ಮಂಗಳವಾರ, ಮಾರ್ಚ್ 31, 2009

ಕನ್ನಡಕ್ಕೆ ಯುವ ಸಾಹಿತಿಗಳ ಬರ!

ಭಾರತೀಯ ಭಾಷೆಗಳಿಗೆ ಯುವ ಸಾಹಿತಿಗಳ ಬರ ಬಂದಿದೆ! ಇದನ್ನು ಓದಿ:

ಕಿರಣ್ ದೇಸಾಯಿ. 37 ವರ್ಷ. ಕಾದಂಬರಿಗಾತರ್ಿ. ಬ್ರಿಟನ್ನಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ವಿಜೇತೆ! ಅರವಿಂದ್ ಅಡಿಗ. 35 ವರ್ಷ, ಅವನ ಮೊದಲ ಕಾದಂಬರಿಗೇ ಮ್ಯಾನ್ ಬುಕರ್! ಝುಂಫಾ ಲಾಹಿರಿ. 36 ವರ್ಷ. ಕಾದಂಬರಿ ಹಾಗೂ ಕಥೆಗಾತರ್ಿ. ಅಮೆರಿಕದ ಪ್ರತಿಷ್ಠಿತ ಪುಲಿಟ್ಜರ್ ಬಹುಮಾನ ವಿಜೇತೆ! ಅಶೊಕ್ ಬ್ಯಾಂಕರ್. 40 ವರ್ಷ. ಹಲವು ಕಾದಂಬರಿಗಳ ಜೊತೆಗೆ ಇಂಗ್ಲಿಷ್ನಲ್ಲಿ ರಾಮಾಯಣ ಸರಣಿ ಪುಸ್ತಕಗಳನ್ನು ಬರೆಯಲು ಮಿಲಿಯನ್ ಡಾಲರ್ ಆಫರ್!! ಚೇತನ್ ಭಗತ್. 34 ವರ್ಷ. ಅವನ ಮೂರು ಕಾದಂಬರಿಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಅಗ್ರಸ್ಥಾನ. ಇವರೆಲ್ಲ ಇಂಗ್ಲಿಷಿನಲ್ಲಿ ಬರೆಯುತ್ತಿರುವ ಸಮಕಾಲೀನ ಪ್ರತಿಭಾವಂತ ಭಾರತೀಯರು, ಭಾರತೀಯ ಮೂಲದವರು.

ಭಾರತೀಯ ಭಾಷೆಗಳ ಸಾಹಿತ್ಯದ ಗತಿ ಏನಾಗಿದೆ? ಕನ್ನಡದ ಸಂದರ್ಭದಲ್ಲಿ ದೃಷ್ಟಿ ಹರಿಸುವುದು ನನಗೆ ಹೆಚ್ಚು ಸುಲಭ. ಕನ್ನಡದ ಶ್ರೇಷ್ಠ ಕಾದಂಬರಿಕಾರನ್ನು ಹೆಸರಿಸಿ? ಎಂದರೆ ತಕ್ಷಣ ಕಾರಂತರು, ಭೈರಪ್ಪ ಇತ್ಯಾದಿ ನಾಲ್ಕಾರು ಹೆಸರು ತಕ್ಷಣ ಎಲ್ಲರ ನಾಲಿಗೆಯಲ್ಲಿ ನಲಿಯುತ್ತದೆ. ಕವಿಗಳ ಬಗ್ಗೆ ಕೇಳಿದರೆ ಬೇಂದ್ರೆ, ಕುವೆಂಪು, ಅಡಿಗರು, ನರಸಿಂಹ ಸ್ವಾಮಿ, ಹೀಗೆ ಕೆಲವು ಹೆಸರು ಹೇಳಬಹುದು. ಸಮಕಾಲೀನ ಹಾಗೂ `ಯುವ' ಶುದ್ಧ ಸಾಹಿತಿಗಳ ಬಗ್ಗೆ ಕೇಳಿದರೆ?

ಹೌದು, ನಮ್ಮಲ್ಲಿ ಶ್ರೇಷ್ಠತೆ ಹಾಗೂ ಶುದ್ಧತೆಯ ಭರವಸೆ ಮೂಡಿಸುವ ಯುವ ಸಾಹಿತಿಗಳು ಇದ್ದಾರೆಯೆ? ಇದ್ದರೆ ದಯವಿಟ್ಟು ತಿಳಿಸಿ. ನನಗಂತೂ ಅಂತಹ ಯಾರ ಬಗ್ಗೆಯೂ ಗೊತ್ತಿಲ್ಲ. ಸಾಹಿತ್ಯದ ಶ್ರೇಷ್ಠತೆಯ ಬಗ್ಗೆ ವಿಮಶರ್ೆ ಪಕ್ಕಕಿಡೋಣ. ಈವರೆಗೆ ಹೆಸರು ಮಾಡಿರುವ (ಹೇಗಾದರೂ ಸರಿ!) ಕನ್ನಡ ಸಾಹಿತಿಗಳಿಗೆಲ್ಲ ವಯಸ್ಸಾಗಿದೆ. ಕನಿಷ್ಠವೆಂದರೂ 55 ದಾಟಿದೆ. ಜನರು ಕೊಂಡು ಓದಲು ಹಾತೊರೆಯುವ ಸಾಹಿತಿಗಳಿಗಂತೂ ಬರವಿದ್ದೇ ಇದೆ. ಜೊತೆಗೆ ಈಗಂತೂ ಭರವಸೆ ಉಕ್ಕಿಸುವ ಯುವ ಸಾಹಿತಿಗಳ ಬರ ಕನ್ನಡವನ್ನು ಕಾಡುತ್ತಿದೆ!

``ಏಕೆ ಹೀಗಾಯಿತು? ನಿಮಗೇನನಿಸುತ್ತದೆ'' ಎಂದು ಈಚೆಗೆ ನಾನೊಬ್ಬ ಕನ್ನಡ ಸಾಹಿತಿಗಳನ್ನು ಕೇಳಿದೆ. ``ವಿವಿಧ ರಾಜಕೀಯ (ಅಂದರೆ ಸಾಹಿತ್ಯದ ಮೂಲಕ ರಾಜಕೀಯ ಸಿದ್ಧಾಂತ ಮುನ್ನಡೆಸುವ) ಚಳವಳಿಗಳು ಜನರನ್ನು ತಪ್ಪುದಾರಿಗೆ ಎಳೆದಿವೆ. ವಾಸ್ತವ ರಾಜಕೀಯದ ಪ್ರಭಾವವೇ ಜಾಸ್ತಿಯಾಗಿ ಸೃಜನಶಕ್ತಿ ನಶಿಶಿದೆ. ಇದು ಸರಿಯಾಗಬೇಕಾದರೆ ಇನ್ನೂ ಕನಿಷ್ಠ 30 ವರ್ಷಗಳಾದರೂ ಬೇಕು. ಆಗ ಹೊಸ ಪ್ರತಿಭಾವಂತ, ಸ್ವತಂತ್ರ ಮನೋಭಾವದ ಕನ್ನಡಿಗ ಪೀಳಿಗೆ ಉದಿಸುತ್ತದೆ'' ಎಂದರು.

ಈ ಮಾತು ಎಷ್ಟು ನಿಜ! ನವ್ಯ, ನವ್ಯೋತ್ತರ, ಮಾಕ್ಸರ್್ವಾದಿ, ಬಂಡಾಯ, ದಲಿತ ಎಂದು ಜಾತಿ-ಮತ-ಸಿದ್ದಾಂತಗಳ ಹೆಸರಿನಲ್ಲಿ ಸಾಹಿತ್ಯ ಚಳವಳಿ ಮಾಡುತ್ತೇವೆಂದು ಹೊರಟವರು ಒಂದು ಇಡೀ ಪೀಳಿಗೆಯನ್ನೇ ದಾರಿತಪ್ಪಿಸಿದ್ದಾರೆ. ಒಂದು ಪೀಳಿಗೆಯ ಸೃಜನಶಕ್ತಿಯನ್ನೇ ನಾಶಮಾಡಿದ್ದಾರೆ. ತಾವೂ ಶ್ರೇಷ್ಠ ಸಾಧನೆ ಮಾಡದೇ ಇತರರನ್ನೂ ಹಾಳುಮಾಡಿದ್ದಾರೆ. ಡಿವಿಜಿ, ಬೇಂದ್ರೆ, ಕುವೆಂಪು, ಕಾರಂತ, ಮಾಸ್ತಿ, ಭೈರಪ್ಪ, ಅಡಿಗ ಹೀಗೆ ಅನೇಕರು ತಮ್ಮ ಮೂವತ್ತರ ಹರೆಯದಲ್ಲೇ ಭರವಸೆ ಹುಟ್ಟಿಸಿದ್ದರು. ಮುಂದೆ ಸಾಹಿತ್ಯ ಲೋಕ ಸಮೃದ್ಧವಾಗುತ್ತದೆ ಎನಿಸುವಂತೆ ಮಾಡಿದ್ದರು. ಹಳಬರಷ್ಟೇ ಅಥವಾ ಹಳಬರಿಗಿಂತ `ಮೌಲಿಕ' ಎನಿಸುವಂತೆ ಬರೆಯತೊಡಗಿದ್ದರು. ಈಗ ಭವಿಷ್ಯದ ಕಾರಂತ, ಅಡಿಗ, ಬೇಂದ್ರೆ, ಭೈರಪ್ಪ ಎಲ್ಲಿ? ಶುದ್ಧ ಸಾಹಿತ್ಯ ಎಲ್ಲಿ ಹೋಯಿತು?

ಈ ಸಮಸ್ಯೆಗೆ ನಮ್ಮ ರಾಜಕಾರಣಿಗಳೂ ಕಾರಣ. ಜಾಗತೀಕರಣ, ಉದ್ಯೋಗಾವಕಾಶಗಳು ಇಂಗ್ಲಿಷ್ ಅನ್ನು ಆಕರ್ಷಕ ಹಾಗೂ ಅನಿವಾರ್ಯವಾಗಿಸಿದವು ಎಂದು ನಾನಾ ಕಾರಣಗಳನ್ನು ಕೊಡಬಹುದು. ಆದರೆ ಕನ್ನಡ ತನ್ನ ಆಕರ್ಷಣೆ ಕಳೆದುಕೊಳ್ಳಬೇಕೆಂದೇನೂ ಇಲ್ಲ. ಹಾಗೆ ನೋಡಿದರೆ, ಮೇಲೆ ಹೆಸರಿಸಿದ ಕನ್ನಡ ಸಾಹಿತಿಗಳು ಇಂಗ್ಲಿಷ್ನಲ್ಲೇ ಶಿಕ್ಷಣ ಪಡೆದವರು. ಅದೂ ಬ್ರಿಟಿಷರ ಕಾಲದಲ್ಲಿ. ಆದರೆ ಅವರಿಗೆಲ್ಲ ಅತ್ಯುತ್ತಮ, ಸಂಸ್ಕಾರವಂತ, ಸುಸಂಸ್ಕೃತ ಕನ್ನಡ ಶಿಕ್ಷಕರ, ಶಿಕ್ಷಣದ ಭಾಗ್ಯ ಲಭಿಸಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಯಾವಾಗ ರಾಜಕೀಯದ ಪ್ರವೇಶವಾಯಿತೋ ಆಗಲೇ ಸಮಸ್ಯೆಗಳು ಆರಂಭವಾದವು.

ಶಿಕ್ಷಕರ ಆಯ್ಕೆಯಲ್ಲಿ ಜಾತೀಯತೆ, ವಿದ್ಯಾಥರ್ಿ ವೇತನದಲ್ಲಿ ಜಾತಿಯತೆ, ಯೋಗ್ಯತೆಗೆ ಯಾವ ಬೆಲೆಯೂ ಇಲ್ಲ. ಹಿಂದೆ ತಮ್ಮ ಮನೆಯಲ್ಲಿ ಊಟಹಾಕಿಸಿ ವಿದ್ಯಾಥರ್ಿಗಳನ್ನು ಓದಿಸುವ ಸಕರ್ಾರಿ ಮೇಷ್ಟ್ರುಗಳಿದ್ದರು. ಈಗ ಶಾಲೆಯಲ್ಲಿ, ಪಠ್ಯಕ್ರಮದಲ್ಲಿ ಅನೇಕ ರಾಜಕೀಯ ಹೊಳಹುಗಳು. ಕನ್ನಡ ಬೋಧನೆಯಲ್ಲಿ (ಹಾಗೆಂದರೇನು? ಎನ್ನುವಂತಾಗಿದೆೆ) ನಿರಾಸಕ್ತಿ. ಬೋಧಕರಿಗೇ ಕನ್ನಡದ ಶುದ್ಧ ಉಚ್ಛಾರಣೆ ಬರದ ಸ್ಥಿತಿ.

ಒಂದು ಸ್ವತಂತ್ರ ಸಮೀಕ್ಷೆ ಪ್ರಕಾರ ಇಂದು ಭಾರತದ ಬಹುತೇಕ ಗ್ರಾಮಗಳಲ್ಲಿ ಸಕರ್ಾರೀ ಶಾಲಾ ಶಿಕ್ಷಕರೇ ರಾಜಕೀಯ ಪಕ್ಷಗಳ ಸ್ಥಳೀಯ ಏಜೆಂಟರು! ಪಕ್ಷಗಳ ಸಕ್ರಿಯ ಕಾರ್ಯಕರ್ತರಿಗೆ ಬೇಕೆಂದೇ ಶಿಕ್ಷಕ ಹುದ್ದೆ ದಯಪಾಲಿಸಲಾಗಿದೆ ಎಂದಿದೆ ಸಮೀಕ್ಷೆ. ಹೀಗಿರುವಾಗ ತಮ್ಮ ಮಕ್ಕಳಿಗೆ ತಕ್ಕ ಮಟ್ಟಿಗೆ ಬುದ್ದಿ, ಪ್ರತಿಭೆಗಳಿವೆ ಎಂದುಕೊಂಡ ಯಾರೇ ಆಗಲೀ (ನಮ್ಮ ರಾಜಕಾರಣಿಗಳೂ ಸಹ!) ಅವರನ್ನು ಇಂತಹ ಶಾಲೆಗಳಿಗೆ ಕಳಿಸುವುದಿಲ್ಲ.

ಮಕ್ಕಳ ಕೈಲಿ `ಅಲಿಸ್ ಇನ್ ದಿ ವಂಡರ್ಲ್ಯಾಂಡ್' ಅಥವಾ `ಹ್ಯಾರಿ ಪಾಟರ್..' ಓದಿಸುವ ಅನೇಕ `ಎಲೀಟ್' ಬಿರುದಾಂಕಿತ ಶಾಲೆಗಳಿವೆ. ಈ ಶಾಲೆಗಳ ಪುಟ್ಟ ಮಕ್ಕಳೂ `ಫೇರಿ ಟೇಲ್ಸ್' ಓದುತ್ತವೆ. ಅಮೆರಿಕದಲ್ಲಿ ಹಾಗೂ ಅನೇಕ ಐರೋಪ್ಯ ದೇಶದಲ್ಲಿ ಶಾಲಾ ಶಿಕ್ಷಣದಲ್ಲಿ ಶುದ್ಧ ಸಾಹಿತ್ಯ ಅಧ್ಯಯನ ವಿಜ್ಞಾನ ವಿದ್ಯಾಥರ್ಿಗಳಿಗೂ ಕಡ್ಡಾಯ. ನಮ್ಮ ಕನ್ನಡ ಶಾಲೆಗಳಲ್ಲಿ ಮೊದಲಿಗೆ ಗ್ರಂಥ ಭಂಡಾರವಿಲ್ಲ. ಇದ್ದರೂ ಪುಸ್ತಕಗಳನ್ನು ಕಪಾಟಿನಿಂದ ಹೊರತೆಗೆಯುವುದೇ ಇಲ್ಲ! ಮಕ್ಕಳಿಗೆ ಕೊಟ್ಟು ಓದಿಸುವ ಮತು ಹಾಗಿರಲಿ, ಶಿಕ್ಷಕರೇ ಓದಿರುವುದಿಲ್ಲ (ಅತಿ ಕಡಿಮೆ ಸಂಖ್ಯೆಯಲ್ಲಿರುವ ಕೆಲವರನ್ನು ಹೊರತುಪಡಿಸಿ). ಮಕ್ಕಳ ಅಡಿಪಾಯವೇ ಭದ್ರವಿಲ್ಲ. ಕನ್ನಡ ಶಾಲೆಗಳಲ್ಲಿ ತಯಾರಾದವರಿಗೆ ಸರಿಯಾಗಿ ಕನ್ನಡ ಬರದ ಸ್ಥಿತಿ ನಿಮರ್ಾಣವಾಗಿದೆ. ಅವರಿಗೆ ಇಂಗ್ಲಿಷೂ ಬರುವುದಿಲ್ಲ. ಅದನ್ನು ಆಡುವವರ ಎದುರು ಹಿಂಜರಿಕೆ, ಕೀಳರಿಮೆ. ಇಂಗ್ಲಿಷ್ ಶಾಲಗಳಲ್ಲಿ ಭಾರತೀಯ ಭಾಷಾ ಕಲಿಕೆ ಸಮರ್ಪಕವಾಗಿಲ್ಲ.

ಇವೆಲ್ಲದರ ಜೊತೆಗೆ ರಾಜಕೀಯ ಸಾಹಿತಿಗಳ ಕಾಟ. ಅವರಿಂದ ಸಾಹಿತ್ಯಕ್ಕೊಂದು ವ್ಯಾಖ್ಯೆ, ನಿದರ್ೇಶನ, ಚೌಕಟ್ಟುಗಳು ಪ್ರಾಪ್ತವಾಗಿವೆ. ಪ್ರತಿಭಾವಂತ ಯುವಜನರಿಗೆ ಈಗ ಕನ್ನಡದಲ್ಲಿ ಶುದ್ಧಸಾಹಿತ್ಯ ಸೃಷ್ಟಿಸಲು ಭಯ! ಯಾವುದಾದರೊಂದು ರಾಜಕೀಯ ಸಿದ್ಧಾಂತದ ಉದ್ದೇಶವಿಲ್ಲದಿದ್ದರೆ ಅದು ಸಾಹಿತ್ಯವೇ ಅಲ್ಲ ಎಂದು ಈ ರಾಜಕೀಯ ಸಾಹಿತಿಗಳು ಭಾವನೆ ಸೃಷ್ಟಿಸಿಬಿಟ್ಟಿದ್ದಾರೆ. ಕಟು ವಿಮಶರ್ೆ ಹಾಗೂ ಗುಂಪುಗಾರಿಕೆ ಮೂಲಕ ಜನರ ಉತ್ಸಾಹ ಮತ್ತು ಸೃಜನ ಶಕ್ತಿಯನ್ನೇ ನಾಶಮಾಡಿದ್ದಾರೆ. ಭಾವನೆಗಳು ಬರಡಾದಾಗ ಅಥವಾ ಗೊಂದಲ ಕಾಡಿದಾಗ, ಭಾಷೆಯ ಹದ, ತಳಪಾಯ ಗಟ್ಟಿಗೊಳ್ಳದಿದ್ದಾಗ ಸಾಹಿತ್ಯ ಎಲ್ಲಿ ಹುಟ್ಟುತ್ತದೆ? ಸಂಶೋಧನೆ, ಅಧ್ಯಯನ, ಪ್ರವಾಸ, ಹಾಗೂ ಸಾಹಿತ್ಯಿಕ ಚಿಂತನೆ ಮತ್ತು ಸ್ಫೂತರ್ಿ ಎಲ್ಲಿರುತ್ತದೆ?

ಏನಂತೀರಿ?


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ