ಗುರುವಾರ, ಜೂನ್ 04, 2009

ರೋಹ್ ತರಹದ ಸೂಕ್ಷ್ಮ ಸಂವೇದಿಗಳು ನಮ್ಮಲ್ಲೇಕಿಲ್ಲ?

ಇದೇ ಮೇ 23, ಶನಿವಾರ, ದಕಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಮೂ-ಹ್ಯೂನ್ ಆತ್ಮಹತ್ಯೆಗೆ ಶರಣಾದರು. ಭ್ರಷ್ಟಾಚಾರದ ಆರೋಪಗಳನ್ನು ಹೊತ್ತು ನಿಂತಿದ್ದ ಅವರು, ತಮ್ಮ ನೈತಿಕ ಆತ್ಮಸಾಕ್ಷಿಗೆ ಮಣಿದು, ಚೀಟಿ ಬರೆದಿಟ್ಟು, ಬೆಟ್ಟದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರು.

ರಾಜಕಾರಣಿಗಳು ಭ್ರಷ್ಟಾಚಾರದ ಆರೋಪ ಹೊತ್ತು ಆತ್ಮಹತ್ಯೆ ಮಾಡಿಕೊಳ್ಳುವುದು ಹೊಸದೇನಲ್ಲ. ಅನೆಕ ದೇಶಗಳಲ್ಲಿ ಹೀಗೆ ನಡೆದಿದೆ. ಜಪಾನ್ನಲ್ಲಂತೂ ರಾಜಕೀಯ ನಾಯಕರ ಆತ್ಮಹತ್ಯಾ ಪರಂಪರೆಯೇ ಇದೆ. ಇದು ದುರದೃಷ್ಟವೇ ಸರಿ. ಮೊದಲಿಗೆ ಭ್ರಷ್ಟಾಚಾರ ಮಾಡುವುದೇ ಹೇಯವಾದ ಕೆಲಸ. ಅನಂತರ ಸಿಕ್ಕಿಬಿದ್ದಾಗ ಜನರಿಗೆ ಮುಖ ತೋರಿಸುವುದು ಹೇಗೆ ಎಂಬ ಒಳಗುದಿ ಬೇರೆ.

ರೂಹ್ 2003-2008ರ ಅವಧಿಯಲ್ಲಿ ದಕ್ಷಿಣ ಕೊರಿಯಾದ ಆದ್ಯಕ್ಷರಾಗಿದ್ದರು. ಅಧಿಕಾರದ ಆರಂಭದಲ್ಲಿ ಸಾಕಷ್ಟು ಭರವಸೆ ಹುಟ್ಟಿಸಿದ್ದ ಅವರು ಅದಕ್ಷತೆ, ವೈಯಕ್ತಿಯ ನಡವಳಿಕೆಯ ದೋಷಗಳಿಂದಾಗಿ ಕ್ರಮೇಣ ಜನರ ನಂಬಿಕೆ, ಆದರಗಳನ್ನು ಕಳೆದುಕೊಂಡರು. ಅಧಿಕಾರಾವಧಿ ಮುಗಿದ ನಂತರ ಭ್ರಷ್ಟಾಚಾರದ ಆರೋಪ ಅವರ ಹೆಗಲೇರಿ ಕಾಡಿತು. ಆತ್ಮಹತ್ಯೆಯೊಂದೇ ಪರಿಹಾರ ಎಂದು ಅವರಿಗನಿಸಿತು. ಆತ್ಮಹತ್ಯೆಯ ಬದಲು ಅವರು ಜನರ ಕ್ಷಮೆ ಕೇಳಬಹುದಿತ್ತು. ಶಿಕ್ಷೆ ಅನುಭವಿಸಿ `ಪರಿಶುದ್ಧ'ರಾಗಬಹುದಿತ್ತು. ಆದರೆ ಅದಕ್ಕೆ ಇನ್ನೊಂದು ರೀತಿಯ ಧೈರ್ಯ, ವಿಶಿಷ್ಟ ವ್ಯಕ್ತಿತ್ವ ಬೇಕಾಗುತ್ತವೆ.

ಆದರೆ ಇಲ್ಲಿ ನಾವು ಗಮನಿಸಬೇಕಾದ ಆಂಶ ಅದಲ್ಲ. ಸಾರ್ವಜನಿಕ ಜೀವನದ ಈ ವ್ಯಕ್ತಿ ಸಾರ್ವಜನಿಕ ಅಭಿಪ್ರಾಯಗಳಿಗೆ ಎಷ್ಟರ ಮಟ್ಟಿಗೆ ಪ್ರತಿಸ್ಪಂದನೆ ತೋರುತ್ತಾನೆ, ಎಷ್ಟು ಮಣಿಯುತ್ತಾನೆ ಎಂಬುದು ಇಲ್ಲಿ ಗಮನಾರ್ಹ. ಭಾರತೀಯ ರಾಜಕಾರಣಿಗಳ ಪಕ್ಕದಲ್ಲಿ ರೂಹ್ ಅನ್ನು ಕಲ್ಪಿಸಿಕೊಂಡು ನೋಡಿದರೆ, ಅವರು ನಿಜಕ್ಕೂ ಬೇರೆ ರೀತಿಯಲ್ಲೇ ಕಾಣುತ್ತಾರೆ.

ನಮ್ಮ ಯಾವ ರಾಜಕೀಯ ಮುಖಂಡನಿಗೆ ಇಂತಹ ಸೂಕ್ಷ್ಮ ಚರ್ಮವಿದೆ? ನಮ್ಮ ಯಾವ ಮುಖಂಡರು ತಮ್ಮ ಆತ್ಮಶೋಧನೆ ಮಾಡಿಕೊಂಡಿದ್ದಾರೆ?

ಶಿಬು ಸೊರೇನ್ ಅಂತಹವರಿಂದ ಜನರು ಎಂತಹ ಸಂವೇದನೆಯನ್ನು ನಿರೀಕ್ಷಿಸಬಹುದು? ಆತನ ಬಾಲಬಡುಕರ ಪಾಲಿಗೆ ಆತ ಈಗಲೂ `ಗುರೂಜಿ'! ಸಿಬಿಐ ಸ್ಪೆಷಲ್ ಕೋಟರ್ು `ನೀನು ತಪ್ಪಿತಸ್ಥ' ಎನ್ನುತಿದ್ದಾಗ, ಕಾಂಗ್ರೆಸ್ ನಾಯಕ ಎ. ಸುಖ್ರಾಮ್ ಅವರ ಸಂವೇದನೆ ಹೇಗಿತ್ತು ನೆನಪಿಸಿಕೊಳ್ಳಿ. ಹಿಮಾಚಲ ಪ್ರದೇಶದ ಅವರ ನಿವಾಸದಲ್ಲಿ 13 ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿಗಳಷ್ಟು ಮೌಲ್ಯದ ನೋಟಿನ ಕಟ್ಟುಗಳು ಸಿಕ್ಕಿಬಿದ್ದಿದ್ದವು. ಆ ಹಣದ ಮೂಲ ಯಾವುದು? ತಾವು ಹೇಗೆ ನಿದರ್ೋಷಿ ಎಂದು ವಿವರಿಸುವಲ್ಲಿ ಅವರು ವಿಫಲರಾದರು. ನ್ಯಾಯಾಲಯ ಈಚೆಗೆ ಅವರಿಗೆ 3 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಆದರೂ 82 ವರ್ಷದ ಸುಖರಾಮ್ ವಿಚಲಿತರಾಗಲಿಲ್ಲ. ಒಂದಿಷ್ಟೂ ಅಳುಕಿಲ್ಲದೇ `ಇವೆಲ್ಲ ನನ್ನನ್ನು ಸಿಕ್ಕಿಹಾಕಿಸಲು ನನ್ನ ಶತ್ರುಗಳು ಮಾಡಿದ ಕುತಂತ್ರ' ಎಂದುಬಿಟ್ಟರು. ಅವರ ನಿವಾಸದಲ್ಲಿದ್ದ ಹಣ ಯಾರದ್ದೇ ಆಗಿರಲಿ, ಅಷ್ಟು ಭಾರಿ ಧನರಾಶಿಯನ್ನು ತಾವು ಕಾನೂನುಬಾಹಿರವಾಗಿ ಇಟ್ಟುಕೊಂಡಿದ್ದು ತಪ್ಪು, ಕೊನೆಯ ಪಕ್ಷ ನೈತಿಕವಾಗಿಯಾದರೂ ತಾನು ತಪ್ಪಿತಸ್ಥ ಎಂಬ ಮಾತು ಅವರ ಬಾಯಿಂದ ಬರಲೇ ಇಲ್ಲ.

ಅದೇ ರೀತಿ ಬಿಜೆಪಿ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಅವರು `ತೆಹೆಲ್ಕಾ ಸ್ಟಿಂಗ್ ಆಪರೇಷನ್'ಗೆ ಬಲಿಯಾದಾಗ ಹೇಳಿದ್ದೇನು? ಲಕ್ಷ ರೂಪಾಯಿಗಳ ಕಟ್ಟನ್ನು ಅವರು ತೆಗೆದು ಇಟ್ಟುಕೊಂಡ ವೀಡಿಯೋ ಜಗಜ್ಹಾರಾಹೀರಾದ ಮೇಲೂ `ನಾನು ದಲಿತ, ಹೀಗಾಗಿ ನನ್ನನ್ನು ಶೋಷಿಸಲಾಗುತ್ತಿದೆ' ಎಂಬರ್ಥದ ಮಾತು ಅವರ ಬಾಯಿಯಿಂದ ಬಂತು! ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತು ನಿಂತಾಗ ಮಹಮ್ಮದ್ ಅಜರುದ್ದೀನ್ ಹೇಳಿದ್ದು, `ನಾನು ಮುಸ್ಲಿಂ ಎಂಬ ಪೂವರ್ಾಗ್ರಹದಿಂದ ನನ್ನನ್ನು ಸಿಕ್ಕಿಹಾಕಿಸಿದ್ದಾರೆ' ಎಂದು!

ನಮ್ಮಲ್ಲಿ ಎಲ್ಲೆಲ್ಲೂ ನೈತಿಕತೆಯ ಅಭಾವ ಎದ್ದು ಕಾಣುತ್ತ್ತಿದೆ. ಸಾರ್ವಜನಿಕ ಅಭಿಪ್ರಾಯಕ್ಕೆ ಸೂಕ್ತವಾಗಿ ಸ್ಪಂದಿಸುವ, ಸೂಕ್ತ ಸಂವೇದನೆ ತೋರುವ, ಜನರ ಭಾವನೆಗಳಿಗೆ ಮಯರ್ಾದೆ ಕೊಡುವೆ ಕನಿಷ್ಠ ಸೌಜನ್ಯವೂ ಮರೆಯಾಗಿದೆ. ಕಡೆಯ ಪಕ್ಷ ಸಿಕ್ಕಿಹಾಕಿಕೊಂಡ ಮೇಲಾದರೂ `ಜನರಿಗೆ ಮುಖ ತೋರಿಸುವುದು ಹೇಗೆ' ಎಂಬ ಪ್ರಜ್ಞೆ ನಮ್ಮ ಯಾವ ಮುಖಂಡರನ್ನೂ ಕಾಡುತ್ತಿಲ್ಲ. ಭ್ರಷ್ಟಾಚಾರಿಯೋ, ಅಲ್ಲವೋ, ಆದರೆ ರೋಹ್ ಮೂ ಹ್ಯೂನ್ ಅವರಿಗೆ ನೈತಿಕ ಪ್ರಶ್ನೆ, ಪಾಪಪ್ರಜ್ಞೆ ಕಾಡಿರಬಹುದು. ಸಾರ್ವಜನಿಕ ಅಭಿಪ್ರಾಯಕ್ಕೆ ಮಣಿದರೋ, ಕರಾಳ ವಾಸ್ತವತೆಗೆ ಸಂವೇದಿಸಿದರೋ, ಒಟ್ಟಿನಲ್ಲಿ ಅವರ ಆತ್ಮಸಾಕ್ಷಿ ಸಾಯಲಿಲ್ಲ ಎಂಬುದನ್ನು ಎಲ್ಲರೂ ಒಪ್ಪಲೇಬೇಕು.

ಎಲ್ಲ ಹಗರಣಗಳ ತಾಯಿ ಭೋಪೋಸರ್್ ವಿಷಯಕ್ಕೆ ಬರಲೇಬೇಕು. ರಾಜೀವ್ ಗಾಂಧಿ 1984ರಲ್ಲಿ ಪ್ರಧಾನಿಯಾದ ಹೊಸದರಲ್ಲಿ `ಮಿಸ್ಟರ್ ಕ್ಲೀನ್' ಎನಿಸಿದ್ದರು. ಅಂದರೆ ಅವರ ಮೇಲೆ ಯಾವುದೇ ಆರೋಪ ಇರಲಿಲ್ಲ ಎಂದಲ್ಲ. ಸೋವಿಯತ್ ಒಕ್ಕೂಟದ ಕೆಜಿಬಿ ಗೂಢಚಾರ ಏಜೆನ್ಸಿಯಿಂದ ಕೋಟಿಗಟ್ಟಲೆ ಹಣವನ್ನು ರಾಜೀವ್ ಕುಟುಂಬದವರು ಪಡೆದಿದ್ದಾರೆ ಎಂಬ ಆರೋಪ ಇತ್ತು. ಡಾ. ಯೆವ್ಗೆನಿಯಾ ಆಲ್ಬ್ಯಾಟ್ಸ್ ಅವರು ಕೆಜಿಬಿಯ ರಹಸ್ಯ ಫೈಲುಗಳನ್ನು ಪರಿಸೀಲಿಸಿ ಬರೆದ ಪುಸ್ತಕ, `ದಿ ಸ್ಟೇಟ್ ವಿದಿನ್ ಎ ಸ್ಟೇಟ್: ಕೆಜಿಬಿ ಅಂಡ್ ಇಟ್ಸ್ ಹೋಲ್ಡ್ ಆನ್ ರಷ್ಯಾ' - ಇದರಲ್ಲಿ ಸೋನಿಯಾ, ರಾಹುಲ್, ಸೋನಿಯಾ ತಾಯಿ ಪೌಲೋ ಮೈನೋ ಅವರುಗಳನ್ನು `ಕೆಜಿಬಿಯ ಫಲಾನುಭವಿಗಳು' ಎಂದು ಸ್ಪಷ್ಟವಾಗಿ ಹೆಸರಿಸಿದ್ದಾರೆ. 1992ರಲ್ಲಿ ಅವರು ಬರೆದಿರುವುದೆಲ್ಲ ಸತ್ಯ ಎಂದು ಸ್ವತಃ ರಷ್ಯಾ ಸಕರ್ಾರವೇ ದೃಢಪಡಿಸಿದೆ (ನೋಡಿ: ದಿ ಹಿಂದು, ಜುಲೈ 4, 1992).

ಆದರೂ ಮೊದಮೊದಲು ರಾಜೀವ್ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ಹುಟ್ಟಿಸಿದ್ದರು. ಆದರೆ ಬಹುಬೇಗ ಭೋಪೋಸರ್್ ಅವರ ಹೆಸರಿಗೆ ಮಸಿ ಬಳಿಯಿತು. ಅವರ ಪತ್ನಿಯ ಮಿತ್ರ ಒಟ್ಟಾವಿಯೋ ಕ್ವಾಟ್ರೋಚಿ ಭಾರತದ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ನೆರವಾದ ಆರೋಪವೂ ರಾಜೀವ್ ಹೆಗಲಿಗೇರಿತು. ಯಾರೇ ಅಧಿಕಾರಸ್ಥ ಪ್ರಧಾನಿಯ ಮೇಲೆ ಇಂತಹ ಗುರುತರವಾದ ಆರೋಪಗಳು ಬಂದಾಗ ಮೊದಲು ಆತ ರಾಜೀನಾಮೆ ನೀಡಬೇಕು. ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕಾದರೆ ಅದು ಅನಿವಾರ್ಯ. ಏನೇ ಆದರೂ ರಾಜೀವ್ ರಾಜೀನಾಮೆಯ ಹೆಸರೆತ್ತಲಿಲ್ಲ. ನೈತಿಕಪ್ರಜ್ಞೆ, ಆತ್ಮಸಾಕ್ಷಿಯ ರಾಜಕಾರಣ ಮಾಡಲಿಲ್ಲ.

ಹರ್ಷದ್ ಮೆಹ್ತಾ ಹಗರಣ, ಹವಾಲಾ ಹಗರಣ, ಜೆಎಂಎಂ ಲಂಚ ಪ್ರಕರಣಗಳಿಂದ ಪಿ.ವಿ. ನರಸಿಂಹರಾವ್ ಸಹ ವಿಚಲಿತರಾಗಲಿಲ್ಲ. ಅವರ `ಇನ್ಸೈಡರ್' ಆಗಿನ್ನೂ ಎಚ್ಚೆತ್ತಿರಲಿಲ್ಲ. ಕಾಗರ್ಿಲ್ ಶವಪೆಟ್ಟಿಗೆಗಳ ಖರೀದಿ ಹಗರಣ ಜಾಜರ್್ ಫನರ್ಾಂಡಿಸ್ ಹಾಗೂ ವಾಜಪೇಯಿಯರನ್ನು ವಿಚಲಿತಗೊಳಿಸಲಿಲ್ಲ.

ಮೇಲಿನ ಎಲ್ಲ ಪ್ರಕರಣಗಳಲ್ಲೂ ಆರೋಪಿಗಳೆಲ್ಲ ಅಪರಾಧಿಗಳು ಎಂದು ಇಲ್ಲಿ ನಾನು ಹೇಳುತ್ತಿಲ್ಲ. ಈ ಆರೋಪಗಳು ನಿಜವೂ ಆಗಿರಬಹುದು. ಕೆಲವು ಸಂದರ್ಭಗಳಲ್ಲಿ ಪುರಾವೆ ಇಲ್ಲದಿರಬಹುದು. ಆದರೆ ಆರೋಪಗಳು ಎದುರಾದಾಗ ನಮ್ಮ ನಾಯಕರುಗಳು ನಡೆದುಕೊಂಡ ರೀತಿ ಹೇಗಿತ್ತು? ಅವರ `ನೈತಿಕ ಪ್ರಜ್ಞೆ' ಏನಾಗಿತ್ತು? ಅವರೆಲ್ಲ ಸಾರ್ವಜನಿಕ ಅಭಿಪ್ರಾಯಕ್ಕೆ ಕಿಂಚಿತ್ತೂ ಪ್ರತಿಸ್ಪಂದನೆ ತೋರಿಸಲಿಲ್ಲವೇಕೆ? -ಎಂಬುದು ಇಲ್ಲಿನ ಚಚರ್ಾ ವಸ್ತು.

1956ರಲ್ಲಿ ರೈಲ್ವೆ ಸಚಿವರಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಮೆಹಬೂಬ್ನಗರದಲ್ಲಿ ರೈಲು ಅಪಘಾತವಾಗಿ 112 ಜನರು ಮಡಿದಾಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ ಪ್ರಧಾನ ಮಂತ್ರಿ ಜವಹರ್ಲಾಲ್ ನೆಹರೂ ಶಾಸ್ತ್ರಿಯವರ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಇದಾದ ಮೂರು ತಿಂಗಳ ಬಳಿಕ ತಮಿಳುನಾಡಿನ ಅರಿಯಲೂರಿನಲ್ಲಿ ರೈಲು ಅಪಘಾತವಾಗಿ 144 ಜನರು ಮಡಿದರು. ಈ ಬಾರಿ ಶಾಸ್ತ್ರಿಯವರು `ಇದು ನನ್ನ ಸಾಂವೈಧಾನಿಕ ಹಾಗೂ ನೈತಿಕ ಜವಾಬ್ದಾರಿಯ ಪ್ರಶ್ನೆ' ಎಂದು ವಾದಿಸಿ ರಾಜೀನಾಮೆ ಕೊಟ್ಟು ಹೊರಬಂದರು. ಜನರು ಅವರ ಕ್ರಮವನ್ನು ಮೆಚ್ಚಿ ಸ್ವಾಗತಿಸಿದರು.

ತಮ್ಮ ಮೇಲೆ ಯಾವುದೇ ನೇರ ಆರೋಪ ಇಲ್ಲದಿದ್ದಾಗಲೂ ಶಾಸ್ತ್ರಿಯವರು ನಡೆದುಕೊಂಡ ರೀತಿ ಹಾಗಿತ್ತು. ಅವರಿಗೂ ವೈಯಕ್ತಿಕ ಮಟ್ಟದಲ್ಲಿ ಗುರುತರವಾದ ಆರೋಪಗಳನ್ನು ಹೊತ್ತು ನಿಂತಿರುವ ಇತರ ಅನೇಕ `ನಾಯಕರುಗಳು' ನಡೆದುಕೊಳ್ಳುತ್ತಿರುವ ರೀತಿಗೂ ಅಜಗಜಾಂತರ.

ಭ್ರಷ್ಟಾಚಾರ ನಿಯಂತ್ರಣದ ವಿಷಯದಲ್ಲಿ ನಮ್ಮ ಯಾವ ಮುಖಂಡರೂ ದಕ್ಷತೆ, ಪ್ರಾಮಾಣಿಕತೆ ತೋರಿಸಿಕೊಂಡು ಬಂದಿಲ್ಲ. ಎಲ್ಲ ಉನ್ನತ ಸಕರ್ಾರಿ ಅಧಿಕಾರಿಗಳ ಹಾಗೂ ಅಧಿಕಾರಸ್ಥರ ಮೇಲಿನ ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶ ಹೊತ್ತ ಲೋಕ್ಪಾಲ್ ಮಸೂದೆಗೆ 1968 ರಿಂದ ಈವರೆಗೆ ಅನುಮೋದನೆ ಲಭಿಸಿಯೇ ಇಲ್ಲ! ಅದನ್ನು ಜಾರಿಗೆ ತರಲು ಯಾವ ಸಕರ್ಾರಕ್ಕೂ ಆಸಕ್ತಿ ಇಲ್ಲ. ಭೋಪೋಸರ್್ ಹಗರಣ ಬೆಳಕಿಗೆ ಬಂದ ಮೇಲೆ ವಿ.ಪಿ. ಸಿಂಗ್ ಸಕರ್ಾರ ಲೋಕ್ಪಾಲ್ ಮಸೂದೆಯನ್ನು ಜಾರಿಗೊಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಅನಂತರ ವಾಜಪೇಯಿ ಅದನ್ನು ಜಾರಿಗೊಳಿಸುವ ಭರವಸೆ ಇತ್ತರೂ ಕಾರ್ಯತಃ ಮಾಡಲಿಲ್ಲ. 2003ರ ಹೊತ್ತಿಗೆ ಲೋಕಪಾಲರ ತನಿಖಾ ವ್ಯಾಪ್ತಿಗೆ ಪ್ರಧಾನ ಮಂತ್ರಿಯನ್ನೂ ಒಳಪಡಿಸಬೇಕು ಎಂದು ಕ್ಯಾಬಿನೆಟ್ ನಿರ್ಣಯವಾಗಿತ್ತು. ಮುಂದಿನ ಮನಮೋಹನ್ ಸಿಂಗ್ರ ಯುಪಿಎ ಸಕರ್ಾರ ಸಹ ಲೋಕ್ಪಾಲ್ ಜಪ ಮಾಡಿಕೊಂಡು ಬರುತ್ತಿದೆ. ಆದರೆ ಕಾರ್ಯತಃ ಏನನ್ನೂ ಮಾಡುತ್ತಿಲ್ಲ.

ಸಿಬಿಐ ಅನ್ನು ಸ್ಥಾಪಿಸಿದ್ದರ ಹಿಂದಿನ ಮೂಲ ಉದ್ದೇಶವೇ ಭ್ರಷ್ಟಾಚಾರ ನಿಯಂತ್ರಣ. ಆದರೆ ಅತ್ಯುನ್ನತ ಮಟ್ಟದ ಯಾವುದೇ ಭ್ರಷ್ಟಾಚಾರ ಪ್ರಕರಣದಲ್ಲೂ ಸಿಬಿಐ ಈವರೆಗೆ ಯಶಸ್ಸು ಸಾಧಿಸಿಲ್ಲ. ಸುಖ್ರಾಮ್ ಪ್ರಕರಣ ಕೆಳ ನ್ಯಾಯಾಲಯದಲ್ಲಿ ಸಾಬೀತಾಯಿತು. ಇನ್ನೊಂದು, ಕಲ್ಪನಾಥ್ ರಾಯ್ ಪ್ರಕರಣ. ಅದೂ ಕೇಲ ಹಂತಗಳಲ್ಲಿ ಸಾಬೀತಾಗಿತ್ತು. ಆದರೆ ಭೋಪೋಸರ್್ ವಿಷಯದಲ್ಲಿ ಸಿಬಿಐ ಮಯರ್ಾದೆ ಹೋಯಿತು. ಈ ತನಿಖಾ ಬ್ಯೂರೋ ಆಳುವ ಸಕರ್ಾರಗಳ ಕೈಗೊಂಬೆಯಾಗಿದೆ ಎಂದು ಸ್ವತಃ ಅದರ ನಿದರ್ೇಶಕರೇ ಈಚೆಗೆ ಸುಪ್ರೀಮ್ ಕೋಟರ್್ ಎದುರು ಅಲವತ್ತುಕೊಂಡು ಛೀಮಾರಿ ಹಾಕಿಸಿಕೊಂಡ ಪ್ರಸಂಗ ಅದರ ಪರಿಸ್ಥಿತಿಯನ್ನು ತೋರಿಸುತ್ತದೆ. ಹಲವಾರು ಪ್ರಕರಣದಲ್ಲಿ ತಾನೇ ಹೆಸರಿಸಿದ ಆರೋಪಿಯ ಪರವಾಗಿಯೇ (ಉದಾಹರಣೆಗೆ, ಒಟ್ಟಾವಿಯೋ ಕ್ವಟ್ರೋಚಿ, ಮುಲಾಯಂ ಸಿಂಗ್) ಸಿಬಿಐ ವಾದಿಸಿದ್ದೂ ಉಂಟು!

ಈಗಲೂ ನಾವು `ನಮ್ಮ ಪ್ರಜಾತಂತ್ರದ ಆದರ್ಶ ಮಂತ್ರಿ ಯಾರು?' ಎಂದ ತಕ್ಷಣ `ಶಾಸ್ತ್ರಿ' ಎನ್ನುತ್ತೇವೆ. ಅವರ ನಂತರದ ಇನ್ನೊಂದು ಶ್ರೇಷ್ಠ ಉದಾಹರಣೆ ನಮಗಿನ್ನೂ ಸಿಕ್ಕಿಲ್ಲ. ನಮ್ಮ ಸಮಕಾಲೀನ ರಾಜಕೀಯದಲ್ಲಿ ಕಳಂಕ ಮುಕ್ತ ರಾಜಕಾರಣಕ್ಕೆ ಒಂದು ಉದಾಹರಣೆಯೂ ಸಿಗುತ್ತಿಲ್ಲ.

ನಮ್ಮ ನಡುವಿನ ಭ್ರಷ್ಟ ನಾಯಕರು ರೋಹ್ ತರಹ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ಆದರೆ ಕಡೆಯ ಪಕ್ಷ ಸಿಕ್ಕಿಬಿದ್ದಾಗಲಾದರೂ ವಿಷಾದ ವ್ಯಕ್ತಪಡಿಸಬೇಡವೆ? ಜನರ ಕ್ಷಮೆ ಕೇಳಬೇಡವೆ? ಇವರಿಗೆಲ್ಲ ಆತ್ಮಸಾಕ್ಷಿ ಇದೆಯೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ