ಸೋಮವಾರ, ಮೇ 04, 2009

ಬಿಜೆಪಿ ಕಟ್ಟರ್ವಾದಿ ಇಮೇಜಿನ ಪುಕ್ಕಲು ಪಕ್ಷವೆ?

`ನಾವು ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕುಗಳಲ್ಲಿ ಹಾಗೂ ಇತರ ಟ್ಯಾಕ್ಸ್ ಹೆವೆನ್ಗಳಲ್ಲಿ ಭಾರತಿಯರು ಇಟ್ಟಿರುವ 70 ಲಕ್ಷಕೋಟಿ ರೂಪಾಯಿ ಕಪ್ಪುಹಣವನ್ನು ದೇಶಕ್ಕೆ ವಾಪಸ್ಸು ತರಲು ಯತ್ನಿಸುತ್ತೇವೆ' ಎಂದು ಲಾಲ್ ಕೃಷ್ಣ ಆಡ್ವಾಣಿ ಹೇಳುತ್ತಿರುವುದು ಸ್ವಾಗತಾರ್ಹ.

2005ರಲ್ಲಿ ರೇಮಂಡ್ ಡಬ್ಲ್ಯೂ ಬೇಕರ್ ತನಿಖೆ ಮಾಡಿ ಬರೆದ `ಕ್ಯಾಪಿಟಲಿಸಮ್ಸ್ ಅಚಿಲಸ್ ಹೀಲ್' ಪುಸ್ತಕ ಜಗತ್ತಿನ ಕಳ್ಳಹಣದ ಬಗ್ಗೆ ಬೆಳಕು ಚೆಲ್ಲಿತ್ತು. ಜಗತ್ತಿನ ರಾಜಕಾರಣಿಗಳು, ಸವರ್ಾಧಿಕಾರಿಗಳು, ಡ್ರಗ್ ಡೀಲರ್ಗಳು, ಕಳ್ಳಸಾಗಣಿಕೆದಾರರು, ಭಯೋತ್ಪಾದಕರು, ವ್ಯಾಪಾರಿಗಳು, ಉದ್ಯಮಿಗಳು ಜಗತ್ತಿನಾದ್ಯಂತ 70ಕ್ಕೂ ಹೆಚ್ಚು ಕಡೆಗಳಲ್ಲಿ ಹರಡಿರುವ ಟ್ಯಾಕ್ಸ್ ಹೆವೆನ್ಗಳಲ್ಲಿ ಈವರೆಗೆ ಇಟ್ಟಿರುವ ಹಣ ಸುಮಾರು 13-15 ಟ್ರಿಲಿಯನ್ ಡಾಲರ್! ಇದರಲ್ಲಿ ಭಾರತೀಯರ ಪಾಲು 1.4 ಟ್ರಿಲಿಯನ್ ಡಾಲರ್. 2006ರಲ್ಲಿ ಸ್ವಿಸ್ಬ್ಯಾಂಕಿಂಗ್ ಅಸೋಸಿಯೇಷನ್ ಈ ಅಂಕಿಅಂಶಗಳ ಸತ್ಯಾಸತ್ಯತೆಯನ್ನು ದೃಢಪಡಿಸಿದೆ. ಈ ಕುರಿತು ಒಂದು ವರ್ಷದ ಹಿಂದೆ ನನ್ನ ಕರ್ಮವೀರದ `ಲೌಕಿಕ' ಅಂಕಣದಲ್ಲಿ ವಿವರವಾಗಿ ಬರೆದಿದ್ದೆ.

ಈಗ ಈ ವಿಷಯವನ್ನು ಜಗತ್ತಿನ ಬಲಾಢ್ಯ ದೇಶಗಳ ಸಕರ್ಾರಗಳು ಗಂಭೀರವಾಗಿ ಪರಿಗಣಿಸಿವೆ. ಈಚೆಗೆ ನಡೆದ ಜಿ-20 ಶೃಂಗಸಭೆಯಲ್ಲಿ ಇದೇ ಪ್ರಮುಖ ವಿಷಯವಾಗಿತ್ತು. ಜಾಗತಿಕ ಆಥರ್ಿಕ ಹಿನ್ನಡೆ ಹಾಗೂ ಹೆಚ್ಚುತ್ತಿರುವ ಭಯೋತ್ಪಾದನೆಯನ್ನು ತಡೆಯಲು ಕಳ್ಳಹಣದ ಹುಚ್ಚುಹೊಳೆಯನ್ನು ತಡೆಯಲೇಬೇಕು ಎಂಬುದು ತಡವಾಗಿಯಾದರೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಆಗಿದೆ. ಜಿ-20 ದೇಶಗಳ ಗುಂಪಿನಲ್ಲಿ ಈಗ ಬರೀ ಇದರದೇ ಮಾತು. ಈ ವಿಷಯದಲ್ಲಿ ಆಸಕ್ತಿ ತೋರದ, ವಾಸ್ತವವಾಗಿ ಭಯಬೀತವಾಗಿರುವ ಒಂದೇ ಒಂದು ಸಕರ್ಾರವೆಂದರೆ ನಮ್ಮ ಕಾಂಗ್ರೆಸ್ ನೇತೃತ್ವದ ಸಕರ್ಾರ! ಟ್ಯಾಕ್ಸ್ ಹೆವೆನ್ಗಳಲ್ಲಿ ಅತಿ ಹೆಚ್ಚು ಹಣವಿಟ್ಟಿರುವವರು ಭಾರತೀಯರು; ಇದರಲ್ಲಿ ನಮ್ಮ ದೇಶದ ಪ್ರಮುಖ ರಾಜಕೀಯ ಕುಟುಂಬದ ಹಣವೂ ಬಹಳ ಇದೆ; ಆದ್ದರಿಂದಲೇ ನಮ್ಮ ಸಕರ್ಾರ ಈ ವಿಷಯದಲ್ಲಿ ಭೀತವಾಗಿದೆ ಎಂಬ ಮಾತಿದೆ. ಈ ಕುರಿತು ತನಿಖೆಯಾಗಬೇಕು.

ಆದರೆ ಇದು ಕಾರ್ಯಸಾಧ್ಯವೇ ಎಂಬ ಅನುಮಾನ ಮೂಡದೇ ಇರದು. ಬಿಜೆಪಿ ಸಕರ್ಾರ ಇಂತಹ ತನಿಖೆಯನ್ನು ಮಾಡಬಲ್ಲುದೇ ಎಂಬುದೇ ಈಗಿನ ಪ್ರಶ್ನೆ. ಈ ಪಕ್ಷ ಈವರೆಗೆ ದೊಡ್ಡ ದೊಡ್ಡ ಮಾತುಗಳನ್ನು ಆಡಿದೆಯೇ ಹೊರತು ಯಾವುದನ್ನೂ ಕಾರ್ಯಗತವಾಗಿ ಮಾಡಿ ತೋರಿಸಿಲ್ಲ. 1992ರಲ್ಲಿ ಪ್ರಕಟವಾದ ಸೋವಿಯತ್ ರಷ್ಯಾದ ರಹಸ್ಯ ದಾಖಲೆಗಳ ಸಂಗ್ರಹ `ಮಿತ್ರೋಕಿನ್ ಆಕ್ವರ್ೈಸ್ಸ್' ಕೆಜಿಬಿ ಗೂಢಚಾರ ಏಜೆನ್ಸಿಯಿಂದ ಹಣ ಪಡೆದವರ ಕುರಿತು ಅನೇಕ ಮಾಹಿತಿ ನೀಡಿತ್ತು. ಅದರಲ್ಲಿ ನಮ್ಮ ದೇಶದ ದೊಡ್ಡ ಕುಟುಂಬದ ವಿಷಯವೂ ಇತ್ತು. ಆದರೆ 6 ವರ್ಷ ದೇಶ ಆಳಿದ ಎನ್ಡಿಎ ಸಕರ್ಾರ ಈ ಕುರಿತು ತನಿಖೆ ಮಾಡಿತೆ?

ಆಡ್ವಾಣಿ ವೈಯಕ್ತಿಕವಾಗಿ ಹಾಡರ್್ಲೈನರ್ ಎನಿಸಿಕೊಂಡವರು. ಆದರೆ ಬರೀ ಹಾಗೆ ಅನಿಸಿಕೊಂಡವರು ಮಾತ್ರ. ಅಂತರಂಗದಲ್ಲಿ ಅವರು ಒಂದು ರೀತಿಯ ಮೃದು ವ್ಯಕ್ತಿ ಎಂದು ಬಲ್ಲವರು ಹೇಳುತ್ತಾರೆ. ಇಂತಹ ವ್ಯಕ್ತಿಗಳು ಸಂದರ್ಭ ಬಂದಾಗ ಎಷ್ಟರ ಮಟ್ಟಿಗೆ ಕಠಿಣ ನಿಧರ್ಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದೇ ಅನುಮಾನಾಸ್ಪದ. ಆದರೆ ಮನಮೋಹನ್ ಸಿಂಗ್ ಅಂತಹವರಿಗೆ ಹೋಲಿಸಿದರೆ ಆಡ್ವಾಣಿ ಉತ್ತಮ ನಾಯಕ, ಸ್ವತಂತ್ರ ಚಿಂತಕ ಎಂದೇ ಹೇಳಬೇಕು.

ಕನ್ನಡದಲ್ಲಿ ಒಂದು ಗಾದೆ ಮಾತಿದೆ. `ಬೊಗಳುವ ನಾಯಿ ಕಚ್ಚುವುದಿಲ್ಲ. ಕಚ್ಚುವ ನಾಯಿ ಬೊಗಳುವುದಿಲ್ಲ'. ಈ ಮಾತು ಕಟ್ಟರ್ವಾದಿಗಳಿಗೆ ಅನ್ವಯವಾಗುವಷ್ಟು ಇನ್ಯಾರಿಗೂ ಆಗದು. ಮೊದಲಿನಿಂದಲೂ ಆರ್ಭಟಿಸಿಕೊಂಡೇ ಬರುವ ಅನೇಕರು ಅಧಿಕಾರ ಸಿಕ್ಕ ತಕ್ಷಣ ತಣ್ಣಗಾದ ಬಹಳ ಉದಾಹರಣೆಗಳನ್ನು ಇತಿಹಾಸದಲ್ಲಿ ನೋಡುತ್ತೇವೆ. ಸೌಮ್ಯವಾಗಿ ತೋರಿಸಿಕೊಳ್ಳುವವರು ಅಂತರಂಗದಲ್ಲಿ ಬಹಳ ಕ್ರೂರ ಹಾಗೂ ಕಠಿಣರಾಗಿರುವುದೂ ಉಂಟು.

`ಸೌಮ್ಯ' ಇಮೇಜ್ ಬೆಳೆಸಿಕೊಂಡಿರುವ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಹೇಗೆ? ಸೀತಾರಾಮ ಕೇಸರಿಯನ್ನು ಶೌಚಾಲಯದಲ್ಲಿ ಕೂಡಿಹಾಕಿಸಿ ಅಧ್ಯಕ್ಷ ಪೀಠ ಅಲಂಕರಿಸಿದರು ಎಂಬ ಆರೋಪ ಅವರ ಮೇಲಿದೆ. ಆಡ್ವಾಣಿ ಹೀಗೆಲ್ಲ ಎಂದೂ ಮಾಡಲಾರರು!

ಸ್ವಾದ್ವಿ ಪ್ರಜ್ಞಾ ವಿರುದ್ಧ ಯಾವ ಆರೋಪವೂ ನ್ಯಾಯಾಲಯದಲ್ಲಿ ರುಜುವಾತಾಗಿಲ್ಲ. ಆದರೆ ಅವರನ್ನು ಕಾರಾಗೃಹದಲ್ಲಿ ಭೇಟಿ ಮಾಡುವ ದೈರ್ಯ ಬಿಜೆಪಿ ನಾಯಕರಿಗೆ ಇದೆಯೆ? ಅದೇ ಸೋನಿಯಾ ಗಾಂಧಿ ಎಲ್ಟಿಟಿಇಯ ನಳಿನಿಯ ಪರವಾಗಿ ವಕಾಲತ್ತು ವಹಿಸಿ ದಕ್ಕಿಸಿಕೊಂಡರು. ಪ್ರಿಯಾಂಕ ಗಾಂಧಿ ನಳಿನಿಯನ್ನು ಭೇಟಿ ಮಾಡಿ ತಬ್ಬಿಕೊಂಡು ಕೂತಿದ್ದು ಯಾವ ವಿವಾದಕ್ಕೂ ಗುರಿಯಾಗದೇ ಜೀಣರ್ಿಸಿಕೊಂಡರು. ಸೋನಿಯಾ-ಮನಮೋಹನ್ ಸಕರ್ಾರ `ಶ್ರೀರಾಮ ಐತಿಹಾಸಿಕ ಪುರುಷನೇ ಅಲ್ಲ, ರಾಮಾಯಣ ಎಂದೂ ನಡೆದೇ ಇಲ್ಲ' ಎಂದು ಹೇಳುವ ದೈರ್ಯ ಹಾಗೂ ದಾಷ್ಟ್ರ್ಯ ತೋರಿದ್ದಲ್ಲದೇ ಅದನ್ನು ಜೀಣರ್ಿಸಿಕೊಂಡಿತು. ಒಳ್ಳೆಯ ಉದ್ದೇಶದಿಂದಲೇ ಐಐಟಿ, ಐಐಎಂಗಳ ಫೀಸು ಕಡಿಮೆ ಮಾಡಲು ಹೋದ ಮುರಳಿ ಮನೋಹರ ಜೋಷಿ ತೀವ್ರ ವಿವಾದಕ್ಕೆ ಗುರಿಯಾದರು. ಈ ಸಂಸ್ಥೆಗಳ ಸ್ವಾಯತ್ತತೆಯನ್ನು ಹಾಳು ಮಾಡುತ್ತಿದ್ದಾರೆ ಎಂಬ ಸರ್ವತ್ರ ಟೀಕೆಗೆ ಗುರಿಯಗಿ ಕಡೆಗೆ ಹಿಂಜರಿದರು. ಆದರೆ ಅಜರ್ುನ್ ಸಿಂಗ್ ಈ ಸಂಸ್ಥೆಗಳ ಸ್ವಾಯತ್ತತೆಯನ್ನು ಮಾತ್ರವೇ ಅಲ್ಲ, ಬುನಾದಿಯನ್ನೇ ಅಲ್ಲಾಡಿಸಿಬಿಟ್ಟರು. ಜಾತಿ ವಿಷಬೀಜ ಬಿತ್ತಿ ಈ ಸಂಸ್ಥೆಗಳ ಮೂಲ ಉದ್ದೇಶ ಹಾಗೂ ಸ್ವರೂಪಗಳನ್ನೇ ಮಾರ್ಪಡಿಸಿಬಿಟ್ಟರು. ಯಾರದೂ ತಕರಾರಿಲ್ಲ!

ಬಿಜೆಪಿ ಈ ಬಾರಿ ವಿರೋಧಪಕ್ಷವಾಗಿಯೂ ದಕ್ಷವಾಗಿ, ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ.

ಮಾಯಾವತಿ ಜಾತಿ ರಾಜಕಾರಣಕ್ಕೆ ವ್ಯವಸ್ಥಿತ ರೂಪ ನೀಡಿದವರು. ಅವರ ಮೇಲೆ ಹತ್ತಾರು ಭ್ರಷ್ಟಾಚಾರದ ಆರೋಪಗಳಿವೆ. ಈ ಆರೋಪಗಳು ತನಿಖೆಯ ಹಂತಕ್ಕೆ ಬಂದಾಗಲೆಲ್ಲ ಕೇಂದ್ರದ ಸಕರ್ಾರಕ್ಕೆ ಬೆಂಬಲ ಘೊಷಿಸುವುದು, ಕಾಂಗ್ರೆಸ್, ಬಿಜೆಪಿ ಹೀಗೆ ಯಾರೆಂದರೆ ಅವರ ಜೊತೆ ಸಖ್ಯ ಸಾಧಿಸಿಕೊಳ್ಳುವುದು ಅವರು ಅನುಸರಿಸಿಕೊಂಡು ಬಂದಿರುವ ಕ್ರಮ. ಯುಪಿಎ ಸಕರ್ಾರಕ್ಕೆ ಬೆಂಬಲ ಕೊಡುವವರೆಗೆ `ಭ್ರಷ್ಟಾಚಾರಿ' ಎಂಬ ಆರೋಪ ಹೊತ್ತಿದ್ದ ಮುಲಾಯಂ ಸಿಂಗ್ ಯಾದವ್ ಯುಪಿಎ ಜೊತೆ ಸೇರಿಕೊಂಡ ತಕ್ಷಣ ಏಕಾಯೇಕಿ ಕಳಂಕಮುಕ್ತರಾದರು. ಅವರ ಪರವಾಗಿ ಸ್ವಯಂ ಸಿಬಿಐ ಮೂಲಕವೇ ಹೇಳಿಸಲಾಯಿತು. ಇದು `ಸಭ್ಯ' ಮನಮೋಹನ್ ಸಕರ್ಾರದ `ದೊಡ್ಡಸ್ಥಿಕೆ'. ಯಾರ ಹಂಗಿನಲ್ಲೂ, ಯಾರ ಮುಲಾಜಿನಲ್ಲೂ ಕಾರ್ಯನಿರ್ವಹಿಸದೇ, `ಸ್ವತಂತ್ರ'ವಾಗಿ `ದಕ್ಷವಾದ' ಆಡಳಿತ ಕೊಟ್ಟ ಈ `ಪ್ರಬಲ' ಪ್ರಧಾನಿ ಇಟಲಿಯ ಭೋಫೋಸರ್್ ಫಲಾನುಭವಿ ಒಟ್ಟಾವಿಯೋ ಕ್ವಾಟ್ರೋಚಿಯನ್ನು ಅಜರ್ೆಂಟೀನಾದಲ್ಲಿ ಬಂಧಿಸಿದಾಗ ದೆಹಲಿಯಲ್ಲೇಕೆ ತುತರ್ು ಸಭೆ ಕರೆದರು? ಲಂಡನ್ನಿನಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಕ್ವಾಟ್ರೋಚಿಯ ಬ್ಯಾಂಕ್ ಖಾತೆಗಳನ್ನು ತೆರವು ಮಾಡಿಸಿಕೊಟ್ಟ `ಪುಣ್ಯಾತ್ಮ'ರು ಯಾರು?

ಮನಮೋಹನ್ ಅವಧಿಯಲ್ಲಿ ಸಿಬಿಐ ಮಯರ್ಾದೆ ಸಂಪೂರ್ಣವಾಗಿ ಹೋಯಿತು. ಅದು ತಾನೇ ಕೇಸು ಹಾಕಿದ್ದ ಆರೋಪಿಗಳ ಪರವಾಗಿ ತಾನೇ ನಿಂತು ನಾಲ್ಕಾರು ಬಾರಿ ಸುಪ್ರೀಂ ಕೋಟರ್ಿನಿಂದ ಛೀಮಾರಿ ಹಾಕಿಸಿಕೊಂಡ ಪ್ರಸಂಗ ನಡೆಯಿತು. ಒಂದು ಹಂತದಲ್ಲಿ ಸಿಬಿಐ ತಾನೇ ತಪ್ಪಿತಸ್ಥನ ಸ್ಥಾನದಲ್ಲಿ ನಿಂತು ಹೇಳಿಕೆ ನೀಡಬೆಕಾಯಿತು. ಕೇಂದ್ರದ ಆಳುವ ಪಕ್ಷಗಳ ಗುಲಾಮರಂತೆ ನಾವು ವತರ್ಿಸುತ್ತ ಬಂದಿದ್ದೇವೆ ಎಂದು ಸ್ವತಃ ಅದರ ನಿದರ್ೇಶಕರೇ ಸುಪ್ರೀಂ ಕೋಟರ್ಿನಲ್ಲಿ ಹೇಳಿಕೆ ಕೊಟ್ಟು ಸಿಬಿಐ ಅಂದರೆ `ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್' ಎಂಬ ಬಿರುದನ್ನು ಖಚಿತಪಡಿಸಿದರು. ಆದರೆ ಬಿಜೆಪಿ ಈ ಕುರಿತು ಎಷ್ಟರ ಮಟ್ಟಿಗೆ ಜನರ ಗಮನ ಸೆಳೆದಿದೆ?

ಈಗಾಗಲೇ ವರುಣ್ ಗಾಂಧಿ ವಿಷಯದಲ್ಲಿ ಚುನಾವಣಾ ಆಯೋಗ ನಡೆದುಕೊಂಡ ರೀತಿಯಲ್ಲಿ ಪಕ್ಷಪಾತದ ಛಾಯೆ ಇದೆ. ಅವರನ್ನು ಹೊಡೆಯಿರಿ, ಇವರನ್ನು ಕಡಿಯಿರಿ ಎಂದು ಲಾಲೂ ಪ್ರಸಾದ್, ಮುಲಾಯಂ, ಮಾಯಾವತಿ, ಮುಸ್ಲಿಂ ಲೀಗ್, ಮಾಕ್ಸರ್್ವಾದಿ ಪಕ್ಷಗಳು ಲಾಗಾಯ್ತಿನಿಂದಲೂ ಹೇಳಿಕೊಂಡು ಬರುತ್ತಲೆ ಇವೆ. ಇಂತಹ ಬೆದರಿಕೆ ಒಡ್ಡುವ ಸ್ಲೋಗನ್ನುಗಳ ಕೇಸೊಂದು 1970ರ ದಶಕದಲ್ಲಿ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಜಾತಿ ಜಾತಿಗಳ ನಡುವೆ ಸಂಘರ್ಷದ ವಿಷ ಹರಡಿದ ಮಾಯಾವತಿಯ ನೆಚ್ಚಿನ ಸ್ಲೋಗನ್ `ತಿಲಕ್, ತರ್ಜು ಔರ್ ತಲ್ವಾರ್, ಇಸ್ಕೋ ಮಾರೋ ಜೂತಾ ಚಾರ್'. ಮೇಲ್ಜಾತಿಯವರಿಗೆಲ್ಲ ಜಪ್ಪಲಿಯಲ್ಲಿ ಬಾರಿಸಿ ಎಂದು ಅವರು ಸಾರ್ವಜನಿಕವಾಗಿ ಕರೆ ನೀಡುತ್ತಿದ್ದಾಗ ಯಾರಿಗೂ ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ನೆನಪಾಗಲಿಲ್ಲ!

ಬಿಜೆಪಿ ಈವರೆಗೆ ಕಡಿದು ಕಟ್ಟಿಹಾಕಿರುವುದಾದರೂ ಏನನ್ನು? ಅದನ್ನು ಐಡಿಯಾಲಜಿಕಲ್ ಪಾಟರ್ಿ ಎಂದು ಅದ್ಯಾರು ಕರೆದರೋ ಗೊತ್ತಿಲ್ಲ. ರಾಮಜನ್ಮಭೂಮಿ ವಿಷಯದಲ್ಲಿ ಹಿಂಜರಿದ ಪಕ್ಷ ವಾಜಪೇಯಿ ಕಾಲದಲ್ಲಿ ಸೇತುಸಮುದ್ರಂ ಯೋಜನೆಗೆ ಅಡಿಪಾಯ ಹಾಕಿ ರಾಮಸೇತುವಿನ ವಿಷಯದಲ್ಲೂ ಗೊಂದಲ ಸೃಷ್ಟಿಸಿತು.

ವರುಣ್ ಗಾಂಧಿಯನ್ನು ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ಅಡಿ ಬಂಧಿಸಿದಾಗ ಅವರ ನೆರವಿಗೆ ಧಾವಿಸಲು ಹಿಂದೆ-ಮುಂದೆ ನೋಡಿದ ಬಿಜೆಪಿ ನಾಯಕರು ಸದ್ದಿಲ್ಲದೇ ರಾಹುಲ್ ಗಾಂಧಿ ನೆರವಿಗೆ ದಾವಿಸಿದ್ದರು! ಹೌದು, ರಾಹುಲ್ ಗಾಂಧಿ ಅಮೆರಿಕದ ನ್ಯಾಷನಲ್ ಸೆಕ್ಯೂರಿಟಿ ರೂಲ್ಸ್ ಅಡಿ ಎಫ್ಬಿಐ ವಶದಲ್ಲಿದ್ದಾಗ ಅವರ ನೆರವಿಗೆ ಬಂದವರಾರು ಗೊತ್ತೆ? ಮಾಧ್ಯಮ ವರದಿಗಳ ಪಕಾರ, 2001ರ ಸೆಪ್ಟೆಂಬರ್ ಕಡೆಯ ವಾರದಲ್ಲಿ ಅಮೆರಿಕದ ಬಾಸ್ಟನ್ ನಗರದಿಂದ ವಾಷಿಂಗ್ಟನ್ ಡಿ.ಸಿ.ಗೆ ರಾಹುಲ್ ಪ್ರಯಾಣಿಸುತ್ತಿದ್ದರು. ಅವರನ್ನು ಎಫ್ಬಿಐ ತನಿಖಾಧಿಕಾರಿಗಳು ಬಾಸ್ಟನ್ ವಿಮಾನನಿಲ್ದಾಣದಲ್ಲಿ ಬಂಧಿಸಿದರು. ವಿಷಯ ತಿಳಿದ ಸೋನಿಯಾ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ ಲಲಿತ್ ಮಾನ್ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿದರು. ಅವರು ಮಧ್ಯಸ್ಥಿಕೆ ವಹಿಸಿ ರಾಹುಲ್ ಅವರನ್ನು ಬಿಡಿಸಿ ಪ್ರಯಾಣ ಮುಂದುವರಿಸಲು ಅವಕಾಶ ಮಾಡಿಕೊಟ್ಟರು ಎನ್ನಲಾಗುತ್ತದೆ. ರಾಜತಾಂತ್ರಿಕ ಮೂಲಗಳು ಸೋನಿಯಾ ಲಲಿತ್ ಮಾನ್ಸಿಂಗ್ ಅವರನ್ನು ಸಂಪಕರ್ಿಸಲಿಲ್ಲ ಎಂದೂ ಹೇಳುತ್ತವೆ (ನೋಡಿ: ದಿ ಹಿಂದೂ, ಸೆಪ್ಟೆಂಬರ್ 30, 2001). ಕೆಲವರ ಪ್ರಕಾರ, ಸೋನಿಯಾ ಸಂಪಕರ್ಿಸಿದ್ದು ಬ್ರಜೇಶ್ ಮಿಶ್ರಾ ಅವರನ್ನು. ಅಂದಿನ ಪ್ರಧಾನಿ ಅಟಲ ಬಿಹಾರಿ ವಾಜಪೇಯಿಯ ಪ್ರಧಾನ ಕಾರ್ಯದಶರ್ಿಯಾಗಿದ್ದ ಬ್ರಜೇಶ್ ಮಧ್ಯಸ್ಥಿಕೆಯಲ್ಲಿ ರಾಹುಲ್ ಅನ್ನು ಬಂಧಮುಕ್ತಿಗೊಳಿಸಿದ್ದು ವಾಜಪೇಯಿ ಸಕರ್ಾರ ಎಂದೂ ಹೇಳಲಾಗುತ್ತದೆ.

ಮೊದಲನೆಯದಾಗಿ 2001ರ ಸೆಪ್ಟೆಂಬರ್ ಕಡೆಯ ವಾರದಲ್ಲಿ ಬಾಸ್ಟನ್ ವಿಮಾನನಿಲ್ದಾಣದಲ್ಲಿ ನೂರಾರು ಭಾರತೀಯರು ಓಡಾಡಿದ್ದರು. ಅವರೆಲ್ಲರನ್ನೂ ಬಿಟ್ಟು ರಾಹುಲ್ ಗಾಂಧಿಯನ್ನೇ ಏಕೆ ಎಫ್ಬಿಐ ತನ್ನ ವಶಕ್ಕೆ ತೆಗೆದುಕೊಂಡಿತ್ತು ಎಂಬ ಪ್ರಶ್ನೆಯನ್ನು ಸಾರ್ವಜನಿಕವಾಗಿ ಮೊದಲು ಎತ್ತಿದವರು ಬಿಜೆಪಿ ನಾಯಕರಲ್ಲ, ಜನತಾ ಪಕ್ಷದ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಅವರು. ಅವರ ಪ್ರಶ್ನೆಗೆ ಯಾರೂ ಈವರೆಗೂ ಉತ್ತರಿಸಲು ಹೋಗಿಲ್ಲ. ಒಂದು ವೇಳೆ ಬಂಧನದ ವರದಿಯೇ ಸುಳ್ಳಾಗಿದ್ದರೆ ದೇಶವಿದೇಶಗಳ ಮಾಧ್ಯಮಗಳ ವಿರುದ್ಧ ಯಾರೂ ಏಕೆ ಮಾನನಷ್ಟ ಮೊಕದ್ದಮೆ ಹಾಕಿಲ್ಲ?

ಈ ವಿಷಯದಲ್ಲಿ ವಾಜಪೇಯಿ ಏಕೆ ಮಧ್ಯಸ್ಥಿಕೆ ವಹಿಸಬೇಕಿತ್ತು ಎಂಬ ಪ್ರಶ್ನೆಯೂ ಇಲ್ಲಿ ಮುಖ್ಯವಾಗುತ್ತದೆ (ಈ ಸಹಾಯಕ್ಕಾಗಿ ಅನಂತರ ಅವರು ಸೋನಿಯಾ ಗಾಂಧಿಯಿಂದ `ಗದ್ಧಾರ್' ಎಂಬ ಮಹಾನ್ ಬಿರುದನ್ನೂ ಪಡೆದರು ಬಿಡಿ!) ಅವರು ಬೋಫೊಸರ್್ ಹಗರಣದ ವಿಷಯದಲ್ಲೂ ನೇತಾಜಿನ ಸುಭಾಷ್ ಚಂದ್ರ ಬೋಸರ ಸಾವಿನ ತನಿಖೆಯ ವಿಷಯದಲ್ಲೂ ಜನರಿಗೆ ನಿರಾಶೆಯನ್ನೇ ಮೂಡಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಎಷ್ಟೋ ಹಳೆಯ ಹಗರಣಗಳ ತನಿಖೆ ಸರಿಯಾದ ರೀತಿಯಲ್ಲಿ ಆಗುತ್ತದೆ ಎಂಬ ಜನರ ನಿರೀಕ್ಷೆ ಸುಳ್ಳಾಯಿತು. ಒಂದು ಪಕ್ಕಾ ಕಾಂಗ್ರೆಸ್ಸೇತರ ಸಕರ್ಾರ ಎಷ್ಟು ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕೋ ಅಷ್ಟು ಪ್ರಾಮಾಣಿಕತೆಯನ್ನು ತನ್ನ 6 ವರ್ಷಗಳ ಆಳ್ವಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸಕರ್ಾರ ಪ್ರದಶರ್ಿಸಲಿಲ್ಲ. `ರಾಜಕಾರಣಿಗಳೆಲ್ಲ ಒಂದೇ, ಪರಸ್ಪರ ರಕ್ಷಣೆ ಮಾಡಿಕೊಳ್ಳುವುದೇ ಅವರ ಕ್ರಮ' ಎಂಬ ಹಳೆಯ ಮಾತು ಮತ್ತೊಮ್ಮೆ ಸಾಬೀತಾಯಿತು.

ಅಟಲ್ ಬಿಹಾರಿ ವಾಜಪೇಯಿ ತರಹವೇ ಲಾಲ್ ಕೃಷ್ಣ ಆಡ್ವಾಣಿಯೂ ಸಹ ಎನ್ನಲಾಗದು. ಇಬ್ಬರ ಕಾರ್ಯವೈಖರಿಗಳು ಭಿನ್ನವಾಗಿಯೇ ಇವೆ. ಆದರೆ `ಬಿಜೆಪಿ ಜೊತೆ ವ್ಯವಹಾರ ಕುದುರಿಸಿಕೊಳ್ಳಬಹುದು' ಎಂಬ ಇಮೇಜೂ ಸಹ ಆ ಪಕ್ಷಕ್ಕಿದೆ. ಅದನ್ನು ಮೊದಲು ಆ ಪಕ್ಷ ಸರಿಪಡಿಸಿಕೊಳ್ಳಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ