ಬುಧವಾರ, ನವೆಂಬರ್ 09, 2011

ಐಎಸ್ಐ ಬುಟ್ಟಿಯಲ್ಲಿ ಭಾರತೀಯ ಬುದ್ಧಿಜೀವಿಗಳು

ಭಾರತದ ಅನೇಕ ಸ್ವಘೋಷಿತ `ಮಾನವತಾವಾದಿ'ಗಳ ನಿಜಬಣ್ಣ ಬಯಲಾಗುತ್ತಿದೆ. ಇಂತಹ ಅನೇಕರು ಪಾಕಿಸ್ತಾನದ ಐಎಸ್ಐ ಗೆಸ್ಟ್ ಲಿಸ್ಟ್ನಲ್ಲಿ ವಿರಾಜಮಾನರಾಗಿರುವ ವಿಷಯ ಸುದ್ದಿಯಾಗುತ್ತಿದೆ. ಹೊಸ ಹೊಸ ಹೆಸರುಗಳು ಹೊರಬರುತ್ತಿವೆ. ಆದರೂ ನಮ್ಮ ಸರ್ಕಾರ ಎಚ್ಚೆತ್ತಿರುವ ಹಾಗೆ ಕಾಣುತ್ತಿಲ್ಲ.

ಐಎಸ್ಐ ಖರ್ಚಿನಲ್ಲಿ ವಿದೇಶ ಪ್ರವಾಸ, ಪಂಚತಾರಾ ಹೊಟೇಲಿನ ವಾಸ, ಸೆಮಿನಾರುಗಳಲ್ಲಿ ಭಾರತದ ವಿರುದ್ಧ ಅರಚಾಟ, ಭಾರತದ ಮತ್ತು ವಿದೇಶಗಳ ಪತ್ರಿಕೆಗಳಲ್ಲಿ ಪಾಕಿಸ್ತಾನದ ರಣತಾಂತ್ರಿಕ ನಿಲುವಿಗೆ ಅನುಕೂಲವಾಗುವಂತಹ ಲೇಖನಗಳನ್ನು ಬರಹ, ಹೇಳಿಕೆ ನೀಡಿಕೆ, ಜಿಹಾದಿಗಳ ಪರವಾಗಿ ವಾದಿಸುವುದು - ಇವೆಲ್ಲ ಈ `ಭಾರತೀಯ' ಐಎಸ್ಐ ಬುದ್ಧಿಜೀವಿಗಳ ಪಾಲಿನ ಕರ್ತವ್ಯ.

ಅಮೆರಿಕ, ಲಂಡನ್ ಹಾಗೂ ಬ್ರಸೆಲಗಳಲ್ಲಿ ನಡೆದ ಐಎಸ್ಐ ಸೆಮಿನಾರುಗಳಲ್ಲಿ ಭಾರತದ ಅನೇಕ ನಿವಾಸಿ, ಅನಿವಾಸಿ ಬುದ್ಧಿಜೀವಿಗಳು ಪಾಲ್ಗೊಂಡಿದ್ದು ಈಗಾಗಲೇ ಸುದ್ದಿಯಾಗಿದೆ. ಈ ಪೈಕಿ ಕುಪ್ರಸಿದ್ಧವಾದದ್ದು ಅಮೆರಿಕದ `ಕಾಶ್ಮೀರಿ ಅಮೆರಿಕನ್ ಕೌಂಸಿಲ್' (ಕೆಎಸಿ). ಅದರ ರೂವಾರಿ ಸಯ್ಯದ್ ಗುಲಾಮ್ ನಬಿ ಫೈ ಅಮೆರಿಕದಲ್ಲಿ ಪಾಕಿಸ್ತಾನದ ಪರ, ಭಾರತದ ವಿರುದ್ಧ ನಡೆಸುತ್ತಿದ್ದ ಐಷಾರಾಮಿ ಸೆಮಿನಾರುಗಳು ಬಹಳ ಬೇಗ ಅಮೆರಿಕದ FBI  ಗಮನವನ್ನು ಸೆಳೆದದ್ದು ಗಮನಿಸಬೇಕಾದ ಅಂಶ. ಆತ ವಾಸ್ತವವಾಗಿ ಐಎಸ್ಐ ಏಜೆಂಟ್ ಎಂಬುದನ್ನು FBI  ಬಹಳ ಬೇಗ ಬಯಲುಮಾಡಿತು. ಈಗ ಆತನ ಮೇಲೆ ಕ್ರಿಮಿನಲ್ ಆರೋಪವನ್ನು ಹೊರಿಸಲಾಗಿದೆ.

ಅಷ್ಟೇನೂ ಪ್ರಚಾರವಿಲ್ಲದ ಸಣ್ಣ ಸಂಸ್ಥೆಯಾದ ಕೆಎಸಿ, ತನ್ನ ಸೆಮಿನಾರುಗಳಿಗೆ ಲಕ್ಷಗಟ್ಟಲೆ ಹಣ ಖರ್ಚು  ಮಾಡುವ ಅಗತ್ಯವಾದರೂ ಏನಿತ್ತು? ಈ ಸೆಮಿನಾರುಗಳನ್ನು ಕೇಳಲು ಬರುತ್ತಿದ್ದವರು ಕೇವಲ ಬೆರಳೆಣಿಯಷ್ಟು ಮಂದಿ. ಮಾಧ್ಯಮಗಳಲ್ಲೂ ಈ ಸೆಮಿನಾರಿನ ಭಾಷಣಗಳು ವರದಿಯಾಗುತ್ತಿರಲಿಲ್ಲ. ಹೀಗಿರುವಾಗ ನಾಲ್ಕಾರು ಜನರ ಮುಂದೆ ಅರಚಾಡಲು ಬುದ್ಧಿಜೀವಿಗಳನ್ನು ವಿಮಾನದಲ್ಲಿ ಕರೆಸಿ, ಪಂಚತಾರಾ ಹೋಟೆಲುಗಳಲ್ಲಿ ಇರಿಸಿ, ಮೋಜು ಮಾಡಿಸುವ ಅಗತ್ಯವಾದರೂ ಏನಿತ್ತು? - ಇವೆಲ್ಲ ಎಫ್ಬಿಐ ತನಿಖಾ ವ್ಯಾಪ್ತಿಗೆ ಬಂದ ವಿಷಯಗಳು.

ಈಗ ಹೇಳಿ, ಇಂಹುದೊಂದು ತನಿಖೆಯನ್ನು ಭಾರತ ಸರ್ಕಾರ ಎಂದಾದರೂ ಮಾಡಿದೆಯೆ? ನಮ್ಮಲ್ಲಿಯೂ ಭಾರತವಿರೋಧಿ ಸೆಮಿನಾರುಗಳು, ಬರಹಗಳು ಸಮೃಧ್ಧವಾಗಿವೆ. ಅವುಗಳನ್ನು ಸದೆಬಡಿಯಲು ಸೂಕ್ತ ಕಾನೂನುಗಳು ಇವೆ. ಆದರೆ ಅವುಗಳನ್ನು ಸರಿಯಾದ ರೀತಿ ಬಳಸುತ್ತಿಲ್ಲ. ಜೊತೆಗೆ, ನಮ್ಮ ಕೆಲವು ಪ್ರಭಾವಶಾಲಿ ಮಾಧ್ಯಮಗಳು ಭಾರತವಿರೋಧಿ `ಮಾನವತವಾದಿ'ಗಳ ದನಿಗೇ ಇನ್ನಿಲ್ಲದ ಸ್ಥಳವನ್ನು ನೀಡುತ್ತಿವೆ. ಭಾರತದ ಸಂವಿಧಾನ, ಕಾನೂನುಗಳಿಗೆ ಅರುಂಧತಿ ರಾಯ್ ಪ್ರಭೇದಗಳು ಕವಡೆಯ ಬೆಲೆಯನ್ನೂ ನೀಡುವುದಿಲ್ಲ, `ಭಾರತ' ಎಂಬುದನ್ನೇ ಅವರು ಒಪ್ಪುವುದಿಲ್ಲ ಎಂಬುದು ಗೊತ್ತಿದ್ದರೂ ಅವರುಗಳಿಗೆ ಗೌರವಾನ್ವಿತ ಸ್ಥಾನವನ್ನು ನೀಡುವಲ್ಲಿ ನಾವು ಹಿಂದೆ ಬಿದ್ದಿಲ್ಲ.

ನಮ್ಮ ಅನೇಕ ಬುದ್ಧಿಜೀವಿಗಳು ಭಾರತದೊಳಗಿನ, ಪಾಕಿಸ್ತಾನ ಪ್ರಚೋದಿತ, ಕಾಶ್ಮೀರಿ ಪ್ರತ್ಯೇಕತಾವಾದದ ಪರವಾಗಿ ಹೇಳಿಕೆ ನೀಡುವುದು, ಲೇಖನಗಳನ್ನು ಬರೆಯುವುದು, ಸೆಮಿನಾರುಗಳಲ್ಲಿ ಮೈಮೇಲೆ ಬಂದವರಂತೆ ಮಾತನಾಡುವುದು ಹೊಸದೇನಲ್ಲ. ಮಾವೋವಾದಿಗಳ ಪರವಾಗಿ ವರ್ತಿಸುವುದು ರಹಸ್ಯವೇನಲ್ಲ. ಹಿಂದೆ ಸೋವಿಯತ್ ಗೂಢಚಾರ ಸಂಸ್ಥೆ ಕೆಜಿಬಿ ಪರವಾಗಿ ಭಾರತದಲ್ಲಿ ಅನೇಕ ಬುದ್ದೀಜೀವಿಗಳು, ಮುಖಂಡರು ಕೆಲಸ ಮಾಡುತ್ತಿದ್ದರು ಎಂಬುದನ್ನು `ಮಿತ್ರೋಕಿನ್ ಆಕ್ರೈವ್ಸ್' ಪುಸ್ತಕ ವಿವರವಾಗಿ ಬಯಲಿಗೆಳೆದಿತ್ತು. ಭಾರತದ ಅನೇಕರು ಕೆಜಿಬಿಯಿಂದ ಹಣ ಪಡೆಯುತ್ತಿದ್ದರು, ಭಾರತದ ಪ್ರಭಾವಶಾಲಿ ಪತ್ರಿಕೆಗಳಲ್ಲಿ ಕೆಜಿಬಿಯು ಸೋವಿಯತ್ ರಣನೀತಿಯ ಪರವಾದ ಸಾವಿರಾರು ಲೇಖನಗಳನ್ನು ಪ್ರಕಟ ಮಾಡಿಸಿತ್ತು ಎಂಬುದು ಸೋವಿಯತ್ ಪತನದ ನಂತರ ಬಯಲಾದ ರಹಸ್ಯ ದಾಖಲೆಗಳಿಂದ ತಿಳಿಯುತ್ತದೆ.

ಮೊದಲು ಕೆಜಿಬಿ, ಈಗ ಐಎಸ್ಐ. ಈಗ ಪಾಕಿಸ್ತಾನ ಮೂಲದಿಂದ ಯಾರು ಎಷ್ಟು ಹಣ ಪಡೆಯುತ್ತಿದ್ದಾರೆ ಎಂಬುದು ತಿಳಿದಿಲ್ಲ. ಒಟ್ಟಿನಲ್ಲಿ ವಿದೇಶಿ ಶಕ್ತಿಗಳು ಭಾರತದಲ್ಲಿ ಸಾರ್ವಜನಿಕ ಅಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಕೆಲವು ಜನರನ್ನು, ಬುದ್ಧಿಜೀವಿಗಳನ್ನು, ಮಾಧ್ಯಮದವರನ್ನು ಹಾಗೂ ಮುಖಂಡರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಮಾತ್ರ ಮುಂದುವರಿದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನಗಳು ಮುಂದುವರಿಯುತ್ತಿವೆ. ಈ ಕುರಿತು ತನಿಖೆಯಾಗಬೇಕು.

ಭಾರತವಿರೋಧಿಗಳ ವಿರುದ್ಧ ಅಮೆರಿಕ ಕ್ರಮ ತೆಗೆದುಕೊಂಡರೂ ಭಾರತ ಸರ್ಕಾರವೇಕೆ ಸುಮ್ಮನಿದೆ? ಅಂಗನಾ ಚಟರ್ಜಿ  ಎಂಬ ಅನಿವಾಸಿ ಪ್ರೊಫೆಸರಳನ್ನು ಈಗ ಅಮೆರಿಕದಲ್ಲಿ ತನಿಖೆಗೆ ಒಳಪಡಿಸಲಾಗುತ್ತಿದೆ.  ಆದರೆ ಭಾರತದಲ್ಲಿ, ಬಿನಾಯಕ್ ಸೇನ್ ಪ್ರಕರಣದ ನಂತರ, `Unlawful Activities Prevention Act' ಅನ್ನೇ ಅಳಿಸಿಹಾಕಬೇಕು ಎಂಬ ಆಂದೋಲನವನ್ನು ಆರಂಭಿಸಲಾಗಿದೆ!

ಐಎಸ್ಐ ಬುದ್ಧಿಜೀವಿಗಳ ಪಡೆ ಭಾರತದಲ್ಲಿದೆ ಎಂಬ ಅನುಮಾನಗಳ ಹಿನ್ನೆಲೆಯಲ್ಲಿ ತನಿಖೆ ಅತ್ಯಗತ್ಯ. ಆದರೆ ಅದನ್ನು ಮಾಡುವವರು ಯಾರು?

ಮುನ್ನೂರು ರಾಮಾಯಣಗಳ ತಕರಾರು: ಅಧ್ಯಯನ ಇರಲಿ, ವೈಚಾರಿಕ ದೀಕ್ಷೆ ಬೇಡ

ದೆಹಲಿ ವಿಶ್ವವಿದ್ಯಾಲಯದ ಅಕ್ಯಾಡೆಮಿಕ್ ಕೌಂಸಿಲ್  ಎ. ಕೆ. ರಾಮಾನುಜಂರ `ತ್ರೀ ಹಂಡ್ರೆಡ್ ರಾಮಾಯಣಾಸ್' ಪ್ರಬಂಧವನ್ನು ತಿರಸ್ಕರಿಸಿದ್ದು, ಅಕ್ಯಾಡೆಮಿಕ್ ವಲಯಗಳಲ್ಲಿ ಹೊಸ ರಣಕಹಳೆ ಮೊಳಗುವಂತೆ ಮಾಡಿದೆ. ಎಡ ಚಿಂತಕರು ಪ್ರಬಂಧದ ಪರವಾಗಿ ಸಹಿಸಂಗ್ರಹ ಅಭಿಯಾನ, ಸೆಮಿನಾರುಗಳು, ಸರದಿಯ ಮೇಲೆ ಮಾಧ್ಯಮ ಬರವಣಿಗೆ, ಹೇಳಿಕೆ ನೀಡಿಕೆ - ಇತ್ಯಾದಿಗಳನ್ನು ಜೋರಾಗಿ ಆಯೋಜಿಸುತ್ತಿದ್ದಾರೆ.

ಸುಮಾರು 30 ಪುಟಗಳ ಈ ಪ್ರಬಂಧವನ್ನು ನಾನು ಓದಿದ್ದೇನೆ. ವಿವಿಧ ಕವಿಗಳು, ವಿವಿಧ ದೇಶೀಯರು, ಮತೀಯರು, ತಂಬೂರೀ ದಾಸರು ವಾಲ್ಮೀಕಿಯ ರಾಮಾಯಣವನ್ನು ತಮ್ಮ ಕಲ್ಪನೆಯ ಅನುಸಾರ ಬದಲಿಸಿರುವುದು ನಿಜ. ಅದು ಸಾವಿರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಉತ್ತರ ಭಾರತದ ಕೆಲವು ಕಡೆಗಳಲ್ಲಿ ವಾಲ್ಮೀಕಿಯ ರಾಮಾಯಣಕ್ಕಿಂತಲೂ ತುಲಸೀದಾಸರ `ರಾಮಚರಿತಮಾನಸ'ವೇ ಹೆಚ್ಚು ಜನಪ್ರಿಯ. ಹಾಗೆಯೇ ತಮಿಳಿನ ಕಂಬ ರಾಮಾಯಣ ಇತ್ಯಾದಿ. ಈ ರಾಮಾಯಣ ಸಾಹಿತ್ಯಗಳು ರಾಮಾಯಣದ ಕೀರ್ತಿ, ಪ್ರಸಿದ್ಧಿ, ಪ್ರಭಾವಗಳ ದ್ಯೋತಕ. ಇವು ರಾಮಾನುಜಂ ಅವರ ಸ್ವಂತ ಸೃಷ್ಟಿಯಲ್ಲ. ಯಾರು ಓದಲಿ, ಬಿಡಲಿ, ಅವುಗಳು ಅಸ್ತಿತ್ವದಲ್ಲಿ ಇರುವುದಂತೂ ನಿಜ. ಅವುಗಳನ್ನು ರಾಮಾನುಜಂ ವ್ಯಾಖ್ಯಾನಿಸಿದ್ದಾರೆ. ಅದನ್ನು ಓದುವುದಿಲ್ಲ ಎನ್ನುವುದು ಅಧ್ಯಯನಶೀಲತೆಯಲ್ಲ.

ನಿಜ, ಹಿಂದು ಸಂಸ್ಕೃತಿ ಯಾವುದೇ ಒಂದು ಗ್ರಂಥವನ್ನು ಆಧರಿಸಿಲ್ಲ. ಅದರಲ್ಲೂ ರಾಮಾಯಣ, ಮಹಾಭಾರತಗಳು ಇತಿಹಾಸ ಗ್ರಂಥಗಳೆಂದು ಮಾನ್ಯವಾಗಿದ್ದರೂ ಅವು `ಗಾಸ್ಪೆಲ್'ಗಳ ತರಹ ಅಲ್ಲ. ಥಾಯ್ ರಾಮಾಯಣದಿಂದ ಕುವೆಂಪು ತನಕ ಎಲ್ಲ ರಾಮಾಯಣಗಳಿಗೂ ವಾಲ್ಮೀಕಿಯ ರಾಮಾಯಣ ಹಳೆಯದು, ಹಾಗೂ ಮೂಲವಾದದ್ದು. ಇದನ್ನು ಮರೆಯಬಾರದು. ಮೂಲ ಲೇಖಕರ ಹಕ್ಕನ್ನು ಮರೆಯಬರದು. ವಾಲ್ಮಿಕಿಯ ಬಗ್ಗೆ ತಕ್ಕಮಟ್ಟಿಗೆ ಒಪ್ಪಿಕೊಂಡೇ ರಾಮಾನುಜಂ ಬರೆದಿದ್ದಾರೆ. ಆದರೆ ತಮ್ಮ  ವಾದದಲ್ಲಿ ದೃಢವಾಗಿ ಒಪ್ಪಿಲ್ಲ.

`ಗಾಸ್ಪೆಲ್ ಟ್ರೂತ್' ಎಂಬ ಪರಿಕಲ್ಪನೆ ಭಾರತದ್ದಲ್ಲ. ಗಾಸ್ಪೆಲ್ ಟ್ರೂತ್ ಎನ್ನುವವರಲ್ಲೂ ಹಲವು, ಪರಸ್ಪರ ವೈರುಧ್ಯವುಳ್ಳ ಗಾಸ್ಪೆಲ್ಗಳಿವೆ. ಕೆಲವನ್ನು ಹತ್ತಿಕ್ಕಲಾಗಿದೆ. ಕೆಲವನ್ನು ಮಾತ್ರ ಸ್ವೀಕರಿಸಲಾಗಿದೆ. ಬೈಬಲ್ಲಿನ ಹೊಸ ಒಡಂಬಡಿಕೆಯಲ್ಲಿ  ಕೇವಲ ನಾಲ್ಕನ್ನು ಮಾತ್ರ ಒಪ್ಪಲಾಗಿದೆ (ಮಾರ್ಕ್, ಲ್ಯೂಕ್, ಡೇವಿಡ್, ಜಾನ್ - ಈ ನಾಲ್ಕರಲ್ಲೂ ಪರಸ್ಪರ ವಿರುದ್ಧಾರ್ಥಕ ಕಥನಗಳಿವೆ). ಬೈಬಲ್ಲಿನಲ್ಲಿ ಸೇರಲ್ಪಡದ ಅನೇಕ ಗಾಸ್ಪೆಲ್ಗಳಿವೆ. ಇವುಗಳ ಬಗ್ಗೆಯೂ ತಿಳಿವು ಅಗತ್ಯ. ಆಗ ನಿಜವಾದ ಅಧ್ಯಯನಶೀಲತೆಯಾಗುತ್ತದೆ.

ಆದರೆ ಇಲ್ಲಿ ಸಮಸ್ಯೆಯಿರುವುದು ನಮ್ಮ `ಪ್ರಗತಿಪರರು' (ಹಾಗೆಂದರೇನು ಎಂಬುದು ನನಗೆ ಇನ್ನೂ ಗೊತ್ತಿಲ್ಲ!) ತಳೆಯುವ ಸೆಲೆಕ್ಟಿವ್ ಧೋರಣೆಯಲ್ಲಿ. ಎ. ಕೆ. ರಾಮಾಜುಂ ಅವರ ಈ ಪ್ರಬಂಧವನ್ನು ಮುಂದಿಟ್ಟುಕೊಂಡು ಮಾರ್ಕ್ಸ್, ಮಾವೋ ಸಿದ್ಧಾಂತಗಳನ್ನು, ಈಗಿನ ತಮ್ಮ ರಣತಾಂತ್ರಿಕ ನಿಲುವುಗಳನ್ನು ಮಾತ್ರ ಪ್ರವರ್ಥಿಸುವುದು ಅನಪೇಕ್ಷಿತ. ಈ ಸೈದ್ಧಾಂತಿಕರು ನಾಸ್ಟಿಕ್ ಗಾಸ್ಪೆಲ್ಗಳ ಬಗ್ಗೆ ಕನಸಿನಲ್ಲೂ ಕನವರಿಸುವುದಿಲ್ಲ. ಡೆಡ್ ಸೀ ಸ್ಕ್ರಾಲ್ಗಳ ಬಗ್ಗೆ ಓದುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಿಲ್ಲ.

ಈಗ ಸಹಿ ಸಂಗ್ರಹ ಚಳವಳಿಗೆ ಧುಮುಕಿದವರ ಪೈಕಿ ಅನೇಕರು ಸಲ್ಮಾನ್ ರಷ್ದಿಯ `ಸಟಾನಿಕ್ ವರ್ಸಸ್' ನಿಷೇಧವನ್ನು ಬೆಂಬಲಿಸಿದವರು. ತಸ್ಲಿಮಾ ನಸ್ರೀನರ ಕೋಲ್ಕತಾ ಜೀವನವನ್ನು ಕಷ್ಟಮಯಗೊಳಿಸಿದವರು. ಅರುಣ್ ಶೌರಿ ಬೈಬಲ್ಲಿನ ಬಗ್ಗೆ ಮಂಡಿಸಿದ್ದ ವಿದ್ವತ್ಪೂರ್ಣ ಅಧ್ಯಯನವನ್ನು ಖಂಡಿಸಿದ ಕೆಲವರು ಈಗ ರಾಮಾನುಜಂ ಹಿಂದೆ ನಿಂತಿದ್ದಾರೆ. ಇದು ಅಧ್ಯಯನಶೀಲತೆಯ ಪರವಾದ ನಿಲುವೊ? ಅಥವಾ ಸೈದ್ಧಾಂತಿಕ ಆಗ್ರಹವೋ?

ಸೈದ್ಧಾಂತಿಕ ದೀಕ್ಷೆಯೇ ಶಿಕ್ಷಣವಲ್ಲ. ಇದು ಎಡ, ಬಲ, ಮಧ್ಯ - ಎಲ್ಲರಿಗೂ ಅನ್ವಯವಾಗುವ ಮಾತು. ವಿಶ್ವವಿದ್ಯಾಲಯಗಳನ್ನು, ಅಕ್ಯಾಡೆಮಿಗಳನ್ನು, ಕಮ್ಯೂನಿಸ್ಟ್ ಅಡ್ಡೆಗಳನ್ನಾಗಿ ಮಾಡಿಕೊಳ್ಳುವ ಕೆಲಸ ಬಹಳ ಹಿಂದೆಯೇ ಶುರುವಾಗಿರುವುದು ಗೊತ್ತೇ ಇದೆ. ತಾಲಿಬಾನ್ ದೇವ್ಬಂದ್ನಲ್ಲಿ ತಯಾರಾದ ಹಾಗೆ, ನೇಪಾಳದ ಮಾವೋ ಉಗ್ರರ ಹಿಂದಿನ ಸೈದ್ಧಾಂತಿಕ ರೂವಾರಿಗಳು ದೆಹಲಿಯ ಜವಹರ್ಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರೊಫೆಸರ್ಗಳು ಎಂಬುದು ಸರ್ವವಿದಿತ. ಕೆಲವು ಮಾವೋ ಮುಖಂಡರು ನೇರವಾಗಿ ಜೆಎನ್ಯು ಕ್ಯಾಂಪಸ್ಸಿನಲ್ಲೇ ತಯಾರಾದ ಉತ್ಪನ್ನಗಳು. ಎಡ ತೀವ್ರವಾದ, ಅಸಹನೆಗಳು ಹೆಚ್ಚಾದ ಪರಿಣಾಮವಾಗಿ ಈಗ ಬಲ ತೀವ್ರವಾದವೂ ಬೆಳೆದಿದೆ. ಸ್ವತಂತ್ರ ಅಧ್ಯಯನ, ಚಿಂತನೆಗಳಿಗೆ ಅವಕಾಶವೇ ಇಲ್ಲವಾಗುತ್ತಿದೆ. `ನಾನು ಹೇಳಿದಷ್ಟನ್ನು ಕಲಿತರೆ ಸಾಕು' ಎಂಬ ಧೋರಣೆ ಎರಡೂ ಕಡೆಗಳಲ್ಲಿ ಇದೆ. ಎರಡೂ ಕಡೆಯವರಿಗೆ ತಮ್ಮ ತಲೆ ಒಪ್ಪಿಸುವ ಯುವಕ, ಯುವತಿಯರು ಬೇಕು. ಈಗ ಬುದ್ಧಿವಂತರೆಲ್ಲ ಹ್ಯೂಮಾನಿಟೀಸ್ನತ್ತ ಬರದೇ ಇರುವುದು ಈ ಸೈದ್ಧಾಂತಿಕರಲ್ಲಿ ಭಾರಿ ನಿರಾಶೆ, ಹತಾಶೆ ಮೂಡಿಸಿದೆ.

`ದಿ ಕುರಾನಿಕ್ ಕಾಂಸೆಪ್ಟ್ ಆಫ್ ವಾರ್' ಎಂಬ ಪುಸ್ತಕವನ್ನು ಓದುವುದು ಪಾಕಿಸ್ತಾನದ ಸೈನಿಕ ಶಾಲೆಗಳಲ್ಲಿ ಕಡ್ಡಾಯವಾಗಿತ್ತು. ಜಿಯಾ ಉಲ್ ಹಕ್ ಬರೆಸಿದ್ದ ಈ ಪುಸ್ತಕದ ಲೇಖಕರು ಬ್ರಿಗೇಡಿಯರ್ ಎಸ್. ಕೆ. ಮಲಿಕ್ (ಅದನ್ನು ನಾನು ಓದಿದ್ದೇನೆ). ಈ ತರಹದ ವಿಚಾರಗಳನ್ನು ಆರಾಧಿಸಿದ್ದರ ಪರಿಣಾಮವಾಗಿಯೇ ಪಾಕ್ ಮಿಲಿಟರಿ ಜಿಹಾದಿ ಅಡ್ಡೆಯಾಯಿತು ಎಂಬುದನ್ನು ನಾವು ಮರೆಯಬಾರದು.

ಉನ್ನತ ಶಿಕ್ಷಣದಲ್ಲಿ ತಮಗೆ ಬೇಕಾದ ಪಠ್ಯಗಳನ್ನಿಟ್ಟು `ಇದನ್ನು ಕಡ್ಡಾಯವಾಗಿ ಓದಬೇಕು' ಎಂಬುದು ಬದಲಾಗಬೇಕು. ಇದರಿಂದ ತಮ್ಮ ಕಡೆಯವರ ಪಠ್ಯವೇ ಇರಲಿ, ಇತರರದು ಬೇಡ ಎಂಬ ರಾಜಕೀಯ ಕಡಮೆಯಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಹಲವು ಬಗೆಯ ಗ್ರಂಥಗಳ ತೌಲನಿಕ ಅಧ್ಯಯನ ಬೆಳೆಯುವಂತೆ ಮಾಡಬೇಕು. ವಿಶ್ವವಿದ್ಯಾಲಯಗಳು ಮೂಲತಃ ಅಧ್ಯಯನ ಕೇಂದ್ರಗಳು. ವೈಚಾರಿಕ ದೀಕ್ಷಾ ಕೇಂದ್ರಗಳಲ್ಲ.

ಮುಂದಿನ ಪ್ರಧಾನಿ ಯಾರು?

ಭ್ರಷ್ಟಾಚಾರ ಕಳಂಕಿತ ಆಡಳಿತದ ಉಸ್ತುವಾರಿ ವಹಿಸಿರುವ, ನಾಯಕತ್ವದ ಗುಣವನ್ನು ಪ್ರದರ್ಶಿಸದ, ಪ್ರಸ್ತುತ ಪ್ರಧಾನಿ ಮನಮೋಹನ್ ಸಿಂಗ್ ದಿನದಿಂದ ದಿನಕ್ಕೆ ಅಪ್ರಸ್ತುತರಾಗುತ್ತಿದ್ದಾರೆ. ಅನೇಕ ವಿದೇಶಿ ಆಡಳಿತಗಳು ಹಾಗೂ ಮಾಧ್ಯಮಗಳು ಈಗಾಗಲೇ ಪ್ರಸ್ತುತ ಆಡಳಿತವನ್ನು ಕಡೆಗಣಿಸಿ, 2014ರ ಲೋಕಸಭಾ ಚುನಾವಣೆಯ ಬಗ್ಗೆ ಹೆಚ್ಚಾಗಿ ಗಮನ ಕೇಂದ್ರೀಕರಿಸತೊಡಗಿವೆ. ಮನಮೋಹನ್ ಸಿಂಗರ ಅಸಾಮರ್ಥ್ಯ ಢಾಳಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರಧಾನಿಯ ಬಗ್ಗೆ ಚರ್ಚೆಗಳು ಭಾರತದಲ್ಲೂ ಆರಂಭವಾಗಿವೆ.

ಈ ದಿಶೆಯಲ್ಲಿ ಮುಂಚೂಣಿಯಲ್ಲಿರುವುದು ಮೂರು ಹೆಸರುಗಳು: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ, ಎಐಸಿಸಿ (ಕಾಂಗ್ರಸ್) ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್.

ಮೊದಲಿಗೆ, ಸೋನಿಯಾ ಗಾಂಧಿ ಪರಿವಾರದ ಏಕಸ್ವಾಮ್ಯ ಹೊಂದಿರುವ ಕಾಂಗ್ರೆಸ್ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರೆ, ನಂತರ ರಾಹುಲ್ ಗಾಂಧಿ ಬಯಸಿದರೆ, ಅವರು ಪ್ರಧಾನಿಯಾಗಬಹುದು. ಆದರೆ ಆ ಸ್ಥಾನಕ್ಕೆ ತಕ್ಕ ಅರ್ಹತೆ ಅವರಲ್ಲಿ ಎಷ್ಟಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಪ್ರಧಾನಿಯಾಗುವ ಅರ್ಹತೆಯುಳ್ಳ ಹಲವಾರು ಮುಖಂಡರು (ಉದಾ: ಪ್ರಣಬ್ ಮುಖರ್ಜಿ) ಕಾಂಗ್ರೆಸ್ಸಿನಲ್ಲಿ ಇದ್ದರೂ ರಾಹುಲ್-ಸೋನಿಯಾ ಇರಾದೆಯೇ ಅಂತಿಮವಾಗುತ್ತದೆ. ಯಾವ ಕಾಂಗ್ರಸ್ಸಿಗರೂ ಅದನ್ನು ಪ್ರಶ್ನಿಸುವ ಸ್ಥಿತಿಯಲ್ಲಿಲ್ಲ.

ಈ ಮಧ್ಯೆ, `ರಾಹುಲ್ ಪ್ರಧಾನಿಯಾಗಲು ಸಿದ್ಧರಾಗುತ್ತಿದ್ದಾರೆ' ಎಂದು ಅವರ ಹೊಗಳುಭಟ್ಟರು ಹೇಳಿಕೆಗಳನ್ನು ನೀಡಿಕೊಂಡು ತಿರುಗಾಡುತ್ತಿದ್ದಾರೆ. ಬೋರ್ಡ್ ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಾಗುವ ಹಾಗೆ ಪ್ರಧಾನಿ ಸ್ಥಾನಕ್ಕೆ `ಟ್ಯೂಷನ್' ಕೊಡಿಸಿ ಸಿದ್ಧಪಡಿಸಬಹುದು ಎಂಬುದೇ ವಿಚಿತ್ರ, ಬಾಲಿಶ ಕಲ್ಪನೆ. ಬೌದ್ಧಿಕ ಸಾಮಥ್ರ್ಯ, ಆಡಳಿತಾತ್ಮಕ ಅನುಭವ, ಸಂವಹನ ಕೌಶಲ್ಯ, ರಾಜನೀತಿ, ರಾಜತಂತ್ರ, ನಾಯಕತ್ವದ ಗುಣಗಳು, ಆಡಳಿತ ಕೌಶಲ್ಯ - ಇವೆಲ್ಲ ಮನೆಪಾಠದ ಮೂಲಕ ಕಲಿಯುವ ವಿಷಯಗಳಲ್ಲ. ಅನುಭವದ ಮೂಸೆಯಲ್ಲಿ ಪಳಗಿದ ಅನೇಕರ ಪೈಕಿ ಯಾರೋ ಒಬ್ಬಿಬ್ಬರು ಯಶಸ್ವಿಯಾಗುತ್ತಾರೆ ಅಷ್ಟೇ. ಹೀಗಿರುವಾಗ ಮಧ್ಯಮಹಂತದಿಂದ ಆರಂಭಿಸಿ ಯೋಗ್ಯತೆಯ ಅನುಸಾರ ಮೇಲೇರುವುದೇ ಸರಿಯಾದ ಕ್ರಮ.
ವಿತ್ತಮಂತ್ರಿಯಾಗಿ ಪಿ. ವಿ. ನರಸಿಂಹರಾವ್ ಹೇಳಿದಷ್ಟು ಮಾಡಿಕೊಂಡಿದ್ದ ಮನಮೋಹನ್ ಸಿಂಗರೇ  ಈಗ ಸೋನಿಯಾ ಹೇಳಿದಷ್ಟು ಮಾಡಿಕೊಂಡಿರುವ ಪ್ರಧಾನಿ ಎನಿಸಿಕೊಂಡಿರುವ ಉದಾಹರಣೆ ಇದೆ. ಹೀಗಿರುವಾಗ ಮನೆಪಾಠದವರಿಂದ ಏನು ಪ್ರಯೋಜನವಾಗುತ್ತದೆ? ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶಗಳು ಎಷ್ಟು ಎಂಬುದೂ ಇಲ್ಲಿ ಗಮನಾರ್ಹ.

ಇನ್ನು ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್. ಇಬ್ಬರೂ `ಯಶಸ್ವಿ' ಮುಖ್ಯಮಂತ್ರಿಗಳು ಎನಿಸಿಕೊಂಡಿದ್ದಾರೆ.  ಪ್ರಧಾನಿ ಸ್ಥಾನಕ್ಕೆ ಹಲವು ವಿಧಗಳಲ್ಲಿ ಅರ್ಹರು ಎನಸಿದ್ದಾರೆ. ಆದರೆ ಅವರು ಆ ಸ್ಥಾನ ಹಿಡಿಯುವ ಸಂಭಾವ್ಯತೆ ಎಷ್ಟಿದೆ ಎಂಬುದು ಗಮನಾರ್ಹ. NDA ಅಧಿಕಾರಕ್ಕೆ ಬಂದರೆ ಬಿಜೆಪಿ ಪ್ರಧಾನಿ ಸ್ಥಾನವನ್ನು ಕಿರಿಯ ಪಕ್ಷವಾದ ಜೆಡಿಯುಗೆ ಬಿಟ್ಟುಕೊಡುವ ಸಂಭವ ಇಲ್ಲ. ಹೀಗಾಗಿ ನಿತೀಶ್ ಗೆ  ಅವಕಾಶಗಳು ಕಡಮೆ. ಅವರು ಕಾಂಗ್ರೆಸ್ ಮೈತ್ರಿಕೂಟಕ್ಕೆ ಹೋದರೂ ಪ್ರಯೋಜನವಿಲ್ಲ. ಅದು ರಾಹುಲಮಯ. ತೃತೀಯ ರಂಗವಂತೂ ಹಲವಾರು ಪ್ರಧಾನಿ ಸ್ಥಾನದ ಆಕಾಂಕ್ಷಿಗಳಿಂದ ತುಂಬಿಹೋಗಿದೆ.  ಮಾಯಾವತಿ, ಮುಲಾಯಂ ಸಿಂಗ್, ಲಾಲೂ ಯಾದವ್, ದೇವೇಗೌಡ, ಎಡ ನಾಯಕರು - ಹೀಗೆ. ಅಲ್ಲದೇ, ಬರೀ ತೃತೀಯ ಶಕ್ತಿಗಳೇ ಸೇರಿ ಅಧಿಕಾರ ನಡೆಸಬೇಕಾದರೆ ಕಾಂಗ್ರೆಸ್ಸಿನ ಬೆಂಬಲ ಖಂಡಿತ ಬೇಕಾಗುತ್ತದೆ. ಅದರ ಸಂಭವನೀಯತೆ ಈಗಲೇ ತಿಳಿಯುವಂತಹುದಲ್ಲ.

ಪ್ರಧಾನಿ ಸ್ಥಾನಕ್ಕೆ ಯಶಸ್ವಿ ಮುಖ್ಯಮಂತ್ರಿಗಳ ಹೆಸರನ್ನು ಬಿಂಬಿಸುವುದು ಸಾಮಾನ್ಯ ಕ್ರಮ. ಹಿಂದೆ ರಾಮಕೃಷ್ಣ ಹೆಗಡೆ, ಚಂದ್ರಬಾಬು ನಾಯ್ಡು ಈ ರೀತಿ ಬಿಂಬಿತರಾಗಿದ್ದರು. ಒಂದು ಹಂತದಲ್ಲಿ ಎನ್. ಟಿ. ರಾಮರಾವ್ ಹಾಗೂ ಜಯಲಲಿತಾರನ್ನೂ ಬಿಂಬಿಸಲಾಗಿತ್ತು. ಆದರೆ ಅವರ್ಯಾರಿಗೂ ಅಗ್ರಪೀಠ ದಕ್ಕಲಿಲ್ಲ.

ಬಿಜೆಪಿ ಹಾಗೂ ಎನ್ಡಿಎ ಒಂದುವೇಳೆ ಚುನಾವಣೆಯಲ್ಲಿ ಗೆದ್ದರೆ, ಬಿಜೆಪಿಯ ಉಳಿದ ಮುಖಂಡರು ಹಾಗೂ ಎನ್ಡಿಎ ಮುಖಂಡರು ಒಪ್ಪಿದರೆ, ನರೇಂದ್ರ ಮೋದಿಗೆ ಅದೃಷ್ಟ ಒಲಿಯುತ್ತದೆ. ಇದೂ ಸುಲಭದ ಮಾತಲ್ಲ. ಕೇಂದ್ರದಲ್ಲಿ ಅಭಿವೃದ್ಧಿ ಮಂತ್ರದ `ಮೋದಿ ಎಫೆಕ್ಟ್' ಆಗಿಬಿಟ್ಟರೆ ತಮಗೆ ಗದ್ದುಗೆ ಬಹಳ ದೂರವಾಗಿಬಿಡುತ್ತದೆ ಎಂಬ ಒಳಭಯ ಎಲ್ಲ ಮುಖಂಡರಲ್ಲೂ ಇದೆ. ಎನ್ಡಿಎ ಒಳಗಿದ್ದುಕೊಂಡೇ ನಿತೀಶ್ ಕುಮಾರ್ ಮತ್ತು ಇತರರು ಮೋದಿಯ ಅವಕಾಶವನ್ನು ತಗ್ಗಿಸಬಹುದು.

ಹೀಗಾಗಿ 2014ರ ಚುನಾವಣೆ ತುಂಬ ಕುತೂಹಲಕಾರಿಯಾಗಿರುತ್ತದೆ ಎಂದಷ್ಟೇ ಈ ಹಂತದಲ್ಲಿ ಹೇಳಬಹುದು.

ಸೋಷಿಯಲ್ ನೆಟ್ವರ್ಕಿಂಗ್ ಯುಗ

ತಂತ್ರಜ್ಞಾನಗಳ ಬಳಕೆ ಹಲವಾರು ತೆರನಾಗಿ ಆಗುತ್ತದೆ. ಬಡತನ ನಿವಾರಣೆಯಲ್ಲಿ, ಉದ್ಯೋಗ ಸೃಷ್ಟಿಯಲ್ಲಿ ಈಗ ವಿಜ್ಞಾನ, ತಂತ್ರಜ್ಞಾನ ಬಳಕೆಯಾಗುತ್ತಿರುವುದು ಸ್ವಾಗತಾರ್ಹವಾದ ಬೆಳವಣಿಗೆ. ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಸಂಶೋಧನೆಗಳು, ಆ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯಾಗುತ್ತಿರುವ ರೀತಿ, ಇವೆಲ್ಲ ಅದ್ಭುತ ಬೆಳವಣಿಗೆಗಳು. ಈಗ ಗಾಂಧೀಜಿ ಬದುಕಿದ್ದರೆ ತಮ್ಮ `ಹಿಂದ್ ಸ್ವರಾಜ್' ಪುಸ್ತಕದ ಅನೇಕ ಅಭಿಪ್ರಾಯಗಳನ್ನು ಖಂಡಿತ ಬದಲಿಸಿಕೊಳ್ಳುತ್ತಿದ್ದರು.

1960ರ ದಶಕದ ನಂತರ ಮಾನವ ಸಂಬಂಧಗಳು, ಪರಸ್ಪರ ಸಂಪರ್ಕಗಳು ಕ್ಷೀಣವಾಗುತ್ತ ಸಾಗಿರುವುದು ವಾಸ್ತವ. ಈಗ ಕಾರ್ಯನಿಮಿತ್ತ ಎಲ್ಲಿಗಾದರೂ ಹೋಗಿ ಬಂಧು-ಮಿತ್ರರ ಮನೆಯಲ್ಲಿ ತಂಗುವುದು; ಅವರು ಇವರನ್ನು ಆಗ್ರಹಪೂರ್ವಕವಾಗಿ ಆಹ್ವಾನಿಸುವುದು; ಪೂರ್ವಸೂಚನೆ ಇಲ್ಲದೇ ಬಂದರೂ ನಗುನಗುತ್ತಾ ಸ್ವಾಗತಿಸುವುದು - ಇವೆಲ್ಲ ಬಹಳ ಕಡಮೆಯಾಗುತ್ತಿರುವುದು ಸರ್ವವಿದಿತ. ಆಧುನಿಕ ವೃತ್ತಿಗಳ ಸ್ವರೂಪ, ಮನುಷ್ಯ ಭಾವನೆಗಳ ವಿಕೃತಿ - ಹೀಗೆ ಹಲವಾರು ರೀತಿಯ ಕಾರಣಗಳನ್ನು ಇದಕ್ಕೆ ಕೊಡಲಾಗುತ್ತದೆ. ಒಟ್ಟಿನಲ್ಲಿ ಇದರಲ್ಲಿ ತಪ್ಪು, ಸರಿಯ ನಿರ್ಣಯ ಕ್ಲಿಷ್ಟವಾದದ್ದು.

ನಮಗೆ ತಿಳಿದೋ ಅಥವಾ ತಿಳಿಯದೆಯೋ ಇಂಟರ್ನೆಟ್, ಇ-ಮೇಲ್, ಸೋಷಿಯಲ್ ನೆಟ್ವರ್ಕಿಂಗ್  ಬಂದ ನಂತರ ಸಾಮಾಜಿಕ ನೆಲೆಯಲ್ಲಿ ಉತ್ತಮ ಬೆಳವಣಿಗೆಗಳಾಗಿವೆ. ಬಂಧು-ಮಿತ್ರರ ನಡುವೆ ನಿರಂತರ `ರಿಯಲ್ ಟೈಮ್' ಸಂಪರ್ಕದ ಸ್ಥಾಪನೆಯಾಗಿದೆ. ದೇಶ-ವಿದೇಶ ಎಂಬ ಭೌತಿಕ-ರಾಜಕೀಯ ಗಡಿಗಳು ಅಳಿಸಿಹೋಗಿವೆ. ಸಾಮಾನ್ಯವಾಗಿ ನೀವು ಭೇಟಿ ಮಾಡುವುದು ಸಾಧ್ಯವೇ ಇಲ್ಲದ ಗಣ್ಯಾತಿಗಣ್ಯರೂ ನಿಮ್ಮ `ಆನ್ಲೈನ್ ಕಾಂಟಾಕ್ಟ್' ಆಗಿರುತ್ತಾರೆ! ದೂರದಲ್ಲಿರುವ ಪರಿಚಿತರು ಪರಸ್ಪರ ಸಂವಹನ ನಡೆಸುವುದು ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಕ್ರಮೇಣ ಈ ಸಾಧ್ಯತೆಯು ಎಲ್ಲರ ಅರಿವಿಗೆ ಬರುತ್ತಿದ್ದಂತೆ ಫೇಸ್ಬುಕ್, ಟ್ವಿಟರ್, ಸ್ಕೈಪ್ ಮುಂತಾದ ಸಾಮಾಜಿಕ ಜಾಲಬಂಧದ ಸೇವೆಗಳು ಜನಪ್ರಿಯತೆಯ ಉತ್ತುಂಗಕ್ಕೆ ಏರಿದವು. ಆಬಾಲವೃದ್ಧರಾಗಿ ಎಲ್ಲರೂ ಅವುಗಳಿಗೆ ಮುಗಿಬಿದ್ದರು. ಅಗ್ಗವಾದ ಸ್ಮಾರ್ಟ್ ಫೋನ್  ಹಾಗೂ ಟ್ಯಾಬ್ಲೆಟ್ಗಳು ಈ ಕ್ರಾಂತಿಗೆ ಬೆಳಕಿನ ವೇಗವನ್ನು ನೀಡಿಬಿಟ್ಟವು. ಈಗ ಸೋಷಿಯಲ್ ಕಾಂಟಾಕ್ಟ್ ತಂತ್ರಜ್ಞಾನಗಳ ಸೈದ್ಧಾಂತಿಕ ವಿವರಣೆಯ ಅಗತ್ಯವೇ ಉಳಿದಿಲ್ಲ. ಪುಸ್ತಕಗಳಲ್ಲಿ ಓದದೇ ಅನುಭವದ ಮೂಲಕವೇ ಅದು ಎಲ್ಲರಿಗೂ ಪ್ರಾಪ್ತವಾಗುತ್ತಿದೆ.

ಈ ಕ್ಷೇತ್ರ ಕಂಡಿರುವ ಜನಪ್ರಿಯತೆಯಿಂದಾಗಿ ಈಗ ಮಾರುಕಟ್ಟೆ ಸಮರ ಬಿರುಸಾಗಿದೆ. ಸೇವೆ ಒದಗಿಸುವ ಕಂಪೆನಿಗಳು, ಇನ್ನೂ ಹೊಸದಾಗಿ ಏನೇನು ಮಾಡಬಹುದು ಎಂಬ ನಿರಂತರ ಪ್ರಯೋಗಗಳಿಗೆ ಕೈಹಾಕುತ್ತಿವೆ. ಹೀಗಾಗಿ ವಲ್ಗ್ಯಾರಿಟಿಯೂ ನುಸುಳಿದೆ.

ಹಿಂದೆ `ಆರ್ಕುಟ್' ಮೂಲಕ ಸೋಷಿಯಲ್ ನೆಟ್ವರ್ಕಿಂಗ್  ಪ್ರಯೋಗಕ್ಕೆ ಕೈಹಾಕಿದ್ದ, ಜಗತ್ತಿನ ಅತಿ ಪ್ರಬಲ ಬ್ರಾಂಡ್ ಎನಿಸಿರುವ `ಗೂಗಲ್' ಇದೀಗ ತನ್ನ ಬಹುಚರ್ಚಿತ `ಗೂಗಲ್ ಪ್ಲಸ್' ಸೇವೆಯನ್ನು ಎಲ್ಲರಿಗೂ ಮುಕ್ತವಾಗಿಸಿದೆ. ಅದು ಹೊಂದಿರುವ ಸಾಧ್ಯಾಸಾಧ್ಯತೆಗಳತ್ತ ನೋಡಿದರೆ, ಫೇಸ್ಬುಕ್ಕಿಗೆ ಅದು ತೀವ್ರ ಪೈಪೋಟಿ ನೀಡಬಹುದು ಎಂಬುದರಲ್ಲಿ ಅನುಮಾನವಿಲ್ಲ. ಇತ್ತ ಪೇಸ್ಬುಕ್ ಸಹ ತನ್ನ ಸ್ವರೂಪ ಬದಲಾವಣೆ ಕುರಿತು ಚಿಂತಿಸುತ್ತಿದೆ.

ಅದೇನೇ ಇರಲಿ, ಇದು ಸೋಷಿಯಲ್ ನೆಟ್ವರ್ಕಿಂಗ್  ಕಾಲಘಟ್ಟ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಬೇಕಿರಲಿ, ಬೇಡವಾಗಿರಲಿ, ಅದರ ಬಗ್ಗೆ ತಿಳಿಯುವುದನ್ನು ಯಾರೂ ನಿರಾಕರಿಸುವ ಹಾಗಿಲ್ಲ. ಹಾಗೆ ಮಾಡುವವರು ನವಜಗತ್ತಿನಲ್ಲಿ ಅಪ್ರಸ್ತುತರಾಗುವ ಅಪಾಯವಿದೆ.

ಬುಧವಾರ, ಸೆಪ್ಟೆಂಬರ್ 21, 2011

ಕಂಬಾರರೊಡನೆ ಮಾತುಕತೆ

ಜಾನಪದವನ್ನು ನವ್ಯದೊಡನೆ ಮೇಳೈಸಿ ವಿಶಿಷ್ಟ ಪಾಕವನ್ನು ತಯಾರಿಸಿರುವ ಡಾ. ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇದರಿಂದ ಕನ್ನಡದ ಹೆಮ್ಮೆ ಮತ್ತೊಮ್ಮೆ ವಿಜೃಂಭಿಸಿದೆ.

ಇದು ಸಂಪೂರ್ಣವಾಗಿ ಅನಿರೀಕ್ಷಿತವಲ್ಲ. ಏಕೆಂದರೆ ಜ್ಞಾನಪೀಠದ ಎತ್ತರದಲ್ಲಿ ಅವರು ಎಂದಿನಿಂದಲೋ ವಿಹರಿಸುತ್ತಿದ್ದವರು. ಕಳೆದ ಎರಡು ವರ್ಷಗಳಿಂದ ಅವರ ಹೆಸರು ಚಲಾವಣೆಯಲ್ಲಿತ್ತು. ಇದೀಗ ಪ್ರಶಸ್ತಿ ಅವರನ್ನು ಅರಸಿ ಬಂದಿದೆ.

ಪ್ರಶಸ್ತಿ ಘೋಷಣೆಯಾದ ಸಂದರ್ಭದಲ್ಲಿ `ಕರ್ಮವೀರ'ದ ಪರವಾಗಿ ಅವರನ್ನು ಅಭಿನಂದಿಸಲು ಅವರ ಮನೆಗೆ ಹೋದೆ. ಬಹಳ ಆತ್ಮೀಯತೆಯಿಂದ ಕಂಬಾರರು ಮಾತನಾಡಿದರು. ಪತ್ರಿಕೆಯೊಡನೆ ತಮಗಿರುವ ಗಾಢ ಸಂಬಂಧವನ್ನು ನೆನೆಯುತ್ತ, ನಾಡು, ನುಡಿ, ಶಿಕ್ಷಣ, ಜಾನಪದ ಎಲ್ಲವನ್ನೂ ಚಚರ್ಿಸಿದರು. ತಮ್ಮ ವೈಯಕ್ತಿಕ ಖುಷಿ, ಚಿಂತನೆಗಳನ್ನು ಹಂಚಿಕೊಂಡರು.

ಒಟ್ಟಿನಲ್ಲಿ ಕನ್ನಡ ಸಾಹಿತ್ಯಕ್ಕಿದು ಹಬ್ಬದ ಸಮಯ. ಡಾ. ಎಸ್. ಎಲ್. ಭೈರಪ್ಪನವರು ಪ್ರತಿಷ್ಠಿತ `ಸರಸ್ವತಿ ಸಮ್ಮಾನ್' ಪ್ರಶಸ್ತಿಯನ್ನು ಪಡೆದ ಬೆನ್ನಲ್ಲೇ ಡಾ. ಚಂದ್ರಶೇಖರ ಕಂಬಾರರು ಪ್ರತಿಷ್ಠಿತ `ಜ್ಞಾನಪೀಠ' ಪ್ರಶಸ್ತಿಗೆ ಆಯ್ಕೆಯಾಗಿರುವುದು ಕನ್ನಡಕ್ಕೆ ವಿಶೇಷ ಮೆರುಗು ತಂದುಕೊಟ್ಟಿದೆ. ಇವೆರಡೂ ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳು. ಎರಡೂ ಖಾಸಗಿ ಟ್ರಸ್ಟಿನ ಪ್ರಶಸ್ತಿಗಳು. ಸರಿಸುಮಾರು ಒಂದೇ ಮೊತ್ತದ ಪುರಸ್ಕಾರ ಧನವನ್ನು ಎರಡೂ ಹೊಂದಿವೆ. ಭೈರಪ್ಪನವರ ಮೂಲಕ ಮೊದಲಬಾರಿಗೆ ಕನ್ನಡಕ್ಕೆ `ಸರಸ್ವತಿ ಸಮ್ಮಾನ್' ದೊರಕಿದರೆ, ಕಂಬಾರರ ಮೂಲಕ ಕನ್ನಡಕ್ಕೆ ಎಂಟನೇ `ಜ್ಞಾನಪೀಠ'ದ ಅಗ್ರಪೀಠ ಸಿಕ್ಕಿದೆ.

ರಾಜಕೀಯ ಲಾಬಿ ನಡೆಸುವ ಜನರ ನಡುವೆ ಯೋಗ್ಯರಿಗೂ ಆಗಾಗ್ಗೆ ಪ್ರಶಸ್ತಿಗಳು ಲಭಿಸುವುದುಂಟು. ಈ ಸಾಲಿಗೆ ಭೈರಪ್ಪ, ಕಂಬಾರರು ಸೇರುತ್ತಾರೆ. ಆದರೂ ಭೈರಪ್ಪನವರಿಗೆ ಜ್ಞಾನಪೀಠ ಏಕೆ ಇನ್ನೂ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಈಗ ಮತ್ತೊಮ್ಮೆ ಸಾಹಿತ್ಯ ವಲಯದಲ್ಲಿ ಭುಗಿಲೆದ್ದಿದೆ. ಪ್ರಶಸ್ತಿಗಳಿಗೂ ವಿವಾದಗಳಿಗೂ ಹಳೆಯ ನಂಟು. ಜ್ಞಾನಪೀಠ ಪಡೆದವರ ಪಟ್ಟಿಯ ಜೊತಗೆ ಸರಸ್ವತಿ ಸಮ್ಮಾನ್ ಪಡೆದವರ ಇನ್ನೊಂದು ಪಟ್ಟಿಯನ್ನು ಇಟ್ಟುಕೊಂಡರೆ ಇಂತಹ ವಿವಾದಗಳು ಬಹುಶಃ ತಣ್ಣಗಾಗಬಹುದು.

ಒಟ್ಟಿನಲ್ಲಿ ಪ್ರಶಸ್ತಿಗಳನ್ನು ಪಡೆಯಲು ಅದೃಷ್ಟವೂ ಬೇಕು. ಮಹಾತ್ಮ ಗಾಂಧಿಯವರಿಗೇ ನೊಬೆಲ್ ಶಾಂತಿ ಪುರಸ್ಕಾರ ಸಿಗಲಿಲ್ಲ ಎಂಬುದು ಗಮನಾರ್ಹ. ಡಿ. ವಿ. ಗುಂಡಪ್ಪ, ಗೋಪಾಲಕೃಷ್ಣ ಅಡಿಗ - ಮುಂತಾದ ಅರ್ಹ ಹಿರಿಯರಿಗೆ ಜ್ಞಾನಪೀಠದ ಅದೃಷ್ಟ ಇಲ್ಲದೇ ಹೋಗಿದ್ದೂ ಗಮನಾರ್ಹ. ಯಾರ್ಯಾರಿಗೋ `ಭಾರತರತ್ನ' ನೀಡಿದ ನಂತರ ಸದರ್ಾರ್ ಪಟೇಲರ ಹೆಸರನ್ನು ಘೋಷಿಸಲಾಯಿತು.

ಕನ್ನಡದಲ್ಲಿ ಇನ್ನೂ ಹಲವಾರು ಮಂದಿಗೆ ಜ್ಞಾನಪೀಠ ಸಿಗಬೇಕಿದೆ ಎಂಬುದು ನಿಜ. ಹಾಗೆಯೇ ಇನ್ನೂ ಅನೇಕ ಕನ್ನಡ ಸಾಹಿತಿಗಳಿಗೆ ಸರಸ್ವತಿ ಸಮ್ಮಾನ್ ಸಹ ಸಿಗಲಿ ಎಂದು ಹಾರೈಸೋಣ.
 

ಇದಕ್ಕೆಲ್ಲಿದೆ ಪರಿಹಾರ?

ರಾಷ್ಟ್ರೀಯ ಸುರಕ್ಷೆಯ ವಿಷಯಕ್ಕೆ ಬಂದಾಗ ಶಿವರಾಜ್ ಪಾಟೀಲ್ ಅವರಿಗಿಂತಲೂ ತಾನು ಭಿನ್ನ ಎಂದು ಪಿ. ಚಿದಂಬರಂ ಯಾವ ರೀತಿಯಲ್ಲೂ ಸಾಬೀತು ಮಾಡಿಲ್ಲ. 26/11 ಸಮಯದಲ್ಲಿ ಪಾಟೀಲ್ ಬಟ್ಟೆ ಬದಲಿಸುವುದರಲ್ಲಿ, ಮುಖಕ್ಕೆ ಪೌಡರ್ ಹಾಕಿಕೊಳ್ಳುವುದರಲ್ಲಿ ಸಮಯ ಕಳೆಯುತ್ತಿದ್ದರೆ, ಇತರ ದಾಳಿಗಳ ಸಮಯದಲ್ಲಿ ಚಿದಂಬರಂ ತಮ್ಮ ಹಳೆಯ ವಿಚಿತ್ರ ಹೇಳಿಕೆಗಳನ್ನೇ ಬದಲಿಸಿ ನೀಡುತ್ತ ಕಾಲ ಕಳೆಯುತ್ತಿದ್ದಾರೆ.

ದೆಹಲಿ ಹೈಕೋಟರ್ಿನಲ್ಲಿ, ಒಂದೇ ಸ್ಥಳದಲ್ಲಿ, ಕೆಲವೇ ತಿಂಗಳುಗಳ ಅಂತರದಲ್ಲಿ, ಎರಡು ಬಾರಿ ಸ್ಫೋಟವಾಗಿದೆ ಎಂದರೆ ಏನರ್ಥ? ಇದಕ್ಕೆ ಚಿದು ನೀಡಿರುವ ಸ್ಪಷ್ಟೀಕರಣ: `ಭಯೋತ್ಪಾದಕರು ರಹಸ್ಯವಾಗಿ ಕಾಯರ್ಾಚರಣೆ ಮಾಡುತ್ತಾರೆ' ಎಂದು! ಇದು ಯಾರಿಗೂ ಗೊತ್ತಿಲ್ಲದ ಮಹಾ ರಹಸ್ಯ! ಇದನ್ನು ಪಲುಕಲು ಒಬ್ಬ ಗೃಹಮಂತ್ರಿ ನಮಗೆ ಬೇಕಾ?

9/11 ನಂತರ ಅಮೆರಿಕದ ಆಂತರಿಕ ಸುರಕ್ಷೆಯನ್ನು ಹೇಗೆ ಭದ್ರಪಡಿಸಲಾಗಿದೆ ಎಂಬುದು ಗಮನಾರ್ಹ. ಅಮೆರಿಕದ ಎಫ್ಬಿಐ (ಫೆಡೆರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ರಾಷ್ಟ್ರೀಯ ಕಾನೂನು ಜಾರಿ ಹಾಗೂ ತನಿಖಾ ಸಂಸ್ಥೆ. 9/11 ಜಿಹಾದಿ ಭಯೋತ್ಪಾದಕ ದಾಳಿಯ ನಂತರ ಅದರ ಪಾತ್ರ ಸಂಪೂರ್ಣವಾಗಿ ಬದಲಾಯಿತು. ಅಪರಾಧಗಳ ತನಿಖೆ ನಡೆಸುವ `ಪ್ರತಿಕ್ರಿಯಾತ್ಮಕ' ಸ್ವರೂಪದಿಂದ ಅಪರಾಧಗಳನ್ನು ತಡೆಯುವ `ಸಕ್ರಿಯಾತ್ಮಕ' ಸ್ವರೂಪವನ್ನು ಅದಕ್ಕೆ ನೀಡಲಾಯಿತು. ಅದಕ್ಕಾಗಿ ಎಫ್ಬಿಐ ಅನೇಕ ಆಂತರಿಕ ಸುಧಾರಣೆಗಳಿಗೆ ಒಳಪಟ್ಟಿತು. ಗುಪ್ತಚಾರ ಸಂಸ್ಥೆಗಳೊಡನೆ ಒಟ್ಟಿಗೆ ಕೆಲಸ ಮಾಡುವ ಹಾಗೆ ಅದನ್ನು ಸಂಯೋಜಿಸಲಾಯಿತು.

ಭಾರತದ ಗುಪ್ತಚಾರ ಏಜೆನ್ಸಿಗಳ ನಡುವೆ ಚೂರೂ ಹೊಂದಾಣಿಕೆಯಿಲ್ಲ. ತನಿಖಾ ಸಂಸ್ಥೆಗಳಿಗೂ ಗುಪ್ತಚಾರ ಸಂಸ್ಥೆಗಳಿಗೂ ಸರಿಯಾದ ಬಾಂಧವ್ಯವಿಲ್ಲ. ಎನ್ಎಸ್ಎ (ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್) ಸ್ಥಾನವೂ ರಾಜಕೀಯ ನೇಮಕಾತಿಗೆ ಒಳಪಟ್ಟಿದೆ. ಎನ್ಐಎ (ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ) ಸರಿಯಾದ ಸ್ವಾಯತ್ತ ಸ್ವರೂಪವನ್ನು ಇನ್ನೂ ಪಡೆದುಕೊಂಡಿಲ್ಲ. ಅದೂ ಸಿಬಿಐ ತರಹ ರಾಜಕೀಯದ ನೆರಳಿನಲ್ಲೇ ಇದೆ. ಭಯೋತ್ಪಾದನಾ ನಿಗ್ರಹಕ್ಕಾಗಿ ಪ್ರತಿದೇಶದಲ್ಲೂ ವಿಶೇಷ ಕಾನೂನು ಇರಬೇಕು ಎಂಬುದು ಅಂತಾರಾಷ್ಟ್ರೀಯ ಸರ್ವಸಮ್ಮತಿ. ವಿಸ್ವಸಂಸ್ಥೆಯ ಭದ್ರತಾ ಮಂಡಳಿ ಈ ಕುರಿತು 9/11 ನಂತರ ನಿರ್ಣಯ ಅಂಗೀಕರಿಸಿತ್ತು (1373). ಭಾರತವೂ ಅದಕ್ಕೆ ಬದ್ಧವಾಗಿದೆ. ಆದರೂ ನಮ್ಮಲ್ಲಿ ಭಯೋತ್ಪಾದನಾ ನಿಗ್ರಹ ವಿಶೇಷ ಕಾನೂನು ಇಲ್ಲ. ಎನ್ಡಿಎ ಕಾಲದ ಪೋಟಾ ಕಾಯ್ದೆಯನ್ನು ರದ್ದುಮಾಡಲಾಗಿದೆ.

`ಭಯೋತ್ಪ್ಪಾದನಾ ಕಾಯ್ದೆ ಇದ್ದಮಾತ್ರಕ್ಕೆ ಭಯೋತ್ಪಾದಕ ಕೃತ್ಯಗಳನ್ನು ತಡೆಯಲು ಸಾಧ್ಯವೆ?', `ಜನಲೋಕಪಾಲ್ ಕಾಯ್ದೆ ಬಂದುಬಿಟ್ಟರೆ ಭ್ರಷ್ಟಾಚಾರ ಹೋಗಿಬಿಡುತ್ತಾ?' - ಮುಂತಾದ ಅಸಂಬದ್ಧ ವಾದಸರಣಿ ನಮ್ಮ ನಾಯಕಮಣಿಗಳದು. ಈ ದೃಷ್ಟಿಯಿಂದ ನೋಡಿದರೆ ಯಾವ ಕಾಯ್ದೆಯೂ ಇರಬಾರದು. ಐಪಿಸಿ ಅಪರಾಧಗಳನ್ನು ತಡೆದುಬಿಟ್ಟಿದೆಯೆ?

ಕಾಯ್ದೆಗಳಿಂದ ಅಪರಾಧಗಳ ತಡೆ ಆಗುತ್ತದೋ ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ ಅಪರಾಧಿಗಳ ಶಿಕ್ಷೆಗೆ ಅವು ಅತ್ಯಾವಶ್ಯಕ. ಸೂಕ್ತ ಭಯೋತ್ಪಾದನಾ ನಿಗ್ರಹ ಕಾಯ್ದೆಗಳಿಲ್ಲದಿರುವರಿಂದ ಶಿಕ್ಷಾ ಪ್ರಮಾಣ (ಕನ್ವಿಕ್ಷನ್ ರೇಟ್) ಕಡಮೆಯಾಗಿದೆ. ಹೇಗೋ ಐಪಿಸಿ ಮೂಲಕವೇ ಉಗ್ರರ ಅಪರಾಧ ಸಾಬೀತಾಗಿ ಅವರಿಗೆ ಶಿಕ್ಷೆಯಾದರೂ ರಾಜಕೀಯ ಮುಖಂಡರೇ ಉಗ್ರರ ಪರವಾಗಿ ನಿಲ್ಲುವುದನ್ನು ಕಾಣುತ್ತೇವೆ. ಇದು ನಮ್ಮ ದೇಶದ ಪರಿಸ್ಥಿತಿ. ಅಮೆರಿಕದಲ್ಲಿ ಭಯೋತ್ಪಾದಕರ ಪರವಾಗಿ ಮಾತನಾಡಿ ಯಾವ ರಾಜಕಾರಣಿಯೂ ಉಳಿದುಕೊಳ್ಳಲಾರ. ಇಲ್ಲಿ ಭಯೋತ್ಪಾದಕರನ್ನೇ ಹೀರೋಗಳ ಹಾಗೆ ಬಿಂಬಿಸುವ ಮುಖಂಡರು ತುಂಬಿ ತುಳುಕುತ್ತಿದ್ದಾರೆ. ಜನಲೋಕಪಾಲ್ ಮಸೂದೆಯನ್ನು ವಿಶ್ಲೇಷಿಸುವ ಸ್ಥಾಯಿ ಸಮಿತಿಯಲ್ಲೂ ಇಂತಿಂತಹ ಜಾತಿಯವರು ಇರಲೇಬೇಕು ಎಂದು ಒತ್ತಾಯ ಹಾಕುವ ಮಹಾತ್ಮರಿದ್ದಾರೆ!

ಜಾತಿ, ಲಿಂಗ, ಭಾಷೆ, ಸಮುದಾಯ. ಕೋಮು - ಇವುಗಳನ್ನು ಆಧರಿಸಿದ ಹೀನ ರಾಜಕೀಯ ಎಲ್ಲೆಲ್ಲೂ ವಿಜೃಂಭಿಸುತ್ತಿದೆ. ಭ್ರಷ್ಟಾಚಾರ, ನಾಚಿಕೆಬಿಟ್ಟು ಹಣಕ್ಕಾಗಿ ಜೊಲ್ಲು ಸುರಿಸುವ ಹಾಗೂ ರಕ್ತ ಚೆಲ್ಲಾಡುವ ಪ್ರವೃತ್ತಿ - ಇವೆಲ್ಲ ಎದ್ದುಕಾಣುತ್ತಿವೆ. ಹೀನ ಮನಸ್ಸಿನ ಜನರು ಪ್ರಮುಖ ಸ್ಥಾನಗಳಲ್ಲಿ ಕಂಡುಬರುತ್ತಿದ್ದಾರೆ. ಜೈಲಿನಲ್ಲಿ ಶಾಶ್ವತವಾಗಿ ಇರಬೇಕಾದವರು ದೇಶವನ್ನು ಮುನ್ನಡೆಸಲು (!?) ಬಯಸುತ್ತಾರೆ.

ಇಂತಹವರೆಲ್ಲ ಇರುವಾಗ ದೇಶದ ನಾಶಕ್ಕೆ ಬಾಹ್ಯ ಶತ್ರುಗಳೇಕೆ ಬೇಕು?

ಇವರೇ ಸಾಕು.
 

ನ್ಯಾಯಪ್ರಕ್ರಿಯೆಗೆ ಅಡ್ಡಗಾಲು

ಈ ದೇಶದಲ್ಲಿ ಭಾರಿ ಕೊಲೆಗಡುಕರಿಗೆ, ಭಯೋತ್ಪಾದಕರಿಗೆ ಅಪರಿಮಿತ ಅನುಕಂಪ ತೋರಿಸುವ ಮುಖಂಡರು ಇರುವುದು ನಿಜಕ್ಕೂ ಆಶ್ಚರ್ಯಕಾರಿ. ಕಾನೂನು ವ್ಯವಸ್ಥೆ. ಕೋಟರ್ು, ವಿಚಾರಣೆ, ಶಿಕ್ಷೆ ಇವೆಲ್ಲ `ಸಾಮಾನ್ಯ' ಜನರಿಗೆ ಮಾತ್ರ ಮೀಸಲೇನೋ ಎನಿಸುತ್ತದೆ.

ಘೋರ ಅಪರಾಧ ಮಾಡಿ ಬಂದಿತರಾದ ಉಗ್ರರನ್ನು ಮುಗ್ದರೆಂದು ಬಿಂಬಿಸುವ ಪ್ರಯತ್ನಗಳು ಭಾರತದಲ್ಲಿ ರಾಜಾರೋಷವಾಗಿಯೇ ನಡೆಯುತ್ತಿರುವುದು ನಾಚಿಕೆಗೇಡಿನ ವಿಷಯ. ಕೆಲವು ರಾಜಕಾರಣಿಗಳು, ಮಾಧ್ಯಮದ ಒಂದು ವರ್ಗದವರು ತಮ್ಮದೇ ಆದ `ಗುಡ್ ಟೆರರಿಸ್ಟ್' ಪಟ್ಟಿಯನ್ನು ಹೊಂದಿರುವ ಹಾಗೆ ಕಾಣುತ್ತದೆ.

ಐದು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ದಿ. ರಾಜೀವ್ ಗಾಂಧಿ ಹತ್ಯೆಯ ವಿಷಯವನ್ನು ರಾಜಕೀಯ ರಾಢಿ ಆವರಿಸಿದೆ. ಆರೋಪಿಗಳ ಅಪರಾಧ ಸಾಬೀತಾಗಿ ಸುಪ್ರೀಮ್ ಕೋಟರ್್ ಗಲ್ಲು ಶಿಕ್ಷೆ ವಿಧಿಸಿದ್ದರೂ ಉಗ್ರರನ್ನು ಶಿಕ್ಷಿಸಲು ನಮ್ಮ ರಾಜಕೀಯ ಮುಖಂಡರು ತಯಾರಿಲ್ಲ. ಮೊದಲಿಗೆ, ನಳಿನಿಗೆ ಕ್ಷಮಾದಾನ ಕೊಡಿಸಲು ಸ್ವಯಂ ಸೋನಿಯಾ ಗಾಂಧಿಯವರೇ ಬಹಳ ಶ್ರಮಪಟ್ಟು ಯಶಸ್ವಿಯಾದರು. `ನಳಿನಿಗೆ ಮಗುವಿಗೆ' ಎಂಬುದು ಕ್ಷಮಾದಾನಕ್ಕೆ ಅವರು ಕೊಟ್ಟ ಕಾರಣ! ಮುರುಗನ್ ಮತ್ತಿತರ ಆರೋಪಿಗಳಿಗೂ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಗಳನ್ನು ಅವರು ಕೋರಿದ್ದರು.

ಈಚೆಗೆ ಅವರುಗಳಿಗೆ ಕ್ಷಮಾದಾನವನ್ನು ನಿರಾಕರಿಸಲಾಯಿತು. ನಂತರ ಗಲ್ಲು ಶಿಕ್ಷೆ ಜಾರಿಮಾಡುವ ದಿನಾಂಕವೂ ನಿಗದಿಯಾಯಿತು. ಇದ್ದಕ್ಕಿದ್ದ ಹಾಗೆ ಮರುಗನ್ ಪರ ಅಲೆಯೆದ್ದಿತು! ಮದ್ರಾಸ್ ಹೈಕೋಟರ್ು ಗಲ್ಲುಶಿಕ್ಷೆ ಜಾರಿಗೆ 8 ವಾರಗಳ ತಾತ್ಕಾಲಿಕ ತಡೆಯಾಜ್ಞೆ ನೀಡಿತು! ಮುರುಗನ್ ಮತ್ತಿತರ ಪುರುಷ ಅಪರಾಧಿಗಳ ಗಲ್ಲು ರದ್ಧತಿಯನ್ನು ಕೋರಿ ತಮಿಳುನಾಡು ವಿಧಾನಸಭೆಯಲ್ಲಿ ಅವಿರೋಧ ನಿರ್ಣಯವನ್ನು ಅಂಗೀಕರಿಸಲಾಯಿತು!

ಈಗ ಅಫ್ಜಲ್ ಗುರು ಪರವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಧಾನಸಭೆಯಲ್ಲಿ ನಿರ್ಣಯವನ್ನು ಅನುಮೋದಿಸುವ ಪ್ರಯತ್ನಗಳು ನಡೆಯುತ್ತಿವೆ! ತಮ್ಮ ತಮ್ಮ ರಾಜ್ಯದ ಮಹಾ ಪಾತಕಿಗಳ ಪರವಾಗಿ ಆಯಾ ರಾಜ್ಯದ ರಾಜಕಾರಣಿಗಳು ವಕಾಲತ್ತು ಹಾಕುತ್ತಿದ್ದಾರೆ! ಇಷ್ಟಕ್ಕೂ ರಾಜೀವ್ ಗಾಂಧಿ ಹತ್ಯೆಗೂ ತಮಿಳುನಾಡು ವಿಧಾನಸಭೆಗೂ ಯಾವ ಕಾನೂನಾತ್ಮಕ ಸಂಬಂಧವಿದೆ? ದೇಶದ ಸಾಂವಿಧಾನಿಕ ನ್ಯಾಯಪ್ರಕ್ರಿಯೆಯಲ್ಲಿ ರಾಜಕೀಯ ಮುಖಂಡರು ಅನಾವಶ್ಯಕವಾಗಿ ಮೂಗು ತೂರಿಸುವುದು ಏಕೆ? ಇದನ್ನೆಲ್ಲ ದೇಶದ ಯಾವ ಪ್ರಭಾವಿ ಧ್ವನಿಯೂ ಪ್ರಶ್ನಿಸುತ್ತಿಲ್ಲ.

ರಾಜೀವ್ ಗಾಂಧಿ ದೇಶದ ಪ್ರಧಾನಿಯಾಗಿದ್ದವರು. ಅವರು ದೇಶಕ್ಕೇ ಸಂಬಂಧಿಸಿದ ವ್ಯಕ್ತಿ. ಕೇವಲ ಒಂದು ಕುಟುಂಬದ ವ್ಯಕ್ತಿ ಮಾತ್ರವೇ ಅಲ್ಲ ಎನ್ನುವುದನ್ನು ಮರೆಯಬಾರದು. ರಾಜೀವ್ ಜೊತೆಗೆ 18 ಮಂದಿ ಸಾಮಾನ್ಯರು ಹತ್ಯೆಯಾದರು. ಅವರ ಕುಟುಂಬದವರಾರೂ ಉಗ್ರರ ಪರವಾಗಿ ನಿಂತಿಲ್ಲ ಎನ್ನುವುದು ಗಮನಾರ್ಹ.

ಅಫ್ಜಲ್ ಗುರು, ಎಲ್ಟಿಟಿಇ ಉಗ್ರರು, ಅಜ್ಮಲ್ ಕಸಬ್, ನಕ್ಸಲೀಯರು - ಇವರೆಲ್ಲರಿಗೂ ಸಹಾನುಭೂತಿ ತೋರಿಸುವ ಪ್ರಭಾವಿ ಜನರು ನಮ್ಮ ದೇಶದಲ್ಲಿ ಇದ್ದಾರೆ. ಆದರೆ ಸಣ್ಣಪುಟ್ಟ ಅಪರಾಧಗಳ ಆರೋಪ ಹೊತ್ತು ಹತ್ತಾರು ವರ್ಷಗಳಿಂದ ವಿಚಾರಣಾಧೀನ ಕೈದಿಗಳಾಗಿ ಜೈಲುಗಳಲ್ಲಿ ಕೊಳೆಯುತ್ತಿರುವ ಸಾಮಾನ್ಯರನ್ನು ಕೇಳುವವರೇ ಇಲ್ಲ. ಅವರ್ಯಾರಿಗೂ ಮಗು, ಮಕ್ಕಳು, ಕುಟುಂಬಗಳು ಇಲ್ಲವೆ? ಅವರ ಪರವಾಗಿ ಈ ರಾಜಕಾರಣಿಗಳು ಏಕೆ ಮಾತನಾಡುವುದಿಲ್ಲ?

ರಾಜಕಾರಣಿಗಳ ವಕಾಲತ್ತನ್ನು ಮತ್ತು ಅಪರಾಧಿಗಳ-ಬಲಿಪಶುಗಳ ಕುಟುಂಬದವರು ಹೇಳಿದ್ದನ್ನು ಕೇಳಿಕೊಂಡು ನ್ಯಾಯದಾನ ಮಾಡುವ ಹಾಗಿದ್ದರೆ ದೇಶದಲ್ಲಿ ಸಂವಿಧಾನ ವ್ಯವಸ್ಥೆ, ಕೋಟರ್ು, ಕಾನೂನು ಕಟ್ಟಳೆಗಳಾದರೂ ಏಕಿರಬೇಕು?
 

ಜನತೆ - ಜನಪ್ರತಿನಿಧಿ

ಅಣ್ಣಾ ಹಜಾರೆ ಆಂದೋಲನದ ಕಾವು ಹೆಚ್ಚಾದ ಸಮಯದಲ್ಲಿ ಜನರ ಹಾಗೂ `ಜನಪ್ರತಿನಿಧಿಗಳ' ನಡುವಿನ ಕಂದಕ ಸ್ಪಷ್ಟವಾಗಿಯೇ ಕಂಡಿತು. ಅದನ್ನು ತಕ್ಷಣ ಸರಿಪಡಿಸದಿದ್ದರೆ ನಮ್ಮ ಪ್ರಜಾತಂತ್ರದ ಬುನಾದಿಯಲ್ಲೇ ಬಿರುಕು ಮೂಡುತ್ತದೆ.

ಆಂದೋಲನದ ಉದ್ದಕ್ಕೂ ಘರ್ಷಣೆಗೆ, ಮಥನಕ್ಕೆ ಕಾರಣವಾದ ಪದಗುಚ್ಛ `ಸಂಸತ್ತಿನ ಪರಮಾಧಿಕಾರ'. ಕಾನೂನುಗಳನ್ನು ರೂಪಿಸುವ ಅಧಿಕಾರ ಶಾಸನಸಭೆಗಳದು ಮಾತ್ರ ಎಂಬುದು ಇದರ ಅರ್ಥ. ಅದು ನಿಜ. ಆದರೆ ಈ ಸಭೆಗಳು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬಾರದು ಎಂದು ಸಂವಿಧಾನದಲ್ಲಿ ಎಲ್ಲಿ ಹೇಳಿದೆ?

ವಾಸ್ತವವಾಗಿ ಜನರೇ (ಮತದಾರರು) ಸಂಸತ್ತಿನ ಸೃಷ್ಟಿಕರ್ತರು. ಕೋಟ್ಯಂತರ ಜನರು ಒಟ್ಟಾಗಿ ಕೂತು ಶಾಸನ ರೂಪಿಸುವುದು ಸಾಧ್ಯವಿಲ್ಲದ್ದರಿಂದ ಜನಪ್ರತಿನಿಧಿಗಳನ್ನು ಆರಿಸುವ ಪರಿಪಾಠ ಪ್ರಜಾತಂತ್ರದಲ್ಲಿ ಬಂದಿದೆ. ಹಾಗೆಂದ ಮಾತ್ರಕ್ಕೆ `ಜನರು ಇಲ್ಲಿ ಅಪ್ರಸ್ತುತ' ಎಂದು ಭಾವಿಸಬಾರದು. ಯಾವುದೇ ಜನಪ್ರತಿನಿಧಿ ತಾನೇ ಜನರಿಗಿಂತ ಹೆಚ್ಚು ಎಂದು ಭಾವಿಸುವುದು ಆದರ್ಶ ವ್ಯವಸ್ಥೆಯಲ್ಲ.

ನಮ್ಮ ಪ್ರಸಕ್ತ ವ್ಯವಸ್ಥೆ ಹೇಗಿದೆ? ಆಳುವ ಪಕ್ಷದ ನಾಯಕರು ಮನಸ್ಸು ಮಾಡಿದರೆ ಯಾವುದೇ ಶಾಸನಸಭೆಯ ಸದಸ್ಯರಲ್ಲದವರನ್ನು ಕರೆತಂದು ಆರು ತಿಂಗಳ ಕಾಲ ಮಂತ್ರಿಯಾಗಿಸಬಹುದು. ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಸ್ಥಾನಗಳನ್ನೂ ನೀಡಬಹುದು.  ಅವರು ತಮ್ಮ ಈ ಅಧಿನಾಯಕರು ಹೇಳಿದಂತೆ ಕೇಳಿದರೆ ಸಾಕು, ಅದೇ ಅವರ ಪರಮ `ಅರ್ಹತೆ'! ಈ ಕ್ರಮ ಜನರ ಅಭಿಪ್ರಾಯಕ್ಕೆ ಮಾನ್ಯತೆ ಕೊಡುತ್ತದೆಯೆ? ಜನರ ಹಕ್ಕಿಗೆ ಮನ್ನಣೆ ನೀಡುತ್ತದೆಯೆ? ಜನರ ಹಂಗೇ ಇಲ್ಲದೇ ಅಧಿಕಾರ ಹಿಡಿಯಬಹುದಾದ ಈ ಕ್ರಮ ಪ್ರಜಾತಂತ್ರದ ಮೂಲತತ್ತ್ವಗಳಿಗೆ ಬದ್ಧವಾಗಿದೆಯೆ? ಇದರಿಂದ ಸಂಸತ್ತಿನ/ವಿಧಾನಸಭೆಯ ಪಾರಮ್ಯಕ್ಕೆ ಯಾವ ಬೆಲೆ ಸಿಕ್ಕಂತಾಯಿತು?

ವಾಸ್ತವವಾಗಿ, `ಸಂಸತ್ತಿನ ಪಾರಮ್ಯ' ಎಂಬುದು ಸಂಪೂರ್ಣ ಪರಿಕಲ್ಪನೆಯಲ್ಲ. ಯಾವುದೇ ಸಾರ್ವಭೌಮ ದೇಶದ ಸಂಸತ್ತೇ ಆದರೂ ಅಂತಾರಾಷ್ಟ್ರೀಯ (ದ್ವಿಪಕ್ಷೀಯ, ಬಹುಪಕ್ಷೀಯ) ಒಪ್ಪಂದಗಳಿಗೆ ಬದ್ಧವಾಗಿರಲೇಬೇಕಾಗುತ್ತದೆ. ವಿಶ್ವಸಂಸ್ಥೆಯ ನಿರ್ಣಯಗಳನ್ನು ಅನುಮೋದಿಸಲೇಬೇಕಾಗುತ್ತದೆ. ಅದಕ್ಕೆ ತಕ್ಕ ಕಾನುನುಗಳನ್ನು ರೂಪಿಸಬೇಕಾಗುತ್ತದೆ. ಯೂನಿವರ್ಸಲ್ ಡಿಕ್ಲರೇಷನ್ ಆಫ್ ಹ್ಯೂಮನ್ ರೈಟ್ಸ್, ಸಿಟಿಬಿಟಿ, ಎನ್ಪಿಟಿ, ಕ್ಯೋಟೋ ಪ್ರೋಟೋಕಾಲ್, ಗ್ಯಾಟ್, ಸೆಕ್ಯೂರಿಟಿ ಕೌಂಸಿಲ್ ರೆಸಲ್ಯೂಷನ್ಸ್ - ಇವೆಲ್ಲ ಜಾಗತಿಕ ಮಟ್ಟದಲ್ಲಿ ಎಲ್ಲ ಸದಸ್ಯರಾಷ್ಟ್ರಗಳಿಗೂ, ಅಂಕಿತ ಹಾಕಿದ ದೇಶಗಳಿಗೂ ಅನ್ವಯವಾಗುತ್ತವೆ.
(ವಿಶ್ವಸಂಸ್ಥೆಯ ಸುರಕ್ಷಾ ಮಂಡಳಿಯ ನಿರ್ಣಯ 1373 ಅನ್ವಯ ವಿಶೇಷ ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ನು ರೂಪಿಸಬೇಕು. ಈ ಅಂತಾರಾಷ್ಟ್ರೀಯ ನಿರ್ಣಯಕ್ಕೆ ಭಾರತ ಬದ್ಧವಾಗಿದೆ. ಆದರೂ ಅದನ್ನು ಸರಿಯಾಗಿ ಪಾಲಿಸಿಲ್ಲ).

ಹಾಗೆ ನೋಡಿದರೆ ಸಂಸತ್ತಿನ ಪಾರಮ್ಯಕ್ಕೆ ಧಕ್ಕೆ ತಂದಿರುವುದು ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ. ನಮ್ಮ ಸಂವಿಧಾನದಲ್ಲಿ ಈ ರೀತಿಯ ಮಂಡಳಿಗಳ ಪರಿಕಲ್ಪನೆಯೇ ಇಲ್ಲ. `ಇಂತಿಂತಹ ಕಾನೂನುಗಳನ್ನು ಮಾಡಿ' ಎಂದು ಸಂಸತ್ತಿಗೆ ಹೇಳುತ್ತ ಹೋಗುವ ಒಂದು ಶಾಶ್ವತ ಮಂಡಳಿ ಏಕೆ ಬೇಕು? ಹೀಗಿರುವಾಗ `ನಮಗೆ ಪ್ರಬಲವಾದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬೇಕು' ಎಂದು ಕೋಟ್ಯಂತರ ಜನರು ಬಯಸಿದ್ದು ಸಂಸತ್ತಿನ ಪಾರಮ್ಯಕ್ಕೆ ಚ್ಯುತಿ ತರುತ್ತದೆಯೆ?

ತಮ್ಮ ಸ್ವಹಿತಾಕ್ತಿಗೆ ಧಕ್ಕೆ ಬರಬಹುದು ಎಂಬ ಭಾವನೆಯಿಂದ ಕೆಲವು ಸಂಸದರು ಕೆಲವೊಂದು ಪ್ರಬಲ ಕಾನೂನುಗಳನ್ನು ವಿರೋಧಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಹ ವಿಶೇಷ ಸಮಯದಲ್ಲಿ ಜನರು ಒಟ್ಟಾಗಿ ತಮ್ಮ ಅಭಿಪ್ರಾಯವನ್ನು ಪ್ರಕಟ ಮಾಡಿದ್ದು ತಪ್ಪಲ್ಲ. ಉಳಿದಂತೆ, ಸಂಸತ್ತಿನ ಪಾರಮ್ಯವನ್ನು ಜನರೂ ಒಪ್ಪಬೇಕು. ತಮಗೆ ಬೇಕಾದ ಹಾಗೆ ಕಾನೂನುಗಳನ್ನು ಬರೆಸಿಕೊಳ್ಳಲು ಕೆಲವು ಎನ್ಜಿಓಗಳು ಹಪಹಪಿಸುತ್ತಿರುವುದೂ ಕಟುವಾಸ್ತವವೇ. ಈ ಕುರಿತು ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ನಮ್ಮ ಸಂಸತ್ತು, ನಮ್ಮ ಪ್ರತಿನಿಧಿಗಳು, ನಮ್ಮದೇ ಜನರ ಮಾತುಗಳನ್ನು ಪ್ರಾಮಾಣಿಕವಾಗಿ ಆಲಿಸುವುದರಲ್ಲಿ ತಪ್ಪಿಲ್ಲ. ಹಾಗೆ ಮಾಡುವುದರಿಂದ ಯಾರ ಕಿರೀಟವೂ ಕಳಚಿ ಬೀಳುವುದಿಲ್ಲ. ಬದಲಾಗಿ ನಮ್ಮ ಪ್ರಜಾತಂತ್ರ ವಿಶ್ವಕ್ಕೇ ಮಾದರಿಯಾಗುತ್ತದೆ. ಜನರಲ್ಲೂ ತಮ್ಮ ಪ್ರತಿನಿಧಿಗಳ ಬಗ್ಗೆ ಗೌರವ ಮೂಡುತ್ತದೆ. ಸಂಸತ್ತಿನ ಅಭಿಪ್ರಾಯವೇ ಜನರ ಅಭಿಪ್ರಾಯ ಎಂದು ಭಾವಿಸುವುದರ ಬದಲು ಬಹುಜನತೆಯ ಅಭಿಪ್ರಾಯವೇ ಸಂಸತ್ತಿನ ಅಭಿಪ್ರಾಯ ಎನ್ನುವಂತಾಗುವುದೇ ನಿಜವಾದ ಪ್ರಜಾತಂತ್ರ. 
 

ರಾಜಕಾರಣಿಗಳೆಂದರೆ ವಾಕರಿಕೆ

ಆಗಸ್ಟ್ ಮೊದಲ ವಾರಾಂತ್ಯ ಬ್ರಿಟನ್ ಪಾಲಿಗೆ ಕರಾಳವಾಯಿತು. ಟೋಟೆನ್ಹ್ಯಾಮ್ನ ಯಾರೋ ಸ್ಥಳೀಯ `ವಾಂಟೆಡ್' ವ್ಯಕ್ತಿ ಪೊಲೀಸರ ಗುಂಡಿಗೆ ಬಲಿಯಾದ. ಆ ಘಟನೆ ಪ್ರತಿಭಟನೆಗೆ ನಾಂದಿಯಾಯಿತು. ನಂತರ ಹಠಾತ್ತಾಗಿ ಗ್ಯಾಂಗ್ ಯುವಕರ ದಂಗೆ ಭುಗಿಲೆದ್ದಿತು. ನಂತರ ಮೂಲ ಘಟನೆಗೆ ಸಂಬಂಧವೇ ಇಲ್ಲದೆ ಲಂಡನ್, ಬಮರ್ಿಂಗ್ಹ್ಯಾಮ್, ಬ್ರಿಸ್ಟಲ್, ಲಿವರ್ಪೂಲ್ ಮುಂತಾದ ಮಹಾನಗರಗಳು ಹತ್ತಿ ಉರಿಯತೊಡಗಿದವು. 10 ವರ್ಷದ ಬಾಲಕರೂ ದಂಗೆಗೆ ಧುಮುಕಿದರು! ಅಂಗಡಿ ಮುಂಗಟ್ಟುಗಳ ಲೂಟಿ ಆರಂಭವಾಯಿತು. ಮಹಿಳೆಯರೂ ಅಂಗಡಿಗಳಿಗೆ ನುಗ್ಗಿ ಸಿಕ್ಕಿದ್ದನ್ನು ದೋಚತೊಡಗಿದರು. ದೊಂಬಿ ಮಾನಸಿಕತೆ ತನ್ನ ಪೈಶಾಚಿಕ ಸ್ವರೂಪದಲ್ಲಿ ವಿಜೃಂಭಿಸಿ ಅರಾಜಕತೆಯನ್ನು ಸೃಷ್ಟಿಸಿತು.

ಬ್ರಿಟನ್ ದಂಗೆಗಳಿಗೆ ನಿಜವಾದ ಕಾರಣ ಏನು? ಆಥರ್ಿಕ ಅಸಮಾನತೆ, ಸಾಮಾಜಿಕ ಬೆಸುಗೆಯ ಕೊರತೆ - ಎಂದೆಲ್ಲ ಏನೇನೋ ವಿಶ್ಲೇಷಣೆಗಳು ಬರುತ್ತಿವೆ. ಆದರೆ ಒಂದಂತೂ ಸ್ಪಷ್ಟ. ಅದು ರಾಜಕಾರಣಿಗಳ ಮೇಲೆ ಜನರಿಗಿರುವ ಕೋಪ, ಹತಾಶೆ. ದಂಗೆಗಳಲ್ಲಿ ಭಾಗವಹಿಸಿದ್ದ ಜನರೆಲ್ಲ ರಾಜಕಾರಣಿಗಳ ಮೇಲಿನ ತಮ್ಮ ಕೋಪವನ್ನು ಬಹಿರಂಗವಾಗಿ ಮಾಧ್ಯಮದವರ ಮುಂದೆ ತೋಡಿಕೊಂಡಿದ್ದು ಗಮನಾರ್ಹ. `ನನ್ನ ತೆರಿಗೆ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ' ಎಂದು ಯಾವುದೋ ಅಂಗಡಿಯನ್ನು ಕೊಳ್ಳೆ ಹೊಡೆಯುತ್ತಿದ್ದ ಮಹಿಳೆಯೊಬ್ಬಳು ನೀಡಿದ ಹೇಳಿಕೆ ಪರಿಸ್ಥಿತಿಯ ಸೂಚಕ.

ಈಗ ಸಮಸ್ತ ಜನರ ದ್ವೇಷ, ಅಸಹ್ಯ ಹಾಗೂ ತಿರಸ್ಕಾರಕ್ಕೆ ಒಳಗಾಗಿರುವ, ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಯಾವುದಾದರೂ ಒಂದು ವರ್ಗ, ಸಮುದಾಯವಿದ್ದರೆ, ಅದು ರಾಜಕಾರಣಿಗಳದು. ಹಣದ ಮೌಲ್ಯಕ್ಕಿಂತಲೂ ವೇಗವಾಗಿ ರಾಜಕಾರಣಿಗಳ ವ್ಯಕ್ತಿತ್ವದ ಮೌಲ್ಯ ಕುಸಿಯುತ್ತಿರುವುದು ಈಗ ಜಾಗತಿಕ ಮಟ್ಟದ ವಿದ್ಯಮಾನ. ಒಂದೊಂದು ದೇಶದಲ್ಲಿ ಒಂದೊಂದು ಪ್ರಧಾನ ಕಾರಣಕ್ಕಾಗಿ ರಾಜಕಾರಣಿಗಳ ವಿಷಯದಲ್ಲಿ ಹೇಸಿಗೆ ಹುಟ್ಟುತ್ತಿದೆ. ಭಾರತದಲ್ಲಿ ಭ್ರಷ್ಟಾಚಾರ, ಅಮೆರಿಕದಲ್ಲಿ ಆಥರ್ಿಕ ನಿರ್ವಹಣೆಯ ವೈಫಲ್ಯ, ಬ್ರಿಟನ್ನಿನಲ್ಲಿ ಅವ್ಯವಸ್ಥೆಯ ವಿರುದ್ಧದ ಒಳಗುದಿ - ಹೀಗೆ.

ಭಾರತದಲ್ಲಿ ನಿತ್ಯವೂ ಭ್ರಷ್ಟಾಚಾರ ವಿಜೃಂಭಿಸುತ್ತಿದೆ. 2ಜಿ-3ಜಿ ಹಗರಣ, ಕಾಮನ್ವೆಲ್ತ್ ಹಗರಣ, ಭೂಸ್ವಾಧೀನ ಹಗರಣ, ಸ್ವಿಸ್ ಬ್ಯಾಂಕ್-ಟ್ಯಾಕ್ಸ್ ಹೆವೆನ್ ಹಗರಣ, ಸಂಸದರ ಖರೀದಿಯ `ವೋಟಿಗಾಗಿ-ನೋಟು' ಹಗರಣ, ಆದರ್ಶ ಸೊಸೈಟಿ ಹಗರಣ, ಗಣಿ ಹಗರಣ, ರಿಯಲ್ ಎಸ್ಟೇಟ್ ಹಗರಣ, ಖರೀದಿ ಕಿಕ್ಬ್ಯಾಕ್ ಹಗರಣ, ಮಂತ್ರಿಗಳು ಹಾಗೂ ಮಾಜಿ ನ್ಯಾಯಾಧೀಶರೂ ಸೇರಿದಂತೆ ಅನೇಕ ಉನ್ನತ ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಗಳು - ಒಂದೇ ಎರಡೆ? ಹಳೆಯ ಭ್ರಷ್ಟಾಚಾರದ ವಿಷಯ ಹಾಗಿರಲಿ, ಕಳೆದ ಐದು ವರ್ಷಗಳಲ್ಲಿ ಒಟ್ಟು ಎಷ್ಟು ಹಗರಣಗಳು ಬೆಳಕಿಗೆ ಬಂದಿವೆ ಎಂಬುದರ ಯಾದಿ ತಯಾರಿಸುವುದೇ ಕಷ್ಟದ ಕೆಲಸ.

ಈಚೆಗಷ್ಟೇ ಸಂಸತ್ತಿನಲ್ಲಿ ಮಂಡನೆಯಾಗಿರುವ ಲೋಕಪಾಲ್ ಮಸೂದೆಗೆ ಜನರ ಮಟ್ಟದಲ್ಲಿ ಕವಡೆಯ ಕಿಮ್ಮತ್ತೂ ಕಂಡುಬರುತ್ತಿಲ್ಲ. ಸಿಬಿಐ ಸೇರಿದಂತೆ ಹಗರಣಗಳ ತನಿಖೆಗೆ ಹೊರಟಿರುವ ಸಕರ್ಾರಿ ತನಿಖಾ ಸಂಸ್ಥೆಗಳು, ತಮ್ಮ ಕೆಲಸವನ್ನು ಸರಿಯಾಗಿ ಮಾಡದೇ ಇರುವ ಕಾರಣಕ್ಕಾಗಿ ಪದೆ ಪದೇ ಕೋಟರ್ಿನಿಂದ ಛೀಮಾರಿ ಹಾಕಿಸಿಕೊಂಡು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ತಮ್ಮ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವವರನ್ನು ಬಗ್ಗುಬಡಿಯಲು ರಾಜಕಾರಣಿಗಳು ನಡೆಸಿರುವ ಬಹಿರಂಗ ಕಸರತ್ತುಗಳು ಜನರಲ್ಲಿ ತೀವ್ರ ಅಸಹ್ಯ ಹುಟ್ಟಿಸಿದೆ.

ಲಂಡನ್ ದಂಗೆಗಳು ಯಾವುದೇ ಸಮಸ್ಯೆಗೆ ಪರಿಹಾರ ಕೊಡಲಾರವು. ದಂಗೆ ನಡೆಸುವುದು, ಗ್ಯಾಂಗುಗಳನ್ನು ಸಂಘಟಿಸುವುದು - ಇವೆಲ್ಲ ಅನಾಗರಿಕ, ಅಮಾನವೀಯ ಹಾಗೂ ಅರಾಜಕ ಕ್ರಮಗಳು. ಸಾರ್ವಜನಿಕ ಅಪರಾಧಗಳು. ಆದರೂ ಯಾವುದೋ ಆಂತರಿಕ ಅವ್ಯವಸ್ಥೆಯ ರೋಗದ ಹೊರಲಕ್ಷಣದ ರೂಪದಲ್ಲಿ ದಂಗೆಯು ತೋರಿಕೊಳ್ಳುವ ಅಪಾಯವಿದೆ. ಅದನ್ನು ಯಾರೂ ನಿರ್ಲಕ್ಷಿಸುವ ಹಾಗಿಲ್ಲ. ಇದು ಭಾರತಕ್ಕೂ ಎಚ್ಚರಿಕೆಯ ಗಂಟೆಯಾಗಬೇಕು.
 

ಯಡಿಯೂರಪ್ಪ ಪತನಕ್ಕೆ ಕಾರಣವೇನು?

ಬಿ. ಎಸ್. ಯಡಿಯೂರಪ್ಪನವರ ಆಡಳಿತ 38 ತಿಂಗಳಿಗೇ ಪತನವಾಗಿದ್ದರ ಮಥಿತಾರ್ಥವೇನು? ಇದು ಒಂದು ಗ್ರಂಥಕ್ಕಾಗುವಷ್ಟು ಸಂಕೀರ್ಣ ವಿಷಯ. ಅಭಿವೃದ್ಧಿಯ ಕಿರೀಟಕ್ಕಾಗಿ ಹರಸಾಹಸ ಪಡುವಾಗಲೇ ಹಗರಣಗಳ ಉರುಳು ಅವರಿಗೆ ಸುತ್ತಿಕೊಂಡಿದ್ದು ವಿಪಯರ್ಾಸ.

ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಮಯದಲ್ಲಿ, ಹಾಗೂ ಅನಂತರ ಹಲವು ಬಾರಿ, `ಗುಜರಾತ್ ಮಾದರಿಯ ಆಡಳಿತ ನೀಡುತ್ತೇನೆ' ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಅದು ಪೂರ್ಣವಾಗಿ ಸಾಧ್ಯವಾಗಲಿಲ್ಲ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ರೀತಿಯಲ್ಲೇ ಯಡಿಯೂರಪ್ಪನವರು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಿದ್ದು ವಾಸ್ತವ. ಆದರೆ ಈ ಹೋಲಿಕೆ ಅಲ್ಲಿಗೇ ನಿಂತಿದ್ದೂ ವಾಸ್ತವ. ಮೋದಿಗಿಲ್ಲದ ಸಮಸ್ಯೆಗಳು ಯಡಿಯೂರಪ್ಪನವರನ್ನು ಮುತ್ತಿಕೊಂಡವು. ವೈಯಕ್ತಿಕ ಮಟ್ಟದ ಆರೋಪಗಳು ಬರದಂತೆ ಅವರು ಎಚ್ಚರವಹಿಸಬೇಕಿತ್ತು.

ಯಾವುದೇ ನಿದರ್ಿಷ್ಟ ಆರೋಪದ ಸತ್ಯಾಸತ್ಯತೆ ಎಷ್ಟಿದೆ ಎಂಬುದು ಬೇರೆಯದೇ ವಿಷಯ. ಇದಕ್ಕೆ ಲೋಕಾಯುಕ್ತ ವರದಿಯೂ ಸೇರುತ್ತದೆ. ಇಂತಹ ವಿಷಯಗಳು ನ್ಯಾಯಾಲಯಗಳ ಕಕ್ಷೆಗೆ ಬರುತ್ತವೆ. ಅಲ್ಲಿನ ತೀಮರ್ಾನಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ.

ಯಾವುದೇ ದೊಡ್ಡ ಕಳಂಕ ಸುತ್ತಿಕೊಳ್ಳದಂತೆ ನೋಡಿಕೊಳ್ಳುವುದು ಆಯಾ ನಾಯಕರ ಕೈಯಲ್ಲೇ ಇದೆ. ನರೇಂದ್ರ ಮೋದಿಗೂ ಆಂತರಿಕ ಹಾಗೂ ಬಾಹ್ಯ ಶತ್ರುಗಳಿದ್ದಾರೆ. ಆದರೂ ಭ್ರಷ್ಟಾಚಾರ ಹಗರಣಗಳು ಅವರ ಕತ್ತಿಗೆ ಸುತ್ತಿಕೊಂಡಿಲ್ಲ. ಹಗರಣಗಳಿಲ್ಲದ, ಅಭಿವೃದ್ಧಿಯೇ ಮಂತ್ರವಾಗಿರುವ ಆಡಳಿತವನ್ನು ಈವರೆಗೆ ನೀಡಲು ಸಾದ್ಯವಾಗಿರುವುದೇ ಅವರ ಯಶಸ್ಸಿನ ಗುಟ್ಟು. ಅದರಿಂದಲೇ ಅವರಿಗೆ ಜಾತಿಯ ಬಣ್ಣವಿಲ್ಲದ, ವರ್ಗಗಳ ಹಂಗಿಲ್ಲದ ಜನಬೆಂಬಲ ಲಭಿಸಿದೆ. ಕಟ್ಟುನಿಟ್ಟಿನ, ಕಳಂಕರಹಿತ ಆಡಳಿತದಿಂದಲೇ ಪಕ್ಷದ ಒಳಗಿನ ಹಾಗೂ ಹೊರಗಿನ ವಿರೋಧಿಗಳನ್ನು ನಿರ್ವಹಿಸುವುದು ಅವರಿಗೆ ಸಾಧ್ಯವಾಗಿದೆ.

ಎಲ್ಲರಿಗೂ ತಿಳಿದಿರುವ ಹಾಗೆ ಇಂದು ರಚನಾತ್ಮಕ ವಿರೋಧಪಕ್ಷಗಳ ವ್ಯವಸ್ಥೆ ಕಾಣಸಿಗುವುದು ಬರೀ ಪಠ್ಯಪುಸ್ತಕಗಳಲ್ಲಿ ಮಾತ್ರ. ಯಾವುದೇ ಆಡಳಿತವಾದರೂ ವಿಧ್ವಂಸಕ ವಿರೋಧಪಕ್ಷಗಳ ನಡುವೆಯೇ ಕೆಲಸ ಮಾಡಬೇಕಾಗಿರುವುದು ಈ ಕಾಲದ ಕರ್ಮ. ಏಕಪಕ್ಷದ ಆಡಳಿವಿದ್ದರೂ ಭಿನ್ನಮತದ ಕಾಟ ಯಾರಿಗೂ ತಪ್ಪಿದ್ದಲ್ಲ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಆಳುವ ಪಕ್ಷಗಳು ಬೇರೆಬೇರೆಯಾಗಿದ್ದರೆ ರಾಜ್ಯ ಸಕರ್ಾರದ ಪಾಲಿಗೆ ರಾಜ್ಯಪಾಲರೂ ವಿರೋಧ ಪಕ್ಷದ ನಾಯಕರಂತೆಯೇ ಆಗಬಹುದು. ಇವೆಲ್ಲದರ ಮಧ್ಯೆ ಕೆಲಸ ಮಾಡಿ, ಉತ್ತಮ ಫಲಿತಾಂಶ ತೋರಿಸಬೇಕಾದರೆ ಅಪರಿಮಿತ ತಾಳ್ಮೆ ಬೇಕಾಗುತ್ತದೆ. ವೈಯಕ್ತಿಕ ನಯಗಾರಿಕೆಯೂ ಬೇಕು. ಸಮ್ಮಿಶ್ರ ಸಕರ್ಾರವನ್ನು ತೂಗಿಸಿಕೊಂಡು ನಡೆಸಲು ಅಗತ್ಯವಾದ ಕಸರತ್ತು ಭಿನ್ನಮತೀಯರು ತುಂಬಿಕೊಂಡಿರುವ ಏಕಪಕ್ಷದ ಸಕರ್ಾರವನ್ನು ನಡೆಸುವಾಗಲೂ  ಅಗತ್ಯವಾಗುತ್ತದೆ.

ಯಡಿಯೂರಪ್ಪನವರನ್ನು ಮೇಲಿನ ಎಲ್ಲ ಅಂಶಗಳೂ ಋಣಾತ್ಮಕ ಸ್ವರೂಪದಲ್ಲಿ ಕಾಡಿದ್ದು ಗಮನಾರ್ಹ ಸಂಗತಿ. 

ಸತ್ವ`ಹೀನ' ಪತ್ರಿಕೋದ್ಯಮ

26 ಲಕ್ಷ ಪ್ರಸಾರ ಸಂಖ್ಯೆಯನ್ನು ಹೊಂದಿದ್ದ, ರ್ಯೂಪಟರ್್ ಮಡರ್ೋಕ್ ಒಡೆತನದ, `ನ್ಯೂಸ್ ಆಫ್ ದಿ ವಲ್ಡರ್್' ಬ್ರಿಟಿಷ್ ಟ್ಯಾಬ್ಲಾಯ್ಡ್ ಫೋನ್ ಹ್ಯಾಕಿಂಗ್ ಹಗರಣದಿಂದಾಗಿ ಇತಿಹಾಸದ ಕಸದಬುಟ್ಟಿಯನ್ನು ಸೇರಿದೆ. ಬೃಹತ್ ಗಾತ್ರ ಹಾಗೂ ಬೇಟೆಗಾರ ಮನೋಭಾವಗಳಲ್ಲಿ ತಿಮಿಂಗಿಲ ಹಾಗೂ ಶಾಕರ್್ಗಳೆರಡನ್ನೂ ಹೋಲುವ ಮಡರ್ೋಕ್ ಮಾಧ್ಯಮ ಸಾಮ್ರಾಜ್ಯ ಆಂತರಿಕ ಸ್ಪೋಟಕ್ಕೆ ತುತ್ತಾಗಿದೆ.

ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ಅತಿರೇಕಗಳೇ ಈ ಸ್ಫೋಟಕ್ಕೆ ಕಾರಣ. ವಾಸ್ತವವಾಗಿ `ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ' ಎಂಬ ಋಣಾತ್ಮಕ ಅರ್ಥ ಹೊಂದಿರುವ, ಹೀನ ಆಚರಣೆಗೆ ಚಾಲನೆ ನೀಡಿದ್ದು ಬ್ರಿಟಿಷ್ ಪತ್ರಿಕಾ ರಂಗವೇ. `ಟ್ಯಾಬ್ಲಾಯ್ಡ್ಗಳನ್ನು ನಿಯಂತ್ರಿಸಬೇಕು' ಎಂಬ ಕೂಗು ಇದೀಗ ಬ್ರಿಟನ್ನಿನಲ್ಲಿಯೇ ಪ್ರಬಲವಾಗುತ್ತಿದೆ. ಇದು ಇತಿಹಾಸಪಥದ ವೈಚಿತ್ರ್ಯ, ವೈಶಿಷ್ಟ್ಯ.

ಸುಸ್ಥಿರ ನಿಯಮಗಳ ಅನುಸಾರವಾಗಿ ನಡೆಯುತ್ತಿರುವುದು ಜಗತ್ತಿನ ಧರ್ಮ. ಕ್ರಮಬದ್ಧ, ಸುಸಂಗತ ಭೌತಿಕ ನಿಯಮಗಳಿಲ್ಲದ ಯಾವುದೂ ಬ್ರಹ್ಮಾಂಡದಲ್ಲಿ ಊಜರ್ಿತವಾಗುವುದಿಲ್ಲ. ವಿಜ್ಞಾನ ತಿಳಿದವರಿಗೆಲ್ಲ ಇದು ಗೊತ್ತು. ಪತ್ರಿಕೋದ್ಯಮವೇನೂ ಇದಕ್ಕೆ ಹೊರತಲ್ಲ.

ಸಾರ್ವಜನಿಕ ಹಿತದ ಉದ್ದೇಶವಿಲ್ಲದ, ವೈಯಕ್ತಿಕ ನೆಲೆಯ ಇಣುಕುಕಿಂಡಿ ಪತ್ರಿಕೋದ್ಯಮ ಕೆಲಕಾಲ ಕೆಲವರಿಗೆ ರುಚಿಸಬಹುದು. ಮಾರುವವರಿಗೆ ಹಣವನ್ನೂ ಕೊಳ್ಳುವವರಿಗೆ ರೋಮಾಂಚನವನ್ನೂ ನೀಡಬಹುದು. ಆದರೆ ಅದರದೇ ಆಂತರಿಕ ಅತಿರೇಕಗಳಿಂದಾಗಿ ಅದರ ಕುಸಿತ ಅನಿವಾರ್ಯವಾಗುತ್ತದೆ.

ಸೆಕ್ಸ್, ಡ್ರಗ್ಸ್, ಜನರ ಖಾಸಗಿ ಬದುಕಿನ ಇಣುಕು ನೋಟ, ಸುದ್ದಿಯ ಕೃತಕ ಸೃಷ್ಟಿ ಎಲ್ಲೆ ಮೀರಿದ ರೋಚಕತೆ, ರಾಜಕೀಯ ಹಾಗೂ ಅಪರಾಧಿ ಜಗತ್ತಿನ ಬಾಂಧವ್ಯ,  ಬ್ಲಾಕ್ಮೇಲ್, ರೋಲ್ಕಾಲ್  - ಇತ್ಯಾದಿ ಅತಿರೇಕಗಳು `ಟ್ಯಾಬ್ಲಾಯ್ಡ್ ಕಲ್ಚರ್' ಎನಿಸಿಕೊಂಡಿವೆ. `ಟ್ಯಾಬ್ಲಾಯ್ಡ್' ಎಂಬುದು ಕೇವಲ ಗಾತ್ರ ಸೂಚಕ ಪದವಾಗಿ ಉಳಿದಿಲ್ಲ. ಹೀನ ಪತ್ರಿಕೋದ್ಯಮದ ಒಂದು ಅನ್ವರ್ಥನಾಮ ಅದು. ತನ್ನ ಬಣ್ಣಿಸುವ, ಇದಿರ ಹಳಿಯುವ ಸ್ವರೂಪ ಅದರದು. ಆಲ್ಫ್ರೆಡ್ ಹಾಮ್ಸರ್್ವಥರ್್ (1865-1922) ಎಂಬ ಬ್ರಿಟಿಷ್ ಪತ್ರಿಕೋದ್ಯಮಿ ಅದರ ದೊಡ್ಡ ರೂವಾರಿ. ಬಹುರಾಷ್ಟ್ರೀಯ ಮಾಧ್ಯಮ ದೊರೆ ರ್ಯೂಪಟರ್್ ಮಡರ್ೋಕ್ ಈಗಿನ ಕಾಲದ ಅದರ ದೊಡ್ಡ ಫಲಾನುಭವಿ.

`ಜಂಕ್ಫೂಡ್' ತಿನ್ನಲು ರುಚಿಕರ. ಆದರೆ ಸತ್ವಹೀನ. ಪೋಷಕಾಂಶವಿಲ್ಲದ ಇಂಧನಶಕ್ತಿಯ ಪರಿಣಾಮ ಅನಾರೋಗ್ಯ. ಅದು ಕೆಲವರಿಗೆ ಪ್ರಿಯವಾಗಿರಬಹುದು. ಆದರೆ ಖಂಡಿತ ಹಿತಕರವಲ್ಲ. ಪ್ರಿಯವಾದುದೆಲ್ಲ ಹಿತವನ್ನು ಸಾಧಿಸುತ್ತದೆ ಎಂದೇನಿಲ್ಲ.

ವಾಸ್ತವವಾಗಿ, ಖಾಸಗಿ ಬದುಕಿನ ಕುರಿತು ಪ್ರಬಲವಾದ ಕಾನೂನುಗಳನ್ನು ಹೊಂದಿರುವ ಪಶ್ಚಿಮದ ಜಗತ್ತು ಟ್ಯಾಬ್ಲಾಯ್ಡ್ ಅತಿರೇಕಗಳನ್ನು ಇಷ್ಟುಕಾಲ ಸಹಿಸಿಕೊಂಡಿದ್ದೇ ಸೋಜಿಗದ ಸಂಗತಿ. ಖಾಸಗಿ ಬದುಕಿನ ಅನಾವರಣವನ್ನೇ `ಪತ್ರಿಕೋದ್ಯಮ' ಎನ್ನುವ ವ್ಯಾಖ್ಯೆ ಸರ್ವಕಾಲದಲ್ಲೂ ಪ್ರಶ್ನಾರ್ಹ. ಅಂತಹ ಪರಿಕಲ್ಪನೆಯನ್ನು ಪ್ರಶ್ನಿಸುವ ಪ್ರಕ್ರಿಯೆ ಈಗ ಆರಂಭವಾಗಿದೆ. ಇದು ಸ್ವಾಗತಾರ್ಹ. ಭಾರತದಲ್ಲೂ ಇಂತಹ ಪ್ರಕ್ರಿಯೆ ಚುರುಕಾಗಬೇಕು.

ಜನರು ಇನ್ನೆಷ್ಟು ದಿನ ಸಹಿಸಬೇಕು?

ಮುಂಬೈ ಜವೇರಿ ಬಜಾರ್ ತರಹದ ಸರಣಿ ಬಾಂಬ್ ಸ್ಫೋಟ ನಡೆದಿದ್ದರೆ ಅಮೆರಿಕದ ಬರಾಕ್ ಒಬಾಮಾ, ಬ್ರಿಟನ್ನಿನ ಡೇವಿಡ್ ಕ್ಯಾಮರೂನ್, ರಷ್ಯಾದ ವ್ಲಾದಿಮೀರ್ ಪುಟಿನ್ - ಇವರೆಲ್ಲರ ಸಕರ್ಾರಗಳು ಹೇಗೆ ವತರ್ಿಸುತ್ತಿದ್ದವು ಎಂಬುದು ಸರ್ವವಿದಿತ. 9/11 ನಂತರ ಅಮೆರಿಕದಲ್ಲಿ ಈವರೆಗೂ ಮತ್ತೊಂದು ದಾಳಿ ನಡೆದಿಲ್ಲ ಎಂಬುದು ಕೇವಲ ಆಕಸ್ಮಿಕವಲ್ಲ.

1993ರ ಸರಣಿ ಸ್ಫೋಟದ ನಂತರ ಈಗಿನ 13/7 ದಾಳಿಯವರೆಗೆ ಮುಂಬೈ ನಗರದಲ್ಲಿ 14 ಭಯೋತ್ಪಾದಕ ದಾಳಿಗಳು ನಡೆದಿವೆ. ಒಟ್ಟು 443 ಮಂದಿ ಬಲಿಯಾಗಿದ್ದಾರೆ. 2383 ಮಂದಿ ಗಾಯಾಳುಗಳಾಗಿದ್ದಾರೆ.

ಆದರೆ, `ಶೇ. 99 ದಾಳಿಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ. ಇದು ಕೇವಲ ಶೇ. 1ರ ಅಡಿ ಬರುವ ದಾಳಿ. ಇಂತಹುದನ್ನು ಏನೂ ಮಾಡಲಾಗದು' ಎಂಬುದು ರಾಹುಲ್ ಗಾಂಧಿಯ ನುಡಿಮುತ್ತು. `ಹಠಾತ್ತಾಗಿ ಅಚ್ಚರಿ ಹುಟ್ಟಿಸುವ ರೀತಿ ದಾಳಿ ಮಾಡುವುದೇ ಭಯೋತ್ಪಾದಕರಿಗೆ ಇರುವ ಅನುಕೂಲತೆ' ಎಂಬುದು ಸ್ವಯಂ ಪ್ರಧಾನಿಯ ಹೇಳಿಕೆ! ಇದೇ ಪ್ರಧಾನಿ 26/11 ದಾಳಿಯ ನಂತರ, `ಇನ್ನೆಂದೂ ಇಂತಹ ದಾಳಿ ಮರುಕಳಿಸದ ಹಾಗೆ ಮಾಡುತ್ತೇವೆ ನೋಡುತ್ತಿರಿ' ಎಂದಿದ್ದರು.

ಜನ ನೋಡುತ್ತಲೇ ಇದ್ದಾರೆ. ಒಳಗೆ ನೋವಿದ್ದರೂ ಹೊರ-ಆಕ್ರೋಶಕ್ಕೆ ತ್ರಾಣವಿಲ್ಲದವರಾಗಿದ್ದಾರೆ. ಇಂದು ಬೀದಿಗಿಳಿದು `ಸ್ಲಟ್ ವಾಕ್' ಮಾಡಲು ಸಮೃದ್ಧವಾಗಿ ಜನರು ಸಿಗುತ್ತಾರೆ. ಆದರೆ, ಭ್ರಷ್ಟಾಚಾರ, ಭಯೋತ್ಪಾದನೆಯ ವಿಷಯದಲ್ಲಿ ಎಂತಹುದೋ ಮಂಕುಮೌನ ಆವರಿಸಿಕೊಂಡಿದೆ.

ಇದೀಗ ಬಿಡುಗಡೆಯಾಗಿರುವ ತಮ್ಮ ಹೊಸ ಪುಸ್ತಕ `ಡಸ್ ಹಿ ನೋ ಎ ಮದರ್ಸ್ ಹಾಟರ್್?'ನಲ್ಲಿ ಅರುಣ್ ಶೌರಿ, ವೈಯಕ್ತಿಕ ನೆಲೆಯ ನೋವು-ಸಂಕಟಗಳಿಗೆ ಏನು ಕಾರಣ ಎಂದು ವಿಶ್ಲೇಷಿಸಿದ್ದಾರೆ. ಪಾಪ ಸಿದ್ಧಾಂತ - ಕರ್ಮ ಸಿದ್ಧಾಂತ ಸೇರಿದಂತೆ ಎಲ್ಲ ಮತಧರ್ಮಗಳನ್ನು ಜಾಲಾಡಿದ್ದಾರೆ. ಹಾಗೇ ರಾಷ್ಟ್ರವನ್ನು ಸಮಷ್ಟಿ ನೆಲೆಯಲ್ಲಿ ಭ್ರಷ್ಟರು, ಭಯೋತ್ಪಾದಕರು ಸಂಕಟ, ನರಳಾಟಗಳಿಗೆ ಸಿಲುಕಿಸಿರಲು ಏನು ಕಾರಣ? ಸಮಾಜವು ಸಮಷ್ಟಿ ನೆಲೆಯಲ್ಲಿ ಯಾವ ಪಾಪವನ್ನು ಮಾಡಿತ್ತು - ಎಂಬುದನ್ನೆಲ್ಲ ಜಾಲಾಡುವವರಾರು?

ಭಯೋತ್ಪಾದಕರ ಹಾವಳಿಯಿಂದ ಮಾತ್ರವೇ ಅಲ್ಲದೇ, ಆಳುವ ರಾಜಕಾರಣಿಗಳ ನಿಷ್ಕ್ರಿಯತೆ ಹಾಗೂ ಭ್ರಷ್ಟಾಚಾರದಿಂದಲೂ ದೇಶವನ್ನು ಉಳಿಸು ದೇವರೇ ಎಂದು ಜನರು ಪ್ರಾಥರ್ಿಸಬೇಕಾದ ಕಾಲ ಇದು. `ಪರಿಹಾರ' ಆಗಬೇಕಿದ್ದ ಸಕರ್ಾರ, ತಾನೇ ಒಂದು `ಸಮಸ್ಯೆ' ಆಗುತ್ತಿರುವುದು ಈ ಹೊತ್ತಿನ ವಾಸ್ತವ.
 

ಸಂತಶಕ್ತಿಯ ಕಾಲಘಟ್ಟ

ಬಾಬಾ ರಾಮ್ದೇವ್ ಸತ್ಯಾಗ್ರಹವು ಸಮಾಜದಲ್ಲಿ ಸಾಧುಸಂತರ ಪಾತ್ರದ ಬಗ್ಗೆ ಚಚರ್ೆಯನ್ನು ಹುಟ್ಟುಹಾಕಿದೆ. `ಸ್ವಘೋಷಿತ' ಸಂತರ ಸಾಮಾಜಿಕ, ರಾಜಕೀಯ ಕ್ರಿಯಾಶೀಲತೆಯ ಬಗ್ಗೆ ಆಳುವ ಪಕ್ಷಗಳ ರಾಜಕಾರಣಿಗಳು ಪ್ರಶ್ನೆಗಳೆನ್ನತ್ತಿದ್ದಾರೆ.

ಸಂತರ ಸಾಮಾಜಿಕ ಕ್ರಿಯಾಶೀಲತೆ ಹೊಸ ಬೆಳವಣಿಗೆಯಲ್ಲ. ಅವದೂತರಾಗಿದ್ದರೂ ಲೋಕಸಂಗ್ರಹದ ದೃಷ್ಟಿಯಿಂದ ಕರ್ಮದಲ್ಲಿ ತೊಡಗಬೇಕು ಎಂಬುದು ಭಗವದ್ಗೀತೆಯ ಸಂದೇಶ. ಸಂತರಿಗೆ ಕರ್ಮ ತ್ಯಾಗಕ್ಕಿಂತಲೂ ಕರ್ಮಫಲದ ತ್ಯಾಗವೇ ಸಂತರ ಹೆಗ್ಗುರುತು.

ಯಾವ ಪ್ರಾಚೀನ ಸಂಪ್ರದಾಯದೊಂದಿಗೂ ಗುರುತಿಸಿಕೊಳ್ಳದ ಹೊಸ ಸಂತಸಮೂಹ ಸ್ವಾಮಿ ದಯಾನಂದರ ಕಾಲದಲ್ಲಿ ತಳವೂರಿತು. ಸ್ವಾಮಿ ವಿವೇಕಾನಂದರ ಕಾಲದಲ್ಲಿ ಪ್ರಬಲವಾದ ದನಿಯನ್ನು ಪಡೆದುಕೊಂಡಿತು. ಶ್ರೀ ಅರಬಿಂದೋ ಕಾಲದಲ್ಲಿ ಜಾಗತೀಕರಣದ ಸೌಧವನ್ನು ನಿಮರ್ಿಸಿತು. ನಂತರ ಮಹೇಶ್ ಯೋಗಿ, ಶ್ರೀ ಪ್ರಭುಪಾದ ಮುಂತಾದವರು ವಿದೇಶಗಳನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಹೊಸ ಪರಂಪರೆಯ ಈ ಹೊಸ ಗುರುಗಳು ಸಾರ್ವತ್ರಿಕ ಹಿತದ ಗುರಿ ಇಟ್ಟುಕೊಂಡಿದ್ದವರು. ಭಾಷೆ, ಪಂಥ, ಒಳಪಂಥಗಳ ಪರಿಧಿಯನ್ನೆಲ್ಲ ಅವರು ದಾಟಿದ್ದರು.

ತಮ್ಮ ಕಾಲದ ಸಾಮಾಜಿಕ ಅಗತ್ಯಗಳನ್ನು ಸಾಂಪ್ರದಾಯಿಕ ಮಠಗಳು ಗುರುತಿಸಿಸದೇ ಇದ್ದ ಅವಧಿ ಅದು. ಈಗ ಸಾಂಪ್ರದಾಯಿಕ ಮಠಗಳೂ ಸಕ್ರಿಯವಾಗಿವೆ. ಹೊಸ ರೀತಿಯ ಮಠಗಳೂ ತಲೆಯೆತ್ತುತ್ತಿವೆ. ಆದರೂ ಅವುಗಳಲ್ಲಿ `ಯೂನಿವರ್ಸಲ್ ಅಪೀಲ್' ಎನ್ನುವುದು ಇನ್ನೂ ಇಲ್ಲ. ಅವುಗಳನ್ನು ಪೂರ್ಣವಾಗಿ ಧಾಮರ್ಿಕ, ಆಧ್ಯಾತ್ಮಿಕ ಎನ್ನುವ ಹಾಗೂ ಇಲ್ಲ, ಇತ್ತ ಸಮಾಜಮುಖಿ ಎನ್ನುವಂತೆಯೂ ಇಲ್ಲ. ಅಂತಹ ಸ್ಥಿತಿಯಲ್ಲಿದ್ದು ರಾಜಕೀಯ ಹೋರಾಟಗಳಿಂದ, ಸಾಮಾಜಿಕ ಆಂದೋಲನಗಳಿಂದ ಹಾಗೂ ಅಭಿವೃದ್ಧಿ ಯೋಜನೆಗಳಿಂದ ಒಂದಿಷ್ಟು ಅಂತರದಲ್ಲೇ ಉಳಿದುಕೊಂಡು ತಟಸ್ಥವಾಗಿವೆ ಎನ್ನಬಹುದು. ಆಧುನಿಕ ಮ್ಯಾನೇಜ್ಮೆಂಟ್ ಪರಿಭಾಷೆಯ `ಬಿಗ್ ಥಿಂಕಿಂಗ್' ಅನ್ನು ಸಾಮಾಜಿಕ, ಧಾಮರ್ಿಕ ರಂಗದಲ್ಲಿ ತರುವುದು ಅವುಗಳಿಂದ ಅಷ್ಟಾಗಿ ಸಾಧ್ಯವಾಗಿಲ್ಲ.

ರಾಜಕೀಯದಂತೆ ಧಾಮರ್ಿಕ ಜಗತ್ತಿನಲ್ಲೂ ಪರಂಪರೆಗಿಂತಲೂ ವೈಯಕ್ತಿಕ ವರ್ಚಸ್ಸಿನ ಪಾಲೇ ಹೆಚ್ಚಿನದು. ಹೀಗಾಗಿ ಈಗ ಜನರ ಗಮನ ಹೆಚ್ಚಾಗಿ ಪಬ್ಲಿಕ್ ರಿಲೇಷನ್ಸ್, ಮಾಕರ್ೆಟಿಂಗ್ ಚೆನ್ನಾಗಿ ತಿಳಿದಿರುವ, ಅವುಗಳನ್ನು ರಣತಾಂತ್ರಿಕ ನಿಖರತೆಯೊಂದಿಗೆ ಪ್ರಯೋಗಿಸುವ ಸಾಮಥ್ರ್ಯವುಳ್ಳ, ಆಧುನಿಕ ಸಂತರೆಡೆಗೆ ತಿರುಗುತ್ತಿರುವುದು ಸುಳ್ಳಲ್ಲ. ಇದರಿಂದ ಜನರಿಗೆ ಎಷ್ಟು ಅಧ್ಯಾತ್ಮ ಸಿದ್ಧಿಸುತ್ತದೆ ಎಂಬುದು ಬೇರೆ ಮಾತು. ನವಗುರುಗಳ ಪ್ರಭಾವವಂತೂ ಹೆಚ್ಚುತ್ತಿದೆ.

ಆಧುನಿಕ ಗುರುಗಳ, ಸಂತರ ಪರಂಪರೆ ಬಹಳ ವೇಗವಾಗಿ ಬೆಳೆಯುತ್ತಿದೆ. ಈ ಪೈಕಿ ಕೆಲವು ಗಟ್ಟಿ ವ್ಯಕ್ತಿತ್ವದ ಸಂತರೂ ಇದ್ದಾರೆ. ಅವರು ತಮ್ಮ ವೈಯಕ್ತಿಕ ವರ್ಚಸ್ಸನ್ನು, ಪ್ರಭಾವವಲಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ತಮ್ಮ ಸುತ್ತಲಿನ ಸಮಾಜದ ಅಭಿವೃದ್ಧಿಯತ್ತಲೂ ಗಮನ ನೀಡಿದ್ದಾರೆ. ದೇಶವಿದೇಶಗಳ ಆಗುಹೋಗುಗಳಲ್ಲಿ ಪಾತ್ರವಹಿಸಲೂ ಸಿದ್ಧರಿದ್ದಾರೆ. ಜನಪರ ಕಾಳಜಿಯನ್ನೂ ವ್ಯಕ್ತಪಡಿಸುತ್ತಾರೆ. ಕೆಲವರು ಗಿಮಿಕ್ಗಳನ್ನೂ ಮಾಡುತ್ತಾರೆ. ಜನರನ್ನು (ಹಣವನ್ನು?) ಆಕಷರ್ಿಸುವಲ್ಲಿ ಅವರವರಲ್ಲೇ ಪರಸ್ಪರ ಪೈಪೋಟಿ ನಡೆಯುತ್ತಿದೆ ಎನ್ನುವ ಮಾತೂ ಇದೆ. ಇಂತಹವರ ಮಧ್ಯೆ ಪೂರ್ಣ ಜೊಳ್ಳು, ಪೊಳ್ಳುಗಳೂ ಸಹ ಸಂತರ ವೇಷ ಧರಿಸಿಕೊಂಡಿವೆ.

ಅದೇನೇ ಇರಲಿ, ಸಂತಶಕ್ತಿ ಸರ್ವರಂಗಗಳಲ್ಲೂ ಪ್ರಜ್ವಲಿಸಲು ಆರಂಭಿಸಿರುವ ಈ ಕಾಲಘಟ್ಟ ಇದು.
 

ಬುಧವಾರ, ಜೂನ್ 29, 2011

ಸ್ವಿಸ್ ಹಣ ವಾಪಸ್ ಬರುತ್ತಾ?


ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ನಿಜವಾಗಿಯೂ ವಾಪಸ್ಸು ತರುವುದು ಸಾಧ್ಯವೆ?

ಈ ಪ್ರಶ್ನೆಗೆ ಸರಳ ಉತ್ತರವಿಲ್ಲ. ಬರೀ ಸ್ವಿಸ್ ಬ್ಯಾಂಕುಗಳಲ್ಲಿ ಮಾತ್ರವೇ ಕಪ್ಪು ಹಣವಿದೆ ಎಂದಲ್ಲ. ಐಎಮ್ಎಫ್. ಓಇಸಿಡಿ ಮತ್ತಿತರ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಜಗತ್ತಿನಲ್ಲಿ 70ಕ್ಕೂ ಹೆಚ್ಚು ಸ್ಥಳಗಳನ್ನು `ಆಫ್ಶೋರ್ ಫೈನಾಶಿಯಲ್ ಸೆಂಟರ್ಸ್' ಎಂದು ಮಾನ್ಯ ಮಾಡಿವೆ. ಅವುಗಳನ್ನು ಆಡುಭಾಷೆಯಲ್ಲಿ `ಟ್ಯಾಕ್ಸ್ ಹೆವೆನ್ಸ್' ಎನ್ನಲಾಗುತ್ತದೆ. ಈ ಪೈಕಿ ಹಲವೆಡೆ ಸ್ವಿಸ್ ಬ್ಯಾಂಕುಗಳಿಗಿಂತಲೂ ಹೆಚ್ಚು ರಹಸ್ಯ ಕಾಪಾಡಲಾಗುತ್ತದೆ.

ಆದರೆ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಸ್ವಿಸ್  ಸರಕಾರ ತನ್ನ ಬ್ಯಾಂಕಿಂಗ್ ರಹಸ್ಯಗಳನ್ನು ತಕ್ಕಮಟ್ಟಿಗೆ ಹಂಚಿಕೊಳ್ಳುವ ದಿನ ದೂರವಿಲ್ಲ. 2006ರಲ್ಲೇ ಸ್ವಿಸ್ ಸರಕಾರ ತನ್ನ ಖಾತೆದಾರರ ವಿವರ ನೀಡುವ ಪ್ರಕಿಯೆಗೆ ಚಾಲನೆ ನೀಡಿದೆ. ಕಳೆದ ವಾರವಷ್ಟೇ ತನ್ನ ಬ್ಯಾಂಕಿಂಗ್ ಕಾನೂನಿನಲ್ಲಿ ಅದು ತಿದ್ದುಪಡಿ ಮಾಡಿದೆ. ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಬಂಧಿಸಿದ ದೇಶಗಳ ಸರಕಾರಗಳಿಗೆ ನೀಡುವ ಪ್ರಕ್ರಿಯೆಯ ಸರಳೀಕರಣ ಇದೀಗ ಆರಂಭವಾಗಿದೆ.

ಆದರೆ 2006ರಿಂದಲೇ ಅನೇಕರು ತಮ್ಮ ಸ್ವಿಸ್ ಖಾತೆಗಳನ್ನು ಇತರ ಟ್ಯಾಕ್ಸ್ ಹೆವೆನ್ಗಳಿಗೆ ವರ್ಗಾಯಿಸಲು ಆರಂಭಿಸಿದ್ದಾರೆ. ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್ಎನ್ಬಿ) ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಜನವರಿ 2008 ಹಾಗೂ ನವೆಂಬರ್ 2009ರ ನಡುವೆ ಸ್ವಿಸ್ ಖಾತೆಗಳ ಸಂಖ್ಯೆ ಶೇಕಡ 28.1ರಷ್ಟು ಕುಸಿದಿದೆ. ಕೆಲದಿನಗಳ ಹಿಂದಷ್ಟೇ (ಉಪವಾಸನಿರತ ಬಾಬಾ ರಾಮ್ದೇವ್ ಇನ್ನೂ ಆಸ್ಪತ್ರೆಯಲ್ಲಿದ್ದಾಗಲೇ) ಭಾರತದ ಅತಿಪ್ರಮುಖ ರಾಜಕಾರಣಿಯೊಬ್ಬರು ಸ್ವಿಸ್ ಪ್ರವಾಸ ಮಾಡಿದ್ದರೆಂಬ ವರದಿಗಳೂ ಇವೆ.

2006ರಲ್ಲಿ ಸ್ವತಃ `ಸ್ವಿಸ್ ಬ್ಯಾಂಕಿಂಗ್ ಅಸೋಸಿಯೇಷನ್' ಸಿದ್ಧಪಡಿಸಿದ್ದ ಅಧಿಕೃತ ವರದಿಯ ಪ್ರಕಾರ, ಸ್ವಿಸ್ ಬ್ಯಾಂಕುಗಳಲ್ಲಿ ಅತಿ ಹೆಚ್ಚು ಹಣ ಇಟ್ಟಿರುವವರು ಭಾರತೀಯ ನಾಗರಿಕತ್ವವನ್ನು ಹೊಂದಿರುವವರು. ಒಟ್ಟು 2512 ಶತಕೋಟಿ ಡಾಲರ್ ಡಿಪಾಸಿಟ್ ಹಣದಲ್ಲಿ ಭಾರತೀಯರ ಪಾಲು 1456 ಶತಕೋಟಿ ಡಾಲರ್. ಅತಿಹೆಚ್ಚು ಡಿಪಾಸಿಟ್ ಮಾಡಿರುವ ಮೊದಲ ಐದು ಸ್ಥಾನಗಳಲ್ಲಿ ಎರಡನೆಯದು ರಷ್ಯಾ. ರಷ್ಯನ್ ನಾಗರಿಕರ ಪಾಲು 470 ಶತಕೋಟಿ ಡಾಲರ್. ಯುನೈಟೆಡ್ ಕಿಂಗ್ಡಂ ನಾಗರಿಕರದು 390 ಶತಕೋಟಿ. ಉಕ್ರೇನ್ 100 ಶತಕೋಟಿ. ಕಮ್ಯುನಿಸ್ಟ್ ಚೀನಾದ ಕೊಳ್ಳೆಗಾರರದು 96 ಶತಕೋಟಿ ಡಾಲರ್. ಇದು ಒಂದು ಅಂಕಿಅಂಶ.

`ಗ್ಲೋಬಲ್ ಫೈನಾನ್ಶಿಯಲ್ ಇಂಟಿಗ್ರಿಟಿ' ನವೆಂಬರ್ 2010ರಲ್ಲಿ ಬಿಡುಗಡೆ ಮಾಡಿರುವ ಅಧ್ಯಯನ ವರದಿಯ ಪ್ರಕಾರ, ಭಾರತದಿಂದ ಈಚೆಗೆ ಹೊರ ಸಾಗಿಸಿರುವ ಕಳ್ಳದುಡ್ಡಿನ ಮೊತ್ತ 462 ಶತಕೋಟಿ ಡಾಲರ್.

ಕ್ಯಾರಿಬಿಯನ್ ಸಮುದ್ರದಲ್ಲಿರುವ ಕೇಮನ್ ಐಲ್ಯಾಂಡ್ಸ್ ಕುಪ್ರಸಿದ್ಧ ಟ್ಯಾಕ್ಸ್ ಹೆವೆನ್. ಅಲ್ಲಿನ ಜೂಲಿಯಸ್ ಬಾಯೆರ್ ಎಂಬ ಖಾಸಗಿ ಸ್ವಿಸ್ ಬ್ಯಾಂಕಿನ ಮುಖ್ಯಸ್ಥನಾಗಿದ್ದ ರೂಡೋಲ್ಫ್ ಎಲ್ಮರ್ ಅನೇಕ ರಹಸ್ಯ ಖಾತೆಗಳ ವಿವರಗಳನ್ನು ಸಿಡಿ ಮಾಡಿಸಿ ಇಟ್ಟುಕೊಂಡಿದ್ದಾನೆ. 2002ರಲ್ಲಿ ಆತನನ್ನು ಬ್ಯಾಂಕು ಕೆಲಸದಿಂದ ತೆಗೆದುಹಾಕಿತ್ತು. ಈಚೆಗೆ, ಅಂದರೆ, ಜನವರಿ 2011ರಲ್ಲಿ ಆತ ವಿಕಿಲೀಕ್ಸ್ ಮುಖ್ಯಸ್ಥ ಜೂಲಿಯನ್ ಅಸ್ಸೆಂಜ್ ಗೆ ಎರಡು ಡಿಸ್ಕ್ ಮಾಹಿತಿಯನ್ನು ಬಹಿರಂಗವಾಗಿ (ಲಂಡನ್ನಿನಲ್ಲಿ ಮಾಧ್ಯಮಗೋಷ್ಠಿಯನ್ನು ಕರೆದು, ಎಲ್ಲರೆದುರು) ನೀಡಿದ್ದಾನೆ. ಆ ಸಿಡಿಗಳಲ್ಲಿ ವಿವಿಧ ದೇಶಗಳ ಸರಕಾರಗಳ ಆಡಳಿತಗಾರರು, ಸರ್ವಾಧಿಕಾರಿಗಳು, ಭ್ರಷ್ಟ ರಾಜಕಾರಣಿಗಳು, ಅಪ್ರಾಮಾಣಿಕ ಉದ್ಯಮಿಗಳು, ಸಂಘಟಿತ ಭೂಗತ ಮಾಫಿಯಾ, ಡ್ರಗ್ಸ್ ಮಾಫಿಯಾ, ಭಯೋತ್ಪಾದಕ ಸಂಘಟನೆಗಳು - ಹೀಗೆ ಸುಮಾರು 2000 ರಹಸ್ಯ ಖಾತೆದಾರರ ವಿವರಗಳಿವೆ ಎನ್ನಲಾಗಿದೆ.
ಅದನ್ನು ಜೂಲಿಯನ್ ಅಸ್ಸೆಂಜ್ ಯಾವಾಗ ಬಹಿರಂಗ ಮಾಡುತ್ತಾನೋ ಗೊತ್ತಿಲ್ಲ. ಭಾರತದ ಸುಪ್ರೀಂ ಕೋರ್ಟ್ ಸಹ ಕಪ್ಪುಹಣದ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಪ್ರಾಮಾಣಿಕತೆಗೆ ಹೆಸರಾಗಿರುವ ಮುಖ್ಯ ನ್ಯಾಯಾಧೀಶರಾದ ಎಸ್. ಎಚ್. ಕಪಾಡಿಯಾ ಸೇವೆಯಲ್ಲಿ ಇರುವವರೆಗೆ ಪರವಾಗಿಲ್ಲ. ಆದರೆ ನಿವೃತ್ತರಾದ ನಂತರ ಹೇಗೋ ಗೊತ್ತಿಲ್ಲ.

ಸರಕಾರದ ಆಡಳಿತಗಾರರ, ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಖಾಸಗಿ ಉದ್ಯಮಗಾರರ ತೆರಿಗೆಗಳ್ಳತನ ಇವೆಲ್ಲ ಗುರುತರವಾದ ಅರ್ಥಿಕ ಅಪರಾಧಗಳು. ಭಯೋತ್ಪಾದಕರ, ಮಾಫಿಯಾದವರ ಹಣವೂ ಇರುವುದರಿಂದ ಇದು ರಾಷ್ಟ್ರೀಯ ಸುರಕ್ಷೆಯ ವಿಷಯವೂ ಹೌದು. ಆದರೆ ಸರಕಾರ ಈ ವಿಷಯದಲ್ಲಿ ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಬಂಧಿತ ಮನಿ ಲಾಂಡರರ್ ಹಸನ್ ಅಲಿಯಿಂದ ಬಾಯಿ ಬಿಡಿಸುವ ವಿಷಯದಲ್ಲೂ ಜಾಣ ಕುರುಡನ್ನು, ಜಾಣ ಕಿವುಡನ್ನು ಪ್ರದರ್ಶಿಸಲಾಗುತ್ತಿದೆ. `ದೇಶದ ಭದ್ರತೆ, ಐಕ್ಯತೆ ಹಾಗೂ ಆರ್ಥಿಕತೆಗೆ ನೇರವಾಗಿ ಸವಾಲು ಒಡ್ಡಿರುವ ಸಂಗತಿ ಇದು' ಎಂದು ಸುಪ್ರೀಮ್ ಕೋರ್ಟ್ ನೇಮಿಸಿದ್ದ ಸೋಲಿ ಸೋರಾಬ್ಜಿ ಸಮಿತಿ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದರೂ ಸರಕಾರದ ಮಟ್ಟದಲ್ಲಿ ಹಿಂಜರಿಕೆಯೇ ಪ್ರಧಾನವಾಗಿ ಕಾಣುತ್ತಿದೆ.

ಆದರೆ ಪಶ್ವಿಮದ ದೇಶಗಳು (ಉದಾ: ಅಮೆರಿಕ, ಜರ್ಮನಿ) ಕಪ್ಪು ಹಣದ ವಿಷಯವನ್ನು, ಕಪ್ಪು ಆರ್ಥಿಕತೆಯ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿವೆ. ಅಮೆರಿಕದಲ್ಲಿ ಅನೇಕ ಜನರನ್ನು ಬಂದಿಸಲಾಗಿದೆ.

ನಮ್ಮಲ್ಲಿ, ಅಣ್ಣಾ ಹಜಾರೆ ಹಿಂದೆ ಯಾರಿದ್ದಾರೆ? ಬಾಬಾ ರಾಮ್ದೇವ್ ಏನು ಸತ್ಯ ಹರಿಶ್ಚಂದ್ರನೆ? - ಹೀಗೆಲ್ಲ ವಿಷಯಾಂತರಗಳು ನಡೆಯುತ್ತವೆ. ಇದು ಫಲಾನುಭವಿ ರಾಜಕಾರಣಿಗಳ ಕುಟಿಲ ತಂತ್ರ. ಇದನ್ನು ನಮ್ಮ ಸಾರ್ವಜನಿಕ ಅಭಿಪ್ರಾಯ ರೂಪಿಸುವವರು ಗಮನಿಸಬೇಕು.

ಯಾವುದೇ ಚಳವಳಿ ಬೃಹತ್ ರೂಪ ಪಡೆದುಕೊಂಡಾಗ ಚಳವಳಿಗಾರರ ಮೇಲೂ ಗಮನ ಹೋಗುವುದು ಸಹಜ. ಆದರೆ ಯಾವುದರ ವಿರುದ್ಧ ಜನರು ಸಂಘಟಿತರಾಗಿ ಹೋರಾಡುತ್ತಿದ್ದಾರೋ ಆ ವಿಷಯದ ಮೇಲೆ ಮಾಧ್ಯಮದವರು ಹೆಚ್ಚಾಗಿ ಬೆಳಕು ಚೆಲ್ಲಬೇಕು. ಆರೋಗ್ಯಕರ ಚರ್ಚೆಯಾಗುವ ಹಾಗೆ ನೋಡಿಕೊಳ್ಳಬೇಕು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನರ ಹಿನ್ನೆಲೆಯನ್ನು ಬಲ್ಲವರಾರು? ಕೆಲವು ಚಳವಳಿಗಾರರು ತಪ್ಪು ಮಾಡಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಅಡ್ಡಿಯೇನಿದೆ?

ಪ್ರತಿಭಟನೆಯ ಮೂಲ ವಿಷಯಕ್ಕಿಂತಲೂ ಚಳವಳಿಗಾರರ ವೈಯಕ್ತಿಕ ಶುದ್ಧಿ, ಅಶುದ್ಧಿ ಇತ್ಯಾದಿಗಳ ಚರ್ಚೆಯೇ ಹೆಚ್ಚಾಗಿ ವಿಜೃಂಭಿಸುತ್ತ ಹೋದರೆ ಮೂಲ ವಿಷಯವೇ ಕೈಬಿಟ್ಟುಹೋಗುತ್ತದೆ.

ಶನಿವಾರ, ಮೇ 21, 2011

ಡಾ. ಎಸ್. ಎಲ್. ಭೈರಪ್ಪ ಅವರೊಂದಿಗೆ ವಿಶೇಷ ಸಂವಾದ

ಕನ್ನಡಿಗರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಡಾ. ಎಸ್. ಎಲ್. ಭೈರಪ್ಪ ಭಾರತದ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರು. ವಿಸ್ತಾರವಾದ ಜೀವನಾನುಭವ ಹೊಂದಿರುವ ಅವರು ಪ್ರಖರ ವೈಚಾರಿಕತೆ, ತಲಸ್ಪಶರ್ಿ ಅಧ್ಯಯನ, ತಾಕರ್ಿಕ ಚಿಂತನೆ ಹಾಗೂ ಖಚಿತ ಅಭಿಪ್ರಾಯ ನಿರೂಪಣೆ - ಇವುಗಳಿಗಾಗಿ ಹೆಸರಾದವರು.

ಅಗಾಧ ಓದು ಹಾಗೂ ಜಾಗತಿಕ ಪ್ರವಾಸಗಳಿಂದ ತಮ್ಮ ಜ್ಞಾನದ ಪರಿಧಿಯನ್ನು, ಅನುಭವದ ಆಳವನ್ನು ಹೆಚ್ಚಿಸಿಕೊಂಡು ಪರಿಪಕ್ವವಾಗಿರುವ ಭೈರಪ್ಪನವರೊಂದಿಗೆ, ಮೈಸೂರಿನ ಅವರ ನಿವಾಸದಲ್ಲಿ ಫೆಬ್ರವರಿ 2011ರ ಅಂತ್ಯದಲ್ಲಿ ನಾನು ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಕಾರ್ಯದಶರ್ಿ ಹೆಚ್. ಎಸ್. ನಾರಾಯಣ ಮೂತರ್ಿ, ಹಿರಿಯ ಪತ್ರಕರ್ತ, ವಿ. ಎನ್. ಸುಬ್ಬರಾವ್, ಸಂಯುಕ್ತ ಕನರ್ಾಟಕದ ಸಂಪಾದಕ ಹುಣಸವಾಡಿ ರಾಜನ್ಸುಮಾರು ಎರಡು ಗಂಟೆಗಳ ಕಾಲ ಭೈರಪ್ಪನವರೊಂದಿಗೆ ಸಂವಾದ ನಡೆಸಿದೆವು.

ಸಂವಾದದ ನಂತರ ಆತ್ಮೀಯ ಹರಟೆ. ಅನಂತರ ಊಟ. ಭೈರಪ್ಪನರು ಅತಿಥಿದೇವರು. ಊಟದ ಕೋಣೆಯಲ್ಲಿ ಭಾರಿ ಭೋಜನ ಅಣಿಯಾಗಿತ್ತು. ಬಿಸಿಬೇಳೆ ಭಾತ್, ರಾಯತ, ಚಪಾತಿ, ಪಲ್ಯ, ಅನ್ನ, ಸಾಂಬಾರ್, ಹಪ್ಪಳ, ಗಸಗಸೆ ಪಾಯಸ, ಮೊಸರು, ಬಾಳೆಹಣ್ಣು - ಇಷ್ಟೊಂದು ಬಗೆಯ ಭೋಜನವನ್ನು ಭೈರಪ್ಪನವರ ಪತ್ನಿ ಶ್ರೀಮತಿ ಸರಸ್ವತಿಯವರು ಸಿದ್ಧಪಡಿಸಿದ್ದರು! ಪತ್ನಿಯೊಂದಿಗೆ ಸ್ವತಃ ಭೈರಪ್ಪನವರೇ ಬಡಿಸಲು ನಿಂತರು. ನಮ್ಮ ತಟ್ಟೆಗಳು ತುಂಬಿದ ನಂತರ ಜೊತೆಯಲ್ಲಿ ಊಟಕ್ಕೆ ಕುಳಿತರು. ಇದು ವ್ಯಕ್ತಿತ್ವದ ಒಂದು ಚಿಕ್ಕ ಉದಾಹರಣೆ, ಅಷ್ಟೇ.


ಎಸ್. ಎಲ್. ಭೈರಪ್ಪನವರ ಜೊತೆ ನಡೆಸಿದ ವಿಶೇಷ ಸಂವಾದದ ಆಯ್ದ ಭಾಗಗಳು ಇಲ್ಲಿವೆ (2011ರ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ `ಸಂಯುಕ್ತ ಕನರ್ಾಟಕ' ಪತ್ರಿಕೆಯು ಹೊರತಂದಿದ್ದ `ಕನ್ನಡ ಕಲರವ' ವಿಶೇಷ ಸಂಚಿಕೆಯಲ್ಲಿ ಈ ಸಂದರ್ಶನದ ಮುದ್ರಿತ ರೂಪವನ್ನು ನೋಡಬಹುದು).

ನಿರೂಪಣೆ: ಜಿ. ಅನಿಲ್ ಕುಮಾರ್

ಓವರ್ ಟು ಭೈರಪ್ಪ ....

****

`ವಿಶ್ವ ಕನ್ನಡ ಸಮ್ಮೇಳನ' ಅನ್ನುವ ಬದಲು `ವಿಶ್ವ ಕನರ್ಾಟಕ ಸಮ್ಮೇಳನ' ಅಂತ ಕರೆಯೋದು ಹೆಚ್ಚು ಸೂಕ್ತ ಎಂದು ನನಗೆ ಅನಿಸುತ್ತದೆ.

ಕನ್ನಡ ಭಾಷೆಯ ಉಳಿವು - ಅಳಿವಿನ ಕುರಿತಂತೆ ನಾವು ಬೇಕಾದಷ್ಟು ಚಚರ್ೆ ಮಾಡಿದ್ದೀವಿ. ಪ್ರತಿಯೊಂದು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಹೇಳಿದ್ದಾರೆ. ಪತ್ರಿಕೆಗಳಲ್ಲೂ ಈ ಬಗ್ಗೆ ಬಹಳಷ್ಟು ಲೇಖನ ಬರೆದಿದ್ದಾರೆ. ಈ ಬಗ್ಗೆ ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ. ಮುಖ್ಯವಾಗಿ ಆಗಬೇಕಾದದ್ದು ಕನರ್ಾಟಕ ಆಥರ್ಿಕವಾಗಿ, ರಾಜಕೀಯವಾಗಿ ಸಬಲವಾಗಬೇಕು. ಎಲ್ಲಿಯವರೆಗೆ ನಾವು ಆಥರ್ಿಕವಾಗಿ ಸದೃಢವಾಗಿರುವುದಿಲ್ಲವೋ ಅಲ್ಲಿಯವರೆಗೆ ನಾವು ಸಾಂಸ್ಕೃತಿಕವಾಗಿ ಕೂಡಾ ಸದೃಢವಾಗಲು ಸಾಧ್ಯವಿಲ್ಲ.

ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಅಥವಾ ಸ್ವಾತಂತ್ರ್ಯ ಬಂದ ಮೇಲೂ ನಾವು ರಾಜಕೀಯವಾಗಿ ಸಬಲರಾಗಿರಲಿಲ್ಲ. ಉತ್ಸಾಹ ಮೂಡಿಸಲು `ನಾವು ಗಂಡುಗಲಿಗಳು' ಹಾಗೆ ಹೀಗೆ ಅಂತ ಹೇಳಬಹುದು. ಇತ್ತೀಚಿನ ಇತಿಹಾಸ ತೆಗೆದುಕೊಂಡರೆ ಮಹಾರಾಷ್ಟ್ರದಲ್ಲಿ ಮರಾಠರು ಹಿಂದೆ ಎಷ್ಟು ಪ್ರಬಲರಾಗಿದ್ದರೋ ಅದರ ಪ್ರಾಬಲ್ಯ ಈಗಲೂ ಹಾಗೇ ಇದೆ. ಮರಾಠರ ಮನೋಭೂಮಿಕೆಯಲ್ಲಿ ಆ ಪ್ರಾಬಲ್ಯ ಇನ್ನೂ ಇದೆ. ಇನ್ನು ಉತ್ತರಕನರ್ಾಟಕವನ್ನು ತೆಗೆದುಕೊಂಡರೆ ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ ಅಲ್ಲಿದ್ದ ನಮ್ಮ ಎಲ್ಲ ನಾಯಕರೂ ಮಹಾರಾಷ್ಟ್ರವನ್ನೇ ನೋಡುತ್ತಿದ್ದರು. ತಿಲಕ್ರನ್ನೇ ನೋಡುತ್ತಿದ್ದರು. ನಂತರ ಮಹಾತ್ಮಾ ಗಾಂಧೀ ಅವರನ್ನು ನೋಡಲು ಪ್ರಾರಂಭಿಸಿದರು. ಹಳೇಮೈಸೂರು ಪ್ರಾಂತ್ಯದಲ್ಲಂತೂ ಮಹಾರಾಜರ ಸಕರ್ಾರವಾಗಿತ್ತು. ಇವರದೇ ಬೇರೆ ಕಲ್ಚರ್ ಬಂತು. ಮತ್ತೆ ಆಮೇಲೆ ಕಾಂಗ್ರೆಸ್ ಇಲ್ಲಿಗೂ ಬಂತು.

ದೇಶಕ್ಕೆ ಸ್ವಾತಂತ್ರ ಬಂದ ಮೇಲೆ ನಾವು ಕನ್ನಡಿಗರು ರಾಜಕೀಯವಾಗಿ ಪ್ರಬಲರಾಗಿರಲಿಲ್ಲ. ತಮಿಳರು ಯಾವತ್ತೂ ಪ್ರಬಲರಾಗಿದ್ದವರೇ. ಬ್ರಿಟಷ್ರ ಕಾಲದಲ್ಲೂ ಅವರೂ ಪ್ರಬಲರೇ. ಕೇರಳದವರು
ಸೆಂಟ್ರಲ್ ಗವರ್ನಮೆಂಟ್ನಲ್ಲಿ ತಮ್ಮ ಮಾತು ಯಾವ ರೀತಿ ನಡೆಸಿಕೊಳ್ಳಬೇಕು ಅನ್ನೊದನ್ನು ಮೊದಲಿನಿಂದಲೂ ಮಾಡ್ಕೊಂಡು ಬಂದ್ರು. ಈಗಲೂ ಅವರು ಅದನ್ನೆಲ್ಲ ಮಾಡುತ್ತ ಬಂದಿದ್ದಾರೆ. ನಾವು ಕನರ್ಾಟಕದವರು ಯಾಕೆ ಇದನ್ನು ಮಾಡುವುದಿಲ್ಲ? ನಮ್ಮ ದೌರ್ಬಲ್ಯವನ್ನು ಅರ್ಥ ಮಾಡಿಕೊಳ್ಳದೇ ಹೋದರೆ ನಾವು ಸುಧಾರಿಸುವುದು ಸಾಧ್ಯವಿಲ್ಲ.

ಈ ಕುರಿತು ಯೋಚಿಸುವಾಗ ನಾವು ವೈಚಾರಿಕೆ ನೆಲೆಯಲ್ಲಿ ಅಬ್ಸ್ಟ್ರಾಕ್ಟ್ ಶಬ್ದಗಳನ್ನು ಬಳಸಿ ಉಪಯೋಗವಿಲ್ಲ. ಅವೆಲ್ಲಾ ಮಿಸ್ಲೀಡಿಂಗ್ ಶಬ್ದಗಳು. ಯಾವುದೇ ಒಂದು ಶಬ್ದ ನಾವು ಬಳಸಿಬಿಟ್ಟರೆ ಆ ಶಬ್ದದೊಳಗೆ ನಮ್ಮ ಆಲೋಚನೆ ಸಿಕ್ಕಿ ಹಾಕಿಕೊಳ್ಳುತ್ತದೆ. ಅದಲ್ಲ ಮುಖ್ಯ. ಸೆಂಟ್ರಲ್ನಲ್ಲಿ ಕಾಂಗ್ರೆಸ್ ಆಳ್ತಿದ್ದಾಗ ಇಲ್ಲೂ ಕಾಂಗ್ರೆಸ್ ಇತ್ತು. ಅದು ಹ್ಯಾಗಿತ್ತು ಅಂದರೆ ವಿಧೇಯವಾಗಿತ್ತು. ಕನರ್ಾಟಕದ ಉದ್ಧಾರದ ಪ್ರಶ್ನೆ ಬಂದಾಗ ಕನರ್ಾಟಕಕ್ಕೆ ಉಪಯೋಗವಾಗೋ ಪ್ರಶ್ನೆ ಬಂದಾಗ `ಗಲಾಟೆ ಮಾಡಬೇಡ' ಅಂತ ಅವರು ಗದರಿಸಿಬಿಟ್ಟರೆ ಇವರು ಸುಮ್ಮನಾಗಿಬಿಡುತ್ತಿದ್ದರು. ಆಮೇಲೆ ಅಲ್ಲಿ ಬೇರೆ ಪಕ್ಷವಿದ್ದು ಇಲ್ಲಿ ಇವರಿದ್ದಾಗ ಉಲ್ಟಾ ಆಗಲು ಪ್ರಾರಂಭವಾಯಿತು.

ಆಂಧ್ರಪ್ರದೇಶದಲ್ಲಿ ಏನಾಯಿತು? ಕೇಂದ್ರದಲ್ಲಿ ಎನ್ಡಿಎ ಆಳ್ವಿಕೆಯಲ್ಲಿದ್ದಾಗ ಚಂದ್ರಬಾಬು ನಾಯ್ಡು ಹೊರಗಿನಿಂದ ಬೆಂಬಲ ನೀಡ್ತಿದ್ದರು. ಆಂಧ್ರಕ್ಕೆ ಬೇಕಾದ ಸವಲತ್ತು ಪಡೆಯಲು ಅಧಿಕಾರಿಗಳನ್ನು ಕರೆದುಕೊಂಡು ಕೇಂದ್ರಕ್ಕೆ ಸ್ವತಃ ಹೋಗುತ್ತಿದ್ದರು. ಇಂತಿಷ್ಟು ಬೇಕು, ಇಷ್ಟಿಷ್ಟು ಬೇಕು ಎಂದು ಅವರು ಹೇಳಿದರೆ ಸಾಕು ಅವರು ಮಂಜೂರು ಮಾಡ್ತಿದ್ದರು. ಅವರು ತಮ್ಮ ಸ್ವಂತಕ್ಕೆ ಏನು ಮಾಡಿಕೊಂಡ್ರೋ ಗೊತ್ತಿಲ್ಲ. ಆದರೆ ಆಂಧ್ರಪ್ರದೇಶಕ್ಕಂತೂ ಬೇಕಾದಷ್ಟೂ ಸವಲತ್ತನ್ನು ಅವರು ಪಡೆದರು. ತಮಿಳುನಾಡಿನವರೂ ಇದೇ ಮಾಡ್ತಿದ್ದಾರೆ. ಮೊನ್ನೆ ನೋಡಿ ಸುನಾಮಿ ಆಯಿತು. ಆಗ ಕೇಂದ್ರದಲ್ಲಿ ಚಿದಂಬರಂ ಅವರು ಅರ್ಥಸಚಿವರಾಗಿದ್ದರು. ಆಗ ಅವರು ಒಂದೇ ಸಲಕ್ಕೆ ಹತ್ತುಸಾವಿರ ಕೋಟಿ ಹಣ ಮಂಜೂರು ಮಾಡಿಬಿಟ್ಟರು. ಮೀಡಿಯಾದವರು ಇದನ್ನು ಹೈಲೈಟ್ ಮಾಡಿದರೂ ಮತ್ತೆ ಮತ್ತೆ ಮಂಜೂರು ಆಯಿತು. ಅದೇ ಕನರ್ಾಟಕದಲ್ಲಿ ಇಂತಹದು ಏನೇ ಆದರೂ ಮೂರು ಕಾಸೂ ಕೊಡ್ತಿರಲಿಲ್ಲ. ಚೌಕಾಸಿ ಮಾಡಿದರೆ, ಒಂದು ನೂರು ಕೋಟಿ, ಐನೂರು ಕೋಟಿ ಕೊಡ್ತಾ ಇದ್ದರು. ಒಟ್ಟಿನಲ್ಲಿ ರಾಜಕಾರಣದೊಳಗೆ ತಮ್ಮ ರಾಜ್ಯಕ್ಕೆ ಏನು ಉಪಯೋಗವೋ ಅದನ್ನು ನೋಡಿ ಅವರು ರಾಜಕಾರಣ ಮಾಡಿಸ್ತಾರೆ. ಆದರೆ ಕನರ್ಾಟಕದಲ್ಲಿ ಯಾವತ್ತೂ ಇಂತಹದು ಆಗಿಲ್ಲ. ನಾವು ಆ ಪಕ್ಷ ನೀವು ಈ ಪಕ್ಷ ಅಂತ ಬರೀ ಜಗಳ ಆಡಿಕೊಂಡೇ ನಮ್ಮವರು ರಾಜಕೀಯ ನಡೆಸ್ತಾರೆ.

ಕನರ್ಾಟಕದ ಏಕೀಕರಣವಾದಾಗ ನಾವೆಲ್ಲ ಏಕೀಕರಣಕ್ಕೆ ಹೋರಾಡಿದೆವು, ಹೊಡೆದಾಡಿದೆವು ಅಂತ ಕನರ್ಾಟಕದವರು ಹೇಳ್ತಾರೆ. ಆದರೆ ಏಕೀಕರಣ ತಂದುಕೊಟ್ಟವರು ಆಂಧ್ರದ ಕೊಪ್ಪಿ ಶ್ರೀರಾಮುಲು. ಅವರು ಉಪವಾಸ ಮಾಡಿ, ಆಂಧ್ರದವರು ದಂಗೆ ಏಳ್ತಾರೆ ಅನ್ನೋ ಸಂದರ್ಭ ಬಂದಾಗ ಆ ರಾಜ್ಯದ ಬೇಡಿಕೆಯನ್ನು ಒಪ್ಪಿಕೊಂಡರು ಕೇಂದ್ರದವರು. ನಂತರ ಕನರ್ಾಟಕಕ್ಕೂ ಅದನ್ನು ಕೊಡಬೇಕಾಯಿತು. ಆಗಲೂ ಕೂಡಾ ಯಾವ ಯಾವ ಪ್ರದೇಶಗಳನ್ನು ಕನರ್ಾಟಕಕ್ಕೆ ಸೇರಿಸಬೇಕಾಗಿತ್ತೋ ಅದನ್ನು ಸೇರಿಸೋ ಶಕ್ತಿ ನಮ್ಮ ನಾಯಕರಿಗೆ ಇರಲಿಲ್ಲ.

ಇದನ್ನು ನಾವು ಸ್ಪಷ್ಟವಾಗಿ ಒಪ್ಪಿಕೊಳ್ಳಬೇಕು. ಇದೇ ವಾಸ್ತವಾಂಶ. ಅದಿಲ್ಲದಿದ್ದರೆ ಯಾಕೆ ಇಷ್ಟೊಂದು ಪ್ರದೇಶಗಳು ಕನರ್ಾಟಕದ ಹೊರಗಡೆ ಹೋಗಬೇಕಾಗಿತ್ತು? ನಾವು ಎಷ್ಟೊಂದು ಕಳೆದುಕೊಂಡಿದ್ದೀವಿ, ನೋಡಿ. ರಾಜಕೀಯವಾಗಿ ಮೊದಲಿನಿಂದಲೂ ನಾವು ದುರ್ಬಲರೇ ಎಂಬುದನ್ನು ನಾವು ಮೊದಲು ಒಪ್ಪಿಕೊಳ್ಳಬೇಕು. ಅದರರ್ಥ ನಮ್ಮನ್ನು ನಾವು ಬೈದುಕೊಳ್ಳುವುದಂತಲ್ಲ. ನಮಗೆ ಏನು ಬೇಕು ಅನ್ನೊದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ನಮ್ಮ ಜನಕ್ಕೆ, ರಾಜ್ಯಕ್ಕೆ ಏನು ಬೇಕು ಎಂಬುದನ್ನು ನಾವಿನ್ನೂ ಅರ್ಥ ಮಾಡಿಕೊಳ್ತಾನೇ ಇಲ್ಲ.

ಈಗ ಮೈಸೂರು-ಬೆಂಗಳೂರು ರೇಲ್ವೆಗೆ ಎರಡು ಲೈನ್ ಮಾಡಬೇಕು ಅಂತಿದೆ. ಆದರೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಆಯುಧ ಇಡಲು ಮಾಡಿದ್ದ ಕಟ್ಟಡ ಇದೆ. ಡಬಲ್ ಲೈನ್ ಹಾಕಬೇಕಾದರೆ ಅದನ್ನು ಒಡೀಬೇಕಾಗುತ್ತದೆ. ಏಕೆಂದರೆ ಬೇರೆ ಜಾಗ ಇಲ್ಲ. ಶ್ರೀರಂಗಪಟ್ಟಣ ಒಂದು ಸಣ್ಣ ದ್ವೀಪ ಅಷ್ಟೇ. ಹೀಗಾಗಿ ಅದನ್ನು ಒಡಿಲೇಬೇಕು. ಆದರೆ `ಅದನ್ನು ಒಡೀಬಾರದು ಅಂತ ಹೋರಾಡಿ' ಎಂದು ನಮ್ಮ ರಾಜಕಾರಣಿಗಳೇ ಮುಸ್ಲಿಮರಿಗೆ ಹೇಳಿಕೊಟ್ಟಿದ್ದಾರೆ. `ಅದು ಪವಿತ್ರ ಸ್ಥಳ, ಒಡೆಯಲು ಒಪ್ಪಿಗೆ ಕೊಡಬೇಡಿ' ಅಂತ ನಮ್ಮ ರಾಜಕಾರಣಿಗಳೇ ಹೇಳ್ತಾರೆ. ಅದಕ್ಕೇ ಅವರು ಕೊಡೋದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಆಳೋ ಸಕರ್ಾರಕ್ಕೆ ಎಲ್ಲಿ ತಮ್ಮ ವೋಟು ಹೋಗುತ್ತೋ ಅಂತ ಭಯ. ಇದನ್ನು ಮೊದಲು ಸರಿ ಮಾಡದೇ ಇದ್ದರೆ ಡಬಲ್ ಲೈನ್ ಬರೋದಿಕ್ಕೆ ಸಾಧ್ಯ ಇಲ್ಲ. ಅದಕ್ಕೆ ಸ್ವಲ್ಪ ಜಾಗಾ ಒತ್ತುವರಿ ಮಾಡಲೇಬೇಕಾಗುತ್ತದೆ.

ಯಾವ ರೀತಿಯ ರಾಜಕಾರಣ ನಮ್ಮಲ್ಲಿ ನಡೀತಿದೆ ನೋಡಿ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯ ಮುಂದುವರಿಯಬೇಕು ಅನ್ನೋದಾಗಲೀ, ಸಣ್ಣ ಬುದ್ಧಿಯ ರಾಜಕಾರಣ ನಾವು ಮಾಡಬಾರದು ಅನ್ನೋದಾಗಲಿ ಇಲ್ಲಿನ ಬಹುತೇಕ ರಾಜಕಾರಣಿಗಳಿಗೆ ಇಲ್ಲವೇ ಇಲ್ಲ ಅಂತ ನನಗನಿಸುತ್ತೆ.

ಕೈಗಾರಿಕೆ ಮುಂದುವರೀದೆ ಇದ್ರೆ ಯಾವ ರಾಜ್ಯವೂ ಬೆಳೆಯಲು ಸಾಧ್ಯವೇ ಇಲ್ಲ. ತಮಿಳುನಾಡಿನಲ್ಲಿ ಸಾಕಷ್ಟು ಉದ್ಯಮಿಗಳಿದ್ದಾರೆ. ಅದಲ್ಲದೇ ಹೊರಗಿನಿಂದಲೂ ಉದ್ಯಮಿಗಳು ಅಲ್ಲಿಗೆ ಬರ್ತಾರೆ. ಮೊನ್ನೆ ನನಗೆ ಒಬ್ಬರು ತಮಿಳಿನವರು ಸಿಕ್ಕಿದ್ದರು. ಅವರು ಹೇಳ್ತಿದ್ದರು, `ಕನರ್ಾಟಕಕ್ಕೆ ಹೋಲಿಸಿದರೆ ನಮ್ಮಲ್ಲಿ ಸಾಕಷ್ಟು ಬಿಸಿಲು, ಸೆಕೆ. ಬೆವರು ಯಾರಿಗೂ ತಡಿಯೋಕೆ ಆಗೋಲ್ಲ. ಆದರೂ ಉದ್ಯಮಿಗಳು ನಮ್ಮಲ್ಲಿಗೆ ಬರ್ತಾರೆ. ಏಕೆಂದರೆ ಅಷ್ಟೊಂದು ಮೂಲಭೂತ ಸೌಕರ್ಯ ಅಲ್ಲಿ ಕೊಡಲಾಗಿದೆ. ಜಯಲಲಿತಾ ಕಾಲದಿಂದಲೂ ರೈಲು, ಬಸ್ ಬೇಕಾದಷ್ಟಿವೆ' ಎಂದು.

ನಮ್ಮಲ್ಲಿ ಮೂಲಭೂತ ಸೌಕರ್ಯ ಇಲ್ಲವೇ ಇಲ್ಲ. ನಮ್ಮಲ್ಲಿ ಎಲೆಕ್ಟ್ರಿಸಿಟಿ ಅಷ್ಟಾಗಿ ಇಲ್ಲ. ಮೈಸೂರಿನಿಂದ 25 ಕಿ.ಮೀ. ದೂರದಲ್ಲಿ ಥರ್ಮಲ್ ಪವರ್ ಸ್ಟೇಷನ್ ಮಾಡ್ಬೇಕು ಅಂತಾ ಒಂದು ಪ್ರಸ್ತಾಪನೆ ಇತ್ತು. ಆದರೆ ನಮ್ಮ ಪರಿಸರವಾದಿಗಳೇ `ಅದನ್ನು ಮಾಡಿದರೆ ಪರಿಸರಕ್ಕೆ ಹಾನಿಯಾಗುತ್ತೆ, ಬೂದಿ ಬಿದ್ದುಬಿಡುತ್ತದೆ. ಮೈಸೂರಿಗೆ ಸೆಕೆ ಜಾಸ್ತಿ ಬರುತ್ತದೆ, ಶಾಖ ಹೆಚ್ಚಾಗುತ್ತದೆ' ಅಂದೆಲ್ಲ ಅಡ್ಡಗಾಲು ಹಾಕಿದರು. ಆದರೆ ಮೊನ್ನೆ ಅಂದರೆ ಕಳೆದ ವರ್ಷ ನಾನು ಅಹ್ಮದಾಬಾದ್ಗೆ ಹೋಗಿದ್ದೆ. ಆರು ವರ್ಷ ಗುಜರಾತ್ನಲ್ಲಿದ್ದೆ ನಾನು. ಆಗಾಗ್ಗೆ ಅಲ್ಲಿಗೆ ಹೋಗುತ್ತಿರುತ್ತೇನೆ. ಅಲ್ಲಿ ಎರಡು ಥರ್ಮಲ್ ಪ್ಲಾಂಟ್ಗಳೀವೆ. ಅದೂ ನಗರದ ಒಳಭಾಗದಲ್ಲಿ, ಹೊರಗಲ್ಲ. ಒಂದು ಸಬರಮತಿ ಆಶ್ರಮದ ಹತ್ತಿರ, ಇನ್ನೊಂದು ಗಾಂಧಿನಗರದಲ್ಲಿ. ಅಂಥ ಬೇಸಿಗೆಯ ಬಿಸಿ ಇರೋ ನಗರದ ಮಧ್ಯದಲ್ಲಿ ಯಾಕೆ ಅವರು ಥರ್ಮಲ್ ಪವರ್ ಪ್ಲಾಂಟ್ ಹಾಕಿದ್ರು? ಆಧುನಿಕ ತಂತ್ರಜ್ಞಾನ ಅಲ್ಲಿ ಅಭಿವೃದ್ಧಿ ಆಗಿದೆ. ಟಾಟಾ ಕಂಪೆನಿಯವರು ನ್ಯಾನೊ ಕಾರನ್ನು ಬಂಗಾಲದಿಂದ ತೆಗೆದ ಮೇಲೆ ನಮ್ಮವರು `ಧಾರವಾಡದಲ್ಲಿ ನಾವು ಜಾಗಾ ಕೊಡ್ತೀವಿ' ಅಂದ್ರು. ಜಾಗ ಎಲ್ಲಿದೆ? ಒತ್ತುವರಿ ಮಾಡಿಕೊಂಡು ನಂತರ ಕೊಡ್ತೇವೆ ಅಂದ್ರು. ಅದಕ್ಕೆ ವಿದ್ಯುತ್ ಶಕ್ತಿ ಎಲ್ಲಿಂದ ಕೊಡ್ತೀರಿ? ಯಾವಾಗ ಮೂಲಭೂತ ಸೌಕರ್ಯ ಇಲ್ಲವೋ ಅಲ್ಲಿ ಅಭಿವೃದ್ಧಿಯ ಮಾತೇ ಇಲ್ಲ.

ಅದೇ ಸಮಯದಲ್ಲಿ ಗುಜರಾತಿನ ನರೇಂದ್ರ ಮೋದಿ ಸಹ ನ್ಯಾನೋ ಕಂಪೆನಿಗೆ ಆಫರ್ ಕೊಟ್ರು. ಎರಡೂ ಕಡೆ ಪರೀಕ್ಷೆ ಮಾಡಿದ ಟಾಟಾದವರು ಗುಜರಾತ್ ಅನ್ನೇ ಆರಿಸಿದ್ರು. ಯಾಕೆ? ಭೂಸ್ವಾಧೀನ ಮಾಡಿದ ನಂತರ ಜಾಗಾ ಕೊಡ್ತೀವಿ ಅಂತು ನಮ್ಮ ಸಕರ್ಾರ. ಭೂಸ್ವಾಧೀನ ಅಂದ್ರೆ ಸುಮ್ಮನೆಯಲ್ಲ. ವಿಷಯ ಕೊಟರ್ಿಗೆ ಹೋಗುತ್ತೆ. ಕನಿಷ್ಟ 25 ವರ್ಷಗಳನ್ನು ಅದು ತಗೋಳುತ್ತೆ. ಆದ್ರೆ ಮೋದಿ ತಕ್ಷಣವೇ 1000 ಎಕರೆ ಜಮೀನು ಕೊಡಿಸಿದ್ರು. ಹೇಗೆ? ಅಲ್ಲಿನ ರೈತರಿಗೆ `ಇದ್ರಿಂದ ಇಂತಿಂಥಾ ಪ್ರಯೋಜನವಿದೆ. ಕೃಷಿಗಿಂತ ಇದರಲ್ಲಿ ಹೆಚ್ಚಿನ ಲಾಭ ಇದೆ, ನಿಮಗೂ ನೌಕರಿ, ಲಾಭ ಇದೆ' ಅಂತೆಲ್ಲ ಸರಿಯಾಗಿ ತಿಳಿಹೇಳಿದ್ರು. ಗುಜರಾತ್ ಜನ ಪಕ್ಕಾ ವ್ಯವಹಾರಸ್ಥರು. ವ್ಯಾಪಾರದಲ್ಲಿ ಮುಂದುವರೆದ ಜನರು. ತಕ್ಷಣ ಒಪ್ಪಿಕೊಂಡ್ರು. ಮತ್ತು ಇದರಲ್ಲಿ ಸಕರ್ಾರದ ಮಧ್ಯಸ್ಥಿಕೆ ಇರಲಿಲ್ಲ. ರೈತರೇ ನೇರವಾಗಿ ಟಾಟಾ ಕಂಪೆನಿಯವರೊಂದಿಗೆ ವ್ಯವಹಾರ ಮಾಡಲು ಬಿಡಲಾಯಿತು. ಇದನ್ನು ಜನರು ಅರ್ಥ ಮಾಡಕೊಂಡ್ರು. ಕಂಪೆನಿ ಜೊತೆ ನೇರವಾಗಿ ಮಾತಾಡಿ ಜಮೀನನ್ನು ಲಾಭದ ಬೆಲೆಗೆ ಮಾರಿದರು. ಈಗ ನ್ಯಾನೋ ಕಾರು ತಯಾರಾಗಿ ಹೊರಬರಲು ಪ್ರಾರಂಭಿಸಿದೆ.

ನಮ್ಮಲ್ಲಿ ಇಂತಹದ್ದೇನಿದೆ? ಇಂತಹ ನಾಯಕರು ನಮ್ಮಲ್ಲಿ ಯಾಕಿಲ್ಲ? ದಿನಾ ಕಾದಾಟ, ಕಚ್ಚಾಟ ಬಿಟ್ರೆ ಏನಿದೆ ನಮ್ಮಲ್ಲಿ? ಈಗಂತೂ ನನಗೆ ಬೆಳಗಿನ ಪೇಪರ್ ಓದಲೂ ಅಸಹ್ಯವೆನಿಸುತ್ತದೆ. ಟಿ.ವಿ. ನ್ಯೂಸ್ ನೋಡಲೂ ಬೇಸರವಾಗುತ್ತದೆ. ಏನಿದೆ ನಮ್ಮಲ್ಲಿ? ಡೆವಲಪ್ಮೆಂಟ್ ಆಗಲಿ, ಹೀಗೆ ಮಾಡಿದರೆ ಹೀಗೆ ಆಗುತ್ತದೆ ಅನ್ನೋ ಅರ್ಥಶಾಸ್ತ್ರದ ರೀತಿಯ ವಿಚಾರ ಏನಿದೆ ಇಲ್ಲಿ? ತಿಳಿದವರು ಏನು ಮಾಡಬೇಕು ಅಂತಾ ಚಚರ್ೆ ಮಾಡ್ಬೇಕು. ಆದ್ರೆ ಅದು ಆಗ್ತಿದೆಯಾ?

ವಿಶ್ವಕನ್ನಡ ಸಮ್ಮೇಳನದ ಈ ಸಂದರ್ಭದಲ್ಲಿ ನಾನು ಹೇಳೋದೇನೆಂದರೆ, ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ಆಗ್ತಾನೇ ಇರುತ್ತೆ. ಬೆಳಗಾವಿನಲ್ಲೂ ದೊಡ್ಡ ಪ್ರಮಾಣದಲ್ಲಿ ಈಗ ಒಂದು ಸಮ್ಮೇಳನ ಆಗುತ್ತೆ ಅಷ್ಟೆ. ನಮಗೆ ಸಾವಿರ, ಎರಡು ಸಾವಿರ ವರ್ಷದ ಇತಿಹಾಸ ಇದೆ, ಪಂಪನಿಂದ ಆರಂಭವಾಗಿದ್ದು, ಹಾಗೆ ಹೀಗೆ ಅಂತ ಹೇಳಿಕೊಳ್ಳುವುದರಿಂದ ಮಾತ್ರವೇ ಏನು ಪುರುಷಾರ್ಥ ಸಾಧಿಸಿದಂತಾಗುತ್ತೆ? ಬದಲಾಗಿ ನಮ್ಮ ಕನರ್ಾಟಕ ಈಗ ಆಥರ್ಿಕವಾಗಿ ಅಭಿವೃದ್ಧಿ ಹೊಂದಲು ಏನು ಬೇಕು ಎಂಬುದನ್ನು ಆಲೋಚನೆ ಮಾಡಬೇಕು. ಮತ್ತು ಅದಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು. ಇದನ್ನು ಎಲ್ಲ ರಾಜಕಾರಣಿಗಳೂ ಅರ್ಥ ಮಾಡಿಕೊಳ್ಳಬೇಕು. ಈ ಥರದಲ್ಲಿ ಸೆಮಿನಾರ್ಗಳು ಆಗ್ಬೇಕು.

ಎಲ್ಲಿಯವರೆಗೆ ನಾವು ಆಥರ್ಿಕವಾಗಿ ಸದೃಢವಾಗಿರುವುದಿಲ್ಲವೋ ಅಲ್ಲಿಯವರೆಗೆ ನಾವು ಸಾಂಸ್ಕೃತಿಕವಾಗಿ ಕೂಡಾ ಸದೃಢವಾಗಲು ಸಾಧ್ಯವಿಲ್ಲ. ಈಗ ನೋಡಿ, ಹಿಂದೆ ನ್ಯಾಷನಲ್ ಹೆಲ್ತ್ ಸ್ಕೀಮಿನ ವತಿಯಿಂದ ಡಾಕ್ಟರ್ಗಳಾಗಿ ಕನರ್ಾಟಕದಿಂದ ಸುಮಾರು ಜನ ಇಂಗ್ಲೆಂಡ್ಗೆ ಹೋದರು. ಅವರು ಅಲ್ಲಿ ಸೆಟಲ್ ಆಗೋದರ ಜೊತೆಗೆ ತಮ್ಮ ಮಕ್ಕಳನ್ನೂ ಸಂಪೂರ್ಣವಾಗಿ ಬ್ರಿಟಿಷರನ್ನಾಗಿ ಮಾಡಿದರು. ಮನೆಯಲ್ಲಿ ಗಂಡ ಹೆಂಡತಿ ಸ್ವಲ್ಪ ಕನ್ನಡ ಮಾತನಾಡಿದರೂ ಮಕ್ಕಳ ಜೊತೆಗೆ ಮಾತ್ರ ಬರೀ ಇಂಗ್ಲೀಷ್. ಇದರಿಂದ ಸಂಪೂರ್ಣವಾಗಿ ಅವರು ಬ್ರಿಟಿಷರೇ ಆಗಿಬಿಟ್ಟರು. ಆದರೆ ಗುಜರಾತಿನವರು ಏನು ಮಾಡಿದ್ರು? ಅವರು ಕೇವಲ ನೌಕರಿ ನೆಚ್ಚಿಕೊಂಡು ಅಲ್ಲಿಗೆ ಹೋದವರಲ್ಲ. ಅವರು ಜೀವನೋಪಾಯಕ್ಕಾಗಿ ಸೂಪರ್ ಮಾಕರ್ೆಟ್ ಥರಾ ಎಲ್ಲಾ ತರಹದ ಸಾಮಗ್ರಿಗಳೂ ಸಿಗುವ ಕಾರ್ನರ್ ಶಾಪ್ಗಳನ್ನು ಶುರು ಮಾಡಿದರು. ನೌಕರರನ್ನು ಇಟ್ಟುಕೊಳ್ಳದೇ ಮಾಲೀಕರು ಮಧ್ಯರಾತ್ರಿಯಾದರೂ ತಾವೇ ಸ್ವತಃ ಕೆಲಸ ಮಾಡಿದರು. ಮನೆಯಿಂದಲೇ ಚಪಾತಿ ತರಿಸಿ ತಿಂದು ಅಂಗಡಿ ತೆರೆದಿಡುತ್ತಿದ್ದರು. ರಾತ್ರಿ ಎಷ್ಟೇ ತಡವಾಗಿ ಬಂದರೂ ಇವರ ಅಂಗಡಿ ತೆರೆದಿರುತ್ತದೆ ಅನ್ನೋದು ಗೊತ್ತಾದಾಗ ಗ್ರಾಹಕರು ಇಲ್ಲಿಗೆ ಬರಲಾರಂಭಿಸಿದರು. ಹೀಗಾಗಿ ಇವರು ಚೆನ್ನಾಗಿ ಸಂಪಾದನೆ ಮಾಡಲು ಆರಂಭಿಸಿ ಕ್ರಮೇಣ ರಿಯಲ್ ಎಸ್ಟೇಟ್ ಪ್ರಾಪಟರ್ಿ ಪಚರ್ೇಸ್ ಮಾಡಲು ಆರಂಭಿಸಿದರು. ನಂತರ ದೊಡ್ಡ ದೊಡ್ಡ ಅಂಗಡಿಗಳನ್ನು ತೆರೆದು ಅಥರ್ಿಕವಾಗಿ ಪ್ರಬಲರಾದರು. ಈಗ ಇಂಗ್ಲೆಂಡ್ನಂಥ ಸಣ್ಣ ದೇಶದಲ್ಲೇ ಎರಡೆರಡು ಗುಜರಾತಿ ಭಾಷೆಯ ಪತ್ರಿಕೆಗಳನ್ನು ಮೂರನೇ ಪೀಳಿಗೆಯ ಗುಜರಾತಿಗಳು ನಡೆಸುತ್ತಿದ್ದಾರೆ. ದಸರಾ ಬಂದಾಗ ಈಗಲೂ ಅಲ್ಲಿರೋ ಗುಜರಾತಿ ಮಹಿಳೆಯರು ಗಭರ್ಾ ನೃತ್ಯ ಮಾಡುತ್ತಾರೆ. ಇದರಲ್ಲಿ ಮೂರನೇ ಪೀಳಿಗೆ ಜನರೂ ಶಾಮೀಲಾಗುತ್ತಾರೆ. ಅಷ್ಟೇ ಅಲ್ಲ, ಇಂಗ್ಲೆಂಡಿನಲ್ಲಿರೋ ಗುಜರಾತಿಗಳು ಗುಜರಾತ್ಗೆ ಬರೋದು, ಗುಜರಾತ್ನಲ್ಲಿರೋರು ಇಂಗ್ಲೆಂಡ್ಗೆ ಹೋಗೋದು ತುಂಬಾ ಕಾಮನ್. ಅಹ್ಮದಾಬಾದ್ನಲ್ಲಂತೂ ಬ್ರಿಟಿಷ್ ಏರವೇಸ್ ಫ್ಲೈಟ್ ದಿನಾ ಅಲ್ಲಿಂದ ಗುಜರಾತ್ಗೆ ಹೋಗುತ್ತೆ. ಅಲ್ಲಿ ಅನೌನ್ಸ್ಮೆಂಟ್ ಎಲ್ಲಾ ಗುಜರಾತಿನಲ್ಲೇ ನಡೆಯುತ್ತೆ. ಯಾರೊಬ್ಬರೂ ಇಂಗ್ಲೀಷ್ ಮಾತಾಡೋಲ್ಲ. ವರ್ಷಕ್ಕೆ ನಾಲ್ಕು ಬಾರಿ ಭಾರತಕ್ಕೆ ಬರ್ತಾರೆ, ದಿನಕ್ಕೆ ನಾಲ್ಕು ಬಾರಿ ಭಾರತದಲ್ಲಿರೋ ಸಂಬಂಧಿಗಳಿಗೆ ಫೋನ್ ಮಾಡ್ತಾರೆ. ಆ ಖರ್ಚನ್ನೆಲ್ಲ ಅಂಗಡಿ ವೆಚ್ಚಕ್ಕೆ ಹಾಕ್ತಾರೆ. ಇಂಗ್ಲೆಂಡಿನಲ್ಲಿರೋ ಗುಜರಾತಿಗಳು ಆಥರ್ಿಕವಾಗಿ ಸದೃಢರು. ಭಾರತದಲ್ಲಿರೋರೂ ಪ್ರಬಲರೇ. ಹೀಗಾಗಿ ಸಾಂಸ್ಕೃತಿಕವಾಗಿಯೂ ಅವರು ಪ್ರಬಲರೇ ಆಗಿದ್ದಾರೆ.

ಆದರೆ ನಮ್ಮ ಕನರ್ಾಟಕದವರು ತಮ್ಮ ಮಕ್ಕಳಿಗೆ ಕನ್ನಡ ಕಲಿಸೋಲ್ಲ. ನೌಕರಿ ನೆಚ್ಚಿಕೊಂಡಿರೋ ನಮ್ಮವರಿಗೆ ವರಮಾನವೂ ಸೀಮಿತವಾಗೇ ಇರುತ್ತದೆ. ಹೀಗಾಗಿ ಅಲ್ಲಿ ವಾಸಿಸೋ ಕನ್ನಡದವರನ್ನು ಅವರ ಸಂಬಂಧಿಗಳು ಹೋಗಿ ಭೇಟಿಯಾಗೋದು ಕಷ್ಟವೇ. ಇಷ್ಟೆಲ್ಲಾ ಯಾಕೆ ಹೇಳ್ತಾ ಇದೀನಿ ಅಂದ್ರೆ ಸಾಂಸ್ಕೃತಿಕವಾಗಿ ನಾವು ಪ್ರಬಲರಾಗಬೇಕೆಂದರೆ ಮೊದಲು ನಾವು ಆಥರ್ಿಕವಾಗಿ ಸಶಕ್ತರಾಗಲೇಬೇಕು.

ಈಗ ಅವಲಂಬನೆಯಾಗ್ತಿರೋದು ಅಂದರೆ ಕೇವಲ ಸಾಫ್ಟವೇರ್. ಆದರೆ ವಿದೇಶಿ ಕಂಪೆನಿಗಳವರು ಇಂಗ್ಲೀಷ್ನಲ್ಲಿ ಮಾತಾಡಿದಾಗ ನಮ್ಮ ಹುಡುಗರೂ ಇಂಗ್ಲೀಷ್ನಲ್ಲೇ ಮಾತಾಡಬೇಕು. ಸಾಂಸ್ಕೃತಿಕವಾಗಿ ಅವರು ತಮ್ಮನ್ನು ತಾವು ಮಾರಿಕೊಂಡವರು. ಅದಕ್ಕೆ ಸಾಫ್ಟವೇರ್ ಅನ್ನುವುದು ಒಂದು ಸ್ವತಂತ್ರ ಉದ್ಯಮ ಅಲ್ಲವೇ ಅಲ್ಲ.

ಜಪಾನಿನವರು ಎರಡನೆ ವಿಶ್ವ ಸಮರವಾದ ನಂತರ ಆಥರ್ಿಕವಾಗಿ ಎಷ್ಟು ಗಟ್ಟಿಯಾದರೆಂದರೆ ಅಮೆರಿಕದ ಕಾರು ಇಂಡಸ್ಟ್ರಿ, ಎಲೆಕ್ಟ್ರಾನಿಕ್ ಇಂಡಸ್ಟ್ರಿ ಎಲ್ಲವನ್ನೂ ತಮ್ಮ ಕೈಯಲ್ಲಿ ಹಿಡಕೊಂಡ್ರು. ಅಷ್ಟೇ ಅಲ್ಲ ನ್ಯೂಯಾಕರ್ಿನ ಮ್ಯಾನಹಟನ್ ಮಲ್ಟೀಸ್ಟೋರಿ ಬಿಲ್ಡಿಂಗ್ಗಳನ್ನೆಲ್ಲ ಕೊಂಡುಕೊಂಡ್ರು. ವ್ಯವಹಾರಕ್ಕಾಗಿ ಮಾತ್ರ ಜಪಾನಿನವರು ಇಂಗ್ಲಿಷ್ ಕಲಿತರು. ಆದರೆ ಅವರು ತಮ್ಮ ಸಂಸ್ಕೃತಿಯನ್ನು ಬಿಡಲಿಲ್ಲ.

ಆದ್ದರಿಂದ ಮೊದಲು ನಾವು ಆಥರ್ಿಕವಾಗಿ ಪ್ರಬಲರಾಗುವುದು ಮುಖ್ಯ. ಅದರ ಜೊತೆಗೆ ನಮ್ಮ ಸಂಸ್ಕೃತಿಯ ಪರಿಜ್ಞಾನವೂ ನಮಗಿರಬೇಕು. ಸುಮಾರು 40 ವರ್ಷದ ಹಿಂದಿನ ಮಾತು. ಬೆಂಗಳೂರಿನಲ್ಲಿ ಕಾಟನ್ಪೇಟೆ, ಬಳೆಪೇಟೆ, ಅಕ್ಕಿಪೇಟೆ ಇದೆಯಲ್ಲ? ಅಲ್ಲಿನ ಓನರ್ಗಳೆಲ್ಲ ಗುಜರಾತಿಗಳು. ಅವರು ಲೆಕ್ಕ ಬರೆಯೋದು ಗುಜರಾತಿ ಭಾಷೆಯಲ್ಲಿ. ಲೆಕ್ಕ ಬರೆಯೋರು ಯಾರು ಗೊತ್ತೇ? ಕನ್ನಡಿಗರು! ಲೆಕ್ಕ ಬರೆಯೋವಷ್ಟು ಗುಜರಾತಿ ಭಾಷೆ ಕಲಿತು ನಮ್ಮ ಕನ್ನಡಿಗರು ಅವರ ಕೈಕೆಳಗೆ ಕೆಲಸ ಮಾಡಿ ಬರೆಯೋದು. ಹೀಗೆ ಬರೀ ಲೆಕ್ಕ ಬರೆಕೊಂಡು ಕೂರೋದು ಯಾಕೆ? ಇವತ್ತು ನಮ್ಮ ಕನರ್ಾಟಕಕ್ಕೆ ಬೇಕಾಗಿರೋದು ಆಥರ್ಿಕ ಪ್ರಾಬಲ್ಯ. ಈಗ ಟಿ.ವಿ.ನೇ ತಗೊಳ್ಳಿ. ಎಲ್ಲ ಚಾನೆಲ್ಗಳಲ್ಲೂ ಮಧ್ಯಾಹ್ನ ಅಡಿಗೆ ಬಗ್ಗೆ ಕಾರ್ಯಕ್ರಮ ಬರುತ್ತೆ. ಅದರಲ್ಲಿ ಶೇ.75ರಷ್ಟು ಇಂಗ್ಲೀಷೇ ಇರುತ್ತೆ. ಇಂಗ್ಲಿಷ್ ಬಳಸ್ಬೇಡಿ ಅಂತಾ ದಬಾಯಿಸಿ ಹೇಳೋ ಹಕ್ಕೇ ನಮಗಿಲ್ಲ. ಏಕೆಂದರೆ ಆ ಚ್ಯಾನೆಲ್ಗಳ ಓನರುಗಳು ಕನ್ನಡದವರಲ್ಲ.

ವಿಶ್ವೇಶ್ವರಯ್ಯ ದಿವಾನರಾಗಿದ್ದಾಗ ಎಕನಾಮಿಕ್ಸ್ ಕಾನ್ಫರೆನ್ಸ್ ಪ್ರಾರಂಭಿಸಿದ್ರು. ಏಕೆಂದರೆ ನಮ್ಮಲ್ಲಿ ಯಾವ ಯಾವ ರೀತಿಯ ಆಥರ್ಿಕ ಅಭಿವೃದ್ಧಿ ಆಗಬೇಕು ಅನ್ನೋದು ಜನರಿಗೆ ತಿಳಿಸಲು. ಕನ್ನಡ ಸಾಹಿತ್ಯ ಪರಿಷತ್ತನ್ನೂ ಸ್ಥಾಪನೆ ಮಾಡಿದ್ದೂ ಅವರೇ. ಆದರೆ ಅವರ ಹೆಸರನ್ನು ಇವತ್ತು ಯಾರೂ ಹೇಳೋಲ್ಲ. ಆಮೇಲೆ ಅಸೆಂಬ್ಲಿ ಅಂತ ಇತ್ತು. ಅಲ್ಲಿ ಕನ್ನಡದಲ್ಲಿ ಚಚರ್ೆ ಮಾಡಿಸಲು ಶುರು ಮಾಡಿದೋರು ವಿಶ್ವೇಶ್ವರಯ್ಯನವರು. ಕನ್ನಡಿಗರಿಗೆ ಅದೆಲ್ಲ ತಿಳೀಬೇಕು ಅಂತ. ತಿಪಟೂರಿನಲ್ಲಿ ತೆಂಗಿನ ಚಿಪ್ಪು ಸೌದೆಗೆ ಉಪಯೋಗಿಸಿ ವೇಸ್ಟ್ ಮಾಡ್ತೀರಿ ಅದರಲ್ಲಿ ಕಾಯರ್ ಇಂಡಸ್ಟ್ರಿ ಮಾಡಬಹುದು ಅಂತ ಐಡಿಯಾ ಕೊಟ್ಟವರು ವಿಶ್ವೇಶ್ವರಯ್ಯನವರು. ಅಷ್ಟೇ ಅಲ್ಲ ಜನಪ್ರತಿನಿಧಿಯಾಗಿ ಬಂದವರಿಗೆ ಹೀಗೆಲ್ಲ ಆಲೋಚನೆ ಮಾಡೋದಕ್ಕೆ ಯಾಕೆ ಬರಲ್ಲ ಎಂದೂ ಅವರು ದಬಾಯಿಸಿದ್ದರು. ಅವರ ತರಹದ ಚಿಂತನೆಗಳು ನಮಗೆ ಮಾದರಿಯಾಗಬೇಕು.

ಕನರ್ಾಟಕದವರಿಗೆ ಸಂಕೋಚದ ಸ್ವಭಾವ. ವೈಯಕ್ತಿಕವಾಗಿ ಮಾಡುವ ಸಾಮಥ್ರ್ಯವಿದ್ದರೂ ಇನ್ನೊಬ್ಬರ ಪ್ರೇರಣೆ, ಪ್ರೋತ್ಸಾಹವನ್ನು ಎದುರು ನೋಡುವ ದೌರ್ಬಲ್ಯ. ಕನರ್ಾಟಕದ ಆತ್ಮಬಲವನ್ನು ಕಂಡುಕೊಳ್ಳಲು ಇಂತಹ ಸಮ್ಮೇಳನಗಳ ಬಳಕೆಯಾಗಬೇಕು. ಮುಖ್ಯವಾಗಿ ಕನರ್ಾಟಕದ ಉದ್ಯಮಿಗಳು ಒಟ್ಟು ಸೇರಿ ನಾವು ಹೇಗೆ ಬೆಳೀಬೇಕು ಎಂಬುದನ್ನು ಚಚರ್ಿಸಲು ಮುಂದೆ ಬರಬೇಕು. ಚಚರ್ೆ ಮಾಡಿ ನಿಧರ್ಾರ ತಗೋಳ್ಳಬೇಕು. ತಮಿಳುನಾಡಿನಲ್ಲಿ ತಮಿಳು ಉದ್ಯಮಿಗಳು ತಕ್ಕಮಟ್ಟಿಗೆ ಇದ್ದರೂ ಬೇರೆ ಬೇರೆ ರಾಜ್ಯದ ಉದ್ಯಮಿಗಳೂ ಇದ್ದಾರೆ. ಅವರೂ ತಮಿಳರೇ ಆಗುತ್ತಾರೆ. ಹೊರಗಡೆಯಿಂದ ಯಾರೇ ಬಂದರೂ ಅಲ್ಲಿನ ನಾಯಕರು ಸವಲತ್ತು ಕೊಡುತ್ತಾರೆ. ಆದರೆ ಲೇಬರ್ ಫೋಸರ್್ ಮಾತ್ರ ಅವರದೇ. ಕೆಲಸಕ್ಕೆ ತಮಿಳಿನವರನ್ನೇ ತೆಗೆದುಕೊಳ್ಳುವಂಥ ಒತ್ತಡದ ಸ್ಥಿತಿಯನ್ನು ನಿಮರ್ಾಣ ಮಾಡುತ್ತಾರೆ. ಕಾನೂನು ಮಾಡೋಲ್ಲ. ಆದರೆ ಬೇರೆಯವರನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ಇದಕ್ಕೆಲ್ಲ ಬೇಕಾದದ್ದು ರಾಜಕೀಯ ಸಂಕಲ್ಪ ಶಕ್ತಿ ಅಷ್ಟೇ. ಇದು ನಮ್ಮಲ್ಲಿ ಯಾಕೆ ಮಾಡೋಲ್ಲ?

ದೆಹಲಿಯ ಕನರ್ಾಟಕ ಭವನದಲ್ಲಿ ನಮ್ಮ ಕನರ್ಾಟಕದ ಸಮಸ್ಯೆಗಳನ್ನು ರೆಪ್ರಸೆಂಟ್ ಮಾಡಲೋ ಅಥವಾ ಅಲ್ಲಿರುವ ಅನುಕೂಲಗಳನ್ನು ನಮಗೆ ತಿಳಿಸಲೋ ಅಲ್ಲೊಬ್ಬ ಸಕರ್ಾರಿ ಪ್ರತಿನಿಧಿ ಇರುತ್ತಾನೆ. ಆ ಥರಾನೇ ತಮಿಳು ಅಧಿಕಾರಿಗಳೂ ಸೆಂಟರ್ನಲ್ಲಿದ್ದಾರೆ. ಮಲಯಾಳಿಗಳೂ ಬೇಕಾದಷ್ಟು ಜನ ಇದ್ದಾರೆ. ಅವರು ಯಾವ ಕ್ಷೇತ್ರದಲ್ಲಿ ಎಷ್ಟು ಫಂಡ್ ಖಚರ್ಾಗದೇ ಉಳಿದಿದೆ ಇತ್ಯಾದಿಗಳನ್ನು ಸಂಗ್ರಹಿಸಿ ತಮ್ಮ ರಾಜ್ಯ ಸಕರ್ಾರಕ್ಕೆ ತಿಳಿಸಿಬಿಡುತ್ತಾರೆ. ಇವರು ಅದನ್ನು ನಮಗೆ ಕೊಡಿ ಅಂತ ಒತ್ತಡ ತರುತ್ತಾರೆ. ಇದು ಬ್ಯೂರೋಕ್ರಾಸಿ ಲೆವೆಲ್ನಲ್ಲಿ ಮಾಡಬೇಕಾದ ಕೆಲಸ. ಅದರೆ ನಮ್ಮ ಕನರ್ಾಟಕ ಭವನದ ಐಎಎಸ್ ಅಧಿಕಾರಿ ಅಂತಾ ಮಾಡಿದ್ದಾರಲ್ಲ. ಆತ ಏನು ಮಾಡ್ತಾನೆ? ಯಾವನೋ ಒಬ್ಬ ಇಲ್ಲಿನ ಚೀಫ್ ಸೆಕ್ರೆಟರಿಗೆ, `ನನಗೆ ಅಲ್ಲಿ ಹಾಕಿ. ನಂಗೆ ಸ್ವಲ್ಪ ಡೊಮೆಸ್ಟಿಕ್ ಪ್ರಾಬ್ಲಮ್ ಇದೆ' ಅಂತ ಹೇಳಿ ಅಲ್ಲಿಗೆ ಹಾಕಿಸಿಕೊಳ್ಳುತ್ತಾನೆ. ಅವನಿಗೆ ಡೆಲ್ಲಿ ವಾಸ, ಕನರ್ಾಟಕದ ಸಂಬಳ. ಅಲ್ಲಿ ಕಾರು, ಬಂಗಲೆ ಎಲ್ಲ ಪಡೀತಾನೆ ಅಷ್ಟೇ. ಆದರೆ ಆತನಿಗೆ ಕನರ್ಾಟಕದ ಬಗ್ಗೆ ಅಥವಾ ಇಲ್ಲಿನ ಸಮಸ್ಯೆಗಳ ಬಗ್ಗೆ ಏನು ತಿಳಿದಿರುತ್ತದೆ? ಅವನು ಮಾಡೋದೇನು? ಚೀಫ್ ಮಿನಿಸ್ಟರ್ ಬಂದಾಗ ಅಥವಾ ಯಾವುದೇ ಸಚಿವರು ಬಂದಾಗ ಮಾತ್ರ ಸ್ವಲ್ಪ ಕೆಲಸ ಮಾಡ್ತಾನೆ. ಇದನ್ನು ನಮ್ಮ ಮಿನಿಸ್ಟರುಗಳು, ಸಕರ್ಾರ ಯೋಚನೆ ಮಾಡಬಾರದೇ?

ಇನ್ನೊಂದು ಏನೆಂದರೆ ಇಂಜಿನಿಯರೀಂಗ್ ಕಾಲೇಜುಗಳು ನಮ್ಮಲ್ಲಿ ಜಾಸ್ತಿಯಾಗಿ ಯುವಜನತೆ ಅಲ್ಲಿ ನುಗ್ಗಲು ಶುರು ಮಾಡಿದರು. ಹೀಗಾಗಿ ಐಎಎಸ್ ಕೇಡರ್ನಲ್ಲಿ ಕನರ್ಾಟಕದವರೂ ಅಷ್ಟಾಗಿ ಇಲ್ಲವೇ ಇಲ್ಲ. ಆಡಳಿತಾತ್ಮಕ ಮಟ್ಟದಲ್ಲಿ ಕನ್ನಡದವರೇ ಇಲ್ಲ. ಹೊರಗಿನಿಂದ ಬಂದವರಿಗೆ ಏನು ಗೊತ್ತಾಗುತ್ತೆ? ಈಗ ತೆಲುಗುನವರು, ಬಿಹಾರ್ನವರು ಮುಂದೆ ಬರುತ್ತಿದ್ದಾರೆ. ಕನ್ನಡದವರು ಮಾತ್ರ ಮುಂದೆ ಬರುತ್ತಿಲ್ಲ. ತೆಲುಗಿನ ಸ್ವಾಭಿಮಾನ ಅನ್ನೋದಿದೆಯಲ್ಲ, ಎನ್ ಟಿ ರಾಮರಾವ್ ಅವರು ತೆಲುಗಿನ ಸ್ವಾಭಿಮಾನವನ್ನು ಬಡಿದೆಬ್ಬಿಸಿದರು. ದೊಡ್ಡ ಕೆಲಸ ಮಾಡಿದರು. ಒಂದೇ ಪಕ್ಷ, ಒಂದೇ ಗುಲಾಮಗಿರಿ, ಸೆಂಟ್ರಲ್ನಲ್ಲಿ ಕೈಮುಗಿದುಕೊಂಡು ದೈನೇಸಿಯಲ್ಲಿ ದೇಶ ಆಳೋದು ಯಾವ ದೇಶಕ್ಕೂ, ರಾಜ್ಯಕ್ಕೂ ಒಳ್ಳೆಯದಲ್ಲ. ಎನ್ಟಿಆರ್ ನಟನಾಗಿ ಅವರು ಜನತೆಯ ಮನಸ್ಸನ್ನು ಗೆದ್ದಿದ್ದರು. ಅಂತಹ ಶಕ್ತಿಯಾಗಲಿ, ಪರ್ಸನಾಲಿಟಿ ಸ್ಟ್ರೆಂತ್ ಆಗಲೀ ನಮ್ಮಲ್ಲಿಲ್ಲ. ನಂತರ ಅವರು ತಮ್ಮ ಅಳಿಯ ಚಂದ್ರಬಾಬು ನಾಯಿಡು ಅವರನ್ನು ಬಿಟ್ಟು ಅವರು ರಾಷ್ಟ್ರ ರಾಜಕಾರಣಕ್ಕೆ ಹೋದರು. ನಾಯಿಡು ಅತ್ಯುತ್ತಮ ಆಡಳಿತಗಾರ. ಈ ಕಾರಣದಿಂದಲೇ ಅವರು ಆಂಧ್ರವನ್ನು ಮುಂದೆ ತಂದರು. ಆದರೆ ಅವರ ಕುಟುಂಬದಲ್ಲೇ ಒಡಕು ಬಂದು ಎನ್ಟಿಆರ್ ತಮ್ಮ ಇಮೇಜ್ ಕಳೆದುಕೊಂಡರು. ಇದು ಆಂಧ್ರದ ದುರಾದೃಷ್ಟ.

ಬ್ಯೂರಾಕ್ರಸಿ ಅನ್ನೊದು ತಮಿಳುನಾಡಿನಲ್ಲಿ ಅಣ್ಣಾದೊರೈ ಆಳ್ವಿಕೆಯಲ್ಲಿದ್ದಾಗಲೂ ಕಂಡು ಬಂದಿತ್ತು. ಆಗಿನಿಂದಲೂ ಒಟ್ಟಾರೆ ಅಲ್ಲಿ ತಮಿಳು ವಾತಾವರಣ, ತಮಿಳು ಬಾಷೆಯ ಪ್ರಯೋಗ, ತಮಿಳರಿಗೆ ಆದ್ಯತೆ ಅಲ್ಲಿ ಸಿಗಲಾರಂಭಿಸಿತು. ನಂತರ ಎಲ್ಲ ಸಕರ್ಾರಗಳೂ ಅದೇ ಮಾದರಿ ಅನುಸರಿಸಿದವು. ಶಾಸನವಿಲ್ಲದೇ ತಮಿಳು ವಾತಾವರಣ ನಿಮರ್ಾಣವಾಯಿತು. ಈ ಮಾದರಿಯನ್ನು ನಾವು ಕನರ್ಾಟಕದಲ್ಲೂ ಅಳವಡಿಸಿಕೊಳ್ಳುವುದು ಈಗಿನ ಸಂದರ್ಭಕ್ಕೆ ಸೂಕ್ತವಲ್ಲವೆ?

ನಮ್ಮಲ್ಲೂ ನರೇಂದ್ರ ಮೋದಿ ತರಹಾ ಸ್ಟ್ರಾಂಗ್ ಲೀಡರ್ ಬರಬೇಕು ಅನ್ನುತ್ತಾರೆ. ಆದರೆ ನಾವು ಅಪೇಕ್ಷೆ ಪಟ್ಟಂತೆ ಲೀಡರ್ ಬರೋದಿಲ್ಲ. ಮೋದಿ ಗುಜರಾತಿನಲ್ಲಿ ಹುಟ್ಟಿದ್ದು ಒಂದು ಆಕಸ್ಮಿಕ. ನಮ್ಮಲ್ಲಿ ಹುಟ್ಟಲಿಲ್ಲ ಅನ್ನೊದೂ ಒಂದು ಆಕಸ್ಮಿಕ. ಎಲ್ಲಕ್ಕಿಂತಲೂ ಮುಖ್ಯವೆಂದರೆ ಆತ ಬ್ರಹ್ಮಚಾರಿಯಾಗಿದ್ದು ಆತನ ಇಮೇಜ್ ಬೆಳೆಯಲು ಕಾರಣವಾಯಿತು. ಸ್ವಂತಕ್ಕೆ ಏನೂ ಆಸ್ತಿ ಮಾಡಬೇಕೆಂದೇನು ಅವರಿಗಿಲ್ಲ. ಅದಕ್ಕೆ ರಾಜ್ಯಕ್ಕೆ ಏನು ಪ್ರಗತಿ ಬೇಕು ಎಂಬ ಯೋಚನೆ ಮಾಡಿದ್ದಾರೆ. ಎರಡನೆಯದಾಗಿ ಅವರು ಗಾಣಿಗರ ಸಮುದಾಯದವರು. ದೊಡ್ಡ ಉದ್ಯಮಿಯಲ್ಲ. ಬಡತನ ಕಂಡವರು, ಬಲ್ಲವರು. ಆರಂಭದೊಳಗೆ ಆತನಿಗೂ ಸೆಲ್ಫ್ ಡೆವಲಪ್ಮೆಂಟ್ ಕಷ್ಟವೇ ಆಗಿತ್ತು. ಪವರ್ ಸಿಕ್ಕ ಕೂಡಲೇ ಆತ ಡೆವಲಪ್ಮೆಂಟ್ ಶುರು ಮಾಡಿಬಿಟ್ರು. ಗುಜರಾತಿನವರು ಬುದ್ಧಿವಂತರು. ಆಥರ್ಿಕವಾಗಿ ಏನು ಮಾಡಿದರೆ ಏನಾಗುತ್ತೆ ಅನ್ನೋದು ತಿಳಕೊಂಡು ಅವನನ್ನು ನಂಬಿದರು. ಮೋದಿ ಅವರು ತಮ್ಮ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡರು. ಆತ ನಾಲ್ಕೂವರೆಗೆ ಎದ್ದು ಯೋಗಾಸನ, ಪ್ರಾಣಾಯಾಮ ಮಾಡ್ತಾರೆ. ಸ್ನಾನಾ ಮುಗಿಸಿ ಒಂದು ಲೋಟ ಗಂಜಿ ಕುಡಿದು ಆರೂವರೆ ಹೊತ್ತಿಗೆ ಗೃಹ ಕಚೇರಿಗೆ ಬರ್ತಾರೆ. ಅಷ್ಟೊತ್ತಿಗೆ ಅವರ ಅಸಿಸ್ಟೆಂಟ್ಗಳು ಎಲ್ಲ ಪೇಪರ್ ಓದಿ ಮಾಕರ್್ ಮಾಡಿ ಇಡಬೇಕು. ಅದ್ರಲ್ಲಿ ಏನಾದರೂ ಒಂದು ಹಳ್ಳಿಯಲ್ಲಿ ಸರಿಯಾದ ವೈದ್ಯಕೀಯ ಗಮನವಿಲ್ಲದೇ ಗಭರ್ಿಣಿ ಸತ್ತುಹೋದಳು ಅನ್ನೋ ಸುದ್ದಿ ಇದ್ದರೆ ತಕ್ಷಣ ಅವರು ಸಂಬಂಧ ಪಟ್ಟ ಡೈರೆಕ್ಟರ್ ಆಫ್ ಮೆಡಿಕಲ್ ಸವರ್ಿಸ್ನ ವೈದ್ಯಕೀಯ ಅಧಿಕಾರಿಯನ್ನು ಎಬ್ಬಿಸಿ, `ನಿಮಗೆ ಕೆಲಸ ಮಾಡಲು ಆಗದಿದ್ದರೆ ಬಿಟ್ಟುಬಿಡಿ. ನಾವು ಬೇರೆ ಯಾರ ಹತ್ತಿರಾನಾದ್ರೂ ಮಾಡಿಸ್ತೀವಿ' ಅಂತ ಮುಖ ಮುರಿದ ಹಾಗೆ ಹೇಳ್ತಾರೆ. ಬೇರೆ ಯಾರು ಪತ್ರಿಕೆ ಓದಿ ಇಂಥ ಕಾರ್ಯ ಕೈಗೊಳ್ಳುತ್ತಾರೆ? ಅಂಥ ನೈತಿಕ ಹಕ್ಕನ್ನು ಅವರು ಉಳಿಸಿಕೊಂಡಿದ್ದರಿಂದಾನೇ ಅಧಿಕಾರಿಗಳೂ ಹೆದರ್ತಾರೆ. ಜನಗಳೂ ಅವರನ್ನು ಇಷ್ಟಪಡುತ್ತಾರೆ. ಅಲ್ಲಿ ಲೇಬರ್ ಕ್ಲಾಸ್ನಿಂದ ಹಿಡಿದು ಇಂಡಸ್ಟ್ರಿಯಲಿಸ್ಟ್ವರೆಗೆ ಎಲ್ಲರೂ ಅವನನ್ನು ಪ್ರಶಂಸಿಸುತ್ತಾರೆ.

ಪ್ರಾದೇಶಿಕ ಅಭಿವೃದ್ಧಿಯ ಜೊತೆಗೆ, ನಮಗೆ ಒಂದು ಒಟ್ಟಾರೆ ರಾಷ್ಟ್ರೀಯ ದೃಷ್ಟಿಯೂ ಬೇಕು. ಲಾಲು ಪ್ರಸಾದ್ ಯಾದವ್ ರೇಲ್ವೆ ಮಂತ್ರಿಯಾದಾಗ ತಮ್ಮ ರಾಜ್ಯಕ್ಕೆ ಏನು ಬೇಕೋ ಎಲ್ಲ ಮಾಡಿದ್ರು. ನೀನು ಏನ್ ಮಾಡ್ತಾ ಇದ್ದೀಯಾ ನಿನ್ನ ರಾಜ್ಯಕ್ಕೆ ಮಾತ್ರ ಫೇವರ್ ಮಾಡಿ ಪಕ್ಷಪಾತ ಮಾಡ್ತಾ ಇದ್ದೀಯಾ ಅಂತ ಕೇಳೋ ತಾಕತ್ತು ಕೇಂದ್ರಕ್ಕೆ ಇರಲಿಲ್ಲ. ಏಕೆಂದರೆ ಅವರಿಗೆ ವಿರುದ್ಧ ಹೋದರೆ ಅವರ ಸಕರ್ಾರ ಉಳೀತಿರಲಿಲ್ಲ. ಅದೇ ರೀತಿ ಈಗ ಮಮತಾ ಬ್ಯಾನಜರ್ಿ ಎಲ್ಲಾ ಕೋಲ್ಕತ್ತಾಕ್ಕೆ ಅನುಕೂಲ ಮಾಡ್ತಿದ್ದರೂ ಯಾಕೆ ಅಂತಾ ಕೇಳೋ ಶಕ್ತಿ ಮನಮೋಹನ್ ಸಿಂಗ್ ಅವರಿಗಿಲ್ಲ. ಹಾಗೆ ಮಾಡಿದರೆ ಯುಪಿಎ ಸಕರ್ಾರ ಉಳಿಯೋದು ಕಷ್ಟವೇ. ಈ ಥರದ ಸನ್ನಿವೇಶ ಇದೆಯೇ ಹೊರತು ಇಡೀ ಭಾರತದ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಏನಾಗಬೇಕು? ಅದು ರೈಲಾಗಿರಬಹುದು, ಇಲೆಕ್ಟ್ರಿಸಿಟಿ, ಇಂಡಸ್ಟ್ರಿಸ್ ಆಗಿರಬಹುದು. ಇದೆಲ್ಲವನ್ನೂ ಸರಿಯಾಗಿ ನೋಡುವಂಥ ರಾಷ್ಟ್ರೀಯ ದೃಷ್ಟಿ ನಮ್ಮಲ್ಲಿ ಇಲ್ಲ.

ನೆಹರೂ ಕಾಲದಲ್ಲಿ ರಷ್ಯನ್ ಮಾದರಿ ಪ್ಲಾನಿಂಗ್ ಕಮೀಷನ್ ಮಾಡಿದ್ರು. ಅದೂ ಅಷ್ಟೇನೆ. ಎಕನಾಮಿಕ್ ಥಿಂಕಿಂಗ್ ಅನ್ನೋದು ಇದ್ದರೆ ಈ ದೇಶದ ಸಮಗ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಇನ್ನು ಏನೇನು ಅಭಿವೃದ್ಧಿ ಆದರೆ ಚೆನ್ನಾಗಿರುತ್ತದೆ, ಬ್ಯಾಲೆನ್ಸ್ ಆಗುತ್ತೆ, ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ ರಸ್ತೆ, ರೈಲು, ವಿದ್ಯುತ್ ಎಲ್ಲದರ ಅಭಿವೃದ್ಧಿ ಹೇಗೆ ಎಂಬುದನ್ನೆಲ್ಲ ಮಾಡಿ ಉದ್ಯಮಿಗಳಿಗೆ ಮತ್ತು ರಾಜ್ಯಗಳಿಗೆ ಆನೆಸ್ಟ್ ಅಡ್ವೈಸ್ ಮಾಡ್ಬೇಕು. ಇದು ಪ್ರಾಮಾಣಿಕ ಸಲಹೆ ಆಗಿರಬೇಕೇ ವಿನಾ ಸವಾರಿಯಾಗಿರಬಾರದು. ಆದರೀಗ ನಡೆತೀರೋದು ಸವಾರಿಯೇ ವಿನಾ ಸಲಹೆ ಅಲ್ಲ.

ರಾಷ್ಟ್ರೀಯ ಅನ್ನೋವಾಗ ಇನ್ನೂ ಒಂದು ವಿಷಯ ನೆನಪಿಡಬೇಕು. `ಬೇರೆ ನಾಯಕರುಗಳೆಲ್ಲ ಒಂದೊಂದು ರಾಜ್ಯಕ್ಕೆ ಸೇರಿದವರು. ಸದರ್ಾರ್ ಪಟೇಲ್ ಗುಜರಾತಿ. ಗೋವಿಂದ್ ವಲ್ಲಭ್ ಪಂತ್ ಯುಪಿಗೆ ಸೇರಿದವರು. ಯಾವುದಕ್ಕೂ ಸೇರದೇ ಇರುವವರು ನೆಹರೂ. ಅದಕ್ಕೆ ಅವರೇ ರಾಷ್ಟ್ರೀಯ ನಾಯಕರಾಗಲು ಅರ್ಹರು' - ಅನ್ನೋ ಇಮೇಜ್ ಕೊಟ್ಟವರು ನಮ್ಮ ಮೀಡಿಯಾದವರು. ಮುಂದೆ ಇಂದಿರಾ ಗಾಂಧಿಗೂ ಅಂತಹ ಇಮೇಜ್ ಕೊಟ್ಟರು. ರಾಜೀವ್ ಗಾಂಧಿಗೂ ಅದನ್ನೇ ಕೊಟ್ಟರು. ಅಂದರೆ ಏನರ್ಥ? ಎಲ್ಲಿಗೂ ಸೇರದೇ ಇರದವರೇ ಭಾರತಕ್ಕೆ ಲಾಯಕ್ಕು ಅಂತಲೆ? ಇದು ಹಾಗಲ್ಲ. ಈ ದೇಶದ ರಾಜ್ಯಕ್ಕೆ ಸೇರಿಯೂ ಇಡೀ ದೇಶವನ್ನು ದೃಷ್ಟಿಯಲ್ಲಿಟ್ಟುಕೊಂಡವರು ಆಗಬೇಕು. ವಾಜಪೇಯಿ ಅವರಿಗೆ ಅಂತಹ ಶಕ್ತಿ ಇತ್ತು. ನೆಲದ ಮಟ್ಟದಲ್ಲಿ ಅವರು ಇದನ್ನು ತಿಳಿದುಕೊಂಡಿದ್ದರು.

ಅಮೆರಿಕದಲ್ಲಿ ಇಂಡಸ್ಟ್ರಿ ಮೇಲೆ ಕೈಹಾಕೋ ಅಧಿಕಾರ ಸಕರ್ಾರಕ್ಕಿಲ್ಲ. ಅದಕ್ಕೆ ಅಲ್ಲಿ ಏನೇ ಒಂದು ಉದ್ಯಮ ಪ್ರಾರಂಭಿಸಬೇಕಾದರೆ ವೆಂಚರ್ ಫಂಡ್ ಅಂತ ಇರುತ್ತೆ. ಅಲ್ಲಿ ಪ್ಲ್ಯಾನ್ ತೋರಿಸಿದರೆ ಅವರು ಪರೀಕ್ಷೆ ಅದು ವಕರ್್ಔಟ್ ಆಗೋ ಹಾಗಿದ್ರೆ ಅವ್ರು ಅಂಗೀಕರಿಸುತ್ತಾರೆ. ಎಷ್ಟು ದುಡ್ಡು ಬೇಕೋ ತಗೋ ಅಂತ ಕೊಡ್ತಾರೆ. ಸೂಪರ್ವಿಷನ್ ತಮ್ಮ ಕೈಯಲ್ಲೇ ಇಟ್ಟುಕೊಂಡಿರ್ತಾರೆ. ಹೀಗಾಗಿ ಅಲ್ಲಿ ಉದ್ಯಮಗಳು ಬೆಳೆಯುತ್ತವೆ. ನಮ್ಮಲ್ಲಿ ಆರಂಭದ ದೆಸೆಯಲ್ಲಿ ನಮ್ಮ ಎಕಾನಮಿಯನ್ನು ಕಮ್ಯೂನಿಸ್ಟ್ ಎಕಾನಮಿಯಾಗಿ ನೆಹರೂ ಅವರು ಆರಂಭ ಮಾಡಿದರು. ಪರಿಣಾಮ ಏನಾಯಿತು ಅಂದರೆ ಪ್ರತಿಯೊಬ್ಬ ಉದ್ಯಮಿಗೂ ಸಕರ್ಾರವನ್ನೇ ಓಲೈಸುವ ಗತಿ ಬಂದಿತು. ಅದು ಇಂದಿರಾಗಾಂಧಿ ಕಾಲದೊಳಗೆ ರಾಜಕೀಯಕ್ಕೆ ತಿರುಗಿತು. 97.5 ಪಸರ್ೆಂಟ್ ಹೈಯೆಸ್ಟ್ ಲೆವೆಲ್ ಇನ್ಕಮ್ ಟ್ಯಾಕ್ಸ್ ಪ್ಲಸ್ ಸಚರ್ಾಜರ್್. ಇದರಿಂದಾಗಿ ಕಳ್ಳ ಲೆಕ್ಕ ಶುರುವಾಯಿತು. ಇಂದಿರಾಗಾಂಧಿಗೆ ಇದು ಗೊತ್ತಿರಲಿಲ್ವೆ? ಗೊತ್ತಿತ್ತು. ಅವರಿಗೆ ಪಾಟರ್ಿ ಫಂಡ್ ಸಿಕ್ತಿತ್ತು. ಆ ಕಾಲದಲ್ಲಿ ವಿರೋದಿ ಪಕ್ಷದವರಿಗೆ ಬಾವುಟ ಕೊಳ್ಳಲು ಮೂರು ಕಾಸು ಇತರ್ಿಲರ್ಿಲ್ಲ. ಈ ಪಕ್ಷ ಎಲೆಕ್ಷನ್ ಮೇಲೆ ಎಲೆಕ್ಷನ್ ಗೆಲ್ಲುತ್ತಾ ವಿಜೃಂಭಿಸುತ್ತಲೇ ಬಂತು. ಪರಿಣಾಮ ನಮ್ಮ ಉದ್ಯಮಿಗಳಿಗೆ ಸಕರ್ಾರದ ವಿರೋಧ ಕಟ್ಟಿಕೊಂಡು ಬದುಕಲು ಆಗುವುದಿಲ್ಲ ಅನ್ನೋದು ಖಾತ್ರಿಯಾಯಿತು. ಈಗ ಸ್ವಲ್ಪ ಲಿಬರಲೈಸೇಷನ್ನಿಂದ ಇದು ಸ್ವಲ್ಪ ಕಡಿಮೆಯಾಗಿದ್ದರೂ ಈಗಲೂ ಸಕರ್ಾರದ ವಿರೋಧ ಕಟ್ಟಿಕೊಳ್ಳಲು ನಮ್ಮ ಉದ್ಯಮಿಗಳು ಸಿದ್ಧವಿಲ್ಲ. ಅಮೆರಿಕದಲ್ಲಿ ಇದು ಇಲ್ಲ. ಅವರು ಯಾವ ಸಕರ್ಾರಕ್ಕೂ ಯಾವುದೇ ಪಾಟರ್ಿಗೂ ಅವರು ಕೇರ್ ಮಾಡೋಲ್ಲ.

ಬ್ರಿಟನ್ನಲ್ಲಿ ಹೌಸ್ ಆಫ್ ಲಾಡ್ಸರ್್ ಅಂತ ಇದೆ. ಲೋವರ್ ಹೌಸ್ನಲ್ಲಿ ಏನೇನು ಚಚರ್ೆ ಆಗಿರುತ್ತೆ. ಅದನ್ನೆಲ್ಲ ಎಕ್ಸಪಟರ್್ ಲೆವೆಲ್ನಲ್ಲಿ ಅಲ್ಲಿನ ಅಪ್ಪರ್ ಹೌಸ್ ಚಚರ್ೆ ನಡೆಸುತ್ತೆ. ಅಲ್ಲಿ ಹೌಸ್ ಆಫ್ ಲಾ ಅಂತ ಇರುತ್ತೆ. ಅಲ್ಲಿ ಬೇರೆ ಬೇರೆ ಸೆಕ್ಷನ್ ಇರುತ್ವೆ. ಸೀನಿಯರ್ ಮೋಸ್ಟ್ ಜಜ್ಸ್ ಆಗಿ ನಿವೃತ್ತರಾದವರು ಅಥವಾ ದೊಡ್ಡ ದೊಡ್ಡ ವಕೀಲರಾಗಿ ಪ್ರಸಿದ್ಧರಾದವರಿಗೆ ಇಲ್ಲಿ ಹುದ್ದೆ ಕೊಡಲಾಗುತ್ತದೆ. ಇವರು ಎಂ.ಪಿ.ಗೆ ಸಮಾನರು. ನಮ್ಮ ಕಾನೂನಿನಲ್ಲಿ ಏನು ಬದಲಾವಣೆ ಆಗಬೇಕು ಅನ್ನೋದಕ್ಕೆ ಅಲ್ಲಿ ಲಾ ಕಮೀಷನ್ ಅಂತ ಇರುತ್ತೆ. ಅಲ್ಲಿ ರೀಸಚರ್್ ಆಗ್ತಾನೇ ಇರುತ್ತೆ. ಅಲ್ಲಿ ಎಕನಾಮಿಸ್ಟ್, ಫ್ಯಾಮಿಲಿಗೆ ಸಂಬಂಧಪಟ್ಟವರು ಇರುತ್ತಾರೆ. ಕೋಟರ್ಿನಲ್ಲಿ ಏನೇನು ತೀಮರ್ಾನ ಆಗಿರುತ್ತದೆ ಎಲ್ಲವನ್ನೂ ಅವರು ಚಚರ್ೆ ಮಾಡುತ್ತಿರುತ್ತಾರೆ. ಕಾನೂನಿಗೆ ಸಂಬಂಧ ಪಟ್ಟದ್ದನ್ನು ಮಾಡುವ ಅವರನ್ನು ಲಾ ಲಾಡ್ಸರ್್ ಅಂತ ಕರೀತಾರೆ. ಮಾಡಿದ ಕೆಲಸದಲ್ಲಿ ಏನು ಬದಲಾವಣೆ ಮಾಡಬೇಕು ಅನ್ನೋದನ್ನು ಅವರು ಪ್ರಧಾನಿಗೆ ಕೊಡ್ತಾರೆ. ಪ್ರಧಾನಿ ಅದನ್ನು ಓದಿ ಬದಲಾವಣೆ ಮಾಡ್ತಾರೆ.

ಎಷ್ಟೋ ವಿಷಯಗಳಲ್ಲಿ ನಾವು ಡೀಜನರೇಟ್ ಆಗಿದ್ದೇವೆ ಅನಿಸುತ್ತದೆ. ಒಳ್ಳೆಯ ಸುಸಂಸ್ಕೃತ ಜನ ಭಾರತದಲ್ಲಿ ಇನ್ನೂ ಇದ್ದಾರೆ. ಆದರೆ ದೇಶದ ಜೀವನ ನೋಡಿದಾಗ ನಾವು ಬಹಳ ಡೀಜನರೇಟ್ ಸ್ಥಿತಿಯಲ್ಲಿದ್ದೇವೆ ಅನಿಸುತ್ತೆ. ಇದನ್ನು ಹೇಳಿದ್ರೆ ನಮ್ಮ `ದೇಶಭಕ್ತ'ರಿಗೆ ಕೋಪ ಬಂದುಬಿಡುತ್ತೆ. ಈಗಿನ ಸ್ಥಿತ್ಯಂತರಕ್ಕೆ ನಮ್ಮ ರಾಜಕಾರಣಿಗಳೇ ಕಾರಣ. ಈ ಮೊದಲು ನಮ್ಮ ಹಳ್ಳಿ ರೈತರು ಬೆಳಕು ಹರಿಯೋದ್ರೊಳಗೆ ಹೊಲಕ್ಕೆ ಹೋಗಿ ನೇಗಿಲು ಹೂಡಿ ಊಳೋರು, ಕೆಲಸ ಮಾಡೋವ್ರು. ಏಕೆಂದರೆ ನಮ್ಮದು ಉಷ್ಣದೇಶ. ಎಂಟು ಗಂಟೆಗೆ ಅವರಿಗೆ ಮನೆ ಜನ ಉಟಾ ತಂದು ಕೊಡೋರು. ಹನ್ನೆರಡು ಗಂಟೆಯೊಳಗೆ ಅವರು ಸಾಕಷ್ಟು ಕೆಲಸಾ ಮುಗಿಸಿಬಿಡೋರು. ಅದಕ್ಕೆ ಒಪ್ಪೊತ್ತಿನ ನೇಗಿಲು ಅಂತ ಇಂತಿಷ್ಟು ಕೂಲಿ ಕೊಡಲಾಗುತ್ತಿತ್ತು. ಇವತ್ತು ನಮ್ಮ ಹಳ್ಳಿಗಳು ಬಹಳ ಹಾಳಾಗಿವೆ ಅಂತಾರಲ್ಲ. ಇದಕ್ಕೆ ಬಹುತೇಕ ನಮ್ಮ ರಾಜಕಾರಣಿಗಳೇ ಕಾರಣ. ನಮ್ಮಲ್ಲಿ ಬಹುತೇಕ ಎಮ್ಎಲ್ಎಗಳು ಹಳ್ಳಿಯಿಂದ ಬಂದೋರೇ. ಆದರೆ ಇವರೇ ಎಲೆಕ್ಷನ್ ಸಮಯದಲ್ಲಿ ಹಳ್ಳಿಗೆ ಹೊಗಿ ಕೆಲಸಗಾರರಿಗೆ, `ಬೆಳ್ಳಂಬೆಳಿಗ್ಗೆ ಯಾಕೋ ಹೋಗ್ತಿಯಾ? ಹತ್ತು ಗಂಟೆಗೆ ಮೊದಲು ಪಟ್ಟಣದಲ್ಲಿ ಯಾರೂ ಕೆಲಸಕ್ಕೆ ಹೊಗೋದಿಲ್ಲ. ಕೂಲಿ ಒಂದು ದಿನಕ್ಕೆ ಇನ್ನೂರು ಇನ್ನೂರೈವತ್ತು ಕೊಡು ಅಂತಾ ಕೇಳೋ' ಅಂತಾ ಹೇಳಿಕೊಟ್ಟಿರ್ತಾರೆ. ಇದರಿಂದಾಗಿ ಒಂಬತ್ತು ಹತ್ತು ಗಂಟೆಗೆ ಮೊದಲು ಕೆಲಸಕ್ಕೆ ಬರೋದಿಲ್ಲ ಆಳುಗಳು. ಇದನ್ನೆಲ್ಲಾ ಹೇಳಿಕೊಡೋರು, ಇದೇ ಜನಪ್ರತಿನಿಧಿಗಳು, ಎಮ್ಎಲ್ಎಗಳು. ಡಿಜನರೇಷನ್ಗೆ ಕಾರಣವೇ ನಮ್ಮ ಜನನಾಯಕರು.

ನನಗೆ ಗೊತ್ತಿರೋ ಒಂದು ಸಾಫ್ಟವೇರ್ ಕಂಪನಿಗೆ ನಮ್ಮ ರಾಜಕಾರಣಿಯೊಬ್ಬರು ಒಂದು 75 ಮಂದಿಯ ಹೆಸರು ಬರೆದು, `ಇವರಿಗೆಲ್ಲ ಕೆಲಸ ಕೊಡಿ' ಅಂತ ಬರೆದಿದ್ದರು. ಅವರೆಲ್ಲ ಜಯಕಾರ ಹಾಕಲು ಮಾತ್ರ ಯೋಗ್ಯರೇ ವಿನಾ ಸಾಫ್ಟವೇರ್ ಕಂಪನಿಯಲ್ಲಿ ಏನು ಕೆಲಸ ಮಾಡ್ತಾರೆ? ಅವಾಗ ಕಂಪನಿಯವರು ಕೊಡೋಕಾಗೋಲ್ಲ ಅಂದ್ರು. ಅವರ ಮೇಲೆ ಈ ರಾಜಕಾರಣಿ ಈಗ ವಿಷಕಾರ್ತಿದಾರೆ. ಪರಿಸ್ಥಿತಿ ಹೀಗಿರುವಾಗ ನಾವು ಹೇಗೆ ಉದ್ಧಾರವಾಗುವುದು ಸಾಧ್ಯ?

ಈಗ ವಿಶ್ವ ಕನ್ನಡ ಸಮ್ಮೇಳನದಂಥ ಸಂದರ್ಭದಲ್ಲಿ ಮುಖ್ಯವಾದ ಒಂದು ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ಸಾಕು. ಮುಖ್ಯವಾಗಿ ಆಥರ್ಿಕ ಅಭಿವೃದ್ಧಿ, ಕನರ್ಾಟಕದ ರಾಜಕೀಯ ಅಭಿವೃದ್ಧಿ ಕುರಿತ ಚಚರ್ೆ ಆಗ್ಬೇಕು. ಒಬ್ಬರ ಕಾಲು ಒಬ್ಬರು ಎಳಿಯೋದು ಬಿಟ್ಟು, ಪೊಲಿಟಿಕಲ್ ಮೆಚ್ಯೂರಿಟಿ ತೋರಿಸಬೇಕು. ಬ್ರಿಟನ್ನಲ್ಲೂ ಇದೇ ಸನ್ನಿವೇಶ ಇದೆ. ಅಲ್ಲೂ ಕೊಲೀಶನ್ ಸಕರ್ಾರ ಇದೆ. ಆದರೆ ವಿರೋಧ ಪಕ್ಷ ಆಡಳಿತ ಪಕ್ಷದ ಕಾಲೆಳೆಯಲು ಜನ ಬಿಡುವುದಿಲ್ಲ. ಕಾಲೆಳೆಯಲು ಹೋದರೆ `ನೀನು ಆಡಳಿತ ನಡೆಸುವ ಮೆಜಾರಿಟಿ ನಿನ್ನಲ್ಲಿಲ,್ಲ ಸುಮ್ಮನಿರಯ್ಯಾ' ಅಂತಾ ದಬಾಯಿಸ್ತಾರೆ. ಈಗ ರೀಸೆಷನ್ ಸಂದರ್ಭದಲ್ಲಿ ಅಲ್ಲಿ ಎಷ್ಟು ಆಥರ್ಿಕ ಸಂಕಷ್ಟದಲ್ಲಿದೆ ಗೊತ್ತಾ? ಜಾಬ್ಸ್ ಕಟ್ ಮಾಡ್ತಾ ಇದ್ದಾರೆ. ಸಂಬಳ ಎಲ್ಲಾ ಕಡಿಮೆ ಮಾಡ್ತಾ ಇದ್ದಾರೆ. ಇಂಥ ಸ್ಥಿತಿಯಲ್ಲಿ ಸ್ಟೆಬಿಲಿಟಿ ಇಲ್ಲದೇ ಇದ್ದರೆ ದೇಶದ ಸ್ಥಿತಿ ಏನು ಅಂತಾ ಅಲ್ಲಿನ ಜನಗಳು, ಸಕರ್ಾರ, ಅಧಿಕಾರಿಗಳು, ಮಿಡಿಯಾದವರು ಎಲ್ಲ ಅಲ್ಲಿ ಯೋಚನೆ ಮಾಡ್ತಾ ಇದ್ದಾರೆ. ಅಷ್ಟೇ ಅಲ್ಲ ಅರಮನೆ ವಿದ್ಯುತ್ ಖರ್ಚನ್ನು ಕಡಿಮೆ ಮಾಡಬೇಕು ಅಂತಾ ಬ್ರಿಟನ್ ರಾಣಿಗೆ ಅಲ್ಲಿನ ಪ್ರಧಾನಿ ಪರ್ಸನಲ್ ಆಗಿ ಅಪೀಲ್ ಮಾಡಿದ್ದಾರೆ ಅಂದರೆ ತಿಳಿದುಕೊಳ್ಳಿ.

ನಾವು ಯಾಕೆ ಮೆಚ್ಯೂರ್ ಆಗಿ ಯೋಚನೆ ಮಾಡಬಾರದು? ಇವತ್ತು ವಿಶ್ವಕನ್ನಡ ಸಮ್ಮೇಳನದಲ್ಲಿ ಚಚರ್ಿಸಬೇಕಾದದ್ದು - ಆಥರ್ಿಕ ಸದೃಢತೆ, ಅಭಿವೃದ್ಧಿ, ಅದಕ್ಕೆ ಬೇಕಾದಂಥ ವಾತಾವರಣ ಮತ್ತು ಸಹಕಾರ. ದುರಾದೃಷ್ಟವಶಾತ್ ನಮ್ಮಲ್ಲಿ ಬಹಳ ಮಟ್ಟದ ಹಣ ಕೇಂದ್ರದ ಹತ್ತಿರವಿದೆ. ಅಲ್ಲಿಂದ ಹಣ ಪಡೆಯಲು ಏನು ಮಾಡಬೇಕು? ಏನೇನು ಪಡೆಯಬೇಕು? ಅದನ್ನು ಪಡೆಯಲು ರಾಜಕೀಯ ಭಿನ್ನಾಬಿಪ್ರಾಯ ಬರಬಾರದು ಅನ್ನೋದರ ಮಟ್ಟಿಗೆ ಸಹಕಾರ ಕೋಡೋದರ ಬಗ್ಗೆ ಯೋಚಿಸಿದರೆ ಮತ್ತು ಸ್ಪಷ್ಟವಾಗಿ ಇದ್ದುಬಿಟ್ಟರೆ ಸಂಕಷ್ಟ ಬಾರದು ಅಂತ ನನ್ನ ಅನಿಸಿಕೆ. ಮನಿ ಪವರ್ ಇಲ್ಲದೇ ಹೋದರೆ ನಮ್ಮ ಧಮರ್ಾನೂ ಉಳಿಸಿಕೊಳ್ಳಲಾಗುವುದಿಲ್ಲ. ನಮ್ಮ ಸಂಸ್ಕೃತಿನೂ ಉಳಿಸಿಕೊಳ್ಳಲು ಆಗುವುದಿಲ್ಲ. ಇದೆಲ್ಲಾ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ವಿಶ್ವಕನ್ನಡ ಸಮ್ಮೇಳನದ ಈ ಸಂದರ್ಭದಲ್ಲಿ ಮುಖ್ಯವಾಗಿ ಹಣ ಇಲ್ಲದೇ ಹೋದಲ್ಲಿ ಯಾವುದೇ ರೀತಿಯ ದೊಡ್ಡ ದೊಡ್ಡ ಕೆಲಸಗಳನ್ನೂ ಮಾಡಲು ಸಾಧ್ಯವಿಲ್ಲ ಅನ್ನೋದೇ ಇಲ್ಲಿ ಮುಖ್ಯ.

`ಆವರಣ' ಕಾದಂಬರಿ ಕುರಿತು ಜಿ. ಅನಿಲ್ ಕುಮಾರ್ ಭಾಷಣ


ಮಂಗಳವಾರ, ಮೇ 03, 2011

ಓಸಾಮಾ ಬಿನ್ ಲಾಡೆನ್ ಅಂತ್ಯ: ಭಯೋತ್ಪಾದಕ ರಾಷ್ಟ್ರದ ಕರಿನೆರಳು

ಪಾಕಿಸ್ತಾನವು ಜಾಗತಿಕ ಭಯೋತ್ಪಾದಕ ಕೇಂದ್ರವಾಗಿರುವುದು ಈಗ ಮತ್ತೊಮ್ಮೆ ಸ್ಪಷ್ಟವಾಗಿದೆ. 9/11 `ಮಾಸ್ಟರ್ಮೈಂಡ್' ಒಸಾಮಾ ಬಿನ್ ಲಾಡೆನ್ ಹತನಾಗಿರುವ ಸಂದರ್ಭದಲ್ಲಿ ಮತ್ತೊಮ್ಮೆ ಈ ಸತ್ಯ ಮುನ್ನೆಲೆಗೆ ಬಂದಿದೆ. ಆ ದೇಶವನ್ನು `ಭಯೋತ್ಪಾದಕ ರಾಷ್ಟ್ರ' ಎಂದು ಘೋಷಿಸಲು ಇದು ಸಕಾಲ.

ಆದರೆ ಹಾಗೆಂದು ಯಾರು ಘೋಷಿಸಬೇಕು ಎಂಬುದೇ ಈಗಿನ ಪ್ರಶ್ನೆ. ಪಾಕಿಸ್ತಾನದ `ಸಹಾಯ' ಪಡೆಯುವ ನಾಟಕವಾಡುತ್ತ, ತನ್ನ ಹಿತಾಸಕ್ತಿಗೆ ಅನುಗುಣವಾಗಿಯೇ ವತರ್ಿಸುತ್ತಿರುವ ಅಮೆರಿಕ ಸದ್ಯಕ್ಕೆ ಅಂತಹ ಕೆಲಸ ಮಾಡುವುದಿಲ್ಲ. ಇನ್ನು ಪಾಕಿಸ್ತಾನದ ನೇರದಾಳಿಗೆ ಗುರಿಯಾಗಿರುವ ಭಾರತ ಪಾಕಿಸ್ತಾನದ ನೈಜ ಬಣ್ಣ ಬಯಲು ಮಾಡುವ ಜಾಗತಿಕ ಆಂದೋಲನವನ್ನು ಸೃಷ್ಟಿಸಬೇಕು. ಆದರೆ ಅದನ್ನು ಮಾಡುವ ಇಚ್ಛಾಶಕ್ತಿ ನಮಗೆ ಇದೆಯೆ?

 ಜಗತ್ತಿನಾದ್ಯಂತ ಸಕ್ರಿಯವಾಗಿರುವ ಬಹುತೇಕ ಭಯೋತ್ಪಾದಕ ಗುಂಪುಗಳು ಪಾಕಿಸ್ತಾನದಲ್ಲಿಯೇ ಬೇರುಗಳನ್ನು ಹೊಂದಿರುವುದು ಆಕಸ್ಮಿಕವಲ್ಲ. ಪಾಕಿಸ್ತಾನದ ಗೂಢಚಾರ ಏಜೆನ್ಸಿ ಐಎಸ್ಐ ಆಶ್ರಯದಲ್ಲಿ ಬಿನ್ ಲಾಡೆನ್ ಭದ್ರವಾಗಿದ್ದುದು ಸ್ಪಷ್ಟ. ಹೀಗಾಗಿಯೇ ಅವನನ್ನು ಪತ್ತೆ ಹಚ್ಚಲು ಅಮೆರಿಕಕ್ಕೆ ಇಷ್ಟು ಸಮಯ ಹಿಡಿಯಿತು. ಇದು ಅಮೆರಿಕಕ್ಕೂ ಗೊತ್ತಿತ್ತು. ಕಡೆಗೂ ಪಾಕರ್್ ಸಕರ್ಾರದ ಕಣ್ಣಿಗೆ ಮಣ್ಣೆರಚಿ, ಸ್ವಲ್ಪವೂ ಸುಳಿವು ನೀಡದೇ, ಅಮೆರಿಕ ಲಾಡೆನ್ ಮೇಲೆ ದಾಳಿ ಮಾಡಬೇಕಾಯಿತು. ಈ ದಾಳಿಯ ಸುಳಿವು ಸ್ವಲ್ಪ ಸಿಕ್ಕಿದ್ದರೂ ಆತ ಬಚಾವಾಗಿಬಿಡುತ್ತಿದ್ದ.

ಕಳೆದ 10 ವರ್ಷಗಳಿಂದ 9/11 ವಿಷಯವನ್ನು ಅಮೆರಿಕ ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದು ಇಲ್ಲಿ ಗಮನಾರ್ಹ. ಆದರೆ 26/11 ಮುಂಬೈ ದಾಳಿಯ ವಿಷಯಕ್ಕೆ ಬಂದಾಗ ನಮ್ಮ ಯುಪಿಎ ಸಕರ್ಾರದ ದಿವಾಳಿತನ, ಸಪ್ಪೆತನ ಎದ್ದುಕಾಣುತ್ತದೆ. ಪಾಲರ್ಿಮೆಂಟ್ ದಾಳಿಯ ರೂವಾರಿ ಅಫ್ಜಲ್ ಗುರುವಿಗೆ ನೇಣುಶಿಕ್ಷೆ ಕಾಯಂ ಆಗಿದ್ದರೂ ಅದನ್ನು ಜಾರಿಗೊಳಿಸದೇ ಅವನನ್ನು ಸಾಕಿಕೊಂಡಿರುವುದು ಎಂತಹ ಅಸಹ್ಯ? ಇಂತಹುದನ್ನು ಅಮೆರಿಕದಲ್ಲಿ ಊಹಿಸುವುದೂ ಸಾಧ್ಯವಿಲ್ಲ. ಇದು ಬರೀ ಅಹಸ್ಯವಷ್ಟೇ ಅಲ್ಲ, ಬಹಳ ಅಪಾಯಕಾರಿಯೂ ಹೌದು.

ಆದರೆ ಅಪಾಯಕಾರಿ ಆಟ ಆಡುತ್ತ, ಜನರ ಕಣ್ಣಿಗೆ ಮಣ್ಣೆರಚುವುದರಲ್ಲಿ ನಮ್ಮ ಸಕರ್ಾರ ಜಾಣ್ಮೆ ತೋರುತ್ತ ಬಂದಿದೆ. ಲಾಡೆನ್ ತರಹವೇ ದಾವೂದ್ ಇಬ್ರಾಹಿಮ್ ಅನ್ನೂ ಅಮೆರಿಕ ಸಕರ್ಾರ `ಅಂತಾರಾಷ್ಟ್ರೀಯ ಭಯೋತ್ಪಾದಕ' ಎಂದು ಘೋಷಿಸಿದೆ. ಅವನನ್ನೂ ಹುಡುಕುತ್ತಿದೆ. ಭಾರತ ಮಾತ್ರ ಈ ವಿಷಯದಲ್ಲೂ ತಾಟಸ್ಥ್ಯ ತೋರುತ್ತಿದೆ.

`ಭಾರತವನ್ನು ರಕ್ತಸಿಕ್ತವಾಗಿ ನಲುಗಿಸಿ ಗೆಲ್ಲಬೇಕು' ಎಂಬ ಉದ್ಧೇಶದಿಂದ 1988ರಲ್ಲಿ ಪಾಕಿಸ್ತಾನ `ಆಪರೇಷನ್ ಟೋಪ್ಯಾಕ್' ಎಂಬ ಭಯೋತ್ಪಾದಕ ಹಾಗೂ ಬದಲಿ (ಪ್ರಾಕ್ಸಿ) ಯುದ್ಧದ ಯೋಜನೆಯನ್ನು ಜಾರಿಗೊಳಿಸಿತು. ಜನರಲ್ ಜಿಯಾ ಉಲ್ ಹಕ್ ಅದರ ರೂವಾರಿ. ಅಂದಿನಿಂದ ಈವರೆಗೆ ಲೆಕ್ಕವಿಲ್ಲದಷ್ಟು ಭಯೋತ್ಪಾದಕ ಕೃತ್ಯಗಳನ್ನು ಭಾರತದ ವಿರುದ್ಧ ನಡೆಸಲಾಗಿದೆ. ಜಿಹಾದಿ ಗುಂಪುಗಳನ್ನು ಪಾಕಿಸ್ತಾನ ಸಕರ್ಾರ ತನ್ನ ಅನಧಿಕೃತ ಸೇನೆಯ ಹಾಗೆ ಬಳಸಿಕೊಳ್ಳುತ್ತಿರುವುದಕ್ಕೆ ಪುರಾವೆಗಳಿವೆ.

ಯಾವುದಾದರೂ ದಾಳಿಯಾದ ಸಂದರ್ಭದಲ್ಲಿ ಮಾತ್ರ ಗುಡುಗಿದಂತೆ ಮಾತನಾಡುವ ಭಾರತದ ಅಧಿಕಾರಸ್ಥರು ಸ್ವಲ್ಪ ಕಾಲ ಕಳೆದ ಮೇಲೆ ನಿಷ್ಟ್ರಿಯರಾಗುತ್ತಾರೆ. ಪಾಕಿಸ್ತಾನ ಸಕರ್ಾರವನ್ನು ತಾವೇ ಖುದ್ದಾಗಿ ಮಾತುಕತೆಗೆ ಆಹ್ವಾನಿಸುತ್ತಾರೆ. ಹಾಗೆ ಮಾಡಿದ್ದೇ ಅವರ ದೊಡ್ಡತನ ಎನ್ನುವ ಹಾಗೆ ಮಾಧ್ಯಮಗಳಲ್ಲೂ ಬಿಂಬಿತವಾಗುತ್ತದೆ. ಇತರ ಅಂಶಗಳು ಮರೆಗೆ ಹೋಗಿಬಿಡುತ್ತವೆ. ತನಿಖೆ, ವಿಚಾರಣೆ, ಭಯೋತ್ಪಾದನಾ ನಿಗ್ರಹ ಇತ್ಯಾದಿ ವಿಷಯಗಳ ಸ್ಥಳದಲ್ಲಿ `ಮಾತುಕತೆ' ಬಂದು ಕುಳಿತುಕೊಳ್ಳುತ್ತದೆ. ಈ ಪ್ರಹಸನ ಮುಗಿದ ಮೇಲೆ ಭಯೋತ್ಪಾದನೆ ಮತ್ತೆ ನಾಲಿಗೆ ಚಾಚುತ್ತದೆ. ಇದೇ ನಾಟಕ ಕಳೆದ 25 ವರ್ಷಗಳಿಂದ ನಡೆಯುತ್ತಿದೆ. 

ಈಗಾಗಲೇ 26/11 ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ  ಅಮೆರಿಕದ ಡಿಸ್ಟ್ರಿಕ್ಟ್ ನ್ಯಾಯಾಲಯಗಳಲ್ಲಿ ಐಎಸ್ಐ ವಿಚಾರಣೆಗೆ ಗುರಿಯಾಗಿದೆ. ಐಎಸ್ಐ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡುವುದೂ ನಡೆಯುತ್ತಿದೆ. 

ಹಾಗಿದ್ದರೂ ಭಾರತದ ಯುಪಿಎ ಸಕರ್ಾರ ಪಾಕ್ ವಿಷಯದಲ್ಲಿ ಮೃದು ಧೋರಣೆ ತಳೆದಿರುವುದು ವಿಚಿತ್ರ. ಪಾಕ್ ಮಂತ್ರಿಯೊಬ್ಬರ ಜೊತೆಗೆ ಉದರ್ು ಭಾಷೆಯಲ್ಲೇ ಮಾತನಾಡಬೇಕೆಂದು ಸೋನಿಯಾ ಗಾಂಧಿ ಸಾಹಸ ಮಾಡುತ್ತಾರೆ. `ಪಾಕಿಸ್ತಾನದ ಜೊತೆ ಮಾತುಕತೆಯಾಡುವುದಕ್ಕೇ ನನ್ನ ಪ್ರಥಮ ಆದ್ಯತೆ. ಅದನ್ನೇ ನನ್ನ ಪ್ರಧಾನಿಗಿರಿಯ ದೊಡ್ಡ ಸಾಧನೆ ಎಂದು ಭಾವಿಸುವೆ' ಎಂಬರ್ಥದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ ನೀಡುತ್ತಾರೆ. ಐ. ಕೆ. ಗುಜ್ರಾಲ್ ಪ್ರಧಾನಿಯಾಗಿದ್ದ ಕಾಲದಲ್ಲಿ ಈ ಮಾನಸಿಕತೆ `ಗುಜ್ರಾಲ್ ಡಾಕ್ಟ್ರಿನ್' ಎಂದೇ ಪ್ರಸಿದ್ಧವಾಗಿತ್ತು. ಈಗ ಅದೇ ಸಾರ್ವತ್ರಿಕವಾಗಿದೆ.

ತದ್ವಿರುದ್ಧವಾಗಿ, ಅಮೆರಿಕದಲ್ಲಿ ಸ್ವದೇಶನಿಷ್ಠ ಧ್ವನಿಗಳು ಕೇಳಿಬರುತ್ತಿವೆ. `ಐಎಸ್ಐ ಅನ್ನು ಸಾರ್ವಬೌಮ ರಾಷ್ಟ್ರವೊಂದರ ಗೂಢಚಾರ ಏಜೆನ್ಸಿ ಎನ್ನುವುದಕ್ಕಿಂತಲೂ ಒಂದು ಅಂತಾರಾಷ್ಟ್ರೀಯ ಭಯೋತ್ಪಾದಕ ಏಜೆನ್ಸಿ ಎಂದೇ ಪರಿಗಣಿಸಬೇಕು' ಎಂದು ಅನೇಕ ಸುರಕ್ಷಾ ವಿಶ್ಲೇಷಕರು ಮತ್ತು ಜನಪ್ರತಿನಿಧಿಗಳು ಬರಾಕ್ ಒಬಾಮಾ ಸಕರ್ಾರದ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ.

26/11 ಉಗ್ರ ಯೋಜನೆಯಲ್ಲಿ ಸಕ್ರಿಯ ಪಾತ್ರ ವಹಿಸಿ ಬಂಧಿತನಾಗಿರುವ ಅಮೆರಿಕನ್ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಐಎಸ್ಐ ಕುರಿತು ಶಿಕಾಗೋ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾನೆ. ಲಷ್ಕರ್-ಎ-ತೋಯ್ಬಾ ಜಿಹಾದಿ ಭಯೋತ್ಪಾದಕ ಸಂಘಟನೆಯ ಎಲ್ಲ ಕೃತ್ಯಗಳ ಮೇಲ್ವಿಚಾರಣೆಯನ್ನು ಐಎಸ್ಐ ಅಧಿಕಾರಿಗಳೇ ಖುದ್ದಾಗಿ ನಡೆಸುತ್ತಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾನೆ.

ಆತನ  ಹೇಳಿಕೆಯಲ್ಲಿ 26/11 ದಾಳಿಯ ಹಿಂದಿನ ರೂವಾರಿಗಳೆಂದು ಐವರು ಪಾಕಿಸ್ತಾನಿ ವ್ಯಕ್ತಿಗಳ ಹೆಸರನ್ನು ನೀಡಲಾಗಿದೆ. ಎಫ್ಬಿಐ (ಅಮೆರಿಕದ ರಾಷ್ಟ್ರೀಯ ತನಿಖಾ ಸಂಸ್ಥೆ) ಅವರ ಹೆಸರುಗಳನ್ನು ಬಹಿರಂಗಗೊಳಿಸಿಲ್ಲ. ಮೆಂಬರ್ಸ್ ಎ, ಬಿ, ಸಿ, ಡಿ ಹಾಗೂ ಪರ್ಸನ್ ಎ ಎಂದು ಮಾತ್ರ ದಾಖಲೆಯಲ್ಲಿ ತೋರಿಸಲಾಗಿದೆ. ಈ ಐವರೂ ಪಾಕಿಸ್ತಾನೀಯರು ಎಂಬುದರಲ್ಲಿ, ಮತ್ತು, ಅವರು ಐಎಸ್ಐ ಜೊತೆಗೆ ಸಂಬಂಧ ಹೊಂದಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ.

26/11 ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನ ಸಕರ್ಾರದ ನೇರ ಪಾತ್ರವಿರುವುದು ಸ್ಪಷ್ಟವಾಗಿದ್ದರೂ ಪಾಕಿಸ್ತಾನ ಸಕರ್ಾರಕ್ಕೆ ನೇರವಾಗಿ ಮುಜುಗರವಾದೀತೆಂದು ಅವರ ಹೆಸರನ್ನು ಬಹಿರಂಗ ಪಡಿಸಲು ಅಮೆರಿಕ ಹಿಂದೇಟು ಹಾಕುತ್ತಿದೆ. ಅಂತಹ `ಮಹಾನ್' ವ್ಯಕ್ತಿಗಳು ಯಾರು ಎಂಬುದನ್ನು ತನಗೆ ತಿಳಿಸುವಂತೆ ಅಮೆರಿಕವನ್ನು ಒತ್ತಾಯಿಸುವುದು ಈ ಸಮಯದಲ್ಲಿ ಭಾರತ ಸಕರ್ಾರದ ಕರ್ತವ್ಯ. ಆದರೆ ಅಂತಹ ಪ್ರಯತ್ನಗಳು ನಡೆದ ವರದಿಗಳಿಲ್ಲ.

ಇಲಿನಾಯ್ಸ್ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಹೆಡ್ಲಿಯ ಸಹವತರ್ಿ ತಹವ್ವೂರ್ ಹುಸೇನ್ ರಾಣಾ ನೀಡಿರುವ ಹೇಳಿಕೆಯೂ ಸಹ ಇಲ್ಲಿ ಮುಖ್ಯವಾದದ್ದು. ಐಎಸ್ಐ ಪರವಾಗಿ, ಅದು ಹೇಳಿದಂತೆಯೇ, ತಾನು ಭಯೋತ್ಪಾದಕ ಕೃತ್ಯ ಎಸಗಿರುವುದಾಗಿ ಆತ ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. 26/11 ದಾಳಿಯು ಪಾಕ್ ಸಕರ್ಾರದ ಅಧಿಕೃತ ಕೃತ್ಯ ಎಂದಿದ್ದ ಅವನು, `ನಾನು ಒಂದು ದೇಶದ ಪರವಾಗಿ, ಹಾಗೂ ಇನ್ನೊಂದು ದೇಶದ ವಿರುದ್ಧವಾಗಿ ಕೆಲಸಮಾಡಿದ್ದೇನೆ. ಹೀಗಾಗಿ ನನ್ನನ್ನು ಭಯೋತ್ಪಾದಕ ಎಂದು ಪರಿಗಣಿಸದೇ ವಿಚಾರಣೆಯಿಂದ ಮುಕ್ತಗೊಳಿಸಬೇಕು' ಎಂದು ನ್ಯಾಯಾಲಯವನ್ನು ಕೋರಿದ್ದ. ಅವನ ಕೋರಿಕೆ ತಿರಸ್ಕೃತಗೊಂಡಿದೆ.

ಅಲ್ಲದೇ ಗ್ವಾಂಟಾನಮೋ ಬೇ ಕಾರಾಗೃಹದಲ್ಲಿ ಬಂದಿಗಳಾಗಿರುವ ಅಲ್ ಖೈದಾ ಉಗ್ರರೂ ಐಎಸ್ಐ ವಿರುದ್ಧ ಖಚಿತ ಪುರಾವೆಗಳನ್ನು ಒದಗಿಸಿದ್ದಾರೆ ಎಂದು ವಿಕಿಲೀಕ್ಸ್ ಮಾಹಿತಿ ನೀಡಿದೆ. ಇವೆಲ್ಲ 26/11 ದಾಳಿಯೂ  ಸೇರಿದಂತೆ ಅನೇಕ ಜಾಗತಿಕ ಭಯೋತ್ಪಾದಕ ಕೃತ್ಯಗಳ ಹಿಂದೆ ಐಎಸ್ಐ ಹಾಗೂ ಪಾಕ್ ಮಿಲಿಟರಿ ಶಕ್ತಿಗಳು ಇರುವುದನ್ನು ದೃಢಪಡಿಸುತ್ತವೆ.

ಮುಂಬೈ ನಾರಿಮನ್ ಹೌಸ್ ದಾಳಿಯ ಕುರಿತಂತೆ ವಿಚಾರಣೆ ನಡೆಸುತ್ತಿರುವ ಅಮೆರಿಕದ ನ್ಯೂಯಾಕರ್್ ಕೋಟರ್್ ನೇರವಾಗಿ ಪಾಕ್ ಸಕರ್ಾರವನ್ನೇ ದೋಷಿಯ ಸ್ಥಾನದಲ್ಲಿ ನಿಲ್ಲಿಸಿದೆ. ಲಷ್ಕರ್-ಎ-ತೋಯ್ಬಾ ಜಿಹಾದಿ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಹಫೀಸ್ ಮುಹಮ್ಮದ್ ಸಯೀದ್ ಜೊತೆಗೆ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಶುಜತ್ ಪಾಷಾಗೂ ನ್ಯೂಯಾಕರ್್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಆದರೆ, ಭಾರತದ ಯಾವ ನ್ಯಾಯಾಲಯವೂ ಇದುವರೆಗೆ ಇಂತಹ ದಿಟ್ಟತನವನ್ನು ತೋರಿಸಿಲ್ಲ.

ಮಂಗಳವಾರ, ಮಾರ್ಚ್ 15, 2011

ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನ: ನನ್ನ ಅನಿಸಿಕೆ

  
ಬೆಳಗಾವಿಯಲ್ಲಿ ಇದೇ (2011) ಮಾರ್ಚ್ 11, 12 ಮತ್ತು 13 ರಂದು ನಡೆದ ಎರಡನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಿದ್ದು ನನಗೆ ಸ್ಮರಣೀಯ ಅನುಭವ ನೀಡಿತು. ಸಮ್ಮೇಳನದ ವೈಭವ, ಜನಸಾಗರ, ಆಚಾರ-ವಿಚಾರಗಳ ರಸಪಾಕ ಇವೆಲ್ಲ ಸ್ಮರಣೀಯವಾಗಿದ್ದವು. ನಾನು ಮಾಧ್ಯಮದ ಪ್ರತಿನಿಧಿಯಾಗಿದ್ದರಿಂದ ಊಟ, ವಸತಿ, ಉಪಚಾರಗಳಿಗೆ ಕೊರತೆ ಇರಲಿಲ್ಲ.

ಬೆಳಗಾವಿ ಸಂಪೂರ್ಣ ಕನ್ನಡಮಯವಾಗಿತ್ತು. ಕನ್ನಡದ ಸಂಭ್ರಮಾಚರಣೆ ಸರ್ವತ್ರ ಎದ್ದುಕಾಣುತ್ತಿತ್ತು. ಕನ್ನಡ ಪುಸ್ತಕಗಳ ಪ್ರದರ್ಶನ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಆಯೋಜಿಸಲ್ಪಟ್ಟಿತ್ತು. ಬೆಂಗಳೂರಿನ ಎಲ್ಲ ಸಿನೆಮಾ ಹಾಲ್ಗಳ ಮುಂದೆ ನುಗ್ಗಾಡುವ ಅಷ್ಟೂ ಜನರನ್ನೂ ಒಟ್ಟಾಗಿ ಹಿಡಿದುತಂದು ಒಂದೆಡೆ ಸೇರಿಸಿದರೂ ಬೆಳಗಾವಿಯ ಪುಸ್ತಕ ಪ್ರದರ್ಶನದ ಜನಸಾಗರದಲ್ಲಿ ಅರ್ಧವೂ ಆಗುವುದಿಲ್ಲ! ಜನರಲ್ಲಿ ಪುಸ್ತಕ ಪ್ರೀತಿ ಕಡಿಮೆಯಾಗುತ್ತಿದೆ ಅಂದವರಾರು?!

ಸಮ್ಮೇಳನದ ಆಯೋಜಕರ ಕಾಳಜಿ ಎಲ್ಲೆಡೆ ಕಾಣುತ್ತಿತ್ತು. ಈ ಸಮ್ಮೇಳನದ ಆಯೋಜನೆಯಲ್ಲಿ ಗಂಭೀರವಾಗಿ ಚಿಂತಿಸಬೇಕಾದ ಲೋಪಗಳು ಇರಲಿಲ್ಲ. ಇದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಸಾಧನೆಗಳ ಪಟ್ಟಿಗೆ ಸೇರುವುದರಲ್ಲಿ ಅನುಮಾನವಿಲ್ಲ.

ಆದರೆ ಒಟ್ಟಾರೆ ಸಮ್ಮೇಳನದ ಕಾರ್ಯಯೋಜನೆ ಹಾಗೂ ಮೂಲ ಪರಿಕಲ್ಪನೆಯಲ್ಲಿ ದೋಷವಿತ್ತು. ಸಮ್ಮೆಳನದ ಗೋಷ್ಠಿಗಳನ್ನು ಪರಿಶೀಲಿಸಿದಾಗ ಎಡಪಂಥೀಯ ವಿಚಾರಧಾರೆಯವರೇ ಹೆಚ್ಚಾಗಿ ತುಂಬಿಕೊಂಡಿದ್ದುದು ಮೇಲ್ನೋಟಕ್ಕೇ ತಿಳಿಯುವಂತಿತ್ತು. ಆಧುನಿಕ ವಿಚಾರಧಾರೆಯವರು, ರಾಷ್ಟ್ರೀಯ ವಿಚಾರಧಾರೆಯವರು, ಯಾವ ವಿಚಾರಧಾರೆಗೂ ಒಳಪಡದವರು ಸಾಕಷ್ಟು ಪ್ರಾತಿನಿಧ್ಯ ಪಡೆದಿರಲಿಲ್ಲ. ಸಮ್ಮೇಳನದಲ್ಲಿ ಇನ್ನಷ್ಟು ವೈಚಾರಿಕ ಸಮಗ್ರತೆ ಬೇಕಿತ್ತು ಎನಿಸುತ್ತದೆ.

ವೈಚಾರಿಕ ಸಮಗ್ರತೆ ಹಾಗೂ ವಿಚಾರ ವೈವಿಧ್ಯತೆ ಬೆಳಗಾವಿಯಲ್ಲಿ ಸೊರಗಿತ್ತು. ಡಾ. ಸಿ. ಎನ್. ಆರ್. ರಾವ್, ಡಾ. ಯು. ಆರ್. ರಾವ್, ಡಾ. ಎಸ್. ಆರ್. ರಾವ್, ಡಾ. ಎಸ್. ಎಲ್. ಭೈರಪ್ಪ, ಡಾ. ಎಂ. ಚಿದಾನಂದ ಮೂರ್ತಿ, ಡಾ. ನವರತ್ನ ಎಸ್. ರಾಜಾರಾಮ್, ಡಾ. ಕೆ. ಎಸ್. ನಾರಾಯಣಾಚಾರ್ಯ, ಡಾ. ಸೂರ್ಯನಾಥ ಕಾಮತ್, ಡಾ. ಶತಾವಧಾನಿ ಆರ್. ಗಣೇಶ್, ನಂದನ್ ನೀಲೇಕಣಿ, ಡಾ. ಶ್ರೀನಿವಾಸ್ ಕುಲಕರ್ಣಿ, ಗುರುರಾಜ್ ದೇಶಪಾಂಡೆ, ಡಾ. ದೇವಿ ಶೆಟ್ಟಿ, ಮುಂತಾದ ಖ್ಯಾತ ಚಿಂತಕರ ಅನುಪಸ್ಥಿತಿ ಪ್ರಧಾನವಾಗಿ ಕಾಣುತ್ತಿತ್ತು. ಈ ಪೈಕಿ ಹಲವರನ್ನು ಭಾಷಣಕ್ಕೆ, ಗೋಷ್ಠಿಗಳಿಗೆ ಕರೆಯುವುದಿರಲಿ, ಅವರಲ್ಲೇಕರಿಗೆ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನೂ ಕಳುಹಿಸಿರಲಿಲ್ಲ ಎನ್ನುವುದು ವಾಸ್ತವ ಸಂಗತಿ.

ತುಂಬಾ ಪ್ರಮುಖರಾದ ಈ ಚಿಂತಕರನ್ನು ಹೇಗೆ ಮರೆಯಲಾಯಿತು ಎಂಬುದು ಸಹಜವಾದ ಪ್ರಶ್ನೆ. ಈ ಪೈಕಿ ಹಲವರು ಅಂತಾರಾಷ್ಟ್ರೀಯ ಮಾನ್ಯತೆ ಇರುವವರು. ಮೇಲಾಗಿ ಇವರೆಲ್ಲ ಕನ್ನಡಿಗರು. ಅವರನ್ನು ಕೈಬಿಟ್ಟಿರುವುದು ಕೇವಲ ಆಕಸ್ಮಿಕ ಎಂದುಕೊಳ್ಳುವುದು ಮುಗ್ಧತನವಾಗುತ್ತದೆ. ಪ್ರಧಾನ ವೇದಿಕೆಯ ತುಂಬ ಹೆಚ್ಚಾಗಿ ರಾರಾಜಿಸಿದವರು ಎಡಪಂಥೀಯ ಸಾಹಿತಿಗಳು ಹಾಗೂ ಚಲನಚಿತ್ರ ಕಲಾವಿದರು.

ಸಾಹಿತಿಗಳು ಎಂದರೆ ಸರ್ವಜ್ಞರು ಎಂಬ ಭ್ರಮೆ ನಮಗಿನ್ನೂ ಹೋಗಿಲ್ಲ. ಸಾಹಿತ್ಯದ ಮೂಲಕ ಜೀವನದ ದೃಷ್ಟಿ ಸಿಗುತ್ತದೆ ಎಂಬುದು ಇನ್ನೊಂದು ದೊಡ್ಡ ಭ್ರಮೆ. ಸಾಹಿತ್ಯದ ಮೂಲಕ ಆಯಾ ಸಾಹಿತಿಯ ದೃಷ್ಟಿ ಮಾತ್ರ ಸಿಗುತ್ತದೆ ಎಂಬುದು ವಾಸ್ತವ. ಹಾಗೆಂದು ಸಾಹಿತ್ಯಕ್ಕೆ ಮಹತ್ವವೇ ಇಲ್ಲ ಎನ್ನಲಾಗದು. ವ್ಯಾಪಕವಾಗಿ ಸಾಹಿತ್ಯವನ್ನು ಓದಿ ತಿಳಿಯುವುದರಿಂದ ಜೀವನದ ಹಲವು ಮಗ್ಗುಲುಗಳ ಪರಿಚಯವಾಗುತ್ತದೆ. ವಿವಿಧ ದೃಷ್ಟಿಗಳ ಪರಿಚಯವಾಗುತ್ತದೆ. ಹಾಗೆಂದು ಸಾಹಿತ್ಯ ಓದದೇ ಅಥವಾ ಬರೆಯದೇ ಇರುವವರಿಗೆ ಜೀವದ ದೃಷ್ಟಿಯೇ ಇಲ್ಲ ಎಂದುಕೊಳ್ಳುವುದು ಮುಗ್ಧತನವಷ್ಟೇ ಅಲ್ಲ, ಮೂರ್ಖತನವೂ ಸಹ.

ಈ ಮೂರ್ಖತನದಿಂದಾಗಿಯೇ ತಂತ್ರಜ್ಞಾನದ ಬಗ್ಗೆ, ಆರ್ಥಿಕತೆಯ ಬಗ್ಗೆ - ಹೀಗೆ ಎಲ್ಲದರ ಬಗ್ಗೆಯೂ ಸಾಹಿತಿಯ ಅಭಿಪ್ರಾಯವನ್ನು ಮಾತ್ರ ಕೇಳುವ, ಆತ ಹೇಳಿದ್ದನ್ನೇ ಪರಮಸತ್ಯವೆಂದು ಬಿಂಬಿಸುವ ಪರಿಪಾಠ ಮಾಧ್ಯಮಗಳಲ್ಲಿ, ಸರ್ಕಾರದ ಮಟ್ಟದಲ್ಲಿ ಹೆಚ್ಚಾಗುತ್ತಿದೆ.

ಕನ್ನಡ ಸಾಹಿತ್ಯ ಸಮ್ಮೇಳನಗಳು, ಮತ್ತು ಈಗ ವಿಶ್ವ ಕನ್ನಡ ಸಮ್ಮೆಳನ, ಮೂಲತಃ ಸಂಭ್ರಮದ ಆಚರಣೆಯ ಹಾಗೂ ವಿಚಾರ ವಿನಿಮಯದ ಮಿಶ್ರಣ. ಭಾರತದ ಜನಮಾನಸದಲ್ಲಿ ಆಚರಣೆಗೆ ಮಹತ್ವದ ಸ್ಥಾನವಿದೆ. ಹಾಗೆಯೇ ವಿಚಾರಕ್ಕೂ ಮಹತ್ವದ ಸ್ಥಾನವಿದೆ. ಇವೆರಡರ ಸಂಗಮ ಸ್ಥಳದಲ್ಲಿ ಈ ಮಿಶ್ರಣದ ಹದ ರುಚಿಯಾಗಿ, ಶುಚಿಯಾಗಿ ಇರಬೇಕು. ಅದು ಪೌಷ್ಟಿಕವೂ ಆಗಿರಬೇಕು. ಈ ಮಿಶ್ರಣ ರಸಾಯನವಾಗಿರಬೇಕು. ಕಲಬೆರಕೆಯಾಗಿರಬಾರದು. ಇಂದಿನ ಸಂದರ್ಭದಲ್ಲಿ ವಿಚಾರವಿನಿಮಯಕ್ಕೇ ಒಂದು ಜಾಗತಿಕ ಮಟ್ಟದ, ಪೂರ್ಣ ಪ್ರಮಾಣದ ಸಮ್ಮೇಳನದ ಅಗತ್ಯ ಖಂಡಿತ ಇದೆ.

`ವರ್ಲ್ಡ್ ಎಕನಾಮಿಕ್ ಫೋರಮ್' ಸ್ವಿಟ್ಜರ್ಲ್ಯಾಂಡಿನ ಒಂದು ಖಾಸಗಿ ಸಂಸ್ಥೆ. ಡೇವೋಸಿನಲ್ಲಿ ಅದು ನಡೆಸುವ ವಾರ್ಷಿಕ ಸಮ್ಮೇಳನ ವಿಶ್ವಪ್ರಸಿದ್ಧ. ನಮ್ಮ ಸಾಹಿತ್ಯ ಸಮ್ಮೇಳನದ ಹಾಗೆ ಅದು ಹಲವು ದಿನಗಳ ಸಮ್ಮೇಳನ ನಡೆಸುತ್ತದೆ. ಅದರದು ಇನ್ನೂ ದೊಡ್ಡ ವ್ಯಾಪ್ತಿ. ಅದು ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಮಾವೇಶ ನಡೆಸುತ್ತದೆ. ಜಗತ್ತಿನ ಅನೇಕ ದೇಶಗಳ ಮಂತ್ರಿಗಳು, ಸರ್ಕಾರಿ ಪ್ರಮುಖರು, ಆರ್ಥಿಕ ತಜ್ಞರು, ಉದ್ಯಮಿಗಳು, ಪತ್ರಕರ್ತರು, ಚಿಂತಕರು ಸಮಾವೇಶಗೊಂಡು ಚರ್ಚೆ ನಡೆಸುತ್ತಾರೆ. ರಸಮಂಜರಿಯ, ಹಾಡು-ಕುಣಿತಗಳ ಗೊಡವೆಯಿಲ್ಲದೆ ಗಂಭೀರ ಚಿಂತನೆ ನಡೆಯುತ್ತದೆ. ಪ್ರಸ್ತುತ ವಿಶ್ವ ಕನ್ನಡ ಸಮ್ಮೇಳನ ಅಂತಹ ಪಾತ್ರವನ್ನು ವಹಿಸೀತೆಂಬ ನಿರೀಕ್ಷೆ ಇತ್ತು.

ಆದರೂ ಗಡಿನಾಡಾದ ಬೆಳಗಾವಿಯಲ್ಲಿ ಸಂಭ್ರಮಾಚರಣೆಗೆ ವಿಶೇಷ ಅರ್ಥವಿತ್ತು. ಅದನ್ನು ಪೂರ್ಣವಾಗಿ ಕಡೆಗಣಿಸುವ ಹಾಗಿಲ್ಲ. ಆಚರಣೆಯ ವೈಭವ ನಾಡಿನ ಜನರಿಗೆ ಹೊಸ ಆತ್ಮವಿಶ್ವಾಸವನ್ನು ತಂದುಕೊಡಲು ನೆರವಾಗುತ್ತದೆ. ಅವರ ಸಂಕಲ್ಪ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಇದು ಒಳ್ಳೆಯ ಬೆಳವಣಿಗೆಯೇ.

ಆದರೆ ಜನರಲ್ಲಿನ ಉದ್ದೀಪ್ತ ಸಂಕಲ್ಪಶಕ್ತಿ ಬತ್ತುವ ಮೊದಲು ಆಡಳಿತಗಾರರು ಹಾಗೂ ಜನರು ಹೆಚ್ಚು ವಿಚಾರಶೀಲರಾಗಬೇಕು. ಕಳೆದ 55 ವರ್ಷಗಳಲ್ಲಿ ಕರ್ನಾಟಕ ಯಾವ ಹಾದಿಯಲ್ಲಿ ನಡೆದುಬಂದಿದೆ ಎಂಬುದರ ಸಮಗ್ರ ವಿಮರ್ಶೆಯಾಗಬೇಕು. ಮುಂದಿನ ಗುರಿಯ ಹಾಗೂ ದಾರಿಯ ಬಗ್ಗೆ ಸ್ಪಷ್ಟತೆಯನ್ನು ಮೂಡಿಸಿಕೊಳ್ಳಬೇಕು.

ಬೆಳಗಾವಿ ಈ ರೀತಿಯ ವಿಚಾರ-ಮಥನದ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಯನ್ನು ಮಾತ್ರ ಇಟ್ಟಿದೆ. ಪ್ರಸ್ತುತ ವಿಶ್ವ ಕನ್ನಡ ಸಮ್ಮೇಳನದ ವಿಚಾರ ಗೋಷ್ಠಿಯಲ್ಲಿ ಎಲ್ಲ ಬಗೆಯ ವೈಚಾರಿಕ ನಂಬಿಕೆಗಳಿರುವ ಚಿಂತಕರನ್ನು ಸೇರಿಸಿಕೊಂಡಿದ್ದರೆ ಗಂಭೀರ ವಿಚಾರ ವಿನಿಮಯ ನಡೆಯುತ್ತಿತ್ತು. ಒಂದೇ ವಿಚಾರದವರೇ ಪ್ರಧಾನವಾಗಿ ತುಂಬಿಹೋದರೆ ಏನನ್ನು ಚಿರ್ಚಿಸುತ್ತೀರಿ? ಆಗ ಚರ್ಚೆಯಾಗುವುದಿಲ್ಲ, ಪ್ರಚಾರ ಆಂದೋಲನವಾಗುತ್ತದೆ, ಅಷ್ಟೇ.

ಬೆಳಗಾವಿಯಲ್ಲಿ ನಿಜವಾಗಿ ಸಂಭ್ರಮಪಟ್ಟವರು `ಸಾಮಾನ್ಯ ಜನರು'. ವಿಶ್ವದಲ್ಲಿ ಕನ್ನಡದ, ಕರ್ನಾಟಕದ ಸ್ಥಾನಮಾನಗಳು ಹೇಗಿವೆ ಎಂಬ ಚರ್ಚೆ ಹಾಗಿರಲಿ, ಬೆಳಗಾವಿ ಹಾಗೂ ಸುತ್ತಮುತ್ತಲಿನ ಜನರ ಪಾಲಿಗೆ ಬೆಳಗಾವಿಯೇ ವಿಶ್ವವಾಗಿತ್ತು. ಅದೇ ಕನ್ನಡವಾಗಿತ್ತು. ಕರ್ನಾಟಕವೂ ಆಗಿತ್ತು!

ಈ ವಿಶ್ವ ಕನ್ನಡ ಸಮ್ಮೇಳನಕ್ಕೆ ಜನತೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಕಂಡುಬಂದಿದ್ದು ಇತಿಹಾಸದಲ್ಲಿ ದಾಖಲಾಗುವ ಅಂಶ. ಇಂತಹ ಐತಿಹಾಸಿಕ ಕ್ಷಣಗಳಿಗೆ ಪ್ರತ್ಯಕ್ಷ ಸಾಕ್ಷಿಯಾದವರಿಗೆ ಧನ್ಯತೆಯ ಅನುಭವ.

ಬುದ್ಧಿಜೀವಿಗಳಲ್ಲಿ ಇಲ್ಲದ ಬದ್ಧತೆ ಜನತೆಯಲ್ಲಿರುವುದು ಬೆಳಗಾವಿಯಲ್ಲಿ ಮತ್ತೊಮ್ಮೆ ರುಜುವಾತಾಗಿದೆ. ಅದರಲ್ಲೂ ಯುವಜನರಲ್ಲಿ ಕಂಡುಬಂದ ಉತ್ಸಾಹ ಪ್ರಚಂಡವಾದದ್ದು. ಸಿರಿಗನ್ನಡ ಕವಿಗೋಷ್ಠಿಯಿರಲಿ, ಜಾಗತೀಕರಣ ಕುರಿತ ವಿಚಾರಗೋಷ್ಠಿಯಿರಲಿ ಅಥವಾ ಮಾಧ್ಯಮವನ್ನು ಕುರಿತ ಚರ್ಚೆಯಿರಲಿ, ಎಲ್ಲೆಲ್ಲೂ ಬರೀ ಜನರು, ಯುವಜನರು.

ಆದರೆ ಸಮ್ಮೇಳನದ ಆಚಾರ-ವಿಚಾರಗಳಲ್ಲಿ ಯುವಜನರಿಗೆ ಹೆಚ್ಚು ಪ್ರಧಾನ ಪಾತ್ರ ಇರಲಿಲ್ಲ. ಅಲ್ಲೆಲ್ಲ ಮಿಂಚಿದವರು ವಯೋವೃದ್ಧ ಸಾಹಿತಿ-ಲೇಖಕರು ಮಾತ್ರ.

ಹೆಂಗಸರು, ಮಕ್ಕಳು, ಪುರುಷರು, ವೃದ್ಧರು, ಬಡವರು, ಬಲ್ಲಿದರು - ಹೀಗೆ ಸಮಸ್ತ ಜನತೆ ತೋರಿದ ಅತೀವ ಸಡಗರ ಅನನ್ಯ. ಜಿಲ್ಲಾ ಕ್ರೀಡಾಂಗಣ ತುಂಬಿ ತುಳುಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕವಿಗೋಷ್ಠಿ, ವಿಚಾರಗೋಷ್ಠಿ, ಜಾನಪದ ನೃತ್ಯಗಳು, ಸಂಗೀತ ಕಚೇರಿ, ಗಾಯನ, ಭಾಷಣ - ಹೀಗೆ ಯಾವುದೇ ಕಾರ್ಯಕ್ರಮವಿದ್ದರೂ, ಎಲ್ಲವೂ ಮುಗಿಯುವವರೆಗೂ, ಜನರು ತಾವು ಕುಳಿತ ಸ್ಥಳವನ್ನು ಬಿಟ್ಟು ಏಳದೇ ಇದ್ದುದು ನನಗಂತೂ ಬಹಳ ಅದ್ಭುತ ದೃಶ್ಯವಾಗಿ ಕಾಣಿಸಿತು.

ಗೋಷ್ಠಿಗಳ ಬಗ್ಗೆ ಒಂದು ಮಾತು. ಏಕಕಾಲದಲ್ಲಿ ವಿವಿಧ ವಿಚಾರ ಸಂಕಿರಣಗಳು ನಡೆಯುತ್ತಿದ್ದುದರಿಂದ ಎಲ್ಲವನ್ನು ನೋಡಲಾಗಲಿಲ್ಲ. ಆದರೆ ನೋಡಿದ ಕೆಲವು ಗೋಷ್ಠಿಗಳು ಕಳಪೆ ಮಟ್ಟದಲ್ಲಿದ್ದವು. ಪ್ರಚಾರ ಆಂದೋಲನಕಾರರಾಗಬೇಕಾದವರು ವಿದ್ವಾಂಸರೆಂದು ಸೋಗು ಹಾಕಿಕೊಂಡು ಬಂದರೆ ಏನಾಗುತ್ತದೆ ಎಂಬುದಕ್ಕೆ ಕೆಲವು ವಿಚಾರ ಗೋಷ್ಠಿಗಳು ನಿದರ್ಶನವಾಗಿದ್ದವು. ಕಿರುಚುವುದೇ ವಿದ್ವತ್ತಿನ ಲಕ್ಷಣ ಎಂಬಂತೆ ಕೆಲವರು ಭಾವಿಸಿದ್ದುದು ಸ್ಪಷ್ಟವಾಗಿತ್ತು.

ಒಂದು ಉದಾಹರಣೆ. ಇನ್ಫೋಸಿಸ್ ಕಂಪೆನಿಯ ಮೋಹನ್ದಾಸ್ ಪೈ ಅಧ್ಯಕ್ಷತೆಯಲ್ಲಿ ನಡೆದ ಜಾಗತೀಕರಣ ಕುರಿತ ವಿಚಾರಗೋಷ್ಠಿ ಬಹಳ ಸಪ್ಪೆ ಎನಿಸಿತು. ಇದಕ್ಕೆ ಪೈ ಅವರು ಕಾರಣ ಎಂದುಕೊಳ್ಳುವ ಹಾಗಿಲ್ಲ. ಈ ಸಂಕಿರಣದಲ್ಲಿ ಮಾತನಾಡಿದ ಅನೇಕ ಭಾಷಣಕಾರರು ಕೊಟ್ಟಿದ್ದ ವಿಷಯದ ಬಗ್ಗೆ ಮಾತನಾಡುವಷ್ಟು ಅಧ್ಯಯನ ಸಿದ್ಧತೆ ಮಾಡಿಕೊಂಡಿರಲಿಲ್ಲ ಎನ್ನಬಹುದು. ಅನೇಕರು ವಿಷಯಾಂತರ ಮಾಡಿದ್ದು ಸಾಮಾನ್ಯವಾಗಿತ್ತು. ಬೌದ್ಧಿಕ ಮಟ್ಟದ ಚರ್ಚೆಗಿಂತಲೂ ಆವೇಶವೇ ಪ್ರಧಾನವಾಗಿದ್ದ ಈ ಸಂಕಿರಣದಲ್ಲಿ `ರಸ್ತೆ ಸರಿಯಿಲ್ಲ, ಕುಡಿಯುವ ನೀರಿಲ್ಲ, ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ, ಬಡವರ ಮಕ್ಕಳಿಗೆ ಶಾಲೆಗಳಲ್ಲಿ ಸೀಟು ಸಿಗುತ್ತಿಲ್ಲ' - ಇತ್ಯಾದಿ ಸ್ಥಳೀಯ ಸಮಸ್ಯೆಗಳ ಉಲ್ಲೇಖವೇ ಪ್ರಧಾನವಾಗಿತ್ತು. ಈ ಸಮಸ್ಯೆಗಳಿಗೂ ಜಾಗತೀಕರಣಕ್ಕೂ ಇರುವ ಸಂಬಂಧವನ್ನು ತೋರಿಸಲು ಬಹುತೇಕ ಭಾಷಣಕಾರರು ವಿಫಲರಾದರು. ಅಂತಾರಾಷ್ಟ್ರೀಯ ಮಟ್ಟದ ಜನ ಸಂಪರ್ಕ, ಸಾಂಸ್ಕೃತಿಕ ಸಂಪರ್ಕ, ವ್ಯಾಪಾರ- ವ್ಯವಹಾರಗಳು ಏರ್ಪಡುತ್ತಿರುವ ಕಾಲದಲ್ಲಿ, ಅವುಗಳ ಪ್ರಯೋಜನ ಅಥವಾ ದುಷ್ಟರಿಣಾಮ ಇತ್ಯಾದಿ ಅಂಶಗಳ ಬಗ್ಗೆ ಸೂಕ್ತ ಉದಾಹರಣೆ, ದಾಖಲೆ ಹಾಗೂ ಅಂಕಿಅಂಶಗಳ ಸಮೇತ ವಿಷಯ ಮಂಡನೆ ಮಾಡಿದ್ದು ಕಾಣಲಿಲ್ಲ.

ಬುಧವಾರ, ಜನವರಿ 26, 2011

ಬ್ರಹ್ಮಾಂಡದ ರಹಸ್ಯ ಭೇದಿಸಲಾದೀತೆ?

ಬ್ರಹ್ಮಾಂಡ (ಯೂನಿವರ್ಸ್) ನಿಜಕ್ಕೂ ಎಷ್ಟು ದೊಡ್ಡದು? - ಎಂಬ ಪ್ರಶ್ನೆಯ ಉತ್ತರಕ್ಕಾಗಿ ವಿಜ್ಞಾನಿಗಳತ್ತ ನೋಡುತ್ತೇವೆ. ಆದರೆ ಆ ಬಗ್ಗೆ ಎಷ್ಟೇ ಅಧ್ಯಯನ ನಡೆಯುತ್ತಿದ್ದರೂ ಬ್ರಹ್ಮಾಂಡದ ಹುಟ್ಟು ಹಾಗೂ ಅದರ ವ್ಯಾಪ್ತಿ ಕುರಿತು ವಿಜ್ಞಾನಿಗಳಿಗೂ ಖಚಿತವಾಗಿ ಏನೂ ತಿಳಿದಿಲ್ಲ! ಬ್ರಹ್ಮಾಂಡ ಅನಂತವೆ? ಅಥವಾ ಅದಕ್ಕೆ `ಗಡಿ'ಗಳಿವೆಯೆ? ಒಂದಲ್ಲದೇ ಹಲವಾರು ಬ್ರಹ್ಮಾಂಡಗಳಿವೆಯೆ? - ಇತ್ಯಾದಿ ಚಚರ್ೆ ನಡೆಯುತ್ತಲೇ ಇದೆ.

ಬ್ರಹ್ಮಾಂಡ ಅನಂತವಲ್ಲ ಎಂದುಕೊಂಡರೆ, ಅದು ಎಷ್ಟು ದೊಡ್ಡದು? ಅದರಿಂದಾಚೆಗೆ ಏನಿದೆ? - ಎಂಬ ಪ್ರಶ್ನೆಗಳೂ ಮೂಡುತ್ತವೆ.

ಮನುಷ್ಯನ ಜೀವನ ಭೂಮಿಯೊಳಗೆ ಬಂಧಿಸಲ್ಪಟ್ಟಿದೆ. ಭೂಮಿ ಬಿಟ್ಟು ಆತ ಎಲ್ಲಿಗೂ ಹೋಗುವಂತಿಲ್ಲ. ಮನುಷ್ಯರು ಹೆಚ್ಚೆಂದರೆ 100-120 ವರ್ಷ ಬದುಕಿರಬಲ್ಲರು. ನಿಮಗೊಂದು ಮ್ಯಾಜಿಕ್ ನೌಕೆ ಕೊಟ್ಟರೂ ನೀವು ಅದರಲ್ಲಿ ಕುಳಿತು 120 ವರ್ಷದಲ್ಲಿ ಎಷ್ಟು ದೂರ ಹೋಗಲು ಸಾಧ್ಯ? ಬ್ರಹ್ಮಾಂಡದ ಲೆಕ್ಕದಲ್ಲಿ ಕೋಟಿಗಳಿಗೂ ಬೆಲೆಯಿಲ್ಲ! ಕೋಟಿ ಕೋಟಿ ಎಂದರೂ ಅದು ಚಿಕ್ಕ ಸಂಖ್ಯೆಯೇ. ಹೀಗಾಗಿ ಬ್ರಹ್ಮಾಂಡದ ರಹಸ್ಯವನ್ನು ಮನುಷ್ಯ ಖುದ್ದಾಗಿ ತಿಳಿಯುವುದು ಅಸಾಧ್ಯ. ಅಲ್ಲದೇ ಮನುಷ್ಯನ ಅಂಗಾಂಗಳ, ಮೆದುಳಿನ (ಇಂದ್ರಿಯಗಳ) ಮೂಲಕ ಎಲ್ಲವನ್ನೂ ತಿಳಿಯಬಹುದು ಎನ್ನುವಂತಿಲ್ಲ.

ನಮ್ಮ ಇಂದ್ರಿಯ ಗ್ರಹಿಕೆಯ ಶಕ್ತಿಗೊಂದು ಮಿತಿಯಿದೆ. ಅದನ್ನು ಮೀರಿದ ವಿಚಾರಗಳೂ ಬ್ರಹ್ಮಾಂಡದಲ್ಲಿ ಇರಬಹುದು. ನಮಗೆ ಗೊತ್ತಿರುವಷ್ಟು ವಿಷಯಗಳು ಇರುವೆಗೆ ಗೊತ್ತೆ? ಹಾಗೆಯೇ, ನಾವು ತಿಳಿಯಲಾರದ ವಿಷಯಗಳೂ ಇರಬಹುದು. ಅಲ್ಲದೇ, ನಮ್ಮ ಭೌತಿಕ ಆಯಾಮವನ್ನು ಮೀರಿದ, ಮೇಲಿನ ಆಯಾಮಗಳೂ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು. ಅದರ ಬಗ್ಗೆ ಮುಂದೆ ನೋಡೋಣ.

ನಮ್ಮ ಸುತ್ತಲಿನ ಬಾಹ್ಯಾಕಾಶ, ನಮಗೆ ಕಾಣುತ್ತಿರುವ ಗ್ರಹ-ನಕ್ಷತ್ರಗಳು, ಗ್ಯಾಲಕ್ಸಿಗಳು - ಹೀಗೆ ಸಮೀಪದ ಸಂಗತಿಗಳನ್ನು ಅಧ್ಯಯನ ಮಾಡುವ ಮೂಲಕ ಹೊಸ ಹೊಸ ಸಿದ್ಧಾಂತಗಳನ್ನು ಸೃಷ್ಟಿಸುವುದು; ಆ ಸಿದ್ಧಾಂತಗಳನ್ನು ಆಧರಿಸಿ ಇನ್ನೂ ಹೊಸ ಅದ್ಯಯನಗಳನ್ನು ನಡೆಸುವುದು - ಇಷ್ಟನ್ನು ಈಗ ಮನುಷ್ಯ ಮಾಡಿಕೊಂಡು ಬರುತ್ತಿದ್ದಾನೆ.

ಬ್ರಹ್ಮಾಂಡದ ಬಗ್ಗೆ ಮನಸ್ಸಿನಲ್ಲಿ ಪೂರ್ಣ ಕಲ್ಪನೆ ಮಾಡಿಕೊಳ್ಳುವುದೂ ಮಾನವನ ಬುದ್ಧಿಶಕ್ತಿಗೆ ಸಾಧ್ಯವಾಗುವುದಿಲ್ಲ. ನಮ್ಮ ಭೂಮಿ ಸೌರವ್ಯೂಹದ ಒಂದು ಭಾಗ. ನಮ್ಮ ಇಡೀ ಸೌರವ್ಯೂಹವೇನೂ ದೊಡ್ಡದಲ್ಲ. ಅದು ಒಂದು ಸಾಧಾರಣ ಗಾತ್ರದ ಗ್ಯಾಲಕ್ಸಿಯ ಒಂದು ಪುಟ್ಟ ಭಾಗ.

ಯಾವುದೇ ಒಂದು ಒಂದು ಗ್ಯಾಲಕ್ಸಿಯಲ್ಲಿ ನಮ್ಮ ಸೂರ್ಯನಂತಹ (ಇನ್ನೂ ಚಿಕ್ಕ ಹಾಗೂ ದೊಡ್ಡ) ಕೋಟಿಗಟ್ಟಲೆ ನಕ್ಷತ್ರಗಳಿರುತ್ತವೆ. ಕೋಟಿಗಟ್ಟಲೆ ಸೌರವ್ಯೂಹಗಳೂ ಇರಬಹುದು! ನಾವಿರುವ ಗ್ಯಾಲಕ್ಸಿಗೆ ನಾವೇ `ಮಿಲ್ಕೀ ವೇ' ಎಂದು ಹೆಸರಿಟ್ಟುಕೊಂಡಿದ್ದೇವೆ. ನಮಗೆ ಕಾಣುವ ಇನ್ನೂ ಕೆಲವು ಗ್ಯಾಲಕ್ಸಿಗಳಿಗೆ ಇತರ ಹೆಸರುಗಳನ್ನು ಕೊಟ್ಟಿದ್ದೇವೆ. ಇಂತಹ ಗ್ಯಾಲಕ್ಸಿಗಳೂ ಕೋಟಿಗಟ್ಟಲೆ ಇವೆ!

ನೀವು ಭೂಮಿಯಿಂದ ಬಾಹ್ಯಾಕಾಶಕ್ಕೆ ಹೊರಟರೆ - ಅರೆ ಯಾವ ವೇಗದಲ್ಲಿ ಎಂದು ಹೇಳಲೇ ಇಲ್ಲವಲ್ಲ? ನಿಮ್ಮ ಕಾರು, ರಾಕೆಟ್ಗಳ ವೇಗ ಬಾಹ್ಯಾಕಾಶದ ಮುಂದೆ ಏನೇನೂ ಅಲ್ಲ. ಸರಿ, ಬೆಳಕಿನ ವೇಗದಲ್ಲಿ ಹೊರಟರೆ ಏನಾದರೂ ಸ್ವಲ್ಪ ಲೆಕ್ಕ ಹೇಳಬಹುದು. ಆದರೆ ಬೆಳಕಿನ ವೇಗದಲ್ಲಿ ಸಂಚರಿಸುವುದು ಅಸಾಧ್ಯ ಎಂದು ವಿಜ್ಞಾನಿ ಆಲ್ಬಟರ್್ ಐನ್ಸ್ಟೀನ್ ತೋರಿಸಿಕೊಟ್ಟಿದ್ದಾರೆ. ಆದರೂ ನೀವು ಬೆಳಕಿನ ವೇಗದಲ್ಲಿ ಹೊರಟಿರಿ ಎಂದುಕೊಳ್ಳೋಣ.

ಬೆಳಕಿನ ವೇಗ ಒಂದು ಸೆಕೆಂಡಿಗೆ ಸುಮಾರು 3 ಲಕ್ಷ ಕಿಲೋಮೀಟರ್! ಇಷ್ಟು ವೇಗದಲ್ಲಿ ಹೊರಟರೆ, ಸೂರ್ಯನ್ನು ಬಿಟ್ಟರೆ ಭೂಮಿಯ ಹತ್ತಿರ ಇರುವ ಇನ್ನೊಂದು ನಕ್ಷತ್ರ `ಆಲ್ಫಾ ಸೆಂಟಾರಿ'ಯನ್ನು ತಲುಪಲು 4.37 ವರ್ಷಗಳು ಬೇಕಾಗುತ್ತವೆ.

ಈಗಲೂ ನೀವು ನಮ್ಮ ಗ್ಯಾಲಕ್ಸಿಯ ಒಳಗೇ ಇರುತ್ತೀರಿ. ನಮ್ಮ ಗ್ಯಾಲಕ್ಸಿ ದಾಟಿ ಹೊರಹೋಗಲು 1 ಲಕ್ಷ ವರ್ಷಗಳು ಬೇಕು! ಇನ್ನೂ ಕೋಟ್ಯಂತರ ಗ್ಯಾಲಕ್ಸಿಗಳು ದಾರಿಯಲ್ಲಿ ಸಿಗುತ್ತವೆ. ಅವನ್ನೆಲ್ಲ ದಾಟಲು ಅದೆಷ್ಟು ಕೋಟಿ ವರ್ಷಗಳು ಬೇಕೋ ಯಾರಿಗೂ ತಿಳಿಯದು.

ಈಗ ಒಂದು ವಿಷಯ ನಿಮ್ಮ ಗಮನಕ್ಕೆ ಬಂದಿರಬಹುದು. ಬಾಹ್ಯಾಕಾಶದ ವಿಷಯಕ್ಕೆ ಬಂದಾಗ ಬೆಳಕಿನ ವೇಗವೂ ಏನೇನೂ ಅಲ್ಲ!

ಆದರೆ ಬೆಳಕಿನ ವೇಗಕ್ಕಿಂತಲೂ ಮಿಗಿಲಾದ ವೇಗ ಇನ್ಯಾವುದೂ ಇಲ್ಲ. ಹೀಗಾಗಿ ಬೆಳಕಿನ ವೇಗವನ್ನು ಬಿಟ್ಟರೆ ಬೇರೆ ಗತಿ ಇಲ್ಲ. ಆದರೆ ಸ್ವತಃ ಬೆಳಕಿಗೂ ಬ್ರಹ್ಮಾಂಡವನ್ನು ಅಳೆಯುವುದು, ಅದನ್ನು ಸವರ್ೇ ಮಾಡುವುದು ಅಸಾಧ್ಯ!

ಬ್ರಹ್ಮಾಂಡ ಹುಟ್ಟಿದ ತಕ್ಷಣ (ಅಥವಾ ಬಿಗ್ ಬ್ಯಾಂಗ್ ಆದ ಸಮಯದಲ್ಲಿ) ಎಷ್ಟೋ ನಕ್ಷತ್ರಗಳಿಂದ, ಆಕಾಶಕಾಯಗಳಿಂದ ಹೊರಟ ಬೆಳಕು ಇನ್ನೂ ನಮ್ಮ ಭೂಮಿಯನ್ನು ತಲುಪಿಲ್ಲ. ಮುಂದೆ ಬ್ರಹ್ಮಾಂಡ ಅಳಿಯುತ್ತದೆ ಎಂದುಕೊಂಡರೆ, ಅದು ಅಳಿಯುವ ಕಾಲ ಬಂದರೂ ಎಷ್ಟೋ ನಕ್ಷತ್ರಗಳಿಂದ ಹೊರಟ ಬೆಳಕಿನ ಕಿರಣಗಳು ಭೂಮಿಯನ್ನು ತಲುಪಿರುವುದಿಲ್ಲ.

ಇಂತಹ ಬ್ರಹ್ಮಾಂಡದ ವ್ಯಾಪ್ತಿಯನ್ನು ನಾವು ಅರಿಯಲಾದೀತೆ?

ಬ್ರಹ್ಮಾಂಡದ ಸ್ವರೂಪ ಎಲ್ಲ ಕಡೆಯೂ ಒಂದೇ ರೀತಿ ಇಲ್ಲ ಎಂಬುದು ಅನೇಕ ವಿಜ್ಞಾನಿಗಳ ವಾದ. ಪ್ರಸ್ತುತ ಭೌತನಿಯಮಗಳು ಅನ್ವಯವಾಗದ ಸ್ಥಳಗಳೂ ಬ್ರಹ್ಮಾಂಡದಲ್ಲಿ ಇರಬಹುದು ಎಂಬುದು ಅವರ ಊಹೆ. ಈಗ ನಮಗೆ ತಿಳಿದಿರುವ ರೀತಿಯಲ್ಲೇ ಬ್ರಹ್ಮಾಂಡ ಎಲ್ಲ ಕಡೆಗಳಲ್ಲೂ ಇರುತ್ತದೆ ಎಂದು ಇಟ್ಟುಕೊಂಡರೆ, ಮುಂದೊಂದು ದಿನ ನಮ್ಮ ವಿಜ್ಞಾನಿಗಳು ಅದರ ಉಗಮದ ಬಗ್ಗೆ, ಭವಿಷ್ಯದ ಬಗ್ಗೆ ಇನ್ನಷ್ಟು ತಿಳಿಯಬಲ್ಲರು, ಹೇಳಬಲ್ಲರು.

ನಮ್ಮ ಅನುಭವದಲ್ಲಿರುವ ಬ್ರಹ್ಮಾಂಡ ಮೂರು ಆಯಾಮಗಳಿಂದ ಕೂಡಿದೆ. ಉದ್ದ, ಅಗಲ ಹಾಗೂ ಆಳ (ಅಥವಾ ಗಾತ್ರ). `ಕಾಲ'ವೂ ಒಂದು ಆಯಾಮವೇ. ಒಟ್ಟು ಈ ನಾಲ್ಕು ಆಯಾಮಗಳು ನಮ್ಮ ಅರಿವಿನಲ್ಲಿ, ಗ್ರಹಿಕೆಯಲ್ಲಿ, ಅನುಭವದಲ್ಲಿ ಇವೆ. ಆದರೆ ವಿಜ್ಞಾನಿಗಳು ವಿವಿಧ ತರ್ಕಗಳನ್ನು ಅನ್ವಯಿಸಿ, ಹತ್ತು ಆಯಾಮಗಳು ಇರಲು ಸಾಧ್ಯ ಎಂಬ ಗಣಿತ ಸಿದ್ಧಾಂತವನ್ನು ತೋರಿಸುತ್ತಿದ್ದಾರೆ. ನಮಗಿಂತ ಮೇಲ್ಮಟ್ಟದ  ಆಯಾಮಗಳ ಲೋಕವನ್ನು `ಹೈಪರ್ಸ್ಪೇಸ್' ಎನ್ನುತ್ತಾರೆ.

ನಮ್ಮ ಪೂವರ್ಿಕರೂ ಇದೇ ರೀತಿಯಲ್ಲಿ ಗ್ರಹಿಕೆಯನ್ನು ಮಾಡಿದ್ದರು. `ಹೈಪರ್ಸ್ಪೇಸ್' ಅನ್ನು ಅವರು `ಊಧ್ರ್ವಲೋಕಗಳು' ಎಂದು ಕರೆದಿದ್ದರು. ಭೂ, ಭುವ, ಸುವ, ಮಹ, ಜನ, ತಪ ಹಾಗೂ ಸತ್ಯ ಎಂಬ ಮೇಲು ಮೇಲಿನ ಸ್ತರದ ಲೋಕಗಳ ಗ್ರಹಿಕೆಯನ್ನು ಮಂಡಿಸಿದ್ದರು.

ಈಗ ಆಧುನಿಕ ವಿಜ್ಞಾನಿಗಳ ಪ್ರಕಾರ ಹೈಪರ್ಸ್ಪೇಸ್ನ ನಿವಾಸಿಗಳು (ಈ ಕಲ್ಪನೆಗಳೆಲ್ಲ ನಿಜವಾಗಿದ್ದಲ್ಲಿ ಮಾತ್ರ) ಸರ್ವರೀತಿಯಿಂದಲೂ ನಮಗಿಂತ ಸಶಕ್ತರು. ಆದರೆ ಯಾವುದನ್ನೂ ನೀವು ಖುದ್ದಾಗಿ ಹೋಗಿ ನೋಡಿ ಪರಿಶೀಲಿಸುವ ಹಾಗಿಲ್ಲ. ಗಣಿತದ ಪ್ರಕಾರ ನಿಮ್ಮ ಸಿದ್ಧಾಂತಗಳನ್ನು ಕಾಗದದ (ಅಥವಾ ಕಂಪ್ಯೂಟರ್ ಮೂಲಕ) ಸಾಧಿಸಿ ತೋರಿಸಬೇಕು, ಅಷ್ಟೇ!

`ದೇವತೆಗಳು ಸೃಷ್ಟಿಯಾಗುವ ಮೊದಲೇ ಲೋಕವಿತ್ತು. ಅದರ ಮೂಲವನ್ನು ಬಲ್ಲವರಾರು? ಸೃಷ್ಟಿಯ ಹಿಂದಿನ ಶಕ್ತಿ ಯಾವುದು ಎಂಬುದು ದೇವತೆಗಳಿಗೂ ತಿಳಿದಿಲ್ಲ' ಎಂದು ಋಗ್ವೇದದ ನಾಸದೀಯ ಸೂಕ್ತ ಅಚ್ಚರಿಪಡುತ್ತದೆ.

ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಹಿಂದಿನವರಿಗೂ, ಈಗಿನವರಿಗೂ, ಎಲ್ಲ ಕಾಲಕ್ಕೂ ಬ್ರಹ್ಮಾಂಡ ಒಂದು ಸವಾಲೇ ಆಗಿದೆ. ಅದರ ನೈಜ ಸ್ವರೂಪ ಎಲ್ಲರ ಪಾಲಿಗೂ ರಹಸ್ಯವೇ ಆಗಿ ಉಳಿದಿದೆ.

ಹಾಗೆಂದು ಮನುಷ್ಯ ತನ್ನ ಜ್ಞಾನಯಾನವನ್ನು ನಿಲ್ಲಿಸುವ ಹಾಗಿಲ್ಲ. ಹೊಸ ಸಂಶೋಧನೆಗಳು, ಹೊಸ ಅಧ್ಯಯನಗಳು ನಡೆಯುತ್ತ ಇರಬೇಕು. ಜ್ಞಾನವನ್ನು ಗಳಿಸುವ ಪ್ರಯತ್ನದಲ್ಲಿ ಹೆಚ್ಚು ಮಜಾ ಇದೆ! ಏನಾದರೊಂದು ತಿಳಿಯುವುದು ಬಾಕಿ ಇದ್ದಾಗ ಮಾತ್ರ ಜೀವನದಲ್ಲಿ ಸ್ವಾರಸ್ಯ, ಖುಷಿ, ಥ್ರಿಲ್ ಇರುತ್ತವೆ. ಜೀವನಕ್ಕೊಂದು ಉದ್ದೇಶವೂ ಇರುತ್ತದೆ.