ಅಮೆರಿಕದ ಮಾಜಿ ಅಧ್ಯಕ್ಷ ಜಾಜರ್್ ಡಬ್ಲ್ಯೂ ಬುಷ್ ಮೇಲೆ ಇರಾಕಿ ಪತ್ರಕರ್ತನೊಬ್ಬ ಶೂಗಳನ್ನು ಎಸೆದ ಪ್ರಕರಣದಿಂದಾಗಿ ಹೊಸ ಬೆಳವಣಿಗೆಯಾದಂತಿದೆ. ಶೂಗಳನ್ನು, ಚಪ್ಪಲಿಗಳನ್ನು ಎಸೆಯುವ ಮೂಲಕ ತಮ್ಮ `ಪ್ರತಿಭಟನೆ' ವ್ಯಕ್ತಪಡಿಸುವ ಹೊಸ ಪದ್ಧತಿ ಅಥವಾ ಶಕೆ ಆರಂಭವಾಗಿರುವಂತಿದೆ.
ಇದೊಂದು ಕೆಟ್ಟ ಬೆಳವಣಿಗೆಯೇ ಸರಿ. ಆದರೆ ಖಂಡಿತಾ ಇದು ಹೊಸ ಪದ್ಧತಿಯೇನಲ್ಲ. ಶೂಸ್, ಚಪ್ಪಲಿಗಳು, ಕೊಳೆತ ಹಣ್ಣು. ಮೊಟ್ಟೆಗಳನ್ನು ಮುಖದ ಮೇಲೆ ಎಸೆದು ಪ್ರತಿಭಟನೆ ಸೂಚಿಸುವುದು ಸಣ್ಣಪುಟ್ಟ ಮಟ್ಟಗಳಲ್ಲಿ ಮೊದಲಿನಿಂದಲೂ ನಡೆದುಕೊಂಡೇ ಬಂದಿರುವಂತಹುದು. ಆದರೆ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಸುದ್ದಿಯಾಗುವ ರೀತಿಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಹಲವಾರು ಪ್ರಮುಖ ಶೂಸ್ ಪ್ರಕರಣಗಳು ನಡೆದಿರುವುದು ಗಮನಾರ್ಹ.
ಮೊದಲ ಪ್ರಮುಖ ಪ್ರಕರಣ ನಿಮಗೆ ನೆನಪಿರಬಹುದು. 2008 ಡಿಸೆಂಬರ್ 14 ರಂದು ಜಾಜರ್್ ಬುಷ್ ಇರಾಕ್ಗೆ ಹಠಾತ್ತಾಗಿ ಭೇಟಿ ನೀಡಿದ್ದರು. ತುಂಬಿದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದಾಗ ಕೈರೋ ಮೂಲದ ಅಲ್-ಬಾಗ್ದಾದಿಯಾ ಟಿವಿಯ ಇರಾಕಿ ವರದಿಗಾರ ಮುಂತದಾರ್ ಅಲ್-ಜೈದಿ ಹಠಾತ್ತಾಗಿ ಎದ್ದುನಿಂತು `ಛೀ ನಾಯಿ' ಎಂದು ಬುಷ್ ಅವರನ್ನು ಬೈದ. ಅನಂತರ ಒಂದಾದ ನಂತರ ಒಂದರಂತೆ ತನ್ನ ಎರಡು ಶೂಗಳನ್ನೂ ಅವರ ಮುಖಕ್ಕೆ ಎಸೆದ.
ಇದಾದ ನಂತರ `ಸಾಮೂಹಿಕ ಶೂ-ಎಸೆತದ ಚಳವಳಿ'ಯನ್ನು ನಡೆಸಲಾಯಿತು. ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ನಡೆಯುತ್ತಿರುವ `ಗಾಜಾದಲ್ಲಿ ಬ್ರಿಟಿಷ್ ಸಕರ್ಾರ ನಿಷ್ಕ್ರಿಯತೆ ತೋರುತ್ತಿದೆ' ಎಂದು ಆರೋಪಿಸಿ ಸಾವಿರಾರು ಇಸ್ಲಾಮೀ ಕಾರ್ಯಕರ್ತರು ಬ್ರಿಟನ್ ಪ್ರಧಾನಿ ಗೋರ್ಡನ್ ಬ್ರೌನ್ ಅವರ ಅಧಿಕೃತ ನಿವಾಸದ ಮೇಲೆ ಸಾಮೂಹಿಕವಾಗಿ ಶೂಗಳನ್ನು ಎಸೆದರು.
ನಂತರದ ಶಿಕಾರಿ ಚೀನಾ ಪ್ರಧಾನಿ ವೆನ್ ಜಿಯಾಬಾವ್. ಇದೇ ಫೆಬ್ರವರಿ 2 ರಂದು ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಆಥರ್ಿಕತೆಯ ಬಗ್ಗೆ ಭಾಷಣ ಮಾಡುತ್ತಿದ್ದರು. `ಹೇ ಸವರ್ಾಧಿಕಾರಿ' ಎಂಬ ಕೂಗು ಕೇಳಿಸಿತು. ತಕ್ಷಣ ಅವರ ಮೇಲೆ ಶೂ ಎಸೆಯಲಾಯಿತು. ಅದನ್ನು ಎಸೆದದ್ದು ಜರ್ಮನಿ ಮೂಲದ ಮಾಟರ್ಿನ್ ಜಾನ್ಕ್ ಎಂಬ ಪ್ಯಾಥೋಲಜಿ ವಿದ್ಯಾಥರ್ಿ.
ಸುಪ್ರೀಂ ಕೋಟರ್ಿನ ನ್ಯಾಯಾಧೀಶ ಅರಿಜಿತ್ ಪಸಾಯತ್ ಅವರ ಮೇಲೆ ಕಟಕಟೆಯಲ್ಲಿದ್ದ ವಿದ್ಯಾವಂತ ಆರೋಪಿ ಮಹಿಳೆಯೊಬ್ಬಳು ಇದೇ ಮಾಚರ್್ 30 ರಂದು ಶೂ ಎಸೆದ ಪ್ರಸಂಗ ನಡೆಯಿತು. ಆದರೆ ಅದನ್ನು ಪಸಾಯತ್ ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲಿ ಟಿವಿ ಕ್ಯಾಮೆರಾಗಳು ಇರಲಿಲ್ಲ. ಹೀಗಾಗಿ ಅದು ದೊಡ್ಡ ಸುದ್ದಿಯಾಗಲಿಲ್ಲ.
ಈಚಿನ ಶಿಕಾರಿ ಭಾರತದ ಗೃಹಮಂತ್ರಿ ಪಿ. ಚಿದಂಬರಂ. ಅವರ ಮೇಲೆ `ದೈನಿಕ್ ಜಾಗರಣ್' ಪತ್ರಿಕೆಯ ವರದಿಗಾರ ಜನರ್ೈಲ್ ಸಿಂಗ್ ಶೂ ಎಸೆದದ್ದು ದೊಡ್ಡ ಸುದ್ದಿಯಾಯಿತು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ನಂತರ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಖ್ಖರ ಮೇಲೆ ನಡೆಸಿದ ಹಿಂಸಾಚಾರಕ್ಕೆ 3000 ಸಿಖ್ಖರು ಬಲಿಯಾದ ಪ್ರಕರಣ ಈ ಘಟನೆಗೆ ಕಾರಣ. ಸಿಖ್ ನರಮೇಧದ ಪ್ರಮುಖ ಆರೋಪಿ, ಕಾಂಗ್ರೆಸ್ ನಾಯಕ, ಜಗದೀಶ್ ಟೈಟ್ಲರ್ ಅವರನ್ನು `ಅಮಾಯಕ' ಎಂದು ಸಿಬಿಐ ದೋಷಮುಕ್ತಗೊಳಿಸಿದ ವಿಷಯ ಚಿದಂಬರಂ ಗೋಷ್ಠಿಯಲ್ಲಿ ಪ್ರಸ್ತಾಪವಾಯಿತು. ಸಿಖ್ಖರ ನರಮೇಧ ನಡೆಸಿದ ಕಾಂಗ್ರೆಸ್ ನಾಯಕನ ಪರವಾಗಿ ವತರ್ಿಸಲು ಸಿಬಿಐ ಮೇಲೆ ಕೇಂದ್ರ ಸಕರ್ಾರ ಒತ್ತಡ ಹೇರಿದೆಯೆ ಎಂಬ ಜನೈಲನ ಪ್ರಶ್ನೆಗೆ ಚಿದಂಬರಂ ಹಾರಿಕೆಯ ಉತ್ತರ ನೀಡಿದರು. `ಈ ವಿಷಯದಲ್ಲಿ ಚಚರ್ೆ ಬೇಕಿಲ್ಲ' ಎಂದು ಅವರು ಹೇಳುತ್ತಿದ್ದಂತೆ `ನಾನಿದನ್ನು ಪ್ರತಿಭಟಿಸುತ್ತೇನೆ' ಎಂದು ಜನರ್ೈಲ್ ಚಿದಂಬರಂ ಸಮೀಪ ಬೀಳುವಂತೆ ತನ್ನ ಶೂ ಎಸೆದ.
ಈ ಪ್ರಕರಣಗಳಲ್ಲಿ ಶೂಗಳನ್ನು ಎಸೆದವರೆಲ್ಲ ವಿದ್ಯಾವಂತರು. ತಾವೇನು ಮಾಡುತ್ತಿದ್ದೇವೆ ಎಂಬುದನ್ನು ತಿಳಿದವರು. ಅದರಲ್ಲೂ ಎರಡು ಪ್ರಕರಣಗಳಲ್ಲಿ ತಾವು ಕೇಳಿದ್ದನ್ನು ಕೇಳಿದ ಹಾಗೆಯೇ ವರದಿ ಮಾಡಬೇಕಾದ ಜವಾಬ್ದಾರಿ ಇರುವ ಪತ್ರಕರ್ತರು ಶೂ ಎಸೆದಿದ್ದಾರೆ. ಸುದ್ದಿ ನೀಡಬೇಕಾದವರು ತಾವೇ ಸುದ್ದಿಯಾಗುತ್ತಿರುವುದು ಅಪೇಕ್ಷಣೀಯ ಬೇಳವಣಿಗೆಯಲ್ಲ. ಇದರಿಂದ ಇನ್ನು ಮುಂದೆ ಮಾಧ್ಯಮಗೋಷ್ಠಿಗಳಿಗೆ ಹಾಜರಾಗುವ ಪತ್ರಕರ್ತರು ತಮ್ಮ ಪಾದರಕ್ಷೆಗಳನ್ನು ಕಳಚಿಟ್ಟು ಬರೀಗಾಲಲ್ಲಿ ಬರಬೇಕೆಂಬ ಹೊಸ ತಾಕೀತು ಶುರುವಾಗಲೂಬಹುದು. ಅವರ ಪೆನ್ನುಗಳೂ ಸುರಕ್ಷಾ ಪರಿಧಿಗೆ ಬರಬಹುದು. `ಲೇಖನಿ ಖಡ್ಗಕ್ಕಿಂತಲೂ ಹರಿತವಾದದ್ದು' ಎಂಬ ಮಾತು ಬೇರೊಂದು ವಿಚಿತ್ರ ಅರ್ಥದಲ್ಲಿ ಗಂಭೀರವಾಗಿ ಭಾವಿಸಲ್ಪಡಬಹುದು!
ಬುಷ್ ಮೇಲೆ ಶೂ ಎಸೆದ ಬಳಿಕ ಅಲ್-ಜೈದಿಯ ಬಂಧನವಾಯಿತು. ಅನಂತರ ನ್ಯಾಯಾಲಯದಲ್ಲಿ ಆತನಿಗೆ ಮೂರು ವರ್ಷಗಳ ಜೈಲು ಶಿಕ್ಷೆಯಾಯಿತು. ವೆನ್ ಜಿಯಾಬಾವ್ ಮೇಲೆ ಶೂ ಎಸೆದ ಘಟನೆಯನ್ನು ಚೀನಾದಲ್ಲಿ ವರದಿ ಮಾಡದೇ `ಸೆನ್ಸಾರ್' ಮಾಡಲಾಯಿತು! ಆದರೂ ಮಾಟರ್ಿನ್ ವಿರುದ್ಧ ಬ್ರಿಟನ್ನಿನಲ್ಲಿ ಕೇಸು ನಡೆಯುತ್ತಿದೆ. ಜನರ್ೈಲ್ ವಿರುದ್ಧ ಚಿದಂಬರಂ ದೂರು ದಾಖಲಿಸಲಿಲ್ಲ. ದೈನಿಕ್ ಜಾಗರಣ್ ಪತ್ರಿಕೆ ಆತನ ಮೇಲೆ ಶಿಸ್ತುಕ್ರಮ ತೆಗೆದುಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.
ಈ ಪ್ರಕರಣಗಳನ್ನು ಜಗತ್ತು ಸ್ವೀಕರಿಸಿದ ರೀತಿಯೂ ಗಮನಾರ್ಹ. ಶೂ ಎಸೆಯುವುದನ್ನು ಎಸೆದವರ ಹಿನ್ನೆಲೆ, ಉದ್ದೇಶಗಳನ್ನು ಸಮಥರ್ಿಸುವವರು ಸ್ವಾಗತಿಸಿದ್ದಾರೆ. ಇಸ್ಲಾಮೀ ತೀವ್ರವಾದಿಗಳು ಅಲ್-ಜೈದಿಯಗೆ ಹೀರೋ ಪಟ್ಟ ನೀಡಿದ್ದಾರೆ. ಮುಸ್ಲಿಂ ಶ್ರೀಮಂತನೊಬ್ಬ ಅವರಿಗೆ ತನ್ನ ಒಬ್ಬಳೇ ಮಗಳನ್ನು ಕೊಡುವ ಪ್ರಸ್ತಾಪ ಮುಂದಿಟ್ಟಿದ್ದ! ಇಂಟರ್ನೆಟ್ನಲ್ಲಿ ಬುಷ್ ಮೇಲೆ ಶೂಸ್ ಎಸೆಯುವ ಆನ್ಲೈನ್ ವಿಡೀಯೋ ಗೇಮ್ಗಳ ಸ್ಪಧರ್ೆಗಳು ನಡೆಯುತ್ತಿವೆ! ಅಕಾಲಿದಳದ ದೆಹಲಿ ಘಟಕ ಜನರ್ೈಲ್ ಅನ್ನು ಕೊಂಡಾಡಿದೆ. ಆತನಿಗೆ 2 ಲಕ್ಷ ರೂ ಬಹುಮಾನ ಘೋಷಿಸಿದೆ. ಸಿಮ್ರನ್ಜಿತ್ ಸಿಂಗ್ ಮಾನ್ ನಾಯಕತ್ವದ ಅಕಾಲಿದಳ (ಅಮೃತಸರ) ಆತನಿಗೆ ಲೋಕಸಭಾ ಟಿಕೆಟ್ ನೀಡಲು ಮುಂದೆ ಬಂದಿತ್ತು. ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಆತನಿಗೆ ಉದ್ಯೋಗ ನೀಡುವ ಪ್ರಸ್ತಾಪ ಮಾಡಿದೆ.
ಈವರೆಗಿನ ಹೆಚ್ಚಿನ `ಶೂ ಬಾಣ'ಗಳ ಗುರಿ ರಾಜಕಾರಣಿಗಳು. ಸದ್ಯದ ಪ್ರಮುಖ ಗುರಿಗಾರರೆಲ್ಲ ವಿದ್ಯಾವಂತರು. ಪತ್ರಕರ್ತರು. ಮುಂದೆ ಸಾಮಾನ್ಯ ಜನರೂ ಈ ರೀತಿಯ `ಪ್ರತಿಭಟನೆ'ಗಳಿಗೆ ಇಳಿದರೆ ರಾಜಕಾರಣಿಗಳ ಜೊತೆಗೆ ಮಿಷನರಿಗಳು, ಪೋಪ್, ಮಠಾಧೀಶರು, ಮುಲ್ಲಾಗಳು - ಹೀಗೆ ಎಲ್ಲರೂ ಗುರಿಗಳಾಗಬಹುದು! ಜಾತಿ ಮುಖಂಡರು, ಊರಿನ ಜಮೀನುದಾರರಿಂದ ಹಿಡಿದು ಸಾರ್ವಜನಿಕ ಸಂಪರ್ಕಕ್ಕೆ ಬರುವ ಎಲ್ಲರೂ ಬಹಳ ಎಚ್ಚರದಿಂದ ಇರಬೇಕಾಗುತ್ತದೆ! ಮುಂದೆ ಪ್ರತಿಕೃತಿಗಳ ದಹನದ ಬದಲು ಪ್ರತಿಕೃತಿಗಳನ್ನು ಮಾಡಿಟ್ಟು ಅವುಗಳಿಗೆ ಸಾರ್ವಜನಿಕ ಚಪ್ಪಲಿ ಸೇವೆ ಮಾಡುವುದು ಹೆಚ್ಚಾಗಬಹುದು.
ಶೂ ಎಸೆಯುವುದು ಒಳ್ಳೆಯ ಪ್ರತಿಭಟವಾ ವಿಧಾನವೆ? - ಎಂಬುದು ಮುಖ್ಯವಾದ ಪ್ರಶ್ನೆ. ಅದರಲ್ಲೂ ಪ್ರತಿಭಟನೆಯ ಸ್ಥಳ ಯಾವುದು? ಪ್ರತಿಭಟನಕಾರರು ಯಾರು? ಪ್ರತಿಭಟನೆ ಯಾರ ಮೇಲೆ? ಅದರ ಉದ್ದೇಶವೇನು? ಗಮನ ಸೆಳೆಯುವುದೇ? ಅಥವಾ ಘಾಸಿ ಮಾಡುವುದೆ? ಹಾಗೂ ಪ್ರತಿಭಟನಕಾರರ ಗುರಿಯೇನು? ಸುದ್ದಿ ಮಾಡುವುದೆ? ಸಾರ್ವಜನಿಕಮ ಹಿತಾಸಕ್ತಿಯೆ? - ಇವೆಲ್ಲ ಪ್ರಶ್ನೆಗಳೂ ಮುಖ್ಯವಾಗುತ್ತವೆ.
ಯಾವುದೇ ದೃಷ್ಟಿಯಿಂದ ನೋಡಿದರೂ ಮೇಲೆ ಉದಾಹರಿಸಿದ ಪ್ರಸಂಗಗಳು ಅಂತಹ ಪ್ರತಿಭಟನೆಗಳಿಗೆ ತಕ್ಕವುಗಳಾಗಿರಲಿಲ್ಲ ಎಂದೇ ಹೇಳಬೇಕಾಗುತ್ತದೆ. ಸುಲಭವಾಗಿ ಸುದ್ದಿ ಮಾಡಲೂ ಕೆಲವರು ಇಂತಹ ವಿನೂತನ, ವಿಚಿತ್ರ ಪ್ರತಿಭಟನೆಗೆ ಇಳಿಯುವ ಅಪಾಯ ಇದ್ದೇ ಇದೆ.
ಆದರೂ ಕೆಲವು ಪ್ರಕರಣಗಳಲ್ಲಿ (ಉದಾಹರಣೆಗೆ, ಜನರ್ೈಲ್ ಪ್ರಕರಣ) ಶೂ-ದಾಳಿಗೆ ಗುರಿಯಾದವರಿಗೆ ಸಾರ್ವಜನಿಕ ಸಹಾನುಭೂತಿ ಸಿಕ್ಕಿಲ್ಲ. ಇದಕ್ಕೆ ಕಾರಣ `ಅವರು ಇಂತಹ ಸೇವೆಗೆ ತಕ್ಕವರು' ಎಂಬ ಭಾವನೆ ಸಾರ್ವಜನಿಕರಲ್ಲಿ ಬಲವಾಗಿರುವುದು. ಉದಾಹರಣೆಗೆ, ಸಿಖ್ ನರಮೇಧದ ಪ್ರಕರಣ. ಅದು ನಡೆದು 25 ವರ್ಷಗಳಾಗುತ್ತ ಬಂದರೂ ಇನ್ನೂ ಯಾವುದೇ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಕಾಂಗ್ರೆಸ್ಸಿನ ನಾಯಕರಾದ ಸಜ್ಜನ್ ಕುಮಾರ್, ಜಗದೀಶ್ ಟೈಟ್ಲರ್ ಹಾಗೂ ಎಚ್.ಕೆ.ಎಲ್. ಭಗತ್ ಅದರ ಪ್ರಮುಖ ಆರೋಪಿಗಳು. ಈ ಪೈಕಿ ಭಗತ್ ಜೈಲು ಸೇರುವ ಮೊದಲೇ ಅಸುನೀಗಿದರು. ಉಳಿದ ಇಬ್ಬರ ತಲೆ ಕಾಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಈ ಕುರಿತ ಸಾರ್ವಜನಿಕ ಅಸಮಾಧಾನ 25 ವರ್ಷವಾದರೂ ಅಳಿದಿಲ್ಲ ಎಂಬುದಕ್ಕೆ ಪ್ರಸ್ತುತ ಪ್ರಕರಣವೇ ಸಾಕ್ಷಿ.
ಸಾಂದಭರ್ಿಕವಾಗಿ ಹೇಳುವುದಾದರೆ, ಕಲ್ಲು ಎಸೆಯುವುದು ಇಸ್ಲಾಮಿಕ್ `ಪ್ರತಿಭಟನೆ' ಹಾಗೂ `ಶಿಕ್ಷೆ'. ಮೆಕ್ಕಾಗೆ ಹೋದವರು ಅಲ್ಲಿ `ಸೈತಾನ್' ಪ್ರತಿಕೃತಿಯ ಮೇಲೆ ಕಲ್ಲೆಸೆದು ಬರುತ್ತಾರೆ. ವ್ಯಭಿಚಾರದ ಆರೋಪ ಹೊತ್ತ ಮಹಿಳೆಯರನ್ನು ಕಲ್ಲೆಸೆದು ಕೊಲ್ಲುವುದು ಶರಿಯಾ ಕಾನೂನಿನ ಒಂದು ಶಿಕ್ಷೆ. ಇನ್ನು ಶೂಗಳನ್ನು ಎಸೆಯುವ ವಿಷಯಕ್ಕೆ ಬಂದರೆ, ಶೂ-ಎಸೆತದ ರಾಷ್ಟ್ರೀಯ ಮಟ್ಟದ ಸ್ಪಧರ್ೆಯನ್ನು ಹಲವಾರು ವರ್ಷಗಳಿಂದ ನ್ಯೂಜಿಲ್ಯಾಂಡಿನಲ್ಲಿ ನಡೆಸಲಾಗುತ್ತಿದೆ! 2003ರಿಂದ ಈಚೆಗೆ ಪೂರ್ವ ಯೂರೋಪಿನ ದೇಶಗಳೂ ಇದರಲ್ಲಿ ಭಾಗಿಯಾದ ನಂತರ ಈಗ ಶೂ ಎಸೆಯುವ ಅಂತಾರಾಷ್ಟೀಯ ಚಾಂಪಿಯನ್ಶಿಪ್ ಸ್ಪಧರ್ೆಗಳನ್ನು ನಡೆಸಲಾಗುತ್ತಿದೆ!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ