ಮನಮೋಹನ್ ಸಿಂಗ್ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ಎಂಬುದು ಬಿಜೆಪಿಯ ಚುನಾವಣಾ ಘೋಷವಾಕ್ಯ. ಈ ಕುರಿತು ಪಕ್ಷಾತೀತವಾಗಿ ಯೋಚಿಸಬೇಕು.
ಅಟಲ ಬಿಹಾರಿ ವಾಜಪೇಯಿ ಬಗ್ಗೆಯೂ ಇಂತಹ ಆಪಾದನೆಗಳಿದ್ದವು. ಕಾಗರ್ಿಲ್ ಯುದ್ಧ ಗೆದ್ದರೂ ಪರಮಾಣು ಸ್ಫೋಟ ನಡೆಸಿದರೂ ಸಹ ಹಲವು ರಂಗಗಳಲ್ಲಿ ವಾಜಪೇಯಿ ಅವರದು ಮೃಧು ದೋರಣೆಯಾಗಿತ್ತು. ಅವರನ್ನು ಲಾಲ್ ಕೃಷ್ಣ ಆಡ್ವಾಣಿಯವರೊಂದಿಗೆ ಹೋಲಿಸಿ ವೆಂಕಯ್ಯ ನಾಯ್ಡು ಮಾಡಿದ್ದ `ವಿಕಾಸಪುರುಷ, ಲೋಹಪುರುಷ' ಎಂಬ ಬಣ್ಣನೆ ವ್ಯಾಪಕವಾಗಿ ಗಮನ ಸೆಳೆದಿತ್ತು. ತೀವ್ರ ವಿವಾದವನ್ನೂ ಸೃಷ್ಟಿಸಿತ್ತು. ಸ್ವತಃ ವಾಜಪೇಯಿ ಇದರಿಂದ ಕೋಪಗೊಂಡಿದ್ದರು.
ಇಷ್ಟಾದರೂ ವಾಜಪೇಯಿ ಅವರನ್ನು ರಿಮೋಟ್-ಕಂಟ್ರೋಲ್ಡ್ ಪ್ರಧಾನಿ ಎನ್ನಲಾಗದು. ಅವರ ಯಾವುದಾದರೂ ನಿದರ್ಿಷ್ಟ ನಿಧರ್ಾರ ದುರ್ಬಲವಾದದ್ದು ಎಂದು ಈಗ ಕೆಲವರಿಗೆ ಅನಿಸಿದರೆ ಅದಕ್ಕೆ ಕಾರಣ ವಾಜಪೇಯಿಯವರ ಸ್ವಂತ ಚಿಂತನೆಗಳೆ ಹೊರತು ಅವರು ಅನ್ಯರ ಕೈಗೊಂಬೆಯಾಗಿದ್ದುದು ಅವುಗಳಿಗೆ ಕಾರಣವಲ್ಲ. ಅವರೆಂದೂ ಸಂವಿಧಾನೇತರ ಶಕ್ತಿಗಳ ಮನೆ ಬಾಗಿಲು ಬಡಿಯಲಿಲ್ಲ. ತಮ್ಮ ಸ್ವಂತಿಕೆ, ಸ್ವಂತ ಆಡಳಿತ ವಿಧಾನ, ಸ್ವಂತ ವಿಚಾರಗಳನ್ನು ತ್ಯಜಿಸಲಿಲ್ಲ. ಎನ್ಡಿಎ ಸಭೆಯೂ ಅವರ ಮನೆಯಲ್ಲೇ ನಡೆಯುತ್ತಿತ್ತು. ಸಚಿವ ಸಂಪುಟ ಸಭೆಯ ಮತ್ತು ಎನ್ಡಿಎ ಒಕ್ಕೂಟದ ಸಭೆಯ ಅಂತಿಮ ತೀಮರ್ಾನ ಅವರದೇ ಆಗಿರುತ್ತಿತ್ತು. ಎಲ್ಲರ ಮಾತನ್ನೂ ಕೇಳಿದ ನಂತರ ಅವರು ಹೇಳುತ್ತಿದ್ದುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು.
ಆದರೆ ಪ್ರಸ್ತುತ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿಷಯ ಹಾಗಲ್ಲ. ಅವರು `ರೀಮೋಟ್-ಕಂಟ್ರೋಲ್ಡ್' ಪ್ರಧಾನಿ ಎಂಬ ಕಳಂಕ ಹೊತ್ತು ನಿಂತಿದ್ದಾರೆ. ತಾವು ದುರ್ಬಲರು, ಇತರು ತಮ್ಮನ್ನು ಆವರಿಸಿಕೊಳ್ಳಲು ಅನುಮತಿ ನೀಡಿರುವವರು ಎಂಬುದನ್ನು ಅವರು ಸಹಜವಾಗಿ ಒಪ್ಪುವುದಿಲ್ಲ. ಆ ಮಾತು ಕೇಳಿದಾಗೆಲ್ಲ ಅವರಿಗೂ ಕೋಪ ಬರುತ್ತದೆ. `ನಾನು ದುರ್ಬಲ ಪ್ರಧಾನಿ ಅಲ್ಲ' ಎಂದು ಕಿರುಚುತ್ತಾರೆ.
ಆದರೆ ಒಂದೇ ಸಮನೆ ಚೀರುವುದೇ ಪ್ರಬಲತೆಯ ಪುರಾವೆಯಲ್ಲ. ಅಷ್ಟು ಮಾತ್ರದಿಂದಲೇ ಮನಮೋಹನ್ ಅವರನ್ನು `ಪ್ರಬಲ ಪ್ರಧಾನಿ' ಎನ್ನಲಾಗದು. ಅವರವರು ನಡೆದು ಬಂದಿರುವ ದಾರಿ ಎಂತಹುದು ಎಂಬುದು ಗಮನಾರ್ಹವಾಗುತ್ತದೆ. ಇತಿಹಾಸದ ಪ್ರಾಮಾಣಿಕ ಮೌಲ್ಯಮಾಪನಕ್ಕೆ ಮನಮೋಹನ್ ತಮ್ಮನ್ನು ಒಳಪಡಿಸಿಕೊಳ್ಳಲೇಬೇಕಾಗುತ್ತದೆ.
ಮೊದಲಿಗೆ, ಅವರು ಜನರಿಂದ ಚುನಾಯಿತರಾದವರಲ್ಲ. ಅವರು ರಾಜ್ಯಸಭೆಯ ಸದಸ್ಯ. ಅವರು ಆರಿಸಿಬಂದದ್ದು ಅಸ್ಸಾಂ ರಾಜ್ಯದ ವಿಧಾನಸಭೆಯ ಕಾಂಗ್ರೆಸ್ ಸದಸ್ಯರ ಮತಗಳಿಂದ. ಅವರು ಸಾರ್ವಜನಿಕ ಜೀವನದಲ್ಲಿ ಬಹುಕಾಲದಿಂದ ನಾನಾ ಹುದ್ದೆಗಳಲ್ಲಿ ಇದ್ದಾರೆ. ಅವರು ಎಂದು ಅಸ್ಸಾಂ ರಾಜ್ಯದ ಶಾಶ್ವತ ನಿವಾಸಿಯಾಗಿದ್ದರು? ಆದರೂ `ನಾನು ಅಸ್ಸಾಂ ನಿವಾಸಿ' ಎಂದು ಸುಳ್ಳು ವಿಳಾಸ ನೀಡಿ ಆರಿಸಿ ಬಂದದ್ದು ಅವರ `ಪ್ರಾಮಾಣಿಕತೆ'ಗೆ ಕನ್ನಡಿ ಹಿಡಿಯುತ್ತದೆ. ಪದವಿ, ಅಧಿಕಾರ ಹೇಗೆ ಸಿಕ್ಕರೂ ಬೇಡ ಎನ್ನದೇ ಸ್ವೀಕರಿಸುವ ಮಾಮೂಲಿ ರಾಜಕಾರಣಿಗಿಂತಲೂ ಅವರು ಭಿನ್ನರೇನಲ್ಲ.
ಜನರ ಹಂಗೇ ಇಲ್ಲದೇ ಒಬ್ಬ ರಾಜ್ಯಸಭಾ ಸದಸ್ಯ ದೇಶದ ಪ್ರಧಾನಿಯಾದದ್ದು ಎಷ್ಟು ಸರಿ? ಸಂವಿಧಾನದಲ್ಲಿ ಇದಕ್ಕೆ ತಾಂತ್ರಿಕವಾಗಿ ಅವಕಾಶವಿದೆ. ಆದರೆ 100 ಕೋಟಿ ಜನರಿರುವ ದೊಡ್ಡ ಪ್ರಜಾತಾಂತ್ರಿಕ ದೇಶದಲ್ಲಿ ಹೀಗೆ ಮಾಡುವುದು ನೈತಿಕತೆಯೆ? ಕಾಂಗ್ರೆಸ್ ಪಕ್ಷದಲ್ಲಿ ಲೋಕಸಭೆಗೆ ಆರಿಸಿ ಬಂದಿದ್ದ ಅನೇಕ ನಾಯಕರಿದ್ದರು. ಆದರೂ ಮನಮೋಹನ್ ಸಿಂಗರೇ ಏಕೆ ದೇಶದ ಪ್ರಧಾನಿಯಾಗಬೇಕು?
ಇದಕ್ಕೆ ಉತ್ತರ ಎಲ್ಲರಿಗೂ ಗೊತ್ತು. ಅವರು ಸೋನಿಯಾ ಗಾಂಧಿಯ ಆಯ್ಕೆ. ದೇಶದ ಜನರ ಆಯ್ಕೆಯಲ್ಲ. `ಇವರು ಪ್ರಧಾನಿಯಗಲಿ' ಎಂದು ಸೋನಿಯಾ ಅಪ್ಪಣೆ ಕೊಟ್ಟರು. ಮನಮೋಹನ್ ಪ್ರಧಾನಿಯಾದರು. ಆದರೆ ಸೋನಿಯಾ ಏಕೆ ಮನಮೋಹನ್ ಸಿಂಗ್ ಅವರನ್ನೇ ಆರಿಸಿದರು? ಹೆಚ್ಚಿನ ಅನುಭವಶಾಲಿ ಪ್ರಣಬ್ ಮುಖಜರ್ಿಯವರನ್ನು ಏಕೆ ಆರಿಸಲಿಲ್ಲ? ಮನಮೋಹನ್ ಅರ್ಥಶಾಸ್ತ್ರಜ್ಞ ಎಂದೆ? ನಮ್ಮಲ್ಲಿ ಮನಮೋಹನ್ ಸೀಂಗರಿಗಿಂತಲೂ ಬುದ್ಧ್ಧಿವಂತರು ಎನಿಸಿದ ಅನೇಕ ಮಾಜಿ ರಿಸವರ್್ ಬ್ಯಾಂಕ್ ಗವರ್ನರ್ಗಳಿದ್ದಾರೆ. ಇತರ ಅಧಿಕಾರಿಗಳಿದ್ದಾರೆ. ಸ್ವತಃ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಇನ್ನೂ ಸಾಕಷ್ಟು ವಯಸ್ಸಿರುವ, ಚುರುಕಾದ, ಚಾಲಾಕಿ ಮನುಷ್ಯ. ಅವರನ್ನೇ ಆರಿಸಲಿಲ್ಲ? ಜಾತಿ ಆಧಾರದ ಮೇಲೆ ನೋಡಿದರೂ ಅವರೂ ಸಹ ಸಿಖ್ ಮತೀಯರೇ ಅಲ್ಲವೆ? ಮನಮೋಹನ್ ಆಯ್ಕೆಗೆ ಕಾರಣ ಏನು? ನಿಜವಾದ ಕಾರಣ ಅವರು ಮಾತಾಡದ ಮೂತರ್ಿ ಎಂಬುದೇ ಅಲ್ಲವೆ? ಈ ಮೂತರ್ಿಯನ್ನು ಪ್ರತಿಷ್ಠಾಪಿಸಿ, ಅದರ ಹೆಸರಿನಲ್ಲಿ, ಪ್ರತಿಷ್ಠಾಪಕರು ಆಡಳಿತ ನಡೆಸಬಹುದು! ಅದಕ್ಕೆ ಈ ಮೂತರ್ಿ ಅವಕಾಶ ನೀಡುತ್ತದೆ!
ಎಲ್ಲ ಕಾಲದಲ್ಲೂ ಖಂಡಿತವಾದಿ ಲೋಕವಿರೋಧಿಯೇ. ಯಾರನ್ನಾದರೂ ದೊಡ್ಡ ಹುದ್ದೆಗಳಿಗೆ ಆರಿಸುವಾಗ ಆರಿಸುವರು ನೋಡುವುದು ಈತ ತನಗೆ ನಿಷ್ಠನೇ ಎಂಬುದನ್ನು. ಅದೇ ಮೊದಲ ಅರ್ಹತೆ. ದಕ್ಷತೆಗಿಂತಲೂ ಬದ್ಧತೆಯೇ ಇಲ್ಲಿ ಮುಖ್ಯವಾಗುತ್ತದೆ. `ಪೀಠದಲ್ಲಿ ಕುಳಿತ ಮೇಲೂ ಈತ ದಕ್ಷನಾಗಬಾರದು. ನಮ್ಮ ಪರವಾಗಿ ಪೀಠದಲ್ಲಿರಬೇಕು ಅಷ್ಟೇ. ನಾವು ಹೇಳಿದಂತೆ ಕೇಳಬೇಕು. ನಾವು ಕೇಳಿದಾಗ ಪೀಠ ಬಿಟ್ಟುಕೊಡಲು ಸಿದ್ಧನಾಗಿರಬೇಕು' ಎಂಬುದು ಆಯ್ಕೆಗಾರರ ಅಪೇಕ್ಷೆ. ಅದಕ್ಕೆ ಯಾರು ತಕ್ಕವರೋ ಅವರಿಗೆ ಪೀಠ ಸಿಗುತ್ತದೆ. ಲಾಲೂ ಪ್ರಸಾದ್ ರಾಬ್ಡಿ ದೇವಿಯನ್ನು ಒಂದೇ ದಿನದಲ್ಲಿ ಬಿಹಾರದ ಮುಖ್ಯಮಂತ್ರಿ ಮಾಡಲಿಲ್ಲವೆ? ಸುಪ್ರೀಮ್ ಕೋಟರ್್ ಆದೇಶದಂತೆ 2001ರಲ್ಲಿ ಜಯಲಲಿತಾ ಅಧಿಕಾರ ಕಳೆದುಕೊಂಡಾಗ ಪನ್ನೀರ್ಸೆಲ್ವಮ್ ಎಂಬ ಟೀ ಅಂಗಡಿಯ ಮಾಲೀಕನನ್ನು ಏಕಾಏಕಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆರಿಬಿಟ್ಟರು! ಮರುವರ್ಷ ಕೋಟರ್ಿನ ತೀಪರ್ು ಪಡೆದು ಮತ್ತೆ ಜಯಾ ಮುಖ್ಯಮಂತ್ರಿಯಾದರು. ಇಲ್ಲಿ ಪನ್ನೀರ್ಸೆಲ್ವಮ್ ಅವರನ್ನು ಪ್ರಬಲ ಜನನಾಯಕ ಎನ್ನಲಾದೀತೆ?
ಜನರ ಹಂಗಿಲ್ಲದ ಪ್ರಜಾತಂತ್ರದಲ್ಲಿ ಬೇರೆ ಯಾರಾದರೊಬ್ಬರ ಹಂಗಿನ ದಾಸರಾಗಬೇಕಾಗುತ್ತದೆ. ಮನಮೋಹನ್ ಸಿಂಗ್ ಆಗಿದ್ದು ಇದೇ. ಪ್ರಧಾನಿಯಾದವನು ಸಂಫೂರ್ಣ ದೇಶದ ಮುಖಂಡ. 100 ಕೋಟಿ ಜನರ ನಾಯಕ. ಅದರೆ ಅಂತಹ ಯಾವುದೇ ದಕ್ಷತೆಯನ್ನು, ಕಳಕಳಿಯನ್ನು ಕಳೆದ 5 ವರ್ಷಗಳಲ್ಲಿ ಮನಮೋಹನ್ ಪ್ರದಶರ್ಿಸಿಲ್ಲ.
ಒಂದು ಅಂಕಿಅಂಶದ ಪ್ರಕಾರ ಕಳೆದ ಐದು ವರ್ಷಗಳಲ್ಲಿ 3850 ಭಾರತೀಯರು ಭಯೋತ್ಪಾದಕರಿಗೆ ಬಲಿಯಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 12ಕ್ಕೂ ಹೆಚ್ಚು ದೊಡ್ಡ ಜಿಹಾದಿ ದಾಳಿಗಳಾಗಿವೆ. 26/11 ಘಟನೆಯನ್ನು ಬಿಟ್ಟರೆ ಉಳಿದ ಯಾವ ಸಂದರ್ಭದಲ್ಲೂ ಮನಮೋಹನ್ ನೊಂದ ಜನರಿಗೆ ತಮ್ಮ ಮುಖವನ್ನೂ ಸರಿಯಾಗಿ ತೋರಿಸಲಿಲ್ಲ. 26/11 ಘಟನೆಯಾದಾಗಲೂ ಅವರು ಮುಂಬಯಿಗೆ ಗೃಹಮಂತ್ರಿ, ರಕ್ಷಣಾ ಮಂತ್ರಿಗಳನ್ನು ಕರೆದುಕೊಂಡು ಹೋಗದೇ ಸೋನಿಯಾ ಗಾಂಧಿ ಜೊತೆಗೆ ಹೋದರು. ಇಂತಹ ಸ್ಥಿತಿಯಲ್ಲಿ ಬರಾಕ್ ಒಬಾಮಾ ಅಥವಾ ಇತರ ರಾಷ್ಟ್ರನಾಯಕರು ಇದ್ದರೆ ಹೇಗೆ ವತರ್ಿಸುತ್ತಿದ್ದರು ಎಂಬುದು ಗಮನಾರ್ಹ. 2001ರ ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯ ನಂತರ ಜಾಜರ್್ ಬುಷ್ ತಮ್ಮ ರಿಪಬ್ಲಿಕನ್ ಪಕ್ಷದ ಅಧ್ಯಕ್ಷರನ್ನು ಮುಂದೆ ಬಿಟ್ಟುಕೊಂಡು ಅವರ ಹಿಂದೆ ಅಲೆಯುತ್ತಿದ್ದರೆ?
2004ರಲ್ಲಿ ಯುಪಿಎ ಸಕರ್ಾರ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಒಂದೇ ಒಂದು ಸಚಿವ ಸಂಪುಟದ ಸಭೆಗೂ ಹಿರಿಯ ಸಚಿವರೊಬ್ಬರು ಹಾಜರಾಗಿಲ್ಲ! ಅವರ ವಿರುದ್ಧ ನಮ್ಮ `ಪ್ರಬಲ' ಪ್ರಧಾನಿಗಳು ಯಾವ ಕ್ರಮ ಕೈಗೊಂಡಿದ್ದಾರೆ? ಈ ಕುರಿತು ಮನಮೋಹನ್ ಚಕಾರವೆತ್ತಿಲ್ಲ. ಏಕೆಂದರೆ ಆ ಸಚಿವರೂ 10 ಜನಪಥ್ ವಿಳಾಸದ ನಿಷ್ಠರಲ್ಲೊಬ್ಬರು!
ಸಕರ್ಾರದ ಮುಖ್ಯಸ್ಥರಾಗಿ ತಪ್ಪು ಮಾಡುವ ಸಚಿವರನ್ನು ಪ್ರಶ್ನಿಸುವ, ಅಥವಾ ಅವರನ್ನು ತೆಗೆದುಹಾಕುವ ಅಧಿಕಾರ ಪ್ರಧಾನಿಗಿದೆ. ಇರುವ ಅಧಿಕಾರವನ್ನೂ ಬಳಸದ ಇವರು ಪ್ರಬಲರೋ, ದುರ್ಬಲರೋ? ಶಿಬು ಸೋರೆನ್, ರಾಮದಾಸ್, ಅಬ್ದುಲ್ ರೆಹಮಾನ್ ಅಂತುಲೆ - ಹೀಗೆ ಅನೇಕ ಸಚಿವರು ತಮ್ಮ ಕೃತ್ಯ ಹಾಗೂ ಹೇಳಿಕೆಗಳಿಂದ ಸಕರ್ಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೂ ಅವರ ಗೊಡವೆಗೇ ಪ್ರಧಾನಿ ಹೋಗಲಿಲ್ಲ. ಕ್ರಮ ತೆಗೆದುಕೊಳ್ಳುವ ಅಧಿಕಾರ ತಮಗಿದೆ, ಅದನ್ನು ಚಲಾಯಿಸಬೇಕಾದ್ದು ತಮ್ಮ ಕರ್ತವ್ಯ ಎಂದು ಕುಚರ್ಿಯಲ್ಲಿ ಕುಳಿತ ಒಂದು ದಿನವಾದರೂ ಅವರಿಗೆ ಅನಿಸಿದ್ದುಂಟೆ? ಪ್ರತಿಯೊಂದಕ್ಕೂ ಸೋನಿಯಾ ನಿವಾಸದತ್ತ ಮುಖ ಮಾಡುವ ಪ್ರವೃತ್ತಿ ಕೇವಲ ದೌರ್ಬಲ್ಯ ಮಾತ್ರವೇ ಅಲ್ಲ. ಪ್ರಧಾನಿ ಈ ಕುರಿತು ಜನತೆಗೆ ವಿವರಿಸಬೇಕು.
ಯುಪಿಎ ಮಿತ್ರಪಕ್ಷಗಳು ಸಹ ಪ್ರಧಾನಿಯವರನ್ನು ಗಂಭೀರವಾಗಿ ಭಾವಿಸಿಲ್ಲ. ಡಿಎಂಕೆ ಪಕ್ಷದ ರಾಜಾ ದೂರಸಂಪರ್ಕ ಖಾತೆಯ ಸಂಪುಟ ಸಚಿವರಾಗಿ ನೇಮಕಗೊಂಡಿರುವ (ದಯಾನಿಧಿ ಮಾರನ್ ರಾಜೀನಾಮೆಯ ನಂತರ) ಸಂಗತಿಯನ್ನು ಮೊದಲು ಘೋಷಿಸಿದ್ದು ಡಿಎಂಕೆ ಮುಖಂಡ ಕರುಣಾನಿಧಿ. ಪ್ರಧಾನಮಂತ್ರಿ ಕಾಯರ್ಾಲಯವಲ್ಲ! ಎಲ್ಲ ಮಿತ್ರಪಕ್ಷಗಳ ಸಚಿವರುಗಳೂ ಸೋನಿಯಾರತ್ತ ಮುಖ ಮಾಡುತ್ತಾರೆಯೇ ಮನಮೋಹನ್ ಅವರ ಕಡೆಗಲ್ಲ. ಡಿಎಂಕೆ, ಎನ್ಸಿಪಿ ಹಾಗೂ ಪಿಎಂಕೆ ಸಚಿವರುಗಳು ಸಾರ್ವಜನಿಕ ಹಣ ಬಳಸಿ ನಡೆಸಿದ ವಿದೇಶ ಯಾತ್ರೆಗಳ ಬಗ್ಗೆ ಪ್ರಧಾನಮಂತ್ರಿ ಕಾಯರ್ಾಲಯಕ್ಕೆ ಇನ್ನೂ ವರದಿ ನೀಡಿಯೇ ಇಲ್ಲ. ಸೂಕ್ತ ಕ್ರಮ ಕೈಗೊಳ್ಳಲು ನಮ್ಮ `ಪ್ರಬಲ' ಪ್ರಧಾನಿಗೆ ಇನ್ನೂ ಪುರುಸೊತ್ತು ಸಿಕ್ಕಿಲ್ಲ!
ದೇಶವನ್ನು ಕಾಡುತ್ತಿರುವ ಜಿಹಾದಿ ಭಯೋತ್ಪಾದನೆಯ ವಿರುದ್ಧವಾಗಿ ಈವರೆಗೆ ಮನಮೋಹನ್ ಸ್ಪಷ್ಟವಾದ ಒಂದು ಹೇಳಿಕೆಯನ್ನೂ ನೀಡಿಲ್ಲ. ಅವರ ಅವಧಿಯಲ್ಲಿ ಸಿಬಿಐ ಹಲವರು ಬಾರಿ ಸುಪ್ರೀಮ್ ಕೋಟರ್ಿನಿಂದ ಛೀಮಾರಿ ಹಾಕಿಸಿಕೊಂಡಿದೆ. ಸಕರ್ಾರದ ಕೈಗೊಂಬೆಯಾಗಿ ಆಪಾದಿತರನೇಕರ ಪರವಾಗಿ ವತರ್ಿಸಿದ್ದನ್ನು ಸ್ವತಃ ಸಿಬಿಐ ಮುಖ್ಯಸ್ಥರೇ ಸುಪ್ರೀಮ್ ಕೋಟರ್್ ಎದುರಿಗೆ ಒಪ್ಪಿಕೊಂಡಿರುವುದು ಮನಮೋಹನ್ ಸಿಂಗ್ ಅವರ `ದಕ್ಷತೆಗೆ' ಮತ್ತು `ಪ್ರಾಮಾಣಿಕತೆಗೆ' ಕನ್ನಡಿ ಹಿಡಿಯುತ್ತದೆ.
ಬರೀ ಪೇಲವ ನಗೆಯನ್ನು ಮತ್ತು ಸೌಮ್ಯ ಮುಖವನ್ನು ಸಜ್ಜನಿಕೆಯ ಸಂಕೇತ ಅಂದುಕೊಂಡರೆ ಮನಮೋಹನ್ ಅತ್ಯಂತ ಹೆಚ್ಚು ಸಜ್ಜನರು! ಆದರೆ ಅವರು ಖಂಡಿತಾ ದಕ್ಷರಲ್ಲ.
ಕೇಂದ್ರದಲ್ಲಿ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಲಾಲ್ ಕೃಷ್ಣ ಆಡ್ವಾಣಿ ಪ್ರಧಾನಿ ಆಗುತ್ತಾರೆ. ಆದರೆ ಅವರು ಪ್ರಬಲ ಪ್ರಧಾನಿ ಎನಿಸುಬಲ್ಲರೆ? ಈ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕು (ಅದೂ ಅವರು ಪ್ರಧಾನಿಯಾದರೆ!).
ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರನ್ನು ಕಾಂಗ್ರೆಸ್ ಪಕ್ಷ `ವೀಕ್-ನೀಡ್ ಪ್ರೈಮ್ ಮಿನಿಸ್ಟರ್' ಎಂದು ಛೇಡಿಸುತ್ತಿತ್ತು. ಈಗ ಮನಮೋಹನ್ ಅವರನ್ನು `ವೀಕ್-ಹಾಟರ್ೆಡ್ ಪ್ರೈಮ್ ಮಿನಿಸ್ಟರ್' ಎನ್ನಬಹುದೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ