ಗುರುವಾರ, ಏಪ್ರಿಲ್ 09, 2009

ಭಾರತದ ಬಾಗಿಲಿಗೇ ಬಂತು ತಾಲಿಬಾನ್

ನಮ್ಮ ದೇಶದ `ಜಾತ್ಯತೀತ' ಮುಖಂಡರು ತಮ್ಮ ವೈಚಾರಿಕ ಎದುರಾಳಿಗಳ ತಲೆಯ ಮೇಲೆ `ತಾಲಿಬಾನೀಕರಣ'ದ ಗೂಬೆ ಕೂರಿಸುವುದರಲ್ಲೇ ಕಾಲ ಕಳೆಯುತಿರುವ ಸಮಯದಲ್ಲಿ ನಿಜವಾದ ತಾಲಿಬಾನ್ ಭಾರತದ ಬಾಗಿಲಿಗೇ ಬಂದು ನಿಂತಿದೆ!

ತಾಲಿಬಾನ್ ನಿಗ್ರಹದಲ್ಲಿ ಪಾಕಿಸ್ತಾನ ತೋರುತ್ತಿರುವ ಅಸಹಕಾರ ಮತ್ತು ಅಮೆರಿಕ ಕಾಣುತ್ತಿರುವ ವೈಫಲ್ಯ - ಇವುಗಳ ದೆಸೆಯಿಂದಾಗಿ ತಾಲಿಬಾನ್ ಪೂರ್ವದಿಕ್ಕಿನತ್ತ ವಕ್ಕರಿಸಿಕೊಳ್ಳುತ್ತಿದೆ.

ಜಾಜರ್್ ಬುಷ್ರ ಆಫ್ಘನ್ ನೀತಿಯನ್ನು ಟೀಕೆ ಮಾಡುತ್ತಲೇ ಅಮೆರಿಕದ ಅಧ್ಯಕ್ಷ ಪದವಿಗೇರಿದ ಬರಾಕ್ ಒಬಾಮಾ ತಾಲಿಬಾನ್ ಜೊತೆಗಿನ ಸಮರದಲ್ಲಿ ಹೈರಾಣಾಗಿರುವಂತೆ ಕಾಣುತ್ತಿದೆ. ಈಗ ಅವರು `ತಾಲಿಬಾನ್ ಒಳಗಿನ ಅತೃಪ್ತ ಮೃದುವಾದಿಗಳೊಡನೆ ಮಾತನಾಡುತ್ತೇನೆ' ಎಂಬ ಹೊಸ ವರಸೆ ತೆಗೆದಿದ್ದಾರೆ.

ತಾಲಿಬಾನ್ನಲ್ಲಿ `ಒಳ್ಳೆಯ ತಾಲಿಬಾನ್' ಮತ್ತು ಕೆಟ್ಟ ತಾಲಿಬಾನ್' ಎಂಬ ವಗರ್ೀಕರಣ ಸಾಧ್ಯವೆ? ಅದರಲ್ಲೂ ತಾಲಿಬಾನ್ ಅನ್ನು ಯಾರಾದರೂ ನಂಬಬಹುದೆ? ಅದು ಡಬಲ್ ಗೇಮ್ ಆಡುವುದಿಲ್ಲ ಎಂದು ಏನು ಖಾತ್ರಿ? ಪಾಕ್ ನೆಲದಲ್ಲಿ ಒಂದೆರಡು ಸುತ್ತು ದಾಳಿ ನಡೆಸಿದ್ದಕ್ಕೇ ಒಬಾಮಾಗೆ ಸುಸ್ತು, ಹತಾಶೆ ಆವರಿಸಿತೆ?

ಒಬಾಮಾ ಈಗ ಹಳೆಯ ಗೊಂದಲಮಯ ನೀತಿಗೆ ಶರಣಾಗಿರುವಂತಿದೆ. ಅಮೆರಿಕದ ಹಳೆಯ `ಕಂಟೇನ್ಮೆಂಟ್' ನೀತಿ ಮತ್ತೆ ಚಿಗುರುತ್ತಿದೆ. ಭಯೋತ್ಪಾದಕರನ್ನು ಸಂಪೂರ್ಣವಾಗಿ ನಿಗ್ರಹ ಮಾಡಲು ಆಗದಿದ್ದಾಗ ಅವರ ಕಾರ್ಯಕ್ಷೇತ್ರ ಬೇರೆಲ್ಲೋ ಇರುವಂತೆ ನೋಡಿಕೊಳ್ಳುವ ನೀತಿ ಇದು. ಅಂದರೆ, `ಎಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ. ನಮ್ಮ ನೇರ ಹಿತಾಸಕ್ತಿಗಳ ತಂಟೆಗೆ ಮಾತ್ರ ಬರಬೇಡಿ' ಎಂಬ ಸೂತ್ರ ಇದು. ಇದನ್ನು ಅಮೆರಿಕ ಲಾಗಾಯ್ತಿನಿಂದಲೂ ಅನುಸರಿಸಿಕೊಂಡು ಬಂದಿದೆ. ಅಲ್-ಖೈದಾ ಅಮೆರಿಕದ ಗುರಿಗಳಿಗೆ ಹೊಡೆಯುವ ತನಕ ಅಮೆರಿಕ ಖೈದಾ ಕುರಿತು ತಣ್ಣಗಿತ್ತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿಜೃಂಭಿಸುತ್ತಿದ್ದಾಗ ಯಾರೂ ಯುದ್ಧದ ಮಾತನಾಡಲಿಲ್ಲ. ಅಮೆರಿಕದ ನೆಲ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆಯಾದಾಗ ಮಾತ್ರವೇ ಅದು `ಯುದ್ಧ'ಕ್ಕೆ ಧುಮುಕಿದ್ದು.

ಆಪ್ಘನ್ ಯುದ್ಧ ಆರಂಭಿಸುವಾಗ `ಒಳ್ಳೆಯ ಭಯೋತ್ಪಾದಕರು ಹಾಗೂ ಕೆಟ್ಟ ಭಯೋತ್ಪಾದಕರು ಎಂಬ ವ್ಯತ್ಯಾಸವಿಲ್ಲ. ಎಲ್ಲ ಭಯೋತ್ಪಾದಕರೂ ಕೆಟ್ಟವರೇ' ಎಂದು ಬುಷ್ ಹೇಳಿಕೆ ನೀಡಿದ್ದರು. ಈಗ ಅದೇ ತಾಲಿಬಾನ್ ಹಾಗೂ ಅಲ್-ಖೈದಾಗಳು ಪಾಕಿಸ್ತಾನದಲ್ಲಿ ರಾಜಾಶ್ರಯ ಪಡೆದಿವೆ. ಪಾಕ್ ಮಿಲಿಟರಿ, ಐಎಸ್ಐ ಇವುಗಳ ಪರವಾಗಿ ಕೆಲಸ ಮಾಡುತ್ತಿವೆ. ಅಲ್ಲಿನ ಚುನಾಯಿತ ಸಕರ್ಾರ ಅಮೆರಿಕಕ್ಕೆ `ಸಹಕಾರ' ನೀಡುವ ನಾಟಕವಾಡುತ್ತಿದೆ. ಆದರೆ ಅಮೆರಿಕದ ಹಿನ್ನಡೆಯನ್ನು ಕಂಡು ಒಳಗೊಳಗೇ ನಗುವ ರಾಜಕಾರಣಿಗಳೇ ಪಾಕಿಸ್ತಾನದಲ್ಲಿ ಹೆಚ್ಚು. ಇದು ಅಮೆರಿಕಕ್ಕೂ ಗೊತ್ತು. ಆದರೆ ಅದು ಹೆಚ್ಚೇನೂ ಮಾಡಲಾರದ ಪರಿಸ್ಥಿತಿಯಲ್ಲಿದೆ. ಒಬಾಮಾಗೆ ಸರಿಯಾದ ದಿಕ್ಕು ತೋಚುತ್ತಿಲ್ಲ. ಹೀಗಿರುವಾಗ ಅವರಿಗೆ ಹೊಳೆದಿರುವುದು ತಾತ್ಕಾಲಿಕ ಸಂಧಾನ, ಕೂಟನೀತಿಯ ಮಾರ್ಗಗಳು.

ತಾಲಿಬಾನ್ ಒಳಗೆ ಮುಲ್ಲಾ ಉಮರ್ ಕುರಿತು ಅಸಮಾಧಾನ ಹೊಂದಿರುವ ಶಕ್ತಿಗಳನ್ನು ಗುರುತಿಸಿ ಮಾತನಾಡಬೇಕು ಎಂದು ಒಬಾಮಾ ಹೇಳುತ್ತಾರೆ. ಆದರೆ ಇಂತಹ ಶಕ್ತಿಗಳನ್ನು ಗುರುತಿಸುವುದು ಹೇಗೆ? ಸ್ವತಃ ತಾಲಿಬಾನ್ ನೇತಾರರೇ ಕೆಲವರನ್ನು `ಅತೃಪ್ತರು' ಎಂದು ಬಿಂಬಿಸಿ ರಹಸ್ಯವಾಗಿ ಅಮೆರಿಕದೊಡನೆ ಮಾತುಕತೆಗೆ ಕಳುಹಿಸುವ ಅಪಾಯವೂ ಇದೆ. ಈ ವಿಷಯ ಅಮೆರಿಕಕ್ಕೆ ಗೊತ್ತಿಲ್ಲವೆ?

ಅನರಿಕಕ್ಕೆ ಗೊತ್ತಿದೆ. ಹಾಗಿದ್ದರೂ ಅದು ಮತ್ತೊಂದು ತಾತ್ಕಾಲಿಕ ಕಂಟೇನ್ಮೆಂಟ್ ಪ್ರಯತ್ನಕ್ಕೆ ಮುಂದಾಗಿರಬಹುದು ಎನಿಸುತ್ತದೆ. ಇದರಿಂದ ಅಮೆರಿಕಕ್ಕೆ ಮತ್ತು ತಾಲಿಬಾನ್-ಖೈದಾಗಳಿಗೆ ಸ್ವಲ್ಪ ಸಮಯಾವಕಾಶ ಸಿಗುತ್ತದೆ. ಎಲ್ಲರೂ ತಮ್ಮ ಮುಂದಿನ ರಣತಂತ್ರ ರೂಪಿಸಲು ಈ ಸಮಯವನ್ನು ಬಳಸಿಕೊಳ್ಳುತ್ತಾರೆ. ಈ ಮಧ್ಯದ ಅವಧಿಯಲ್ಲಿ, ಕದನವಿರಾಮ ಇರುತ್ತದಲ್ಲ, ಆಗ, ಏನಾಗಬಹುದು ಎಂಬುದೇ ನಮ್ಮ ಆತಂಕ. ಒಂದು ವಾಸ್ತವವನ್ನು ಹೇಳುತ್ತೇನೆ. ಅಮೆರಿಕ ತಾಲಿಬಾನ್ ಜೊತೆ `ಮಾತನಾಡಲು' ಶುರು ಮಾಡಿದರೆ ಅದರ ನೇರ ದುಷ್ಪರಿಣಾಮ ಆಗುವುದು ಭಾರತಕ್ಕೆ. ಇದು ಅಮೆರಿಕ್ಕೂ ಗೊತ್ತು. ಭಾರತ ಸಕರ್ಾರಕ್ಕೂ ಗೊತ್ತು. ಅಮೆರಿಕಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಒಂದು `ವೀರ-ಕದನವಿರಾಮ' ಬೇಕಾಗಿದೆ.

ಪಾಕಿಸ್ತಾನ ಸೃಷ್ಟಿಯಾದ ಕ್ಷಣದಿಂದ ಮಗ್ಗುಲಲ್ಲಿ ಕೆಂಡ ಕಟ್ಟಿಕೊಂಡ ಪರಿಸ್ಥಿತಿ ಭಾರತದ್ದು. ಈಗ ತಾಲಿಬಾನ್-ಖೈದಾಗಳು ಪಾಕಿಸ್ತಾನಕ್ಕೆ ತಮ್ಮ ನೆಲೆ ಬದಲಿಸಿವೆ. ಅವು ಪೇಷಾವರ್ಬಿಂದ ಪೂರ್ವದಲ್ಲಿ ಏನು ಮಾಡಿಕೊಂಡರೂ ಅಮೆರಿಕ ಹೆಚ್ಚು ತಲೆ ಕೆಡೆಸಿಕೊಳ್ಳುವುದಿಲ್ಲ. ಅಫ್ಘಾನಿಸ್ತಾನದ ತಂಟೆಗೆ ಮಾತ್ರ ಅವು ಬರಕೂಡದು. ಈ ರೀತಿಯ ಅನಧಿಕೃತ ಹೊಂದಾಣಿಕೆ ಏನಾದರೂ ಅಮೆರಿಕ ಮತ್ತು ತಾಲಿಬಾನ್ ನಡುವೆ ಏರ್ಪಟ್ಟರೆ ಭಾರತಕ್ಕೆ ಆ ಬೆಳವಣಿಗೆ ಆತಂಕಕಾರಿಯಾಗುತ್ತದೆ. ಅ ರೀತಿಯ ಹೊಂದಾಣಿಕೆ ಏರ್ಪಡದೇ ಇರುವುದರಲ್ಲಿಯೇ ಭಾರತದ ಹಿತಾಸಕ್ತಿ ಅಡಗಿದೆ.

ಈಗಾಗಲೇ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಸಕರ್ಾರ ನೆಲೆಗೊಂಡಿದೆ. ಇದು ಭಾರತ ಪಾಲಿಗೆ ಅಪಾಯದ ಮುನ್ಸೂಚನೆ.

ವಾಸ್ತವವಾಗಿ ಈ ಸ್ವಾತ್ ಎನ್ನುವುದು ಹಳೆಯ ಸುವಸ್ತು. ಇದೇ ಹೆಸರಿನ ನದಿ ಹಾಗೂ ಪ್ರದೇಶದ ವರ್ಣನೆ ಋಗ್ವೇದಲ್ಲಿಯೇ ಸಿಗುತ್ತದೆ. 2000 ವರ್ಷಗಳಿಂದ ಇಲ್ಲಿ ಜನವಸತಿ ಇದೆ. ಇಲ್ಲಿ ಅಲೆಕ್ಸಾಂಡರ್ ಭಾರತೀಯರೊಡನೆ ಕಾದಾಡಿದ್ದ. ನಂತರ ಇದು ಮೌರ್ಯ ಸಾಮ್ರಾಜ್ಯದ ಆಡಳಿತಕ್ಕೆ ಸೇರ್ಪಡೆಯಾಯಿತು. ತದನಂತರ ಈ ಸ್ಥಳದ ಶಾಂತಿ, ಸೌಂದರ್ಯಗಳು ಬೌದ್ಧ ಮತ್ತು ಕುಶಾನರನ್ನು ಆಕಷರ್ಿಸಿತು. ವಜ್ರಯಾನ ಬೌದ್ಧ ಮತ ಜನ್ಮ ತಳೆದದ್ದು ಈ ಸ್ಥಳದಲ್ಲಿಯೇ ಎಂಬ ಅಭಿಪ್ರಾಯವೂ ಇದೆ. ಆಗ ಇದನ್ನು `ಉದ್ಯಾನ' ಅಂತಲೂ ಕರೆಯುತ್ತಿದ್ದರು. ಅನಂತರ ಹಿಂದೂ ಶಾಹಿ ರಾಜರು ಆಳಿದ ಸ್ಥಳ ಇದು. ಸಂಸ್ಕೃತ ಇಲ್ಲಿನ ಆಡಳಿತ ಭಾಷೆಯಾಗಿತ್ತು. ಕ್ರಮೇಣ ಮಹಮ್ಮದ್ ಘಜ್ನಿಯ ಆಕ್ರಮಣಕ್ಕೆ ಸಿಲುಕಿ ಇಲ್ಲಿನ ಸಾವಿರಾರು ಹಿಂದೂ-ಬೌದ್ಧ ಮಂದಿರಗಳು ನಾಶವಾದವು. ಇವೆಲ್ಲ ಇತಿಹಾಸ.

ದೇಶ ವಿಭಜನೆಯ ನಂತರ ಸ್ವಾತ್ ಪಾಕ್ ವಶಕ್ಕೆ ಹೋಯಿತು. ಈಗ ಅಲ್ಲಿ ಪಾಕಿಸ್ತಾನ ಸಕರ್ಾರದ ಆಡಳಿತವೂ ಹೋಗಿ ತಾಲಿಬಾನ್ ಆಡಳಿತ ಬಂದಿದೆ. ಶರಿಯಾ ಮತೀಯ ಕಟ್ಟಳೆಗಳನ್ನು ಸ್ವಾತ್ನಲ್ಲಿ ಸಂಪೂರ್ಣವಾಗಿ ಅನ್ವಯಿಸಲಾಗಿದೆ. ಏಳು ಖಾಜಿ ನ್ಯಾಯಾಲಯಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ. ಮನೆಯೊಳಗೇ ಇರುವಂತೆ ಮಹಿಳೆಯರಿಗೆ ಕಟ್ಟಾಜ್ಞೆ ನೀಡಲಾಗಿದೆ (`ಬೇಗಂ ಕೀ ಜಗಾಹ್ ಘರ್ ಪೇ ಹೈ' - ಎಂಬುದು ಇಸ್ಲಾಮಿಕ್ ಚಿಂತನೆ) ಇವೆಲ್ಲ ಪಾಕ್ ಮಿಲಿಟರಿಯ ಮೂಗಿನ ನೇರದಲ್ಲೇ ನಡೆಯುತ್ತಿದೆ.

ಸ್ವಾತ್ ಜಿಲ್ಲೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೊಂದಿಕೊಂಡಿದೆ. ಇಸ್ಲಾಮಾಬಾದಿನಿಂದ ಕೇವಲ 160 ಕಿ.ಮೀ. ದೂರ. ಬೆಂಗಳೂರಿಗೂ ಶಿವಮೊಗ್ಗಕ್ಕೂ ಎಷ್ಟು ದೂರವೋ ಭಾರತದ ಒಳಭೂಮಿಗೂ ಸ್ವಾತ್ ಕಣಿವೆಗೂ ಅಷ್ಟೇ ದೂರ. ಸ್ವಾತ್ನಲ್ಲಿ ತಾಲಿಬಾನಿಗಳು ನೆಲೆಗೊಂಡರು ಎಂದರೆ ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಅವರು ಬಂದರು ಎಂದೇ ಅರ್ಥ. ಇನ್ನು ನಿಯಂತ್ರಣ ರೇಖೆಯಲ್ಲೂ ಅವರ ಉಪಟಳ ಆರಂಭವಾಗುವ ದಿನ ಬಹಳ ದೂರವೇನಿಲ್ಲ. ಅವರ ಧೈರ್ಯದಿಂದಲೇ ಈಗಾಗಲೇ ಮಾಜಿ ಜನರಲ್ ಪವರ್ೇಜ್ ಮುಷರ್ರಫ್, ಹಾಲಿ ಜನರಲ್ ಪವರ್ೇಜ್ ಕಯಾನಿ ಮತ್ತು ಇತರ ಪಾಕ್ ಮಿಲಿಟರಿ ನೇತಾರರು `ಇನ್ನೊಂದು ಕಾಗರ್ಿಲ್ ಉಂಟಾದೀತು' ಎಂದು ಧಮಕಿ ಹಾಕಲು ಆರಂಭಿಸಿದ್ದಾರೆ.

ನಮ್ಮ ಜಮ್ಮು ಮತ್ತು ಕಾಶ್ಮೀರದ ಕೆಲವು ರಾಜಕಾರಣಿಗಳಿಗೆ ತಾಲಿಬಾನ್ ಜೊತೆ ನಂಟಿರುವುದು ಗುಟ್ಟೇನಲ್ಲ. ಕಾಶ್ಮೀರದ ಇಸ್ಲಾಮೀಕರಣ ಎಂದೋ ಆರಂಭವಾಗಿದೆ. ರಾಜ್ಯದ ಸುಮಾರು 700-800 ಪ್ರಾಚೀನ ಸ್ಥಳಗಳ ಹಳೆಯ ಹೆಸರುಗಳನ್ನು ತೆಗೆದುಹಾಕಿ ಇಸ್ಲಾಮೀ ಮತೀಯ ಹೆಸರುಗಳನ್ನು ಇಡಲಾಗಿದೆ. ಈಗ ಕಾಶ್ಮೀರದ ಪ್ರಾಚೀನ ಹಿಂದೂ ಪವಿತ್ರ ತೀರ್ಥಸ್ಥಳವಾದ `ಅನಂತನಾಗ'ದ ಹೆಸರನ್ನು `ಇಸ್ಲಾಮಾಬಾದ್' ಎಂದು ಬದಲಿಸುವ ಪ್ರಯತ್ನಗಳು ಆರಂಭವಾಗಿವೆ. ಮುಫ್ತಿ ಮುಹಮ್ಮದ್ ಸಯೀದರ ಪಿಡಿಪಿ ಪಕ್ಷದ ಶಾಸಕ ಪೀರ್ಜಾದಾ ಮನ್ಜೂರ್ ಹುಸೇನ್ ಈ ಕುರಿತು ಈಚೆಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿರುವುದಾಗಿ ವರದಿಯಾಗಿದೆ.

ಈಗ ತಾಲಿಬಾನ್ ಮಗ್ಗುಲಿಗೆ ಬಂದ ನಂತರ ಕಾಶ್ಮೀರದ ತಾಲಿಬಾನೀಕರಣ ಪ್ರಕ್ರಿಯೆ ತೀವ್ರತೆ ಪಡೆದುಕೊಳ್ಳುವುದನ್ನು ನಿರೀಕ್ಷಿಸಬಹುದು. ಭಾರತದ ಇತರ ಸ್ಥಳಗಳಲ್ಲಿಯೂ ತಾಲಿಬಾನ್ ಅಟ್ಟಹಾಸ ನಿರೀಕ್ಷಿಸಬಹುದು. ಇಸ್ಲಾಮೀ ತೀವ್ರವಾದಿ ಚಟುವಟಿಕೆಗಳಿಗೆ ಹೊಸ ಗೊಬ್ಬರ, ನೀರು ಸಿಗುವುದನ್ನು ನಿರೀಕ್ಷಿಸಬಹುದು.

ಇದನ್ನು ತಡೆಯಲು ಭಾರತ ಏನು ಮಾಡಬಹುದು? ಪಾಕಿಸ್ತಾನದ ಸಕರ್ಾರ ಅಮೆರಿಕ್ಕೆ ಸಹಕಾರ ನೀಡದಿದ್ದರೂ ಹಲವು ಮುಲಾಜುಗಳಿಗೆ ತುತ್ತಾಗಿ ಅಮೆರಿಕದ ಸೈನಿಕರನ್ನು ತನ್ನ ದೇಶದೊಳಗೆ ಬಿಟ್ಟುಕೊಂಡಿದೆ. ಆದರೆ ಭಾರತದ ಸೈನಿಕರಿಗೆ ಈ ಅವಕಾಶ ಸಿಗುವುದಿಲ್ಲ. ಅವರು ತಾಲಿಬಾನ್ ಅನ್ನು ಎದುರಿಸುವ ಮೊದಲು ಪಾಕಿಸ್ತಾನವನ್ನು ಎದುರಿಸಬೇಕಾಗುತ್ತದೆ. ಆ ಧೈರ್ಯ ನಮ್ಮನ್ನು ಆಳುವವರಿಗೆ ಇದೆಯೆ?

ಮಗ್ಗುಲಿನ ಕೆಂಡವಾಗಿರುವ ತಾಲಿಬಾನ್ ಅನ್ನು ಭಾರತ ನಿಯಂತ್ರಿಸುವುದು, ಹಿಮ್ಮೆಟ್ಟಿಸುವುದು ಹೇಗೆ? ಯುದ್ಧಭೂಮಿಯಲ್ಲಿ ಅಮೆರಿಕ ಇರುವವರೆಗೆ ಪರವಾಗಿಲ್ಲ. ಒಬಾಮಾ ಮನಸ್ಸು ಬದಲಾಯಿಸಿ ತಾಲಿಬಾನ್ ಜೊತೆಗಿನ ನೇರ ಯುದ್ಧದಲ್ಲೇ ಮುಂದುವರಿದರೆ ಪರವಾಗಿಲ್ಲ. ಒಂದು ವೇಳೆ ಅವರು ಕಂಟೇನ್ಮೆಂಟ್ ನೀತಿ ಜಾರಿಗೆ ತರುವಲ್ಲಿ ಯಶಸ್ವಿಯಾದರೆ?

ನಮ್ಮ ರಾಜಕಾರಣಿಗಳು ಈ ಕುರಿತು ಗಂಭಿರವಾಗಿ ಯೋಚಿಸುತ್ತಿದ್ದಾರೆಯೆ? ಪಬ್ ಜಪ ಮಾಡುವುದನ್ನು ಬಿಟ್ಟು ನಿಜವಾದ ತಾಲಿಬಾನ್ ಅನ್ನು ಎದುರಿಸಲು ಅವರು ಸಿದ್ಧರೆ?


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ