ಬಾಲಮಂಗಳ', ಚಂಪಕ' - ಇವೆಲ್ಲ ಕನ್ನಡದ ಕೆಲವು ಪ್ರಸಿದ್ಧ ಮಕ್ಕಳ ಪತ್ರಿಕೆಗಳು. ಈ ಪಟ್ಟಿ ಅಪೂರ್ಣ. ಎಲ್ಲ ನಿಯತಕಾಲಿಕಗಳ ಹೆಸರುಗಳನ್ನೂ ದಾಖಲಿಸುವುದು ಕಷ್ಟ. ಕೆಲವನ್ನು ಮಾತ್ರ ಹೆಸರಿಸುತ್ತಿದ್ದೇನೆ. ವಾಸ್ತವವಾಗಿ ಈ ಪೈಕಿ ಅನೇಕ ಮಕ್ಕಳ ಪತ್ರಿಕೆಗಳು ಕೆಲಕಾಲ ನಡೆದು ಮುಚ್ಚಿಹೋಗಿವೆ. ವಾಣಿಜ್ಯಿಕ ಮತ್ತು ಇತರ ಅನೇಕ ಕಾರಣಗಳಿಗಾಗಿ ಎಷ್ಟೋ ಪತ್ರಿಕೆಗಳು ಮುಚ್ಚಿಹೋಗುವುದು ಸಹಜ. ಪಶ್ಚಿಮದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಪತ್ರಿಕೆಗಳೆಷ್ಟೋ ಈಗ  ಇತಿಹಾಸ ಸೇರಿವೆ. ಉಳಿದ ಎಷ್ಟೋ ಪತ್ರಿಕೆಗಳು ಬಾಗಿಲು ಹಾಕುವ ಹಂತದಲ್ಲಿವೆ. ಅಥವಾ ಮಾರಾಟವಾಗುತ್ತಿವೆ.

ಅದು ಮುಖ್ಯವಾದ ಸಂಗತಿ ಅಲ್ಲ. ಒಂದು ನಿಯತಕಾಲಿಕ ಎಷ್ಟು ಕಾಲ ನಡೆಯಿತು ಎಂಬುದಕ್ಕಿಂತಲೂ, ಅದರ ಉದ್ದೇಶ ಏನು? ಗುಣಮಟ್ಟ ಎಂಥದ್ದು? ಅದರ ಶೈಕ್ಷಣಿಕ ಹಾಗೂ ನೈತಿಕ ಪ್ರಭಾವ ಎಷ್ಟು ಎಂಬುದೇ ಹೆಚ್ಚು ಗಮನಾರ್ಹ. ಈ ಅಂಶಗಳೇ ಇತಿಹಾಸದಲ್ಲಿ ಅದರ ಸ್ಥಾನವನ್ನು ನಿರ್ಧರಿಸುತ್ತವೆ.

ಈಗ ಪಶ್ಚಿಮದ ಮಕ್ಕಳ ಪತ್ರಿಕೆಗಳಲ್ಲಿ ಬರೀ `ಮನೋರಂಜನೆ'ಗೇ ಹೆಚ್ಚು ಒತ್ತು ನೀಡಲಾಗುತ್ತಿದೆ. ವಿಶೇಷವಾಗಿ ಕಾಮಿಕ್ಸ್ಗಳು ಟಿವಿ ಪ್ರಭಾವಕ್ಕೆ ಒಳಗಾಗಿವೆ. ಹೊಸ ಕಾಮಿಕ್ ಪಾತ್ರಗಳ ವೇಷ-ಭೂಷಣಗಳು, ಸಂಭಾಷಣೆಗಳು ಮಕ್ಕಳಿಗೆ ತಕ್ಕ ಹಾಗಿಲ್ಲ.

ಭಾರತದ ಹಾಗೂ ಪಶ್ಚಿಮ ದೇಶಗಳ ಇಂಗ್ಲಿಷ್ ಪತ್ರಿಕೆಗಳನ್ನು ನೋಡಿದಾಗ `ಕಿಂದರಿ ಜೋಗಿ'ಯಂತಹ ಪುರವಣಿ, `ಬಾಲ ವಿಜ್ಞಾನ'ದಂತಹ, `ಚಂದಮಾಮಾ'ದಂತಹ ಪತ್ರಿಕೆಗಳು ನಮ್ಮ ಮಕ್ಕಳ ಆಪ್ತ ಗೆಳೆಯರಂತೆ, ನೆಚ್ಚಿನ ಶಿಕ್ಷಕರಂತೆ ಕಾರ್ಯವೆಸಗುತ್ತಿರುವುದು ಸಂತೋಷದ ವಿಷಯ.

ಕಸಬ್ ಇನ್ನೊಬ್ಬ ಅಫ್ಜಲ್ ಗುರು ಆಗಬಾರದು



ಅಜ್ಮಲ್ ಕಸಬ್ಗೆ ನೇಣು ಶಿಕ್ಷೆಯನ್ನು ವಿಧಿಸಿದ್ದು ಸಂತೋಷ. ಲೋಕಕಂಟಕರಿಗೆ ಮರಣದಂಡನೆಯೇ ಅತ್ಯಂತ ಸಹಜವಾದ ಶಿಕ್ಷೆ. ಸೈತಾನರಿಗೆ ಮಾನವ ಹಕ್ಕುಗಳು ಅನ್ವಯವಾಗುವುದಿಲ್ಲ. ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸುವುದೇ ಸರಿಯಾದ ನ್ಯಾಯಶಾಸ್ತ್ರ. ಆದರೆ ಈ ಶಿಕ್ಷೆಯನ್ನು ಎಷ್ಟು ದಕ್ಷತೆಯಿಂದ ಮತ್ತು ಪ್ರಾಮಾಣಿಕತೆಯಿಂದ ಜಾರಿಗೊಳಿಸಲಾಗುತ್ತದೆ ಎಂಬುದು ಮಾತ್ರ ಕಾದು ನೋಡಬೇಕಾದ ಅಂಶ.

ಪಾಕಿಸ್ತಾನದ ಜಿಹಾದಿ ಭಯೋತ್ಪಾದಕನೊಬ್ಬ ತನ್ನ ಕಾಯರ್ಾಚರಣೆಯಲ್ಲಿ ನಿರತನಾಗಿರುವಾಗ ಜೀವಂತವಾಗಿ ಸೆರೆಸಿಕ್ಕಿರುವುದು ಇದೇ ಮೊದಲು. ಪಾಕಿ ಉಗ್ರನೊಬ್ಬನ ಅಪರಾಧ ಭಾರತದ ನ್ಯಾಯಾಲಯದಲ್ಲಿ ಸಾಬೀತಾಗಿರುವುದೂ ಇದೇ ಮೊದಲು. ಆದರೆ ಭಯೋತ್ಪಾದನಾ ಕೃತ್ಯ ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಇದೇ ಮೊದಲಲ್ಲ. ಉಗ್ರನೊಬ್ಬನಿಗೆ ನೇಣು ಶಿಕ್ಷೆ ವಿಧಿಸಿದ್ದೂ ಇದೇ ಮೊದಲೇನಲ್ಲ.

ಸಂಸತ್ ಭವನದ ಮೇಲೆ ದಾಳಿ ಮಾಡಿದ ಆರೋಪ ಸಾಬೀತಾಗಿ ಸುಪ್ರೀಂ ಕೋಟರ್್ ಎರಡು ಬಾರಿ ಗಲ್ಲು ಶಿಕ್ಷೆಯನ್ನು ಖಾಯಂ ಮಾಡಿದ್ದರೂ ಅಫ್ಜಲ್ ಗುರುವನ್ನು ಯುಪಿಎ ಸಕರ್ಾರ ಇನ್ನೂ ಗಲ್ಲಿಗೇರಿಸಿಲ್ಲ. ಹಾಗೆಯೇ ರಾಜೀವ್ ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿದ್ದ ಮುರುಗನ್ಗೂ ಗಲ್ಲು ವಿಧಿಸಲ್ಪಟ್ಟಿದೆ. ಆದರೂ ಅವನನ್ನು ಎರಡು ದಶಕಗಳಿಂದ ಇನ್ನೂ ಜೀವಂತವಾಗಿ ಇಡಲಾಗಿದೆ. ಆತನ ಪತ್ನಿ ನಳಿನಿಗೆ ಜೀವದಾನ ನೀಡಲಾಗಿದೆ.
  
ಭಾರತದೊಳಗೆ ಯಾರು ನೆರವು ನೀಡದೇ ಲಷ್ಕರ್-ಎ-ತೋಯ್ಬಾದ ಸೈತಾನರು ಮುಂಬೈಗೆ ಬಂದಿಳಿದು ದಾಳಿ ಮಾಡುವುದು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತು. ಆದರೆ ಈ ಕುರಿತ ತನಿಖೆ ಸಮರ್ಪಕವಾಗಿಲ್ಲ, ಪ್ರಾಮಾಣಿಕವಾಗಿಲ್ಲ. ದೋಷಾರೋಪ ಮಾಡಿದ್ದ ಇಬ್ಬರು ಭಾರತೀಯರ ಬಿಡುಗಡೆಯಾಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. `ಪೋಟಾ'ದಂತಹ ವಿಶೇಷ ಕಾನೂನು ಇದ್ದಿದ್ದರೆ ಅವರು ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತಿತ್ತು.
  
ಅಜ್ಮಲ್ ಕಸಬ್ ಸಿಕ್ಕಿಹಾಕಿಕೊಳ್ಳದೇ ಇದ್ದಿದ್ದರೆ ಈ ಕೇಸಿನ ಸ್ವರೂಪವೇ ಬದಲಾಗಿರುತ್ತಿತ್ತು. ಅವನು ಜೀವಂತವಾಗಿ ಸೆರೆ ಸಿಕ್ಕಿದ್ದೇ ಇಲ್ಲಿ ಮಹತ್ವವಾದ ಸಂಗತಿ. ಪಾಕಿಸ್ತಾನಕ್ಕೆ ಹಾಗೂ ಜಿಹಾದಿ ಪರವಾದ ಶಕ್ತಿಗಳ ಪಾಲಿಗೆ ಇದು ಪೇಚಿನ ಸಂಗತಿಯೂ ಹೌದು. ಅವನೂ ಉಳಿದ ಉಗ್ರರಂತೆ ಹತನಾಗಿದ್ದರೆ ಪಾಕಿಸ್ತಾನದ ಕೆಲಸ ಸುಲಭವಾಗುತ್ತಿತ್ತು. ಆತ ಪಾಕಿಸ್ತಾನದವನೇ ಅಲ್ಲ, ಲಷ್ಟರ್-ಎ-ತೋಯ್ಬಾದವನೂ ಅಲ್ಲ ಎಂದು ವಾದಿಸುವುದು ಸುಲಭವಾಗುತ್ತಿತ್ತು. ಭಾರತದಲ್ಲೂ ಇಷ್ಟು ದೊಡ್ಡ ಸಂಚಲನ ಸೃಷ್ಟಿಯಾಗುತ್ತಿರಲಿಲ್ಲ. ನಮ್ಮ ಮಂತ್ರಿಗಳು ಪಾಕಿಸ್ತಾನವನ್ನು `ಪರೋಕ್ಷವಾಗಿ' ಉಲ್ಲೇಖಿಸಿ ಸುಮ್ಮನಾಗುತ್ತಿದ್ದರು. ಪಾಕ್ ಸಕರ್ಾರ `ಇದು ಹುರುಳಿಲ್ಲದ ಆರೋಪ' ಎಂದು ತೊಪ್ಪೆಸಾರಿಸಿ ಮೌನವಾಗುತ್ತಿತ್ತು. ದಾಖಲೆಗಳು, ಪುರಾವೆಗಳು ಹೀಗೆ ಎಲ್ಲವನ್ನೂ `ಇದು ಸರಿಯಿಲ್ಲ, ಇದು ಸಾಕಾಗುವುದಿಲ್ಲ' ಎಂದು ತಿರಸ್ಕರಿಸುವುದು ಸುಲಭ. ಆದರೆ ಕೊಲ್ಲಲು ಬಂದ ಭಯೋತ್ಪಾದಕನೇ ಸಿಕ್ಕಿಬಿದ್ದರೆ ಅದನ್ನು ಅಲ್ಲಗಳೆಯುವುದು ಸುಲಭವಲ್ಲ. ಕಸಬ್ನನ್ನು ಹಿಡಿದು ಹುತಾತ್ಮನಾದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ತುಕಾರಾಮ್ ಉಂಬಳೆಗೆ ದೇಶದ ಜನರೆಲ್ಲ ಚಿರಋಣಿಗಳು.
  
ಇಲ್ಲಿ ಪತ್ರಕರ್ತರ ಸಾಹಸ ಹಾಗೂ ಪ್ರಾಮಾಣಿಕತೆಗಳು ಮಹತ್ವದ ಪಾತ್ರ ವಹಿಸಿವೆ. ಈ ಪ್ರಕರಣದ ಇತ್ಯರ್ಥಕ್ಕೆ ತುಂಬ ಸಹಕಾರಿಯಾಗಿವೆ. ಈ ಪೈಕಿ ಮೊದಲನೆಯದು ಕಸಬ್ ಗನ್ ಹಿಡಿದು ಹತ್ಯೆಗೆ ಸಜ್ಜಾಗಿ ನಿಂತಿದ್ದ ಫೋಟೋ. ವ್ಯಾಪಕ ಪ್ರಸಾರ ಕಂಡಿರುವ ಅದನ್ನು ತೆಗೆದದ್ದು `ಮುಂಬೈ ಮಿರರ್' ಪತ್ರಿಕೆಯ ಫೋಟೋ ಎಡಿಟರ್ ಸೆಬಾಸ್ಟಿಯನ್ ಡಿ ಸೋಜಾ. ಅವರು ಮಾಡಿರುವ ಸಾಹಸ ಈ ಸಮಯದಲ್ಲಿ ಮೆಚ್ಚುವಂತಹುದು.
  
`ನನ್ನ ಕೈಲಿ ಕ್ಯಾಮೆರಾ ಬದಲು ಗನ್ ಇದ್ದಿದ್ದರೆ ಅವನನ್ನು ಅಲ್ಲೇ ಕೊಂದು ಹಾಕುತ್ತಿದ್ದೆ' ಎಂದು ಅವರು ಆ ಸಂದರ್ಭದಲ್ಲಿ ಉದ್ಘರಿಸಿದ್ದರು. ಬಹುಶಃ ಅವರ ಬಳಿ ಗನ್ ಇದ್ದಿದ್ದರೆ ಒಂದಿಷ್ಟು ಜನರ ಜೀವ ಉಳಿಸಲು ನೆರವಾಗುತ್ತಿತ್ತು. ಈಗ ಅವರ ಕ್ಯಾಮೆರಾ ಬಹಳ ಮಹತ್ವವಾದದ್ದನ್ನು ಸಾಧಿಸಿದೆ. ಪಾಕಿಸ್ತಾನದ ಸೈತಾನ ರೂಪವನ್ನು ಜಗತ್ತಿಗೆ ಹಸಿಹಸಿಯಾಗಿ ತೋರಿಸಿಕೊಟ್ಟಿದೆ.
  
ಈ ಪ್ರಕರಣದಲ್ಲಿ ಪತ್ರಕರ್ತರು ನಿರ್ವಹಿಸಿದ ಇನ್ನೊಂದು ಮುಖ್ಯ ಭೂಮಿಕೆ ಎಂದರೆ, ಪಾಕಿಸ್ತಾನದಲ್ಲಿ ಕಸಬ್ನ ವಿಳಾಸ ಏನು? ಅವನ ಹಿನ್ನೆಲೆ ಏನು? ಅವನ ಕುಟುಂಬ ಎಲ್ಲಿದೆ? - ಎಂಬುದನ್ನು ಪತ್ತೆಹಚ್ಚಿದ್ದು. ಅಜ್ಮಲ್ ಕಸಬ್ ಪಾಕಿಸ್ತಾನದ ಪಂಜಾಬ್ ರಾಜ್ಯದ ಒಕಾರಾ ಜಿಲ್ಲೆಯ ಫರೀದ್ಕೋಟ್ ಗ್ರಾಮದವನು; ಅವನ ಅಪ್ಪ ದಹೀ ಪೂರಿ ಮಾರುವವನು; ಅವನ ಅಣ್ಣ ಅಫ್ಜಲ್ ಕಸಬ್ ಲಾಹೋರ್ನಲ್ಲಿ ಇದ್ದಾನೆ. ಅವನ ಅಕ್ಕ ರುಕಯ್ಯಾ, ತಂಗಿ ಸುರಯ್ಯಾ ಹಾಗೂ ತಮ್ಮ ಮುನೀರ್ ಎಲ್ಲ ಫರೀದ್ಕೋಟ್ನಲ್ಲೇ ಇದ್ದಾರೆ' - ಇದು ಪಾಕಿಸ್ತಾನದ ಕೆಲವು ಪತ್ರಕರ್ತರು ಹೊರಗೆಡವಿದ ಮಾಹಿತಿ. ಈ ವಿವರಗಳು ಪಾಕಿಸ್ತಾನ ಸಕರ್ಾರವನ್ನು ದಂಗು ಬಡಿಸಲು ಸಾಕಾಯಿತು. ಕಸಬ್ ಪಾಕಿಸ್ತಾನದವನೇ ಅಲ್ಲ ಎಂದು ವಾದಿಸಿಕೊಂಡು ಬರುತ್ತಿದ್ದ ಪಾಕ್ ಸಕರ್ಾರ 2009ರ ಜನವರಿಯಲ್ಲಿ `ಕಸಬ್ ಪಾಕಿಸ್ತಾನದವನು' ಎಂಬುದನ್ನು ಒಪ್ಪಿಕೊಳ್ಳಬೇಕಾಯಿತು.
  
`ಮುಂದೇನು?' ಎಂಬುದು ಈಗ ಜನಸಾಮನ್ಯರ ಮನಸ್ಸಿನಲ್ಲಿ ಏಳುವ ಪ್ರಶ್ನೆ. ಇಲ್ಲಿ ಎರಡು ಹಂತಗಳಿವೆ. ಒಂದು ಕಸಬ್ನನ್ನು ಶಿಕ್ಷಿಸುವುದು. ಇನ್ನೊಂದು ಪಾಕಿಸ್ತಾನದ ಭಯೋತಾದಕ ವ್ಯವಸ್ಥೆಯನ್ನು ನಿಮರ್ೂಲನೆ ಮಾಡುವುದು. ಮೊದಲನೆಯದರ ವಿಷಯದಲ್ಲಿ ನಮ್ಮ ಸಕರ್ಾರ ಯಾವ ರೀತಿ ನಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು. ಎರಡನೆಯದು ಭಾರತೀಯರ ಪಾಲಿಗೆ ಯಾವಾಗ ನನಸಾಗುತ್ತದೋ ಗೊತ್ತಿಲ್ಲ.
  
ಕಸಬ್ ವಿಷಯಕ್ಕೆ ಬಂದರೆ, ಆತ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು. ಸುಪ್ರೀಮ್ ಕೋಟರ್ಿನಲ್ಲಿ ಪ್ರಕರಣ ಇತ್ಯರ್ಥವಾಗಲು ಇನ್ನೂ ಕೆಲವರ್ಷಗಳು ಬೇಕಾಗುತ್ತವೆ. ಅಲ್ಲಿಯವರೆಗೆ ಆತ ಜೀವಂತವಾಗಿಯೇ ಇರುತ್ತಾನೆ. ಸುಪ್ರೀಮ್ ಕೋಟರ್ು ಅವನ ಮರಣ ದಂಡನೆಯನ್ನು ಖಾಯಂಗೊಳಿಸಿದರೆ ಆತ ಕ್ಷಮಾದಾನಕ್ಕಾಗಿ ರಾಷ್ಟ್ರಪತಿಗೆ ಮನವಿ ಸಲ್ಲಿಸಬಹುದು. ನಮ್ಮ ರಾಷ್ಟ್ರಪತಿಗಳು ಹಾಗೂ ಕೇಂದ್ರ ಸಚಿವ ಸಂಪುಟ ಈ ವಿಷಯದಲ್ಲಿ ನಿಧರ್ಾರಕ್ಕೆ ಬರಬೇಕಾಗುತ್ತದೆ. ಅವರುಗಳು ಇನ್ನಷ್ಟು ವರ್ಷಗಳನ್ನು ಉರುಳಿಸಬಹುದು.

   ಈವರೆಗೆ 27 ಕ್ಷಮಾದಾನದ ಅಜರ್ಿಗಳು ರಾಷ್ಟ್ರಪತಿ ಭವನದ ಮಂದಿವೆ. ಅವುಗಳನ್ನು ಸೀನಿಯಾರಿಟಯ ಪ್ರಕಾರ ಇತ್ಯರ್ಥ ಮಾಡಲು ಹೊರಟರೆ (ಇದೂ ಅನುಮಾನವೇ!) ಕಸಬ್ ಜೈಲಿನಲ್ಲೇ ಮುದುಕನಾಗುತ್ತಾನೆ. ಭಾರತದ ಮೇಲೆ ಯುದ್ಧ ಸಾರತಿದ ವಿದೇಶಿ ಉಗ್ರನ ವಿಷಯದಲ್ಲಿ ವಿಶೇಷ ಆದ್ಯತೆ ನೀಡಿ ಬೇಗ ತೀಮರ್ಾನ ತೆಗೆದುಕೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ನಮ್ಮ ಯುಪಿಎ ಸಕರ್ಾರದ ಟ್ರ್ಯಾಕ್ ರೆಕಾಡರ್್ ಅಷ್ಟಾಗಿ ಸರಿಯಿಲ್ಲ. ಅದು ಪಾಕಿಸ್ತಾನದ ರಾಜತಾಂತ್ರಿಕ ಒತ್ತಡಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದೂ ಗಮನಾರ್ಹ ಸಂಗತಿ.