ಗುರುವಾರ, ಏಪ್ರಿಲ್ 09, 2009

ವಿದೇಶಗಳಲ್ಲಿ ಭಾರತದ ಕಪ್ಪು ಹಣ: ಸರ್ಕಾರದ ಮೌನ

ಭಾರತದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಇತರೆ ಕಪ್ಪು ಹಣದ `ಕಪ್ಪು ಶ್ರೀಮಂತ'ರು ಸ್ವಿಸ್ ಬ್ಯಾಂಕುಗಳಲ್ಲಿ, ಇತರ ವಿದೇಶಿ ಬ್ಯಾಂಕುಗಳಲ್ಲಿ ಹಣ ಇಡುವುದು ಹೊಸದೇನಲ್ಲ. ಸ್ವಿಸ್ ಬ್ಯಾಂಕುಗಳಲ್ಲಿ ಹಣವಿಟ್ಟ ಜಗತ್ತಿನ ಎಲ್ಲ ಕಪ್ಪು ಶ್ರೀಮಂತರ ಪೈಕಿ ಮೊದಲ ಸ್ಥಾನದಲ್ಲಿರುವುದು ಬಡ ಭಾರತದ ಕಪ್ಪು ಶ್ರೀಮಂತರು! `ಸ್ವಿಸ್ ಬ್ಯಾಂಕಿಂಗ್ ಅಸೋಸಿಯೇಷನ್' 2006ರಲ್ಲಿ ನೀಡಿದ ವರದಿಯ ಪ್ರಕಾರ ಸ್ವಿಸ್ ಬ್ಯಾಂಕುಗಳಲ್ಲಿರುವ ಕಪ್ಪು ಹಣದ ಭಾರತೀಯರ ಒಟ್ಟು ಹಣ 1456 ಶತಕೋಟಿ ಡಾಲರ್! ಅಂದರೆ ನಮ್ಮ ರಾಷ್ಟ್ರದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಸಮನಾದಷ್ಟು ಹಣ! ಅಂದರೆ ಸುಮಾರು 70,000 ಶತಕೋಟಿ ರೂಪಾಯಿಗಳು!!

ಆದರೂ ನಮ್ಮ ಸಕರ್ಾರ ಏಕೆ ಕಪ್ಪು ಹಣದ ವಿವರ ತರಿಸುವುದಿಲ್ಲ? ಎಲ್ಲ ಕಪ್ಪು ಶ್ರೀಮಂತರ ಬಳಿ ಲೆಕ್ಕ ಕೇಳುವುದಿಲ್ಲ? ಏಕೆ ಕಪ್ಪು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ? ಏಕೆಂದರೆ ವಿದೇಶಿ ಬ್ಯಾಂಕುಗಳಲ್ಲಿರುವವರ ಹಣದಲ್ಲಿ ಬಹುಪಾಲು ಸ್ವತಂತ್ರ ಭಾರತದ `ಸ್ವತಂತ್ರ' ರಾಜಕಾರಣಿಗಳದು! ಗಾಜಿನ ಮನೆಯಲ್ಲಿರುವವರು ಎಂದಿಗೂ ಪಕ್ಕದ ಮನೆಯ ಮೇಲೆ ಕಲ್ಲೆಸೆಯುವುದು ಸಾಧ್ಯವಿಲ್ಲ.

ನಮ್ಮ ಪ್ರಧಾನಿ ಒಬ್ಬ ಅರ್ಥಶಾಸ್ತ್ರಜ್ಞ. `ಬ್ಲ್ಯಾಕ್ ಎಕಾನಮಿ'ಯ ದುಷ್ಪರಿಣಾಮಗಳನ್ನು ಕುರಿತು ಓದಿದವರು, ಬೋಧಿಸಿದವೆರು. ಆದರೆ ಅವರು ಮಾಡಿದ್ದೇನು? ಮುಂದೆ ಓದಿ.

ಆಸ್ಟ್ರಿಯಾ ಹಾಗೂ ಸ್ವಿಡ್ಜರ್ಲ್ಯಾಂಡಿನ ಮಧ್ಯೆ ಇರುವ ಚಿಕ್ಕ ಗುಡ್ಡಗಾಡು ದೇಶದ ಹೆಸರು ಲೀಚ್ಟೆನ್ಸ್ಟೈನ್. ಮಧ್ಯಮವರ್ಗದ ಜನರು ಸಾಮಾನ್ಯವಾಗಿ ಈ ದೇಶದ ಹೆಸರನ್ನೇ ಕೇಳಿರುವುದಿಲ್ಲ. ಆದರೆ ಜಗತ್ತಿನ ಕಪ್ಪು ಶ್ರೀಮಂತರಿಗೆಲ್ಲ ಈ ದೇಶ ಸುಪರಿಚಿತ. ಇಲ್ಲಿ ನೂರಾರು ಭಾರತೀಯ ಕಪ್ಪು ಶ್ರೀಮಂತರು ಹಣ ಇಟ್ಟಿದ್ದಾರೆ. ಈಚೆಗೆ ಜರ್ಮನಿಯ ಸಕರ್ಾರ ಲೀಚ್ಟೆನ್ಸ್ಟೈನ್ ದೇಶದ ಎಲ್ಟಿಜಿ ಬ್ಯಾಂಕಿನಲ್ಲಿ ಜಗತ್ತಿನ ಯಾವ ಯಾವ ದೇಶದ ಕಪ್ಪು ಧನಿಕರು ಎಷ್ಟೆಷ್ಡು ಹಣ ಇಟ್ಟಿದ್ದಾರೆ ಎಂಬ ಪಟ್ಟಿಯನ್ನು ತರಿಸಿಕೊಂಡಿತು. `ನಮ್ಮ ಬಳಿ ಇಂತಹ ಪಟ್ಟಿ ಇದೆ. ಅದರಲ್ಲಿ ನಿಮ್ಮ ದೇಶದ ಖಾತೆದಾರರ ಬಗ್ಗೆಯೂ ಮಾಹಿತಿ ಇದೆ. ನೀವು ಅಧಿಕೃತವಾಗಿ ಕೇಳಿದರೆ ನಿಮಗೆ ಈ ಮಾಹಿತಿ ನೀಡುತ್ತೇವೆ' ಎಂದು ಜರ್ಮನ್ ಸಕರ್ಾರ ಅನೇಕ ದೇಶಗಳ ಸಕರ್ಾರಕ್ಕೆ ಸಂದೇಶ ಕಳುಹಿಸಿತು. ಭಾರತಕ್ಕೂ ಸಂದೇಶ ಬಂತು. ಅಮೆರಿಕ, ಬ್ರಿಟನ್, ಕೆನಡಾ, ಇಟಲಿ, ಸ್ವೀಡನ್, ನಾವರ್ೆ, ಫಿನ್ಲ್ಯಾಂಡ್, ಐರ್ಲ್ಯಾಂಡ್ ಮೊದಲಾದ ದೇಶಗಳು ಜರ್ಮನ್ ಸಂದೇಶಕ್ಕೆ ಪ್ರತಿಕ್ರಿಯಿಸಿದವು. ಮಾಹಿತಿ ಕೇಳಿ ತಮ್ಮ ದೇಶದ ಕಪ್ಪು ಶ್ರೀಮಂತರ ಹಣಕಾಸು ವ್ಯವಹಾರ ಕುರಿತ ಮಾಹಿತಿ ತರಿಸಿಕೊಂಡವು.

ಭಾರತ ಏನು ಮಾಡಿತು ಎಂಬ ಕಥೆ ಹೇಳುವ ಅಗತ್ಯವಿದೆಯೆ? `ಖಂಡಿತವಾಗಿಯೂ ಇದೆ, ಮುಂದೇನಾಯಿತು ಎಂದು ಊಹಿಸುವುದು ನಮ್ಮಿಂದ ಸಾಧ್ಯವಿಲ'್ಲ ಎನ್ನುವಿರಾದರೆ, ಕೇಳಿ. ಜರ್ಮನ್ ಸಕರ್ಾರಕ್ಕೆ ಯಾವ ಉತ್ತರವನ್ನೂ ಬರೆಯುವ ಗೋಜಿಗೆ ಭಾರತ ಹೋಗಿಲ್ಲ. ನಮ್ಮ ಅರ್ಥಶಾಸ್ರ್ತಜ್ಞ ಪ್ರಧಾನಿ ಬಹಳ ಬ್ಯುಸಿಯಾಗಿದ್ದಾರೆ (ಯಾವುದರಲ್ಲಿ ಎಂಬುದು ಮಾತ್ರ ಗೊತ್ತಿಲ್ಲ). ಅವರಿಗೆ ಇದಕ್ಕೆಲ್ಲ ಉತ್ತರ ಕೊಡುವಷ್ಟು ಪುರಸೊತ್ತಿಲ್ಲ. ಒಂದಿಷ್ಟು ಪುಸ್ತಕಗಳನ್ನು ಓದಲೂ ಪುರಸೊತ್ತಿಲ್ಲವಂತೆ. ಆದರೆ ಅವರ ಕಚೇರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಜನಪಥದ ಹತ್ತನೇ ನಂಬರ್ ಮನೆಯನ್ನು ಕಾಯುತ್ತಿದ್ದಾರೆಯೆ?

ಈ ಹಣದ ಬಹುಪಾಲು ನಮ್ಮ ರಾಜಕಾರಣಿಗಳದು ಮತ್ತು ಅವರ ಗೆಳೆಯರದು ಎಂಬ ಸಂಶಯ ಮೂಡುವುದಿಲ್ಲವೆ? ಸ್ವಿಡ್ಜರ್ಲ್ಯಾಂಡ್, ಸೇಂ. ಕಿಟ್ಸ್, ಕ್ಯಾನರಿ ಐಲ್ಯಾಂಡ್ಸ್, ಆಂಟಿಗುವಾ, ಬಹಾಮಾಸ್, ಲೀಚ್ಟೆನ್ಸ್ಟೈನ್ - ಇವೆಲ್ಲ ನಮ್ಮ ಕಪ್ಪು ಶ್ರೀಮಂತರು ಆಗಾಗ್ಗೆ ರಜೆ ಕಳೆಯುವ ಸ್ವರ್ಗಗಳು. ಅಷ್ಟು ಮಾತ್ರವಲ್ಲ ಅವರ ಕಪ್ಪು ನಿಧಿಯನ್ನು ಕಾಯುತ್ತಿರುವ ಕುಪ್ರಸಿದ್ಧ ಬ್ಯಾಂಕಿಂಗ್ ತಾಣಗಳು. ಡ್ರಗ್ಸ್, ಟೆರರಿಸಂ, ಬ್ಲ್ಯಾಕ್ ಬಿಸಿನೆಸ್ -ಇವುಗಳಿಗೆಲ್ಲ ಹಣದ ಹೊಳೆ ಹರಿಯುವುದು ಇಲ್ಲಿನ ಬ್ಯಾಂಕ್ ಖಾತೆಗಳಿಂದಲೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ