ಸ್ವಿಸ್ ಬ್ಯಾಂಕುಗಳು ಮತ್ತು ಇತರ ಟ್ಯಾಕ್ಸ್ ಹೆವೆನ್ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ, ಕೊಳ್ಳೆಹಣವನ್ನು ವಾಪಸ್ಸು ತರುವ ಮಾತು ಹಾಗಿರಲಿ. ಭಾರತೀಯರು ಅಲ್ಲಿ ಹಣ ಇಟ್ಟಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೇ ಯುಪಿಎ ಸಕರ್ಾರ ಕೊಸರಾಡುತ್ತಿದೆ! ಸ್ವಿಸ್ ಬ್ಯಾಂಕ್ ಎಂದರೇ ಸಾಕು, ಕಾಂಗ್ರೆಸ್ಸಿಗರು ಮೈಮೇಲೆ ಹಾವು, ಚೇಳು ಹರಿದಾಡಿದಂತೆ ಆಡುತ್ತಿದ್ದಾರೆ. ಜಗತ್ತಿನ ಪ್ರಮುಖ ರಾಷ್ಟ್ರಗಳು ಈಗಾಗಲೇ ಕಾಯರ್ೋನ್ಮುಖವಾಗಿರುವಾಗ ಕಾಂಗ್ರೆಸ್ಸಿನ ದೊಡ್ಡ ಕುಟುಂಬ ಅರ್ಥಗಭರ್ಿತ ಮೌನಕ್ಕೆ ಶರಣಾಗಿದೆ.
ಈ ಕುಟುಂಬದವರನ್ನು ಮಾತನಾಡಿಸುವುದು ಬಹಳ ಕಷ್ಟ. ಅವರೇ ನಿರ್ಧರಿಸಿ ಬಾಯಿ ತೆರೆದಾಗ ಮಾತ್ರ ಕೇಳಲು ಅವಕಾಶ. ಉಳಿದಂತೆ ಸದಾ ಮೌನ, ಮೌನ, ಮೌನ. ಆದರೆ ನಮ್ಮ ಸಕರ್ಾರಕ್ಕೇಕೆ ಇಷ್ಟು ನಿಷ್ಕ್ರಿಯತೆ? ಜನಪಥದ ದೊಡ್ಡ ಕುಟುಂಬದ ವಿಷಯಗಳು ಬಯಲಾಗುತ್ತವೆ ಎಂಬ ಭಯವಿರಬಹುದು.
ಇದನ್ನು ಅಮೆರಿಕ ಸಕರ್ಾರದೊಡನೆ ಹೋಲಿಸಿ ನೋಡಿ. ಬರಾಕ್ ಒಬಾಮಾ ಸಕರ್ಾರಕ್ಕೆ ಅಂತಹ ಯಾವುದೇ ಭಯವಿಲ್ಲ. ನೀವು ಮುಚ್ಚಿಡಲು ಅಪೇಕ್ಷಿಸುವ ತಪ್ಪು ಮಾಡಿರದಿದ್ದರೆ ಮನಸ್ಸು ಯಾವಾಗಲೂ ತಿಳಿಯಾಗಿರುತ್ತದೆ. ನಿಲುವು ಸ್ಪಷ್ಟವಾಗಿರುತ್ತದೆ. `ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡ' ಎನ್ನುವ ಮನೋಭಾವ ಇರುವುದಿಲ್ಲ. ಬ್ಬೆ..ಬ್ಬೆ..ಬ್ಬೆ.. ಎನ್ನುವುದು, `ದೇಶದ ಹಣ ವಾಪಸ್ ತನ್ನಿ' ಎನ್ನುವವರನ್ನೇ ಕಚ್ಚಲು ಹೋಗುವುದು - ಇವೆಲ್ಲ ಇರುವುದಿಲ್ಲ.
ಒಬಾಮಾ ಸಕರ್ಾರ ಆಗಲೇ ತೆರಿಗೆಗಳ್ಳರನ್ನು ಹಿಡಿಯುವ ಕೆಲಸ ಆರಂಭಿಸಿದೆ. ಸ್ವಿಟ್ಜರ್ಲ್ಯಾಂಡಿನ ಬಾಸೆಲ್ ಹಾಗೂ ಜ್ಯೂರಿಚ್ ನಗರಗಳಲ್ಲಿ ಕೇಂದ್ರ ಕಚೇರಿಗಳನ್ನು ಹೊಂದಿರುವ, ಜಾಗತಿಕ ಮಟ್ಟದಲ್ಲಿ ನೂರಾರು ಶಾಖೆಗಳನ್ನು ಹೊಂದಿರುವ, `ಯುಬಿಎಸ್ ಎಜಿ' ಬ್ಯಾಂಕಿನಲ್ಲಿ ಅಪಾರ ಕಪ್ಪುಹಣ ಇಟ್ಟಿರುವ ಆರೋಪದ ಮೇಲೆ ಮೈಖೆಲ್ ಸ್ಟೀವನ್ ರೂಬಿನ್ಸ್ಟೀನ್ ಎಂಬ 55 ವರ್ಷದ ವ್ಯಕ್ತಿಯನ್ನು ಅಮೆರಿಕದಲ್ಲಿ ಈಚೆಗೆ ಬಂಧಿಸಲಾಗಿದೆ. ಜಾಗತಿಕ ಕಪ್ಪುಹಣದ ಹೊಳೆಯನ್ನು ತಡೆಯುವ ನಿಟ್ಟಿನಲ್ಲಿ ಮೊದಲ ಬಲಿ ಆತ. ಸಕರ್ಾರಕ್ಕೆ ಸುಳ್ಳು ತೆರಿಗೆ ರಿಟನರ್್ ಸಲ್ಲಿಸಿ ಯುಬಿಎಸ್ ಎಜಿ ಸ್ವಿಸ್ ಬ್ಯಾಂಕಿನಲ್ಲಿ 20 ಲಕ್ಷ ಡಾಲರ್ಗಳಷ್ಟು ಕ್ರಗೆರ್ಯಾಂಡ್ ಚಿನ್ನದ ನಾಣ್ಯಗಳನ್ನು ಇಟ್ಟಿದ್ದಾನೆ ಎಂಬ ಆರೋಪ ಅವನ ಮೇಲಿದೆ. 2001-2008ರ ಅವಧಿಯಲ್ಲಿ 45 ಲಕ್ಷ ಸ್ವಿಸ್ ಫ್ರಾಂಕ್ಗಳಷ್ಟು ಮೌಲ್ಯದ ಷೇರುಗಳನ್ನೂ ಈತ ಖರೀದಿಸಿದ್ದಾನೆ ಎನ್ನಲಾಗಿದೆ.
ಪ್ರಪಂಚದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಚಿನ್ನದ ನಾಣ್ಯಗಳೆಂದರೆ ದಕ್ಷಿಣ ಆಪ್ರಿಕಾದ ಕ್ರಗೆರ್ಯಂಡ್ ಚಿನ್ನದ ನಾಣ್ಯಗಳು (ದಕ್ಷಿಣ ಆಪ್ರಿಕಾ ಚಿನ್ನದ ಹಾಗೂ ವಜ್ರದ ಗಣಿಗಳಿಗೆ ಜಗತ್ಪಸಿದ್ಧ). ಈ ನಾಣ್ಯಗಳು ಅಪ್ಪಟ ಚಿನ್ನ ಹೊಂದಿರುತ್ತವೆ. 22 ಮತ್ತು 24 ಕ್ಯಾರೆಟ್ಗಳಲ್ಲಿ ದೊರೆಯುತ್ತವೆ. 1967-70ರಲ್ಲಿ ಮಾರುಕಟ್ಟೆಗೆ ಬಂದ ಕ್ರಗೆರ್ಯಾಂಡ್ ಜಗತ್ತಿನ ಪ್ರಥಮ ವಾಣಿಜ್ಯಿಕ ಸುವರ್ಣ ನಾಣ್ಯ. ಈವರೆಗೆ ಸುಮಾರು 5.4 ಕೋಟಿ ಕ್ರಗೆರ್ಯಾಂಡ್ ನಾಣ್ಯಗಳು ಜಾಗತಿಕ ಮಟ್ಟದಲ್ಲಿ ಹರಿದಾಡಿವೆ ಎಂಬ ಅಂದಾಜಿದೆ. ಕ್ರಗೆರ್ಯಾಂಡ್ ಬ್ರಾಂಡಿಗೆ ಅಂತಾರಾಷ್ಟ್ರೀಯ ಮಾನ್ಯತೆ ಇದೆ. ಅದರ ಗುಣಮಟ್ಟದ ಬಗ್ಗೆ ಖಾತ್ರಿ ಇದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರ ಮೂಲಕ ವಹಿವಾಟುಗಳು ಹೆಚ್ಚಾಗಿ ನಡೆಯುತ್ತವೆ.
ಪ್ರಸ್ತುತ ವಿಷಯಕ್ಕೆ ಬಂದರೆ, ಅಮೆರಿಕದ ತೆರಿಗೆಗಳ್ಳ ನಾಗರಿಕರಿಂದ ಸುಮಾರು 2000 ಕೋಟಿ ಡಾಲರ್ಗಳಷ್ಟು ಹಣವನ್ನು ಸಂಗ್ರಹಿಸಿ ಅವರು ತಮ್ಮ ದೇಶವನ್ನು ವಂಚಿಸುವುದಕ್ಕೆ ನೆರವಾಗಿರುವ ಆರೋಪವನ್ನು ಯುಬಿಎಸ್ ಎಜಿ ಸಂಸ್ಥೆ ಎದುರಿಸುತ್ತಿದೆ. ಅದದ ವಿರುದ್ಧ ಅಮೆರಿಕದ ಇಂಟರ್ನಲ್ ರೆವೆನ್ಯೂ ಸವರ್ಿಸ್ (ಐ.ಆರ್.ಎಸ್) ಕ್ರಿಮಿನಲ್ ತನಿಖೆ ನಡೆಸುತ್ತಿದೆ. ಸಿಕ್ಕಿಹಾಕಿಕೊಂಡಿರುವ ಯುಬಿಎಸ್ ತನ್ನ ತಪ್ಪನ್ನು ಈಗಾಗಲೇ ಒಪ್ಪಿಕೊಂಡಿದೆ.
ಸಕರ್ಾರಗಳು ಕಾರ್ಯ ನಿರ್ವಹಿಸಬೇಕಿರುವುದು ಹೀಗೆ. ಅದನ್ನು ಬಿಟ್ಟು `ದೇಶದ ಹಣ ವಾಪಸ್ ತನ್ನಿ; ತೆರಿಗೆಗಳ್ಳರನ್ನು-ದೇಶದ್ರೋಹಿಗಳನ್ನು ಶಿಕ್ಷಿಸಿ; ಕಪ್ಪುಹಣವನ್ನು ಮುಟ್ಟುಗೋಲು ಹಾಕಿಕೊಂಡು ದೇಶದ ಆಥರ್ಿಕತೆಯನ್ನು ಉತ್ತಮಪಡಿಸಲು ಬಳಸಿಕೊಳ್ಳಿ - ಎನ್ನುವವರ ಮೇಲೇಕೆ ಹರಿಹಾಯಬೇಕು? ಈ ಮಾತನ್ನು ಬಿಜೆಪಿ ಆಡಿದರೇನು? ಎಡಪಕ್ಷಗಳು ಆಡಿದರೇನು? ಯಾರು ಆಡಿದರೂ ಇವು ಸ್ವಾಗತಾರ್ಹವಾದ ಮಾತುಗಳಲ್ಲವೆ? ಹಾಗೆ ಕೇಳುವುದೇ ಒಂದು ಅಪರಾಧ ಎನ್ನುವಂತಹ ನಿಲುವು ಏನನ್ನು ತೋರಿಸುತ್ತದೆ? ಗಾಜಿನ ಮನೆಯೊಳಗಿರುವವರು ಅತಿ ಜಾಗರೂಕತೆಯಿಂದ ವತರ್ಿಸುವಂತೆ ಕಾಂಗ್ರೆಸ್ ಪಕ್ಷ ಆಡುತ್ತಿದೆ.
ಅಮೆರಿಕದ ವಿಷಯ ಬಿಡಿ. ಕಮ್ಯೂನಿಸ್ಟ್ ಚೀನಾದ ವಿಷಯಕ್ಕೆ ಬನ್ನಿ. ಟ್ಯಾಕ್ಸ್ ಹೆವೆನ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಅಂತಾರಾಷ್ಟ್ರೀಯ ಸಮುದಾಯ ಮುಂದಾಗಿರುವ ಪ್ರಸ್ತುತ ಸನ್ನಿವೇಶದಿಂದ ಚೀನಾಕ್ಕೆ ಅನುಕೂಲವೇ ಹೆಚ್ಚು. ಅಮೆರಿಕ, ಮತ್ತು ಅದರ ಆಥರ್ಿಕತೆಯನ್ನು ಅವಲಂಬಿಸಿರುವ ಬಹಳ ದೇಶಗಳು, ಆಥರ್ಿಕ ಕುಸಿತದಿಂದ ನರಳುತ್ತಿರುವಾಗ ಚೀನಾ ಸಾಕಷ್ಟು ಸದೃಢ ಪರಿಸ್ಥಿತಿಯಲ್ಲಿದೆ. ಜೊತೆಗೆ ಕಪ್ಪುಹಣವೂ ವಾಪಸ್ ಸಿಕ್ಕರೆ ಆ ದೇಶ ಇನ್ನಷ್ಟು ಬೃಹತ್ ಆಥರ್ಿಕತೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.
ಚೀನಾದ ಪ್ರಭಾವಿ ವ್ಯಕ್ತಿಗಳು ಗುಟ್ಟಾಗಿ ಹಣ ಮಾಡಿಕೊಂಡು ಟ್ಯಾಕ್ಸ್ ಹೆವೆನ್ಗಳಲ್ಲಿ ಇಟ್ಟಿರುವ ಕುರಿತೂ ಕೇಳಿಬರುತ್ತದೆ. ಆದರೆ ಅವರ ತಲೆಕಾಯುವ ನೀತಿಯನ್ನು ಅಲ್ಲಿನ ಸಕರ್ಾರಿ ವ್ಯವಸ್ಥೆ ಹೊಂದಿಲ್ಲ ಎನ್ನುವುದು ಗಮನಾರ್ಹ. ಎಲ್ಲ ರೀತಿಯ ತೆರಿಗೆಗಳ್ಳತನದ ವಿರುದ್ಧ ಉಗ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಲ್ಲಿನ ಸಕರ್ಾರ ಈಗಾಗಲೇ ಸ್ಪಷ್ಟಪಡಿಸಿದೆ. ಜಿ-20 ದೇಶಗಳ ಜೊತೆ ಒಟ್ಟಾಗಿ ಕೆಲಸ ಮಾಡುವ ಉತ್ಸುಕತೆಯನ್ನು ಚೀನಾ ಉಪ ಪ್ರಧಾನಿ ಪಾಲ್ ಚಿಯು ತೋರಿದ್ದಾರೆ.
ಟ್ಯಾಕ್ಸ್ ಹೆವೆನ್ಗಳ ವಿರುದ್ಧ ಮೊದಲು ರಣಕಹಳೆ ಮೊಳಗಿಸಿದ್ದು ಜರ್ಮನಿ. ಇದುವರೆಗೂ ಲೀಚ್ಟೆನ್ಸ್ಟೈನ್ ಜರ್ಮನ್ ತೆರಿಗೆಗಳ್ಳರ ಪಾಲಿನ ಸ್ವರ್ಗವಾಗಿತ್ತು. ಆದರೆ ಇನ್ನುಮುಂದೆ ಅವರ ಪಾಲಿನ ನರಕವಾಗಿ ಮಾರ್ಪಡಲಿದೆ. ಅಲ್ಲಿ ಹಣವಿಟ್ಟಿರುವ ಸುಮಾರು 1500 ಕಪ್ಪುಶ್ರೀಮಂತರ ಪಟ್ಟಿಯನ್ನು ಉಪಾಯವಾಗಿ (ಬ್ಯಾಂಕ್ ಅಧಿಕಾರಿಗಳಿಗೆ ಲಂಚಕೊಟ್ಟು) ಜರ್ಮನ್ ಸಕರ್ಾರ ಕಳೆದ ತರಿಸಿತ್ತು. ಈ ಪೈಕಿ ಅರ್ಧದಷ್ಟು ಹೆಸರುಗಳು ಜರ್ಮನ್ ನಾಗರಿಕರದು. ಸುಮಾರು 200-300 ಭಾರತೀಯರ ಹೆಸರುಗಳೂ ಈ ಪಟ್ಟಿಯಲ್ಲಿವೆ! ಅದನ್ನು ನೀಡುವುದಾಗಿ ಜರ್ಮನಿ ಹೇಳುತ್ತಿದ್ದರೂ `ಕೊಡಿ' ಎಂಬ ಮಾತು ನಮ್ಮ ಸಕರ್ಾರದಿಂದ ಬರುತ್ತಿಲ್ಲ! `ಈ ವಿಷಯದಲ್ಲಿ ನಮಗೆ ಆಸಕ್ತಿಯಿಲ್ಲ' ಎಂಬ ಸಂದೇಶನ್ನು ಕಳೆದ ವರ್ಷ ಭಾರತ ಸಕರ್ಾರ ಜರ್ಮನ್ ಸಕರ್ಾರಕ್ಕೆ ರವಾನಿಸಿತ್ತು!! ಆದರೆ ಜರ್ಮನಿಯಿಂದ ಅನೇಕ ದೇಶಗಳು ಈ ಪಟ್ಟಿಯನ್ನು ತರಿಸಿಕೊಂಡು ಕಾಯರ್ೋನ್ಮುಖವಾಗಿವೆ.
ಹಾಗಿದ್ದರೂ ಜರ್ಮನಿಯ ಸಮ್ಮಿಶ್ರ ಸಕರ್ಾರದ ಅಂಗಪಕ್ಷಗಳಲ್ಲಿ ಟ್ಯಾಕ್ಸ್ ಹೆವೆನ್ಗಳನ್ನು ಮಟ್ಟಹಾಕುವ ಕುರಿತು ಒಮ್ಮತ ಇರಲಿಲ್ಲ. ಈಚೆಗೆ ಅವೂ ಒಮ್ಮತ ಸಾಧಿಸಿಕೊಂಡಿವೆ. ಟ್ಯಾಕ್ಸ್ ಹೆವೆನ್ಗಳ ನಿನರ್ಾಮಕ್ಕೆ ನಾಂದಿಯಾಗುವ ಕರಡು ಮಸೂದೆಯನ್ನು ತಯಾರಿಸಿವೆ. ಸದ್ಯದಲ್ಲೇ ಜರ್ಮನಿ ಈ ಕುರಿತು ಸ್ಪಷ್ಟವಾದ ಕಾನೂನನ್ನು ಜಾರಿ ಮಾಡಲಿದೆ. ಪ್ರತಿವರ್ಷ ಜರ್ಮನಿಯಿಂದ 4000 ಕೋಟಿ ಡಾಲರ್ಗಳಷ್ಟು ಕಪ್ಪುಹಣ ಹೊರಹೋಗುತ್ತಿತ್ತು. ಇನ್ನುಮುಂದೆ ಅದಕ್ಕೆ ತಡೆಹಾಕಲು ಸಕರ್ಾರ ನಿರ್ಧರಿಸಿದೆ.
ಆದರೆ ಇಂತಹ ಯಾವ ನಿಧರ್ಾರವೂ ನಮ್ಮಲ್ಲಿ ಕಾಣುತ್ತಿಲ್ಲ. ಹೊಸ ಸಕರ್ಾರ ಏನು ಮಾಡುತ್ತದೋ ನೋಡಬೇಕು.
ಕಳೆದ ಒಂದು ವರ್ಷದಿಂದ ಈ ಕುರಿತು `ಕರ್ಮವೀರ'ದಲ್ಲಿ ನಾನು ಬರೆಯುತ್ತಿರುವ ಮೂರನೆಯ ಲೇಖನ ಇದು. ಮೊದಲ ಲೇಖನ ಬರೆದಾಗ ಸೋನಿಯಾ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬರೆದಿದ್ದೆ. ಎಷ್ಟು ಕಾಲ ಕಳೆದರೂ ಅವರ ಮೌನವ್ರತಕ್ಕೆ ಭಂಗ ಬರುತ್ತಿಲ್ಲ. ಪತ್ರಕರ್ತರ ವಿಷಯ ಹಾಗಿರಲಿ. ಬಿಜೆಪಿಯ ಎಷ್ಟು ಭಾಷಣಗಳಾದರೂ ಅವರಿಂದ ಯಾವ ಪ್ರತ್ಯುತ್ತವೂ ಇಲ್ಲ.
ಈ ವಿಷಯ ಎತ್ತಿದರೇ ಸಾಕು, ಮನಮೋಹನ್ ಮುಖ ಸಪ್ಪಗಾಗುತ್ತದೆ. ಸೋನಿಯಾ ಹಾಗೂ ಆಡ್ವಾಣಿ ಮಧ್ಯೆ ಸಿಕ್ಕಿಕೊಂಡಿರುವ ತರಗೆಲೆಯಂತೆ ಅವರು ಮಿಸುಕಾಡುತ್ತಾರೆ. ಈ ಸೌಭಾಗ್ಯಕ್ಕೆ ಅವರಿಗೆ ಏಕೆ ಬೇಕು ಅಧಿಕಾರ? ಅವರು ಸೊಗಸಾಗಿ ಹುತ್ತದ ಹಾವಾಗಿರಬಹುದಾಗಿತ್ತು. ಆದರೆ ಬಯಸಿ, ಬಯಸಿ ಹಾವಾಡಿಗರ ಕೈಯಲ್ಲಿ ಹಲ್ಲುಕಿತ್ತ ಹಾವಾಗಿ ತಲೆದೂಗುತ್ತಿದ್ದಾರೆ!
ಇನ್ನೂ ಒಂದು ಮಾತು. ಈಚಿಗೆ ನಡೆದ ಜಿ-20 ದೇಶಗಳ ಶೃಂಗಸಭೆಯಲ್ಲಿ ಟ್ಯಾಕ್ಸ್ ಹೆವೆನ್ ವಿಷಯ ಆದ್ಯತೆ ಪಡೆದುಕೊಂಡ ನಂತರ ಭಾರತದಲ್ಲಿರುವ ಸ್ವಿಸ್ ರಾಯಭಾರಿ `ನಾವು ಭಾರತ ಸಕರ್ಾರ ನಡೆಸುವ ಎಲ್ಲ ತನಿಖೆಗಳಿಗೆ ಸಹಕರಿಸುತ್ತೇವೆ' ಎಂದು ಮೂರು ಬಾರಿ ಹೇಳಿದ್ದಾರೆ. ನಮ್ಮ ಸಕರ್ಾರ ಸಂಪಕರ್ಿಸಿದ ನಂತರ ಕೊಟ್ಟ ಹೇಳಿಕೆಗಳಲ್ಲ ಇವು. ವಾಸ್ತವವಾಗಿ ಅವರನ್ನು ಕರೆಸಿಕೊಂಡು ಸಕರ್ಾರವೇ ಸಹಕಾರ ಕೇಳಬೇಕಿತ್ತು.
ಅತ್ತ ಅಮೆರಿಕ, ಜರ್ಮನಿ ಮತ್ತಿತರ ದೇಶಗಳು ಸ್ವಿಸ್ ಸಕರ್ಾರದ ಸೀಕ್ರೆಟ್ ಬ್ಯಾಂಕಿಂಗ್ ಕಾನೂನುಗಳ ವಿರುದ್ಧ ಹರಿಹಾಯುತ್ತಿವೆ. ಇತ್ತ ಸ್ವಿಸ್ ರಾಯಭಾರಿ ಸ್ವಯಂಪ್ರೇರಣೆಯೊಂದ ಬಾಯಿ ತೆರೆದರೂ ಸಾಕು, ಮನಮೋಹನ್ ಸಕರ್ಾರ ಮಹಾನ್ ಮುಜುಗರ ಅನುಭವಿಸುತ್ತಿದೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ