ಮಂಗಳವಾರ, ಮಾರ್ಚ್ 31, 2009

ಕನ್ನಡಕ್ಕೆ ಯುವ ಸಾಹಿತಿಗಳ ಬರ!

ಭಾರತೀಯ ಭಾಷೆಗಳಿಗೆ ಯುವ ಸಾಹಿತಿಗಳ ಬರ ಬಂದಿದೆ! ಇದನ್ನು ಓದಿ:

ಕಿರಣ್ ದೇಸಾಯಿ. 37 ವರ್ಷ. ಕಾದಂಬರಿಗಾತರ್ಿ. ಬ್ರಿಟನ್ನಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ವಿಜೇತೆ! ಅರವಿಂದ್ ಅಡಿಗ. 35 ವರ್ಷ, ಅವನ ಮೊದಲ ಕಾದಂಬರಿಗೇ ಮ್ಯಾನ್ ಬುಕರ್! ಝುಂಫಾ ಲಾಹಿರಿ. 36 ವರ್ಷ. ಕಾದಂಬರಿ ಹಾಗೂ ಕಥೆಗಾತರ್ಿ. ಅಮೆರಿಕದ ಪ್ರತಿಷ್ಠಿತ ಪುಲಿಟ್ಜರ್ ಬಹುಮಾನ ವಿಜೇತೆ! ಅಶೊಕ್ ಬ್ಯಾಂಕರ್. 40 ವರ್ಷ. ಹಲವು ಕಾದಂಬರಿಗಳ ಜೊತೆಗೆ ಇಂಗ್ಲಿಷ್ನಲ್ಲಿ ರಾಮಾಯಣ ಸರಣಿ ಪುಸ್ತಕಗಳನ್ನು ಬರೆಯಲು ಮಿಲಿಯನ್ ಡಾಲರ್ ಆಫರ್!! ಚೇತನ್ ಭಗತ್. 34 ವರ್ಷ. ಅವನ ಮೂರು ಕಾದಂಬರಿಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಅಗ್ರಸ್ಥಾನ. ಇವರೆಲ್ಲ ಇಂಗ್ಲಿಷಿನಲ್ಲಿ ಬರೆಯುತ್ತಿರುವ ಸಮಕಾಲೀನ ಪ್ರತಿಭಾವಂತ ಭಾರತೀಯರು, ಭಾರತೀಯ ಮೂಲದವರು.

ಭಾರತೀಯ ಭಾಷೆಗಳ ಸಾಹಿತ್ಯದ ಗತಿ ಏನಾಗಿದೆ? ಕನ್ನಡದ ಸಂದರ್ಭದಲ್ಲಿ ದೃಷ್ಟಿ ಹರಿಸುವುದು ನನಗೆ ಹೆಚ್ಚು ಸುಲಭ. ಕನ್ನಡದ ಶ್ರೇಷ್ಠ ಕಾದಂಬರಿಕಾರನ್ನು ಹೆಸರಿಸಿ? ಎಂದರೆ ತಕ್ಷಣ ಕಾರಂತರು, ಭೈರಪ್ಪ ಇತ್ಯಾದಿ ನಾಲ್ಕಾರು ಹೆಸರು ತಕ್ಷಣ ಎಲ್ಲರ ನಾಲಿಗೆಯಲ್ಲಿ ನಲಿಯುತ್ತದೆ. ಕವಿಗಳ ಬಗ್ಗೆ ಕೇಳಿದರೆ ಬೇಂದ್ರೆ, ಕುವೆಂಪು, ಅಡಿಗರು, ನರಸಿಂಹ ಸ್ವಾಮಿ, ಹೀಗೆ ಕೆಲವು ಹೆಸರು ಹೇಳಬಹುದು. ಸಮಕಾಲೀನ ಹಾಗೂ `ಯುವ' ಶುದ್ಧ ಸಾಹಿತಿಗಳ ಬಗ್ಗೆ ಕೇಳಿದರೆ?

ಹೌದು, ನಮ್ಮಲ್ಲಿ ಶ್ರೇಷ್ಠತೆ ಹಾಗೂ ಶುದ್ಧತೆಯ ಭರವಸೆ ಮೂಡಿಸುವ ಯುವ ಸಾಹಿತಿಗಳು ಇದ್ದಾರೆಯೆ? ಇದ್ದರೆ ದಯವಿಟ್ಟು ತಿಳಿಸಿ. ನನಗಂತೂ ಅಂತಹ ಯಾರ ಬಗ್ಗೆಯೂ ಗೊತ್ತಿಲ್ಲ. ಸಾಹಿತ್ಯದ ಶ್ರೇಷ್ಠತೆಯ ಬಗ್ಗೆ ವಿಮಶರ್ೆ ಪಕ್ಕಕಿಡೋಣ. ಈವರೆಗೆ ಹೆಸರು ಮಾಡಿರುವ (ಹೇಗಾದರೂ ಸರಿ!) ಕನ್ನಡ ಸಾಹಿತಿಗಳಿಗೆಲ್ಲ ವಯಸ್ಸಾಗಿದೆ. ಕನಿಷ್ಠವೆಂದರೂ 55 ದಾಟಿದೆ. ಜನರು ಕೊಂಡು ಓದಲು ಹಾತೊರೆಯುವ ಸಾಹಿತಿಗಳಿಗಂತೂ ಬರವಿದ್ದೇ ಇದೆ. ಜೊತೆಗೆ ಈಗಂತೂ ಭರವಸೆ ಉಕ್ಕಿಸುವ ಯುವ ಸಾಹಿತಿಗಳ ಬರ ಕನ್ನಡವನ್ನು ಕಾಡುತ್ತಿದೆ!

``ಏಕೆ ಹೀಗಾಯಿತು? ನಿಮಗೇನನಿಸುತ್ತದೆ'' ಎಂದು ಈಚೆಗೆ ನಾನೊಬ್ಬ ಕನ್ನಡ ಸಾಹಿತಿಗಳನ್ನು ಕೇಳಿದೆ. ``ವಿವಿಧ ರಾಜಕೀಯ (ಅಂದರೆ ಸಾಹಿತ್ಯದ ಮೂಲಕ ರಾಜಕೀಯ ಸಿದ್ಧಾಂತ ಮುನ್ನಡೆಸುವ) ಚಳವಳಿಗಳು ಜನರನ್ನು ತಪ್ಪುದಾರಿಗೆ ಎಳೆದಿವೆ. ವಾಸ್ತವ ರಾಜಕೀಯದ ಪ್ರಭಾವವೇ ಜಾಸ್ತಿಯಾಗಿ ಸೃಜನಶಕ್ತಿ ನಶಿಶಿದೆ. ಇದು ಸರಿಯಾಗಬೇಕಾದರೆ ಇನ್ನೂ ಕನಿಷ್ಠ 30 ವರ್ಷಗಳಾದರೂ ಬೇಕು. ಆಗ ಹೊಸ ಪ್ರತಿಭಾವಂತ, ಸ್ವತಂತ್ರ ಮನೋಭಾವದ ಕನ್ನಡಿಗ ಪೀಳಿಗೆ ಉದಿಸುತ್ತದೆ'' ಎಂದರು.

ಈ ಮಾತು ಎಷ್ಟು ನಿಜ! ನವ್ಯ, ನವ್ಯೋತ್ತರ, ಮಾಕ್ಸರ್್ವಾದಿ, ಬಂಡಾಯ, ದಲಿತ ಎಂದು ಜಾತಿ-ಮತ-ಸಿದ್ದಾಂತಗಳ ಹೆಸರಿನಲ್ಲಿ ಸಾಹಿತ್ಯ ಚಳವಳಿ ಮಾಡುತ್ತೇವೆಂದು ಹೊರಟವರು ಒಂದು ಇಡೀ ಪೀಳಿಗೆಯನ್ನೇ ದಾರಿತಪ್ಪಿಸಿದ್ದಾರೆ. ಒಂದು ಪೀಳಿಗೆಯ ಸೃಜನಶಕ್ತಿಯನ್ನೇ ನಾಶಮಾಡಿದ್ದಾರೆ. ತಾವೂ ಶ್ರೇಷ್ಠ ಸಾಧನೆ ಮಾಡದೇ ಇತರರನ್ನೂ ಹಾಳುಮಾಡಿದ್ದಾರೆ. ಡಿವಿಜಿ, ಬೇಂದ್ರೆ, ಕುವೆಂಪು, ಕಾರಂತ, ಮಾಸ್ತಿ, ಭೈರಪ್ಪ, ಅಡಿಗ ಹೀಗೆ ಅನೇಕರು ತಮ್ಮ ಮೂವತ್ತರ ಹರೆಯದಲ್ಲೇ ಭರವಸೆ ಹುಟ್ಟಿಸಿದ್ದರು. ಮುಂದೆ ಸಾಹಿತ್ಯ ಲೋಕ ಸಮೃದ್ಧವಾಗುತ್ತದೆ ಎನಿಸುವಂತೆ ಮಾಡಿದ್ದರು. ಹಳಬರಷ್ಟೇ ಅಥವಾ ಹಳಬರಿಗಿಂತ `ಮೌಲಿಕ' ಎನಿಸುವಂತೆ ಬರೆಯತೊಡಗಿದ್ದರು. ಈಗ ಭವಿಷ್ಯದ ಕಾರಂತ, ಅಡಿಗ, ಬೇಂದ್ರೆ, ಭೈರಪ್ಪ ಎಲ್ಲಿ? ಶುದ್ಧ ಸಾಹಿತ್ಯ ಎಲ್ಲಿ ಹೋಯಿತು?

ಈ ಸಮಸ್ಯೆಗೆ ನಮ್ಮ ರಾಜಕಾರಣಿಗಳೂ ಕಾರಣ. ಜಾಗತೀಕರಣ, ಉದ್ಯೋಗಾವಕಾಶಗಳು ಇಂಗ್ಲಿಷ್ ಅನ್ನು ಆಕರ್ಷಕ ಹಾಗೂ ಅನಿವಾರ್ಯವಾಗಿಸಿದವು ಎಂದು ನಾನಾ ಕಾರಣಗಳನ್ನು ಕೊಡಬಹುದು. ಆದರೆ ಕನ್ನಡ ತನ್ನ ಆಕರ್ಷಣೆ ಕಳೆದುಕೊಳ್ಳಬೇಕೆಂದೇನೂ ಇಲ್ಲ. ಹಾಗೆ ನೋಡಿದರೆ, ಮೇಲೆ ಹೆಸರಿಸಿದ ಕನ್ನಡ ಸಾಹಿತಿಗಳು ಇಂಗ್ಲಿಷ್ನಲ್ಲೇ ಶಿಕ್ಷಣ ಪಡೆದವರು. ಅದೂ ಬ್ರಿಟಿಷರ ಕಾಲದಲ್ಲಿ. ಆದರೆ ಅವರಿಗೆಲ್ಲ ಅತ್ಯುತ್ತಮ, ಸಂಸ್ಕಾರವಂತ, ಸುಸಂಸ್ಕೃತ ಕನ್ನಡ ಶಿಕ್ಷಕರ, ಶಿಕ್ಷಣದ ಭಾಗ್ಯ ಲಭಿಸಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಯಾವಾಗ ರಾಜಕೀಯದ ಪ್ರವೇಶವಾಯಿತೋ ಆಗಲೇ ಸಮಸ್ಯೆಗಳು ಆರಂಭವಾದವು.

ಶಿಕ್ಷಕರ ಆಯ್ಕೆಯಲ್ಲಿ ಜಾತೀಯತೆ, ವಿದ್ಯಾಥರ್ಿ ವೇತನದಲ್ಲಿ ಜಾತಿಯತೆ, ಯೋಗ್ಯತೆಗೆ ಯಾವ ಬೆಲೆಯೂ ಇಲ್ಲ. ಹಿಂದೆ ತಮ್ಮ ಮನೆಯಲ್ಲಿ ಊಟಹಾಕಿಸಿ ವಿದ್ಯಾಥರ್ಿಗಳನ್ನು ಓದಿಸುವ ಸಕರ್ಾರಿ ಮೇಷ್ಟ್ರುಗಳಿದ್ದರು. ಈಗ ಶಾಲೆಯಲ್ಲಿ, ಪಠ್ಯಕ್ರಮದಲ್ಲಿ ಅನೇಕ ರಾಜಕೀಯ ಹೊಳಹುಗಳು. ಕನ್ನಡ ಬೋಧನೆಯಲ್ಲಿ (ಹಾಗೆಂದರೇನು? ಎನ್ನುವಂತಾಗಿದೆೆ) ನಿರಾಸಕ್ತಿ. ಬೋಧಕರಿಗೇ ಕನ್ನಡದ ಶುದ್ಧ ಉಚ್ಛಾರಣೆ ಬರದ ಸ್ಥಿತಿ.

ಒಂದು ಸ್ವತಂತ್ರ ಸಮೀಕ್ಷೆ ಪ್ರಕಾರ ಇಂದು ಭಾರತದ ಬಹುತೇಕ ಗ್ರಾಮಗಳಲ್ಲಿ ಸಕರ್ಾರೀ ಶಾಲಾ ಶಿಕ್ಷಕರೇ ರಾಜಕೀಯ ಪಕ್ಷಗಳ ಸ್ಥಳೀಯ ಏಜೆಂಟರು! ಪಕ್ಷಗಳ ಸಕ್ರಿಯ ಕಾರ್ಯಕರ್ತರಿಗೆ ಬೇಕೆಂದೇ ಶಿಕ್ಷಕ ಹುದ್ದೆ ದಯಪಾಲಿಸಲಾಗಿದೆ ಎಂದಿದೆ ಸಮೀಕ್ಷೆ. ಹೀಗಿರುವಾಗ ತಮ್ಮ ಮಕ್ಕಳಿಗೆ ತಕ್ಕ ಮಟ್ಟಿಗೆ ಬುದ್ದಿ, ಪ್ರತಿಭೆಗಳಿವೆ ಎಂದುಕೊಂಡ ಯಾರೇ ಆಗಲೀ (ನಮ್ಮ ರಾಜಕಾರಣಿಗಳೂ ಸಹ!) ಅವರನ್ನು ಇಂತಹ ಶಾಲೆಗಳಿಗೆ ಕಳಿಸುವುದಿಲ್ಲ.

ಮಕ್ಕಳ ಕೈಲಿ `ಅಲಿಸ್ ಇನ್ ದಿ ವಂಡರ್ಲ್ಯಾಂಡ್' ಅಥವಾ `ಹ್ಯಾರಿ ಪಾಟರ್..' ಓದಿಸುವ ಅನೇಕ `ಎಲೀಟ್' ಬಿರುದಾಂಕಿತ ಶಾಲೆಗಳಿವೆ. ಈ ಶಾಲೆಗಳ ಪುಟ್ಟ ಮಕ್ಕಳೂ `ಫೇರಿ ಟೇಲ್ಸ್' ಓದುತ್ತವೆ. ಅಮೆರಿಕದಲ್ಲಿ ಹಾಗೂ ಅನೇಕ ಐರೋಪ್ಯ ದೇಶದಲ್ಲಿ ಶಾಲಾ ಶಿಕ್ಷಣದಲ್ಲಿ ಶುದ್ಧ ಸಾಹಿತ್ಯ ಅಧ್ಯಯನ ವಿಜ್ಞಾನ ವಿದ್ಯಾಥರ್ಿಗಳಿಗೂ ಕಡ್ಡಾಯ. ನಮ್ಮ ಕನ್ನಡ ಶಾಲೆಗಳಲ್ಲಿ ಮೊದಲಿಗೆ ಗ್ರಂಥ ಭಂಡಾರವಿಲ್ಲ. ಇದ್ದರೂ ಪುಸ್ತಕಗಳನ್ನು ಕಪಾಟಿನಿಂದ ಹೊರತೆಗೆಯುವುದೇ ಇಲ್ಲ! ಮಕ್ಕಳಿಗೆ ಕೊಟ್ಟು ಓದಿಸುವ ಮತು ಹಾಗಿರಲಿ, ಶಿಕ್ಷಕರೇ ಓದಿರುವುದಿಲ್ಲ (ಅತಿ ಕಡಿಮೆ ಸಂಖ್ಯೆಯಲ್ಲಿರುವ ಕೆಲವರನ್ನು ಹೊರತುಪಡಿಸಿ). ಮಕ್ಕಳ ಅಡಿಪಾಯವೇ ಭದ್ರವಿಲ್ಲ. ಕನ್ನಡ ಶಾಲೆಗಳಲ್ಲಿ ತಯಾರಾದವರಿಗೆ ಸರಿಯಾಗಿ ಕನ್ನಡ ಬರದ ಸ್ಥಿತಿ ನಿಮರ್ಾಣವಾಗಿದೆ. ಅವರಿಗೆ ಇಂಗ್ಲಿಷೂ ಬರುವುದಿಲ್ಲ. ಅದನ್ನು ಆಡುವವರ ಎದುರು ಹಿಂಜರಿಕೆ, ಕೀಳರಿಮೆ. ಇಂಗ್ಲಿಷ್ ಶಾಲಗಳಲ್ಲಿ ಭಾರತೀಯ ಭಾಷಾ ಕಲಿಕೆ ಸಮರ್ಪಕವಾಗಿಲ್ಲ.

ಇವೆಲ್ಲದರ ಜೊತೆಗೆ ರಾಜಕೀಯ ಸಾಹಿತಿಗಳ ಕಾಟ. ಅವರಿಂದ ಸಾಹಿತ್ಯಕ್ಕೊಂದು ವ್ಯಾಖ್ಯೆ, ನಿದರ್ೇಶನ, ಚೌಕಟ್ಟುಗಳು ಪ್ರಾಪ್ತವಾಗಿವೆ. ಪ್ರತಿಭಾವಂತ ಯುವಜನರಿಗೆ ಈಗ ಕನ್ನಡದಲ್ಲಿ ಶುದ್ಧಸಾಹಿತ್ಯ ಸೃಷ್ಟಿಸಲು ಭಯ! ಯಾವುದಾದರೊಂದು ರಾಜಕೀಯ ಸಿದ್ಧಾಂತದ ಉದ್ದೇಶವಿಲ್ಲದಿದ್ದರೆ ಅದು ಸಾಹಿತ್ಯವೇ ಅಲ್ಲ ಎಂದು ಈ ರಾಜಕೀಯ ಸಾಹಿತಿಗಳು ಭಾವನೆ ಸೃಷ್ಟಿಸಿಬಿಟ್ಟಿದ್ದಾರೆ. ಕಟು ವಿಮಶರ್ೆ ಹಾಗೂ ಗುಂಪುಗಾರಿಕೆ ಮೂಲಕ ಜನರ ಉತ್ಸಾಹ ಮತ್ತು ಸೃಜನ ಶಕ್ತಿಯನ್ನೇ ನಾಶಮಾಡಿದ್ದಾರೆ. ಭಾವನೆಗಳು ಬರಡಾದಾಗ ಅಥವಾ ಗೊಂದಲ ಕಾಡಿದಾಗ, ಭಾಷೆಯ ಹದ, ತಳಪಾಯ ಗಟ್ಟಿಗೊಳ್ಳದಿದ್ದಾಗ ಸಾಹಿತ್ಯ ಎಲ್ಲಿ ಹುಟ್ಟುತ್ತದೆ? ಸಂಶೋಧನೆ, ಅಧ್ಯಯನ, ಪ್ರವಾಸ, ಹಾಗೂ ಸಾಹಿತ್ಯಿಕ ಚಿಂತನೆ ಮತ್ತು ಸ್ಫೂತರ್ಿ ಎಲ್ಲಿರುತ್ತದೆ?

ಏನಂತೀರಿ?


ಹಜ್ ಅನುದಾನ ಕೊಟ್ಟಮೇಲೆ ಹನಿಮೂನಿಗೂ ಕೊಡಬಹುದು!

ಹಜ್ ಸಹಾಯಧನ ದೇಶದ `ಸೆಕ್ಯುಲರ್ ಆದರ್ಶ'ಗಳಿಗೆ ಅನುಗುಣವಾಗಿಯೇ ಇದೆ ಎಂಬುದು ಕೇಂದ್ರದ ಯುಪಿಎ ಸಕರ್ಾರದ ವಾದ. ಈ ರೀತಿಯಲ್ಲೇ ಅದು ಸುಪ್ರೀಂ ಕೋಟರ್ಿನಲ್ಲಿಯೂ ವಾದ ಮಾಡಿಕೊಂಡು ಬಂದಿದೆ.

ಹಜ್ ಸಹಾಯಧನ ವ್ಯವಸ್ಥೆ ಅಸಾಂವಿಧಾನಿಕ; ಅದನ್ನು ರದ್ದುಪಡಿಸಬೇಕು ಎಂದು ಕೋರಿ ಎರಡು ವರ್ಷಗಳ ಹಿಂದೆ ಅಲಹಾಬಾದ್ ಹೈಕೋಟರ್್ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಲಾಗಿತ್ತು. ಹೈಕೋಟರ್್ ಅಜರ್ಿದಾರರ ವಾದವನ್ನು ಎತ್ತಿಹಿಡಿದಿತ್ತು. ಹಜ್ ಸಹಾಯಧನ ನೀಡಿಕೆಯನ್ನು ಸಕರ್ಾರ ತಕ್ಷಣ ನಿಲ್ಲಿಸಬೇಕೆಂಬ ಅದರ ಆದೇಶಕ್ಕೆ ಸುಪ್ರೀಂ ಕೋಟರ್್ ತಡೆಯಾಜ್ಞೆ ನೀಡಿದೆ. ವಿಚಾರಣೆ ಮುಂದುವರಿದಿದೆ.

ಒಂದು ಕೋಮಿನವರಿಗೆ ಮಾತ್ರ ಸಹಾಯಧನ ನೀಡುವುದು ಸೆಕ್ಯುಲರಿಸಂಗೆ ವಿರುದ್ಧ ಎಂಬುದು ಅಜರ್ಿದಾರರ ವಾದ. ಆದರೆ ಅಂತಹ ಕ್ರಮ ಸೆಕ್ಯುಲರಿಸಂ ಪರವಾಗಿಯೇ ಇದೆ ಎಂಬುದು ಸಕರ್ಾರದ ವಿತಂಡವಾದ.

ಆದರೆ ನ್ಯಾಯಪೀಠ ಸುಮ್ಮನಿರಲಿಲ್ಲ. ಸೌದಿ ಅರೇಬಿಯಾದ ಮೆಕ್ಕಾಗೆ ಹಜ್ ಯಾತ್ರೆ ನಡೆಸಲು ಮುಸ್ಲಿಮರಿಗೆ ಹಣ ಕೊಡುತ್ತಿರುವ ಕೇಂದ್ರ ಸಕರ್ಾರ, ಪಾಕಿಸ್ತ್ತಾನದಲ್ಲಿರುವ ನಂಕಾನ ಸಾಹಿಬ್ನ ವಾಷರ್ಿಕ ಪರ್ವಕ್ಕೆ ತೆರಳಲು ಸಿಖ್ಖರಿಗೆ ಎಂದಾದರೂ ಸಹಾಯಧನ ನೀಡಿದೆಯೆ?

1954ರಿಂದ ಭಾರತ ಸಕರ್ಾರ ಏರ್ ಇಂಡಿಯಾ ಮೂಲಕ ಹಜ್ ವಿಶೇಷ ವಿಮಾನಸೇವೆ ನಡೆಸುತ್ತಿದೆ. ಚಿಕ್ಕ ವಿಮಾನದಿಂದ ಆರಂಭವಾದ ಈ `ಸೇವೆ' ಅನಂತರ ಬೋಯಿಂಗ್ 747 ವಿಮಾನಗಳನ್ನು ಒಳಗೊಂಡಿತು. ಮೊದಲು ಮುಂಬೈ-ಜೆದ್ದಾ ಮಾರ್ಗ ಮಾತ್ರ ಇತ್ತು. ಅನಂತರ ದೆಹಲಿಯನ್ನೂ ಯೋಜನೆಗೆ ಸೇರಿಸಲಾಯಿತು. 1984ರಲ್ಲಿ ಸೌದಿ ಅರೇಬಿಯಾದ `ಸೌದಿಯಾ' ವಿಮಾನ ಸೇವೆಯನ್ನೂ ಏರ್ ಇಂಡಿಯಾ ಜೊತೆಗೆ 50/50 ಸಮಪಾಲು ಆಧಾರದ ಮೇಲೆ ಸೇರಿಸಿಕೊಳ್ಳಲಾಗಿದೆ.

ವಿದೇಶಾಂಗ ಸಚಿವಾಲಯ ಈ ಹಜ್ ಯಾತ್ರೆಯ ಮುಖ್ಯ ಆಯೋಜಕ. ಕೇಂದ್ರೀಯ ಹಜ್ ಸಮಿತಿ ಯಾತ್ರಾ ಯೋಜನೆ ರೂಪಿಸಿ, ಅದನ್ನು ಜಾರಿಗೆ ತರುವ ಮತ್ತು ನಿರ್ವಹಿಸುವ ಅಧಿಕೃತ ಜವಾಬ್ದಾರಿ ಹೊಂದಿದೆ. ಈ ಉದ್ದೇಶಕ್ಕಾಗಿಯೇ ವಿಶೇಷ ಹಜ್ ಕಾಯ್ದೆ (2002) ರೂಪಿಸಲಾಗಿದೆ.

ವರ್ಷದಿಂದ ವರ್ಷಕ್ಕೆ ಸಕರ್ಾರಿ ಅನುದಾನ ಪಡೆದು ಕೇಂದ್ರೀಯ ಹಜ್ ಸಮಿತಿ ಮೂಲಕ ಯಾತ್ರೆ ನಡೆಸುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅವರಿಗೆ ನೀಡುವ ಸಹಾಯಧನದ ಪ್ರಮಾಣವೂ ಏರುತ್ತಲೇ ಇದೆ. 1995ರಲ್ಲಿ 31,000; 1996ರಲ್ಲಿ 50,347; 1998ರಲ್ಲಿ 63,648; 2006ರಲ್ಲಿ 99926 ಅಥವಾ ಒಂದು ಲಕ್ಷ ಮುಸ್ಲಿಮರು ಕೇಂದ್ರೀಯ ಹಜ್ ಸಮಿತಿ ಮೂಲಕ ಹಜ್ ಯಾತ್ರೆ ನಡೆಸಿದ್ದಾರೆ.

ಹಜ್ ಸಹಾಯಧನ ಎಷ್ಟು ನೀಡಲಾಗುತ್ತಿದೆ? 1991ರಲ್ಲಿ ಪ್ರತಿ ಹಜ್ ಯಾತ್ರಿಗೂ 4,056 ರೂಪಾಯಿ ಸಹಾಯಧನ ಸಕರ್ಾರದಿಂದ ಉಚಿತವಾಗಿ ಸಿಗುತ್ತಿತ್ತು. 2006ರಲ್ಲಿ ಪ್ರತಿ ಹಾಜಿಗೂ 28,000 ರೂಪಾಯಿ ನೀಡಲಾಯಿತು. ಅಂದರೆ ಬೊಕ್ಕಸದ ಒಟ್ಟು ಖಚರ್ು 280 ಕೋಟಿ ರೂಪಾಯಿ!!

ಮತೀಯ ಯಾತ್ರೆಗಳಿಗೆ ಸಕರ್ಾರಿ ಬೊಕ್ಕಸದಿಂದ ಹಣ ಕೊಡುವುದು ಸಾಂವಿದಾನಿಕವೇ ಅಲ್ಲವೇ ಎಂಬುದು ಈ ಹೊತ್ತಿನ ಮುಖ್ಯ ಪ್ರಶ್ನೆ. ತೀರ್ಥಯಾತ್ರೆ ಎನ್ನುವುದು ಜನರ ವೈಯಕ್ತಿಕ ಧಾಮರ್ಿಕ ಶ್ರದ್ಧೆಗೆ ಸಂಬಂಧಿಸಿದ ವಿಷಯವಲ್ಲವೆ? ಅದಕ್ಕಾಗಿ ಅಧಿಕೃತ ಬೊಕ್ಕಸದಿಂದ ಹಣ ನೀಡುವುದು `ಸೆಕ್ಯೂಲರ್' ಎನಿಸಿಕೊಂಡಿರುವ ಸಕರ್ಾರದ ಕರ್ತವ್ಯವೆ?

ವಾಸ್ತವವಾಗಿ ಹಜ್ ಸಹಾಯಧನ ಇಸ್ಲಾಮೀ ಮತೀಯ ಕಾನೂನಾದ `ಶರಿಯತ್'ಗೂ ವಿರುದ್ಧ. ಇತರರಿಂದ ದಾನ, ಸಹಾಯ ತೆಗೆದುಕೊಂಡು ಹಜ್ ಯಾತ್ರೆ ನಡೆಸುವಂತಿಲ್ಲ. ಆದರೆ, ``ಸಹಾಯಧನ ನೀಡುತ್ತಿರುವುದು ಯಾರೋ ಅಲ್ಲ, ಸಕರ್ಾರ. ಮುಸ್ಲಿಮರೂ ದೇಶದ ಪ್ರಜೆಗಳೇ. ಆದುದರಿಂದ ಸಕರ್ಾರದಿಂದ ಹಣ ಪಡೆಯಬಹುದು'' ಎನ್ನುವುದು `ಸಹಾಯಧನ ಬೇಕು' ಎನ್ನುವ ಮುಸ್ಲಿಂ ವರ್ಗದ ವಾದ. ಆದರೆ ಇಸ್ಲಾಮೀ ಕಾನೂನು ತಿಳಿದವರ ವಾದದಂತೆ ಹಜ್ ಸಹಾಯಧನ ಇಸ್ಲಾಂ ವಿರೋಧಿ.

ಭಾರತ ಏನು ಮಾಡಿದರೂ ಅದನ್ನು ತಾನೂ ಮಾಡಹೊರಡುವ ಪಾಕಿಸ್ತಾನದಲ್ಲೂ ಹಜ್ ಸಹಾಯಧನ ವ್ಯವಸ್ಥೆ ಇತ್ತು. ಆದರೆ ಅದು ಇಸ್ಲಾಂ ಪರವೊ ಅಥವಾ ವಿರೋಧವೋ ಎಂಬ ಪ್ರಶ್ನೆ 1997ರಲ್ಲಿ ತೀವ್ರಗೊಂಡು ಲಾಹೋರ್ ಹೈಕೋಟರ್ಿನ ನ್ಯಾಯಾಧೀಶ ತನ್ವೀರ್ ಅಹ್ಮದ್, ``ಹಜ್ ಸಹಾಯಧನ ಶರಿಯತ್ ಆದೇಶಗಳಿಗೆ ವಿರುದ್ಧ. ಅದನ್ನು ತಕ್ಷಣ ನಿಲ್ಲಿಸಬೇಕು'' ಎಂದು ಸ್ಪಷ್ಟವಾಗಿ ತೀಪರ್ಿತ್ತಿದ್ದಾರೆ.

ನಿಮಗೆ ಗೊತ್ತೆ? ಜಗತ್ತಿನ ಯಾವುದೇ ಇಸ್ಲಾಮಿಕ್ ದೇಶದ ಸಕರ್ಾರವೂ ಹಜ್ ಯಾತ್ರೆ ಮಾಡಲು ತನ್ನ ಕಡು ಬಡವ ಮುಸ್ಲಿಂ ಪ್ರಜೆಗಳಿಗೂ ಸಹಾಯಧನ ನೀಡುವುದಿಲ್ಲ! ಇಸ್ಲಾಮೀ ಸಕರ್ಾರಗಳೂ ಮಾಡದ ಕೆಲಸವನ್ನು ನಮ್ಮ `ಜಾತ್ಯತೀತ' ಸಕರ್ಾರ ಮಾಡಿಕೊಂಡು ಬರುತ್ತಿದೆ. ಮುಸ್ಲಿಮರು ತಮ್ಮ ಸ್ವಂತ ದುಡಿಮೆಯಿಂದ ಹಜ್ ಯಾತ್ರೆ ಮಾಡಿದಾಗ ಮಾತ್ರ ಅದು ಅಲ್ಲಾಹನಿಗೆ ಪ್ರಿಯವಾಗುತ್ತದೆ ಎನ್ನುವುದು ಇಸ್ಲಾಂ ಮತದ ನಿಲುವು. ಹಾಗಿದ್ದರೂ ಹಾಜಿಗಳಿಗೆ ಹೇಗಾದರೂ `ಸೇವೆ' ಸಲ್ಲಿಸಲೇಬೇಕೆಂಬ ಅಪಾರ ಶ್ರದ್ಧೆ ನಮ್ಮ ಸೆಕ್ಯೂಲರಿಸ್ಟರದು.

ಸಂವಿಧಾನದ 282ನೇ ವಿಧಿ ಸಾರ್ವಜನಿಕ ಉದ್ದೇಶಗಳಿಗೆ ಸಕರ್ಾರ ಹಣ ಖಚರ್ು ಮಾಡಬಹುದು; ಆ ಕುರಿತು ಕಾನೂನು ರೂಪಿಸಬಹುದು ಎಂದು ಅನುಮತಿ ನೀಡಿದೆ. ಆದ್ದರಿಂದ ನ್ಯಾಯಾಲಯ ಮಧ್ಯಪ್ರವೇಶ ಮಾಡುವಂತಿಲ್ಲ ಎನ್ನುವುದು ಯುಪಿಎ ಮುಖಂಡರ ವಾದ. ಆದರೆ ಇಲ್ಲಿ `ಸಾರ್ವಜನಿಕ' ಉದ್ದೇಶ ಎಂದರೆ ಏನು?

ಸಂವಿಧಾನದಲ್ಲಿ ಈ ಬಗ್ಗೆ ಸ್ಪಷ್ಟ ನಿದರ್ೇಶನ ಇಲ್ಲ. ಅದರ ಅಗತ್ಯವೂ ಇಲ್ಲ. ಸಂವಿಧಾನ ಎಲ್ಲವನ್ನೂ ವಿವರಿಸುವುದು ಅಸಾಧ್ಯ. ಅನೇಕ ವಿಷಯಗಳನ್ನು ವಿವೇಕ ಬಳಸಿ ನಿರ್ಧರಿಸಬೇಕಾಗುತ್ತದೆ. ಯಾರಾದರೂ ಒಬ್ಬ ವ್ಯಕ್ತಿ ತೀರ್ಥಯಾತ್ರೆ ಮಾಡುವುದು `ಸಾರ್ವಜನಿಕ' ಉದ್ದೇಶ ಹೇಗಾಗುತ್ತದೆ? ತೀರ್ಥಯಾತ್ರೆ ಎನ್ನುವುದು ವೈಯಕ್ತಿಕವಾದ, ತೀರಾ ಖಾಸಗಿ ವಿಷಯ. ನಾಳೆ ಜನರು `ಹನೀಮೂನ್'ಗೂ ಸಕರ್ಾರದಿಂದ ಹಣ ಕೇಳಬಹುದು! ಸಕರ್ಾರ ಕೊಡುತ್ತದೆಯೆ? ಮುಸ್ಲಿಮರ ಮತೀಯ ಶ್ರದ್ಧೆ ಹೆಚ್ಚಿಸುವ ಕೆಲಸ ಸೆಕ್ಯುಲರ್ ಸಕರ್ಾರದ್ದಲ್ಲ ಅಲ್ಲವೆ?

ಆದರೆ ಮುಸ್ಲಿಮರು ಬೇಕೇಬೇಕೆಂದು ಕೇಳಿದರೆ ನಮ್ಮ ಯುಪಿಎ ಸಕರ್ಾರ ಅವರ ಹನೀಮೂನ್ಗೂ ಹಣ ಕೊಟ್ಟೀತೇನೋ!!


ಮಾವೋ ವಾರ್ಫೇರ್ ಫಾರ್ ಡಮ್ಮಿಸ್

ಮಾವೋವಾದಿಗಳ ಗೆರಿಲ್ಲಾ ಯುದ್ಧ ಪುರಾಣಗಳ ಮಾಯಯುದ್ಧದ ಹಾಗೆ. ಇಲ್ಲಿ ಶತ್ರು ಭೌತಿಕವಾಗಿ ಮುಖಾಮುಖಿಯಾಗುವುದಿಲ್ಲ. ಆದರೂ ಪೆಟ್ಟು ಕೊಡುತ್ತಾನೆ.

ಇದು `ಮೊಬೈಲ್' ಯುದ್ಧ ತಂತ್ರ (ಮಾವೋ ಭಾಷೆಯಲ್ಲಿ `ಯುಂಡಾಂಗ್ ಝಾನ್'). ಇದರಲ್ಲಿ `ಅಧಿಕೃತ' ಸಮರಾಂಗಣವಿಲ್ಲ. ಗಡಿ ಬಳಿ ಸೈನ್ಯ ಜಮಾವಣೆಯಿಲ್ಲ. ಶತ್ರುಗಳು ಉಪಗ್ರಹಗಳಿಗೆ ಕಾಣ ಸಿಗುವುದಿಲ್ಲ. ಅವರ ಮೇಲೆ ವೈಮಾನಿಕ ದಾಳಿ ಸಾಧ್ಯವಿಲ್ಲ. ಹಠಾತ್ ದಾಳಿ ಮಾಡಿ ಜೀವಹಾನಿ, ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವುದು; ಅನಂತರ ಕಣ್ಮರೆಯಾಗುವುದು ಗೆರಿಲ್ಲಾಗಳ ಕ್ರಮ.

ನಮ್ಮ ಸುರಕ್ಷಾ ಯೋಧರು ಹಾಗಲ್ಲ. ಅವರ ನೆಲೆಗಳು ಕಣ್ಣಿಗೆ ಕಾಣುತ್ತವೆ. ಅವರು ಅಗೋಚರರಲ್ಲ, `ಮೊಬೈಲ್' ಅಲ್ಲ. ಹೀಗಾಗಿ ಗೆರಿಲ್ಲಾಗಳು ಪೊಲೀಸರ ಮೇಲೂ ದಾಳಿ ಮಾಡುವ ದಾಷ್ಟ್ರ್ಯ ತೋರುತ್ತಾರೆ.

ಇಲ್ಲಿ `ಯುದ್ಧಭೂಮಿ' ಯಾವುದಾಗಿರಬೇಕು ಎಂಬುದನ್ನು ನಿರ್ಧರಿಸುವವರೂ ಗೆರಿಲ್ಲಾಗಳೇ. ಅವರು ತಮಗೆ ಅನುಕೂಲವಾದ ಯಾವುದೋ ಕಾಡಿನಲ್ಲೋ, ಗುಡ್ಡಪ್ರದೇಶದಲ್ಲೋ ಘರ್ಷಣೆ ಸೃಷ್ಟಿಸುತ್ತಾರೆ. ಈ ಕಾಡು, ಈ ಪ್ರದೇಶ ಪೊಲೀಸರಿಗೆ ಅಪರಿಚಿತ. ಇಂತಹ ಕಡೆಗಳಲ್ಲಿ ಹೋರಾಡುವ ತರಬೇತಿಯೂ ಅನೇಕ ಯೋಧರಿಗೆ ಇರುವುದಿಲ್ಲ. ಆದರೂ ದೇಶಭಕ್ತಿಯಿಂದ, ರಾಷ್ಟ್ರನಿಷ್ಠೆಯಿಂದ ನಮ್ಮ ಸುರಕ್ಷಾ ಯೋಧರು ಹೋರಾಡುತ್ತಿದ್ದಾರೆ. ಇದು ಶ್ಲéಾಘನೀಯ.

ಎದುರಾಳಿಗಳಿಗೆ ಅನಾನುಕೂಲಕರವಾದ ಸ್ಥಳಗಳಲ್ಲಿಯೇ ಸಂಘರ್ಷ ನಡೆಯುವಂತೆ ಮಾಡುವುದು, ದುರ್ಬಲ ಗುರಿಗಳನ್ನು ಗುರುತಿಸಿ ಹಠಾತ್ ದಾಳಿ ಮಾಡಿ ಅನಂತರ ತಲೆತಪ್ಪಿಸಿಕೊಳ್ಳುವುದು ಸ್ಟ್ಯಾಂಡಡರ್್ ಗೆರಿಲ್ಲಾ ತಂತ್ರ. ಅದರ ಜೊತೆಗೆ ಪ್ರಾಪಗ್ಯಾಂಡಾ ವಾರ್, ಸೈಕಲಾಜಿಕಲ್ ವಾರ್ -ಇವೆಲ್ಲ ಗೆರಿಲ್ಲಾ ಯುದ್ಧ ಸಿದ್ಧಾಂತಗಳ ಅವಿಭಾಜ್ಯ ಅಂಗಗಳು. ಈ ಕುರಿತು ಮಾವೋ, ಚೆ ಗೆವಾರಾ, ಕಾಲರ್ೋಸ್, ಹೊ ಚಿ ಮಿನ್ಹ್ ಮೊದಲಾದವರು ವಿವರಿಸಿದ್ದಾರೆ.

`ಆನ್ ಗೆರಿಲ್ಲಾ ವಾರ್ಫೇರ್' (`ಯೂಜಿ ಝಾನ್') ಎಂಬುದು ಮಾವೋನ ಕುಖ್ಯಾತ ಪುಸ್ತಕ. ಅವನ ಪ್ರಕಾರ, ಗೆರಿಲ್ಲಾ ಸಮರಕ್ಕೆ ಮೂರು ಹಂತಗಳಿರುತ್ತವೆ. ಮೊದಲ ಹಂತದಲ್ಲಿ ಗೆರಿಲ್ಲಾಗಳು ಪ್ರಚಾರ ತಂತ್ರಗಳನ್ನು ಬಳಸಿ ಜನರ ಬೆಂಬಲ ಗಳಿಸಿಕೊಳ್ಳಲು ಪ್ರಯತ್ನಿಸಬೇಕು. ಅಂದರೆ, ನಕ್ಸಲರು ಬಡವರ ಪರ; ಶ್ರೀಮಂತರ ವಿರುದ್ಧ; ಆಥರ್ಿಕ, ಸಾಮಾಜಿಕ ಅಸಮಾನತೆ ವಿರುದ್ಧ ಅವರ ಹೋರಾಟ; ಅವರು ದೇಶದ್ರೋಹಿಗಳಲ್ಲ; ಆಳುವ ವರ್ಗದವರೇ ದೇಶದ್ರೋಹಿಗಳು; ನಕ್ಸಲರು ಅನ್ಯಾಯ ಕಂಡು ಕ್ರೋಧದಿಂದ ಗನ್ನು ಎತ್ತಿಕೊಂಡಿದ್ದಾರೆ; ಅನ್ಯಾಯ ಸರಿಪಡಿಸಿದರೆ ಶಾಂತರಾಗುತ್ತಾರೆ -ಹೀಗೆ ಸುಳ್ಳುಗಳನ್ನೇ ನಿಜ ಎಂದು ನಂಬಿಸುವ ಪ್ರಚಾರ ತಂತ್ರ ಸಾಗುತ್ತದೆ.

ಈ ಪ್ರಚಾರ ಯುದ್ಧ ಗೆರಿಲ್ಲಾಗಳು ಮಾಡಲೇಬೇಕಾದ ಕರ್ತವ್ಯ. ಅದನ್ನು ಮಾವೋ ಸ್ಪಷ್ಟವಾಗಿ ಹೇಳಿದ್ದಾನೆ. ಜನರ ಬ್ರೈನ್ವಾಷ್ ಮಾಡದೇ ಗೆರಿಲ್ಲಾಗಳಿಗೆ ಯಶಸ್ಸು ಸಾಧ್ಯವಿಲ್ಲ. ಕಡೆಯ ಪಕ್ಷ ತಾವು ನೆಲೆಸಿರುವ ಪ್ರದೇಶದ ಜನರ ತಲೆ ಕೆಡಿಸುವ ಪ್ರಯತ್ನವನ್ನಾದರೂ ಮಾವೋಗಳು ಮಾಡೇ ಮಾಡುತ್ತಾರೆ.

ಈ (ಅಪ)ಪ್ರಚಾರಕ್ಕಾಗಿ ಸಮಾಜದ ಗಣ್ಯರ, ಪ್ರಭಾವಿಗಳ ನೆರವನ್ನೂ ತೆಗೆದುಕೊಳ್ಳಲಾಗುತ್ತದೆ. ಹಲವರ ನೆರವನ್ನು ಅವರಿಗೆ ಅರಿವಿಲ್ಲದಂತೆ ಪಡೆದುಕೊಳ್ಳಲೂಬಹುದು! ಉದಾಹರಣೆಗೆ, ಜಾಗತೀಕರಣದ ವಿರುದ್ಧ ಆಂದೋಲನ ಎಂದರೆ ಹಲವರು ಬರುತ್ತಾರೆ. ಅದನ್ನೇ ನಕ್ಸಲರ ಪರವಾದ ಇಮೇಜು ಸೃಷ್ಟಿಸಲು ಬಳಸಿಕೊಂಡರೆ ಅವರಿಗೆ ತಿಳಿಯುವುದೇ ಇಲ್ಲ!!

ಪುಸ್ತಕಗಳು, ಪತ್ರಿಕೆಗಳು, ಇತರ ಮಾಧ್ಯಮ, ಹಾಡುಗಳು, ನಾಟಕಗಳು, ಬೀದಿ ನಾಟಕಗಳು, ಚಲನಚಿತ್ರಗಳು, ಜನಪ್ರಿಯ ಚಲನಚಿತ್ರ ನಟರುಗಳ ಇಮೇಜು, ವಿಶ್ವವಿದ್ಯಾಲಯಗಳು, ಹೊಲಿಗೆ ತರಬೇತಿ ಶಾಲೆಗಳು, ಮಹಿಳಾ ಸಮಾಜಗಳು, ಕಾಖರ್ಾನೆಗಳು, ಸೆಮಿನಾರುಗಳು -ಹೀಗೆ ಸಾಧ್ಯವಾಗುವ ಎಲ್ಲವನ್ನೂ ಗೆರಿಲ್ಲಾಗಳ ಅನುಕೂಲಕ್ಕಾಗಿ, ಅವರ ಬಗ್ಗೆ ಒಳ್ಳೆಯ ಇಮೇಜು ಸೃಷ್ಟಿಸಲು ಬಳಸಿಕೊಳ್ಳಲಾಗುತ್ತದೆ.

ಸಕರ್ಾರದ ಗುರಿಗಳ ಮೇಲೆ ದಾಳಿ ಮಾಡುವುದೂ (ಉದಾಹರಣೆಗೆ ಪೊಲೀಸ್ ಸ್ಟೇಷನ್) ಸಹ ಮಾವೋ ತಂತ್ರದ ಪ್ರಕಾರ ಮೊದಲ ಹಂತದ ಕೆಲಸವೇ. ಯಾವುದೋ ಪೊಲೀಸ್ ಅಧಿಕಾರಿ ಮೇಲೆ ಕೋಪವಿರುವ ಕೆಲವು ಸ್ಥಳೀಯ ಮುಗ್ಧರಿಗೆ ಇಂತಹ ಕೆಲಸಗಳಿಂದ ಖುಷಿಯಾಗುತ್ತದೆ. ಈ ಕೆಲಸ ಮಾಡಿದವರನ್ನು ಅವರು ಭಯಭಕ್ತಿಯಿಂದ ಕಾಣುತ್ತಾರೆ. ಹಾಗೆ ಸಹಾನುಭೂತಿ ಉಳ್ಳವರನ್ನು ಸೃಷ್ಟಿಸಿಕೊಳ್ಳಬೇಕು ಎಂದು ಮಾವೋ ಸ್ಪಷ್ಟ ಸೂಚನೆ ನೀಡಿದ್ದಾನೆ. ಇದು ಕೇವಲ ಒಂದು ತಂತ್ರ. ಎಷ್ಟೋ ಮುಗ್ಧ ಜನರು ತಮಗರಿವಿಲ್ಲದೆಯೇ ಈ ತಂತ್ರಗಾರರನ್ನು ನಂಬುತ್ತಾರೆ!

ಎರಡನೇ ಹಂತದಲ್ಲಿ ಸಕರ್ಾರದ ಗುರಿಗಳ ಮೇಲಿನ, ಮಿಲಿಟರಿ, ಪೊಲೀಸ್ ಗುರಿಗಳ, ಪ್ರಮುಖ ವ್ಯವಸ್ಥೆಗಳ (ಉದಾಹರಣೆಗೆ, ರೈಲ್ವೆ ಸೇತುವೆ ಇತ್ಯಾದಿ) ಮೇಲಿನ ದಾಳಿ ಇನ್ನಷ್ಟು ತೀವ್ರವಾಗುತ್ತದೆ. ಜನರ ಮೇಲೂ ದಾಳಿಗಳಾಗುತ್ತವೆ. ಮೂರನೇ ಹಂತದಲ್ಲಿ ಸಾಂಪ್ರದಾಯಿಕ, ಪೂರ್ಣ ಪ್ರಮಾಣದ ಸಮರವನ್ನೇ ನಡೆಸಿ ನಗರಗಳನ್ನು, ಭೂಪ್ರದೇಶಗಳನ್ನು ವಶಕ್ಕೆ ತೆಗೆದುಕೊಳ್ಳಬೇಕೆಂದು ಮಾವೋ ಹೇಳುತ್ತಾನೆ.

ಅವನ `ಆನ್ ಗೆರಿಲ್ಲಾ ವಾರ್ಫೇರ್' ಪುಸ್ತಕವನ್ನು ವಿಯೆಟ್ನಾಂನಲ್ಲಿ ವ್ಯಾಪಕವಾಗಿ ವಿತರಿಸಿ ಅದರ ತಂತ್ರಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಯಿತು. ಅಲ್ಲಿನ ವೋ ಗುಯೆನ್ ಜಿಯಾಪ್ ಸ್ಥಾಪಿಸಿರುವ `ಪೀಪಲ್ಸ್ ವಾರ್, ಪೀಪಲ್ಸ್ ಆಮರ್ಿ' ಸಂಘಟನೆ ಮಾವೋ ತಂತ್ರಗಳನ್ನು ವ್ಯಾಪಕವಾಗಿ, ಸೂಕ್ತ ಸಾಂಧಭರ್ಿಕ ಮಾಪರ್ಾಡಿನೊಡನೆ, ಈಗಲೂ ಬಳಸಿಕೊಳ್ಳುತ್ತಿದೆ.

ಕೆಲವು ಮಾವೋ ಬಣಗಳು ಮಾವೋ ತಂತ್ರಗಳಲ್ಲಿ ತಮ್ಮ ಸಂದರ್ಭ ಹಾಗೂ ಚಿಂತನೆಗೆ ತಕ್ಕ ಹಾಗೆ ಕೆಲವು ಬದಲಾವಣೆ ಮಾಡಿಕೊಳ್ಳುವುದು ಮಾಮೂಲು.

ಮಾವೋ ಗೆರಿಲ್ಲಾಗಳಲ್ಲಿ ಪ್ರಧಾನ ಪಡೆ -ಮೇಯ್ನ್ ಫೋಸರ್್ ರೆಗ್ಯುಲರ್ಸ್; ಪ್ರ್ರಾದೇಶಿಕ ಹೋರಾಟಗಾರರು -ರೀಜನಲ್ ಫೈಟರ್ಸ್; ಅರೆಕಾಲಿಕ ಗೆರಿಲ್ಲಾಗಳು -ಪಾಟರ್್ ಟೈಮ್ ಗೆರಿಲ್ಲಾಗಳು ಎಂಬ ಮೂರು ವಿಧವಾದ ಉಗ್ರಪಡೆಗಳಿವೆ. ಮೂರು ಹಂತದ, ಮೂರು ವಿಧದ ಪಡೆಗಳ, ಮೂರು ಪದರಗಳ ಸಮರ ತಂತ್ರ ಇದು.

ಜನರ ಜೊತೆಗಿನ ಸಂಬಂಧ ಹೇಗಿರಬೇಕು ಎಂಬುದನ್ನು ಗೆರಿಲ್ಲಾ ಸಿದ್ಧಾಂತವೀರರೆಲ್ಲರೂ ವಿವರಿಸಿದ್ದಾರೆ. ಅಮೆರಿಕ-ವಿಯೆಟ್ನಾಂ ಯುದ್ಧ ಸಮಯದಲ್ಲಿ ಗೆರಿಲ್ಲಾಗಳಿಗೆ ಜನರ ಅಪಾರ ಬೆಂಬಲ ದೊರಕಿತು. ಆಶ್ರಯ, ಆಹಾರ ಎಲ್ಲವೂ ಲಭಿಸಿದವು. ಜನರ ಬೆಂಬಲ ಇಲ್ಲದ ಕಡೆಗಳಲ್ಲಿ ಅದನ್ನು ಸೃಷ್ಟಿಸಿಕೊಳ್ಳಲು ಮಾವೋಗಳು ಹೆಣಗುತ್ತಾರೆ. ಏಕೆಂದರೆ ಸ್ಥಳಿಯ ಜನರಿಂದ ಆಶ್ರಯ, ಆಹಾರ ಸಿಗದೇ ಹೋದರೆ ಅವರ ಆಟ ನಡೆಯುವುದು ಬಹಳ ಕಷ್ಟ. ಹೀಗಾಗಿ ಜನರ ಬೆಂಬಲ ಪಡೆಯಲು ತಾವು `ಜನಪರ' ಎಂಬ ಸೋಗು, ನಾಟಕ ಆಡಬೇಕಾಗುತ್ತದೆ. `ಜನರ ವಿಮೋಚನೆಗಾಗಿಯೇ' ತಮ್ಮ ಹೋರಾಟ ಎಂಬ ಆಟ ಕಟ್ಟಬೇಕಾಗುತ್ತದೆ. ಅದು ಫಲಕೊಡದಿದ್ದಾಗ ಜನರನ್ನು ಹೆದರಿಸಿ ಅಂಕೆಯಲ್ಲಿಕೊಂಡು ಸಹಕಾರ ಪಡೆಯುವ ಯತ್ನಗಳೂ ನಡೆಯುತ್ತವೆ. ಇವೆಲ್ಲಾ ಮಾವೋಗಳ ಯೋಜನಾಬದ್ಧ ತಂತ್ರಗಳು.

ಮಾವೋ ಪ್ರಕಾರ, ಗೆರಿಲ್ಲಾಗಳು ತಮ್ಮ ಸಶಸ್ತ್ರ ಚಟುವಟಿಕೆಗಳನ್ನು ಗ್ರಾಮೀಣ, ಗುಡ್ಡಗಾಡು ಪ್ರದೇಶಗಳಲ್ಲೇ ಆರಂಭಿಸಬೇಕು. ಆದರೆ ನಗರ, ಪಟ್ಟಣಗಳಲ್ಲಿ ಗಣ್ಯ, ಬುದ್ಧಿಜೀವಿ ಬೆಂಬಲಿಗರು ಇರುತ್ತಾರೆ. ಒಂದು ಕಡೆ ಗನ್ನುಗಳು, ಇನ್ನೊಂದು ಕಡೆ ಸ್ಲೋಗನ್ನುಗಳು ಏಕಕಾಲಕ್ಕೆ ಮೊರೆಯುತ್ತವೆ!!

ಮಾವೋಗಳ ದಮನಕ್ಕೆ ಅವರ ಗನ್ನುಗಳ ಜೊತೆಗೆ ಅವರ ಸ್ಲೋಗನ್ನುಗಳನ್ನೂ ಸಮರ್ಥವಾಗಿ ಎದುರಿಸಬೇಕು. ಇದು ಎಲ್ಲ ಭಯೋತ್ಪಾದಕರ ವಿಷಯದಲ್ಲೂ ಅನ್ವಯಿಸಬೇಕಾದ ಮಾತು. ಉಗ್ರರ ದಮನವಾಗಬೇಕು; ಪ್ರಚಾರಯುದ್ಧದಲ್ಲಿಯೂ ಅವರನ್ನು ಸೋಲಿಸಬೇಕು; ಗದ್ದರ್ನಂತಹ ಉಗ್ರವಾದಿ ಪ್ರಚಾರಕರನ್ನು ಸರಿಯಾಗಿ, ದಕ್ಷವಾಗಿ ಸೂಕ್ತರೀತಿಯಲ್ಲಿ ನಿಭಾಯಿಸಬೇಕು. ಪರೋಕ್ಷ್ಷ ಮಾರ್ಗಗಳಿಂದ ಉಗ್ರರ ಪರವಾಗಿ ಕೆಲಸಮಾಡುವ ಪ್ರೊಫೆಸರುಗಳು ಹಾಗೂ ಇತರ ಬುದ್ಧಿಜೀವಿಗಳನ್ನು ಮಟ್ಟಹಾಕುವ ತಂತ್ರಗಳನ್ನೂ ಸಕರ್ಾರ ರೂಪಿಸಬೇಕು.

ಆದರೆ ಗದ್ದರ್ಗೆ ನಮ್ಮ ಮುರುಘರಾಜೇಂದ್ರ ಮಠಾಧಿಪತಿ `ಬಸವಶ್ರೀ' ಪ್ರಶಸಿ ಕೊಡುತ್ತಾರೆ! ಮಾವೋ ಉಗ್ರರ ಬೆಂಬಲಿಗ ಬುಧ್ಧಿಜೀವಿಗಳ ಪರವಾಗಿ ರಾಜಕಾರಣಿಗಳು ಹೇಳಿಕೆ ನೀಡುತ್ತಾರೆೆ! ವಾಸ್ತವ ಹೇಗಿದೆ ಎಂಬುದನ್ನು ಅರಿಯಲು ಕನರ್ಾಟಕದ ಈ ಎರಡು ಉದಾಹರಣೆಗಳು ಸಾಕು.

ರಾಜಕಾರಣಿಗಳ, ಸಮುದಾಯಗಳ ಮತ್ತು ಸಮಾಜದ ಪ್ರಮುಖರ ಬೆಂಬಲ ಅಥವಾ ನಿರ್ಲಕ್ಷ್ಯಗಳಿಲ್ಲದೇ ಭಯೋತ್ಪಾದನೆ ಬೇರೂರುವುದು ಕಷ್ಟ. ಇದನ್ನು ಭಯೋತ್ಪಾದಕರು ಚೆನ್ನಾಗಿ ಅರಿತಿದ್ದಾರೆ. ಮತದ ನಾಮಬಲ ಇರದ ಮಾವೋಗಳು ಜನಬೆಂಬಲ ಗಳಿಸಲು `ಜನಪರ'ರಾಗುತ್ತಾರೆ! ತಮ್ಮ ಭಯೋತ್ಪಾದನೆಯನ್ನು `ಪೀಪಲ್ಸ್ ವಾರ್' ಎನ್ನುತ್ತಾರೆ. ಮಾವೋ ಜೆಡಾಂಗ್ 1920ರ ಮತ್ತು 30ರ ದಶಕದಲ್ಲಿ ಗ್ರಾಮೀಣ ಚೀನಾದಲ್ಲಿ ತನ್ನ `ಪ್ರೊಟ್ರ್ಯಾಕ್ಟೆಡ್ ಪೀಪಲ್ಸ್ ವಾರ್' ತಂತ್ರಗಳನ್ನು ಅನುಸರಿಸಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾದ. ರೈತ ಸಮುದಾಯವನ್ನು ತನ್ನ ರಣತಂತ್ರದ ಸಾಧನವಾಗಿ ಬಳಸಿಕೊಂಡ ಪರಿಣಾಮವಾಗಿ ಸಿಸಿಪಿ ಚೀನಾದ ಅಧಿಕಾರ ಸೂತ್ರವನ್ನು ತನ್ನ ಕೈವಶ ಮಾಡಿಕೊಂಡಿತು.

``ರಾಜಕೀಯ ಅಧಿಕಾರ ಸಿಗುವುದೇ ಗನ್ ಬ್ಯಾರೆಲ್ಲುಗಳ ಮೂಲಕ'' ಎಂಬುದು ಮಾವೋನ (ಕು)ಪ್ರಸಿದ್ಧ ಹೇಳಿಕೆ. ಅವನ ಸಿದ್ಧಾಂತಗಳ ಕಿರುಸಂಗ್ರಹವಾದ `ಲಿಟಲ್ ರೆಡ್ ಬುಕ್' ಅನ್ನು ಚೀನಾದಲ್ಲಿ ಶಿಕ್ಷಣದ ಅಂಗವಾಗಿ ಎಲ್ಲರೂ ಕಡ್ಡಾಯವಾಗಿ ಓದಲೇಬೇಕು. ಸೌದಿ ಅರೇಬಿಯಾದ ಮದರಸಾಗಳಿಗೂ ಚೀನಾದ ಕಮ್ಯೂನಿಸ್ಟ್ ಮದರಸಾಗಳಿಗೂ ನೀತಿರಚನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅವನ `ಗೆರಿಲ್ಲಾ ವಾರ್ಫೇರ್' ಪುಸ್ತಕವನ್ನು ಎಲ್ಲ ಮಾವೋ ಉಗ್ರರೂ ಓದಿರುತ್ತಾರೆ. ಅವರನ್ನು ದಮನಿಸಬೇಕಾದವರೂ ಅದನ್ನು ಓದಬೇಕಾಗುತ್ತದೆ.

ನೆನಪಿಡಿ, ನಕ್ಸಲೀಯರು ಬಡವರನ್ನು ಕಾಪಾಡಲು ಆಕಾಶದಿಂದ ಉದುರಿಬಿದ್ದವರಲ್ಲ. ಸೋವಿಯತ್ ಮತ್ತು ಚೀನಾಗಳ ಹಣಾಹಣಿಯ ಫಲಿತವಾಗಿ ಭಾರತದ ಕಮ್ಯೂನಿಸ್ಟ್ ಪಾಳೆಯದಲ್ಲಿ ಉಂಟಾದ ಒಡಕಿನ ಫಲವಾಗಿ ಉದಿಸಿದ ಚೀನಾ ಬೀಜಾಸುರರು ಅವರು. ವೈಚಾರಿಕವಾಗಿ ಅವರು ವಿವಿಧ ಮಾವೋ ಬಣಗಳನ್ನು ಪ್ರತಿನಿಧಿಸುತ್ತಾರೆ.

ಆರಂಭದಲ್ಲಿ ಪಶ್ಚಿಮ ಬಂಗಾಲ ನಕ್ಸಲ್ ಚಟುವಟಿಕೆಗಳ ಕೇಂದ್ರವಾಗಿತ್ತು. ಈಗ ನಕ್ಸಲರು ಭಾರತದ 18 ರಾಜ್ಯಗಳ 180 ಜಿಲ್ಲೆಗಳನ್ನು ವ್ಯಾಪಿಸಿದ್ದಾರೆ. 15000-20000 ಬಲದ ಉಗ್ರಪಡೆ ಹೊಂದಿದ್ದಾರೆ. ಭಾರತದ ಅರಣ್ಯಗಳಲ್ಲಿ ಐದನೇ ಒಂದು ಭಾಗ ನಕ್ಸಲ್ ನಿಯಂತ್ರಣದಲ್ಲಿದೆ. ಕಮ್ಯೂನಿಸ್ಟ್ ಪಾಟರ್ಿ ಆಫ್ ಇಂಡಿಯಾ -ಮಾಕ್ಸರ್ಿಸ್ಟ್,ಲೆನಿನಿಸ್ಟ್ (ಸಿಪಿಐ-ಎಂಎಲ್), ಪೀಪಲ್ಸ್ ವಾರ್ ಗ್ರೂಪ್ (ಪಿಡಬ್ಲೂಜಿ), ಮಾವೋಯಿಸ್ಟ್ ಕಮ್ಯೂನಿಸ್ಟ್ ಸೆಂಟರ್ (ಎಂಸಿಸಿ) ಗಳು 2004ರ ಸೆಪ್ಟೆಂಬರ್ 21ರಂದು ವಿಲೀನವಾಗಿ ಕಮ್ಯೂನಿಸ್ಟ್ ಪಾಟರ್ಿ ಆಫ್ ಇಂಡಿಯಾ (ಮಾವೋಯಿಸ್ಟ್) ಎಂಬ ಹೆಸರಿನಲ್ಲಿ ಸಕ್ರಿಯವಾಗಿ (ಇದು ನಿಷೇಧಿತ ಸಂಘಟನೆ) `ಪ್ರೊಟ್ರ್ಯಾಕ್ಟೆಡ್ ವಾರ್' ಮುಂದುವರಿಸಿವೆ. ಸಿಪಿಐ (ಮಾವೋ) ಉಗ್ರರು ಸಾವಿರಾರು ಸಂಖ್ಯೆಯಲ್ಲಿ ದಾಳಿ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ (ಉದಾ: ಜೆಹಾನಾಬಾದ್ ಜೈಲು ದಾಳಿ ಪ್ರಕರಣ). ಈ ಸಂಘಟನೆ `ದೇಶದ ಅತಿದೊಡ್ಡ ಆಂತರಿಕ ಸುರಕ್ಷಾ ಆತಂಕ'ವಾಗಿ ಮಾರ್ಪಟ್ಟಿದೆ ಎಂದು ಸ್ವತಃ `ಶಾಂತಿದೂತ' ಪ್ರಧಾನಿ ಮನಮೋಹನ್ ಸಿಂಗ್ ಒಪ್ಪಿಕೊಂಡಿದ್ದಾರೆ.

ಆದರೂ ನಕ್ಸಲರು ಭಯೋತ್ಪಾದಕರೇ ಅಲ್ಲವೇ ಎಂಬ ಅರ್ಥಹೀನ (ಹಾಗೂ ಅಪಾಯಕಾರಿ) ಚಚರ್ೆಗಳು ಇನ್ನೂ ಜಾರಿಯಲ್ಲಿವೆ! ಅನೇಕ ರಾಜಕೀಯ ಪ್ರಮುಖರುಗಳೇ ಗೊಂದಲಮಯ ಹೇಳಿಕೆ ನೀಡುತ್ತಾ ಜನರನ್ನು ದಾರಿತಪ್ಪಿಸುತ್ತಿದ್ದಾರೆ.

ಕೇರಳದಿಂದ ನೇಪಾಳದವರೆಗೆ ಭೂಭಾಗಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು `ರೆಡ್ ಕಾರಿಡಾರ್' (ಕೆಂಪು ಪಟ್ಟಿ) ಅಥವಾ `ಕಾಂಪ್ಯಾಕ್ಟ್ ರೆವೆಲ್ಯೂಷನರಿ ಝೋನ್' ಸ್ಥಾಪಿಸುವುದು; ಅನಂತರ ಅದನ್ನು ಸಂಪೂರ್ಣವಾಗಿ ಗೆದ್ದುಕೊಳ್ಳುವುದು ಮಾವೋ ಉಗ್ರರಿಗೆ ಪ್ರಿಯವಾದ ಯೋಜನೆ. ಈ ಕೆಂಪು ಪಟ್ಟಿಯಡಿ ಬಿಹಾರ, ಜಾರ್ಖಂಡ್, ಒರಿಸ್ಸಾ, ಮಧ್ಯಪ್ರದೇಶ, ಆಂಧ್ರ್ರಪ್ರದೇಶ, ಕನರ್ಾಟಕ, ತಮಿಳುನಾಡು ಹಾಗೂ ಕೇರಳಗಳು ಬರುತ್ತವೆ.

ಆದರೆ ಈಗ ಮಾವೋಗಳ ಈ ರಣತಂತ್ರ ಬದಲಾಗಿದೆ ಎನ್ನಲಾಗುತ್ತಿದೆ. ಕೆಂಪುಪಟ್ಟಿಗೆ ಬದಲು ಇಡೀ ಭಾರತವನ್ನು ಹಂತಹಂತವಾಗಿ ಆವರಿಸಿಕೊಂಡು ಆಕ್ರಮಿಸುವ ಯೋಜನೆ ರೂಪಿಸಲಾಗಿದೆ ಎನ್ನಲಾಗುತ್ತಿದೆ. ನಗರ ಪ್ರದೇಶಗಳ ಮಧ್ಯಮ ವರ್ಗದ ಜನರಿಗೂ ಮಂಕುಬೂದಿ ಎರಚಿ ನಗರಗಳಲ್ಲೂ ಬೇರುಗಳನ್ನು ಹುಡುಕುವತ್ತ ತಾವು ಗಮನ ಹರಿಸಿರುವುದಾಗಿ ಸಿಪಿಐ (ಮಾವೋ) ಮುಖ್ಯಸ್ಥ ಗಣಪತಿ ಸ್ವತಃ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. `ನಾವು ಹಿಂಸಾತ್ಮಕ ಹಾಗೂ ಅಹಿಂಸಾತ್ಮಕ ಎರಡೂ ರೀತಿಯ ಹೋರಾಟ ಮಾಡುತ್ತೇವೆ' ಎಂದು ಆತ ಹೇಳಿದ್ದಾನೆ.

ಫೆಬ್ರವರಿ 2007ರಲ್ಲಿ ನಡೆದ ಮಾವೋವಾದಿಗಳ ಒಂಬತ್ತನೇ ಮಹಾಧಿವೇಶನ ಸಂದರ್ಭದ ವರದಿಗಳ ಪ್ರಕಾರ, ಹೊಸ ಮಾವೋ ರಣತಂತ್ರಗಳು ಯೋಜನಾ ಹಂತವನ್ನು ದಾಟಿ ಅನುಷ್ಠಾನದ ಹಂತವನ್ನು ಎಂದೋ ತಲುಪಿವೆ. ಮಾವೋಗಳು ನೇಪಾಳದಲ್ಲಿ ಕಂಡ ಯಶಸ್ಸು ಅನೇಕ ಹೊಸ ಕ್ರಮಗಳಿಗೆ ಚಾಲನೆ ನೀಡಿದೆ. ``ಭಾರತ ಸಕರ್ಾರದ ಶಕ್ತಿ ಹಾಗೂ ದೌರ್ಬಲ್ಯಗಳೆರಡನ್ನೂ ಆಳವಾಗಿ ಅಧ್ಯಯನ ಮಾಡಿದ್ದೇವೆ. ಎಂತಹ ಶಕ್ತಿಶಾಲಿ ಶತ್ರುವಿಗೂ ಕೆಲವು ದುರ್ಬಲ ಅಂಶಗಳು ಇದ್ದೇ ಇರುತ್ತವೆ. ಅವುಗಳನ್ನು ನಾವು ಸರಿಯಾಗಿ ಗುರುತಿಸಿ ಭಾರಿ ಹೊಡೆತಗಳನ್ನು ಕೊಟ್ಟರೆ ವಿಜಯ ಸಿಕ್ಕೇ ಸಿಗುತ್ತದೆ'' ಎಂದು ಗಣಪತಿ ಹೇಳಿರುವುದಾಗಿ ಉದ್ಧರಿಸಲಾಗಿದೆ. ಈಗಾಗಲೇ ಮಾವೋ ಉಗ್ರರು ಭಾರಿ ದಾಳಿಯ ಸಂಪ್ರದಾಯ ಆರಂಭಿಸಿದ್ದಾರೆ. ಇದು ನೇಪಾಳದ ಮಾದರಿಯ ಅನುಕರಣೆ. 2004ರಲ್ಲಿ ಒರಿಸ್ಸಾದ ಕೋರಾಪಟ್ನಲ್ಲಿ ಭಾರಿ ದಾಳಿ ನಡೆಯಿತು. 2005ರಲ್ಲಿ 3 ದಾಳಿ ನಡೆಯಿತು. 2006ರಲ್ಲಿ 9 ದಾಳಿ ನಡೆದಿದೆ. ಜೂನ್ 2007ರ ಹೊತ್ತಿಗೆ 12 ಭಾರಿ ದಾಳಿಗಳು ನಡೆದಿವೆ. ಇದು ಹೊಸ ಮಾವೋ ಟ್ರೆಂಡ್. ಇವನ್ನೆಲ್ಲ ಗೃಹ ಸಚಿವಾಲಯ ಜೂನ್ 28, 2007ರಲ್ಲಿ ಸಿದ್ಧಪಡಿಸಿರುವ ವರದಿಯಲ್ಲಿಯೇ ವಿಶ್ಲೇಷಿಸಲಾಗಿದೆ.

ವಾಸ್ತವ ನಮಗೆ ಗೊತ್ತೇ ಇದೆ. ಸುರಕ್ಷಾ ತಜ್ಷರೇನೋ ವರದಿ ಸಿದ್ಧಪಡಿಸುತ್ತಾರೆ. ಆದರೆ ರಾಜಕಾರಣಿಗಳು ಅದರ ಮೇಲೆ ಭದ್ರವಾಗಿ, ಅಲ್ಲಾಡದೇ ಕುಳಿತುಬಿಡುತ್ತಾರೆ.

ಇಂತಹ ಮುಖಂಡರಿರುವ ದೇಶಕ್ಕೆ ಬೇರೆ ಶತ್ರುಗಳೇಕೆ ಬೇಕು?

ಇವರೇ ಸಾಕು.

ಸೋಮವಾರ, ಮಾರ್ಚ್ 30, 2009

`ಮುಜಾಹಿದ್ದೀನ್' ತಾಳಕ್ಕೆ ವಿಶ್ವಸಂಸ್ಥೆಯ ಹೆಜ್ಜೆ!!

ಮಹತ್ವದ ಘಟನೆಯೊಂದು ಸದ್ದಿಲ್ಲದೇ ನಡೆಯುತ್ತಿದೆ. ಅದು ನಡೆಯುತ್ತಿರುವ ಸ್ಥಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆ. ಅದೇನಾದರೂ ಯಶಸ್ವಿಯಾದರೆ ಜಗತ್ತಿನ ವಿವೇಚನಾಶೀಲ ಜನರನೇಕರು ಹಿಂದೆಂದೂ ಕಾಣದ ರೀತಿಯಲ್ಲಿ ಮಾನವಹಕ್ಕು ಕಳೆದುಕೊಳ್ಳುತ್ತಾರೆ. ಅನೇಕ ದೇಶಗಳ ಜನರ ಬೌದ್ಧಿಕ ಚಿಂತನೆಯ ಹಕ್ಕು ಮೊಟಕುಗೊಳ್ಳುತ್ತದೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ. ಮನಃಸಾಕ್ಷಿ ಮೂಲೆಗುಂಪಾಗುತ್ತದೆ.

ಆದರೂ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವೀರರು ತುಟಿ ಎರಡು ಮಾಡುತ್ತಿಲ್ಲ. ಕಾರಣ ಅದು ನಡೆಯುತ್ತಿರುವುದು ಇಸ್ಲಾಮಿನ ಹೆಸರಿನಲ್ಲಿ. ಅದನ್ನು ನಡೆಸುತ್ತಿರುವುದು ಆರ್ಗನೈಸೇಷನನ್ ಆಫ್ ದಿ ಇಸ್ಲಾಮಿಕ್ ಕಾನ್ಫರೆನ್ಸ್ (ಒವೈಸಿ) - 56 ಮುಸ್ಲಿಂ ದೇಶಗಳ ಒಕ್ಕೂಟ. ನಮ್ಮ `ಸೆಕ್ಯೂಲರ್'ಗಳು ಓವೈಸಿಯನ್ನು ಎದುರಿಸಿ ನಿಲ್ಲುವುದು ಎಲ್ಲಾದರೂ ಉಂಟೆ?

ಯಾವುದು ಆ ಮಹಾ ಘಟನೆ? ಮೊದಲು ಒಂದಿಷ್ಟು ಹಿನ್ನೆಲೆಯ ಮೂಲಕ ವಿಷಯಕ್ಕೆ ಬರೋಣ.

1979ರ ಇರಾನ್ ಇಸ್ಲಾಮೀ ಕ್ರಾಂತಿಯ ನಂತರ ಜಗತ್ತಿನಲ್ಲಿ ಇಸ್ಲಾಮೀ ಭಯೋತ್ಪಾದನೆ ಮೊದಲಿಗಿಂತಲೂ ಬಹಳ ತೀವ್ರಗೊಂಡಿದ್ದು ಹಾಗೂ ಕ್ರಮೇಣ ಜಾಗತಿಕ ಮಟ್ಟದ ಜಿಹಾದ್ಗಳು ಘೊಷಣೆಯಾಗಿದ್ದು ಬಹಳ ಜನರಿಗೆ ಗೊತ್ತಿರುವ ವಿಷಯವೇ. ಆದರೆ ಈ ಬೆಳವಣಿಗೆಗಳ ಫಲಿತವಾಗಿ ಇಸ್ಲಾಮ್ ಮತವನ್ನು ಸಾರ್ವತ್ರಿಕ ವಿಮಶರ್ೆಗೆ ಒಳಪಡಿಸುವ ಬೆಳವಣಿಗೆಳೂ ಆದವು. ಪರಿಣಾಮವಾಗಿ ಇಸ್ಲಾಮ್ ಚಚರ್ಾವಸ್ತುವಾಯಿತು. ಇದು ಮೂಲಭೂತವಾದಿಗಳಿಗೆ ನುಂಗಲಾರದ ತುತ್ತಾಯಿತು.

`ಇಸ್ಲಾಮ್ ಎಂದೂ ಸಹ ಚಚರ್ಿಸಲ್ಪಡಕೂಡದು. ಅದನ್ನು ಸಮಗ್ರವಾಗಿ ಎಲ್ಲರೂ ಸ್ವೀಕರಿಸಬೇಕು. ಉಲೇಮಾಗಳು, ಮೌಲಾನಾಗಳು ಕಾಲಕಾಲಕ್ಕೆ ತಿಳಿಸುವ ಹಾಗೆ ನಡೆದುಕೊಳ್ಳುತ್ತಾ ಹೋಗಬೇಕು' ಎಂಬುದು ಮೂಲಭೂತವಾದಿಗಳ ಲಾಗಾಯ್ತಿನ ನಿಲುವು. ಮಧ್ಯಯುಗದಲ್ಲಿ ಮತ್ತು ತೀರಾ ಈಚಿನವರೆಗೂ ಈ ರೀತಿ ಮಾಡುವಲ್ಲಿ ಈ ಮುಜಾಹಿದ್ದೀನ್ಗಳು (ಮತದ ಪರವಾದ ಹೋರಾಟಗಾರರು, ಸೈನಿಕರು) ಯಶಸ್ವಿಯಾಗಿದ್ದರು. ಔರಂಗಜೇಬನ ಅಟ್ಟಹಾಸದ ನಡುವೆಯೂ ಇಸ್ಲಾಮ್ ವಿಮಶರ್ಾ ವಸ್ತುವಾಗಲೇ ಇಲ್ಲ, ಎಂಬುದು ಗಮನಾರ್ಹ.

ಆದರೆ ಇದು ಮಾಹಿತಿ ಯುಗ. ಜೊತೆಗೆ ವಿವೇಚನಾಶೀಲತೆಯ ಕ್ರಾಂತಿ 19-20ನೇ ಶತಮಾನಗಳಲ್ಲಿ ಆಗಿಹೋಗಿದೆ. ಹಿಂದೂ ಧರ್ಮ, ಕ್ರೈಸ್ತ ಮತ - ಎಲ್ಲವೂ ವಿಚಾರವಿಮಶರ್ೆಗೆ ಒಳಗಾಗಿವೆ, ಆಗುತ್ತಲೇ ಇವೆ. ಇಂತಹ ವೈಚಾರಿಕತೆಯ ಫಲಿತವಾಗಿ ನಮ್ಮಲ್ಲಿ ಸಾಕಷ್ಟು ಸುಧಾರಣೆಗಳೂ ಆಗುತ್ತಿವೆ.

ಈಗ ವಿಚಾರ-ವಿಮಶರ್ೆಗಳನ್ನು ತಡೆಯುವುದು ಅಸಾಧ್ಯ. ಒಂದೆಡೆ ಜಿಹಾದಿ ಗುಂಪುಗಳು ಬಹಿರಂಗವಾಗಿ ಇಸ್ಲಾಮಿನ ಆಡಳಿತ ಸ್ಥಾಪನೆಗಾಗಿ ಕರೆಕೊಡುತ್ತಿದ್ದರೆ, ಈ ಮಾಹಿತಿ ಯುಗದಲ್ಲಿ ಜನರು `ಹೌದಾ, ಇಸ್ಲಾಮಿನಲ್ಲಿ ಹಾಗೆ ಹೇಳಲಾಗಿದೆಯಾ?' ಎಂಬ ಕುತೂಹಲದಿಂದ ಅಧ್ಯಯನ ಮಾಡೇ ಮಾಡುತ್ತಾರೆ. ತಮ್ಮ ಅಭಿಪ್ರಾಯ ಹೇಳೇಹೇಳುತ್ತಾರೆ. ವಾಸ್ತವವಾಗಿ ನಡೆಯುತ್ತಿರುವುದು ಇದೇ.

ಆದರೆ ಚಚರ್್ಗಳಿಗೆ ಮತ್ತು ಮೌಲಾನಾಗಳಿಗೆ ತಮ್ಮ ಮತಗಳ ವಿಚಾರ-ವಿಮಶರ್ೆ ಬೇಕಿಲ್ಲ. ಮತಗಳ ಸಂಪೂರ್ಣ ಹೂರಣ ಬಟಾಬಯಲಾಗಿ ಚಚರ್ಿಸಲ್ಪಡುತ್ತಿದ್ದರೆ ಅವರಿಗೇನು ಕಿಮ್ಮತ್ತು ಸಿಗುತ್ತದೆ? ಯಾವಾಗ ಮತೀಯ ವಿಚಾರವಿಮಶರ್ೆ ತೀವ್ರವಾಯಿತೋ ಆಗ `ಇಸ್ಲಾಮ್ ಮತಕ್ಕೂ ಜಿಹಾದಿ ಗುಂಪುಗಳ ಕ್ರಿಯೆಗಳಿಗೂ ಸಂಬಂಧವಿಲ್ಲ' ಎಂಬ ಪ್ರಚಾರವನ್ನು ನಡೆಸಬೇಕಾದ ಅನಿವಾರ್ಯತೆ ಕೆಲವರಿಗೆ ಉಂಟಾಯಿತು. `ಹಾಗಾದರೆ ಅದು ಹೇಗೆ? ಇಲ್ಲಿ ಹೀಗೆ ಹೇಳಿದೆಯಲ್ಲ? - ಎಂಬ ಪ್ರಶ್ನೆಗಳೂ ಎದುರಾದವು. ಎಷ್ಟೋ ಧೈರ್ಯವಂತ ಸ್ವಮತೀಯರೂ ಸುಧಾರಣೆಯ ಕುರಿತು ಬಹಿರಂಗವಾಗಿ ಮಾತನಾಡತೊಡಗಿದರು.

ಸಮಸ್ಯೆ ಶುರುವಾಗಿದ್ದೇ ಇಲ್ಲಿ. ಮತಧರ್ಮಗಳನ್ನು ಕುರಿತ, ಅದರಲ್ಲೂ ಇಸ್ಲಾಮ್ ಮತವನ್ನು ಕುರಿತ ವಿಚಾರವಿಮಶರ್ೆಗಳಿಗೆ ಹೇಗಾದರೂ ಮಂಗಳ ಹಾಡಬೇಕು ಎಂಬ ಪ್ರಯತ್ನವನ್ನು ಓವೈಸಿ 1999ರಲ್ಲಿ ಆರಂಭಿಸಿತು. `ಇಸ್ಲಾಮಿನ ಅವಹೇಳನ ನಡೆಯುತ್ತಿದೆ' ಎಂದು 56 ದೇಶಗಳು ಒಟ್ಟಾಗಿ ಬೊಬ್ಬೆಯಿಟ್ಟವು. ಈಗ ನಿಷ್ಕ್ರಿಯವಾಗಿರುವ ಮಾವನಹಕ್ಕು ಆಯೋಗದಲ್ಲಿ ಪ್ರತಿ ವರ್ಷವೂ ಇಸ್ಲಾಮಿನ ಪರವಾಗಿ ನಿರ್ಣಯಗಳನ್ನು ಮಂಡಿಸಿ ಅನುಮೋದಿಸಲಾಯಿತು. ಈ ಪ್ರಕ್ರಿಯೆ 2001ರ ಸೆಪ್ಟೆಂಬರ್ 11ರ ಭಯೋತ್ಪಾದಕ ಕೃತ್ಯದ ನಂತರದ ಸ್ವಲ್ಪ ಕಳೆಗುಂದಿತು. ಆದರೆ 2005ರ ಡ್ಯಾನಿಷ್ ಪತ್ರಿಕೆಯ ಮುಹಮ್ಮದ್ ವ್ಯಂಗ್ಯಚಿತ್ರಗಳ ಗಲಾಟೆಯ ನಂತರ ಮತ್ತೆ ಹೊಸ ಹುರುಪು ಪಡೆಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ಲಾಮ್ ಕುರಿತ ವಿಮಶರ್ೆಗಳಿಗೆ ಸಂಪೂರ್ಣ ನಿಷೇಧ ಹಾಕಿಸಲು ರಾಜತಾಂತ್ರಿಕ ಚಟುವಟಿಕೆಗಳು ಬಿರುಸುಗೊಂಡವು. ಈ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಜನರಲ್ ಅಸೆಂಬ್ಲಿ) ನಿರ್ಣಯಗಳನ್ನು ಮಂಡಿಸಲಾಯಿತು.

`ಜಗತ್ತಿನಲ್ಲಿ ಮತ-ಧರ್ಮಗಳ ನಿಂದನೆ, ಅವಹೇಳನ ತೀವ್ರವಾಗುತ್ತಿದೆ. ಅದನ್ನು ತಡೆಗಟ್ಟಬೇಕು. ಈ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧ ಹಾಕಬೇಕು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಈ ಕುರಿತು ಕಾನೂನುಗಳನ್ನು ಸೃಷ್ಟಿಸಲು ಅವುಗಳ ಮೇಲೆ ಒತ್ತಡ ಹಾಕಬೇಕು' ಎಂಬ ಧ್ವನಿಯುಳ್ಳ ಈಚಿನ ನಿರ್ಣಯದ ಕರಡನ್ನು ( ಈ ಕರಡಿನ ಪ್ರತಿ ನನ್ನ ಬಳಿ ಇದೆ) ಓವೈಸಿ ಪರವಾಗಿ ಪಾಕಿಸ್ತಾನ ಸಿದ್ಧಪಡಿಸಿದೆ. 2008ರ ಡಿಸೆಂಬರ್ನಲ್ಲಿ ಮತಕ್ಕೆ ಹಾಕಿದಾಗ ಈ ನಿರ್ಣಯವನ್ನು ಅಂಗೀಕರಿಸಿದ ರಾಷ್ಟಗಳದೇ ಮೇಲುಗೈ ಆಗಿದೆ!

ಇದು ಆಘಾತಕಾರಿ ಸುದ್ದಿ. ಈಚೆಗೆ ಈ ನಿರ್ಣಯದ ಹೊಸ ಕರಡನ್ನು ಪಾಕಿಸ್ತಾನ ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ (ಯೂಎನ್ ಹ್ಯೂಮನ್ ರೈಟ್ಸ್ ಕೌಂಸಿಲ್) ರಾಜತಾಂತ್ರಿಕರಿಗೆ ವಿತರಿಸಿದೆ. ಮಾಚರ್್ ಅಂತ್ಯದಲ್ಲಿ (ನೀವು ಈ ಲೇಖನ ಓದುವ ಹೊತ್ತಿಗೆ) ಅದನ್ನು ಮತಕ್ಕೆ ಹಾಕುವ ನಿರೀಕ್ಷೆ ಇದೆ.

ಇನ್ನೂ ಒಂದು ಆಘಾತಕಾರಿ ಸುದ್ದಿಯಿದೆ. ಕಳೆದ ಡಿಸೆಂಬರ್ನಲ್ಲಿ ಇದನ್ನು ಮತಕ್ಕೆ ಹಾಕಿದಾಗ ಎಮ್. ಎಫ್. ಹುಸೇನನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದ್ದ `ಮಹಾನ್' ಭಾರತ ಸಕರ್ಾರ ಈ ನಿರ್ಣಯವನ್ನು ವಿರೋಧಿಸಲಿಲ್ಲ. ಕಡೇ ಘಳಿಗೆಯಲ್ಲಿ ಯಾವ ಪಕ್ಷಕ್ಕೂ ಮತ ಹಾಕದೇ ತಟಸ್ಥವಾಗಿ ಉಳಿಯಿತು. ಇದರಿಂದ ಅದು ನಿರ್ಣಯವನ್ನು ಪರೋಕ್ಷವಾಗಿ ಬೆಂಬಲಿಸದಂತೆಯೇ ಆಯಿತು.

ಓವೈಸಿಯ 56 ದೇಶಗಳ ಜೊತೆಗೆ ಕಮ್ಯೂನಿಸ್ಟ್ ಚೀನಾ, ಕ್ಯೂಬಾ ಹಾಗೂ ರಷ್ಯಾ ಸಿಂಗಪುರ, ಥಾಯ್ಲ್ಯಾಂಡ್, ನಿಕಾರಾಗುವಾ, ವೆನಿಜ್ಯೂಯೇಲಾ, ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳು ನಿರ್ಣಯದ ಪರವಾಗಿ ಮತ ಹಾಕಿದವು. ಪಶ್ಚಿಮದ ದೇಶಗಳು, ಆಸ್ಟ್ರೇಲಿಯಾ, ಉಕ್ರೇನ್ ವಿರುದ್ಧವಾಗಿ ಮತ ಹಾಕಿದವು. ಭಾರತ, ಜಪಾನ್, ಬ್ರೆಜಿಲ್, ಮೆಕ್ಸಿಕೋ ಮೊದಲಾದ ಕೆಲವು ದೇಶಗಳು ತಟಸ್ಥ (ಶಿಖಂಡಿ) ಮಾರ್ಗ ಹಿಡಿದವು. ನ್ಯೂಜಿಲೆಂಡ್ ಮತ್ತು ಕೆಲವು ಚಿಲ್ಲರೆ ದೇಶಗಳು ಗೈರುಹಾಜರಾಗುವ ಮೂಲಕ ಪರೋಕ್ಷವಾಗಿ ನಿರ್ಣಯದ ಪರವಾದ ಬಲವನ್ನೇ ಹೆಚ್ಚಿಸಿದವು.

ಆದರೆ ಈ ನಿರ್ಣಯ ಮತದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಭಯೋತ್ಪಾದನೆಯ ಕುರಿತು ಮೌನವಹಿಸಿದೆ. ಪಾಕಿಸ್ತಾನದ ಮಾನವಹಕ್ಕುವಾದಿಗಳೂ ಸೇರಿದಂತೆ ವಿಶ್ವಾದ್ಯಂತ ಮಾನವಹಕ್ಕುವಾದಿಗಳು ಅದನ್ನು ವಿರೋಧಿಸಿದ್ದಾರೆ. ಮಹಿಳೆಯರ ಸ್ಥಾನಮಾನದ ಬಗ್ಗೆಯೂ ಅದು ಚಕಾರವೆತ್ತಿಲ್ಲ. ಕುರಾನ್ ಸೇರಿದಂತೆ ಎಷ್ಟೋ ಮತೀಯ ಗ್ರಂಥಗಳಲ್ಲೇ ಇತರ ಮತಧರ್ಮಗಳ ನಿಂದನೆ, ಟೀಕೆ ಕಂಡುಬರುತ್ತದೆ. ಕುರಾನ್ನಲ್ಲಿ ಕ್ರೈಸ್ತರನ್ನು ಟೀಕಿಸಲಾಗಿದೆ. ಯಹೂದ್ಯ ಮತವನ್ನು ವಾಚಾರಗೋಚರವಾಗಿ ನಿಂದಿಸಲಾಗಿದೆ. ಎಲ್ಲಕ್ಕಿಂತಲೂ ತೀವ್ರವಾಗಿ ವಿಗ್ರಹಪೂಜೆ ಮಾಡುವ ಹಿಂದೂ ಧರ್ಮದಂತಹ ಧರ್ಮಗಳನ್ನು ಅವಹೇಳನ ಮಾಡಿ, ಖಂಡಿಸಿದ್ದಲ್ಲದೇ ಅವುಗಳ ಮೇಲೆ ಯುದ್ಧವನ್ನೂ ಸಾರಲಾಗಿದೆ. ಹೀಗಿರುವಾಗ ಈ ಕುರಿತು ಓವೈಸಿ ನಿರ್ಣಯ ಏನನ್ನೂ ಹೇಳದೇ ಮಣವವಾಗಿರುವುದು ಏಕೆ?

ಮತಗಳ ಅವಹೇಳವನ್ನು ತಡೆಯಬೇಕಾದರೆ ಮೊದಲು ಮತೀಯ ಗ್ರಂಥಗಳ ಮೂಲವೇ ಆರಂಭಿಸಬೇಕಾಗುತ್ತದೆ. ಅನ್ಯಮತಗಳ ವಿಮಶರ್ೆ ಮಾಡದ ಹೊಸ ಮತಗಳು ಯಾವುವು? ಹಳೆಯ ಮತಗಳ ಅವಹೇಳನ, ಮೂದಲಿಕೆ ಮಾಡದ ಹೊಸ ಪ್ರವಾದಿಗಳು ಯಾರು? ಹೀಗಾಗಿ ಮತೀಯ ಗ್ರಂಥಗಳ ಪರಿಷ್ಕಾರ ಹಾಗೂ ಪುನರ್ ಸಂಕಲನದ ಮೂಲಕವೇ ಮತಗಳ ಅವಹೇಳನ ತಡೆಯುವುದು ಒಳ್ಳೆಯ ಕ್ರಮ, ಅಲ್ಲವೆ?

ಒಂದುವೇಳೆ ಈ ನಿರ್ಣಯ ಸಂಪೂರ್ಣವಾಗಿ ಜಾರಿಗೆ ಬಂದಲ್ಲಿ ಏನಾಗುತ್ತದೆ? ಪಾಕಿಸ್ತಾನದಲ್ಲಿರುವ ಮತೀಯ ಕಾನೂನುಗಳು ಇನ್ನಷ್ಟು ಬಿಗಿಯಾಗುತ್ತವೆ. ಅಲ್ಲಿನ ಸಾಮಾನ್ಯ ಜನರು ತಾಲಿಬಾನ್ ಅನ್ನು ನಿಂದಿಸುವುದೂ ಅಸಾಧ್ಯವಾಗುತ್ತದೆ. ಸೌದಿ ಅರೇಬಿಯಾ ಇನ್ನಷ್ಟು ಅಧ್ವಾನವೆದ್ದು ಹೋಗುತ್ತದೆ. `ಸೆಕ್ಯೂಲರ್' ಭಾರತದಲ್ಲಿ ಮೊದಲೇ ಸಾಚಾರ್ ಶಕೆ ಆರಂಭವಾಗಿದೆ. ಜೊತೆಗೆ ದೇವಬಂದ್ ಫತ್ವಾಗಳೂ ಸೆಕ್ಯೂಲರ್ ಧುರಿಣರೂ ಸೇರಿಕೊಂಡು ಏನೇನು ಹೊಸ ಕಾನೂನುಗಳನ್ನು ಮಾಡುತ್ತಾರೋ ಹೇಳಲಾಗದು.

ಅಂದಹಾಗೆ, ಜೀನಿವಾದ `ಹ್ಯೂಮನ್ ರೈಟ್ಸ್ ಕೌಂಸಿಲ್'ನಲ್ಲಿ ಇಸ್ಲಾಮಿಕ್ ರಾಷ್ಟ್ರಗಳದೇ ಮೆಜಾರಿಟಿ! ಜೊತೆಗೆ ರಷ್ಯಾ, ಚೀನಾ, ಕ್ಯೂಬಾಗಳಂತಹ ಪ್ರಜಾತಂತ್ರ ವಿರೋಧಿ ರಾಷ್ಟ್ರಗಳ ಬೆಂಬಲದಿಂದ ನಿರ್ಣಯ ಅಂಗೀಕಾರವಾಗುವುದರಲ್ಲಿ ಸಂಶಯವೇ ಇಲ್ಲ.

ಇದರಿಂದ ಕ್ರಮೇಣ ಏನಾಗುತ್ತದೆ? ಒಂದು ಬೆಳವಣಿಗೆ ಎಂದರೆ, ಎಷ್ಟೋ ದೇಶಗಳಲ್ಲಿ `ಮಾನವ ಹಕ್ಕು' ಮತ್ತು `ಮುಕ್ತ ವಿವೇಚನಾ ಸ್ವಾತಂತ್ರ್ಯ' ಎಂಬ ಪರಿಕಲ್ಪನೆಗಳೇ ಮಾಯವಾಗುತ್ತವೆ; `ಮತಗಳ ಮಾನನಷ್ಟ' ತಡೆಯಲು ಹೋಗಿ ಮನುಷ್ಯರ ಮನುಷ್ಯತ್ವಕ್ಕೇ ಭಂಗ ಬರಬಹುದು. ಇನ್ನೊಂದು ಬೆಳವಣಿಗೆ ಎಂದರೆ ಕೆಲವು ಬಿಡಿ ಬಿಡಿ ದೇಶಗಳು ಮನುಷ್ಯತ್ವವನ್ನೇ ಎತ್ತಿಹಿಡಿಯಲು ನಿರ್ಧರಿಸುತ್ತವೆ; ಇದರಿಂದ ಕೋಮುವಾದಿಗಳ ಜೊತೆಗಿನ ವೈರತ್ವ ಹೆಚ್ಚಾಗುತ್ತದೆ; ಮತೀಯ ಸಂಘರ್ಷ ಇನ್ನಷ್ಟು ತೀವ್ರವಾಗುತ್ತದೆ.
ವಿಷಮ ಪರಿಸ್ಥಿತಿಗಳಿಗೆ ಕಾರಣವಾಗುವ ಇಂತಹ ಒಂದು ಮತೀಯ ನಿರ್ಣಯ ಬೇಕಿತ್ತೆ? `ಹೌದು' ಎಂಬುದೇ ಮೂಲಭೂತವಾದಿಗಳು ಕೊಡುವ ಉತ್ತರ. ಅದು ನಿರೀಕ್ಷಿತವೇ. ಆದರೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅದನ್ನು ವಿಶ್ವಸಂಸ್ಥೆಯ ಅಂಗಳದಲ್ಲಿ ಬೆಂಬಲಿಸುತ್ತಿರುವ ಇತರ ದೇಶಗಳನ್ನು ಏನೆಂದು ಕರೆಯಬೇಕೋ ತಿಳಿಯುತ್ತಿಲ್ಲ. ದುರದೃಷ್ಟವೆಂದರೆ ಈ ಗುಂಪಿನಲ್ಲಿ ಭಾರತವೂ ಸೇರಿಕೊಂಡಿರುವುದು.


ವರುಣ್ ವಿರುದ್ಧ `ಸೆಕ್ಯೂಲರ್' ಮಾಧ್ಯಮಗಳ ಸಮರ?

ವರುಣ್ ಗಾಂಧಿ ಈಗ `ಸೆಕ್ಯುಲರ್' ಮಾಧ್ಯಮಗಳ ಬಲಿಪಶು ಎನ್ನುವುದರಲ್ಲಿ ಸಂಶಯವೇ ಇಲ್ಲ. ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡಬೇಕೆಂದು ವದಿಸುವ ಸೆಕ್ಯೂಲರ್ ಬುದ್ಧಿಜೀವಿಗಳು ವರುಣ್ ವಿರುದ್ಧ ರಾಷ್ಟ್ರೀಯ ಸುರಕ್ಷಾ ಕಾಯ್ದೆಯನ್ನು ಅನ್ವಯಿಸಿರುವುದನ್ನು ಸ್ವಾಗತಿಸಿದ್ದಾರೆ. ಅವರ ನೆಚ್ಚಿನ ಯುವನೇತಾರ ರಾಹುಲ್ ಗಾಂಧಿ. ಇದು ಮಹಾಭಾರತ ಕುರುಕ್ಷೇತ್ರ ಸಮಯದ ದಾಯಾದಿ ಕಲಹದ ವಾತಾವರಣವನ್ನೇ ಹೋಲುತ್ತದೆ.

ನಮ್ಮ ಸೆಕ್ಯುಲರ್ ಚಾನೆಲ್ಗಳ ದ್ವಿಮುಖ ನೀತಿ ತಿಳಿಯಲೊಂದು ಉದಾಹರಣೆ ನೋಡೋಣ. ವರುಣ್ ಮಾಡಿದರೆನ್ನಲಾದ ವಿವಾದಿತ (ಹಾಗೂ ಆಪಾದಿತ) ಭಾಷಣದ ವೀಡಿಯೋ ತೋರಿಸುವ ಮೊದಲು ಸಿಎನ್ಎನ್-ಐಬಿಎನ್ ಚಾನೆಲ್ ಒಂದು ಸ್ವಲ್ಪವೂ ಹಿಂಜರಿಯಲಿಲ್ಲ. ಆದರೆ ಮನಮೋಹನ್ ಸಿಂಗ್ ಸಕರ್ಾರ ಈಚೆಗೆ ವಿಶ್ವಾಸ ಮತ ಯಾಚಿಸಿದ್ದಾಗ ನಡೆಸಲಾದ `ಸ್ಟಿಂಗ್ ಆಪರೇಷನ್'ನಲ್ಲಿ ಭಾಗಿಯಾಗಿದ್ದೂ ಸಹ ಅಮರ್ ಸಿಂಗ್ ಲಂಚಾವತರಾದ ವೀಡಿಯೋ ತೋರಿಸಲು ಚಾನೆಲ್ ನಿರಾಕರಿಸಿತ್ತು!

ಸಕರ್ಾರದ ಪರವಾಗಿ ಮತಹಾಕಲು ಅಥವಾ ಮತದಾನದಲ್ಲಿ ಪಾಲುಗೊಳ್ಳದೇ ಇರಲು ತನ್ನ ಸಂಸದರಿಗೆ ಅಮರ್ ಸಿಂಗ್ ಕೋಟಿ ರೂಪಾಯಿ ಲಂಚ ನೀಡಿದರೆಂದು ಬಿಜೆಪಿ ಲೋಕಸಭಾಧ್ಯಕ್ಷ ಸೋಮನಾಥ ಚಟಜರ್ಿಗೆ ಅಧಿಕೃತವಾಗಿ ದೂರು ನೀಡಿ ಕೋಟಿ ರೂಪಾಯಿಗಳ ನೋಟಿನ ಕಟ್ಟುಗಳನ್ನು ಲೋಖಸಭೆಯಲ್ಲಿ ತೋರಿಸಿತ್ತು. `ಲಂಚದ ಘಟನಾವಳಿಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಸಿಎನ್ನ್-ಐಬಿಎನ್ ವಾಹಿನಿಯಲ್ಲಿ ಬರುತ್ತೆ, ನೋಡುತ್ತಿರಿ' ಎಂದು ಬಿಜೆಪಿ ಒಂದು ಹಂತದಲ್ಲಿ ಪ್ರಕಟಿಸಿತ್ತು. ಆದರೆ ಟಿವಿ ವಾಹಿನಿ ಈ ದೃಶ್ಯಗಳನ್ನು ಪ್ರಸಾರ ಮಾಡಲೇ ಇಲ್ಲ!

ರಾಜದೀಪ್ ಹಾಗೆ ಮಾಡಿದ್ದರೆ ಇಡೀ ದೇಶದ ತುಂಬಾ ಲಂಚಾವತಾರದ ದೃಶ್ಯಗಳು ರಾರಾಜಿಸುತ್ತಿದ್ದವು. ಮನಮೋಹನ್ ಸಕರ್ಾರ ಗೆಲ್ಲುವುದು ಕಷ್ಟವಾಗುತ್ತಿತ್ತು. ಅವರು ಹಾಗೆ ಮಾಡದಿದ್ದುದರಿಂದ ಸಕರ್ಾರಕ್ಕೆ ಅನುಕೂಲವಾಯಿತು. ಬಿಜೆಪಿ ಬಹಳ ಕಷ್ಟಪಟ್ಟು ಸ್ಟಿಂಗ್ ಆಪರೇಷನ್ ನಡೆಸಿತ್ತು. ಅದರ ಚಿತ್ರೀಕರಣದ ಹೊಣೆಯನ್ನು ಐಬಿನ್ ಮುಖ್ಯ ಸಂಪಾದಕ ಸದರ್ೇಸಾಯಿಗೆ ವಹಿಸಲಾಗಿತ್ತು. ಹಾಗಿದ್ದರೂ ಆ ದೃಶ್ಯಗಳನ್ನು ಟಿವಿಯಲ್ಲಿ ತೋರಿಸಲಿಲ್ಲ! `ಈ ಸ್ಟಿಂಗ್ ಆಪರೇಷನ್ನಲ್ಲಿ ನಾವು `ಗೋಡೆಯ ಮೇಲಿನ ನೊಣಗಳು' ಅಷ್ಟೇ. ನಡೆಯುತ್ತಿದ್ದ ಘಟನೆಗಳನ್ನು ಮೂರನೆಯವರಾಗಿ ಚಿತ್ರೀಕರಿಸಿದ್ದೇವೆ. ನಾವು ಘಟನೆಯಲ್ಲಿ ಭಾಗಿಗಳಲ್ಲ. ನಮ್ಮ ತನಿಖೆ ಅಪೂರ್ಣವಾಗಿತ್ತು, ಟೇಪು ಮತ್ತು ಅದರ ಲಿಪ್ಯಂತರ ಪ್ರತಿಗಳನ್ನು ವಕೀಲ ಹರೀಶ್ ಸಾಳ್ವೆಗೆ ತೋರಿಸಿದೆವು. ಅವರು ತನಿಖೆ ಅಪೂರ್ಣವಾಗಿದೆ, ಇದನ್ನು ಪ್ರಸಾರ ಮಾಡಬೇಡಿ ಎಂದು ಸಲಹೆ ನೀಡಿದರು. ಆದ್ದರಿಂದ ನಾವದನ್ನು ಪ್ರಸಾರ ಮಾಡಲಿಲ್ಲ. ಒಂದು ಸ್ವಲ್ಪವೂ ಎಡಿಟಿಂಗ್ ಮಾಡದೇ ಎಲ್ಲ ಟೇಪುಗಳನ್ನೂ ಸ್ಪೀಕರ್ಗೆ ಪ್ರಾಮಾಣಿಕವಾಗಿ ಕೊಟ್ಟಿದ್ದೇವೆ. ನಾವು ತನಿಖೆ ಮುಗಿಸುವವರೆಗೂ ಬಿಜೆಪಿಯವರು ಕಾಯದೇ ಲೋಕಸಭೆಯಲ್ಲಿ ಹಣದ ಕಟ್ಟುಗಳನ್ನು ತೋರಿಸಿಬಿಟ್ಟರು'' ಎಂಬುದು ರಾಜದೀಪ್ ಚಾನೆಲ್ ನೀಡಿದ ಸಮಜಾಯಿಷಿ. ಆದರೆ ಇಂತಹ ಯಾವುದೇ ಸಬೂಬುಗಳನ್ನು ವರುಣ್ ಗಾಂಧಿ ವಿಷಯದಲ್ಲಿ ಮಾತ್ರ ಅವರು ನೀಡಲಿಲ್ಲ! ಚುನಾವಣಾ ಆಯೋಗಕ್ಕೆ ಸಿಡಿ ಕೊಡುತ್ತೇವೆ, ಟಿವಿಯಲ್ಲಿ ತೋರಿಸುವುದಿಲ್ಲ ಎಂದು ಹೇಳಲಿಲ್ಲ. ಸಂಸದರ ಲಂಚಾವತಾರದ ಪ್ರಕರಣ ಸಕರ್ಾರದ ಪಾಲಿಗೆ ಮುಳುವಾಗುವ ಸಾಧ್ಯತೆ ಇದ್ದಾಗ ಸಿಡಿಯನ್ನು ಪ್ರಸಾರ ಮಾಡದೇ ಸಕರ್ಾರಕ್ಕೆ ನೆರವಾದ ರಾಜ್ದೀಪ್ ವರುಣ್ ವಿಷಯದಲ್ಲಿ ಸಿಡಿಯನ್ಬು ಪ್ರಸಾರ ಮಾಡುವ ಮೂಲಕ ಕಾಂಗ್ರೆಸ್ಸಿಗೆ ನೆರವಾದರು.

ಬಿಜೆಪಿಯ ನೈತಿಕತೆ ಕುರಿತೂ ಪ್ರಶ್ನೆಗಳಿವೆ. ಅದು ಬೇರೆ ವಿಷಯ. ಆದರೆ ಯಾರ ಹೊಲಸು ಸಿಕ್ಕರೂ ಅದನ್ನು ಬಹಿರಂಗ ಪಡಿಸಬೇಕಾದ್ದು ಸಾರ್ವಜನಿಕ ಹಿತಾಸಕ್ತಿಗೆ ಬದ್ಧವಾದ ಪತ್ರಿಕೋದ್ಯಮ. ಸಾರ್ವಜನಿಕ ಹಿತಾಸಕ್ತಿಯೇ ಪತ್ರಿಕೋದ್ಯಮದ ಮೂಲ ಉದ್ದೇಶ. ಪತ್ರಕರ್ತರಿಗೆ ಯಾವ ಪಕ್ಷದ ಮುಲಾಜೂ ಇರಕೂಡದು. ಹಾಗೇ ಇನ್ಯಾವ ಪಕ್ಷದ ಮೇಲೆ ದ್ವೇಷವೂ ಇರಬಾರದು. ಕಂಡಿದ್ದನ್ನು ಕಂಡ ಹಾಗೆ ವರದಿ ಮಾಡುವುದು ಪತ್ರಕರ್ತರ ಧರ್ಮ. ಆದರೆ ಲಭ್ಯವಾದ ಮಾಹಿತಿ ಸತ್ಯವೋ ಅಲ್ಲವೋ ಎಂಬ ಪರಿಶೀಲನೆ ಖಂಡಿತ ಬೇಕು. ವರುಣ್ ವಿಷಯದಲ್ಲೇಕೆ ಕಾನೂನು ತಜ್ಞರ ಸಲಹಯನ್ನು ನಮ್ಮ ಸೆಕ್ಯೂಲರ್ ಮಾಧ್ಯಮ ಮಿತ್ರರು ಕೇಳಲಿಲ್ಲ?

ವರುಣ್ ವಿಷಯದಲ್ಲಿ ಇವರುಗಳು ಕಾಂಗ್ರೆಸ್ಸಿಗೆ ಎರಡು ಉಪಕಾರಗಳನ್ನು ಮಾಡಿದ್ದಾರೆ. ಮೊದಲನೆಯದಾಗಿ, ರಾಹುಲ್ ಮತ್ತು ವರುಣ್ - ನೆಹರೂ/ಗಾಂಧಿ ಪರಿವಾರದ ಈ ದಾಯಾದಿಗಳ ಕಲಹದಲ್ಲಿ, ದಾಯಾದಿಗಳ ರಾಜಕೀಯ ಮೇಲಾಟದಲ್ಲಿ ಪಾತ್ರವಹಿಸಿದ್ದಾರೆ. ಎರಡನೆಯದು ಕಾಂಗ್ರೆಸ್ಸಿಗೆ ಮುಸ್ಲಿಂ ವೋಟ್ ಬ್ಯಾಂಕ್ ಕೈತಪ್ಪದೇ ಇರುವಂತೆ ಸಹಕರಿಸಿದ್ದಾರೆ.


ಸೋಮವಾರ, ಮಾರ್ಚ್ 23, 2009

ವ್ಯಾಪಾರ `ಸತ್ಯಂ', ರಾಜಕೀಯ `ಸುಂದರಂ'!

ಸತ್ಯಂ ಕಂಪೆನಿ ದೇಶದಲ್ಲಿ ಸಾರ್ವಜನಿಕವಾಗಿ ಕಳಂಕ ಹೊತ್ತ ಮೊದಲ ಸಂಸ್ಥೆಯಲ್ಲ. ಕೊನೆಯದೂ ಅಲ್ಲ. ದೇಶದ ದೊಡ್ಡ ಕಳಂಕಿತ ವ್ಯವಸ್ಥೆ ಎಂದರೆ ನಮ್ಮ ರಾಜಕೀಯ. ಆಯಕಟ್ಟಿನ ಸ್ಥಳದಲ್ಲಿರುವ ರಾಜಕಾರಣಿಗಳ ಕೃಪೆ ಇಲ್ಲದೇ ನಮ್ಮಲ್ಲಿ ಒಂದು ತರಗೆಲೆಯೂ ಅಲುಗುವುದಿಲ್ಲ. ಕಾಪರ್ೋರೇಷನ್ ಅಧಿಕಾರಿಗಳ ಕೃಪೆ ಇಲ್ಲದೇ ಇದ್ದರೆ ಕತ್ತಲಲ್ಲಿ ಒಂದು ನಾಯಿಯೂ ಬೊಗಳುವುದಿಲ್ಲ.

`ಕಂಪೆನಿಯ ವ್ಯವಹಾರಗಳನ್ನು ಮುನ್ನಡೆಸಲು ಕೆಲವು ಭರವಸೆಗಳನ್ನು ಕೊಟ್ಟು 1230 ಕೋಟಿ ರೂಪಾಯಿ ಹಣವನ್ನು ಪಡೆದೆ' ಎಂದು ಸತ್ಯಂ ಆಡಳಿತ ಮಂಡಳಿಗೆ ಜನವರಿ 7, 2009ರಲ್ಲಿ ರಂದು ಬರೆದ ಪತ್ರದಲ್ಲಿ ರಾಮಲಿಂಗ ರಾಜು ತಿಳಿಸಿದ್ದಾರೆ. ಈ ಹಣವನ್ನು ಬ್ಯಾಂಕುಗಳು ಕೊಟ್ಟಿಲ್ಲ. ಹಾಗಾದರೆ ಕೊಟ್ವವರು ಯಾರು? ರಾಜಕಾರಣಿಗಳ ಕಪ್ಪು ಹಣವೇನಾದರೂ ಹರಿದುಬಂದಿದೆಯೆ? ಅವರಿಗೆ ಯಾವ ಯಾವ ಭರವಸೆಗಳನ್ನು ನೀಡಲಾಯಿತು? ಇದು ತನಿಖೆಯಾಗಬೇಕಾದ ಅಂಶ.

ಭ್ರಷ್ಟ ರಾಜಕಾರಣಿಗಳು, ಮಾಫಿಯಾ-ಕ್ರಿಮಿನಲ್-ಭೂಗತ ದೊರೆಗಳು, ಭ್ರಷ್ಟ ಸಕರ್ಾರಿ ಅಧಿಕಾರಿಗಳು ತಮ್ಮ ಕಪ್ಪು ಹಣವನ್ನು ಮುಖ್ಯವಾಹಿನಿಯಲ್ಲಿರುವ `ಪ್ರತಿಷ್ಠಿತ' ಉದ್ಯಮಗಳಲ್ಲಿ ಹರಿಯಬಿಡುವುದು ಹೊಸ ಸಂಗತಿ ಏನಲ್ಲ. ಈ ಕುರಿತು ಅಸಂಖ್ಯಾತ ವರದಿಗಳು ಸಿಗುತ್ತವೆ.

ಒಂದು ಉದಾಹರಣೆ. `ಅಬು ಸಲೇಂ, ದಾವೂದ್ ಇಬ್ರಾಹಿಂ ಮುಂತಾದ ದುಬೈ ಮೂಲದ ಭೂಗತ ದೊರೆಗಳು ತಮ್ಮ ಕಪ್ಪು (ಹಾಗೂ ಕ್ರಿಮಿನಲ್) ಹಣವನ್ನು ಭಾರತದ ಜೆಟ್ ಏರ್ವೇಸ್ ಕಂಪೆನಿಯಲ್ಲಿ ತೊಡಗಿಸಿದ್ದಾರೆ ಎಂಬ ಗುಪ್ತಚಾರ ಮಾಹಿತಿ ಸಕರ್ಾರಕ್ಕೆ ಬಂದಿದೆ' ಎಂದು 2002ರ ಏಪ್ರಿಲ್ನಲ್ಲಿ ಪತ್ರಿಕೆಗಳು ವರದಿ ಮಾಡಿದ್ದವು. ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಇಂಟೆಲಿಜೆನ್ಸ್ ಬ್ಯೂರೋ ಈ ಕುರಿತು ಸೂಚನೆ ನೀಡಿತ್ತು. ಗೃಹ ಸಚಿವಾಲಯದೊಡನೆ ಸಮಾಲೋಚಿಸಿ ಮುಂದಿನ ಕ್ರಮದ ಬಗ್ಗೆ ಯೋಚಿಸುವುದಾಗಿ ವಿಮಾನಯಾನ ಸಚಿವಾಲಯ ತಿಳಿಸಿತ್ತು. ಮುಂದೇನಾಯಿತು? ಜೆಟ್ ಏರ್ವೇಸ್ ಮೇಲಿನ ಆಪಾದನೆ ರುಜುವಾತಾಯಿತೆ? ಉತ್ತರ ನಿಮಗೂ ಗೊತ್ತು. ನಮಗೂ ಗೊತ್ತು. ಒಂದು ವೇಳೆ ಇಂಟೆಲಿಜೆನ್ಸ್ ಬ್ಯೂರೋ ಸುಳ್ಳು ಮಾಹಿತಿ ನೀಡಿತ್ತೆ? ಹಾಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಕೇಳಲಾಯಿತೆ? ಆ ಕುರಿತು ಯಾವುದೇ ವರದಿಗಳನ್ನು ಓದಿದ ನೆನಪು ನನಗಿಲ್ಲ. ಒಂದು ವಿಷಯ ಗಮನಾರ್ಹ. ಸತ್ಯ ಹೇಳಿದ್ದಕ್ಕಾಗಿ ಮಾರ್ಗರೇಟ್ ಆಳ್ವ ಪದವಿ ಕಳೆದುಕೊಂಡರು. ಸುಳ್ಳು ಹೇಳಿದರೂ ಅಬ್ದುಲ್ ರೆಹಮಾನ್ ಅಂತುಲೆ ತಮ್ಮ ಅಧಿಕಾರ ಉಳಿಸಿಕೊಂಡರು. ಇದು ನಮ್ಮ ದೇಶದ ಸ್ಥಿತಿ.

ಪ್ರತಿ ಉದ್ಯಮಿಗೂ ರಾಜಕೀಯ ನಾಯಕರ ಗೆಳೆತನ ಇದ್ದೇ ಇರುತ್ತದೆ. ಆಳುವವರನ್ನು ಯಾವ ಉದ್ಯಮಿಯೂ ಎದುರು ಹಾಕಿಕೊಳ್ಳುವುದಿಲ್ಲ. ಹಾಗೆಯೇ ಕೆಲವರ ನಡುವೆ ಎವರ್ಗ್ರೀನ್ ಸಂಬಂಧ ಇರುತ್ತದೆ. ಅಂಬಾನಿ, ಸುಬ್ರತೋ ರಾಯ್, ಅಮರ್ ಸಿಂಗ್ ಮುಂತಾದವರ ಗೆಳೆತನ ರಜತ ಪರದೆಯ ಮೇಲೆಯೇ ಕಂಗೊಳಿಸಿದರೆ ಅನೇಕರ ಗೆಳೆತನ `ಪೇಜ್ 3' ಸರಕು. ಇಂತಹ ಗೆಳೆತನ-ನಂಬಿಕೆಗಳಿಕೆ ಕಾನೂನಿನ ತೊಡಕೇನಿಲ್ಲ. ಸ್ನೇಹದಲ್ಲಿ ಯಾವ ತಪ್ಪೂ ಇಲ್ಲ. ಆದರೆ ಇದು ಬರೀ ಕಾಫಿ-ಚಿಪ್ಸ್ ಗೆಳೆತನ ಎಂದುಕೊಳ್ಳುವವರು ಮಧ್ಯಮವರ್ಗದ ಸಂಬಳಗಾರರು ಮಾತ್ರ.

ಭಾರತದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಇತರೆ ಕಪ್ಪು ಹಣದ `ಕಪ್ಪು ಶ್ರೀಮಂತ'ರು ಸ್ವಿಸ್ ಬ್ಯಾಂಕುಗಳಲ್ಲಿ, ಇತರ ವಿದೇಶಿ ಬ್ಯಾಂಕುಗಳಲ್ಲಿ ಹಣ ಇಡುವುದು ಹೊಸದೇನಲ್ಲ. ಸ್ವಿಸ್ ಬ್ಯಾಂಕುಗಳಲ್ಲಿ ಹಣವಿಟ್ಟ ಜಗತ್ತಿನ ಎಲ್ಲ ಕಪ್ಪು ಶ್ರೀಮಂತರ ಪೈಕಿ ಮೊದಲ ಸ್ಥಾನದಲ್ಲಿರುವುದು ಬಡ ಭಾರತದ ಕಪ್ಪು ಶ್ರೀಮಂತರು! `ಸ್ವಿಸ್ ಬ್ಯಾಂಕಿಂಗ್ ಅಸೋಸಿಯೇಷನ್' 2006ರಲ್ಲಿ ನೀಡಿದ ವರದಿಯ ಪ್ರಕಾರ ಸ್ವಿಸ್ ಬ್ಯಾಂಕುಗಳಲ್ಲಿರುವ ಕಪ್ಪು ಹಣದ ಭಾರತೀಯರ ಒಟ್ಟು ಹಣ 1456 ಶತಕೋಟಿ ಡಾಲರ್! ಅಂದರೆ ನಮ್ಮ ರಾಷ್ಟ್ರದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಸಮನಾದಷ್ಟು ಹಣ! ಅಂದರೆ ಸುಮಾರು 70,000 ಶತಕೋಟಿ ರೂಪಾಯಿಗಳು!!

ಆದರೂ ನಮ್ಮ ಸಕರ್ಾರ ಏಕೆ ಕಪ್ಪು ಹಣದ ವಿವರ ತರಿಸುವುದಿಲ್ಲ? ಎಲ್ಲ ಕಪ್ಪು ಶ್ರೀಮಂತರ ಬಳಿ ಲೆಕ್ಕ ಕೇಳುವುದಿಲ್ಲ? ಏಕೆ ಕಪ್ಪು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ? ಏಕೆಂದರೆ ವಿದೇಶಿ ಬ್ಯಾಂಕುಗಳಲ್ಲಿರುವವರ ಹಣದಲ್ಲಿ ಬಹುಪಾಲು ಸ್ವತಂತ್ರ ಭಾರತದ `ಸ್ವತಂತ್ರ' ರಾಜಕಾರಣಿಗಳದು! ಗಾಜಿನ ಮನೆಯಲ್ಲಿರುವವರು ಎಂದಿಗೂ ಪಕ್ಕದ ಮನೆಯ ಮೇಲೆ ಕಲ್ಲೆಸೆಯುವುದು ಸಾಧ್ಯವಿಲ್ಲ.

ನಮ್ಮ ಪ್ರಧಾನಿ ಒಬ್ಬ ಅರ್ಥಶಾಸ್ತ್ರಜ್ಞ. `ಬ್ಲ್ಯಾಕ್ ಎಕಾನಮಿ'ಯ ದುಷ್ಪರಿಣಾಮಗಳನ್ನು ಕುರಿತು ಓದಿದವರು, ಬೋಧಿಸಿದವೆರು. ಆದರೆ ಅವರು ಮಾಡಿದ್ದೇನು? ಮುಂದೆ ಓದಿ.

ಆಸ್ಟ್ರಿಯಾ ಹಾಗೂ ಸ್ವಿಡ್ಜರ್ಲ್ಯಾಂಡಿನ ಮಧ್ಯೆ ಇರುವ ಚಿಕ್ಕ ಗುಡ್ಡಗಾಡು ದೇಶದ ಹೆಸರು ಲೀಚ್ಟೆನ್ಸ್ಟೈನ್. ಮಧ್ಯಮವರ್ಗದ ಜನರು ಸಾಮಾನ್ಯವಾಗಿ ಈ ದೇಶದ ಹೆಸರನ್ನೇ ಕೇಳಿರುವುದಿಲ್ಲ. ಆದರೆ ಜಗತ್ತಿನ ಕಪ್ಪು ಶ್ರೀಮಂತರಿಗೆಲ್ಲ ಈ ದೇಶ ಸುಪರಿಚಿತ. ಇಲ್ಲಿ ನೂರಾರು ಭಾರತೀಯ ಕಪ್ಪು ಶ್ರೀಮಂತರು ಹಣ ಇಟ್ಟಿದ್ದಾರೆ. ಈಚೆಗೆ ಜರ್ಮನಿಯ ಸಕರ್ಾರ ಲೀಚ್ಟೆನ್ಸ್ಟೈನ್ ದೇಶದ ಎಲ್ಟಿಜಿ ಬ್ಯಾಂಕಿನಲ್ಲಿ ಜಗತ್ತಿನ ಯಾವ ಯಾವ ದೇಶದ ಕಪ್ಪು ಧನಿಕರು ಎಷ್ಟೆಷ್ಡು ಹಣ ಇಟ್ಟಿದ್ದಾರೆ ಎಂಬ ಪಟ್ಟಿಯನ್ನು ತರಿಸಿಕೊಂಡಿತು.
`ನಮ್ಮ ಬಳಿ ಇಂತಹ ಪಟ್ಟಿ ಇದೆ. ಅದರಲ್ಲಿ ನಿಮ್ಮ ದೇಶದ ಖಾತೆದಾರರ ಬಗ್ಗೆಯೂ ಮಾಹಿತಿ ಇದೆ. ನೀವು ಅಧಿಕೃತವಾಗಿ ಕೇಳಿದರೆ ನಿಮಗೆ ಈ ಮಾಹಿತಿ ನೀಡುತ್ತೇವೆ' ಎಂದು ಜರ್ಮನ್ ಸಕರ್ಾರ ಅನೇಕ ದೇಶಗಳ ಸಕರ್ಾರಕ್ಕೆ ಸಂದೇಶ ಕಳುಹಿಸಿತು. ಭಾರತಕ್ಕೂ ಸಂದೇಶ ಬಂತು. ಅಮೆರಿಕ, ಬ್ರಿಟನ್, ಕೆನಡಾ, ಇಟಲಿ, ಸ್ವೀಡನ್, ನಾವರ್ೆ, ಫಿನ್ಲ್ಯಾಂಡ್, ಐರ್ಲ್ಯಾಂಡ್ ಮೊದಲಾದ ದೇಶಗಳು ಜರ್ಮನ್ ಸಂದೇಶಕ್ಕೆ ಪ್ರತಿಕ್ರಿಯಿಸಿದವು. ಮಾಹಿತಿ ಕೇಳಿ ತಮ್ಮ ದೇಶದ ಕಪ್ಪು ಶ್ರೀಮಂತರ ಹಣಕಾಸು ವ್ಯವಹಾರ ಕುರಿತ ಮಾಹಿತಿ ತರಿಸಿಕೊಂಡವು.

ಭಾರತ ಏನು ಮಾಡಿತು ಎಂಬ ಕಥೆ ಹೇಳುವ ಅಗತ್ಯವಿದೆಯೆ? `ಖಂಡಿತವಾಗಿಯೂ ಇದೆ, ಮುಂದೇನಾಯಿತು ಎಂದು ಊಹಿಸುವುದು ನಮ್ಮಿಂದ ಸಾಧ್ಯವಿಲ'್ಲ ಎನ್ನುವಿರಾದರೆ, ಕೇಳಿ. ಜರ್ಮನ್ ಸಕರ್ಾರಕ್ಕೆ ಯಾವ ಉತ್ತರವನ್ನೂ ಬರೆಯುವ ಗೋಜಿಗೆ ಭಾರತ ಹೋಗಿಲ್ಲ. ನಮ್ಮ ಅರ್ಥಶಾಸ್ರ್ತಜ್ಞ ಪ್ರಧಾನಿ ಬಹಳ ಬ್ಯುಸಿಯಾಗಿದ್ದಾರೆ (ಯಾವುದರಲ್ಲಿ ಎಂಬುದು ಮಾತ್ರ ಗೊತ್ತಿಲ್ಲ). ಅವರಿಗೆ ಇದಕ್ಕೆಲ್ಲ ಉತ್ತರ ಕೊಡುವಷ್ಟು ಪುರಸೊತ್ತಿಲ್ಲ. ಒಂದಿಷ್ಟು ಪುಸ್ತಕಗಳನ್ನು ಓದಲೂ ಪುರಸೊತ್ತಿಲ್ಲವಂತೆ. ಆದರೆ ಅವರ ಕಚೇರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಜನಪಥದ ಹತ್ತನೇ ನಂಬರ್ ಮನೆಯನ್ನು ಕಾಯುತ್ತಿದ್ದಾರೆಯೆ?

ಹೀಗಿದೆ ಪರಿಸ್ಥಿತಿ. ಹೀಗಿರುವಾಗ ಈ ಹಣದ ಬಹುಪಾಲು ನಮ್ಮ ರಾಜಕಾರಣಿಗಳದು ಮತ್ತು ಅವರ ಗೆಳೆಯರದು ಎಂಬ ಸಂಶಯ ಮೂಡುವುದಿಲ್ಲವೆ? ಸ್ವಿಡ್ಜರ್ಲ್ಯಾಂಡ್, ಸೇಂ. ಕಿಟ್ಸ್, ಕ್ಯಾನರಿ ಐಲ್ಯಾಂಡ್ಸ್, ಆಂಟಿಗುವಾ, ಬಹಾಮಾಸ್, ಲೀಚ್ಟೆನ್ಸ್ಟೈನ್ - ಇವೆಲ್ಲ ನಮ್ಮ ಕಪ್ಪು ಶ್ರೀಮಂತರು ಆಗಾಗ್ಗೆ ರಜೆ ಕಳೆಯುವ ಸ್ವರ್ಗಗಳು. ಅಷ್ಟು ಮಾತ್ರವಲ್ಲ ಅವರ ಕಪ್ಪು ನಿಧಿಯನ್ನು ಕಾಯುತ್ತಿರುವ ಕುಪ್ರಸಿದ್ಧ ಬ್ಯಾಂಕಿಂಗ್ ತಾಣಗಳು. ಡ್ರಗ್ಸ್, ಟೆರರಿಸಂ, ಬ್ಲ್ಯಾಕ್ ಬಿಸಿನೆಸ್ -ಇವುಗಳಿಗೆಲ್ಲ ಹಣದ ಹೊಳೆ ಹರಿಯುವುದು ಇಲ್ಲಿನ ಬ್ಯಾಂಕ್ ಖಾತೆಗಳಿಂದಲೇ.

ರಾಜು ಪುತ್ರರ ಮೇಟಾಸ್ ಕಂಪೆನಿ ಹೈದರಾಬಾದ್ ಮೆಟ್ರೋ ಯೋಜನೆಯಲ್ಲಿ ಅವವ್ಯಹಾರ ನಡೆಸಿದ ಬಗ್ಗೆ ಎಂದು ದೆಹಲಿ ಮೆಟ್ರೋ ಮುಖ್ಯಸ್ಥ, ಪ್ರಾಮಾಣಿಕ ಎಂಜಿನಿಯರ್, ಇ. ಶ್ರೀಧರನ್ ಕಳೆದ ವಷರ್ಾರಂಭದಲ್ಲೇ ಕಹಳೆ ಊದಿ ಆಂಧ್ರ ಸಕರ್ಾರದ ಅವಕೃಪೆಗೆ ಪಾತ್ರರಾಗಿದ್ದರು. ಮೇಟಾಸ್ ಪರವಾಗಿ ನಿಂತ ಆಂಧ್ರದ ವೈಎಸ್ಆರ್ ಸಕರ್ಾರ ಶ್ರೀಧರನ್ ವಿರುದ್ಧವೇ ಆಪಾದನೆಗಳ ಮಳೆ ಸುರಿಸಿ ರಣಕಹಳೆ ಊದಿತ್ತು!

ಸುಬ್ರತೋ ರಾಯ್ನ ಸಹಾರಾ ಇಂಡಿಯಾದಲ್ಲಿ ರಾಜಕಾರಣಿಗಳ ಕಪ್ಪು ದುಡ್ಡಿದೆ ಎಂಬ ಗುಲ್ಲು ಬಹಳ ಹಿಂದಿನಿಂದ ಇದೆ. ಇಂತಹ ಯಾವ ಆಪಾದನೆಗಳೂ ಸಾಬೀತಾಗಿಲ್ಲ. ಏಕೆಂದರೆ ಯಾರ ವಿರುದ್ಧವೂ ಸರಿಯಾದ ಕಾನೂನು ಕ್ರಮಗಳನ್ನು ಜರುಗಿಸಿಯೇ ಇಲ್ಲ!


ವಾಹ್! ಕಡೆಗೂ ಭಾರತ್ ಮಹಾನ್!

ಭಾರತ ವಿಶ್ವದ ಡಯಾಬಿಟಿಸ್ ಕೇಂದ್ರ; ಹೃದ್ರೋಗಿಗಳು ಭಾರತದಲ್ಲೇ ಜಾಸ್ತಿ; ಭಾರತದಲ್ಲಿ ಕುರುಡರು ಜಾಸ್ತಿ -ಇವೆಲ್ಲ ಆಗಾಗ್ಗೆ ಪತ್ರಿಕೆಗಳಲ್ಲಿ ಕಂಡುಬರುವ ಹೇಳಿಕೆಗಳು. ಈ ಮಾತುಗಳು ಎಷ್ಟು ನಿಜ, ಎಷ್ಟು ಉತ್ಪ್ರೇಕ್ಷೆ ಎಂಬುದು ಚಚರ್ಾವಿಷಯ. ಆದರೆ ಈಗ ಒಂದಂತೂ ನೂರಕ್ಕೆ ನೂರು ಸತ್ಯ. ಅದು- `ವಿಶ್ವದಲ್ಲೇ ಅತಿಹೆಚ್ಚು ಅಪರಾಧ ಜರುಗುತ್ತಿರುವ ದೇಶ ಭಾರತ'! ಋಷಿಗಳ ನಾಡು ಈಗ ಅಪರಾಧಿಗಳ ತವರಾಗಿದೆ.

ಈ ಅಂಕಿಅಂಶ ಗಮನಿಸಿ: 2006ರಲ್ಲಿ ಭಾರತದಲ್ಲಿ ನಡೆದ ಕೊಲೆಗಳ ಸಂಖ್ಯೆ 32,481. ಅಂದರೆ, ಪ್ರತಿ ಗಂಟೆಗೆ 3-4 ಕೊಲೆಗಳು! ರಷ್ಯಾದಲ್ಲಿ ನಡೆದ ಕೊಲೆಗಳ ಸಂಖ್ಯೆ 28,904. ಕೊಲಂಬಿಯಾದಲ್ಲಿ 26,539. ದಕ್ಷಿಣ ಆಫ್ರಿಕಾದಲ್ಲಿ 21,995, ಮೆಕ್ಸಿಕೋದಲ್ಲಿ 13,828 ಹಾಗೂ ಅಮೆರಿಕದಲ್ಲಿ 12,658. ಅಂದರೆ, ಜಗತ್ತಿನ ಎಲ್ಲ ದೇಶಗಳಿಗಿಂತಲೂ ಅತಿ ಹೆಚ್ಚು ಕೊಲೆಗಳು ನಡೆದಿರುವುದು ಭಾರತದಲ್ಲಿ!

ಇದು ವಿಮಾನಗಳ ಬಿಸಿನೆಸ್ ಕ್ಲಾಸ್ನಲ್ಲಿ ಹಾರಾಡಿಕೊಂಡು, ಪಂಚತಾರಾ ಹೊಟೇಲುಗಳಲ್ಲಿ ಬಡತನದ ಬಗ್ಗೆ ಸೆಮಿನಾರ್ ನಡೆಸುವ ಎನ್ಜಿಒ `ತಜ್ಞ'ರ ಅಂಕಿಅಂಶವಲ್ಲ. ಭಾರತ ಸಕರ್ಾರದ ಗೃಹ ಸಚಿವಾಲಯ ಅಧಿಕೃತವಾಗಿ ಕಲೆಹಾಕಿರುವ ಅಂಕಿಅಂಶ. ದೇಶದ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಅಪರಾಧ ಪ್ರಕರಣ ದಾಖಲೆಗಳ ಬ್ಯೂರೋ (ಡಿಸಿಆರ್ಬಿ) ಕೆಲಸಮಾಡುತ್ತಿದೆ. ಇಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಸಕಲ ದೂರುಗಳನ್ನೂ, ಎಲ್ಲ ರೀತಿಯ ಅಪರಾಧ ಪ್ರಕರಣಗಳನ್ನೂ ಕಂಪ್ಯೂಟರ್ ಸಾಫ್ಟ್ವೇರ್ ನೆರವಿನಿಂದ ವಗರ್ೀಕರಿಸಿ, ಸಂಸ್ಕರಿಸಿ ದಾಖಲಿಸಲಾಗುತ್ತದೆ. ಜಿಲ್ಲೆಗಳ ಮಾಹಿತಿ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋಗೆ ಹೋಗುತ್ತದೆ. ರಾಜ್ಯಮಟ್ಟದ ಅಂಕಿಅಂಶ ಇಲ್ಲಿ ಸಿಗುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ) ಇಡೀ ದೇಶದ ಅಪರಾಧ ಚಿತ್ರಣವನ್ನು ತಯಾರಿಸಿ ಪ್ರಕಟಿಸುತ್ತದೆ. ಈಚೆಗೆ 2006ಕ್ಕೆ ಸಂಬಂಧಿಸಿದ `ಕ್ರೈಮ್ ಇನ್ ಇಂಡಿಯಾ' ವಾಷರ್ಿಕ ವರದಿ ಪ್ರಕಟವಾಗಿದೆ. ಅದು ನೀಡುತ್ತಿರುವ ದೇಶದ ಅಪರಾದ ಚಿತ್ರಣ ದಿಗಿಲು ಹುಟ್ಟಿಸುವಂತಿದೆ.

ಮೊದಲ `ಕ್ರೈಮ್ ಇನ್ ಇಂಡಿಯಾ' ವಾಷರ್ಿಕ ವರದಿ ಸಿದ್ಧವಾಗಿದ್ದು 1953ರಲ್ಲಿ. ಇತ್ತೀಚಿನ ವರದಿ 54ನೆಯದು. ಅದು ಕೇವಲ ದಾಖಲಿತ ಅಪರಾಧ ಪ್ರಕರಣಗಳ ಬಗ್ಗೆ ಮಾತ್ರ ವಿವರ ನೀಡುತ್ತದೆ. ಆದರೆ ದಾಖಲೆಗೆ ಸಿಗದೇ ಹೋದ ಅಪರಾಧ ಪ್ರಕರಣಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ ಎನ್ನುವುದು ಸರ್ವವಿದಿತ. ಅದೇನೇ ಇದ್ದರೂ ಅಧಿಕೃತ ವರದಿಯ ಪ್ರಕಾರವೇ ದೇಶದಲ್ಲಿ ವರ್ಷಕ್ಕೆ 32 ಸಾವಿರ ಕೊಲೆಗಳಾಗುತ್ತಿವೆ ಎಂದರೆ ಏನರ್ಥ?

2006ಕ್ಕೆ ಸಂಬಂಧಿಸಿದ ಕೆಲವು ಅಪರಾಧ ವಿವರಗಳನ್ನು ನೋಡೋಣ. ದೇಶದಲ್ಲಿ ನಡೆದ ಒಟ್ಟು ಅಪರಾಧಗಳ ಸಂಖ್ಯೆ 51,02,460!! ಅಂದರೆ, ಪ್ರತಿ 200 ಜನರ ಮಧ್ಯದಲ್ಲೊಂದು ಅಪರಾಧ ಪ್ರಕರಣ! ಇದರಲ್ಲಿ ಇಂಡಿಯನ್ ಪೀನಲ್ ಕೋಡ್ (ಭಾರತೀಯ ದಂಡ ಸಂಹಿತೆ) ಅಡಿ ಬರುವ ಅಪರಾಧಗಳು, ಇತರ ಕಾನೂನುಗಳ ಅಡಿ ಬರುವ ಅಪರಾಧಗಳು (ಮಹಿಳೆಯರ ಮೇಲಿನ ದೌರ್ಜನ್ಯಗಳು, ಆಥರ್ಿಕ ಅಪರಾದಗಳು, ಆಸ್ತಿ ಅಪರಾಧಗಳು, ಜಾತಿ ಆಧಾರಿತ ಅಪರಾಧಗಳು, ಮಕ್ಕಳ ಮೇಲಿನ ಅಪರಾಧಗಳು) -ಹೀಗೆ ವಿವಿಧ ರೀತಿಯ ವಗರ್ೀಕರಣಗಳಿವೆ. ಇ ಪೈಕಿ 18,78,293 ಐಪಿಸಿ ಅಪರಾಧಗಳು ನಡೆದಿವೆ.

ಇಲ್ಲಿ ಎಲ್ಲ ಅಪರಾದಗಳ ಪಟ್ಟಿ ಹಾಕುವುದು ಕಷ್ಟ. ಹಿಂಸಾ ಅಪರಾದಗಳ ಪೈಕಿ: ಕೊಲೆಗಳು 32,481. ಕೊಲೆಯ ಪ್ರಯತ್ನಗಳು 27,230 (ಕೊಲೆಯ ಪ್ರಯತ್ನಗಳಿಗಿಂತಲೂ ಕೊಲೆಗಳೇ ಜಾಸ್ತಿ. ಅಂದರೆ ಕೊಲೆಗಾರರ ಸಕ್ಸ್ಸ್ ರೇಟ್ ಹೆಚ್ಚು!). ಕಲ್ಪಬಲ್ ಹೋಮಿಸೈಡ್ (ಕೊಲೆಯಲ್ಲದ ಹತ್ಯೆಗಳು) 3,535. ಅಪಹರಣ 23,991. ಡಕಾಯಿತಿ 4747. ಡಕಾಯಿತಿ ಪ್ರಯತ್ನ 3129. ದರೋಡೆ 18,456. ದಂಗೆ, ದೊಂಬಿ 56,641. ದಾಳಿ 8480. ವರದಕ್ಷಿಣೆ ಸಾವು 7618.

ಉಳಿದಂತೆ ಕೆಲವನ್ನು ಮಾತ್ರ ನೋಡೋಣ. ಅತ್ಯಾಚಾರ (ರೇಪ್) 19,348. ಮಹಿಳೆ, ಹುಡುಗಿಯರ ಅಪಹರಣ 17,414. ಲೈಂಗಿಕ ಚೇಷ್ಟೆ 36,617. ಲೈಂಗಿಕ ಕಿರುಕುಳ 9,966. ಮೋಸಗಾರಿಕೆ 58,076. ಕನ್ನಗಳ್ಳತನ 91,666. ಕಳ್ಳತನ 2,74,354. ಮಕ್ಕಳ ಮೇಲಿನ ಅಪರಾಧಗಳು 18,967.

ಮಧ್ಯಪ್ರದೇಶ ದೇಶದಲ್ಲೇ ಅತಿ ಹೆಚ್ಚು ಅಪರಾಧ ದಾಖಲಿಸಿರುವ (ಶೇ. 10.4 - ಇದು ಸಾಧನೆಯಲ್ಲ, ನಾಚಿಕೆಗೇಡಿನ ವಿಷಯ) ರಾಜ್ಯ. ಅನಂತರದ ಸ್ಥಾನ ಮಹಾರಾಷ್ಟದ್ದು (ಶೇ. 10.2) ಅನಂತರ ಆಂಧ್ರಪ್ರದೇಶ (ಶೇ. 9.3). ನಗರಗಳ ಪೈಕಿ ಮೊದಲ ಮೂರು ನಗರಗಳು ದೆಹಲಿ, ಮುಂಬೈ ಹಾಗೂ ಬೆಂಗಳೂರು. ದೇಶದ ಒಟ್ಟು ಅಪರಾಧಗಳ ಪೈಕಿ ಶೇ. 16.2 ರಷ್ಟು ಅಪರಾಧಗಳು ಈ ಮೂರು ನಗರಗಳಲ್ಲಿ ನಡೆದಿವೆ! ಈಶಾನ್ಯ ರಾಜ್ಯಗಳಲ್ಲಿ ಅತಿ ಕಡಿಮೆ ಅಪರಾಧಗಳು ದಾಖಲಾಗಿವೆ!

2006ರಲ್ಲಿ ಬಂಧಿಸಲ್ಪಟ್ಟ ಆಪಾದಿತರ ಸಂಖ್ಯೆ 62,07,945!! ಅಂದರೆ, ದೇಶದ ಒಟ್ಟು ಜನರ ಪೈಕಿ ಪ್ರತಿ 160 ಜನರಿಗೆ ಒಬ್ಬರು ಬಂಧನಕ್ಕೆ ಒಳಗಾಗಿದ್ದಾರೆ!!

ನನ್ನ ಬಳಿ 1953ರಿಂದ ಈಚೆಗಿನ ಅಂಕಿಅಂಶಗಳೆಲ್ಲ ಇವೆ. 1953ರಲ್ಲಿ ದಾಖಲಾದ ಅಪರಾಧಗಳು 6 ಲಕ್ಷ. ಈಗ ಹತ್ತು ಪಟ್ಟು ಹೆಚ್ಚು ಅಪರಾಧಗಳು ದಾಖಲಾಗಿವೆ! ಅಪರಾಧ ಪ್ರಕರಣಗಳು ಏರುಗತಿಯಲ್ಲಿದ್ದು ಪ್ರತಿ ವರ್ಷವೂ ಹೆಚ್ಚಿನ ಪ್ರಗತಿ, ಹೆಚ್ಚಿನ ಬೆಳವಣಿಗೆ ತೋರಿಸುತ್ತಿವೆ! ಇದಕ್ಕಿಂತ ಹೆಚ್ಚಿನ ಅಂಕಿಅಂಶಗಳ ಗೋಜಲು ಈಗ ಬೇಡ.

`ಭಾರತ ಅತ್ಯಂತ ಸಭ್ಯರ ನಾಡು, ಇಲ್ಲಿ ಅಪರಾಧ ಪ್ರಕರಣಗಳು ಯೂರೋಪಿನಷ್ಟಿಲ್ಲ. ಇಲ್ಲಿನ ಕಳ್ಳರೂ ಪ್ರಾಮಾಣಿಕರೇ' ಎಂದು 18ನೇ ಶತಮಾನದ ಪೋಚರ್ುಗೀಸ್ ದಾಖಲೆಗಳಲ್ಲಿ ವಿವರಿಸಲಾಗಿದೆ. ಚಿಕ್ಕ ಅಪರಾಧಗಳಿಗೆ ಬಂಧನಕ್ಕೊಳಗಾದ ವ್ಯಕ್ತಿಗಳು ಪೊಲೀಸರಿಂದ ಅನುಮತಿ ಪಡೆದು ಕಾಡುಗಳ ಮಾರ್ಗದಲ್ಲಿ ಅನೇಕ ದಿನಗಳು ನಡೆದುಹೋಗಿ ತಮ್ಮ ಮನೆಯವರಿಗೆ ವಿಷಯ ತಿಳಿಸಿ ಅನಂತರ ಪೊಲೀಸ್ ಠಾಣೆಗೆ ಮರಳಿ ಬಂದು ಬಂಧನಕ್ಕೊಳಗಾಗುತ್ತಿದ್ದರು (ಹೋದರೆ ಹೋಗಲಿ ಎಂದೇ ಇವರನ್ನು ಬಿಟ್ಟಿದ್ದರೂ!) ಎನ್ನುತ್ತವೆ ಕೆಲವು ಪೋಚರ್ುಗೀಸ್ ದಾಖಲೆಗಳು!!

ಇಂತಹ ದೇಶವನ್ನು ಈಗ ಯಾವ ಮಟ್ಟಕ್ಕೆ ತರಲಾಗಿದೆ ನೋಡಿದಿರಾ? ಕಾನೂನು ಸುವ್ಯವಸ್ಥೆ ಎಲ್ಲಿದೆ?

ಕೋಟರ್ುಗಳಲ್ಲಿ ಪ್ರಕರಣಗಳ ಇತ್ಯರ್ಥ ವಿಳಂಬವಾಗಿ ಆಪಾದಿತರಿಗೆ ಶಿಕ್ಷೆ ವಿಧಿಸುವುದು ಸಮರ್ಪಕವಾಗಿ ನಡೆಯುತ್ತಿಲ್ಲ. ಅಪರಾದ ಹೆಚ್ಚಲು ಇದೂ ಕಾರಣ. 1961ರಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ. 30ರಷ್ಟು ಪ್ರಕರಣಗಳ ವಿಚಾರಣೆ ಮಾತ್ರ ಮುಗಿದಿತ್ತು. ಅವುಗಳ ಪೈಕಿ ಶೇ. 61ರಷ್ಟು ಪ್ರಕರಣಗಳಲ್ಲಿ ಮಾತ್ರ ಆಪಾದಿತರಿಗೆ ಶಿಕ್ಷೆ ವಿಧಿಸಲಾಗಿದೆ. 2006ರಲ್ಲಿ ಶೇ. 15.5ರಷ್ಟು ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗಿದೆ. ಈ ಪೈಕಿ ಶಿಕ್ಷಾಪ್ರಮಾಣ ಶೇ. 42 ಅಷ್ಟೇ. ಇದರರ್ಥ ಏನು? ಎಲ್ಲ ದಾಖಲಿತ ಪ್ರಕರಣಗಳ ವಿಚಾರಣೆ ಕೋಟರ್ಿನಲ್ಲಿ ಸಂಪೂರ್ಣವಾಗಿ ನಡೆಯುವುದಿಲ್ಲ ಎನ್ನುವುದೇ ವಾಸ್ತವ. ಒಂದೆಡೆ ದಿನದಿನಕ್ಕೆ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಅವುಗಳ ವಿಚಾರಣೆ ನಡೆಸುವುದು ಕಷ್ಟವಾಗುತ್ತಿದೆ. ಈ ಇಳಿಮುಖದ ಟ್ರೆಂಡಿನಿಂದಾಗಿ ನ್ಯಾಯಾಲಯಕ್ಕೆ ಹೋದರೆ ತಮಗೆ ಶಿಕ್ಷೆ ಖಾತ್ರಿ ಎಂದು ಯಾರೂ ಹೆದರುತ್ತಿಲ್ಲ.

ನ್ಯಾಯಾಂಗದ, ಪೊಲೀಸ್ ವ್ಯವಸ್ಥೆಯ ಸುಧಾರಣೆ ಶಾಶ್ವತವಾಗಿ ನೆನೆಗುದಿಗೆ ಬಿದ್ದಿರುವುದು ಅಪರಾಧಿಗಳಿಗೆ ವರವಾಗಿ ಪರಿಣಮಿಸಿದೆ. ನ್ಯಾಯಾಂಗದ ಅನೇಕರ, ಪೊಲೀಸ್ ವ್ಯವಸ್ಥೆಯ ಹಲವರ ಭ್ರಷ್ಟಾಚಾರ ಅಪರಾದ ಹೆಚ್ಚಳಕ್ಕೆ ಇನ್ನೊಂದು ಕಾರಣ. ಅರಾಧಿಗಳಿಗೂ ರಾಜಕಾರಣಿಗಳಿಗೂ ನಡುವಿನ ಅಂತರ ಕಿರಿದಾಗುತ್ತಿರುವುದು ಅತ್ಯಂತ ಪ್ರಮುಖ ಕಾರಣ. ವಾಸ್ತವವಾಗಿ ಅಪರಾಧಿಗಳೇ ಆಳುವವರಾಗುತ್ತಿದ್ದಾರೆ ಎನ್ನುವುದೇ ಈ ಹೊತ್ತಿನ ಸತ್ಯ. ಎನ್.ಎನ್. ವೋಹ್ರಾ ಸಮಿತಿಯ ವರದಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ನಾಳೆ ಮುತ್ತುಲಕ್ಷ್ಮೀ, ನಳಿನಿ, ಅಫ್ಜಲ್ ಗುರು, ದಾವೂದ್ ಇಬ್ರಾಹಿಮ್ ಚುನಾವಣೆಗೆ ನಿಂತರೂ ಆಶ್ವರ್ಯವಿಲ್ಲ. ಭಾರತದಲ್ಲಿ ಇಂತಹ `ಪವಾಡ'ಗಳಿಗೆ ಬರವಿಲ್ಲ!


ಸ್ವಿಸ್ ಬ್ಯಾಂಕಿನಲ್ಲಿ ಹೆಚ್ಚು ಹಣ ಇಟ್ಟಿರುವವರು ಯಾರು?

ಸ್ವಿಸ್ ಬ್ಯಾಂಕುಗಳಲ್ಲಿ ಅತಿಹೆಚ್ಚು ಹಣವಿಟ್ಟಿರುವವರು ಯಾರು? ಇದು ಬಹಳ ನಿಗೂಢ. ಏಕೆಂದರೆ ಸ್ವಿಸ್ ಬ್ಯಾಂಕುಗಳದು ರಹಸ್ಯ ಖಾತೆಗಳು. ರಹಸ್ಯ ಕಾಯುವುದೇ ಈ ಬ್ಯಾಂಕುಗಳ ವಿಶೇಷತೆಯಾದ್ದರಿಂದ ಕಳ್ಳಸಾಗಣಿಕೆದಾರರು, ಉದ್ಯಮಿಗಳು, ರಾಜಕಾರಣಿಗಳು, ಸವರ್ಾಧಿಕಾರಿಗಳು, ಕ್ರಿಮಿನಲ್ಗಳು, ಅಪಾರ ಕಪ್ಪುಹಣ ಉಳ್ಳವರು ಅವುಗಳ ಮೊರೆ ಹೋಗುತ್ತಾರೆ. ಸ್ವಿಸ್ ಬ್ಯಾಂಕುಗಳ ರಹಸ್ಯ ಖಾತೆಗಳು ಭಾರಿ ಶ್ರೀಮಂತರಿಗೆ ಮಾಮೂಲು. ನಾವು ನೀವು ಮನೆ ಹತ್ತಿರದ ಪಬ್ಲಿಕ್ ಸೆಕ್ಟರ್ ಬ್ಯಾಂಕಿನಲ್ಲಿ ಖಾತೆ ತೆರೆದಷ್ಟೇ ಮಾಮೂಲು. ಅದು ಎಲ್ಲರಿಗೂ ಗೊತ್ತು.

ಆದರೆ ಈ ಸುದ್ದಿ ಆಘಾತಕಾರಿಯಾಗಿದೆ. ವಿವಿಧ ದೇಶಗಳ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಇಂದು ಸ್ವಿಸ್ ಬ್ಯಾಂಕುಗಳಲ್ಲಿ ಅತಿಹೆಚ್ಚು ಹಣವಿಟ್ಟಿರುವವರು ಭಾರತೀಯರು!! ಅಷ್ಟೇ ಅಲ್ಲ, ಹೆಚ್ಚು ಹಣವಿಟ್ಟಿರುವ ಜಗತ್ತಿನ ಮೊದಲ ಐದು ದೇಶಗಳ ಪೈಕಿ ಉಳಿದ ನಾಲ್ಕು ದೇಶಗಳ ಎಲ್ಲ ಠೇವಣಿಗಳ ಒಟ್ಟು ಮೊತ್ತಕ್ಕಿಂತಲೂ ಭಾರತೀಯರ ಕಪ್ಪುಹಣದ ಪ್ರಮಾಣವೇ ಹೆಚ್ಚು!!

2006ರ `ಸ್ವಿಸ್ ಬ್ಯಾಂಕಿಂಗ್ ಅಸೋಸಿಯೇಷನ್' ವರದಿಯನ್ನು ಉಲ್ಲೇಖಿಸಿ ಸಿಎನ್ನ್-ಐಬಿಎನ್ ವಾಹಿನಿ ಹಾಗೂ ಪಾಕಿಸ್ತಾನದ `ಡೈಲಿ ಮೇಲ್' ಪತ್ರಿಕೆ ಈಚೆಗೆ ವರದಿ ಮಾಡಿರುವಂತೆ ಭಾರತೀಯ ಸ್ವಿಸ್ ಕುಳಗಳ ಒಟ್ಟು ಠೇವಣಿ 1456 ಶತಕೋಟಿ ಡಾಲರ್! ಅಂದರೆ 1.456 ಟ್ರಿಲಿಯನ್ (ಲಕ್ಷಕೋಟಿ) ಡಾಲರ್! ರೂಪಾಯಿ ಲೆಕ್ಕದಲ್ಲಿ (ಅಂದಾಜು ಲೆಕ್ಕದಂತೆ) ಸುಮಾರು 70,00,0,000,00,00,000 (70 ಲಕ್ಷ ಕೋಟಿ) ರೂಪಾಯಿಗಳು! ಇದು ನಮ್ಮ ಸಗಟು ಆಂತರಿಕ ಉತ್ಪನ್ನ (ಜಿಡಿಪಿ)ಗಿಂತಲೂ ಹೆಚ್ಚು.

ಅಂಕಿಅಂಶದ ಪ್ರಕಾರ, ರಷ್ಯಾದ ಪಾಲು 470 ಶತಕೋಟಿ ಡಾಲರ್. ಬ್ರಿಟನ್ 390 ಶತಕೋಟಿ ಡಾಲರ್. ಉಕ್ರೇನ್ 100 ಶರತಕೋಟಿ ಡಾಲರ್. ಅನಂತರ, ಉಸಿರು ಬಿಗಿಹಿಡಿಯಿರಿ, ಕಮ್ಯೂನಿಸ್ಟ್ ಚೀನಾದ ಪಾಲು 96 ಶತಕೋಟಿ ಡಾಲರ್! ಚೀನಾದ `ಪೀಪಲ್ಸ್' ಸಕರ್ಾರದ ದೊರೆಗಳು, `ಶ್ರಮಿಕರ ಪರವಾದ' ಕಮ್ಯೂನಿಸ್ಟ್ ಸವರ್ಾಧರ್ಿಕಾರಿಗಳು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ ಹಣ ಸುಮಾರು 5,00,000,00,00,000 ರೂಪಾಯಿಗಳು!

ಟ್ಯಾಕ್ಸ್ ಜಸ್ಟಿಸ್ ನೆಟ್ವಕರ್್ (ಟಿಜೆಎನ್) ಸಂಸ್ಥೆ ಮಾಚರ್್ 2005ರಲ್ಲಿ ಪ್ರಕಟಿಸಿದ ಸಂಶೋಧನಾ ವರದಿಯ ಪ್ರಕಾರ, ಜಗತ್ತಿನ ಶ್ರೀಮಂತರ ವೈಯಕ್ತಿಕ ಸ್ವಿಸ್ ಖಾತೆಗಳ ಠೇವಣಿ ಸುಮಾರು 11.5 ಟ್ರಿಲಿಯನ್ ಡಾಲರ್ಗಳು. ಲೇಖಕ ರೇಮಂಡ್ ಬೇಕರ್ ಸ್ವಿಸ್ ಖಾತೆಗಳನ್ನು ಕುರಿತ ತನ್ನ ಪುಸ್ತಕವೊಂದರಲ್ಲಿ ಹೇಳುವಂತೆ, 1970ರ ದಶಕದ ಮಧ್ಯಭಾಗದಿಂದ ಈಚೆಗೆ ಬಡ ದೇಶಗಳಿಂದ ಏನಿಲ್ಲವೆಂದರೂ 5 ಟ್ರಿಲಿಯನ್ ಡಾಲರ್ನಷ್ಟು ಹಣ ಪಶ್ಚಿಮದ ದೇಶಗಳಳ್ಲಿರುವ ಸ್ವಿಸ್ ಬ್ಯಾಂಕುಗಳಿಗೆ ಹರಿದುಬಂದಿದೆ. ಜಗತ್ತಿನ ಕೇವಲ ಶೇ. 1 ರಷ್ಟು ಜನರು ಜಗತ್ತಿನ ಒಟ್ಟು ಐಶ್ವರ್ಯದ ಶೇ. 57ರಷ್ಟನ್ನು ಕಬಳಿಸಿ ತಮ್ಮ ಸ್ವಂತದ್ದಾಗಿಸಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಭಾರತದ ವಿಷಯಕ್ಕೆ ಮತ್ತೆ ಬನ್ನಿ. 1.4 ಟ್ರಿಲಿಯನ್ ಡಾಲರ್ ಹಣ 1947ರಿಂದ ಈಚೆಗೆ ದೇಶವನ್ನು ಲೂಟಿ ಮಾಡಿರುವ ಹಣ. ಇದರಲ್ಲಿ ರಾಜಕಾರಣಿಗಳ, ಅಧಿಕಾರಿಗಳ ಹಾಗೂ ಉದ್ಯಮಿಗಳ ಪಾಲಿದೆ. ಘೋಷಿತ ಕ್ರಿಮಿನಲ್ಗಳ ಹಣವೂ ಇರಬಹುದು. ಒಂದು ಬಾರಿ ಸ್ವಿಸ್ ವಾಲ್ಟ್ಗಳನ್ನು ಸೇರಿದ ಹಣ ಶಾಶ್ವತವಾಗಿ ಕಣ್ಮರೆಯಾಗುತ್ತದೆ. ಬೋಫೋಸರ್್ ಹಗರಣ ನೆನಪಿಸಿಕೊಳ್ಳಿ. ಈ ಹಗರಣದ ಅಂತಿಮ ಫಲಾನುಭವಿ ಯಾರು ಎಂಬುದು ಇನ್ನೂ, ಅಧಿಕೃತವಾಗಿ, ನಿಗೂಢವಾಗಿದೆ (ಅನಧಿಕೃತವಾಗಿ ಜನಮಾನಸದಲ್ಲಿದೆ, ಅದು ಬೇರೆ ಮಾತು). ದೇಶದ `ನಂಬರ್ ಒನ್' ಕುಟುಂಬ ಏನಿಲ್ಲವೆಂದರೂ 2-3 ಶತಕೋಟಿ ಡಾಲರ್ ಹಣವನ್ನು ಸ್ವಿಸ್ ಖಾತೆಗಳಲ್ಲಿ ಇಟ್ಟಿದೆ ಎಂಬುದು ಸುಬ್ರಮಣಿಯನ್ ಸ್ವಾಮಿಯ ಆರೋಪ. `ಇದು ಹಳೆಯ ಅಮೆರಿಕನ್ ತನಿಖೆಯಿಂದ ತಿಳಿದುಬಂದಿದ್ದ ಸಂಗತಿ, ಈಗ ಇನ್ನೂ ಬಹಳ ಹೆಚ್ಚಿರಬಹುದು' ಎನ್ನುತ್ತಾರೆ ಅವರು. ಉದಾಹರಣೆಗೆ, `2001ರ ಸೆಪ್ಟೆಂಬರ್ನಲ್ಲಿ ಲಕ್ಷಾಂತರ ಡಾಲರ್ ಕ್ಯಾಷ್ ಸಮೇತ ಅಮೆರಿಕದ ವಿಮಾನನಿಲ್ದಾಣವೊಂದರಲ್ಲಿ ಈ ಕುಟುಂಬದ `ಯುವರಾಜ' ಎಫ್ಬಿಐ ಕೈಗೆ ಸಿಕ್ಕಿಬಿದ್ದಿದ್ದ' ಎನ್ನುತ್ತಾರೆ ಅವರು.

ಕೋಟ್ಯಂತರ ಹಣ ಹೊಡೆಯಲು, ದೇಶವನ್ನು ಲೂಟಿ ಮಾಡಲು, ಕಳ್ಳ ದಂಧೆ ನಡೆಸಲು ಅನೇಕ ಮಾರ್ಗಗಳಿರುತ್ತವೆ. ಅವೆಲ್ಲ ನಮ್ಮ, ನಿಮ್ಮ ಕಲ್ಪನೆಗೆ ನಿಲುಕದ ವಿಷಯಗಳು. ದೇಶಗಳ ಗೂಢಚಾರಿಕೆ ವಿಭಾಗದ ಹಣ, ರಕ್ಷಣಾ ಖಾತೆಯ ರಹಸ್ಯ ಹಣ -ಇವೆಕ್ಕೆಲ್ಲ ಬಹಿರಂಗ ಲೆಕ್ಕ ಇರುವುದಿಲ್ಲ. ಪೊಲೀಸ್ ಇಲಾಖೆಯಲ್ಲೂ ಅನ್ಅಕೌಂಟೆಡ್ ಹಣ ಅಪಾರವಾಗಿರುತ್ತದೆ. ಸಂಬಂಧಪಟ್ಟವರು ಅಪ್ರಾಮಾಣಿಕರಾದರೆ ಏನಾಗುತ್ತದೆ ಎಂಬುದನ್ನು ನೀವು ಊಹಿಸಬಲ್ಲಿರಿ.

ಸಾಮಾನ್ಯವಾಗಿ ಭಾರತೀಯರು ಹೊರದೇಶಗಳಲ್ಲಿ ಬ್ಯಾಂಕ್ ಖಾತೆ ತೆರೆಯಬೇಕಾದರೆ ರಿಸವರ್್ ಬ್ಯಾಂಕಿನ ಅನುಮತಿ ಬೇಕು. ಈ ಅನುಮತಿ ಪಡೆದು ಸ್ವಿಸ್ ಖಾತೆ ತೆರೆದವರು ಎಷ್ಟು ಮಂದಿ? ಒಬ್ಬರೂ ಇಲ್ಲ! ಅಂದರೆ ನಮ್ಮ ಅಧಿಕೃತ ಅಂಕಿಅಂಶಗಳ ಪ್ರಕಾರ ಒಬ್ಬ ಭಾರತೀಯನೂ ಸ್ವಿಸ್ ಖಾತೆ ಹೊಂದಿಲ್ಲ! ಸ್ವಿಸ್ ಖಾತೆ ತೆರೆಯುವವರು ಅಧಿಕೃತವಾಗಿ ತೆರೆಯುತ್ತಾರೆಯೆ? ಜಗತ್ತಿನ ಕಳ್ಳಹಣ, ಕಪ್ಪುಹಣವನ್ನು ಕಾಯುವುದೇ ಸ್ವಿಸ್ ಬ್ಯಾಂಕುಗಳ ವೈಶಿಷ್ಟ್ಯತೆ.

ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟಿರುವ ಎಲ್ಲ ಹಣವನ್ನೂ ಯಾರಾದರೂ ಪುಣ್ಯಾತ್ಮರು ದೇಶಕ್ಕೆ ವಾಪಸ್ಸು ತರಲು ಸಾಧ್ಯವೆ? ವಾಸ್ತವ ನೆಲೆಗಟ್ಟಿನಲ್ಲಿ ಇದು ಕೇವಲ ಕನಸು. ಸ್ವಿಸ್ ಬ್ಯಾಂಕಿಗೆ ಹೋದ ಹಣ ಹಿಂತಿರುಗಿ ಬಂದು ಯಾವ ಸಕರ್ಾರದ ಖಜಾನೆಯನ್ನೂ ಸೇರಿದ ನಿದರ್ಶನಗಳಿಲ್ಲ.

ಆದರೂ ಕಲ್ಪನೆ ಮಾಡಿಕೊಳ್ಳೋಣ. ನಮ್ಮ ದೇಶವನ್ನು ಕೊಳ್ಳೆ ಹೊಡೆದ ಎಲ್ಲ ಹಣವನ್ನು ವಾಪಸ್ಸು ತಂದರೆ ನಮ್ಮ ದೇಶದ 100 ಕೋಟಿ ಜನರಿಗೆ ತಲಾ 70,000 ರೂಪಾಯಿಗಳಂತೆ ಹಂಚಬಹುದು. ನಿಮ್ಮ ಮನೆಯಲ್ಲಿ 5 ಜನರಿದ್ದರೆ ನಿಮ್ಮ ಕುಟುಂಬಕ್ಕೆ 3.5 ಲಕ್ಷ ರೂಪಾಯಿ ಸಿಗುತ್ತದೆ! ಭಾರತೀಯರ ಸ್ವಿಸ್ ಹಣದಿಂದ ದೇಶದ ಶಾಲೆಗಳ, ಆಸ್ಪತ್ರೆಗಳ ಸಂಖ್ಯೆಯನ್ನು ನಾಲ್ಕು ಪಟ್ಟು ಹೆಚ್ಚಿಸಿ 100 ವರ್ಷ ಆರಾಮವಾಗಿ ನಡೆಸಬಹುದು. ದೇಶದ ರಕ್ಷಣಾ ಬಜೆಟ್ ಅನ್ನು ಎರಡರಷ್ಟು ಹೆಚ್ಚಿಸಿ ಮುಂದಿನ 30 ವರ್ಷ ಆ ಮಟ್ಟವನ್ನೇ ಕಾಯ್ದುಕೊಳ್ಳಬಹುದು. ಕೇವಲ ಐದೇ ವರ್ಷಗಳಲ್ಲಿ ಭಾರತೀಯ ರಸ್ತೆಗಳು, ರೈಲು ಮಾರ್ಗಗಳು, ವಿಮಾನ ನಿಲ್ದಾಣಗಳು ಜಗತ್ತೇ ನಾಚುವಂತೆ ಆಗಿಬಿಡುತ್ತವೆ. 1.4 ಟ್ರಿಲಿಯನ್ ಡಾಲರ್ ಫಾರಿನ್ ಎಕ್ಸ್ಚೇಂಜ್ ರಿಸವರ್್ ದೇಶದ ಆಥರ್ಿಕತೆಯನ್ನು ಕನಸಿನೆತ್ತರಕ್ಕೆ ಕೊಂಡೊಯ್ಯುತ್ತದೆ. ದೇಶದ ಎಲ್ಲ ಸಾಲ ತೀರಿಸಬಹುದು. ಮುಂದಿನ 25 ವರ್ಷಗಳ ಕಾಲ ಒಂದು ಪೈಸೆ ಸಾಲವಿಲ್ಲದೇ ಪೆಟ್ರೋಲಿಯಂ ಕೊಳ್ಳಬಹುದು. ಆದರೆ ಇದಾವುದೂ ನಡೆಯುವ ಮಾತಲ್ಲ. ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಹಣ ಇನ್ನಷ್ಟು ಬೆಳೆಯುತ್ತ ಹೋಗುವುದನ್ನು ಮಾತ್ರ ನಾವು ನಿರೀಕ್ಷಿಸಬಹುದು.

ಭಾರತ ಇನ್ನೂ `ಬಡದೇಶ'ವೇ ಆಗಿರುವ ರಹಸ್ಯವೇನೆಂದು ತಿಳಿಯಿತೆ?


ಓಟಿಗಾಗಿ ಸಿಮಿಯ ಸೆರಗು ಹಿಡಿಯುವುದೆ?

ನಮ್ಮ ಕೋಮುವಾದಿ ರಾಜಕೀಯ ಯಾವ ಮಟ್ಟದಲ್ಲಿದೆ ನೋಡಿ.

`ಇಸ್ಲಾಂ ನಮ್ಮ ದೇಶವೇ ಹೊರತು ಭಾರತ ಅಲ್ಲ' -ಹೀಗೆಂದು ಗುಡುಗಿದವನು ಮಹಮ್ಮದ್ ಅಮೀರ್ ಶಕೀಲ್. ಸಂದರ್ಭ: ಔರಂಗಾಬಾದ್ ಸಮಾವೇಶ. 2001ರಲ್ಲಿ ನಿಷೇಧಿತವಾದ ಉಗ್ರವಾದಿ ಜಿಹಾದಿ ಸಂಘಟನೆ, `ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಅಫ್ ಇಂಡಿಯಾ' (ಸಿಮಿ) 1999ರಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ಅದು.

`ಸಿಮಿ ಭಯೋತ್ಪಾದಕ ಸಂಘಟನೆ ಅಲ್ಲ. ಅದನ್ನು ನಿಷೇಧಿಸಿದವರೇ ಭಯೋತ್ಪ್ಪಾದಕರು' - ಎಂದು ದೇಶದ ದೊಡ್ಡ `ಸೆಕ್ಯುಲರ್' ಪಕ್ಷದಿಂದ ಹಿಡಿದು ಚಿಕ್ಕ ಸೆಕ್ಯುಲರ್ ಪಕ್ಷಗಳ ಅನೇಕ ರಾಜಕಾರಣಿಗಳು ಗುಡುಗಿದ್ದಾರೆ.

ಮೂರು ದಶಕಗಳಿಂದ ಈ ಸಂಘಟನೆ ತನ್ನ ದೇಶವಿರೋಧಿ ಹಾಗೂ ಮಾನವ ವಿರೋಧಿ ಚಟುವಟಿಕೆಗಳಿಂದ ಗಮನ ಸೆಳೆಯುತ್ತಲೇ ಇದೆ. ಆದರೂ ಅದಕ್ಕೆ ರಾಜಕೀಯ ಬೆಂಬಲ ಒದಗಿಸಲು ಮುಂದೆ ಬರುವ `ನಾಯಕರು' ಬಹಳ ಮಂದಿ ಇದ್ದಾರೆ.

ಈಗಂತೂ ಸಿಮಿ ಮನೆಮಾತಾಗಿದೆ. ಭಾರತದ ಎಲ್ಲ ರಾಜ್ಯಗಳಲ್ಲೂ ಅದರ ಬೇರು ಹರಡಿದೆ. ಕನರ್ಾಟಕದಲ್ಲಿ ಸಿಮಿಗೆ ಸೇರಿದ ಉಗ್ರವಾದಿ ಯುವಕರು ಸಿಕ್ಕಿಬಿದ್ದಿದ್ದಾರೆ. ತೀರಾ ಈಚೆಗೆ, ಅಂದರೆ ಇದೇ ಏಪ್ರಿಲ್ 7, ಚಾಂದ್ರಮಾನ ಯುಗಾದಿ ಹಬ್ಬದಂದು ಸಿಮಿಯ 6 ಉಗ್ರರನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಮಾಚರ್್ 27ರಂದು ಸಂಘಟನೆಯ ಪ್ರದಾನ ಕಾಯದಶರ್ಿ ಸಫ್ದರ್ ನಾಗೋರಿ ಸಹ ಸಿಕ್ಕಿಬಿದ್ದಿದ್ದಾನೆ. 2000ನೇ ಆಗಸ್ಟ್ 15 ರಿಂದ ಈವರೆಗೆ ಸರಣಿ ಬಾಂಬ್ ದಾಳಿ ಮೊದಲಾದ ಅನೇಕ ಭಯೋತ್ಪಾದಕ ಹಾಗೂ ದೇಶವಿರೋಧಿ ಚಟುವಟಿಕೆಗಳ ಹಾಗೂ ಸಂಚಿನ ಆರೋಪದ ಮೇಲೆ ನೂರಾರು, ಸಾವಿರಾರು ಸಿಮಿ ಕಾರ್ಯಕರ್ತರು ವಿವಿಧ ರಾಜ್ಯಗಳಲ್ಲಿ ಬಂಧಿಸಲ್ಪಟ್ಟಿದ್ದಾರೆ. ಬಂಧಿತರಿಂದ ಅನೇಕ ಸಂಚುಗಳು ಬಯಲಾಗಿವೆ. ಅನೇಕ ಸಿಮಿ ತರಬೇತಿ ಶಿಬಿರಗಳನ್ನು ಪೊಲೀಸರು ನಾಶಮಾಡಿದ್ದಾರೆ. ಅನೇಕ ಬಂಧಿತ ಉಗ್ರರಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದೆ.

2001ರ ಸೆಪ್ಟೆಂಬರ್ 21 ರಂದು ಈ ಸಂಘಟನೆಯನ್ನು ಕೇಂದ್ರ ಸಕರ್ಾರ ನಿಷೇಧಿಸಿತು. ಮರುದಿನ `ಈ ನಿಷೇಧ ಸಮರ್ಥನೀಯವಲ್ಲ' ಎಂಬ ಧಾಟಿಯಲ್ಲಿ ಕೆಲವು ಇಂಗ್ಲಿಷ್ ಪತ್ರಿಕೆಗಳು ಬರೆದವು. `ಇದು ರಾಜಕೀಯ ಪ್ರೇರಿತ ನಿಷೇಧ', `ಕೋಮುವಾದಿಗಳ ಅಪಾಯಕಾರಿ ಕ್ರಮ' ಎಂದು ಜರಿಯಲಾಯಿತು. ಮಾಜಿ ಪ್ರಧಾನಿಯೊಬ್ಬರು ಸಿಮಿ ಪರವಾಗಿ ಕಣ್ಣೀರಿಟ್ಟು ಬೀದಿ ಮೆರವಣಿಗೆಯನ್ನೂ ನಡೆಸಿದರು. ಸಂಘಟನೆಯ ಪರವಾಗಿ ವಕೀಲರಂತೆ ವಾದಿಸಿದರು!

2006ರ ಏಪ್ರಿಲ್ 21ರಂದು ಮತ್ತೆ ಕೇಂದ್ರ ಸಕರ್ಾರ ಸಿಮಿಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಬೇಕಾಯಿತು. ದೊಡ್ಡ ಸೆಕ್ಯುಲರ್ ಪಕ್ಷ ತನಗೆ ಎದುರಾದ ಅನಿವಾರ್ಯತೆಗೆ ಪರಿಹಾರವಾಗಿ ತನ್ನ ಕೆಲವು ಚಿಕ್ಕ ನಾಯಕರಿಂದ ಸಿಮಿ ಪರವಾದ ಹೇಳಿಕೆ ಕೊಡಿಸಿತು! ಆದರೆ ಅದೇ ವರ್ಷ ಜುಲೈ 6ರಂದು `ಸಿಮಿ ಭಯೋತ್ಪಾದಕ ಸಂಘನೆಯಲ್ಲ' ಎಂಬ ವಾದವನ್ನು ತಳ್ಳಿಹಾಕಿದ ಸುಪ್ರೀಂ ಕೋಟರ್್ ಸಂಘಟನೆಯ ಮೇಲಿನ ನಿಷೇಧವನ್ನು ಎತ್ತಿಹಿಡಿಯಿತು. ನಿಷೇಧದ ಅಗತ್ಯವನ್ನು ಕುರಿತು ಪರಿಶೀಲಿಸಲು ನಿಯುಕ್ತವಾಗಿದ್ದ ನ್ಯಾಯಾಧಿಕರಣ ಸಹ ಅದೇ ವರ್ಷ ಆಗಸ್ಟ್ 6ರಂದು ಈ ನಿಷೇಧವನ್ನು ಮಾನ್ಯಮಾಡಿತು.

2007ರ ಫೆಬ್ರವರಿ 15ರಂದು `ಸಿಮಿ ದೇಶವಿರೋಧಿ ಸಂಘಟನೆ' ಮತ್ತು `ದೇಶ ಒಡೆಯುವ ಪ್ರತ್ಯೇಕತಾವಾದಿ ಸಂಘಟನೆ' ಎಂದು ಸ್ವಯಂ ಸುಪ್ರೀಂ ಕೋಟರ್್ ಝಾಡಿಸಿದೆ. `ನೀವು ಪ್ರತ್ಯೇಕತಾವಾದಿ ಸಂಘಟನೆ. ದೇಶವನ್ನು ಹೋಳುಗಳಾಗಿ ಮಾಡುವವರು. ನಿಮ್ಮ ಇಂತಹ ದೇಶವಿರೋಧಿ ಚಟುವಟಕೆಗಳನ್ನು ನೀವಿನ್ನೂ ನಿಲ್ಲಿಸಿಲ್ಲ' ಎಂದು ನಿಷೇಧವನ್ನು ರದ್ದುಮಾಡುವಂತೆ ಕೋರಿದ್ದ ಸಂಘಟನೆಯ ಮುಖಕ್ಕೆ ರಾಚುವಂತೆ ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

ಈ ವಿಷಯದಲ್ಲಿ ಅನುಮಾನ ಏನು? `ಸಿಮಿ ಒಂದು ಭಯೋತ್ಪ್ಪಾದಕ ಸಂಘಟನೆ' ಎಂಬುದು ಯಾವಾಗಲೋ ಸಾಬೀತಾಗಿರುವ ಅಂಶವಲ್ಲವೆ? ವಾಸ್ತವವಾಗಿ ಇದು ಭಾರತದ ಹಸಿ ಹಸಿ ಮೂಲಭೂತವಾದಿ ಸಂಘಟನೆ. ಕಮ್ಯುನಿಸ್ಟರಿಗೆ ನಕ್ಸಲ್ ಆಯಾಮವಿದ್ದಂತೆ ಇಸ್ಲಾಮಿಸ್ಟರಿಗೆ ಸಿಮಿ.

ಉತ್ತರ ಪ್ರದೇಶದ ಅಲಿಗಢದಲ್ಲಿ ಏಪ್ರಿಲ್ 25, 1977ರಂದು ಅದರ ಜನನವಾಯಿತು. ಅದರ ಜನಕ ಜರ್ನಲಿಸಂ ಪ್ರೊಫೆಸರ್ ಮಹಮ್ಮದ್ ಅಹ್ಮದುಲ್ಲಹ್ ಸಿದ್ದಿಕಿ. ಮುಸ್ಲಿಂ ಯುವಕರನ್ನು ಆಕಷರ್ಿಸಿ ಸೆಳೆದುಕೊಂಡು ಭಾರತವನ್ನು ಇಸ್ಲಾಮೀ ದೇಶ (ದಾರುಲ್ ಇಸ್ಲಾಮ್) ಮಾಡಬೇಕು ಎಂಬುದು ಅದರ ಉದ್ದೇಶ. ಪ್ರಸ್ತುತ ಉತ್ತರಪ್ರದೇಶ, ದೆಹಲಿ, ಮಧ್ಯಪ್ರದೇಶ, ಗುಜರಾತ್, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಳ್ಲಿ ಅದರ ಜಾಲ ಪ್ರಬಲವಾಗಿದೆ ಎನ್ನಲಾಗಿದೆ. ಕೇರಳದಲ್ಲಿ ಅದು 12 ವಿವಿಧ ಸಂಸ್ಥೆಗಳ ತೆರೆಮರೆಯಲ್ಲಿ ಸಕ್ರಿಯವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮೇಲೆ ಯಾವುದೋ ಸಂಸ್ಥೆಯ ಫ್ರಂಟ್ ಆಫಿಸ್. ಅದರ ಹಿಂದೆ ಸಿಮಿಯ ಕೆಲಸ! ಕನರ್ಾಟಕದಲ್ಲೂ ಅದರ ಜಾಲ ಹರಡಿರುವ ಅಂಶ ಈಚೆಗೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ 3000 ಮದರಸಾಗಳ ಪೈಕಿ ಬಹುತೇಕ ಮದರಸಾಗಳು ಸಿಮಿ ಕಾರ್ಯಕ್ಷೇತ್ರ್ರವಾಗಿವೆ ಎಂಬುದು ಗೂಢಚಾರ ಇಲಾಖೆಯ ಮಾಹಿತಿ.

ಓಸಾಮಾ ಬಿನ್ ಲಾಡೆನ್ ಸಿಮಿಯ ಹೀರೋ. ಮುಸ್ಲಿಮೇತರ ದೇಶಕ್ಕೆ ಹಿಂಸಾತ್ಮಕ ಜಿಹಾದ್ ಒಂದೇ ಮದ್ದು ಎಂದು ಅದು ದೃಢವಾಗಿ ಭಾವಿಸಿದೆ ಎನ್ನುತ್ತಾರೆ ತಜ್ಞರು. ಭಾರತ ದೇಶದ ವಿರುದ್ಧ `ಜಿಹಾದ್' ಘೊಷಿಸಿರುವ ಈ ಸಂಘಟನೆಗೆ ಪಾಕಿಸ್ತಾನದ ಲಷ್ಕರ್-ಎ-ತೋಯ್ಬಾದಿಂದ ಹಿಡಿದು ಅನೇಕ ವಿದೇಶಿ ಭಯೋತ್ಪಾದಕ ಹಾಗೂ ಗೂಢಚಾರಿ ಸಂಸ್ಥೆಗಳೊಂದಿಗೆ ಸಂಬಂಧವಿರುವುದನ್ನು ನ್ಯಾಯಾಲಯಗಳೂ ಗುರುತಿಸಿವೆ.

ಕಾಲ ಹೇಗೆ ತಿರುಗಿದೆ ನೋಡಿ. ಈಗಂತೂ ಪತ್ರಿಕೆಗಳ ತುಂಬ ಬರೀ ಸಿಮಿ ಚಟುವಟಿಕೆಗಳ ವರದಿಗಳೇ. ಆದರೆ ಅದಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ನೇಮಿಸಿಕೊಳ್ಳುವುದು ಹೇಗೆ ಸಾಧ್ಯವಾಯಿತು? ಹೇಗೆ ಇಷ್ಟೆಲ್ಲಾ ಬೇರು ಬಿಡಲು ಸಾಧ್ಯವಾಯಿತು? ಎನ್ನುವುದೇ ಮುಖ್ಯವಾದ ಪ್ರಶ್ನೆಗಳು. ಇದಕ್ಕೆ ಉತ್ತರ ಸುಲಭ. ಪ್ರಮುಖ ರಾಜಕೀಯ ನಾಯಕರ ಬೆಂಬಲ ಅಥವಾ ನಿರ್ಲಕ್ಷ್ಯ - ಈ ಎರಡರಲ್ಲಿ ಒಂದು ಲಭ್ಯವಿದ್ದರೆ ಮಾತ್ರ ಇದು ಸಾಧ್ಯ.

2006ರಲ್ಲಿ ರಾಷ್ಟ್ರೀಯ ಉದರ್ು ಪ್ರವರ್ತನಾ ಮಂಡಳಿಯ ಕಾರ್ಯಕ್ರಮದ ನೆಪದಲ್ಲಿ ಸಿಮಿ ಸಂಘಟನೆ ತನ್ನ ಹೊಸ ಪದಾಧಿಕಾರಿಗಳನ್ನು ಆರಿಸಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಮತೀಯ ಹಾಗೂ ರಾಜಕೀಯ ಮುಖಂಡರ ನೆರವು ಪಡೆದುಕೊಂಡು ಹೇಗಾದರೂ 2001ರ ನಿಷೇಧವನ್ನು ರದ್ದುಮಾಡಿಸಿಕೊಳ್ಳುವ ನಿರ್ಣಯವನ್ನು ಇದೇ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. `ಸೆಕ್ಯುಲರ್' ರಾಜಕಾರಣಿಗಳಿಗೆ ಮುಸ್ಲಿಂ ಓಟು ಹಾಕಿಸುವ ಭರವಸೆ ಇತ್ತು ಅವರ ಬೆಂಬಲವನ್ನು ಸುಲಭವಾಗಿ ಪಡೆಯಬಹುದು ಎಂಬುದು ಅದರ ಅನುಭವ. ನಕ್ಸಲ್ ಸಂಘಟನೆಗಳು ಈ ರೀತಿಯ ತಂತ್ರಗಾರಿಕೆಯನ್ನು ಬಹಳ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿವೆ.

ಆದರೆ ಒಂದಿಷ್ಟು ಓಟಿಗಾಗಿ ದೇಶಕ್ಕೇ ಬರೆ ಎಳೆಯುವ `ನಾಯಕರು' ಎಂತಹವರು? ಈಗಲೂ ಸಿಮಿ ಪರವಾಗಿ ಮಾತನಾಡುವ ರಾಜಕಾರಣಿಗಳಿಗೆ ಕೊರತೆ ಇಲ್ಲ. ನಿಮಗೆ ಕೆಲವರ ಹೆಸರುಗಳು ಬೇಕೇ ಬೇಕು ಎಂದರೆ 2001ರ ಸೆಪ್ಟೆಂಬರ್ ತಿಂಗಳ ಇಂಗ್ಲಿಷ್ ಪತ್ರಿಕೆಗಳನ್ನು ತೆರೆದು ನೋಡಿ. ಒಂದು ಹಿಂಟ್: ಈಚೆಗೂ ಮಾಜಿ ಪ್ರಧಾನಿಗಳು ಸಿಮಿ ಪರವಾಗಿ ಮಾತನಾಡಿದ ವರದಿಗಳು ಪ್ರಕಟವಾಗಿವೆ.

`ಅಲ್ಲಾಹ್' ಎಂದರೆ ಜೈಲು! `ಕಾಬಾಹ್' ಎಂದರೆ...

ಮಲೇಶಿಯಾದಲ್ಲಿ ಮುಸ್ಲಿಮೇತರರು `ಅಲ್ಲಾಹ್' ಎಂಬ ಪದವನ್ನೇ ಬಳಸುವಂತಿಲ್ಲ ಎಂಬ ನಿಯಮ ಜಾರಿಗೆ ಬಂದಿದೆ! ವಿಮಶರ್ೆ ಮಾಡಲು ಅಥವಾ ಹೊಗಳಲೂ ಸಹ ಈ ಪದವನ್ನು ಮುಸ್ಲಿಮೇತರರು ಬಳಸುವಂತಿಲ್ಲ!

ಮಲೇಶೀಯಾದ 11 ರಾಜ್ಯಗಳು - ಜೋಹರ್, ಮಲಕ್ಕಾ, ನೇಗ್ರಿ, ಸೆಂಬಿಲನ್, ಪಹಾಂಗ್, ಪೇರಕ್, ಕೇಲಂತನ್, ತೇರಂಗಾನು, ಕೇದಾಹ್, ಪಲರ್ಿಸ್ ಹಾಗೂ ಸೆಲಾಂಗೂರ್ - ಈ ಕುರಿತು ಆದೇಶ ಹೊರಡಿಸಿ ಗೆಜೆಟ್ನಲ್ಲಿ ಪ್ರಕಟಿಸಿವೆ! ಉಳಿದ 4 ನಾಲ್ಕು ರಾಜ್ಯಗಳು - ಪೆನಾಂಗ್, ಫೆಡರಲ್ ಟೆರಿಟರಿ, ಸಬಾಹ್ ಹಾಗೂ ಸರಾವಾಕ್ ಇನ್ನೇನು ಸದ್ಯದಲ್ಲೇ ಈ ಬಗ್ಗೆ ಆದೇಶ ಹೊರಡಿಸಿ ಗೆಜೆಟ್ ಪ್ರಕಟಣೆ ನೀಡಲಿವೆ. ನೀವು ಈ ಲೇಖನ ಓದುವ ವೇಳೆಗೆ ಗೆಜೆಟ್ ಪ್ರಕಟಣೆ ಆಗಿರಲೂಬಹುದು.

ಮುಸ್ಲಿಮೇತರರ ಪ್ರಕಟಣೆಗಳಲ್ಲಿ `ಅಲ್ಲಾಹ್', `ಕಾಬಾಹ್', `ಸೋಲಾತ್' ಮತ್ತು `ಬೈತುಲ್ಲಹ್' - ಈ ನಾಲ್ಕು ಪದಗಳನ್ನು ಬಳಸುವಂತೆಯೇ ಇಲ್ಲ ಎಂದೂ ಫತ್ವಾ ಹೊರಡಿಸಲಾಗಿದೆ.

`ಕೆಲವು ಕ್ಯಾಥೋಲಿಕ್ ಮಿಷನರಿ ಸಂಘಟನೆಗಳು ತಮ್ಮ ಪ್ರಕಟಣೆಗಳಲ್ಲಿ ಅಲ್ಲಾಹ್ ಕುರಿತು ವಿಚಿತ್ರ ಕಥೆಗಳನ್ನು ಬರೆದು ನಾನಾ ರೀತಿಯ ಆರೋಪಗಳನ್ನು ಮಾಡುತ್ತಿರುವುದು ಈ ಕ್ರಮವನ್ನು ನಾವು ತೆಗೆದುಕೊಳ್ಳಲು ಕಾರಣ' ಎಂದು ಮಲೇಶೀಯಾದ ಮುಸ್ಲಿಂ ಉಲೇಮಾಗಳು ಹಾಗೂ ಮಂತ್ರಿಗಳು ವಿವರಣೆ ನೀಡುತ್ತಾರೆ.

ಇನ್ನು ಮುಂದೆ ನೀವು ಮಲೇಶಿಯಾದಲ್ಲಿ `ಈಶ್ವರ ಅಲ್ಲಾಹ್ ತೇರೋ ನಾಮ್' ಎಂದೂ ಸಹ ಹೇಳುವಂತಿಲ್ಲ!
ಮುಂದೆ ಭಾರತದಲ್ಲೂ ಈ ಕಾನೂನು ಬಂದರೆ ಆಶ್ಚರ್ಯ ಪಡಬೇಕಿಲ್ಲ!

`ಈಶ್ವರ ಅಲ್ಲಾಹ್ ತೇರೋ ನಾಮ್' ಎಂಬುದು ಗಾಂಧಿಯವರ ಎಲ್ಲ ಸಭೆಗಳಲ್ಲೂ ಅನುರಣಿಸುತ್ತಿದ್ದ ಪ್ರಾರ್ಥನೆ. ಆದರೆ ಅವರ ಈ ಹಾಡನ್ನು ಮುಸ್ಲಿಮರು ಹಾಡಿದ್ದು ಬಹಳ ಬಹಳ ಕಡಿಮೆ! ಇದೇ ಪ್ರಾರ್ಥನೆಯನ್ನು ಮುಸ್ಲಿಮರ ತುಷ್ಟೀಕರಣ ಮಾಡಲು ಮತ್ತು ಹಿಂದೂಗಳ ಪುನರುತ್ಥಾನವನ್ನು ಬಗ್ಗುಬಡಿಯಲು ನಮ್ಮ `ಸೆಕ್ಯೂಲರ್' ರಾಜಕಾರಣಿಗಳು ನಾನಾ ರೀತಿಗಳಲ್ಲಿ ಬಳಸುತ್ತಿದ್ದುದು ಇತಿಹಾಸ. ಆದರೆ ಕ್ರಮೇಣ ಈ ಪ್ರಾರ್ಥನೆಯ ಬಳಕೆ ಸಾರ್ವಜನಿಕ ಸ್ಥಳಗಳಲ್ಲಿ ಕಡಿಮೆಯಾಗುತ್ತ ಹೋಯಿತು. ಸೆಕ್ಯೂಲರಿಸ್ಟರು ಅದನ್ನು ಹಾಡುವುದನ್ನೇ ಕಡಿಮೆ ಮಾಡತೊಡಗಿದರು. ಕಾಂಗ್ರೆಸ್ಸು ಉಪಾಯವಾಗಿ ಅದನ್ನು ಮರೆತೇಬಿಟ್ಟಿತು. ಏಕೆ ಈ ಪ್ರಾರ್ಥನೆ ನಿಲ್ಲಿಸಿದೆವು ಎಂದು ಯಾರೂ ವಿವರಣೆ ನೀಡಲು ಹೋಗಲಿಲ್ಲ!

ಏಕೆಂದರೆ ಸ್ವಯಂ ಮುಸ್ಲಿಮರಿಗೆ ಈ ಪ್ರಾರ್ಥನೆಯಲ್ಲಿ ಆಸಕ್ತಿ ಇರಲಿಲ್ಲ! ಕೇವಲ ಆಸಕ್ತಿ ಮಾತ್ರವೇ ಅಲ್ಲ, ಈ ಪ್ರಾರ್ಥನೆಯ ಬಗ್ಗೆ ಅನೇಕ ಮುಸ್ಲಿಂ ಉಲೇಮಾಗಳು ಸಾರ್ವಜನಿಕವಾಗಿ ಕ್ರೋಧವನ್ನೂ ವ್ಯಕ್ತಪಡಿಸಿದ್ದುಂಟು. ಈಗ `ಈಶ್ವರ..ಅಲ್ಲಾಹ್' ಜಪವನ್ನು ಬರೀ ಕೆಲವು ಹಳೆಯ ತಲೆಮಾರಿನ ಹಿಂದೂಗಳು ಮಾಡುತ್ತಾರೆಯೇ ಹೊರತು ಮುಸ್ಲಿಮರಲ್ಲ.

`ಅದು ಹೇಗೆ ನಿಜವಾದ ದೇವರಾದ ಅಲ್ಲಾಹ್ನನ್ನು ದೇವರಲ್ಲದ, ಮುಸ್ಲಿಮೇತರ ಕಾಫೀರ್ ರಾಮನಿಗೆ ಹೋಲಿಸಿದಿರಿ? ಇದು ಇಸ್ಲಾಮಿಗೆ ಮಾಡುತ್ತಿರುವ ಅವಹೇಳನ', ಇಸ್ಲಾಂ ಅಲ್ಲಾಹ್ ಅನ್ನು ಬಿಟ್ಟು ಉಳಿದ ಯಾರನ್ನೂ ದೇವರೆಂದು ಒಪ್ಪಿಕೊಳ್ಳುವುದಿಲ್ಲ (ಲಾ ಇಲಾಹಿ ಇಲ್ಲಲ್ಲಾಹ್.. ) ಎಂಬುದು ಅವರ ವಾದ. ಈ ವಾದಕ್ಕೆ ಕಾಂಗ್ರೆಸ್ಸಿಗರೂ ಸೇರಿದಂತೆ ಎಲ್ಲ ಸೆಕ್ಯೂಲರಿಸ್ಟರೂ ಚಕಾರವೆತ್ತದೇ ತಲೆಬಾಗಿದ್ದಾರೆ. ಇದೇ ಭಾರತದ ಸೆಕ್ಯೂಲರಿಸಂ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇತರರಿಗೆ `ಕೋಮುವಾದಿಗಳು' ಎಂಬ ಹಣೆಪಟ್ಟಿ ಹಚ್ಚುತ್ತ ತಾವು ಮಿಲಿಟೆಂಟ್ ಇಸ್ಲಾಮಿನ ಸೇವೆ ಮಾಡಿಕೊಂಡಿರುವುದನ್ನೇ ಭಾರತದಲ್ಲಿ `ಸೆಕ್ಯೂಲರಿಸಂ' ಎನ್ನುತ್ತಾರೆ. ಅದು ಬಹುತೇಕ ಎಲ್ಲರಿಗೂ ಗೊತ್ತು.

ಒಂದು ವಿಷಯ ಮರೆಯಬಾರದು. ದೇವರು, ಧರ್ಮ, ಅಧ್ಯಾತ್ಮ ಇವೆಲ್ಲ ಬಹಳ ಸೂಕ್ಷ್ಮ ವಿಷಯಗಳು. ಈ ಕುರಿತು ಯಾವ ದೊಣ್ಣೆ ನಾಯಕರೂ ಇರಬಾರದು. ಈ ವಿಷಯದಲ್ಲಿ ಜನರಿಗೆ ಸ್ವಾತಂತ್ರ್ಯವೂ ಇರಬೇಕು. ಒಂದಿಷ್ಟು ನೈತಿಕ ನಿಯಮಾವಳಿಗಳೂ ಇರಬೇಕು.

ನನ್ನ ಪ್ರಕಾರ, ದೇವರನ್ನು ನಂಬುವ ಸ್ತಾತಂತ್ರ್ಯ ಎಲ್ಲರಿಗೂ ಇರಬೇಕು. ಹಾಗೆಯೇ ಎಲ್ಲರಿಗೂ ದೇವರನ್ನು ನಂಬದಿರುವ ಸ್ವ್ತಾತಂತ್ರ್ಯವೂ ಇರಬೇಕು.

ತನಗೆ ಒಪ್ಪಿಗೆಯಾಗುವ ದೇವರನ್ನು ಮುಕ್ತವಾಗಿ ಆರಾಧಿಸುವ ಸ್ವಾತಂತ್ರ್ಯವೂ ಇರಬೇಕು.

ಹಾಗೆಯೇ ಕೆಲವು ಸ್ವಾತಂತ್ರ್ಯ ಯಾರಿಗೂ ಇರಬಾರದು. ಒಂದು, ತನಗೆ ಒಪ್ಪಿಗೆಯಾಗದಿರುವ ದೇವರನ್ನು ಅವಹೇಳನ ಮಾಡುವ ಸ್ವಾತಂತ್ರ್ಯ ಯಾರಿಗೂ ಇರಬಾರದು. ಆದರೆ ಮತಗಳ ಇತಿಹಾಸ, ಸ್ವರೂಪಗಳನ್ನು ವಿಮಶರ್ಿಸುವ ಹಕ್ಕು ಇರಬೇಕು. ಎರಡು, ತನಗೆ ಒಪ್ಪಿಗೆಯಾದ ದೇವರ ಆರಾಧನೆಯನ್ನು ಇತರರು ಮಾಡದಂತೆ ತಡೆಯುವ ಸ್ವಾತಂತ್ರ್ಯ ಯಾರಿಗೂ ಎಂದಿಗೂ ಇರಬಾರದು. ಮೂರನೆಯದಾಗಿ, ನೀವು ಇಂತಹ ದೇವರನ್ನು ಮಾತ್ರ ನಂಬಬೇಕು ಎಂದು ಆದೇಶಿಸುವ ಸ್ವಾತಂತ್ರ್ಯವೂ ಇರಬಾರದು.

ಆದರೆ ಬಾರತದಲ್ಲಿ ಕ್ರೈಸ್ತ ಮಿಷನರಿಗಳು ಹಿಂದೂ ದೇವರುಗಳನ್ನು ಅವ್ಯಾಹತವಾಗಿ, ವಾಚಾಮಗೋಚರವಾಗಿ ಅವಹೇಳನ ಮಾಡುತ್ತಾರೆ. ಆವರ ಭಾಷಣಗಳಲ್ಲಿ, ಪ್ರಕಟಣೆಗಳಲ್ಲಿ ಇಂತಹ ಅವಹೇಳಕಾರಿ ಹೇಳಿಕೆಗಳು ಸಮೃದ್ಧವಾಗಿ ಸಿಗುತ್ತವೆ. ಇದನ್ನು ಕೇಳುವವರು ಯಾರೂ ಇಲ್ಲ. ಏಕೆಂದರೆ ನಮ್ಮ `ಸೆಕ್ಯೂರಿಸಂ' ಪ್ರಕಾರ ಭಾರತದ ಸಮಸ್ತ ಮತೀಯ `ಅಲ್ಪಸಂಖ್ಯಾತ'ರಿಗೆ ಹಿಂದೂ ದೇವರುಗಳನ್ನು ನಿಂದಿಸುವ ಸ್ವಾತಂತ್ರ್ಯ ಇದೆ. ಎಂ. ಎಫ್. ಹುಸೇನ್ ಎಂಬ ಕಲಾರಂಗದ ಜಿಹಾದಿ ಹಿಂದೂ ದೇವರುಗಳನ್ನು ಮಾತ್ರ ಆಯ್ದುಕೊಂಡು ತನ್ನ ಹೀನ `ಅಭಿವ್ಯಕ್ತಿ' ಪ್ರದಶರ್ಿಸುವುದು ಅವನ ಸ್ವಾತಂತ್ರ್ಯ! ಈ ತಾಲಿಬಾನ್ ಮಾನಸಿಕತೆಯನ್ನು, `ಜಿಹಾದ್-ಬಿಲ್-ಕಲಮ್' ಪ್ರಣಾಳಿಕೆಯನ್ನು ಯಾರಾದರೂ ಪ್ರಶ್ನಿಸಿದರೆ ಅವರಿಗೇ `ತಾಲಿಬಾನಿಗಳು' ಎಂಬ ಹಣೆಪಟ್ಟಿ!

ಅದಿರಲಿ, ಈಗ ಜಗತ್ತಿನಲ್ಲೆಲ್ಲ ಮುಸ್ಲಿಮರ ಹಕ್ಕುಗಳದೇ ಕಾರುಬಾರು. ಮುಸ್ಲಿಮರಿಗೆ ಇತರರ ದೇವರುಗಳನ್ನು ಅವಹೇಳನ ಮಾಡುವ ಹಕ್ಕೂ ಇದೆ; ತಮ್ಮ ದೇವರನ್ನು ಇತರರು ಅವಹೇಳನ ಮಾಡುವುದಿರಲಿ, ಪೂಜಿಸುವುದನ್ನು ತಡೆಯುವ ಹಕ್ಕೂ ಅವರಿಗೆ ಇದೆ! `ನೀವು ಅಲ್ಲಾಹ್ನ್ನು ಬಿಟ್ಟು ದೇವರನ್ನು ನಂಬುವಂತಿಲ್ಲ' ಎಂದು `ತಮ್ಮವರಿಗೆ' ಆದೇಶ ಕೊಡುವ ಹಕ್ಕೂ ಮೊದಲಿನಿಂದಲೂ ಇದೆ!

ಯಾರಾದರೂ `ನಾನು ರಾಮನನ್ನು ಪೂಜಿಸುತ್ತೇನೆ' ಎಂದರೆ `ಬೇಡ' ಎನ್ನುವ ಅಧಿಕಾರ ಹಿಂದೂಗಳಿಗಿಲ್ಲ (ಆದರೆ `ನಾನು ರಾಮನನ್ನು ನಿಂದಿಸುತ್ತೇನೆ' ಎಂಬುದಕ್ಕೂ `ಬೇಡ' ಎನ್ನುವ ಅಧಿಕಾರ ಅವರಿಗಿಲ್ಲ ಎಂಬುದು ಸೆಕ್ಯೂಲರಿಸ್ಟ ವಾದ). ಹರಿಜನರಿಗೆ ದೇವಾಲಯ ಪ್ರವೇಶವನ್ನು ನಿರಾಕರಿಸಿದ್ದ ಕಾಲದಲ್ಲಿ ಹಿಂದೂ ಸಮಾಜಕ್ಕೆ ನಿಷೇಧಾತ್ಮಕ ಸ್ವರೂಪದ ಮೌಢ್ಯ ಆವರಿಸಿತ್ತು. ಅಂತಹ ಮೌಢ್ಯ ಮೂಲ ಹಿಂದೂ ಸಿದ್ಧಾಂತಗಳಲ್ಲಿ ಇರಲಿಲ್ಲ. ಅದು ಮಧ್ಯಯುಗೀನ ಇಸ್ಲಾಮಿಕ್ ನಿಷೇಧಾತ್ಮತ ಚಿಂತನೆಗಳ ಅನುಕರಣೆ ಅಷ್ಟೇ.

ದೇವರುಗಳು ಕೆಲವು ನಿದರ್ಿಷ್ಟ ಮಾನವರ ಖಾಸಗಿ ಸ್ವತ್ತಲ್ಲ. ದೇವರ ಮೇಲಿನ ಪೇಟೆಂಟ್ ಯಾರಿಗೂ ಇಲ್ಲ. ಇದನ್ನು ನಾವು ಮರೆಯಬಾರದು. ಆದರೆ ಈಗ ಮಲೇಶಿಯಾ ಮಾಡಿದ್ದೇನು? ನೀವು ಅಧಿಕೃತವಾಗಿ ಮುಸ್ಲಿಮರಲ್ಲದಿದ್ದರೆ `ಅಲ್ಲಾಹ್' ಎಂಬ ಹೆಸರನ್ನೇ ಎತ್ತುವಂತಿಲ್ಲ. `ಮುಸ್ಲಿಮರು ಅಲ್ಲಾಹ್ ಎಂಬ ದೇವರನ್ನು ನಂಬುತ್ತಾರೆ' ಎಂದು ಬರೆದರೇ ಸಾಕು, ನಿಮಗೆ ಜೈಲು!

ಏನಿದು ವಿಪರೀತ? ಜಗತ್ತು ಏನಾಗುತ್ತಿದೆ?


`ಪಬ್ ಭರೋ' ಚಳವಳಿಯ ಫಲಶ್ರುತಿ

`ಪಬ್ ಭರೋ' ಚಳವಳಿಗಾರರಿಗೆ ಇಲ್ಲಿದೆ ಸಂತಸದ ಸುದ್ದಿ! ದೇಶದ ಉಳಿದ ನಾಗರಿಕರಿಗೆ ಇದು ಆತಂಕದ ಸುದ್ದಿ.

ನವದೆಹಲಿಯ ಒಂದು ಪ್ರತಿಷ್ಠಿತ ಹೈಸ್ಕೂಲ್ ಅದು. ತರಗತಿಯೊಂದರ `ಮಾನಿಟರ್' ಹುಡುಗ (ರೇಣುಕಾ ಚೌಧರಿ ತರಹದ ಶ್ರೀಮಂತರ ಮನೆ ಹುಡುಗ) ಶಾಲೆಗೆ ಕೋಲಾ ಮತ್ತು ವಿಸ್ಕಿ ತಂದ. ಅವನು ಮತ್ತು ಅವನ ಗೆಳೆಯ ಹಾಗೂ ಗೆಳತಿಯರು ತಾವು ಕುಳಿತ ತರಗತಿಯಲ್ಲೇ `ಪಾಟರ್ಿ' ಮಾಡಲು ನಿರ್ಧರಿಸಿದರು. ಎಲ್ಲ 15-16 ವಯಸ್ಸಿನವರು. ಬಹುಬೇಗ ನಶೆ ಏರಿತು.

ತರಗತಿಗೆ ಟೀಚರ್ ಬಂದರು. ಅವರಿಗೆ ವಿದ್ಯುತ್ ಶಾಕ್ ಹೊಡೆದಂತಾಯಿತು. ಅವರು ಪ್ರಶ್ನಿಸುವ ಮೊದಲೇ ಕುಡಿದ ವಿದ್ಯಾಥರ್ಿನಿಯರಿಂದ ಟೀಚರ್ಗೆ ಅಶ್ಲೀಲ ಬೈಗುಳದ ಸುರಿಮಳೆ ಆರಂಭವಾಯಿತು. ವಿದ್ಯಾಥರ್ಿಗಳ ಅಟ್ಟಹಾಸ ಛಾವಣಿಗೇರಿತು. ಪ್ರಿನ್ಸಿಪಾಲ್ ಬಂದರು. ಮಾನಿಟರ್ ಹುಡುಗನ ಬ್ಯಾಡ್ಜ್ ಕಿತ್ತುಕೊಂಡರು. ಕುಡಿತ ಎಲ್ಲ ವಿದ್ಯಾಥರ್ಿ(?), ವಿದ್ಯಾಥರ್ಿನಿ(?) ಯರನ್ನು ಒಂದು ವಾರದ ಕಾಲ ಶಾಲೆಯಿಂದ ಸಸ್ಪೆಂಡ್ ಮಾಡಿದರು.

ಇದು ಕೇವಲ ಒಂದೆರಡು ವಾರಗಳ ಹಿಂದಷ್ಟೇ ದೆಹಲಿಯ ಪತ್ರಿಕೆಗಳಲ್ಲಿ ವರದಿಯಾದ ಸುದ್ದಿ. `ಪಬ್ ಭರೋ' ಚಳವಳಿ ಆರಂಭವಾದ ನಂತರದ ಬೆಳವಣಿಗೆ. ಮುಂದೆ ಓದಿ. ಸಸ್ಪೆಂಡ್ ಆದ ಮಕ್ಕಳು ಒಂದು ವಾರ ಕಳೆದ ನಂತರ ಮತ್ತೆ ಶಾಲೆಗೆ ಬಂದರು. ಯಾರಲ್ಲೂ ಯಾವುದೇ ತರಹದ ವಿಷಾದ ಇರಲಿಲ್ಲ. ಯಾರಿಗೂ ತಾವು ತಪ್ಪು ಮಾಡಿದ್ದೇವೆ ಎಂದು ಅನಿಸಿಯೇ ಇಲ್ಲ. ತಾವು ಮಾಡಿದ್ದು ತಪ್ಪೇನಲ್ಲ ಎಂದು ಅವರೆಲ್ಲ ಸಂದರ್ಶನಗಳಲ್ಲಿ ಹೇಳಿಕೆ ನೀಡಿದ್ದಾರೆ!

ಇದು `ಪಬ್ ಭರೋ' ಆಂದೋಲನದ ಫಲಶ್ರುತಿ. ಈಗ ಯಾರಿಗೂ ಯಾವುದರಲ್ಲೂ ಸಂಕೋಚ ಇಲ್ಲ. ಇದ್ದ ಚೂರುಪಾರು ಸಂಕೋಚಗಳೆಲ್ಲ ಮಾಧ್ಯಮಗಳ ಪ್ರಚಂಡ ಒತ್ತಾಸೆಯಿಂದಾಗಿ ಮರೆಯಾಗಿವೆ. ತಾವು ಏನೂ ಮಾಡಿದರೂ ತಪ್ಪಿಲ್ಲ ಎಂಬ ಧಾಷ್ಟ್ರ್ಯ ಈಗ ಮೂಡಲಾರಂಭಿಸಿದೆ. ಇದಕ್ಕೆ ರೇಣುಕಾ ಚೌಧರಿಯ `ದೃಷ್ಟಿ'ದೋಷ ಅಥವಾ `ನಾಲಿಗೆ'ದೋಷ ಕಾರಣವೋ ಅಥವಾ ಪ್ರಮೋದ್ ಮುತಾಲಿಕರ `ಹಸ್ತ'ದೋಷ ಕಾರಣವೋ ಹೇಳಲಾಗದು.

ವಾಸ್ತವವಾಗಿ ಇದು ಸ್ವಲ್ಪ ಹಳೆಯ ಸಮಸ್ಯೆಯೇ. ಯುವಜನರ ಮಧ್ಯದಲ್ಲಿ `ಪಬ್ ಭರೋ' ಪ್ರಕ್ರಿಯೆ ಕೆಲವು ವರ್ಷಗಳಿಂದಲೇ ನಡೆಯುತ್ತಿದೆ. ಆದರೆ ಅದಕ್ಕೆ ಒಂದು `ಚಳವಳಿ'ಯಂತಹ `ಸ್ಥಾನಮಾನ' ಹಾಗೂ `ಗೌರವ-ಘನತೆ' ಈಗ ಒದಗಿರಬಹುದು.

`ಕ್ಯಾಂಪೇನ್ ಎಗೇನ್ಸ್ಟ್ ಡ್ರಿಂಕಿಂಗ್ ಅಂಡ್ ಡ್ರೈವಿಂಗ್' (ಸಿಎಡಿಡಿ) ಸಂಸ್ಥೆ ಡಿಸೆಂಬರ್ 2008 ಮತ್ತು ಜನವರಿ 2009ರಲ್ಲಿ ಒಂದು ರಾಷ್ಟ್ರೀಯ ಸಮೀಕ್ಷೆ ನಡೆಸಿದೆ. ಅದರ ಪ್ರಕಾರ, ದೇಶಾದ್ಯಂತ ಈಗ ಕುಡಿತದ ಕ್ರ್ರಾಂತಿಯೇ ಆರಂಭವಾಗಿದೆ. 1990ರಲ್ಲಿ ಕುಡಿಯುವವರ ಪೈಕಿ ಕನಿಷ್ಠ ವಯೋಮಾನ 28 ವರ್ಷವಾಗಿತ್ತು. ಈಗ ಅದು 19 ವರ್ಷಕ್ಕೆ ಇಳಿದಿದೆ. ಇನ್ನು 5 ವರ್ಷಗಳಲ್ಲಿ ಇದು 15 ವರ್ಷಕ್ಕೆ ಇಳಿಯುವ ಸಾಧ್ಯತೆಗಳಿವೆ. ಈಚೆಗೆ ದೆಹಲಿ, ಬೆಂಗಳೂರು ಮುಂತಾದ ಮಹಾನಗರಗಳ ಶ್ರೀಮಂತರ ಹದಿಹರೆಯದ ಮಕ್ಕಳು ಮನೆ, ಶಾಲೆ ಎನ್ನದೇ ಎಲ್ಲೆಂದರಲ್ಲಿ ರಾಜಾರೋಷವಾಗಿ ಕುಡಿಯಲು ಶುರು ಮಾಡಿಕೊಂಡಿದ್ದಾರೆ. ಇನ್ನು 5 ವರ್ಷಗಳಲ್ಲಿ ಈ ವ್ಯಾಧಿ ಮಧ್ಯಮವರ್ಗಕ್ಕೂ ಬಡಿಯುತ್ತದೆ.

ಈ ಸಮೀಕ್ಷಾ ಅಧ್ಯಯನದ ಪ್ರಕಾರ ಈಗ ನಗರಗಳ ಪಬ್ಗಳಲ್ಲಿ ಕುಡಿಯುವವರ ಪೈಕಿ ಶೇ. 80 ರಷ್ಟು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಶೇ. 67ರಷ್ಟು 21 ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನವರು. 18-21ರ ನಡುವಣ ಪ್ರಾಯದ ಕುಡುಕರ ಪೈಕಿ ಶೇ. 96 ರಷ್ಟು ಮಂದಿ ಒಂದು ಬಾರಿಗೆ ಐದಕ್ಕಿಂತಲೂ ಹೆಚ್ಚು ಡ್ರಿಂಕ್ಗಳನ್ನು ತೆಗೆದುಕೊಳ್ಳುತ್ತಿದ್ದಾರೆ! ನೆನಪಿರಲಿ, ಎರಡು ಡ್ರಿಂಕ್ಗಳಿಗಿಂತಲೂ ಹೆಚ್ಚು ತೆಗೆದುಕೊಳ್ಳುವುದು ಆರೋಗ್ಯವಂತ ವಯಸ್ಕ ಪುರುಷರಿಗೂ ಅಪಾಯಕಾರಿ.

ಪ್ರಾಸಂಗಿಕವಾಗಿ ಹೇಳುವುದಾದರೆ, ಇದೇ ವರ್ಷದ ಜನವರಿ 12 ರಂದು ಬ್ರಿಟನ್ನಿನಾದ್ಯಂತ 20 ವರ್ಷ ತುಂಬಿದ 13,30,000 ಯುವಜನರು `ಹುರ್ರೇ' ಎಂದು ಖುಷಿಪಟ್ಟರು. ದೇಶಾದ್ಯಂತ ಸಮಾರಂಭಗಳು ನಡೆದವು. ಭಾಗವಹಿಸಿದ ತರುಣ-ತರುಣಿಯರೆಲ್ಲ `ನಾವೂ ವಯಸ್ಕರಾದೆವು' ಎಂದು ಸಾರ್ವಜನಿಕವಾಗಿ ಘೋಷಿಸಿ ಖುಷಿಪಟ್ಟರು! ಏಕೆ ಈ ಸಡಗರ? ಸೈನ್ಯ ಸೇರಲು ಅರ್ಹತೆ ಲಭಿಸಿತು ಎಂದಲ್ಲ. ಇನ್ನುಮುಂದೆ ತಮಗೆ ಕುಡಿಯಲು ಅನುಮತಿ ಸಿಗುತ್ತದೆ ಎಂಬ ಸಂಭ್ರಮ ಅದು! (ವಿಪಯರ್ಾಸವೆಂದರೆ, ಜನವರಿ 12 ವಿಶ್ವಕ್ಕೇ ಅದ್ಭುತ ಜೀವನ ಸಂದೇಶ ನೀಡಿದ ಸ್ವಾಮಿ ವಿವೇಕಾನಂದರ ಜನ್ಮದಿನ!).

ಬ್ರಿಟನ್ ವಿಷಯ ಬಿಡಿ. ಅಲ್ಲಿ 20ಕ್ಕೂ ಕಡಿಮೆ ವಯಸ್ಸಿನವರಿಗೆ ಆಲ್ಕೋಹಾಲ್ ನೇರವಾಗಿ ಮಾರುವುದಿಲ್ಲ. ಅವರು ಬೇರೆ ವಯಸ್ಕರಿಂದ ತರಿಸಿಕೊಂಡು ಕುಡಿಯಬಹುದು! ಅಮೆರಿಕದಲ್ಲಿ ಸ್ವಲ್ಪ ಸ್ಟ್ರಿಕ್ಟ್. ಅಲ್ಲಿ ಆಲ್ಕೋಹಾಲ್ ಕೊಳ್ಳಲು ಹಾಗೂ ಕುಡಿಯಲು 21 ವರ್ಷಗಳಾಗಿರಲೇಬೇಕು. ಅದಕ್ಕೂ ಚಿಕ್ಕ ಪ್ರಾಯದವರಿಗೆ ಪಬ್ಗಳ ಒಳಗೂ ಬಿಡುವುದಿಲ್ಲ. ಸ್ವಲ್ಪ ಅನುಮಾನ ಬಂದರೂ ವಯಸ್ಸಿನ ದೃಡೀಕರಣ ಕೇಳುತ್ತಾರೆ. ಯಾವುದಾದರೂ ಸ್ವೀಕಾರಾರ್ಹ ಐಡೆಂಟಿಟಿ ಕಾಡರ್್ಗಳನ್ನು ತೋರಿಸಬೇಕಾಗುತ್ತದೆ.

ಆದರೆ ಭಾರತದಲ್ಲಿ 16 ವರ್ಷದವರು ಪಬ್ಗೆ ಹೋದರೂ ಮುಕ್ತ ಸ್ವಾಗತ ಸಿಗುತ್ತದೆ. ಇಲ್ಲೂ ಅಪ್ರಾಪ್ತ ವಯಸ್ಕರಿಗೆ ಆಲ್ಕೋಹಾಲ್ ಡ್ರಿಂಕ್ಗಳನ್ನು ಮಾರುವುದು ಕಾನೂನು ಪ್ರಕಾರ ಅಪರಾಧವೇ. ಆದರೆ ಅದೆಲ್ಲ ವಾಸ್ತವದಲ್ಲಿ ನಡೆಯುತ್ತಿಲ್ಲ. ಸಿಎಡಿಡಿ ಸಮೀಕ್ಷೆಯಲ್ಲಿ ತಿಳಿದುಬಂದಿರುವ ಹಾಗೆ ಶೇ. 33.9 ರಷ್ಟು 16 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳು ಸಕರ್ಾರದಿಂದ ಲೈಸೆನ್ಸ್ ಪಡೆದ ಬಾರ್ಗಳಿಂದಲೇ, ಪಬ್ಗಳಿಂದಲೇ ಸುಲಭವಾಗಿ ಮದ್ಯ ಕೊಂಡು ತರುತ್ತಿದ್ದಾರೆ! ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಮಾಡಿದ ಹಾಗೆ ಮಧ್ಯರಾತ್ರಿಯಲ್ಲಿ ರೆಸ್ಟೋರೆಂಟ್ ನೌಕರರಿಗೆ ಹೊಡೆದರೂ ಇಲ್ಲಿ ಕೇಳುವವರು ಇಲ್ಲ. ನಿಮ್ಮ ಕಿಸೆಯಲ್ಲಿರುವ ದುಡ್ಡು, ನಿಮ್ಮ ಅಪ್ಪನ ಸ್ಥಾನಮಾನ ಇಷ್ಟೇ ಪರಿಗಣನೆಗೆ ಬರುವುದು.

ಪ್ರತಿವರ್ಷ 21 ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನ ಸುಮಾರು 2000 ಯುವಜನರು ಕುಡಿತದ ಪರಿಣಾಮವಾಗಿ ಅಪಘಾತಗಳಲ್ಲಿ ಸಾಯುತ್ತಿದ್ದಾರೆ ಎನ್ನುತ್ತದೆ ಸಮೀಕ್ಷೆ. ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ ಆಲ್ಕೋಹಾಲ್ ವಯಸ್ಕ ಪುರುಷರಿಗಿಂತಲೂ ಮಹಿಳೆ ಮತ್ತು ಮಕ್ಕಳಿಗೆ ತೀವ್ರ ಹಾನಿಕಾರಕವಾಗಿದೆ ಎಂಬುದು ಹಲವು ವರ್ಷಗಳ ವೈಜ್ಞಾನಿಕ ಸಂಶೋಧನೆಗಳಿಂದ ಖಚಿತವಾಗಿರುವ ಸಂಗತಿ.

ಆದರೆ ನಮ್ಮ ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯ ಪ್ರಕಾರ, `ಪಬ್ ಭರೋ' ಚಳವಳಿಯೇ `ತಾಲಿಬಾನೀಕರಣ'ಕ್ಕೆ ಸರಿಯಾದ, ಪರಿಣಾಮಕಾರಿಯಾದ ಮದ್ದು! ಈಗ ಅವರು ಮತ್ತು ಅವರ `ಲೂಸ್ ಅಂಡ್ ಫಾರ್ವಡರ್್' ಬಂಧು-ಮಿತ್ರರು ಖುಷಿಪಡಲು ಅಡ್ಡಿಯಿಲ್ಲ. ನಮಗೆ ನಿಮಗೆ ಮಾತ್ರ ಆತಂಕ.

ಮುತಾಲಿಕ್, ರೇಣುಕಾ ಮತ್ತು ಕೆಲವು ಮಾಧ್ಯಮಗಳು ಅನಾವಶ್ಯಕ ತರಲೆ ತೆಗೆಯದಿದ್ದಲ್ಲಿ ಈ ಕುರಿತು ಒಂದು ಒಳ್ಳೆಯ ಚಚರ್ೆ ಸಾಧ್ಯವಾಗುತ್ತಿತ್ತೇನೋ. ಈಗ ಮಂಗಳೂರು ಪ್ರಕರಣವನ್ನು ಶ್ರೀಮಂತ ಹುಡುಗರು ತಮ್ಮದೇ ರೀತಿಯಲ್ಲಿ ಅಥರ್ೈಸಿಕೊಳ್ಳತೊಡಗಿದ್ದಾರೆ. ಅವರ ಪಾಲಿಗೆ ಈಗ ಪಬ್, ಆಲ್ಕೋಹಾಲ್ ನಿಂದಕರೆಲ್ಲ ಬರೀ ಮುತಾಲಿಕ್ಗಳು.


ಕ್ಯಾಥೋಲಿಕ್ ಚಚರ್ಿನ ಕತ್ತಲೆಯ ಬದುಕು

ಭಾರತದ ರೋಮನ್ ಕ್ಯಾಥೊಲಿಕ್ ಪಾದ್ರಿಗಳ ಕತ್ತಲೆಯ ಬದುಕಿನ ಅನಾವರಣ ಪರ್ವ ಆರಂಭವಾಗಿದೆ. ಕೇರಳದ ನನ್ಗಳು ಒಬ್ಬೊಬ್ಬರಾಗಿ ತಮ್ಮ ತಮ್ಮ ಕಾನ್ವೆಂಟಿನ ಹಾಗೂ ಚಚರ್ಿನ ಕತ್ತಲೆಯ ಬದುಕಿನತ್ತ ಬೆಳಕು ಚೆಲ್ಲಲಾರಂಭಿಸಿದ್ದಾರೆ. ಇಂತಹ ಅನೇಕ ನನ್ಗಳು ಅನುಮಾನಾಸ್ಪದವಾದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅನೇಕ ಪಾದ್ರಿಗಳ `ಒಳ ವಿಷಯಗಳು' ಬೆಳಕಿಗೆ ಬರಲಾರಂಭಿಸಿವೆ. ಕೆಲವು ಪ್ರಕರಣಗಳು ನ್ಯಾಯಾಲಯಗಳ ಕಟಕಟೆ ಏರಿವೆ. ಮತ್ತೆ ಕೆಲವು ಬೀದಿ ರಂಪ ಆಗಿವೆ. ಈಗಲೂ ನಾಗರಿಕ ಸಮಾಜ ಸುಮ್ಮನಿರುವುದು ಸಾಧ್ಯವಿಲ್ಲ. `ಛೀ..ಥೂ..' ಎನ್ನದೇ ಇರಲು ಆಗುವುದಿಲ್ಲ.

ರೋಮನ್ ಕ್ಯಾಥೊಲಿಕ್ ಪಾದ್ರಿಗಳ ವಿಕೃತ ಕಾಮಲೀಲೆಗಳ ಸುದ್ದಿ 2001-02ರಲ್ಲಿ ಉತ್ತರ ಅಮೆರಿಕ ಖಂಡದಿಂದ ಅಲೆಅಲೆಯಾಗಿ ತೇಲಿಬಂದವು. ಅಪ್ರಾಪ್ತ ಮಕ್ಕಳ ಮೇಲೆ ವಿಕೃತ ಕಾಮುಕ ಪಾದ್ರಿಗಳು ಅವ್ಯಾಹತವಾಗಿ ನಡೆಸಿಕೊಂಡು ಬಂದಿದ್ದ ಲೈಂಗಿಕ ದೌರ್ಜನ್ಯ ಆ ವರ್ಷ ಬಟಾ ಬಯಲಾಯಿತು. ತನಿಖೆಗಳು ನಡೆದವು. ಕಳೆದ 30-40 ವರ್ಷಗಳಿಂದ ಅನೇಕ ಪಾದ್ರಿಗಳು ಮತ್ತು ನನ್ಗಳು ಕಾಪಾಡಿಕೊಂಡು ಬಂದಿದ್ದ ಕಳ್ಳಸಂಬಂಧಗಳು, ಪಾದ್ರಿಗಳು ನಡೆಸಿದ ಅತ್ಯಾಚಾರಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು, ಸಲಿಂಗ ಕಾಮದ ಕಥೆಗಳು - ಎಲ್ಲ ಹೊರಬಂದವು. ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಯಾಥೋಲಿಕ್ ಮತಾಧಿಕಾರಿಗಳ ಪೈಕಿ ಶೇ. 4ರಷ್ಟು ಮಂದಿ ವಿಕೃತ ಕಾಮಿಗಳಾಗಿದ್ದುದು ಖಚಿತವಾಯಿತು! `ಯುಎಸ್ ಕಾನ್ಫರೆನ್ಸ್ ಆಫ್ ಕ್ಯಾಥೋಲಿಕ್ ಬಿಷಪ್ಸ್' ನಡೆಸಿದ `ಅಧಿಕೃತ' ತನಿಖೆಯಲ್ಲೇ 4,392 ಪಾದ್ರಿಗಳು ಸಿಕ್ಕಿಬಿದ್ದರು! ಅವರ ಮೇಲಿನ ಅಪವಾದ ಸುಳ್ಳಲ್ಲ ಎಂಬುದು ಖಚಿತವಾಯಿತು. ಇಡೀ ವಿಶ್ವ ವ್ಯಾಟಿಕನ್ನಿನತ್ತ ಹೇಸಿಗೆಯ ದೃಷ್ಟಿಯಿಂದ ನೋಡಿತು. ಪೋಪ್ ತಲೆ ತಗ್ಗಿಸಿದರು. ಕ್ಷಮೆ ಕೇಳಿದರು. ನ್ಯಾಯಾಲಯದ ಕಟಕಟೆ ಏರಿದ್ದ ಪ್ರಕರಣಗಳ ಇತ್ಯರ್ಥಕ್ಕಾಗಿ ನೂರಾರು ಕೋಟಿ ಡಾಲರ್ಗಳನ್ನು ಸುರಿದರು. ಬಲಿಪಶುಗಳಿಗೆ ಹಣದ ಪರಿಹಾರ ಕೊಟ್ಟರು. ಕೆಲವು ಪಾದ್ರ್ರಿಗಳು ರಾಜೀನಾಮೆ ನೀಡಿದರು. ಅನೇಕರು ಜೈಲು ಸೇರಿದರು. ಮತ್ತೆ ಕೆಲವರನ್ನು, ಏನೂ ಆಗಿಲ್ಲವೇನೋ ಎಂಬಂತೆ, ಚಚರ್ಿಗೆ ಪುನಃ ಸೇರಿಸಿಕೊಳ್ಳಲಾಯಿತು (ನಮ್ಮ ಲೋಕಾಯುಕ್ತ ದಾಳಿಗಳಿಗೆ ಒಳಗಾದ ಸಕರ್ಾರಿ ಅಧಿಕಾರಿಗಳ ಹಾಗೆ)!

ಇದೀಗ ಭಾರತದ ಸರದಿ. ಇಲ್ಲೂ ಕೆಲವು ಪಾದ್ರಿಗಳ ದುರಾಚಾರ ಹಳೆಯ ಕಥೆಯೇ. ಆದರೆ ಈಚೆಗೆ ಹೊರಬರುತ್ತಿರುವ ಕೇರಳದ ಕ್ಯಾಥೊಲಿಕ್ ಕರಾಳತೆ ಒಂದು ಕೊನೆಯಿಲ್ಲದ ಮೆಗಾ ಸೀರಿಯಲ್! ಈ ಸರಣಿ ಸಿಸ್ಟರ್ ಅಭಯಾ ಅವರ ಕೊಲೆಯ ಆರೋಪದಿಂದ ಆರಂಭವಾಗುತ್ತದೆ. ಈ ಕಥಾಮಾಲಿಕೆಯ ಈಚಿನ ಟ್ವಿಸ್ಟ್ ಅಂದರೆ, 52 ವರ್ಷದ ಮಾಜಿ ನನ್, ಡಾ. ಸಿಸ್ಟರ್ ಜಸ್ಮೀ ಬರೆದು ಈಗಷ್ಟೇ ಪ್ರಕಟಿಸಿರುವ ಆತ್ಮಚರಿತ್ರೆ, `ಆಮೆನ್: ಆ್ಯನ್ ಆಟೋಬಯೋಗ್ರಫಿ ಆಫ್ ಎ ನನ್'.

`ನನ್ನ ನೋವನ್ನು ಹೊರ ಪ್ರಕಟಿಸಲು ಈ ಪುಸ್ತಕ ಬರೆದಿದ್ದೇನೆ. ಮತೀಯ ಕೆಲಸ ಬಿಟ್ಟು ನನ್ನ ಜೀವನದ ಎರಡನೇ ಘಟ್ಟವನ್ನು ಹೊಸದಾಗಿ ಆರಂಭಿಸುತ್ತಿದ್ದೇನೆ. ಆದರೆ ಸಿಸ್ಟರ್ಗಳಿಗೆ ಏನಾಗುತ್ತಿದೆ ಎಂಬ ಸತ್ಯ ಸಂಗತಿಯನ್ನು ತಿಳಿಯುವ ಹಕ್ಕು ಸಮಾಜಕ್ಕೆ ಇದೆ. ಅದಕ್ಕಾಗಿ ಲೇಖನಿ ಹಿಡಿದೆ' ಎಂದಿದ್ದಾರೆ ಜಸ್ಮೀ. `ನನ್ನ 33 ವಷಗಳ ನನ್ ಹುದ್ದೆಯ ಅನುಭವಗಳನ್ನು 180 ಪುಟಗಳ ಪುಟ್ಟ ಪುಸ್ತಕದಲ್ಲಿ ತಿಳಿಸುವುದು ಕಷ್ಟ. ಆದರೂ ಕ್ಯಾಪಿಟೇಷನ್ ಶುಲ್ಕದ ಅವ್ಯವಹಾರದಿಂದ ಹಿಡಿದು ಚಚರ್ಿನ ಒಳಗಡೆ ಲಾಸ್ಯವಾಡುತ್ತಿರುವ ಸಲಿಂಗ ಕಾಮ, ವಿಲಿಂಗ ಕಾಮ, ಎಲ್ಲ ದುರಾಚಾರಗಳಿಗೆ ಕನ್ನಡಿ ಹಿಡಿದಿದ್ದೇನೆ' ಎನ್ನುತ್ತಾರೆ ಅವರು.

30 ವರ್ಷಗಳ ಹಿಂದೆ ಅವರು ನನ್ ಆದಾಗ ಹೊಸ ಹುಡುಗಿಯರ ಮೇಲೆ ಪಾದ್ರಿಗಳು ಅತ್ಯಾಚಾರ ನಡೆಸಿದ್ದು; ಅನೇಕ ನನ್ಗಳ ಹಾಗೂ ಪಾದ್ರಿಗಳ ನಡುವೆ ಏರ್ಪಟ್ಟ ಒಳಸಂಬಂಧ; ನನ್ಗಳ ನಡುವಿನ ಸಲಿಂಗ ಕಾಮ; ಒತ್ತಡ ಮತ್ತು ಒತ್ತಾಯ ತಾಳಲಾರದ ನನ್ಗಳ ಅಸಹಾಯಕ ಸ್ಥಿತಿ, ಆತ್ಮಹತ್ಯೆ, ಕೊಲೆ...- ಇತ್ಯಾದಿ ಸಂಗತಿಗಳು ಅವರ ಪುಸ್ತಕದ ವಸ್ತು. ಬೆಂಗಳೂರಿನ ಹಿರಿಯ ಪಾದ್ರಿಯೊಬ್ಬ ಲಾಲ್ಬಾಗ್ಗೆ ಕರೆದೋಯ್ದು ಅಲ್ಲಿ ಕುಳಿತಿದ್ದ ಯುವ ಜೋಡಿಗಳನ್ನು ತಮಗೆ ತೋರಿಸಿದ್ದು; ಅನಂತರ ಕೋಣೆಗೆ ಕರೆತಂದು ತಮ್ಮನ್ನು ವಿವಸ್ತ್ರಗೊಳಿಸಿದ್ದು -ಎಲ್ಲವನ್ನೂ ಆಕೆ ತೆರೆದಿಟ್ಟಿದ್ದಾರೆ. ಆದರೆ ಭಾರತದ ಕ್ಯಾಥೋಲಿಕ್ ಬಿಷಪ್ ಕಾನ್ಫರೆನ್ಸ್ ಇನ್ನೂ ಯಾವುದೇ ತನಿಖೆ ಆರಂಭಿಸಿಲ್ಲ. ಪೋಪ್ ಇನ್ನೂ ಕ್ಷಮೆ ಕೇಳಿಲ್ಲ.

ಸಿಸ್ಟರ್ ಜಸ್ಮೀ ಸಾಮಾನ್ಯ ಹುಡುಗಿಯಲ್ಲ. ತಾನೇನು ಬರೆದಿದ್ದೇನೆ ಎಂಬ ಪರಿಜ್ಞಾನ, ವಿವೇಚನೆ ಇರುವ ವಿದ್ಯಾವಂತ ಪೌಢ ಮಹಿಳೆ ಅವರು. ತ್ರಿಸ್ಸೂರಿನ ಸೇಂಟ್ ಮೇರಿಸ್ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದವರು. ಕಳೆದ ವರ್ಷ `ಮೇಲಿನವರ ಕಿರುಕುಳ ತಾಳಲಾರದೇ' ಕೆಲಸ ಬಿಟ್ಟರು. ಚಚರ್ಿನ ಅವ್ಯವಹಾರಗಳನ್ನು ಬಯಲಿಗೆ ಎಳೆಯುವುದಾಗಿ ಶಪಥ ತೊಟ್ಟರು. ಅವರನ್ನು ಚಚರ್ು `ಹುಚ್ಚಿ' ಎಂದಿತು! ಅವರನ್ನು ಹುಚ್ಚಾಸ್ಪತ್ರೆಗೆ ಹಾಕಿಸಲು ಪಾದ್ರಿಗಳು ಎರಡು ಬಾರಿ ಯತ್ನಿಸಿದರಂತೆ!

ಅಪಸ್ವರ ತೆಗದು ಸತ್ಯ ಬಯಲುಮಾಡುವವರಿಗೆಲ್ಲ `ಹುಚ್ಚರ ಪಟ್ಟ' ಕಟ್ಟುವುದು ಹೊಸ ವಿಷಯವೇನಲ್ಲ. ಕೇರಳದ ಮತ್ತೊಬ್ಬ ನನ್, 59 ವರ್ಷದ ತ್ರೀಸಾ ಥಾಮಸ್ ಸಹ ಇದೇ ಸಮಸ್ಯೆ ಎದುರಿಸಿದ್ದರು. ಕೊಲ್ಲಮ್ ಜಿಲ್ಲೆಯ ಆಂಚಲ್ನಲ್ಲಿರುವ ಡಿವೈನ್ ಮೇರಿ ಕಾನ್ವೆಂಟಿನವರು ಆಕೆ. ತಮ್ಮ ಕಾನ್ವೆಂಟಿನ ಅವ್ಯವಹಾರಗಳ ಬಗ್ಗೆ ಆಕೆ ಬರೆಯಲು ಹೊರಟಾಗ ಆಕೆಯನ್ನು ಬಲವಂತವಾಗಿ ಹೊತ್ತೋಯ್ದು ಒಂದು ತಿಂಗಳ ಕಾಲ ಹುಚ್ಚಾಸ್ಪತ್ರೆಯಲ್ಲಿ ಬಂಧಿಸಿ ಇಡಲಾಗಿತ್ತು! ಕೊನೆಗೆ ರಾಜ್ಯ ಸಕರ್ಾರದ ಮಹಿಳಾ ಆಯೋಗದ ಸದಸ್ಯರು ಖುದ್ದಾಗಿ ಬಂದು `ತ್ರೀಸಾ ಆರೋಗ್ಯವಾಗಿದ್ದಾರೆ' ಎಂದು ದೃಡೀಕರಿಸಬೇಕಾಯಿತು!

1992ರಲ್ಲಿ ಸಿಸ್ಟರ್ ಅಭಯಾ ಕೊಲೆಯಾದರು. ಅವರ ಶವ ಕೇರಳದ ಕೊಟ್ಟಾಯಂ ಕಾನ್ವೆಂಟಿನ ಬಾವಿಯಲ್ಲಿ ಬಿದ್ದಿತ್ತು. `ಇದು ಆತ್ಮಹತ್ಯೆ' ಎಂದು ಚಚರ್್ ಅಧಿಕಾರಿಗಳು ಹೇಳಿಕೆ ನೀಡಿದರು. ಆದರೆ ಆಕೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದುದು ಮರಣೋತ್ತರ ತನಿಖೆಯಿಂದ ತಿಳಿದುಬಂದಿತು! ಅನಂತರ 12 ತನಿಖೆಗಳು ನಡೆದವು. ಚಚರ್ು ತನಿಖಾಧಿಕಾರಿಗಳಿಗೆ ಸಹಕಾರ ನೀಡಲಿಲ್ಲ. ತನಿಖೆಗಳೂ ಸಮರ್ಪಕವಾಗಿರಲಿಲ್ಲ. ಅಭಯಾ ಕುರಿತ ವೈದ್ಯಕೀಯ ವರದಿಗಳನ್ನು ತಿರುಚಲಾಗಿದೆ ಎಂಬ ವರದಿಗಳೂ ಬಂದವು. ಪ್ರಭಾವಿಗಳೆಲ್ಲ ಸೇರಿ ಕೇಸನ್ನು ಮುಚ್ಚಿಹಾಕುತ್ತಿದ್ದಾರೆ ಎಂಬ ದನಿ ಜೋರಾದ ನಂತರ ಕಳೆದ ವರ್ಷ ಕೇರಳ ಹೈಕೋಟರ್್ ಸಿಬಿಐ ತನಿಖೆಗೆ ಆದೇಶ ನೀಡಿತು. ಅನಂತರ ಅಭಯಾ ಕೇಸು ಸಿಬಿಐ ಕೈಗೆ ಬಂದಿತು. ಇಬ್ಬರು ಕ್ಯಾಥೋಲಿಕ್ ಪಾದ್ರಿಗಳನ್ನು ಬಂಧಿಸಲಾಯಿತು. ಮೊಕದ್ದಮೆಯ ತನಿಖೆ ಇನ್ನೂ ನಡೆಯುತ್ತಿದೆ.

ಇದು ಕರಾಳ ವಾಸ್ತವತೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಅಮೆರಿಕದ ಕ್ಯಾಥೋಲಿಕ್ ಕಾಮಲೀಲೆಗಳನ್ನೂ ಮೀರಿಸುವ ಕಾಮಲೀಲೆಗಳು ಭಾರತದಲ್ಲಿ ಚಚರ್ುಗಳಲ್ಲಿ ಇರಬಹುದು ಎನಿಸದಿರದು. ಕಳೆದ 20 ವರ್ಷಗಳಲ್ಲಿ ಕೇರಳದ ಹಲವಾರು ನನ್ಗಳು `ಆತ್ಮಹತ್ಯೆ'ಗೆ ತುತ್ತಾದ ವರದಿಗಳು ಸ್ಥಳಿಯ ಮಾಧ್ಯಮಗಳಲ್ಲಿ ಬಂದಿವೆ. ಕಳೆದ ಎರಡು ವರ್ಷಗಳಲ್ಲೇ ಇಂತಹ 10-12 ವರದಿಗಳು ಪ್ರಕಟವಾಗಿವೆ.

ಒಂದು ಉದಾಹರಣೆ. ನೋಡೋಣ. ಕಳೆದ ವರ್ಷ ಕೊಲ್ಲಮ್ ಪಟ್ಟಣದಲ್ಲಿ 24 ವರ್ಷದ ಸಿಸ್ಟರ್ ಅನೂಪಾ ಮೇರಿ `ಆತ್ಮಹತ್ಯೆ'ಗೆ ಶರಣಾದಳು. ಆಕೆಯ ಶವ ಕಾನ್ವೆಂಟಿನಲ್ಲಿ ನೇತಾಡುತ್ತಿತ್ತು. ಆಕೆಯ ತಂದೆ ಅದೇ ಚಚರ್ಿನಲ್ಲಿ ಅಡುಗೆ ಮಾಡುತ್ತಿದ್ದ. ಅನೂಪಾ ತನ್ನ ಕಾನ್ವೆಂಟಿನ ಪ್ರಮುಖಳ ವಿಕೃತ ಸಲಿಂಗ ಕಾಮಕ್ಕೆ ಬಲಿಯಾದಳು ಎನ್ನುತ್ತಾನೆ ಆತ. ಅದನ್ನೇ ಸೂಚಿಸುವ ಹಾಗೆ ಸ್ವತಃ ಅನೂಪಾ ಚೀಟಿ ಬರೆದಿಟ್ಟಿದ್ದಳು.

ಇಂತಹ ಕೆಲವು ಪ್ರಕರಣಗಳು ಕೇರಳದ ಮಹಿಳಾ ಆಯೋಗದ ಗಮನವನ್ನು ಸೆಳೆದಿವೆ. ಈ ಕುರಿತು ವಿವರವಾದ ತನಿಖೆ ಆಗಲೇಬೆಕೆಂದು ಆಯೋಗ ಒತ್ತಾಯ ಮಾಡುತ್ತಲೇ ಬಂದಿದೆ. ಆದರೆ ನಮ್ಮ ದೇಶದಲ್ಲಿ ಚಚರ್ು, ಮಸೀದಿಗಳ ಒಳವಿಷಯಗಳ ತನಿಖೆ ಎಂದಾದರೂ ಆಗಿದೆಯೆ? ಶಂಕರಾಚಾರ್ಯರನ್ನು ಬಂಧಿಸುವ `ಸೆಕ್ಯೂಲರ್' ರಾಜಕಾರಣಿಗಳು ಮೌಲಾನಾ, ಆಚರ್್ಬಿಷಪ್ಗಳ ಕಡೆ ತಲೆಯಿಟ್ಟೂ ಮಲಗುವುದಿಲ್ಲ.

ಈಗ ಯೂರೋಪಿನಲ್ಲಿ ನನ್ಗಳಾಗಲು ಯಾವ ಬಿಳಿ ಮಹಿಳೆಯೂ ಮುಂದೆ ಬರುತ್ತಿಲ್ಲ. ಜಗತ್ತಿಗೆಲ್ಲ ನನ್ಗಳನ್ನು ಒದಗಿಸುವ ಹೊಣೆಯನ್ನು ಕೇರಳದ ಚಚರ್ುಗಳು ಹೊತ್ತುಕೊಂಡಿವೆ. ಹೀಗಾಗಿ ರಾಜ್ಯದ ಬಡ ಹೆಣ್ಣುಮಕ್ಕಳನ್ನು ಬಲವಂತವಾಗಿ ನನ್ಗಳನ್ನಾಗಿ ಮಾಡಲಾಗುತ್ತಿದೆ, ಅವರ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ವರದಿಗಳಿವೆ. ಈ ಕುರಿತು ರಾಜ್ಯದ ಮಹಿಳಾ ಆಯೋಗವೂ ದನಿ ಎತ್ತಿದೆ. ಆದರೆ ಅದು ರಾಜಕಾರಣಿಗಳಿಗೆ ಮಾತ್ರ ಕೇಳಿಸಿಲ್ಲ.

ಕ್ಯಾಥೊಲಿಕ್ ಚಚರ್ಿನ, ಕಾನ್ವೆಂಟಿನ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿರುವುದಾದರೂ ಏನು? ಕೇರಳದ ಕ್ಯಾಥೋಲಿಕ್ ಚಚರ್ು ಕಾಮುಕರ, ಕ್ರಿಮಿನಲ್ಗಳ ಅಡ್ಡೆಯಾಗಿದೆಯೆ? ದೇವರ ಹೆಸರಿನಲ್ಲಿ ಬ್ರಹ್ಮಚರ್ಯದ ಪ್ರಮಾಣ ಮಾಡುವವರ ಕಾಮಾಗ್ನಿ ಏಕೆ ಇಷ್ಟೊಂದು ಪ್ರಖರವಾಗಿದೆ?

ಸ್ವಲ್ಪವಾದರೂ ಮಯರ್ಾದೆ ಉಳಿಯಬೇಕಾದರೆ ರೋಮನ್ ಕ್ಯಾಥೋಲಿಕ್ ಚಚರ್ು ಈ ಕುರಿತು ತನಿಖೆ ಮಾಡಬೇಕು. ಅಮೆರಿಕದಂತೆ ಭಾರತದಲ್ಲಿಯೂ ಅದು ತನ್ನ ಜವಾಬ್ದಾರಿ ಅರಿತು ವತರ್ಿಸಬೇಕು. ಜೊತೆಗೆ ತನ್ನ ಹಳೆಯ ನಿಯಮವನ್ನು ಬದಲಿಸಿ ಪಾದ್ರಿಗಳಿಗೆ ಮತ್ತು ನನ್ಗಳಿಗೆ ವಿವಾಹವಾಗಲು ಅನುಮತಿ ನೀಡುವುದು ಒಳ್ಳೆಯದು. ಇಲ್ಲದಿದ್ದರೆ ಅತೃಪ್ತ, ವಿಕೃತ ಮತಾಧಿಕಾರಿಗಳು ಚಚರ್ಿನ ಹಾಗೂ ಜನರ ಮಯರ್ಾದೆ ಉಳಿಸುವುದಿಲ್ಲ.


`ಡೋಂಟ್ ಅಟ್ಯಾಕ್ ಅಸ್ ಪ್ಲೀ...ಸ್........'

ಸದ್ಯದಲ್ಲೇ ಪಾಕಿಸ್ತಾನದ ಟಿವಿ ಚಾನೆಲ್ಗಳಲ್ಲಿ ವಿಶೇಷ ಜಾಹೀರಾತುಗಳು ಬಿತ್ತರವಾಗಲಿವೆ. ಈ ಜಾಹೀರಾತುಗಳನ್ನು ಹಾಕಿಸುತ್ತಿರುವುದು ಯಾವುದೋ ಬಹುರಾಷ್ಟ್ರೀಯ ಕಂಪೆನಿಯಲ್ಲ. ಇವು ಯಾವುದೋ ಗ್ರಾಹಕ ಬಳಕೆಯ ವಸ್ತುಗಳ ಜಾಹೀರಾತುಗಳಲ್ಲ. ಇವುಗಳನ್ನು ತಯಾರಿಸಿರುವುದು ಸ್ವತಃ ಬ್ರಿಟನ್ ಸಕರ್ಾರ! ತನ್ನ ಜಾಹೀರಾತುಗಳ ಮೂಲಕ ಅದು ಏನನ್ನೂ ಪ್ರಚಾರ ಮಾಡುತ್ತಿಲ್ಲ. ತನ್ನ ದೇಶದ `ವಿಕ್ಟೋರಿಯನ್ ವ್ಯಾಲ್ಯೂ'ಗಳ ಪ್ರಚಾರಕ್ಕೆ ಟೊಂಕಕಟ್ಟಿ ನಿಂತಿಲ್ಲ. ಬದಲಾಗಿ ತಗ್ಗಿಬಗ್ಗಿ ಮನವಿ ಮಾಡಿಕೊಳ್ಳುತ್ತಿದೆ! ಬೊಬ್ಬೆಯಿಟ್ಟು ಬೇಡಿಕೊಳ್ಳುತ್ತಿದೆ!

ಏನೆಂದು ಗೊತ್ತೆ? `ದಯವಿಟ್ಟು ಕೇಳಿ. ಬ್ರಿಟನ್ ಇಸ್ಲಾಮ್ ಮತದ ವಿರುದ್ಧವಾಗಿಲ್ಲ. ಮುಸ್ಲಿಮರು ನಮ್ಮ ಸಮಾಜದ ಅವಿಭಾಜ್ಯ ಅಂಗ. ದಯವಿಟ್ಟು ನಮ್ಮ ಮೇಲೆ ದಾಳಿ ಮಾಡಬೇಡಿ. ಪ್ಲೀಸ್.. ಪ್ಲೀಸ್ ಡೋಂಟ್ ಅಟ್ಯಾಕ್ ಅಸ್!' - ಎಂದು. ಈ ಜಾಹೀರಾತುಗಳ ಮೂಲಕ ಪಾಕಿಸ್ತಾನದ ಜಿಹಾದಿಗಳನ್ನು ಬ್ರಿಟಿಷ್ ಸಕರ್ಾರ ಗೋಗರೆದು ಕೇಳಿಕೊಳ್ಳಲಿದೆ. ಈ ಉದ್ದೇಶಕ್ಕಾಗಿಯೇ ತಲಾ 40 ಸೆಕೆಂಡುಗಳ 10 ಜಾಹೀರಾತುಗಳನ್ನು ಚಿತ್ರೀಕರಿಸಲಾಗಿದೆ. `ಹೌದು ಬ್ರಿಟನ್ ಪಾಲಿಗೆ ಮುಸ್ಲಿಮರು ದೇವರಿದ್ದಂತೆ' ಎಂದು ಮುಸ್ಲಿಮರಿಂದಲೇ ಹೇಳಿಸಲು ಕೆಲವು ಬ್ರ್ರಿಟಿಷ್ ಮುಸ್ಲಿಮ್ ಮಾಡೆಲ್ಗಳಿಗೆ ಅಪಾರವಾದ ಹಣನೀಡಿ ಅವರ ಹೇಳಿಕೆಯನ್ನು ಚಿತ್ರೀಕರಿಸಿಕೊಳ್ಳಲಾಗಿದೆ.

`ಭಯೋತ್ಪಾದನೆಯ ವಿರುದ್ಧ ಸಮರ' ಸಾರಿದ್ದ ಬ್ರಿಟನ್ ಈಗ ಈ ಹಂತಕ್ಕೆ ಬಂದು ನಿಂತಿದೆ. `ಸೂರ್ಯನು ಮುಳುಗದ ಸಾಮ್ರಾಜ್ಯದ' ಹಮ್ಮಿನಲ್ಲಿದ್ದ ದೇಶ ಈಗ ಅಲ್-ಖೈದಾಕ್ಕೆ ಬೆದರಿ ಬೆಂಡಾಗಿದೆ. ಕಳೆದ 10-15 ವರ್ಷಗಳಲ್ಲಿ ಅಲ್-ಖೈದಾ ಹಾಗೂ ಪಾಕಿಸ್ತಾನಗಳ ಹಿಂಸಾಚಾರದಿಂದ ಹೈರಾಣಾಗಿ ಹೋಗಿದೆ. ಸಮರ ಎದುರಿಸಿ ಗೆಲ್ಲುವ ನೈತಿಕ ಸ್ಥೈರ್ಯ, ಎದೆಗಾರಿಕೆ, ತಾಕತ್ತನ್ನೇ ಕಳೆದುಕೊಂಡು ನಿವರ್ೀರ್ಯವಾಗಿಬಿಟ್ಟಿದೆ. ಅಲ್ಲಿನ ಪ್ರಧಾನಿಗಳು ಮೇಲೆ ಒಮ್ಮೊಮ್ಮೆ ಗಜರ್ಿಸಿದರೂ ಒಳಗೊಳಗೇ ಪುಕ್ಕಲುಗಳಾಗಿದ್ದಾರೆ. ದೇಶದ ಅನೇಕ ಕಾನೂನುಗಳನ್ನು ಪಾಕಿಸ್ತಾನದ ಮುಸ್ಲಿಮರಿಗಾಗಿ ಬದಲಾಯಿಸಲಾಗಿದೆ. ಅವರಿಗೆ ಅನೇಕ ನಿಯಮಗಳಿಂದ ವಿನಾಯಿತಿ ಕೊಡಲಾಗಿದೆ. ಹೀಗೆಲ್ಲ ತುಷ್ಟೀಕರಿಸುವ ಮೂಲಕ ಜಿಹಾದಿಗಳನ್ನು ಸಂತುಷ್ಟಗೊಳಿಸಬಹುದು. ಆಗ ಅವರು ನಮ್ಮ ತಂಟೆಗೆ ಬರುವುದಿಲ್ಲ ಎಂಬ ಲೆಕ್ಕಚಾರ ಅವರದು. ಹೀಗಾಗಿ ಬ್ರಿಟನ್ ಈಗ ಕಾಂಗ್ರೆಸ್ಸಿನ ಭಾರತಕ್ಕಿಂತ ಹೆಚ್ಚು ಅಧ್ವಾನವೆದ್ದು ಹೋಗಿದೆ.

ಕಳೆದ 10-15 ವರ್ಷಗಳಲ್ಲಿ ಬ್ರಿಟನ್ ದೇಶದ ಮುಸ್ಲಿಂ ಜನಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಇದರಲ್ಲಿ ಬಹುತೇಕರು ಪಾಕಿಸ್ತಾನದ ಅಕ್ರಮ ವಲಸಿಗರು. ಲಂಡನ್ ನಗರದ ಮಸೀದಿಗಳಲ್ಲಿ, ಅದರಲ್ಲೂ ಪಾಲರ್ಿಮೆಂಟಿನ ಮೂಗಿನ ಅಡಿಯಲ್ಲೇ ಇರುವ ಹೈಡ್ ಪಾಕರ್್ ಮಸೀದಿಯಲ್ಲಿ, ಪ್ರತಿ ಶುಕ್ರವಾರ ಈಗ ಬಹಿರಂಗವಾಗಿಯೇ ಜಿಹಾದ್ ಕರೆ ನೀಡಲಾಗುತ್ತಿದೆ. ಬ್ರಿಟನ್ ಕಾಲೇಜ್ ಕ್ಯಾಂಪಸ್ಗಳಲ್ಲಿ ಖೈದಾ ತರುಣರು ಮೊರೆಯುತ್ತಿದ್ದಾರೆ. ಹೆಚ್ಚು ಹೆಚ್ಚು ಮುಸ್ಲಿಮೇತರ ವಿದ್ಯಾಥರ್ಿನಿಯರನ್ನು `ಲವ್' ಮಾಡಲು ಅವರಿಗೆ ಸೂಚನೆ ನೀಡಲಾಗಿದೆ ಎಂಬ ವಿಷಯ ಕಳೆದ ವರ್ಷ ಪಾಲರ್ಿಮೆಂಟಿನಲ್ಲಿ ಭಾರಿ ವಿವಾದ ಎಬ್ಬಿಸಿತ್ತು. ಈಗಂತೂ ದೇಶಾದ್ಯಂತ ಕೂತರೆ, ನಿಂತರೆ ಖೈದಾಗಳಿಂದ ಪ್ರತಿಭಟನೆ, ಮೆರವಣಿಗೆ, ಕಲ್ಲು ತೂರಾಟ, ಬಾಂಬ್ ತೂರಾಟ ಸಾಮಾನ್ಯವಾಗಿಬಿಟ್ಟಿದೆ. ಮೊದಲೇ ಧಿಮ್ಮಿ ಡಿಎನ್ಎ ಹೊಂದಿರುವ ರಾಜಕಾರಣಿಗಳು ಈಗ ಬಹಳ ಬಸವಳಿದಿದ್ದಾರೆ. `ದೇಶವೊಂದನ್ನು ಬಿಟ್ಟು ಅವರು ಇನ್ನೇನು ರಿಯಾಯಿತಿ, ವಿನಾಯಿತಿ ಕೇಳಿದರೂ ಕೊಟ್ಟು ಶಾಂತಿ, ನೆಮ್ಮದಿ ಖರೀದಿಸೋಣ' ಎಂಬ ನೀತಿಯನ್ನು ಸಕರ್ಾರ ಪಾಲಿಸಲು ಶುರು ಮಾಡಿದೆ.

ಮೂರು-ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ಗುರುಚಿನ ಚೀಟಿಗಳಲ್ಲಿ, ಡ್ರೈವಿಂಗ್ ಲೈಸೆನ್ಸ್ಗಳಲ್ಲಿ `ನಮ್ಮ ಮಹಿಳೆಯರ' ಭಾವಚಿತ್ರ ಹಾಕಕೂಡದು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಆರ್ಭಟಿಸಿದವು. ಸಕರ್ಾರ ಅದಕ್ಕೂ `ಅಸ್ತು' ಎಂದಿತು! `ಭಾವಚಿತ್ರ ಬೇಡ, ಬೆರಳಚ್ಚು ತೆಗೆಸಿಕೊಡಬಹುದು' ಎಂದು ಹಲ್ಲು ಗಿಂಜಿ ಅಂಗಲಾಚಿತು. ಅದೇ ಸಮಯದಲ್ಲಿ ಡಬರ್ಿ ನಗರದ ಉದ್ಯಾನದಲ್ಲಿ ಸುಮಾರು 100 ವರ್ಷಗಳಿಂದ ಇದ್ದ ಹಂದಿಯ ವಿಗ್ರಹಕ್ಕೆ ಕುತ್ತು ಬಂತು. `ಹಂದಿ ನಮ್ಮ ಮತೀಯ ನಂಬಿಕೆಗಳಿಗೆ ವಿರುದ್ಧವಾಗಿದೆ' ಎಂದು ಕೆಲವರು ರಂಪ ಆರಂಭಿಸಿದರು. ಪ್ರತಿಭಟನೆ ಶುರುವಾಯಿತು. ಸರಿ ತಕ್ಷಣ ಆಡಳಿತ ಆ ಹಂದಿಯ ತಲೆಯನ್ನೇ ತೆಗೆದಿಟ್ಟು, `ನೋಡಿ, ಇದೂ ಒಂಥರಾ ಕಲಾಕೃತಿಯೇ' ಎಂದು ಪೆಚ್ಚು ಹೇಳಿಕೆ ಕೊಟ್ಟಿತು!

ಈಗ ಲಂಡನ್ನಂತಹ ನಗರಗಳಲ್ಲಿ ಪ್ರತ್ಯೇಕ ಮುಸ್ಲಿಂ ಏರಿಯಾಗಳಿವೆ. ಅಲ್ಲಿಗೆ ಕ್ರೈಸ್ತ ಮಿಷನರಿಗಳು ಕಾಲಿಡುವಂತಿಲ್ಲ. ಅವರು `ಅಯ್ಯೋ. ಇದು ಲಂಡನ್. ಲಂಡನಿಸ್ತಾನ್ ಅಲ್ಲ' ಎಂದು ಬೊಬ್ಬೆಯಿಡುತ್ತಿದ್ದಾರೆ. ಆದರೆ ಸಕರ್ಾರ ಕಿವುಡಾಗಿದೆ. ಲಂಡನ್ನ ಹೈಡ್ ಪಾಕರ್್ ಮಸೀದಿಗೂ ಪಾಕಿಸ್ತಾನದ ಲಾಲ್ ಮಸೀದಿಗೂ ಯಾವುದೇ ವ್ಯತಾಸವಿಲ್ಲ. ಎರಡೂ ಖೈದಾ ಅಡ್ಡೆಗಳೇ ಆಗಿವೆ. ಬಮರ್ಿಂಗ್ ಹ್ಯಾಮ್ ನಗರದ ಆಲಂ ರಾಕ್ ಅಂತೂ ಈಗ ಕಾಶ್ಮೀರವಾಗಿಬಿಟ್ಟಿದೆ. ಸದ್ಯದಲ್ಲೇ ದೇಶದಲ್ಲಿ ಪ್ರತ್ಯೇಕ ಶರಿಯಾ ವೈಯಕ್ತಿಕ ಕಾನೂನಿಗೆ ಮಾನ್ಯತೆ ನೀಡಲು ಕೆಲವು ಬ್ರಿಟಿಷ್ ಸಂಸದರು ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಕುರಿತು ಕೆಲವು ನ್ಯಾಯಾಧೀಶರುಗಳು ಈಗಾಗಲೇ ಸಕಾರಾತ್ಮಕವಾದ ರೂಲಿಂಗ್ ನೀಡಿಯಾಗಿದೆ!

ನೆದರ್ಲ್ಯಾಂಡ್ಸ್ ದೇಶದ ಸಂಸದ ಗೀಟರ್್ ವೈಲ್ಡರ್ಸ್ ಪ್ರಕರಣ ಬ್ರಿಟನ್ ಮಾನಸಿಕತೆಗೆ ಕನ್ನಡಿ ಹಿಡಿಯುತ್ತಿದೆ. ಇಸ್ಲಾಮ್ ವಿರುದ್ಧ ಮಾತನಾಡಿದ ಎಂಬ ಕಾರಣಕ್ಕಾಗಿ ಆತ ಬ್ರಿಟನ್ ಪ್ರವೇಶಿಸದಂತೆ ಬ್ರ್ರಿಟಿಷ್ ಸಕರ್ಾರ ನಿಷೇಧ ಹಾಕಿದೆ. ಅದು ನೆದರ್ಸ್ಲ್ಯಾಂಡ್ಸಿನ ಪ್ರತಿಭಟನೆಯನ್ನೂ ಸಹ ಲೆಕ್ಕಿಸಿಲ್ಲ. ಹೆನ್ಪೆಕ್ಡ್ಗಳು ಜಗತ್ತನ್ನೇ ಕಳೆದುಕೊಂಡಾರು, ಆದರೆ ಹೆಂಡತಿಯ ಹುಕುಂ ಪಾಲಿಸದೇ ಇರರು! ಇಂತಹ ಬ್ರಿಟನ್ ಹೆನ್ಪೆಕ್ಡ್ಗಳು ಹೆಂಡತಿಯನ್ನು ಸಹಿಸಿಕೊಂಡಂತೆ ಹೈಡ್ ಪಾಕರ್ಿನ ಜಿಹಾದಿ ಭಾಷಣಕಾರರನ್ನು ಸಹಿಸಿಕೊಂಡಿದೆ! ಅವರಿಗೆ ಯಾವ ನಿಷೇಧವೂ ಇಲ್ಲ. ಬಹಿಷ್ಕಾರವೂ ಇಲ್ಲ. ಅವರು ಅನ್ಯಮತ ದ್ವೇಷಿಗಳಲ್ಲ!

ಸಲ್ಮಾನ್ ರಷ್ದೀ ಬದುಕಿಕೊಂಡ. ಅವನ ಮೇಲೆ ಮೇಲೆ ಇರಾನಿನ ಖೋಮೇನಿ ಫತ್ವಾ ಹಾಕಿದ್ದಾಗ ಬ್ರಿಟನ್ ಅನ್ನು ಆಳುತ್ತಿದ್ದದು ಗಟ್ಟಿ ಹೆಂಗಸು ಎನಿಸಿದ್ದ ಮಾರ್ಗರೇಟ್ ಥ್ಯಾಚರ್. ಆಕೆ ಒಂದು ತರಹ ವಿಕ್ಟೋರಿಯಾ ತಳಿಯವಳು. ಅದೇ ಈಚಿನ ಬ್ಲೇರ್ ಅಥವಾ ಈಗಿನ ಬ್ರೌನ್ ಆಳುತ್ತಿದ್ದಲ್ಲಿ ಆತ ಎಂದೋ ದೇಶಭ್ರಷ್ಟನಾಗಿರುತ್ತಿದ್ದ.

ವಾಸ್ತವವಾಗಿ ಇದು ಧಿಮ್ಮಿತ್ವ. ಇಸ್ಲಾಮೀ ಉಗ್ರವಾದಕ್ಕೆ ಶರಣಾಗಿ ಅದರ ಅಧೀನ ದಾಸತ್ವ ಸ್ವೀಕರಿಸಿ `ಬದುಕಿದೆಯಾ ಬಡಜೀವವೆ' ಎಂದು ಖುಷಿಪಟ್ಟುಕೊಳ್ಳುವ ಮಾನಸಿಕತೆ ಇದು. ಐತಿಹಾಸಿಕವಾಗಿ ಜಗತ್ತಿನಾದ್ಯಂತ ಮುಸ್ಲಿಂ ದೊರೆಗಳು ಮುಸ್ಲ್ಲಿಮೇತರ ಪ್ರಜೆಗಳಿಗೆ ವಿಶೇಷ ಕರಾರುಗಳನ್ನು (ಧಿಮ್ಮಾಹ್) ಹಾಕಿದ್ದರು. ಅವರಿಗೆ ಎರಡನೇ ದಜರ್ೆಯ ಪೌರತ್ವ ನೀಡಿದ್ದರು. ಮುಸ್ಲಿಂ ಪ್ರಜೆಗಳಿಗೆ ಇದ್ದ ನಾಗರಿಕ ಹಾಗೂ ಮತೀಯ ಹಕ್ಕುಗಳು ಧಿಮ್ಮಿಗಳಿಗೆ ಇರಲಿಲ್ಲ. ಇದು ಅವರ ಆಡಳಿತದ ಸಿದ್ಧ ಸೂತ್ರವಾಗಿತ್ತು. ಆದರೆ ವಿಶೇಷ ಅದಲ್ಲ. ಜಗತ್ತಿನ ಅನೇಕ ಸಮಾಜಿಗಳು ತಮಗೆ ಒದಗಿ ಬಂದ ಇತಂಹ ಗುಲಾಮ ಅವಸ್ಥೆಯನ್ನು ಕ್ರಮೆಣ ರಕ್ತಗತ ಮಾಡಿಕೊಂಡವು! ಅದೇ ವಿಶೇಷ. ಗುಲಾಮ ಡಿಎನ್ಎ, ಹೆದರಿಕೆಯ ಮನೋಭಾವ ಸೃಷ್ಟಿಯಾಗಿ ಕ್ರಮೇಣ `ಅದೇ ಸರಿ, ಅದೇ ಸಹಜ' ಎಂಬ ಮಾನಸಿಕತೆಯಾಗಿ ಮಾರ್ಪಟ್ಟಿತು. ಪ್ರತಿಯೊಂದನ್ನೂ ಮುಸ್ಲಿಮರ ದೃಷ್ಟಿಯಿಂದ ಯೋಚಿಸುವುದು; ಅವರಿಗೆ ಇದು ಒಪ್ಪಿಗೆಯೆ? ಇಲ್ಲವೆ? ಎಂದು ತಾಳೆ ಹಾಕುವುದು; ಅವರ ಮತೀಯ ಭಾವನೆಗಳಿಗೆ ತಕ್ಕಂತೆ ನಾವು ವತರ್ಿಸಲೇಬೇಕು ಎಂಬ ಸ್ವಯಂ ನಿಬಂಧನೆಗಳನ್ನು ಹಾಕಿಕೊಳ್ಳುವುದು ರೂಢಿಯಾಯಿತು. ಇಲ್ಲದಿದ್ದರೆ ಏನೋ? ಹೇಗೋ? ಎಂಬ ಭಯ ಮನಸಿನ ಮೂಲೆಯಲ್ಲಿ ಭದ್ರವಾಗಿತ್ತು. ಈ ಮಾನಸಿಕತೆ ಐರೋಪ್ಯ ಸಮಾಜಗಳಲ್ಲಿ ಬಹುಕಾಲದಿಂದ ಬೇರೂರಿರುವುದನ್ನು ಗುರುತಿಸಿ ಅನೇಕ ವಿದ್ವತ್ಪೂರ್ಣ ಗ್ರಂಥಗಳನ್ನು ಬರೆದವಳು ಈಜಿಪ್ಟ್ ಮೂಲದ ಬಹುದೊಡ್ಡ ವಿದ್ವಾಂಸೆ ಬಾತ್ ಇಯೋರ್. ಈ ಮಾನಸಿಕತೆಗೆ ಆಕೆ `ಧಿಮ್ಮಿಟ್ಯೂಡ್' ಎಂದು ಹೆಸರುಕೊಟ್ಟಳು. ಭಾರತೀಯ ಸಂದರ್ಭದಲ್ಲಿ ಅಧ್ಯಯನಗಳನ್ನು ಮಂಡಿಸುವಾಗ ನಾನು ಇದನ್ನೇ `ಧಿಮ್ಮಿತ್ವ' ಎಂದು ಕರೆದೆ. ಇದೇ ಧಿಮ್ಮಿತ್ವವನ್ನು ನಮ್ಮಲ್ಲಿ ಗೌರವಯುತವಾಗಿ `ಸೆಕ್ಯೂಲರಿಸಂ' ಎಂದುಕೊಳ್ಳುತ್ತೇವೆ!

ಒಟ್ಟಿನಲ್ಲಿ, ಒಂದು ಕಾಲದಲ್ಲಿ ಅರ್ಧ ವಿಶ್ವವನ್ನೇ ಬಡಿದು ಬಾಯಿಗೆ ಹಾಕಿಕೊಂಡಿದ್ದ ಬ್ರಿಟನ್ ಇಂದು ಕಂಗಾಲಾಗಿ ಕುಳಿತಿದೆ. ತನ್ನ ಧಿಮ್ಮಿತ್ವವನ್ನು ಭಾರತದಲ್ಲಿ ಬಿತ್ತಿ ಹೋದ ನಂತರ ಈಗ ಅದರ ವಿಷಫಲವನ್ನು ಉಣ್ಣುತ್ತಿದೆ.

ಬರಾಕ್ ಒಬಾಮಾ ಹಾಗೂ ಇದಿ ಅಮಿನ್: ನಿಮಗೆ ಯಾರು ಬೇಕು?

ಭಾರತದ ಮುಂದಿನ ಪ್ರಧಾನಿ ಯಾರು? ಲಾಲ್ ಕೃಷ್ಣ ಆಡ್ವಾಣಿ, ನರೇಂದ್ರ ಮೋದಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಪ್ರಣಬ್ ಮುಖಜರ್ಿ, ಜಯಲಲಿತಾ, ಮಾಯಾವತಿ - ಹೀಗೆ ಅನೇಕರು ಆಸೆ ಇಟ್ಟುಕೊಂಡಿದ್ದಾರೆ. ಇವರ ಪೈಕಿ ಯಾರಾದರೊಬ್ಬರು ಪ್ರಧಾನಿ ಸ್ಥಾನ ಪಡೆಯಬಹುದು. ಆದರೆ ಅವರನ್ನು ಆ ಸ್ಥಾನಕ್ಕೆ ಕಳುಹಿಸಬೇಕೆ, ಬೇಡವೆ, ಎಂದು ನಿರ್ಧರಿಸುವವರು ನಾವು ನೀವಲ್ಲ. ಬದಲಾಗಿ ನಮಗೆ ಗೊತ್ತಿಲ್ಲದ, ನಮಗೆ ನೇರವಾಗಿ ಸಂಬಂಧವೇ ಇಲ್ಲದ, ಭವಿಷ್ಯದ `ಯಾವುದೋ ರಾಜಕೀಯ ಪರಿಸ್ಥಿತಿ'ಗಳು ಈ ಅಂಶವನ್ನು ನಿರ್ಧರಿಸುತ್ತ ಹೋಗುತ್ತವೆ!

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ `ಭಾರತದ ಬರಾಕ್ ಒಬಾಮಾ ಯಾರು?' ಎಂಬ ಪ್ರಶ್ನೆ ಮಾಧ್ಯಮಗಳಲ್ಲಿ ಎದ್ದಿತ್ತು. ಈ ಪ್ರಶ್ನೆಗೆ ಉತ್ತರವಾಗಿ ಕೆಲವು ಜಾತಿವಾದಿಗಳು `ಮಾಯಾವತಿ' ಎಂದು ಕಿರುಚಿದರು. ಮತ್ತೆ ಕೆಲವು ರಾಷ್ಟ್ರೀಯವಾದಿಗಳು `ನರೆಂದ್ರ ಮೋದಿ' ಎಂದರು. `ಎಲ್.ಕೆ ಆಡ್ವಾಣಿಗಿರುವ ಅನುಭವ, ಖರಿಷ್ಮಾ ಹಾಗೂ ಬುದ್ಧಿವಂತಿಕೆ ಯಾರಿಗಿದೆ ಹೇಳಿ' ಎಂಬ ವಾದವೂ ಪ್ರಬಲವಾಯಿತು. ವಿವಿಧ ಪುಢಾರಿಗಳ ಬಾಲಬಡುಕರು ತಮ್ಮ ತಮ್ಮ ಮುಖಂಡರೇ ನಿಜವಾದ `ಜನನಾಯಕರು' ಎಂದು ಬಿಂಬಿಸಿದರು.

ನಿಜವಾಗಿ ಗಮನಿಸಬೇಕಾದ ಸಂಗತಿಯೇ ಬೇರೆ. ಜನರ ಸಮ್ಮತಿಯಿಂದ ಅಧಿಕಾರಕ್ಕೆ ಬರುವ ವ್ಯವಸ್ಥೆಯ ಸಂಕೇತವೇ `ಬರಾಕ್ ಒಬಾಮಾ'. ಅಂತಹ ವ್ಯವಸ್ಥೆ ಇದ್ದ ಕಡೆ ಕೂಲಿ ಮಾಡುವ ಹುಡುಗನೂ ಜನರ ಪ್ರೀತಿ ಗಳಿಸಿ ರಾಹುಲ್ ಗಾಂಧಿಗೆ ಸೆಡ್ಡು ಹೊಡೆಯಬಹುದು. ಆದರೆ ನಮ್ಮ ವಾಸ್ತವ ಏನು? 50 ವರ್ಷದಿಂದ ವಿವಿಧ ಜವಾಬಾರಿಗಳನ್ನು ನಿರ್ವಹಿಸದ ಕಾಂಗ್ರೆಸ್ `ನಾಯಕ'ರೆಲ್ಲ ರಾಹುಲ್ ಮುಂದೆ ನಿಂತು ನೆಲನೋಡಬೇಕು!

ಬರಾಕ್ ಒಬಾಮಾ ನಮ್ಮ ಮನಮೋಹನ್ ಸಿಂಗ್ ತರಹ `ನಾಮಿನೇಟೆಡ್' ಮುಖಂಡ ಅಲ್ಲ. ಆತ ರಾಜೀವ್ ಗಾಂಧಿ ತರಹ ಅಧಿಕಾರ ಸ್ಥಾನವನ್ನು ಪಿತ್ರಾಜರ್ಿತ (ಅಥವಾ ಮಾತ್ರಾಜರ್ಿತ) ಆಸ್ತಿಯ ಹಾಗೆ ಪಡೆಯಲಿಲ್ಲ. ಚುನಾವಣೆಯ ಟಿಕೆಟ್ಗಾಗಿ ಅವರಿವರ ಮುಂದೆ ಹಲ್ಲು ಗಿಂಜಲಿಲ್ಲ. ಗಣಿ-ಗಿಣಿ ಅಂತ ಏನೇನೋ ವ್ಯವಹಾರ ಮಾಡಲಿಲ್ಲ. ತನ್ನ ಪಕ್ಷದೊಳಗೆ ವಿವಿಧ ಅಧ್ಯಕ್ಷೀಯ ಅಭ್ಯಥರ್ಿಗಳೊಡನೆ ನಿಜವಾದ ಪ್ರಜಾತಾಂತ್ರಿಕ ಕ್ರಮದಲ್ಲಿ ಸ್ಪಧರ್ಿಸಿದವನು. ಜನರ ಮುಂದೆ ಹೋಗಿ, `ಪ್ರೈಮರಿ' ಚುನಾವಣೆ ಎದುರಿಸಿ, ಗೆದ್ದ ವ್ಯಕ್ತಿ ಆತ. ಆ ಗೆಲುವಿನ ಬಲದಿಂದಲೇ ಅವನು ಅಧ್ಯಕ್ಷೀಯ ಅಭ್ಯಥರ್ಿಯಾಗುವ ಅವಕಾಶವನ್ನು ಪಡೆದುಕೊಂಡ. ಅಧ್ಯಕ್ಷೀಯ ಸ್ಥಾನಕ್ಕೆ ಸ್ಪಧರ್ಿಸಿ ಜನರಿಂದ ಮತ ಪಡೆದು ಆರಿಸಿಬಂದು, ರಾಷ್ಟ್ರಪತಿಯಾದ ವ್ಯಕ್ತಿ. ಅವನಿಗೆ ಯಾವುದೇ ರಾಜಕೀಯ ದೊಣ್ಣೆನಾಯಕನ, ದೊಣ್ಣೆನಾಯಕಿಯ `ಆಶೀವರ್ಾದ' ಬೇಕಿಲ್ಲ. ಜನಬಲವಿದ್ದವನು ಯಾರ ಮುಂದೆಯೂ ಹಲ್ಲು ಗಿಂಜಬೇಕಿಲ್ಲ. ಅಂತಹ ಜನತಂತ್ರ ವ್ಯವಸ್ಥೆ ಅಮೆರಿಕದಲ್ಲಿದೆ. ಅಲ್ಲಿ ಜನರ ಅಭಿಪ್ರಾಯಕ್ಕೆ ಬೆಲೆಯಿದೆ. ಜನರಿಗೂ ಬೆಲೆಯಿದೆ.

ನಮ್ಮ ಸಂವಿಧಾನದಲ್ಲಿ ಅಮೆರಿಕಕ್ಕಿಂತಲೂ ಎಷ್ಟೋ ಒಳ್ಳೆಯ ಅಂಶಗಳು ಇವೆ, ನಿಜ. ಆದರೆ ಸಕರ್ಾರ ರೂಪಿಸುವ ವಿಷಯದಲ್ಲಿ ನಾವು ದೊಡ್ಡದಾಗಿ ಎಡವಿದ್ದೇವೆ. ಬ್ರಿಟಿಷರು `ನಮಗಾಗಿ' ರೂಪಿಸಿದ್ದ 1935ರ `ಗವರ್ನಮೆಂಟ್ ಇಂಡಿಯಾ ಆಕ್ಟ್'ನಿಂದ ಎರವಲು ಪಡೆದ ಆಡಳಿತ ಕ್ರಮ ನಮ್ಮದು. ನಮ್ಮ ಹೊಸ ಸಂವಿಧಾನದಲ್ಲಿ ಅಧಿಕಾರ ಇರುವ ಸ್ಥಾನಗಳಿಗೆ ಯಾರು ಬರಬೇಕೆಂದು ನಿರ್ಧರಿಸುವ ಅವಕಾಶವನ್ನು ಜನರಿಗೆ ನೀಡಲಾಗಿಲ್ಲ. ದೇಶದ ರಾಜಕೀಯ ಮುಖ್ಯಸ್ಥರನ್ನು ಜನರೇ ನೇರವಾಗಿ ಆರಿಸುವ ವ್ಯವಸ್ಥೆ ಇಲ್ಲೂ ಇದ್ದರೆ ಚೆನ್ನಾಗಿತ್ತು. ಆದರೆ ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಜನರಿಗೆ ಅಂತಹ ಅವಕಾಶ ಇನ್ನೂ ಸಿಕ್ಕಿಲ್ಲ. ನಮ್ಮ ಜನರಿಗೆ ಅಂತಹ ಯೋಗ್ಯತೆ ಇಲ್ಲ ಎಂದು ಭಾವಿಸಲಾಗಿದೆಯೆ?

ಇಲ್ಲಿ ಜನರ ಕೆಲಸ ಏನಿದ್ದರೂ ಬರೀ `ಪ್ರತಿನಿಧಿ'ಗಳನ್ನು ಆರಿಸುವುದು. ಅನಂತರ ಅವರು ನಡೆಸುವ ರಾಜಕೀಯ ದೊಂಬರಾಟ ನೋಡುತ್ತಾ ಸುಮ್ಮನೆ ಕೂರುವುದು! ಅಮೆರಿಕ ತರಹದ ವ್ಯವಸೆಕಿಲ್ಲಿಯೂ ಇದ್ದಿದ್ದರೆ ಇಲ್ಲಿ ದೇವೇಗೌಡ, ಗುಜ್ರಾಲ್ ಮುಂತಾದವರು ಸಿಂಹಾಸನಕ್ಕೆ ವಕ್ಕರಿಸಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಮನಮೋಹನ್ ಸಿಂಗ್ ಎಂಬ ಪಕ್ಕಾ ರಾಜ್ಯಸಭಾ ಮೆಟೀರಿಯಲ್ ಪೇಲವ ನಗೆ ನಗುತ್ತ ಜನಪಥ ಹಾಗೂ ನಾತರ್್ಬ್ಲಾಕ್ ಎಂದು ಗಿರಕಿ ಹೊಡೆದೂ ಹೊಡೆದೂ ಐದು ವರ್ಷ ತುಂಬಿಸುವುದು ಸಾಧ್ಯವಾಗುತ್ತಿರಲಿಲ್ಲ.

ಮೊದಲನೆಯದಾಗಿ ಸ್ವತಃ ಜವಹರ್ಲಾಲ್ ನೆಹರೂ ಪ್ರಧಾನಿಯಾಗುವುದೇ ಸಾಧ್ಯವಾಗುತ್ತಿರಲಿಲ್ಲ! ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್ನಲ್ಲಿದ್ದಾಗ ದೇಶದೊಳಗೆ ಹಾಗೂ ಪಕ್ಷದೊಳಗೆ ಅವರೇ ಅತ್ಯಂತ ಜನಪ್ರಿಯ ನಾಯಕ ಎನಿಸಿದ್ದರು. ಪಕ್ಷದಿಂದ ಅವರನ್ನು ಓಡಿಸಿದ ನಂತರ ಜನರ ನಡುವೆ ಅವರ ಕೀತರ್ಿ ಇನ್ನೂ ಬೆಳೆಯಿತು. ಕಾಂಗ್ರೆಸ್ ಒಳಗೆ ಸದರ್ಾರ್ ಪಟೇಲ್ ಪ್ರಶ್ನಾತೀತ ನಾಯಕರಾಗಿದ್ದರು. ಜನರ ನಡುವೆಯೂ ಅವರು ಬಹಳ ಜನಪ್ರಿಯರಾಗಿದ್ದರು. ಈಚಿನ ರಾಜೀವ್ ಗಾಂಧಿ ಹಾಗೂ ಇಂದಿನ ರಾಹುಲ್ ಗಾಂಧಿ ಹೇಗೋ ಹಾಗೆ ಅಂದು ಜವಹರ್ ಲಾಲ್ ಇದ್ದರು. ಮೇಲಿನಂದ ಅವರನ್ನು `ಇಂಪೋಸ್' ಮಾಡಲಾಗಿತ್ತು.

1947ರಲ್ಲಿ ದೇಶಕ್ಕೆ ಪ್ರಧಾನಿ ಯಾರಾಗಬೇಕು ಎಂಬ ಪ್ರಶ್ನೆ ಎದ್ದಾಗ ಅನೇಕರು `ಪಟೇಲರು ಆಗಲಿ' ಎಂದೇ ಅಭಿಪ್ರಾಯಪಟ್ಟಿದ್ದರು. ನೆಹರೂಗೆ ಇದ್ದ ಬೆಂಬಲ ನಗಣ್ಯವಾಗಿತ್ತು. ಅಮೆರಿಕದ ಹಾಗೆ `ಪ್ರೈಮರಿ' ಚುನಾವಣೆ ನಡೆದಿದ್ದರೆ ಅವರು ಸೋಲುತ್ತಿದ್ದರು. ಆದರೆ `ನೆಹರೂ ಪ್ರಧಾನಿಯಾಗಲಿ' ಎಂದು ಗಾಂದೀಜಿ ಪಟ್ಟು ಹಿಡಿದರು. ಪಟೇಲ್ ತಲೆ ಬಾಗಿದರು. ನೆಹರೂ ಪ್ರಧಾನಿಯಾದರು. ಆದರೆ, `ಈ ವಿಷಯ ಜನರಿಗೆ ಬಿಟ್ಟಿದ್ದು. ತಮ್ಮ ಪ್ರಧಾನಿಯನ್ನು ಆರಿಸುವ ಅಂತಿಮ ಹಕ್ಕು ಅವರದೇ ಹೊರತು ನಮ್ಮ-ನಿಮ್ಮದಲ್ಲ' ಎಂದು ಯಾವ ರಾಜಕೀಯದ ಮಹಾತ್ಮನೂ ಅಥವಾ ಯಾವ ಸಾಮಾಜಿಕ ಪುಣ್ಯಾತ್ಮನೂ ಪಟ್ಟು ಹಿಡಿಯಲಿಲ್ಲ!

ಇಂತಹವರೇ ಪ್ರಧಾನಿಯಾಗಲಿ ಎಂದು ಹೇಳುವ ಅಧಿಕಾರವನ್ನು ಗಾಂಧೀಜಿಗೆ ಕೊಟ್ಟವರು ಯಾರು? ಇದು ಜನತಂತ್ರ ವಿರೊಧಿ ಕ್ರಮ. ದೇಶಕ್ಕಾಗಿ ಎಷ್ಟು ಹೋರಾಡಿದರೂ ಎಷ್ಟು ತ್ಯಾಗ ಮಾಡಿದರೂ ದೇಶದ ಹಣೆಬರಹವನ್ನು ಮನಬಂದಂತೆ ಬರೆಯುವ ಹಕ್ಕು ಯಾರಿಗೂ ಬರಬಾರದು. ಅದು ಶುದ್ಧ ಪ್ರಜಾತಂತ್ರವಲ್ಲ. ಆದರೆ ಸ್ವತಂತ್ರ ಭಾರತದ ಮೊದಲ ತಲೆಮಾರಿನ ನಾಯಕರು ಈ ಕುರಿತು ಯೋಚಿಸಲೇ ಇಲ್ಲ.

ಏಕೆ ಹೀಗೆ? ನಮ್ಮ ಜನರಿಗೆ ಪ್ರಧಾನಿ ಅಥವಾ ಅಧ್ಯಕ್ಷರನ್ನು ಆರಿಸುವ ಯೋಗ್ಯತೆ ಇಲ್ಲವೆ? ವಾಸ್ತವ ಏನೆಂದರೆ, ಯಾವ ಅಧಿಕಾರಸ್ಥರನ್ನೂ ಆರಿಸುವ ಅವಕಾಶವನ್ನು ನಮ್ಮ ಜನರಿಗೆ ನೀಡಲಾಗಿಲ್ಲ!

ನೀವು ವಿವಿಧ ಮಟ್ಟಗಳ ಪಂಚಾಯಿತಿಯ ಸದಸ್ಯರನ್ನು ಮಾತ್ರ ಆರಿಸುತ್ತೀರಿ. ಅವುಗಳ ಅಧ್ಯಕ್ಷರನ್ನಲ್ಲ. ವಿಧಾನಸಭೆಯ ಶಾಸಕರನ್ನು ಆರಿಸುತ್ತೀರಿ. ಮುಖ್ಯಮಂತ್ರಿಯನ್ನಲ್ಲ! ಸಂವಿಧಾನದಲ್ಲಿ ಒಬ್ಬ ಶಾಸಕನಿಗೆ ಏನು ಅಧಿಕಾರ ಕೊಡಲಾಗಿದೆ? ವಿಧಾನಸಭೆಯಲ್ಲಿ ಕಾನೂನು ಮಸೂದೆಗಳಿಗೆ ಮತ ಹಾಕುವುದನ್ನು ಬಿಟ್ಟರೆ ಅಂತಹ ಘನಂದಾರಿ ಅಧಿಕಾರವೇನೂ ಇಲ್ಲ. ಆದ್ದರಿಂದಲೇ ಅವನು `ನಿಮ್ಮ ಆಯ್ಕೆ'! ನಿಜವಾದ ಆಡಳಿತಾತ್ಮಕ ಅಧಿಕಾರ ಇರುವ ಮುಖ್ಯಮಂತ್ರಿ `ನಿಮ್ಮ ಆಯ್ಕೆಯಲ'್ಲ! ಅವನು ಪಕ್ಷದ ಅಧ್ಯಕ್ಷರ ಆಯ್ಕೆ! ಅಥವಾ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎರಡೂ ಅವನೇ ಆಗಿರಬಹುದು. ಅಥವಾ ಕುಮಾರಸ್ವಾಮಿ ತರಹ ತನ್ನಿಂದ, ತನಗಾಗಿ, ತನಗೆ ತಾನೇ ಆರಿಸಿಕೊಂಡವನಾಗಬಹುದು! ಪ್ರಧಾನ ಮಂತ್ರಿ ವಿಷಯದಲ್ಲಿಯೂ ಅಷ್ಟೇ. ಜನರ ಅಭಿಪ್ರಾಯ ಕೇಳುವವರು ಯಾರು? ಕಾಂಗ್ರೆಸ್ ಸಂಸದರನ್ನು ನೀವು ಆರಿಸಿದರೆ ಅನಂತರದ ಕೆಲಸ ಸೋನಿಯಾದು.

`ಮನಮೋಹನ್ ಪ್ರಧಾನಿಯಾಗಲಿ' ಎಂದು ಆಕೆ ಅಪ್ಪಣೆ ಮಾಡಿದರೆ ಮುಗಿಯಿತು. ಮನಮೋಹನ್ ಪ್ರಧಾನಿ! ನಾಳೆ ರಾಹುಲ್ ತಲೆ ಮೇಲೆ ಆಕೆ ತನ್ನ ಕೈಯಿಟ್ಟರೆ ಆತನೇ ಪ್ರಧಾನಿ!

ಜಗತ್ತಿನ ಅತಿದೊಡ್ಡ ಪ್ರಜಾತಂತ್ರದ ಪಾಡು ಇದು!

ಇಲ್ಲಿ ಯಾರು ಬೇಕಾದರೂ ಅಧಿಕಾರ `ಹಿಡಿಯ'ಬಹುದು. ಯಾರಿಗೂ ಜನರ ಹಂಗು ಬೇಕಿಲ್ಲ. ಚುನಾವಣೆಯೂ ಬೇಕಿಲ್ಲ. ತನ್ನ ಜನ್ಮದಲ್ಲಿ ಯಾವ ಚುನಾವಣೆಯನ್ನೂ ಗೆಲ್ಲದ ವ್ಯಕ್ತಿ ನಮ್ಮ ಈಗಿನ ಪ್ರಧಾನಿ! ಚುನಾವಣೆ ಇಲ್ಲದೇ ನೇರವಾಗಿ ಆರು ತಿಂಗಳ ಕಾಲ ಯಾರು ಬೇಕಾದರೂ ಪ್ರಧಾನಿ ಅಥವಾ ಮುಖ್ಯಮಂತ್ರಿ ಆಗಲು ನಮ್ಮ ಸಂವಿಧಾನದಲ್ಲೇ ಅವಕಾಶವಿದೆ. ಜನರ ಹಂಗೇ ಇಲ್ಲದ ಪ್ರಜಾತಂತರ ಇದು! ಜನರ ಅಗತ್ಯವೇ ಇಲ್ಲದ ಜನತಂತ್ರ ಇದು! ಜನರ ಅನುಮೋದನೆ ಇಲ್ಲದೇ ರಾಜಕೀಯ ಅಧಿಕಾರ ಸ್ಥಾಪಿಸುವ ಅವಕಾಶವನ್ನು ಸ್ವತಃ ನಮ್ಮ ಸಂವಿಧಾನದಲ್ಲೇ ನೀಡಲಾಗಿದೆ! ಜಾರ್ಖಂಡ್ನಲ್ಲಿ ಶಿಬು ಸೋರೆನ್ ಮುಖ್ಯಮಂತ್ರಿ ಆದಂತೆ ಭ್ರಷ್ಟರು, ಕೊಲೆಗಾರರು ಯಾರು ಬೇಕಾದರೂ, ಚುನಾವಣೆಯ ಗಾಳಿ-ಗಂಧ ಯಾವುದೂ ಇಲ್ಲದೇ, ಇಲ್ಲಿ ಅಧಿಕಾರ ಹಿಡಿಬಹುದು. ಮುಖ್ಯಮಂತ್ರಿ ಆಗಬಹುದು. ಕೈಯಲ್ಲಿ ಆರು ಜನ ಎಂಪಿಗಳನ್ನು ಮತ್ತು ಕೋಟಿಗಟ್ಟಲೆ ಹಣವನ್ನು ಇಟ್ಟುಕೊಂಡು ಪ್ರಧಾನಮಂತ್ರಿಯ ಗದ್ದುಗೆ ಏರುವ ಕನಸು ಕಾಣಬಹುದು. ಒಮ್ಮೆ ಅಧಿಕಾರ ಹಿಡಿದ ನಂತರ ಚುನಾವಣೆಯಲ್ಲಿ ಸೋತರೂ `ರಾಜೀನಾಮೆ ಕೊಡಲ್ಲ' ಎಂದು ಹಠ ಹಿಡಿಯಬಹುದು. ಅಧಿಕಾರ ಹೋದರೂ `ಮನೆ ಬಿಡಲ್ಲ' ಎನ್ನಬಹುದು! ಇದನ್ನೆಲ್ಲ ತಡೆಯುವ ಶಕ್ತಿ `ಸಾಮಾನ್ಯ' ಜನರಿಗೆ ಇಲ್ಲ. ದೇವೇಗೌಡ, ಗುಜ್ರಾಲ್ ಅಂತಹವರಿಗೆ ಎಲ್ಲಿತ್ತು ಜನ ಬೆಂಬಲ?

ಬರಾಕ್ ಒಬಾಮಾ ಹಾಗಲ್ಲ. ಜನರ ನಡುವಿನಿಂದ, ಅವರ ಸಮ್ಮತಿಯಿಂದ, ಅಧಿಕಾರಕ್ಕೆ ಬರುವ ವ್ಯವಸ್ಥೆಯ ಸಂಕೇತವೇ ಬರಾಕ್ ಒಬಾಮಾ. ಆತ ಶುದ್ಧ ಪ್ರಜಾತಂತ್ರ ವ್ಯವಸ್ಥೆಯ ಉತ್ಪನ್ನ. ನಮಗೂ ಬರಾಕ್ ಬೇಕಾದರೆ ಮೊದಲು ನಮ್ಮ ಸಂವಿಧಾನದ ಸ್ವರೂಪ ಬದಲಾಗಬೇಕು. ಅಲ್ಲಿಯವರೆಗೆ ನಮಗೆ ಬರಾಕ್ ಒಬಾಮಾ ಸಿಗುವುದಿಲ್ಲ.

ಮೊದಲು ಜಾಜರ್್ ವಾಷಿಂಗ್ಟನ್ ಸಿಕ್ಕಿದ್ದರೆ ತಾನೆ ಬರಾಕ್ ಒಬಾಮಾ ತನಕ ಪರಂಪರೆ ಬೆಳೆದು ಬರುವುದು? ನಾವು ಎಲ್ಲವನ್ನೂ `ಪರಿಸ್ಥಿತಿ'ಯ ವಶಕ್ಕೆ ಒಪ್ಪಿಸಿ ಕುಳಿತಿದ್ದೇವೆ. ಹೀಗಾಗಿ ನಮಗೆ ಸಿವಿಲಿಯನ್ ಡ್ರೆಸ್ನಲ್ಲಿರುವ ಇದಿ ಅಮಿನ್ಗಳು ಸಿಗುವ ಸಂಭವವೇ ಹೆಚ್ಚು.


ಜಾಗತಿಕ ಕಟುವಾಸ್ತವವನ್ನು ಅವರು ಊಹಿಸಿದ್ದರು

ಇವರು ಇತರರಿಗೆ ಕಾಣದ್ದನ್ನು ನೋಡಬಲ್ಲ ಸೂಕ್ಷ್ಮದಶರ್ಿಯೆ? ತನ್ನ ದೇಶದ, ತನ್ನ ಓರಗೆಯ ಅನೇಕರು ಗ್ರಹಿಸಲಾಗದ ವಾಸ್ತವವನ್ನು ಇವರು ಸ್ವಲ್ಪ ಮಟ್ಟಿಗಾದರೂ ಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆಯೆ?

- ಅವರ 1993ರ ಪ್ರಬಂಧವನ್ನು ಓದಲು ಆರಂಭಿಸಿದಾಗ ನನ್ನ ಮನಸ್ಸಿನಲ್ಲಿ ತಕ್ಷಣ ಎದ್ದಿದ್ದ ಪ್ರಶ್ನೆಗಳು ಇವು. ಅನಂತರ 1998ರಲ್ಲಿ ಅವರ ಪುಸ್ತಕವನ್ನೂ ಓದಿದ ನಂತರ ಅವರ ವಿಚಾರ ಹೆಚ್ಚು ಸ್ಪಷ್ಟವಾಯಿತು.

ಅವರು ವಿಶ್ವದ ಬಹು ಚಚರ್ಿತ ಲೇಖಕಲ್ಲೊಬ್ಬರು. ತನ್ನ ಕೃತಿ `ದಿ ಕ್ಲ್ಯಾಶ್ ಆಫ್ ಸಿವಿಲೈಝೇಷನ್ಸ್: ರಿಮೇಕಿಂಗ್ ಆಫ್ ವಲ್ಡರ್್ ಆರ್ಡರ್' (ನಾಗರಿಕತೆಗಳ ಸಂಘರ್ಷ: ವಿಶ್ವವ್ಯವಸ್ಥೆಯ ಮರುನಿಮರ್ಾಣ) ಮೂಲಕ ತೀವ್ರ ಸಂಚಲನ ಸೃಷ್ಟಿಸಿ ಮನೆಮಾತಾದ ಹಾರ್ವಡರ್್ ಪ್ರೊಫೆಸರ್. ಅವರ ಹೆಸರು: ಸ್ಯಾಮ್ಯುಯೆಲ್ ಪಿ. ಹಂಟಿಗ್ಟನ್.

ಈಗ ಸ್ಯಾಮ್ಯುಯೆಲ್ ಹಂಟಿಗ್ಟನ್ ಬಗ್ಗೆ ಬರೆಯಲು ಕಾರಣ ಇಷ್ಟೇ. ಈ ವಿದ್ವಾಂಸ ಈಚೆಗೆ (ಡಿಸೆಂಬರ್24, 2008) ತನ್ನ 82ನೇ ವರ್ಷದಲ್ಲಿ ವಿಧಿವಶರಾದರು. ಅವರ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ಈಗ ಕಾಲವೇ ಉತ್ತರ ಹೇಳಲು ಆರಂಭಿಸಿದೆ. ಅವರ ಬರಹಗಳು ಇನ್ನೂ ಹಲವಾರು ವರ್ಷಗಳ ಕಾಲ ಚಚರ್ಿಸಲ್ಪಡುತ್ತವೆ. ಅವರ ವಿಚಾರ ಪೂರ್ಣವಾಗಿ ತಳ್ಳಿಹಾಕುವಂತಹುದಲ್ಲ ಎಂಬ ಅಭಿಪ್ರಾಯ ಈಗ ಬಲ ಪಡೆಯುತ್ತಿದೆ. ಅವರು ಸೂಕ್ಷ್ಮದಶರ್ಿ ಹಾಗೂ ದೂರದಶರ್ಿ ಎಂದು ನಾವು ಒಪ್ಪಲೇಬೇಕಾಗುತ್ತದೆ.

ಶೀತಲ ಸಮರೋತ್ತರ ಕಾಲದಲ್ಲಿ ಜನರ ಮತೀಯ ಹಾಗೂ ಸಾಂಸ್ಕೃತಿಕ ಅಸ್ಮಿತೆಗಳೇ (ಐಡೆಂಟಿಟಿಸ್) ಜಾಗತಿಕ ಮಟ್ಟದ ಸಂಘರ್ಷಗಳಿಗೆ ಕಾರಣವಾಗುತ್ತವೆ ಎಂಬುದು ಅವರ ಸಿದ್ಧಾಂತವಾಗಿತ್ತು. ಅದರಲ್ಲೂ ವಿಶೇಷವಾಗಿ ಇಸ್ಲಾಮೀ ಮೂಲಭೂತವಾದ ಜಾಗತಿಕ ಸಮಸ್ಯೆಯಾಗಿ ಪರಿಣಮಿಸುತ್ತದೆ ಎಂಬುದು ಅವರ ಪ್ರತಿಪಾದನೆಯಾಗಿತ್ತು. ಅವರು 1993ರಲ್ಲಿ ಮೊದಲಬಾರಿಗೆ ಇದನ್ನು ಬರೆದಾಗ `ಅದೆಲ್ಲ ಸಾಧ್ಯವೇ ಇಲ್ಲ' ಎಂದು ತಳ್ಳಿಹಾಕಿದವರೇ ಹೆಚ್ಚುಮಂದಿ. ಇದಕ್ಕೆ ಕಾರಣ ಅಂದಿನ ಪರಿಸ್ಥಿತಿ.

1991-92ರಲ್ಲಿ ಸೋವಿಯತ್ ಒಕ್ಕೂಟ ಸಂಪೂರ್ಣವಾಗಿ ಪತನವಾದಾಗ ಶೀತಲ ಸಮರಕ್ಕೆ `ಅಧಿಕೃತ' ತೆರೆ ಬಿದ್ದಂತಾಯಿತು. ಅಮೆರಿಕ ತಾನೇ ವಿಜಯಿ ಎಂದು ಭಾವಿಸಿತು. ಚೀನಾ ಇನ್ನೂ ಏಷ್ಯಾದ ದೈತ್ಯ ಎನಿಸಿರಲಿಲ್ಲ. ಭಾರತದಲ್ಲಿ ಆಗಷ್ಟೇ ಆಥರ್ಿಕ ಸುಧಾರಣೆಗಳು ಆರಂಭವಾಗಿದ್ದವು. ಚಿನ್ನ ಒತ್ತೆ ಇಟ್ಟು ದೇಶ ದಿವಾಳಿಯಾಗಿತ್ತು. ಲೈಸೆನ್ಸ್-ಕೋಟಾ ವ್ಯವಸ್ಥೆಯಿಂದ ಹೊರಬಂದು ಸರಾಗವಾಗಿ ಉಸಿರಾಡುವುದೇ ನಮ್ಮ ಅಂದಿನ ಆಥರ್ಿಕ ಆದ್ಯತೆಯಾಗಿತ್ತು. ಇನ್ನು ಜಪಾನ್ ಆಥರ್ಿಕವಾಗಿ ದೈತ್ಯನಾದರೂ ಒಂದು ಮಿಲಿಟರಿ ಶಕ್ತಿಯಾಗಿ ಅಮೆರಿಕದ ಅವಲಂಬಿಯೇ. ಜೊತೆಗೆ ಪಶ್ಚಿಮ ಏಷ್ಯಾದಲ್ಲಿ ಸದ್ದಾಂ ಹುಸೇನ್ ಯುದ್ಧದಿಂದ ನಲುಗಿದ್ದ. ಸೌದಿ ದೊರೆ ಅಮೆರಿಕದ ಮುಲಾಜಿಲ್ಲದೇ ಏನೂ ಮಾಡಲಾರದವನಾಗಿದ್ದ.

ಈ ಪರಿಸ್ಥಿತಿ ನೋಡಿದಾಗ ಏನು ಅನಿಸುತ್ತದೆ? ಜಗತ್ತು ಮುಂದೆ ಯಾವ ರೀತಿಯಲ್ಲಿ ಮುನ್ನಡೆಯುತ್ತದೆ ಎಂದು ಕೇಳಿದರೆ ಏನು ಹೇಳಬಹುದು? ಈ ಕುರಿತು ಸಾಮಾನ್ಯವಾಗಿ ಯಾವ ರೀತಿಯ ವಿಶ್ಲೇಷಣೆ ಹೊರಹೊಮ್ಮುತ್ತದೆ?

ಅನೇಕರು ಭಾವಿಸಿದ್ದು ಹೀಗೆ: ಅಮೆರಿಕಕ್ಕೆ ಸವಾಲು ಹಾಕುವ ಎಲ್ಲ ಶಕ್ತಿಗಳೂ ದುರ್ಬಲವಾಗಿವೆ; ವಿಶ್ವದಲ್ಲಿ ಅಮೆರಿಕ ಏಕೈಕ ಪ್ರಬಲ ರಾಷ್ಟ್ರವಾಗಿದೆ; ವಿಶ್ವ `ಯೂನಿಪೋಲಾರ್' ಆಗಿದೆ; ಅಮೆರಿಕದ ನಾಯಕತ್ವದಲ್ಲಿ ಸಂಘರ್ಷರಹಿತ ಹಾಗೂ ಹಿಂಬಾಲಕ ನಾಗರಿಕತೆ ವಿಶ್ವದಲ್ಲಿ ಮುನ್ನಡೆಯುತ್ತದೆ.

ಈ ರೀತಿಯ `ಮುನ್ಸೂಚನೆ' ಪಡೆದು ತಮ್ಮ `ಮುನ್ನೋಟ' ಬೀರಿದವರ ಪೈಕಿ ಪ್ರಮುಖನೆಂದರೆ ಫ್ರಾನ್ಸಿಸ್ ಫೂಕುಯಾಮಾ. ಅಮೆರಿಕದ ಈ ಪ್ರಭಾವಶಾಲಿ ರಾಜಕೀಯ-ಆಥರ್ಿಕ ತಜ್ಞ 1989ರಲ್ಲಿ `ನ್ಯಾಷನಲ್ ಇಂಟೆರೆಸ್ಟ್' ನಿಯತಕಾಲಿಕದಲ್ಲಿ ಒಂದು ಪ್ರಬಂಧ ಬರೆದ. ಅದರ ಶೀಷರ್ಿಕೆ `ದಿ ಎಂಡ್ ಆಫ್ ಹಿಸ್ಟರಿ'. ಮುಂದೆ 1992ರಲ್ಲಿ ಅದೇ ಪ್ರಬಂಧವನ್ನು ವಿಸ್ತರಿಸಿ ಆತ ಬರೆದ ಪುಸ್ತಕದ ಶೀಷರ್ಿಕೆ: `ದಿ ಎಂಡ್ ಆಫ್ ಹಿಸ್ಟರಿ ಅಂಡ್ ದಿ ಲಾಸ್ಟ್ ಮ್ಯಾನ್'. ಆತನ ಆಲೋಚನೆಗಳು ಅನೇಕರನ್ನು ಪ್ರಭಾವಿಸಿದವು.

ಮನುಷ್ಯಕುಲದ ವೈಚಾರಿಕ ವಿಕಾಸ ಈಗ ಮುಗಿದಿದೆ; ಪಶ್ಚಿಮದ ಉದಾರವಾದಿ ಪ್ರಜಾತಂತ್ರವೇ ಮನುಕುಲ ಸೃಷ್ಸಿಸಿದ ಅಂತಿಮ ವೈಚಾರಿಕತೆ. ಅದೇ ಮುಂದಿನ ಕಾಲಕ್ಕೆ ದಾರಿದೀಪ. ಅದೇ ಮಾನವ ಸಕರ್ಾರದ ಅಂತಿಮ ರೂಪ -ಎಂಬುದು ಅವನ ವಾದವಾಗಿತ್ತು. ಅಮೆರಿಕಕ್ಕೆ ಸವಾಲು ಹಾಕುವವರು ಯಾರೂ ಇಲ್ಲ. ಅದರ ನಾಯಕತ್ವದಲ್ಲೇ ಜಗತ್ತು ಮುನ್ನಡೆಯುತ್ತದೆ ಎಂಬುದು ಅವನ `ಮುನ್ನೋಟ'ವಾಗಿತ್ತು.

`ನಾವು ಬರೀ ಶೀತಲಸಮರದ ಅಂತ್ಯವನ್ನು ಮಾತ್ರ ನೋಡುತ್ತಿಲ್ಲ. ಅಥವಾ ಶೀತಲ ಯುದ್ದೋತ್ತರ ಅವಧಿಯ ಇತಿಹಾಸದ ಮುನ್ನಡೆಯನ್ನು ಮಾತ್ರವೇ ಕಾಣುತ್ತಿಲ್ಲ. ನಾವು ವಾಸ್ತವವಾಗಿ ಈಗ ಕಾಣುತ್ತಿರುವುದು ಸ್ವಯಂ ಇತಿಹಾಸದ ಅಂತ್ಯವನ್ನು. ಅಂದರೆ ಇದು ಮಾನವ ಕುಲದ ವೈಚಾರಿಕ ವಿಕಾಸದ ಅಂತಿಮ ಹಂತ. ಇಲ್ಲಿಂದ ಮುಂದಕ್ಕೆ ಪಶ್ಚಿಮದ ಉದಾರವಾದಿ ಪ್ರಜಾತಂತ್ರ ಮಾನವಕುಲದ ಅಂತಿಮ ಸಕರ್ಾರೀ ಸ್ವರೂಪವಾಗಿ ಸರ್ವವ್ಯಾಪಿಯಾಗುತ್ತದೆ' ಎಂದು ಫೂಕುಯಾಮಾ ಬರೆದಿದ್ದ. `ಇಲ್ಲಿಗೆ ಕಥೆ ಮುಗಿಯಿತು. ಅನಂತರ ಎಲ್ಲರೂ ರಾಜನ ನೆರಳಿನಲ್ಲಿ ಸುಖವಾಗಿದ್ದರು' ಎಂಬ ಅಜ್ಜಿಕಥೆ ಮಕ್ಕಳಲ್ಲಿ ನೀಡುವಂತಹ ತೃಪ್ತಿಯನ್ನು ಫೂಕುಯಾಮಾ ನೀಡಿದ್ದ ವಿಶ್ಲೇಷಣೆ ಅನೇಕರಲ್ಲಿ ಮೂಡಿಸಿತ್ತು. ಮುಂದೆ ಮತೀಯತೆ ಒಡ್ಡಬಹುದಾದ ಜಾಗತಿಕ ಸವಾಲುಗಳ ಸುಳಿವು ಫುಕೂಯಾಮಾ ಮತ್ತು ಅವನ ತರಹದ ಅಮೆರಿಕನ್ ಚಿಂತಕರಿಗೆ ಸಿಗಲಿಲ್ಲ. ಆ ಸುಳಿವು ಸಿಕ್ಕಿದ್ದು ಬನರ್ಾಡರ್್ ಲೂಯಿಸ್ ಹಾಗೂ ಸ್ಯಾಮ್ಯುಯೆಲ್ ಹಂಟಿಗ್ಟನ್ಗೆ.

1990 ರಲ್ಲಿ ಬನರ್ಾಡ್ ಲೂಯಿಸ್, ಮುಸ್ಲಿಮರು ಏಕೆ ಪಶ್ಚಿಮವನ್ನು ದ್ವೇಷಿಸುತ್ತಾರೆ ಎಂದು ವಿಶ್ಲೇಷಿಸಿದ್ದಲ್ಲದೇ ಈ ದ್ವೇಷ ಬಹುಬೇಗ ರಾಜಕೀಯ ಹಾಗೂ ಮಿಲಿಟರಿ ಆಯಾಮವನ್ನು ತೆಗೆದುಕೊಳ್ಳುತ್ತದೆ ಎಂದೂ ಬರೆದಿದ್ದರು. ಆದರೆ ಅನಂತರ ಬಂದ ಫೂಕುಯಾಮಾನ ಬಿರುಗಾಳಿಯಲ್ಲಿ ಅದು ತೂರಿಹೋಯಿತು. ಫೂಕುಯಾಮಾ ವಾದವನ್ನು ಒಪ್ಪದ ಹಂಟಿಗ್ಟನ್ 1993ರಲ್ಲಿ `ಪಾರಿನ್ ಅಫೇರ್ಸ್' ನಿಯತಕಾಲಿಕದಲ್ಲಿ `ಕ್ಲ್ಯಾಶ್ ಆಫ್ ಸಿವಿಲೈಝೇಷನ್ಸ್?' ಎಂಬ ಪ್ರಬಂಧ ಬರೆದರು. 1996ರಲ್ಲಿ ಈ ಪ್ರಬಂಧವನ್ನು ವಿಸ್ತರಿಸಿ ಮೇಲೆ ಹೆಸರಿಸಿದ ಪುಸ್ತಕ ಬರೆದು ತಮ್ಮ ಸಿದ್ಧಾಂತ ಮಂಡಿಸಿದರು.

1927ರಲ್ಲಿ ನ್ಯೂಯಾಕರ್್ ನಗರದಲ್ಲಿ ಜನಿಸಿದ ಹಂಟಿಗ್ಟನ್ 18ನೇ ವರ್ಷದಲ್ಲೇ ಪದವಿಧರರಾದವರು. ತಕ್ಷಣ ಪಿಎಚ್ಡಿ ಪಡೆದುಕೋಂಡು 23ನೇ ವರ್ಷಕ್ಕೇ ಹಾರ್ವಡರ್್ ವಿಶ್ವವಿದ್ಯಾಲಯದಲ್ಲಿ ಬೋಧಕರಾದವರು. ಅನಂತರ ವಿದೇಶಾಂಗ ಇಲಾಖೆ, ಶ್ವೇತಭವನಗಳಿಗೆ ಸುರಕ್ಷೆ, ವಿದೇಶ ನೀತಿಗಳ ಸಲಹೆಗಾರರಾದರು. 8 ಪುಸ್ತಕಗಳನ್ನು ಹಾಗೂ ಅಸಂಖ್ಯಾತ ಲೇಖನಗಳನ್ನು ಬರೆದರು. ಅವರ `ಕ್ಲ್ಯಾಶ್...' ಪುಸ್ತಕ ವಿಶ್ವಾದ್ಯಂತ ಮನೆಮಾತಾಯಿತು. ಅವರ ಈಚಿನ (2004) ಪುಸ್ತಕ `ಹೂ ಆರ್ ವಿ?' ಅಮೆರಿಕದ ಐಡೆಂಟಿಟಿ ಸಮಸ್ಯೆಗಳನ್ನು ಕುರಿತಾದದ್ದು.

ಜಗತ್ತಿನ ಮಟ್ಟದಲ್ಲಿ ಐಡೆಟಿಟಿ ಪಾಲಿಟಿಕ್ಸ್ ಬಹಳ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು 1990ರ ದಶಕದಲ್ಲಿ ಬಹುತೇಕರು ಊಹಿಸಿರಲಿಲ್ಲ. ಭಯೋತ್ಪಾದನೆಯ ಪರಿಚಯ ಇದ್ದವರೂ ಅದು ಜಾಗತಿಕ ಸಮಸ್ಯೆಯಾಗಲಾರದು ಎಂದೇ ನಂಬಿದ್ದರು. 2001ರ ಸೆಪ್ಟೆಂಬರ್ 11ಕ್ಕೂ ಮೊದಲು ಭಯೋತ್ಪಾದನೆಯ ವಿಷಯದಲ್ಲಿ ತಾನು ಅನುಸರಿಸುತ್ತಿರುವ `ಕಂಟೇನ್ಮೆಂಟ್' ನೀತಿ ವಿಫಲವಾಗುತ್ತದೆ ಎಂಬುದನ್ನು ಸ್ವತಃ ಅಮೆರಿಕ ಸಕರ್ಾರ ಗಂಭಿರವಾಗಿ ಭಾವಿಸಿರಲಿಲ್ಲ. ಮತೀಯ ಸಂಘರ್ಷ ಕ್ರಮೇಣ ಜಾಗತಿಕ ಸ್ವರೂಪ ಪಡೆದುಕೊಳ್ಳುತ್ತದೆ ಎಂಬ ವಾದವನ್ನು ಈಗಲೂ ಬಹುತೇಕರು ನಂಬುವುದಿಲ್ಲ. ಜಾಗತಿಕ ಮಟ್ಟದಲ್ಲಿ ಮತೀಯ, ಸಾಂಸ್ಕೃತಿಕ ಅಥವಾ ನಾಗರಿಕತೆಗಳ ಧ್ರುವೀಕರಣ ಪ್ರಕ್ರಿಯೆ ಹಂತ ಹಂತವಾಗಿ ನಡೆದು ಹೊಸ ಜಾಗತಿಕ ಸಂಘರ್ಷ ಸೃಷ್ಟಿಸುತ್ತದೆ ಎಂಬುದು ಬಹುತೇಕರ ಕಲ್ಪನೆಗೆ ಮೀರಿದ್ದು.

ಆದರೆ ಬನರ್ಾಡರ್್ ಲೂಯಿಸ್ ಮತ್ತು ಹಂಟಿಗ್ಟನ್ ವಿಚಾರಗಳು ಭಾರತೀಯರಿಗೆ ಆಶ್ಚರ್ಯ ಉಂಟುಮಾಡಬೇಕಿಲ್ಲ. ಪಾಕಿಸ್ತಾನ, ಅದರ ಜಿಹಾದ್, ಜಾಗತಿಕ ಸಮಸ್ಯೆಯಾಗುತ್ತದೆ ಎಂದು ನಾವು ಮೊದಲಿನಿಂದಲೂ ಪ್ರತಿಪಾದಿಕೊಂಡು ಬಂದಿದ್ದೇವೆ. ಆ ಕುರಿತು ಬರೆದೂ ಇದ್ದೇವೆ. ಆದರೆ ಹಂಟಿಗ್ಟನ್ ತರಹ ಅಕ್ಯಾಡೆಮಿಕ್ ಆಗಿ, ಸೊಫಿಸ್ಟಿಕೆಟೆಡ್ ಆಗಿ, ಸಮಗ್ರ ಜಾಗತಿಕ ಮುನ್ನೋಟ ಮಂಡಿಸಲು ಹೋಗಲಿಲ್ಲ.

ಹಾಗೆಂದು ನಾವು ಹಂಟಿಗ್ಟನ್ ಬರಹಗಳ ಬಗ್ಗೆ ನಾಸ್ಟ್ರಡಾಮಸ್ ಪುಸ್ತಕಗಳ ಹಾಗೆ ಚಚರ್ಿಸಬೇಕಿಲ್ಲ. ಅವರ ಎಲ್ಲ ವಿಚಾರಗಳೂ ನಮ್ಮದಾಗಬೇಕಿಲ್ಲ. ಅವರ ಚಿಂತನೆಗಳು, ವಿಚಾರಗಳು ಮೂಲತಃ ಪಶ್ಚಿಮ-ಕೇಂದ್ರಿತವಾದವುಗಳು. ಜಾಗತಿಕ ಸಂಘರ್ಷದಲ್ಲಿ ಪಶ್ಚಿಮ ಗೆಲ್ಲುವುದು ಹೇಗೆ ಎಂಬುದೇ ಅವರ ಮನದಾಳದ ತುಡಿತವಾಗಿತ್ತು. ಅವರ ಈ ಕಾಳಜಿ ಭಾರತದ ಕಾಳಜಿಯಾಗಬೇಕಿಲ್ಲ. ಆದರೆ ವಿಶ್ವದಲ್ಲಿ ಸ್ವಾತಂತ್ರ್ಯ ಮತ್ತು ಮಾನವಹಕ್ಕುಗಳನ್ನು ಉಳಿಸುವುದು ಹೇಗೆ ಎಂಬುದು ಎಲ್ಲರ ಕಾಳಜಿಯೂ ಹೌದು. ಒಂದು ವೇಳೆ ನಾಗರಿಕತೆಗಳ (ಅಥವಾ `ಅನಾಗರಿಕತೆಗಳ' ಎಂದು ಬೇಕಾದರೂ ಅನ್ನಿ) ಬೃಹತ್ ಸಂಘರ್ಷ ಅನಿವಾರ್ಯವಾದರೆ ಆ ಸಂಧರ್ಭದಲ್ಲಿ ಭಾರತದ ಸ್ಥಾನ ಯಾವುದಿರುತ್ತದೆ ಎಂಬ `ಮುನ್ನೋಟ' ಈ ಹೊತ್ತು ನಮಗೆ ಬೇಕಾಗುತ್ತದೆ.

ಮುಂದಿನ 50-100 ವರ್ಷಗಳ ಅವಧಿಯಲ್ಲಿ ಏನಾಗುತ್ತದೆ ಎಂಬುದು ನಮ್ಮ ಕಲ್ಪನೆಗೆ ನಿಲುಕುವುದು ಕಷ್ಟ. ಆದರೂ 15-20 ವರ್ಷಗಳಲ್ಲಿ ವಿಶ್ವವ್ಯವಸ್ಥೆ ಯಾವ ಸ್ವರೂಪ ತಳೆಯಬಹುದು ಎಂಬುದನ್ನು ತುಸು ಸೂಕ್ಷ್ಮನೋಟ ಇರುವವರು ಊಹಿಸಬಹುದು. ಈ ದೃಷ್ಟಿಯಿಂದ ನೋಡಿದಾಗ ಹಂಟಿಗ್ಟನ್ ಜಾಗತಿಕ ವಾಸ್ತವ ಗ್ರಹಿಕೆ ಮಾಡುವಲ್ಲಿ ಸಾಕಷ್ಟು ಯಶಸ್ವಿಯಾದರು ಎನಿಸುತ್ತದೆ.

ನಾವೂ ಏಕೆ `ಮಿಷನ್ ಅಕಾಂಪ್ಲಿಷ್ಡ್' ಎನ್ನಬಾರದು?

`ಮಿಷನ್ ಅಕಾಂಪ್ಲಿಷ್ಡ್'!!

`ಕೆಲಸ ಸಾಧಿಸಿದ್ದಾಯಿತು'!

ಇದು ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಷಣದಲ್ಲಿ ಕಂಡು ಬಂದ ತೃಪ್ತಿ, ಸಮಾಧಾನದ ಸಂದೇಶ. ಈ ಸಂದೇಶ ಹೊತ್ತ ಟಿ-ಶಟರ್್ಗಳನ್ನು ಕೆಲವು ಆಫ್ರಿಕನ್ ಅಮೆರಿಕನ್ ಹುಡುಗರು ಧರಿಸಿದ್ದರು. ಬರಾಕ್ ಬಹುಪರಾಕ್ ಮುಗಿದ ನಂತರ ಅವರೆಲ್ಲ ಸಂತುಷ್ಟರಾಗಿ ಮನೆಗೆ ಹೋದರು. ಏನನ್ನೋ ಕೊನೆಗೂ ಸಾಧಿಸಿದ ಹೆಮ್ಮೆ ಅವರದು.

ಬರಾಕ್ ಒಬಾಮಾ ಆಫ್ರಿಕನ್ ತಂದೆಯ ಮಗ. ಅವರ ತಾಯಿ ಅಮೆರಿಕನ್ ಬಿಳಿ ಮಹಿಳೆ. ವರ್ಣದಲ್ಲಿ ತಂದೆಯನ್ನೇ ಹೋಲುವ ಬರಾಕ್ ಈಗ ಅಮೆರಿಕದ 44ನೇ ಅಧ್ಯಕ್ಷನಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅವರ ಪತ್ನಿ, ಈಗ ದೇಶದ ಪ್ರಥಮ ಮಹಿಳೆ ಎನಿಸಿರುವ, ಮಿಶೆಲ್ ಇನ್ನೂ ಸಾಮಾನ್ಯ ಕುಟುಂಬದ ಮಹಿಳೆ. ಅಮೆರಿಕನ್ ಬಿಳಿಯರೊಬ್ಬರ ಮನೆಯಲ್ಲಿ ಗುಲಾಮನಾಗಿ ಬಿದ್ದಿದ್ದ ಆಫ್ರಿಕನ್ ವ್ಯಕ್ತಿಯೊಬ್ಬನ ಮರಿಮಗಳು.

ಅಮೆರಿಕ ಸಂಯುಕ್ತ ಸಂಸ್ಥಾನದ ಸ್ಥಾಪನೆಯಾಗಿ 233 ವರ್ಷಗಳು ಉರುಳಿವೆ. ಅಂತಃಕಲಹ ಮುಗಿದು 144 ವರ್ಷಗಳು ಮುಗಿದಿವೆ. ಗುಲಾಮಗಿರಿ ನಿಷೇಧಿಸಲ್ಪಟ್ಟು ಅಷ್ಟೇ ವರ್ಷಗಳು ಕಳೆದಿವೆ. ಎಲ್ಲ ನಾಗರಿಕರಿಗೆ ಸಮಾನ ನಾಗರಿಕ ಹಕ್ಕು ಲಭ್ಯವಾಗಿ 46 ವರ್ಷಗಳು ಸಂದಿವೆ. ಆದರೂ ಆಫ್ರಿಕನ್ ಅಮೆರಿಕನ್ನರು ತಾವು ಬಿಳಿಯರಿಗೆ ಸರಿಸಮಾನರು ಎಂದು ಅನಿಸಲು ಯಾವುದಾದರೂ ಒಂದು ಸಾಂಕೇತಿಕ ಘಟನೆ ಬೇಕಾಗಿತ್ತು. ಬರಾಕ್ರ ಅಧ್ಯಕ್ಷ ಪದವಿಯಲ್ಲಿ ಅದನ್ನೀಗ ಕಂಡುಕೊಂಡಿದ್ದಾರೆ. ಅವರಿಗೀಗ `ಮಿಷನ್ ಅಕಾಂಪ್ಲಿಷ್ಡ್' ಎನಿಸಿದೆ. ನ್ಯಾಯ ಸಿಕ್ಕಿತು ಎನಿಸಿದೆ.

ಆದರೆ ಭಾರತದಲ್ಲಿ ಇನ್ನೂ ಈ ಭಾವ ಕಾಣುತ್ತಿಲ್ಲ. ನಮ್ಮಲ್ಲಿ ಅಸೃಶ್ಯತೆಯನ್ನು ಸಾಮಾನ್ಯವಾಗಿ ಕರಿಯರ ಗುಲಾಮಗಿರಿಗೆ ಹೋಲಿಸಿ ಮಾತನಾಡುವವರು ಇದ್ದಾರೆ. ಆದರೆ ಅವರಾರೂ ಕೆ. ಆರ್. ನಾರಾಯಣನ್ ರಾಷ್ಟ್ರಪತಿಯಾದಾಗ `ಮಿಷನ್ ಅಕಾಂಪ್ಲಿಷ್ಡ್' ಎನ್ನಲಿಲ್ಲ. ಸಮಾಧಾನ ವ್ಯಕ್ತಪಡಿಸಲಿಲ್ಲ.

ನೆನಪಿಡಿ, ಭಾರತ ಸ್ವತಂತ್ರವಾದಾಗ ಅಮೆರಿಕದಲ್ಲಿ ಇನ್ನೂ ಸಮಾನ ನಾಗರಿಕ ಹಕ್ಕು ಇರಲಿಲ್ಲ. ಬಿಳಿಯರಿಗೆ ಸಮನಾದ ನಾಗರಿಕ ಹಾಗೂ ಮಾನವ ಹಕ್ಕುಗಳನ್ನು ಕರಿಯರಿಗೆ ನಿರಾಕರಿಸಲಾಗಿತ್ತು. ಅಮೆರಿಕದ ಸಂವಿಧಾನ ಅಸ್ತಿತ್ವಕ್ಕೆ ಬಂದು ಹತ್ತಿರ ಹತ್ತಿರ ಎರಡು ಶತಮಾನಗಳೇ ಸಂದಿದ್ದರೂ ಗುಲಾಮಗಿರಿ ಒಂದಲ್ಲ ಒಂದು ರೀತಿಯಲ್ಲಿ ಮುಂದುವರಿದೇ ಇತ್ತು. ಈ ಜನಾಂಗೀಯ ತಾರತಮ್ಯ 1960ರ ದಶಕದಲ್ಲಿ ಅಳಿಯಲು ಕಾರಣವಾಗಿದ್ದು ಡಾ. ಮಾಟರ್ಿನ್ ಲೂಥರ್ ಕಿಂಗ್ ಜೂನಿಯರ್ ನಡೆಸಿದ ಅವಿರತ ಹೋರಾಟ. ಆದರೆ 1950ರಲ್ಲಿ ನಮ್ಮ ದೇಶದ ಸಂವಿಧಾನ ಜಾರಿಗೆ ಬಂದಿದ್ದೇ ಸಮಾನ ನಾಗರಿಕ ಹಕ್ಕುಗಳ ಆಧಾರದ ಮೇಲೆ.

1865 ರ ವರೆಗೂ ಅಮೆರಿಕದ ಅನೇಕ ರಾಜ್ಯಗಳಲ್ಲಿ ಗುಲಾಮಗಿರಿ ಕಾನೂನುಸಮ್ಮತವಾಗಿತ್ತು. ಗುಲಾಮರು ಎಂದರೆ ಸಾಮಾನ್ಯವಾಗಿ ಆಫ್ರಿಕನ್ ಕಪ್ಪು ಜನರು, ಕೆಲವೊಮ್ಮೆ ಸ್ಥಳೀಯ ಇಂಡಿಯನ್ನರು. ಆಜೀವನ ಪರ್ಯಂತದ ಗುಲಾಮಗಿರಿ ಅದು. ಒಬ್ಬ ಗುಲಾಮನಾದ ಎಂದರೆ ಅವನ ಜೀವ ಇರುವವರೆಗೂ ಆತ ಗುಲಾಮನೇ. ಅವನಿಗೆ ಮಾನವಹಕ್ಕುಗಳಿರಲಿಲ್ಲ. ನಾಗರಿಕ ಹಕ್ಕುಗಳೂ ಇರಲಿಲ್ಲ. 1860ರ ಅಮೆರಿಕನ್ ಜನಗಣತಿಯ ಪ್ರಕಾರ ಗುಲಾಮಗಿರಿ ಕಾನೂನುಬದ್ಧವಾಗಿದ್ದ 15 ರಾಜ್ಯಗಳ ಒಟ್ಟು ಜನಸಂಖ್ಯೆ 1 ಕೋಟಿ 20 ಲಕ್ಷ. ಈ ಪೈಕಿ 40 ಲಕ್ಷ ಜನರು ಗುಲಾಮರು! ಬಿಳಿ ಜನರ ಒಂದೊಂದು ಕುಟುಂಬದಲ್ಲೂ 10 ಮಂದಿ ಕಪ್ಪು ಗುಲಾಮರು ಇರುತ್ತಿದ್ದರು.

ಆಫ್ರಿಕಾದಿಂದ ಕಪ್ಪು ವಣರ್ೀಯರನ್ನು ಹಿಡಿದು ತರಲಾಗುತ್ತಿತ್ತು. ಅವರನ್ನು ದನಗಳಂತೆ ಬೀದಿಯಲ್ಲಿ ನಿಲ್ಲಿಸಿಕೊಂಡು ಬಹಿರಂಗವಾಗಿ ಹರಾಜು ಹಾಕಲಾಗುತ್ತಿತ್ತು. ಒಂದು ಅಂಕಿಅಂಶದ ಪ್ರಕಾರ 16ನೇ ಶತಮಾನದಿಂದ 19ನೇ ಶತಮಾನದ ಅವಧಿಯಲ್ಲಿ ಆಫ್ರಿಕಾದಿಂದ ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳಿಗೆ ಸುಮಾರು 20 ಲಕ್ಷ ಜನರನ್ನು ಬಿಳಿಯರು ಹಿಡಿದು ಸಾಗಿಸಿದ್ದರು. ಅತಿ ಹೆಚ್ಚು ಈ ಪೈಕಿ ಜನರನ್ನು ಸಾಗಿಸಿದ್ದು ಐರೋಪ್ಯ ರೋಮನ್ ಕ್ಯಾಥೋಲಿಕ್ಕರ ವಶದಲ್ಲಿದ್ದ ಬ್ರೆಜಿಲ್ ದೇಶಕ್ಕೆ. ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ 6,45,000 ಜನರನ್ನು ಹಿಡಿದು ತರಲಾಗಿತ್ತು (ಅದಕ್ಕೂ ಮೊದಲು ಬ್ರಿಟಿಷರು ಸ್ಥಳೀಯ ಇಂಡಿಯನ್ ಜನಾಂಗದವರನ್ನು ಗುಲಾಮಗಿರಿಗೆ ಒಳಪಡಿಸಿದ್ದರು). 1619ರಲ್ಲಿ ಆರಂಭವಾದ ಈ ಅಮಾನವೀಯ ಪ್ರಕ್ರಿಯೆಯನ್ನು, ಪೈಶಾಶಿಕ ಪರಿಸ್ಥಿತಿಯನ್ನು ನಿವಾರಿಸಿದ್ದು 16ನೇ ಅಧ್ಯಕ್ಷ ಅಬ್ರಾಹಾಂ ಲಿಂಕನ್.

ಭಾರತೀಯರು ಹೀಗೆ ಎಂದೂ ಹೊರಗಿನಿಂದ ಜನರನ್ನು ಪಶುಗಳಂತೆ ಹೊತ್ತುತಂದು ಗುಲಾಮಗಿರಿಗೆ ಒಳಪಡಿಸಲಿಲ್ಲ. ನಮ್ಮ ಸ್ಥಳೀಯ ರಾಜರುಗಳು ಇಂತಹ ಅಮಾನವೀಯ ಕಾನೂನುಗಳನ್ನು ಹೊಂದಿರಲಿಲ್ಲ. `ಅಸೃಶ್ಯ'ರಾದವರೂ ಸಹ `ಗುಲಾಮ'ರು ಎನಿಸಿರಲಿಲ್ಲ. ಅಶ್ಪೃಶ್ಯತೆ ಗುಲಾಮಗಿರಿಗಿಂತಲೂ ಭಿನ್ನವಾದ, ಆದರೆ ಭೀಕರವಾದ, ಸಾಮಾಜಿಕ ಅನಿಷ್ಟ.

ವಾಸ್ತವವಾಗಿ ನಮ್ಮ ಸೆಕ್ಯುಲರಿಸ್ಟರು ಹಾಡಿ ಹೊಗಳುವ ದೆಹಲಿ ಸುಲ್ತಾನರು ಹಾಗೂ ಮುಘಲ್ ಇಸ್ಲಾಮೀ ದೊರೆಗಳು ಗುಲಾಮಗಿರಿಯನ್ನು ಕಾನೂನುಬದ್ಧಗೊಳಿಸಿದ್ದರು. ಅವರ ಗುಲಾಮರ ಪೈಕಿ ಮುಸ್ಲಿಮರೂ ಇದ್ದರು. `ಇಸ್ಲಾಮಿಕ್ ಬ್ರದರ್ಹುಡ್' ಪರ ವಾದಿಸುವವರು ಈ ಇತಿಹಾಸ ಓದಬೇಕು. ಅದರಿಂದ ಇನ್ನೂ ಒಂದು ವಿಷಯ ಸ್ಪಷ್ಟವಾಗುತ್ತದೆ. ಮುಸ್ಲಿಂ ದೊರೆಗಳ ಕಾನೂನುಗಳ ಪ್ರಕಾರ, ಈ ಗುಲಾಮರ ನಡುವೆಯೂ ವಿವಿಧ ದಜರ್ೆಗಳಿದ್ದವು. ಮುಸ್ಲಿಮೇತರ ಗುಲಾಮರು (`ಧಿಮ್ಮಿ'ಗಳು) ಹೀನ ದಜರ್ೆಯವರಾಗಿದ್ದರು. ಇದು ವಾಸ್ತವ ಇತಿಹಾಸ.

ಇಂದು `ಶಾಂತಿ', `ಪ್ರೀತಿ' ಎಂದೆಲ್ಲ ನಾಟಕವಾಡುವ ಐರೋಪ್ಯ ಆಡಳಿತಗಾರರ ಹಾಗೂ ಮಿಷನರಿಗಳ ಬೆನ್ನ ಹಿಂದಿರುವುದೂ ಇಂತಹುದೇ ಕರಾಳ ಇತಿಹಾಸ. ಆದರೆ ನಾವದನ್ನು ಎತ್ತಿ ತೋರಿಸುವುದಿಲ್ಲ. ಅವರ `ಸುಧಾರಣೆ'ಯನ್ನು ಮೆಚ್ಚುತ್ತೇವೆ. ನಮ್ಮ ಸುಧಾರಣೆ, ಸಾಧನೆಗಳನ್ನು ಹೇಳದೇ ಭಾರತವನ್ನು ನಿಂದಿಸುತ್ತ ಕೂರುತ್ತೇವೆ.

ವಾಸ್ತವವಾಗಿ ಭಾರತೀಯ ಸಮಾಜದಲ್ಲಿ ಅಮಾನವೀಯ ಅಸೃಶ್ಯತೆ ಹೆಚ್ಚಾದದ್ದು ಮುಸ್ಲಿಂ ದೊರೆಗಳ ಕಾಲದಲ್ಲಿ. ಮಧ್ಯಯುಗದಲ್ಲಿ ಮುಸ್ಲಿಂ ದೊರೆಗಳ ನೀತಿಗಳಿಂದಾಗಿ ಹೇಗೆ ಹೊಸ ಹೊಸ `ದಲಿತ' ಜಾತಿಗಳು ಹುಟ್ಟಿಕೊಂಡವು ಎಂಬುದನ್ನು ಇತಿಹಾಸಜ್ಞ ಡಾ. ಕೆ.ಎಸ್. ಲಾಲ್ ದಾಖಲೆಗಳ ಸಮೇತ ನಿರೂಪಿಸಿದ್ದಾರೆ. ಬ್ರಿಟಿಷರ ಕಾಲದಲ್ಲಿ ಜಾತಿಗಳ ಸಂಘರ್ಷ ಸೃಷ್ಟಿಯಾಗಿದ್ದೂ ಇತಿಹಾಸದಿಂದ ತಿಳಿಯುತ್ತದೆ. ಈ ಇತಿಹಾಸ ಏನೇ ಹೇಳಲಿ ಅಸ್ಪೃಶ್ಯತೆ ಹಾಗೂ ಜಾತಿ ತಾರತಮ್ಯ ಎಂದಿಗೂ ಸಹಿಸತಕ್ಕ ವಿಷಯಗಳಲ್ಲ. ಈ ಎರಡು ಅನಿಷ್ಟಗಳಿಗೆ ಭಾರತೀಯ ಸಮಾಜ ಭಾಗಶಃ ಪಾಲುದಾರ ಎಂಬುದನ್ನು ನಾವು ಗುರುತಿಸಲೇಬೇಕು. ಈ ಅನಿಷ್ಟಗಳು ನಿಜವಾಗಿಯೂ ಅಮಾನವೀಯವೇ ಸರಿ.

ಆದರೆ ಭಾರತದಲ್ಲಿ ಅಮೆರಿಕಕ್ಕೂ ಮೊದಲೇ ಸುಧಾರಣೆಯಾಗಿದೆ ಎನ್ನುವುದನ್ನೂ ನಾವು ಗಮನಿಸಬೇಕು. ಆದರೆ ಈ ಕುರಿತು ನಮ್ಮ `ವಿಚಾರವಂತರು' ಹಾಗೂ `ಸೆಕ್ಯುಲರಿಸ್ಟರು' ಜಾಣ ಕುರುಡು ಪ್ರದಶರ್ಿಸುತ್ತಾರೆ. 16ನೇ ಶತಮಾನದಲ್ಲೇ ಕನಕದಾಸರು `ನಿಮ್ಮ ಕುಲದ ನೆಲೆ ಯಾವುದು ಬಲ್ಲಿರಾ?" ಎಂದು ಪ್ರಶ್ನಿಸಿದ್ದರು. ಇಲ್ಲಿ 18 ಮತ್ತು 19ನೇ ಶತಮಾನದಲ್ಲೇ ವ್ಯವಸ್ಥಿತ ಸಾಮಾಜಿಕ ಸುಧಾರಣಾ ಪ್ರಕ್ರಿಯೆ ಆರಂಭವಾಗಿತ್ತು. ಬ್ರಹ್ಮಸಮಾಜ, ಆರ್ಯಸಮಾಜ, ಅರವಿಂದರು, ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್ ಇವರೆಲ್ಲ ಮಾಟರ್ಿನ್ ಲೂಥರ್ ಕಿಂಗ್ ಜೂನಿಯರ್ಗಿಂತಲೂ ಬಹಳ ಹಳಬರು. ಅಶ್ಪೃಶ್ಯತೆ ನಮ್ಮಲ್ಲಿ ಕಾನೂನುಬಾಹಿರ. ಜಾಮೀನುರಹಿತ ಅಪರಾಧ.

ಆದರೂ ನಾವು ಮಾತ್ರ `ಮಿಷನ್ ಅಕಾಂಪ್ಲಿಷ್ಡ್' ಎನ್ನುವುದಿಲ್ಲ. ನಮ್ಮಲ್ಲಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಹಾಗೂ ಎಲ್ಲ ಜಾತಿವರ್ಗದವರು ದೇಶವನ್ನು ಆಳಿದ್ದಾರೆ. ಆಳುತ್ತಿದ್ದಾರೆ. ಆದರೂ ನಾವು ಇನ್ನೂ `ಸಾಮಾಜಿಕ ನ್ಯಾಯ ಸಿಕ್ಕಿಲ್ಲ' ಎನ್ನುತ್ತೇವೆ. ಹಾಗೆ ನೋಡಿದರೆ ಬರಾಕ್ ಒಬಾಮಾ ಅಮೆರಿಕದ ಮತೀಯ ಅಲ್ಪಸಂಖ್ಯಾತರಲ್ಲ. ಅವರು ತಮ್ಮ ತಂದೆಯಂತೆ ಇನ್ನೂ ಮುಸ್ಲಿಂ ಆಗಿಯೇ ಉಳಿದಿದ್ದರೆ ಅಮೆರಿಕದ ಅಧ್ಯಕ್ಷನಾಗುವುದು ಸಾಧ್ಯವಿತ್ತೆ? ಲ್ಯೂಸಿಯಾನಾದ ಗವರ್ನರ್, ಭಾರತೀಯ ಮೂಲದ, ಬಾಬಿ ಜಿಂದಾಲ್ರ ತಂದೆತಾಯಿಗಳು ಈಗಲೂ ಹಿಂದೂಗಳು. ಆದರೆ ಬರಾಕ್ ಮತ್ತು ಬಾಬಿ ಇಬ್ಬರೂ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡ ನಂತರವೇ ಅಮೆರಿಕದ ರಾಜಕೀಯದಲ್ಲಿ ಸ್ವೀಕೃತವಾಗಿದ್ದು. ಅಮೆರಿಕದಲ್ಲಿ ಇನ್ನೂ ಕ್ರೈಸ್ತೇತರರು, ಮಹಿಳೆಯರು ಅಧ್ಯಕ್ಷರಾಗಿಲ್ಲ ಎನ್ನುವುದು ಗಮನಾರ್ಹ. ಆದರೂ ಅಮೆರಿಕವನ್ನು ಹೊಗಳುವ ನಾವು ನಮ್ಮ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತೇವೆ.

ನಮ್ಮಲ್ಲಿ ಜಾತಿಗಳು ಈಗಲೂ ಪರಿಗಣನೆಯ ಮಾನದಂಡಗಳಾಗಿರುವುದು ರಾಜಕೀಯದಲ್ಲಿ ಮಾತ್ರ. ಇದಕ್ಕೆ ಪ್ರಬಲ ಜಾತಿವಾದಿ ರಾಜಕಾರಣಿಗಳು ಮಾತ್ರ ಕಾರಣರೇ ಹೊರತು ನಮ್ಮ ಸಮಾಜ ಕಾರಣವಲ್ಲ. ಜಾತಿಗಳನ್ನು ವೋಟ್ಬ್ಯಾಂಕ್ ಮಾಡಿಕೊಳ್ಳುವ, ಜಾತಿ ಆಧಾರಿತ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಶಕ್ತಿಗಳು ಯಾವುವು ಎಂಬುದು ನಮಗೆ ಗೊತ್ತಿಲ್ಲವೆ?

ಅಸ್ಪೃಶ್ಯತೆ ಕೆಲವು ಕಡೆಗಳಲ್ಲಿ ಇನ್ನೂ ಜೀವಂತವಾಗಿದೆ ಎನ್ನುವುದು ನಿಜ. ಆದರೆ ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂಬುದೂ ಗಮನಾರ್ಹ. ಅಪರಾಧಿಗಳಿದ್ದಾರೆ ಎಂದರೆ ಅಪರಾಧಕ್ಕೆ ಅಧಿಕೃತ ಮಾನ್ಯತೆ ಇದೆ ಎಂದು ಅರ್ಥವಲ್ಲ. ಹಾಗೆ ನೋಡಿದರೆ ಅಮೆರಿಕದಲ್ಲಿ ಈಗಲೂ ಗುಲಾಮಗಿರಿ ಇದೆ. ಇದು ವಾಸ್ತವ ಸತ್ಯ. ಅಲ್ಲಿ ಗುಲಾಮಗಿರಿ ಅನಧಿಕೃತವಾಗಿ ಈಗಲೂ ಮುಂದುವರಿದಿದೆ. ಸಿಐಎ ಹಗೂ ಸ್ಟೇಟ್ (ವಿದೇಶಾಂಗ) ಇಲಾಖೆಗಳ ಅಧಿಕೃತ ವರದಿಗಳ ಪ್ರಕಾರ ಈಗಲೂ ಪ್ರತಿವರ್ಷ ಅಮೆರಿಕಕ್ಕೆ 50,000 ದಿಂದ 1,00,000 ದಷ್ಟು ಜನರನ್ನು, ಅದರಲ್ಲೂ ಮಹಿಳೆಯರನ್ನು, ಮಕ್ಕಳನ್ನು ಅನಧಿಕೃತವಾಗಿ ಬಲವಂತದಿಂದ ಕರೆತಂದು ಗುಲಾಮಗಿರಿಗೆ ಒಳಪಡಿಸಲಾಗುತ್ತಿದೆ! ಲೈಂಗಿಕ ಚಟುವಟಿಕೆಗಳಿಗೆ ದೂಡಲಾಗುತ್ತಿದೆ.

ಈ ಅಪರಾಧಗಳನ್ನು ಆಧಾರವಾಗಿ ಇಟ್ಟುಕೊಂಡು ನಾವು ಅಮೆರಿಕದ ಸಮಾಜವನ್ನು ಜರಿಯುತ್ತೇವೆಯೆ? ಅಮೆರಿಕದ ಇಮೇಜ್ ಇದರಿಂದ ಹಾಳಾಗಿದೆಯೆ? ಹಾಗಾದರೆ ನಾವೇಕೆ ಭಾರತವನ್ನು ಜರಿಯಬೇಕು? ವಾಸ್ತವ ಗುರುತಿಸೋಣ. ಭಾರತ ಈಗಾಗಲೇ ಅನೇಕ ಬರಾಕ್ ಒಬಾಮಾರನ್ನು ಸೃಷ್ಟಿಸಿದೆ.

ಭಾರತದಲ್ಲೂ `ಮಿಷನ್ ಅಕಾಂಪ್ಲಿಷ್ಡ್' ಎನ್ನೋಣ.


ನಮ್ಮ ಜನತಂತ್ರದಲ್ಲಿ ಜನರ ಶಕ್ತಿ ಎಷ್ಟು?

ಈಚೆಗೆ ಮ್ಯಾನ್-ಬುಕರ್ ಪ್ರಶಸ್ತಿ ಪಡೆದ, ಕನ್ನಡದ ಹುಡುಗ ಅರವಿಂದ್ ಅಡಿಗ ವಿರಚಿತ, `ವೈಟ್ ಟೈಗರ್' ಕಾದಂಬರಿಯಲ್ಲಿ ನನಗೆ `ಭಾರತ ನಿಂದನೆ'ಗಿಂತಲೂ ನಮ್ಮ ದೇಶದ ಕರಾಳ ವಾಸ್ತವಗಳು ಹೆಚ್ಚಾಗಿ ಕಂಡುಬಂದವು. ಹಾಗೆಂದು ಅಡಿಗನ ನೆಗೆಟಿವ್ ಅಪ್ರೋಚ್ ಇಷ್ಟವಾಯಿತೆಂದು ಹೇಳಲಾರೆ. ಆತ ಕಾದಂಬರಿಯ ಉದ್ದಕ್ಕೂ ದೇಶದ ನೆಗೆಟಿವ್ ಸಂಗತಿಗಳನ್ನು ಮಾತ್ರ ಎತ್ತಿ ಎತ್ತಿ ತೋರಿಸುತ್ತಾನೆ. ದೇಶದ ಪ್ರಜಾತಂತ್ರವನ್ನು ಲೇವಡಿ ಮಾಡುತ್ತಾನೆ. ಬಡವರು, ಶ್ರೀಮಂತರು ಎಂಬ ಬೈನರಿ ಸಿಸ್ಟಮ್ ನೆನಪಿಸುತ್ತಾನೆ. ಆದರೆ ದೇಶದ ಯಶಸ್ವಿ ಮಧ್ಯಮವರ್ಗವನ್ನು ಮರೆಯುತ್ತಾನೆ. ಇದು ಒಂದು ತರಹದ ವೈಚಾರಿಕ ಬದ್ಧತೆ ಆಗಿರಬಹುದು. ಸಿನಿಕತನವೂ ಆಗಿರಬಹುದು. ಅಥವಾ ಗಾಂಧೀಜಿ ಹೇಳಿದಂತೆ `ಡ್ರೈನ್-ಇನ್ಸ್ಪೆಕ್ಟರ್' ಸಿಂಡ್ರೋಮ್ ಸಹ ಆಗಿರಬಹುದು. ಆದರೆ ಒಂದು ಸಂಗತಿ ಹೇಳಲೇಬೇಕು. ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯ ವಿಷಯಗಳಲ್ಲಿ ಅರವಿಂದ್ ಸುಳ್ಳು ಹೇಳಿಲ್ಲ.

ಕಾದಂಬರಿಯ ಪ್ರಮುಖ ಪಾತ್ರ ಬಲರಾಮ್ ಹಲ್ವಾಯ್ ಎಂಬ ಡ್ರೈವರ್. ಅವನು ತನ್ನ ಯಜಮಾನನನ್ನೇ ಕೊಲೆ ಮಾಡಿ ಪೊಲೀಸರಿಗೆ ಸಿಗದೇ ತಪ್ಪಿಸಿಕೊಂಡಿರುವ ವ್ಯಕ್ತಿ. ಆದರೂ ನಮ್ಮ ಚುನಾವಣೆಗಳಲ್ಲಿ ಮಾತ್ರ `ಅವನ ಅಮೂಲ್ಯ ಮತ' ತಪ್ಪದೇ ಚಲಾವಣೆಯಾಗುತ್ತಲೇ ಇರುವ ಕೌತುಕಮಯ, ಕರಾಳ ವಾಸ್ತವ ನಮ್ಮ ದೇಶದ್ದು! ಬೇಕಾದರೆ ಪೊಲೀಸರು `ನನ್ನನ್ನು' ಮತಗಟ್ಟೆಯ ಬಳಿ ಸುಲಭವಾಗಿ ಹಿಡಿಯಬಹುದು ಎಂದು ಅವನು ವ್ಯಂಗ್ಯವಾಡುತ್ತಾನೆ!

ಯಾರಿಗೂ ತಿಳಿಯದ ಹೊಸ ಸಂಗತಿಯನ್ನೇನೂ ಅರವಿಂದ್ ಹೇಳಿಲ್ಲ. ಈ ವಾಸ್ತವ ನಮ್ಮೆಲ್ಲರಿಗೂ ಗೊತ್ತಿರುವುದೇ. ಮತಗಟ್ಟೆ ಅಕ್ರಮಗಳು, ತಮ್ಮ, `ಮತ' ಕರುಣಿಸುವ ಮೊದಲೇ ಮತದಾರರಿಗೆ `ಮದ' ಕರುಣಿಸುವ `ನಾಯಕರು' -ಇವೆಲ್ಲ ಯಾರಿಗೆ ಗೊತ್ತಿಲ್ಲ? ಇವೆಲ್ಲ ನಮ್ಮ ಪ್ರಜಾತಂತ್ರದ ದೋಷಗಳು. ಇನ್ನೂ ಸುಧಾರಣೆ ಕಾಣದ ದೋಷಗಳು.

`ಎಷ್ಟೇ ದೋಷವಿದ್ದರೂ ಭಾರತದಲ್ಲಿ ಪ್ರಜಾತಂತ್ರ ಭದ್ರವಾಗಿರುವುದೇ ಅದರ ಹೆಗ್ಗಳಿಕೆ. ಈ ದೇಶದ ಜನರ ಮೂಲಭೂತಗುಣವೇ ಸ್ವಾತಂತ್ರ್ಯ' ಎಂಬ ಮಾತನ್ನೂ ಆಡುತ್ತೇವೆ. ಇದು ಸತ್ಯ. ಆದರೆ ಅರ್ಧ ಸತ್ಯ! ನಮ್ಮಲ್ಲಿ `ಪ್ರಜಾ'-ತಂತ್ರ ಎಲ್ಲಿದೆ? ಎಷ್ಟಿದೆ?

`ಸೆಕ್ಯುಲರಿಸಂ'ಗೆ ಮತೀಯ ಮೂಲಭೂತವಾದ ಅಪಥ್ಯವಾದಂತೆ ಪ್ರಜಾತಂತ್ರಕ್ಕೆ ಅಪಥ್ಯವಾದದ್ದು ವಂಶಾಡಳಿತ. ಆದರೆ ಜಿಹಾದ್ ಹಾಗೂ ವಂಶಾಡಳಿತ ಎರಡೂ ನಮ್ಮ ನಡುವೆ ವಿಜೃಂಭಿಸುತ್ತಿರುವ ಶಕ್ತಿಗಳು. ಎರಡಕ್ಕೂ ರಾಜಮನ್ನಣೆ!

ಆದರೆ ಇಲ್ಲಿ ಒಂದು ವಿಷಯ ಸ್ಪಷ್ಟವಾಗಬೇಕು. ವಂಶಾಡಳಿತ ಬರೀ ಭಾರತದ ಪಿಡುಗಲ್ಲ. ಇದನ್ನೆಲ್ಲ ಅರವಿಂದ್ ಅಡಿಗ ತರಹದ ಲೇಖಕರು ಬರೆಯುತ್ತಾರೋ ಇಲ್ಲವೋ ಗೊತ್ತಿಲ್ಲ. ನಮ್ಮಲ್ಲಿ ಅನೇಕರು ಪಶ್ಚಿಮದಲ್ಲಿ ಈ ಪಿಡುಗು ಇಲ್ಲ ಎಂದೇ ಭಾವಿಸಿದ್ದಾರೆ. ತಮ್ಮ ಕುಟುಂಬ, ವಂಶಕ್ಕೆ ಸೇರಿದವರನ್ನು ರಾಜಕೀಯವಾಗಿ `ಮೇಲೆ ತರುವ' ಆಚರಣೆ ಎಲ್ಲ ದೇಶಗಳಲ್ಲೂ ಇದೆ. ಆಲ್ಬೇನಿಯಾದಿಂದ ಜಿಂಬಾಬ್ವೆ ತನಕ 130 ದೇಶಗಳ ಕುಟುಂಬದ ರಾಜಕೀಯದ ವಂಶವೀರರೆಲ್ಲರ ಪಟ್ಟಿ ನನ್ನಲ್ಲಿದೆ. ಆದರೆ ಕೆಲವೊಂದು ಪ್ರಮುಖ ದೇಶಗಳಲ್ಲಿ ಈ ಪ್ರಕ್ರಿಯೆ ಅನಿಯಂತ್ರಿತವಾಗಿ ನಡೆಯದಂತೆ ತಡೆಯುವ ಸಾಂವಿಧಾನಿಕ ಕಟ್ಟುಪಾಡುಗಳಿವೆ. ಉದಾಹರಣೆಗೆ, ಅಮೆರಿಕದಲ್ಲಿ ನೂರಾರು ಮಂದಿ ಕುಟುಂಬ ರಾಜಕೀಯದ ಪ್ರಯೋಜನ ಪಡೆದಿದ್ದಾರೆ. ಇಲ್ಲಿ ಅವರೆಲ್ಲರ ಹೆಸರು ದಾಖಲಿಸಲು ಐದಾರು ಪುಟಗಳಾದರೂ ಬೇಕು! ಆದರೂ ಅಲ್ಲಿ ರಾಜ್ಯವನ್ನು, ರಾಷ್ಟ್ರವನ್ನು ಆಳಲು ಜನರ ನೇರ ಅನುಮೋದನೆ ಬೇಕು. ಮತ್ತು, ಒಬ್ಬರಿಗೆ, ಒಂದು ಜನ್ಮದಲ್ಲಿ, ಎರಡೇ ಅಧಿಕಾರಾವಧಿಗಳು.

ನಮ್ಮ ವಂಶವೀರರ ಪಟ್ಟಿ ಬಹಳ ದೊಡ್ಡದು. ಸಂದಭರ್ೋಚಿತವಾಗಿ ಕೆಲವು ಹೆಸರುಗಳನ್ನು ನೆನಪಿಸಿಕೊಳ್ಳಬಹುದು. ಜವಹರ್ಲಾಲ್ ನೆಹರೂ, ಅವರ ಮಗಳು ಇಂದಿರಾ ಗಾಂಧಿ, ಆಕೆಯ ಪುತ್ರ ಸಂಜಯ್, ಆತನ ಪತ್ನಿ ಮನೇಕಾ, ಆಕೆಯ ಪುತ್ರ ವರುಣ್, ಇಂದಿರೆಯ ಹಿರಿಮಗ ರಾಜೀವ್, ಅವರ ಮಡದಿ ಸೋನಿಯಾ (ಆ್ಯಂಟೋನಿಯಾ), ಆಕೆಯ ಪುತ್ರ ರಾಹುಲ್, ತುದಿಗಾಲಲ್ಲಿ ಆತನ ತಂಗಿ ಪ್ರಿಯಾಂಕಾ, ಆಕೆಯ ಕಂದಮ್ಮಗಳು ರೈಯಾನ್, ಮಿರಯ್ಯಾ... ಶೇಕ್ ಅಬ್ದುಲ್ಲಾ, ಅವರ ಪುತ್ರ ಫಾರೂಖ್ ಅಬ್ದುಲ್ಲಾ, ಅವರ ಪುತ್ರ ಉಮರ್ ಅಬ್ದುಲ್ಲಾ... ದೇವೇಗೌಡ, ಅವರ ಪುತ್ರ ರೇವಣ್ಣ, ಅವರ ತಮ್ಮ ಕುಮಾರಸ್ವಾಮಿ, ಅವರ ಮಡದಿ ಅನಿತಾ...ಕರುಣಾನಿಧಿ, ಅವರ ಸೋದರಳಿಯ ಮುರಸೋಳಿ ಮಾರನ್, ಅವರ ಮಗ ದಯಾನಿಧಿ ಮಾರನ್, ಕರುಣಾ ಹಿರಿಮಗ ಅಳಗಿರಿ, ಅವರ ತಮ್ಮ ಸ್ಟಾಲಿನ್, ಅವರ ತಂಗಿ ಕನ್ನಿಮೋಳಿ... ಎಸ್.ಬಿ. ಚವಾಣ್, ಪುತ್ರ ಅಶೋಕ್ ಚವಾಣ್... ಬಿಹಾರದ ಲಾಲೂ, ಅವರ ಪತ್ಬಿ ರಾಬ್ಡಿ ದೇವಿ... ವಿಜಯರಾಜೇ ಸಿಂಧ್ಯಾ, ಪುತ್ರಿಯರಾದ ವಸುಂಧರಾ, ಯಶೋಧರಾ, ಪುತ್ರ ಮಾಧವರಾವ್ ಸಿಂದಿಯಾ, ಅವರ ಪುತ್ರ ಜ್ಯೋತಿರಾದಿತ್ಯ, ದುಷ್ಯಂತ್ ಸಿಂಗ್... ಮುಲಾಯಂ, ಅಖಿಲೇಶ್... ರಾಜೇಶ್, ಸಚಿನ್ ಪೈಲಟ್... ಬಿಜೂ ಪಟ್ನಾಯಕ್, ನವೀನ್... ಗುಂಡೂರಾವ್, ದಿನೇಶ್.. ಎನ್ಟಿಆರ್, ಪವಾರ್, ದೇವಿಲಾಲ್, ಚೌತಾಲಾ.... - ಈ ಪಟ್ಟಿ ಸಾಕು, ಸಾಕು ಬಿಡಿ.

ನಮ್ಮ ವಂಶವೀರರ ಪಟ್ಟಿಯೂ ಅವರ ಅಧಿಕಾರಾವಧಿಯೂ ಮಿತಿಯಿಲ್ಲದ್ದು! ನಮ್ಮಲ್ಲಿ ಒಬ್ಬರಿಗೆ ಇಷ್ಟೇ ಅವಧಿ ಎಂಬ ಯಾವುದೇ ಮಿತಿಯಿಲ್ಲ. ಮನಃಪೂತರ್ಿ ದೇಶದ, ರಾಜ್ಯದ ಮತ್ತು ಪಕ್ಷದ ಆಡಳಿತ ನಡೆಸಿ, ತಮ್ಮ ಮಕ್ಕಳಿಗೆ ಪಟ್ಟಕಟ್ಟಿ ಸಾಯಬಹುದು! ಇದು ನಮ್ಮ ಪ್ರಜಾತಂತ್ರ.

ಅರೆ, ವಂಶಕ್ಕೊಬ್ಬರು ಮಾತ್ರ ರಾಜಕೀಯದಲ್ಲಿರಬೇಕು ಎಂದರೆ ಹೇಗೆ? ರಾಜಕಾರಣ ಮಾಡುವ ಹಕ್ಕು ಪ್ರಜಾತಂತ್ರದಲ್ಲಿ ಎಲ್ಲರಿಗೂ ಇಲ್ಲವೆ? -ಎನಿಸಬಹುದು. ಆದರೆ ನಮ್ಮ ಜನತಂತ್ರದಲ್ಲಿ `ಜನರ' ಶಕ್ತಿ ಎಷ್ಟು? ಅವರಿಗಿರುವ ಅವಕಾಶಗಳು ಎಷ್ಟು? ಚುನಾವಣೆಯ ಕಾಲದಲ್ಲಿ ಒಂದಿಷ್ಟು `ಮದ' ಅಥವಾ `ಮುದ'! ಬಲರಾಮ್ ಹಲ್ವಾಯ್ ತರಹ `ತಪ್ಪದೇ' ಮತಹಾಕುವ ಭಾಗ್ಯ!

ಈಗ ಒಂದೊಂದು ರಾಜಕೀಯ ಪಕ್ಷವೂ ಒಂದೊಂದು ಕುಟುಂಬದ ಕೈಲಿ ಇದೆ. ಆ ಪಕ್ಷದ ಮುಖಂಡತ್ವ ಆ ವಂಶದ ಗುತ್ತಿಗೆ. ಪಕ್ಷ `ಚುನಾವಣೆ'ಯಲಿ ಗೆದ್ದರೆ ರಾಜಕೀಯ ಅಧಿಕಾರ ಆ ಕುಟುಂಬದವರಿಗೇ ಮೀಸಲು. ಇದು ಎಲ್ಲರಿಗೂ ಗೊತ್ತು. ಒಂದು ಪಕ್ಷಕ್ಕೆ ಒಬ್ಬನೇ ಶಾಶ್ವತ ದೊಣ್ಣೆನಾಯಕ. ಪರ್ಮನೆಂಟ್ ಫ್ರಾಫೆಟ್! ಉಳಿದವರೆಲ್ಲ ಬಾಲಬಡುಕರು ಅಥರ್ಾತ್ ಗು...ಲಾ...ಮ...ರು! ಅಥವಾ ಮಯರ್ಾದೆಯಿಂದ ಹೇಳುವುದಾದರೆ `ಸದಸ್ಯರು'.

ನಮ್ಮ ರಾಜಕೀಯ ಪಕ್ಷಗಳಲ್ಲಿ `ಎಲೆಕ್ಷನ್' ಇಲ್ಲ. ಅಲ್ಲಿರುವುದೆಲ್ಲ `ನಾಮಿನೇಷನ್' ವ್ಯವಸ್ಥೆ! ಅಧ್ಯಕ್ಷರಾದವರು ತಮ್ಮ ನಂತರ ಮುಂದಿನ ಪಕ್ಷಾಧ್ಯಕ್ಷರು ಯಾರು (ಸಾಮಾನ್ಯವಾಗಿ ಅವರ ಆಯ್ಕೆ ತಮ್ಮ ಕುಟುಂಬದವರದ್ದೇ ಆಗಿರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ) ಎಂದು ತೀಮರ್ಾನಿಸುತ್ತಾರೆ. ದೇವೇಗೌಡ ಜೆಡಿಎಸ್ ಪಕ್ಷದ `ರಾಷ್ಟ್ರೀಯ ಅಧ್ಯಕ್ಷ', ಅವರ ಪುತ್ರ ಕುಮಾರಸ್ವಾಮಿ `ರಾಜ್ಯದ ಅಧ್ಯಕ್ಷ'. ಆ ಪಕ್ಷದ ಮುಂದಿನ ರಾಷ್ಟ್ರೀಯ ಅಧ್ಯಕ್ಷರು ಯಾರು ಎಂಬುದು ಎಲ್ಲರಿಗೂ ಈಗಲೇ ಗೊತ್ತು! ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ, ಅವರ ಪುತ್ರ ರಾಹುಲ್ ಅದರ ಪ್ರಧಾನ ಕಾರ್ಯದಶರ್ಿ. ಈ ವ್ಯಕ್ತಿಯ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅನೇಕ ಯುವಕರನ್ನು ದೇಶದ ಅನೇಕ ಖಾಸಗಿ ಕಂಪೆನಿಗಳು ತಿರಸ್ಕರಿಸಿವೆ! ಆದರೂ ಈತನಿಗಾಗಿ ಈಗಿನಿಂದಲೇ ಪ್ರಧಾನಿ ಪಟ್ಟವನ್ನು ಕಾಯ್ದಿರಿಸಲಾಗಿದೆ!

ರಾಜಕೀಯ ಅಧಿಕಾರ ಇವರಿಗೆಲ್ಲ ಅಪ್ಪನ (ಅಥವಾ ಅಮ್ಮನ) ಆಸ್ತಿ. ಅದನ್ನು ಆಜೀವನ ಪರ್ಯಂತ ಅನುಭವಿಸುವುದು ಅವರ `ಹಕ್ಕು'. ಇದನ್ನೇ ಪ್ರಜಾತಂತ್ರ ಎನ್ನಬಹುದಾದರೆ, ಧಾರಾಳವಾಗಿ ಅಂದುಕೊಳ್ಳಿ! ನೀವು ನಿಮ್ಮ ಸಂಸದೀಯ `ಪ್ರತಿನಿಧಿ'ಗಳನ್ನು ಆರಿಸುತ್ತೀರಿ ಅಷ್ಟೇ. ನಿಮ್ಮ ಸಕರ್ಾರವನ್ನಲ್ಲ. ಸಕರ್ಾರಿ ಮುಖ್ಯಸ್ಥರನ್ನಲ್ಲ. ಇದನ್ನೇ `ಮಹಾ-ಚುನಾವಣೆ' ಎನ್ನಬಹುದಾದರೆ ಹಾಗೇ ಅಂದುಕೊಂಡು ಖುಷಿಪಟ್ಟುಕೊಳ್ಳಿ.


ಮತಾಂತರ ಎಂಬುದು ಕ್ರೈಸ್ತ ಜಿಹಾದ್

ಮತಾಂತರ ಇಂದು ನಿನ್ನೆಯ ಸಮಸ್ಯೆಯಲ್ಲ. ಅದು ಬರೀ ಬೆಂಗಳೂರು, ಮಂಗಳೂರು, ಕಂಧಮಾಲ್, ಕೇರಳಗಳ ಸಮಸ್ಯೆಯಲ್ಲ. ಬರೀ ಭಾರತದ ಸಮಸ್ಯೆಯೂ ಅಲ್ಲ. ಅದು ಜಾಗತಿಕ ಸಮಸ್ಯೆ. ಇಡೀ ಜಗತ್ತಿನಲ್ಲಿ ಯಾರೂ ಮತಾಂತರವನ್ನು ಲಘುವಾಗಿ ಪರಿಗಣಿಸಿಲ್ಲ. ಅದು ಎಂದಿಗೂ ಎಲ್ಲ ಸಮಾಜಗಳಲ್ಲೂ ಬಿಸಿ ವಸ್ತುವೇ ಆಗಿದೆ.
`ಮತಾಂತರ' ಇಲ್ಲದೇ ಮಿಷನರಿಗಳಿಗೆ ನೌಕರಿಯಿಲ್ಲ; ಜಿಹಾದ್ ಇಲ್ಲದೇ ಮುಜಾಹಿದ್ಗಳಿಲ್ಲ. `ಜಿಹಾದ್' ಒಂದು ಮತೀಯ ಕರ್ತವ್ಯ ಎಂಬುದು ಮುಜಾಹಿದೀನ್ ನಂಬಿಕೆ. ಮತಾಂತರ ಬೈಬಲ್ ಆದೇಶ, ಆದ್ದರಿಂದ ಅದು ತಮ್ಮ ಕರ್ತವ್ಯ ಎಂಬುದು ಮಿಷನರಿಗಳ ನಂಬಿಕೆ. ಅದನ್ನು ಅವರು `ಗ್ರೇಟ್ ಕಮಿಷನ್' (ಮ್ಯಾಥ್ಯೂ. 28-19) ಎಂದು ಕರೆಯುತ್ತಾರೆ.
ಇದು ನಿಮಗೆ ತಿಳಿದಿರಲಿ. ಮಿಷನರಿಗಳ ಸಾಹಿತ್ಯದಲ್ಲಿ ಮತಾಂತರ ಮಾಡಬೇಕಾಗಿರುವ ಅನ್ಯಧಮರ್ೀಯರನ್ನು ಮತ್ತು ತಮ್ಮ ಚಚರ್ಿನ ಹದ್ದುಬಸ್ತಿನಲ್ಲಿರುವ ಸದಸ್ಯರನ್ನು `ಶೀಪ್' (ಕುರಿ) ಎಂದು ಕರೆಯುವುದು ವಾಡಿಕೆ! ಹೊಸಬರನ್ನು ನಮ್ಮ `ಫ್ಲಾಕ್'ಗೆ (ಮಂದೆಗೆ) ಸೇರಿಸಿಕೊಳ್ಳಬೇಕು ಎನ್ನುವುದು ಅವರ ಭಾಷೆ!
ಮೂಲಭೂತವಾದಿ ಮಿಷನರಿಗಳಿಗೂ ಜಿಹಾದಿಗಳಿಗೂ ಒಂದು ವ್ಯತ್ಯಾಸವಿದೆ. ನಾಳೆಯೇ ಜಗತ್ತಿನಾದ್ಯಂತ ಶರಿಯತ್ ತರಬಲ್ಲೆವು ಎಂದು ನಂಬುವ ಮುಜಾಹಿದ್ಗಳು ಸಾವಿರಾರು ಮಂದಿ ಇದ್ದಾರೆ. ಆದರೆ ಮಿಷನರಿಗಳದು ವ್ಯವಸ್ಥಿತವಾದ, ನೂರಾರು ವರ್ಷಗಳ ದೀಘರ್ಾವಧಿ ಯೋಜನೆ. ಅದಕ್ಕೇ `ಈ ಸಹಸ್ರಮಾನದಲ್ಲಿ' ಏಷ್ಯಾದಾದ್ಯಂತ ಸಂಪೂರ್ಣವಾಗಿ ಶಿಲುಬೆ ನೆಟ್ಟು ಏಷ್ಯಾವನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು 1999ರಲ್ಲಿ ಅಂದಿನ ಪೋಪ್ ಎರಡನೇ ಜಾನ್ ಪಾಲ್ ಕರೆ ನೀಡಿದ್ದು.
ಕಾನ್ಸ್ಟೆಂಟೈನ್ ದೊರೆಯ ಕತ್ತಿಯಿಂದ ಹಿಡಿದು ಪೋಪ್ಗಳು ಶತಮಾನಗಳ ಕಾಲ ನಡೆಸಿದ ಕ್ರೂಸೇಡ್ ಯುದ್ಧಗಳವರೆಗೆ, ವಿವಿಧ ದೇಶಗಳಲ್ಲಿ ಇನ್ಕ್ವಿಸಿಷನ್ ಹೆಸರಿನಲ್ಲಿ ನಡೆಸಿದ ನರಮೇಧದಿಂದ ಹಿಡಿದು 1960ರ ದಶಕದ ಸೆಕೆಂಡ್ ವ್ಯಾಟಿಕನ್ ಕೌಂಸಿಲ್ವರೆಗೆ ಮತಾಂತರ ಒಂದು ಬಿಸಿ ಚಚರ್ಾವಸ್ತುವಾಗಿ ಉಳಿದುಬಂದಿದೆ. ಅದಕ್ಕಾಗಿ ಮಹಾಯುದ್ಧಗಳಾಗಿವೆ. ಅದಕ್ಕೆ ದೀರ್ಘವಾದ, ಕರಾಳವಾದ ಇತಿಹಾಸವಿದೆ. ವ್ಯಾಟಿಕನ್ನಿನ `ಕ್ಯಾನನ್ ಲಾ' ದಂತಹ `ಅಧಿಕೃತ ಸಂಹಿತೆ'ಯೂ ಇದೆ.
ಇಂದು ಬ್ರಾಹ್ಮಣರಾಗಿವವರು ನಾಳೆ `ನಾವು ಹರಿಜನರು' ಎಂದರೆ ನಮ್ಮ ಸಕರ್ಾರವೇ ಒಪ್ಪುವುದಿಲ್ಲ. ನಮ್ಮ ಈಗಿನ `ಜಾತ್ಯತೀತ' ಸಕರ್ಾರಿ ವ್ಯವಸ್ಥೆಯ ಪ್ರಕಾರ ಒಬ್ಬರ ಜಾತಿ ಎಂದೆಂದಿಗೂ ಶಾಶ್ವತ. ಏನು ಮಾಡಿದರೂ ಅದು ಬದಲಾಗದು. ಆದರೆ ಅವರ ಮತಧರ್ಮ ಮಾತ್ರ ಶಾಶ್ವತವಲ್ಲ. ದಿನಕ್ಕೊಂದು ಬಾರಿ ನೀವು ಮತಾಂತರ ಹೊಂದುತ್ತಲೇ ಇರಬಹುದು!!

ಅಕ್ರಮ ಮತಾಂತರ ನಿಷೇಧ

ಕ್ರೈಸ್ತರ ಮತಾಂತರವನ್ನು ಸೌದಿ ಅರೇಬಿಯಾ, ಪಾಕಿಸ್ತಾನ, ಇರಾನ್, ಮುಂತಾದ ಮುಸ್ಲಿಂ ದೇಶಗಳು ಶಾಸನಾತ್ಮಕವಾಗಿ ನಿಷೇಧಿಸಿವೆ. ಚೀನಾದಲ್ಲಿಯೂ ಮತಾಂತರ ನಿಷೇಧ ಇದೆ. ನಿಮಗೆ ಗೊತ್ತೆ? ಬಹುಸಂಖ್ಯಾತ ಕ್ರೈಸ್ತರ ದೇಶವಾದ ಗ್ರೀಸ್ನಲ್ಲೂ ಮತಾಂತರ ನಿಷೇಧ ಇದೆ! ಹಾಗೆಯೇ ಮುಸ್ಲಿಂ ಆಗಿ ಕ್ರೈಸ್ತರು ಮತಾಂತರ ಹೊಂದುವುದನ್ನು ಕ್ರೈಸ್ತ ದೇಶಗಳು ಒಪ್ಪುವುದಿಲ್ಲ. `ಬರಾಕ್ ಒಬಾಮಾ ಮುಸ್ಲಿಂ ಅಂತೆ' ಎಂಬುದು ಅಮೆರಿಕದಲ್ಲಿ ಬಿಸಿ ಚಚರ್ೆಯ ವಸ್ತುವಾಗಿತ್ತು. ಕೊನೆಗೆ ಅವರು ತಮ್ಮ ಚಚರ್ಿನ ಮುಖಂಡರಿಂದ ತಾವು ಕ್ರಿಶ್ಚಿಯನ್ ಎಂದು ಹೇಳಿಸಬೇಕಾಯಿತು. ಫ್ರಾನ್ಸ್, ಸ್ಪೇನ್ಗಳಲ್ಲಿ ಮುಸ್ಲಿಂ-ಕ್ರಿಶ್ಚಿಯಾನಿಟಿ ನಡುವೆ ಮತಾಂತರ ಸಂಘರ್ಷ ಈಗಲೂ ತೀವ್ರವಾಗಿದೆ.
ಭಾರತದಲ್ಲಿಯೂ ಮತಾಂತರ ನಿಷೇಧ ಇಂದಿನ ಕೂಗಲ್ಲ. ಬ್ರಿಟಿಷ್ ಆಡಳಿತದ ಭಾರತದಲ್ಲಿ ಮತಾಂತರ ನಿಷೇಧ ಕಾಯ್ದೆ ಇರಲಿಲ್ಲವಾದರೂ ಕೆಲವು ಪ್ರಾಂತ್ಯಗಳ ರಾಜರುಗಳು ಅಕ್ರಮ ಮತಾಂತರ ನಿಷೇಧಿಸಿದ್ದರು. ರಾಯಗಢ್ ಸ್ಟೇಟ್ ಕನ್ವರ್ಷನ್ ಆ್ಯಕ್ಟ್ 1936, ಪಾಟ್ನಾ ಫ್ರೀಡಮ್ ಆಫ್ ರಿಲಿಜನ್ ಆ್ಯಕ್ಟ್ 1942, ಸಗರ್ುಜ ಸ್ಟೇಟ್ ಅಪೋಸ್ಟೆಸಿ ಆ್ಯಕ್ಟ್ 1945, ಉದೈಪುರ್ ಸ್ಟೇಟ್ ಆ್ಯಂಟಿ ಕನ್ವರ್ಷನ್ ಆ್ಯಕ್ಟ್ 1946 - ಕೆಲವು ಉದಾಹರಣೆಗಳು. ಹಾಗೆಯೇ ಬಿಕನೇರ್, ಜೋಧ್ಪುರ್, ಕಾಲಹಂಡಿ ಮತ್ತು ಕೋಟಾಗಳಲ್ಲೂ ಕ್ರೈಸ್ತ ಮತಕ್ಕೆ ಅಕ್ರಮ ಮತಾಂತರ ಮಾಡುವುದನ್ನು ನಿಷೇಧಿಸಲಾಗಿತ್ತು.
1950ರ ದಶಕದಲ್ಲಿ ವಿದೇಶಿ ಮಿಷನರಿ ಚಟುವಟಿಕೆಗಳು ತೀವ್ರವಾಗಿದ್ದು ಅಂತರ ಧಮರ್ೀಯ ಸಾಮರಸ್ಯಕ್ಕೆ ಧಕ್ಕೆಯಾಗುವ ಪರಿಸ್ಥಿತಿ ತಲೆದೋರಿದಾಗ ಅಂದಿನ ಮಧ್ಯಪ್ರದೇಶದ ಕಾಂಗ್ರೆಸ್ ಸಕರ್ಾರ ನಾಗಪುರ ಹೈಕೋಟರ್ಿನ ನಿವೃತ್ತ ಮುಖ್ಯ ನ್ಯಾಯಾಧೀಶ ಭವಾನಿ ಶಂಕರ್ ನಿಯೋಗಿಯವರ ನೇತೃತ್ವದಲ್ಲಿ ಒಂದು ತನಿಖಾ ಸಮಿತಿ ನೇಮಿಸಿತು. ನಿಯೋಗಿ ಸಮಿತಿ 700ಕ್ಕೂ ಹೆಚ್ಚು ಹಳ್ಳಿಗಳನ್ನು ಸಂದಶರ್ಿಸಿ, 11,360 ಜನರನ್ನು ವಿಚಾರಿಸಿ ಬಹಳ ಕೂಲಂಕಷವಾಗಿ ತನಿಖೆ ಮಾಡಿತು. 99 ಪ್ರಶ್ನೆಗಳಿದ್ದ ವಿವರವಾದ ಪ್ರಶ್ನಾವಳಿ ತಯಾರಿಸಿ ಎಲ್ಲರಿಂದಲೂ ಉತ್ತರ ಪಡೆಯಿತು. ಸಮಿತಿಗೆ 375 ಲಿಖಿತ ಹೇಳಿಕೆಗಳು ಬಂದವು. ಸಮಿತಿಯನ್ನು ವಿರೋಧಿಸಿ ರೋಮನ್ ಕ್ಯಾಥೋಲಿಕ್ ಚಚರ್್ ಹೈಕೋಟರ್್ ಮೆಟ್ಟಿಲು ಹತ್ತಿತು. ಆದರೆ ಕೋಟರ್್ ಅದರ ಅಜರ್ಿಯನ್ನು ವಜಾ ಮಾಡಿತು.
ವಿದೇಶಿ ಮಿಷನರಿಗಳಿಂದ ಮತಾಂತರ ಪ್ರಯತ್ನ ಹಾಗೂ ಹಿಂದೂ ದೇವರುಗಳ ಅವಹೇಳನ ತೀವ್ರವಾಗಿ ನಡೆಯುತ್ತಿರುವುದನ್ನು ಸಮಿತಿಯ ತನಿಖೆ ಖಚಿತಪಡಿಸಿತು. ಮಿಷನರಿಗಳ ಚಟುವಟಿಕೆ, ಸಾಹಿತ್ಯ, ಭಾಷಣ ಎಲ್ಲವನ್ನೂ ಸಮಿತಿಯ ವರದಿಯಲ್ಲಿ ವಿವರವಾಗಿ ದಾಖಲಿಸಲಾಗಿದೆ. `ಮತಾಂತರದ ದುರುದ್ದೇಶ ಇಟ್ಟುಕೊಂಡು ಆಸ್ಪತ್ರೆ ಹಾಗೂ ಶಾಲೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ' ಎಂದು ದೃಢಪಡಿಸಿದ ನಿಯೋಗಿ ಸಮಿತಿ ಮತಾಂತರಗಳನ್ನು ಶಾಸನಾತ್ಮಕವಾಗಿ ನಿಷೇಧಿಸಬೇಕು ಎಂದು ಶಿಫಾರಸು ಮಾಡಿತು.
1954ರಲ್ಲಿ ಮತಾಂತರ ತಡೆ ಕಾಯ್ದೆ ಹಾಗೂ ಹಿಂದುಳಿದ ಸಮುದಾಯಗಳ ಸಂರಕ್ಷಣಾ ಕಾಯ್ದೆಗಳನ್ನು ಸಂಸತ್ತು ಪರಿಗಣಿಸಿತ್ತು. ಆದರೆ ಬೆಂಬಲ ಸಾಲದೇ ಈ ಕಾಯ್ದೆಗಳು ಅಂಗೀಕೃತವಾಗಲಿಲ್ಲ. ಸಂಸತ್ತಿನಲ್ಲಿ ಈ ಶಾಸನಗಳು ಜಾರಿಗೆ ಬರದಿದ್ದರೂ ಅಕ್ರಮ ಮತಾಂತರ ತಡೆಯುವ ಶಾಸನಗಳು 1967ರಲ್ಲಿ ಒರಿಸ್ಸಾ ಹಾಗೂ 1968ರಲ್ಲಿ ಮಧ್ಯಪ್ರದೇಶಗಳಲ್ಲಿ ಜಾರಿಗೆ ಬಂದವು. 1978ರಲ್ಲಿ ಅರುಣಾಚಲ ಪ್ರದೇಶದಲ್ಲೂ ಈ ಕಾಯ್ದೆ ಜಾರಿಯಾಯಿತು,. ಕ್ರಮೇಣ ದೇಶದ 7 ರಾಜ್ಯಗಳಲ್ಲಿ ಅಕ್ರಮ ಮತಾಂತರ ನಿಷೇಧ ಕಾಯ್ದೆ ಜಾರಿಯಾಯಿತು. ಈ ಪೈಕಿ 4 ರಾಜ್ಯಗಳಲ್ಲಿ ಈ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷದ ಸಕರ್ಾರಗಳು. ಆದರೆ ಈ ಕಾಯ್ದೆಯನ್ನು ಸಮರ್ಪಕವಾಗಿ ಅನ್ವಯಗೊಳಿಸಲು ನಮ್ಮ `ಸೆಕ್ಯುಲರಿಸಂ' ಇನ್ನೂ ಬಿಟ್ಟಿಲ್ಲ.
ಅಕ್ರಮ ಮತಾಂತರ ನಡೆದಿದ್ದರೆ ಯಾಕೆ ಕಾನೂನು ಕ್ರಮ ಜರುಗಿಸಿಲ್ಲ? ಎಂದು ಮತಾಂತರ ಸಮರ್ಥಕರು ಪದೇ ಪದೇ ಕೇಳುತ್ತಾರೆ. ದೂರುಗಳು ದಾಖಲಾಗಿಲ್ಲ ಎಂಬುದು ಅವರ ವಾದ. ಎಷ್ಟು ರಾಜ್ಯಗಳಲ್ಲಿ ಎಷ್ಟು ದೂರುಗಳು ದಾಖಲಾಗಿವೆ ಎಂಬ ಅಂಕಿಅಂಶ ಅವರ ಬಳಿ ಇದೆಯೆ? ಒಂದಿಷ್ಟು ಸ್ಥೂಲ ವಿವರ ಹುಡುಕಿದರೆ ಸಿಗುತ್ತದೆ. ದೆಹಲಿಯ ಶಾಹಿ ಇಮಾಮ್ ಬುಖಾರಿಯ ವಿರುದ್ಧ ಎರಡು ಬಾರಿ ಜಾಮೀಣು ರಹಿತ ವಾರೆಂಟ್ ಜಾರಿಯಾಗಿತ್ತು. ಆದರೂ ಅವರನ್ನು ಬಂಧಿಸುವ ಧೈರ್ಯವನ್ನು ನಮ್ಮ ಸೆಕ್ಯುಲರ್ ಸಕರ್ಾರಗಳು ಮಾಡಲಿಲ್ಲ. ನಮ್ಮ ಸೆಕ್ಯುಲರಿಸಂ ಪ್ರಕಾರ ದೊಡ್ಡ ಮಿಷನರಿಗಳು ಭೂಲೋಕದ ದೇವರುಗಳು. ಆದರೆ ಕಂಚೀ ಆಚಾರ್ಯರನ್ನು ಮಾತ್ರ ಮುಲಾಜಿಲ್ಲದೇ ಬಂಧಿಸಲಾಯಿತು.
ಇನ್ನು ಸುಪ್ರೀಮ್ ಕೋಟರ್್ ವಿಷಯಕ್ಕೆ ಬರೋಣ. `ಯಾರೊಬ್ಬರನ್ನೂ ತಮ್ಮ ಮತಕ್ಕೆ ಮತಾಂತರ ಮಾಡುವ ಹಕ್ಕು ಮತ್ಯಾರಿಗೂ ಇಲ್ಲ' ಎಂದು 1977ರಲ್ಲಿ ಭಾರತದ ಸುಪ್ರೀಂ ಕೋಟರ್್ ಸ್ಪಷ್ಟವಾಗಿ ಘೋಷಿಸಿದೆ. ಮತಾಂತರಕ್ಕೆ ಸಂಬಂಧಿಸಿದ ಕ್ರ್ರಿಮಿನಲ್ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳ್ಳುವವರೆಗೆ ವಿಚಾರಣೆಯನ್ನು ಹೈಕೋಟರ್ುಗಳು ರದ್ದುಪಡಿಸುವಂತಿಲ್ಲ ಎಂದೂ ಸುಪ್ರೀಮ್ ಕೋಟರ್್ 2006ರಲ್ಲಿ ಆದೇಶಿಸಿದೆ. ಬೆಂಗಳೂರಿನ ಪೇಸ್ಟರ್ ರಾಜು ಎಂಬುವವರು ಹಿಂದೂಗಳನ್ನು ಮತಾಂತರ ಮಾಡಲು ಯತ್ನಿಸಿದ್ದ ಆಪಾದನೆ ಅದು. ಸಕರ್ಾರದ ಪೂವರ್ಾನುಮತಿ ಪಡೆದು ಕೇಸನ್ನು ದಾಖಲಿಸಿಲ್ಲ ಎಂದು ಹೇಳಿ ಕನರ್ಾಟಕ ಹೈಕೋಟರ್ು ವಿಚಾರಣೆಯನ್ನು ರದ್ದುಪಡಿಸಿತ್ತು. ಆದರೆ ಸುಪ್ರೀಮ್ ಕೋಟರ್ು ವಿಚಾರಣೆ ಮುಂದುವರಿಸಲು ಆದೇಶಿಸಿತು.
ಮತಾಂತರಗಳನ್ನು ನಿಷೇಧಿಸಬೇಕು ಎಂದು ಮಹಾತ್ಮ ಗಾಂಧಿ ಸ್ಪಷ್ಟವಾಗಿ ಹೇಳಿದ್ದು ಸರ್ವವಿದಿತ. `ನೀವು ಕ್ರೈಸ್ತರಾಗಬೇಕು' ಎಂದು ಕೆಲವು ಮಿಷನರಿಗಳು ಗಾಂಧಿಯವರನ್ನೂ ಪುಸಲಾಯಿಸಿದ್ದೂ ಸರ್ವವಿದಿತ. ಮತಾಂತರ ರಾಷ್ಟ್ರಾಂತರವೂ ಹೌದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದೂ ಸರ್ವವಿದಿತ. ಅಂಬೇಡ್ಕರ್ ಸಹ ಚಚರ್ುಗಳ ವಿದೇಶ ನಿಷ್ಠೆಯನ್ನು ಖಂಡಿಸಿದ್ದರು. ಅವರು ಕ್ರೈಸ್ತರಾಗಿ ಮತಾಂತರ ಹೊಂದಲು ನಿರಾಕರಿಸಿದ್ದಕ್ಕೆ ಇದೂ ಒಂದು ಕಾರಣ. ಮತಾಂತರದ ಮೂಲಕ ಸ್ಪಷ್ಟ ರಾಜಕೀಯ ಸಂದೇಶ ಕೊಡಲು ಬಯಸಿದ್ದ ಅವರು ಕ್ರೈಸ್ತ ಮತಕ್ಕೆ ತಾವೇಕೆ ಮತಾಂತರ ಹೊಂದಲಿಲ್ಲ ಎಂದು ವಿವರಿಸಿದ್ದಾರೆ. ವ್ಯವಸ್ಥಿತ ಮತಾಂತರಗಳನ್ನು ಸಮಥರ್ಿಸುವ ನಮ್ಮ `ಜಾತ್ಯತೀತ' ಬುದ್ಧಿಜೀವಿಗಳು ಇವೆಲ್ಲವನ್ನೂ ಮರೆಮಾಚಿ ಜಾಣ ಕುರುಡು ಪ್ರದಶರ್ಿಸುತ್ತಾರೆ.

ಇದು ಬರೀ ಭಾರತದ ಸಮಸ್ಯೆಯಲ್ಲ

`ಹಿಂದೂಗಳಲ್ಲಿ ಜಾತಿ ಪದ್ಧತಿ ಇರುವವರೆಗೆ ಮತಾಂತರಗಳು ನಡೆಯುತ್ತಲೇ ಇರುತ್ತವೆ' ಎಂದು ಮಾಜಿ ಪ್ರಧಾನಿಯೊಬ್ಬರು ಈಚೆಗೆ ಅಪ್ಪಣೆಕೊಡಿಸಿದ್ದಾರೆ. ಅಂದರೆ ಮಿಷನರಿಗಳು ಜಾತಿಪದ್ಧತಿ ಅಳಿಸಲು ಬಂದಿರುವ ಮಹಾತ್ಮರು ಎಂದು ನಾವು ನಂಬಬೇಕೆ? ಜಾತಿ ರಾಜಕೀಯ ಮಾಡುವ ಈ ರಾಜಕಾರಣಿಗಳು ಇರುವವರೆಗೆ ಜಾತೀಯತೆ ಅಪ್ರಸ್ತುತವಾಗುವುದಾದರೂ ಎಲ್ಲಿ?
ಮಾಜಿ ಪ್ರಧಾನಿಗಳ ಹೇಳಿಕೆಯಲ್ಲಿ ರಾಜಕೀಯದ ಜೊತೆಗೆ ಅಜ್ಞಾನವೂ ಅಡಗಿದೆ. ತಾವು ಅಧ್ಯಯನ ಮಾಡಿಲ್ಲದ ವಿಷಯಗಳನ್ನು ಕುರಿತು ಆರ್ಭಟಿಸಿ ಮಾತನಾಡುವುದು ನಮ್ಮ ರಾಜಕಾರಣಿಗಳ ಉದ್ಧಟತನ.
ಹೇಗೆ ವಿಶ್ವಪ್ರಸಿದ್ಧ ಗ್ರೀಕ್ ನಾಗರಿಕತೆಯನ್ನು ಮಿಷನರಿ ಚಚರ್್ ಹೊಸಕಿ ಹಾಕಿ ನಾಮಾವಶೇಷ ಮಾಡಿತು ಎಂಬುದು ಗಮನಾರ್ಹ. ಅಲ್ಲೆಲ್ಲ ಜಾತಿಪದ್ಧತಿಯಂತಹ ದೋಷಗಳು ಇದ್ದವೆ? ಮಿಷನರಿಗಳು ತಮ್ಮ ಮತ ವಿಸ್ತರಣೆಯನ್ನು ಸಮಥರ್ಿಸಲು ಒಂದೊಂದು ದೇಶದಲ್ಲಿ ಒಂದೊಂದು ಕಾರಣ ಕೊಡುತ್ತಾರೆ. ಅದನ್ನು ಆಯಾ ದೇಶಗಳ ಹುಂಬರು, ಮನೆಮುರುಕರು ಬೆಂಬಲಿಸುತ್ತಾರೆ.
ಕ್ರೈಸ್ತ ಚಚರ್ುಗಳು ಈಗ ದಕ್ಷಿಣ ಕೊರಿಯಾದ ಬೌದ್ಧಮತದ ಮೇಲೆ ಹೇಗೆ ಆಕ್ರಮಣ ಮಾಡುತ್ತಿವೆ ಎಂಬುದೂ ಗಮನಾರ್ಹ. ಈಗಾಗಲೇ ಆ ದೇಶದಲ್ಲಿ ಕ್ರೈಸ್ತರ ಸಂಖ್ಯೆ ಬಹಳ ಹೆಚ್ಚಾಗಿದೆ. ವಿದೇಶಿ ಚಚರ್ಿನ ಆಡಳಿತವನ್ನು ಬಹುಮಟ್ಟಿಗೆ ಸ್ಥಾಪಿಸಿಯಾಗಿದೆ. ಎರಡು ವಾರಗಳ ಹಿಂದಷ್ಟೇ ದಕ್ಷಿಣ ಕೊರಿಯಾದ 6200 ಬೌದ್ಧ ಭಿಕ್ಷುಗಳು ಕ್ರೈಸ್ತ ಮಿಷನರಿಗಳ ಆಕ್ರಮಣದ ವಿರುದ್ಧ ಪಂಜಿನ ಪ್ರತಿಭಟನಾ ಮೆರವಣಿಗೆ ನಡೆಸಿದರು. ``ನಮ್ಮ ದೇಶವನ್ನು ಮಧ್ಯಯುಗದ ಕ್ರೈಸ್ತ ಮತೀಯ ಸಾಮ್ರಾಜ್ಯವನ್ನಾಗಿ ಪರಿವತರ್ಿಸಲು ಬಿಡುವುದಿಲ್ಲ'' ಎಂದು ಪ್ರತಿಜ್ಞೆ ಮಾಡಿದರು. ಮತಾಂತರದ ವಿರುದ್ಧ ಬರೀ ಭಾರತದ ಹಿಂದೂ ಸಂಘಟನೆಗಳು ಮಾತ್ರ ಪ್ರತಿಭಟಿಸುತ್ತಿವೆ ಎಂಬ ವಾದ ಮೂರ್ಖತನದ ಪರಮಾವಧಿ.
`ಹೇಗೆ ಮೊದಲ ಸಹಸ್ರಮಾನದಲ್ಲಿ ಯೂರೋಪಿನಲ್ಲಿ ಶಿಲುಬೆ ನೆಡಲಾಯಿತೋ, ಎರಡನೇ ಸಹಸ್ರಮಾನದಲ್ಲಿ ಅಮೆರಿಕ ಖಂಡಗಳು ನಮ್ಮ ತೆಕ್ಕೆಗೆ ಬಂದವೋ ಹಾಗೆಯೇ ಮೂರನೆಯ ಸಹಸ್ರಮಾನದಲ್ಲಿ ಏಷ್ಯಾ ಸಂಪೂರ್ಣವಾಗಿ ನಮ್ಮದಾಗಬೇಕು' ಎಂದು 1999ರಲ್ಲಿ ಪೋಪ್ ಭಾರತದ ನೆಲದಲ್ಲಿ ನಿಂತು ಹೇಳಿದ್ದು ನೆನಪಿರಬಹುದು. ಇದರ ಅರ್ಥವೇನು? ಇದು ಸೇವಾ ಧುರಂಧರನ ವಾಣಿಯೋ? ಮತೀಯ ಆಕ್ರಮಣದ ಕರೆಯೋ?
ಹೀಗೆ ಆಕ್ರಮಣದ ಕರೆ ನೀಡುವುದರಿಂದ ಚಚರ್ುಗಳಿಗೆ ಸಂಖ್ಯಾ ಲಾಭವಿದೆ, ರಾಜಕೀಯ ಲಾಭವಿದೆ, ಆಥರ್ಿಕ ಲಾಭವೂ ಇದೆ. ಮದರ್ ತೆರೇಸಾ ಸತ್ತು ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಜರ್ಮನಿಯ ಪ್ರಖ್ಯಾತ ನಿಯತಕಾಲಿಕ `ಸ್ಟನರ್್' ಒಂದು ಸುದೀರ್ಘ ಸಂಶೊಧನಾತ್ಮಕ ಲೇಖನವನ್ನು ಪ್ರಕಟಿಸಿತು (ಸೆಪ್ಟೆಂಬರ್ 10, 1998ರ ಸಂಚಿಕೆ). ಸ್ಟನರ್್ ಯೂರೋಪಿನಲ್ಲಿ ಅತಿ ಹೆಚ್ಚು ಪ್ರಸಾರ ಸಂಖ್ಯೆಯುಳ್ಳ ನಿಯತಕಾಲಿಕ. ಕ್ಯಾಥೊಲಿಕ್ ಚಚರ್ಿನ ವಿರುದ್ಧ ಪೂವರ್ಾಗ್ರಹ ಹೊಂದಿದೆ ಎಂದು ಭಾವಿಸಲ್ಪಟ್ಟಿರುವ ಪತ್ರಿಕೆಯೇನಲ್ಲ. ಅದು ಪ್ರಕಟಿಸಿದ್ದ ಲೇಖನದ ಶೀಷರ್ಿಕೆ: `ಮದರ್ ತೆರೆಸಾರ ಕೋಟ್ಯಂತರ ಸಂಪತೆಲ್ಲಿ?'. ಲೇಖನದ ಉದ್ದಕ್ಕೂ ತೆರೇಸಾ ಅವರು ಸೇವೆಯ ಹೆಸರಿನಲ್ಲಿ ಹೇಗೆ ಹಣ ಸಂಗ್ರಹಿಸಿದರು? ಅದನ್ನು ಹೇಗೆ ವ್ಯಾಟಿಕನ್ ಬ್ಯಾಂಕಿನಲ್ಲಿ ಜಮಾ ಮಾಡಿ ಭದ್ರಪಡಿಸಲಾಯಿತು ಎಂಬ ವಿವರಗಳಿವೆ. ಈ ಆಪಾದನೆಗಳಿಗೆ ದಾಖಲೆಗಳನ್ನು ಒದಗಿಸಲಾಗಿದೆ. ಹೀಗೆ ಭಾರತದ ಹಣ, ಜಗತ್ತಿನ ಹಣ ವ್ಯಾಟಿಕನ್ ಸೇರಿದೆ. ಚಚರ್ುಗಳ ಆಥರ್ಿಕ ಲಾಭಕ್ಕೆ ಇದು ಕೇವಲ ಒಂದು ಉದಾಹರಣೆಯಷ್ಟೇ. ಅನೇಕ ದೇಶಗಳಲ್ಲಿ ಚಚರ್ುಗಳು ಪ್ರತ್ಯೇಕ ತೆರಿಗೆ ಸಂಗ್ರಹಿಸುತ್ತವೆ. ಇದನ್ನು ಇಸ್ಲಾಮಿನ `ಜಕಾತ್' ಹಾಗೂ `ಜಿಸ್ಯಾ' ತೆರಿಗೆಗಳಿಗೆ ಹೋಲಿಸಬಹುದು.
ಇನ್ನು ರಾಜಕೀಯ ಲಾಭದ ವಿಷಯಕ್ಕೆ ಬಂದರೆ, ಇತಿಹಾಸದಿಂದ ಸಾಕಷ್ಟು ಉದಾಹರಣೆಗಳನ್ನು ಕೊಡುತ್ತಲೇ ಇರಬಹುದು. ನಮ್ಮ ದೇಶದ ಒಂದು ತಾಜಾ ಉದಾಹರಣೆಯನ್ನೇ ನೋಡೋಣ. ಕೇರಳ ಸಕರ್ಾರ ಈಗ ಸೈರೋ-ಮಲಬಾರ್ ಚಚರ್ಿನ 13 ಬಿಷಪ್ಗಳ ವಿರುದ್ಧ ದೇಶದ್ರೋಹದ ಆಪಾದನೆ ಮೇಲೆ ತನಿಖೆ ನಡೆಸಲು ಆದೇಶ ನೀಡಿದೆ. ಅವರ ಚಚರ್ು ಭಾರತದ ಸಂವಿಧಾನವನ್ನು ಧಿಕ್ಕರಿಸಿ ವ್ಯಾಟಿಕನ್ ವಿದೇಶೀ ಸಕರ್ಾರದ ಮತೀಯ ಕಾನೂನುಗಳನ್ನು ಮತದ ಹೆಸರಿನಲ್ಲಿ ಜಾರಿಗೆ ತರುತ್ತಿದೆ ಎಂಬುದು ಆರೋಪ. ಈ ಬಿಷಪ್ಪರ ವಿರುದ್ಧ ಕ್ಯಾಥೋಲಿಕ್ ಲೇಮನ್ಸ್ ಅಸೋಸಿಯೇಷನ್ (ಸಿಎಲ್ಎ) ಎಂಬ ಕ್ರೈಸ್ತ ಜನಸಾಮಾನ್ಯರ ಸಂಸ್ಥೆಯೊಂದು ಅಧಿಕೃತವಾಗಿ ದೂರು ಕೊಟ್ಟಿದೆ. ಈ ಚಚರ್ು ತೆರಿಗೆಗಳ್ಳತನವನ್ನೂ ಮಾಡುತ್ತಿದೆ ಎಂದೂ ಸಿಎಲ್ಎ ಆರೋಪಿಸಿದೆ.

ಕ್ರೈಸ್ತರಲ್ಲೂ ಜಾತಿಗಳಿವೆ

ಈಗ ಜಾತೀಯತೆಯ ವಿಷಯಕ್ಕೆ ಬರೋಣ. ಕ್ರೈಸ್ತರಲ್ಲಿ ಜಾತೀಯತೆಯೇ ಇಲ್ಲ, ಅದೊಂದು ಪದರಗಳಿಲ್ಲದ, ಸಮಾನತೆ ಸಾಧಿಸಿದ, ಏಕಶಿಲಾ ಘಟ್ಟಿ ಎನ್ನುವಂತೆ ಮಾತನಾಡುವುದು ಹಲವರ ಅಭ್ಯಾಸ. ಭಾರತದಲ್ಲಿ ಎಷ್ಟು ಹಿಂದೂ ಜಾತಿಗಳಿವೆಯೋ ಅಷ್ಟೇ ಕ್ರೈಸ್ತ್ತ ಜಾತಿಗಳಿವೆ. ದಲಿತ ಕ್ರೈಸ್ತರಿಗೆ ಪ್ರತ್ಯೇಕ ದ್ವಾರಗಳಿರುವ ಚಚರ್ುಗಳಿವೆ. ಪ್ರತ್ಯೇಕ ಚಚರ್ುಗಳೂ ಇವೆ. ದಲಿತ ಕ್ರೈಸ್ತರ ಮನೆಗಳ ಜೊತೆ ಉಳಿದ ಕ್ರೈಸ್ತರು ವೈವಾಹಿಕ ಸಂಬಂಧ ಬೆಳೆಸುವುದಿಲ್ಲ. ಇವೆಲ್ಲ ಸರ್ವವಿದಿತ.
ಆದರೆ ಜಾಗತಿಕ ವಿಷಯಕ್ಕೆ ಬಂದರೆ ಪರಿಸ್ಥಿತಿ ಇನ್ನೂ ಘೋರವಾಗಿದೆ. ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಪ್ರಕಾರ ಕ್ರೈಸ್ತರಲ್ಲಿ ಒಂದಲ್ಲ, ಎರಡಲ್ಲ, 22,000 ಒಳ ಪಂಗಡಗಳಿವೆ!! ಒಂದು ಪಂಗಡಕ್ಕೂ ಇನ್ನೊಂದಕ್ಕೂ ನಾನಾ ಭೇದಗಳಿವೆ. ಪರಸ್ಪರ ಅಸಹನೆ ಇದೆ. ಮುಸ್ಲಿಮರ ಶಿಯಾ-ಸುನ್ನಿ ಸಂಘರ್ಷದಂತಹ ಸಮಸ್ಯೆಗಳಿವೆ. ಪರಸ್ಪರ ಮತಾಂತರ ಮಾಡುವ ಪೈಪೋಟಿ ಇದೆ.
ಯೂರೋಪ್, ಅಮೆರಿಕದಂತಹ ಪಶ್ಚಿಮದ ದೇಶಗಳಲ್ಲಿ `ರಿಲಿಜನ್' ಎಂದರೆ ಯಾರೂ `ಕ್ರಿಶ್ಚಿಯಾನಿಟಿ' ಎಂದು ಬರೆಸುವುದಿಲ್ಲ. ಬದಲಾಗಿ ಕ್ಯಾಥೋಲಿಕ್, ಲ್ಯೂಥೆರನ್, ಯೂನಿಟೇರಿಯನ್, ಪೆಂಟಕೋಸ್ಟಲ್, ಬೀಚ್ ಚಚರ್್, ಬ್ಯಾಪ್ಟಿಸ್ಟ್, ಮೆಥಾಡಿಸ್ಟ್, ನ್ಯೂ ಲೈಫ್, ಇವ್ಯಾಂಜೆಲಿಕಲ್ -ಹೀಗೆ ತಮ್ಮ ಚಚರ್ಿನ ಹೆಸರನ್ನು, ಒಳ ಪಂಗಡವನ್ನು ಹೇಳುತ್ತಾರೆ. ಅದೇ ತಮ್ಮ ಮತ ಎನ್ನುತ್ತಾರೆ. `ಕ್ರಿಶ್ಚಿಯಾನಿಟಿ' ಎಂಬ ಒಂದೇ ಘನ-ಘಟ್ಟಿ ಮತ ಅಲ್ಲೆಲ್ಲೂ ಹೆಸರಿಗೂ ಇಲ್ಲ.
ಈಚೆಗೆ ಬ್ರಿಟನ್ ದೇಶದ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅಂಗ್ಲಿಕನ್ ಚಚರ್್ನಿಂದ ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಮತಾಂತರಗೊಂಡರು. ಬ್ರಿಟನ್ನಿನಲ್ಲಿ ಆಂಗ್ಲಿಕನ್ ಚಚರ್ು ರಾಜಕೀಯ ಮಹತ್ವ ಇರುವ ಚಚರ್ು. ಅದರ ಅನುಯಾಯಿಗಳೇ ಬಹುಸಂಖ್ಯಾತರು. ರಾಜಮನೆತನದ ಚಚರ್ು ಅದು. ಪೋಪ್ ಅಧಿಕಾರಶಾಹಿಯ ವಿರುದ್ಧ ಸಿಡಿದೆದ್ದ ಬ್ರಿಟಿಷ್ ರಾಜಪ್ರಭುತ್ವ ಚಚರ್್ ಆಫ್ ಇಂಗ್ಲೆಂಡ್ ಎಂಬ ಸ್ವತಂತ್ರ ರಾಷ್ಟ್ರೀಯ ಚಚರ್್ ಸ್ಥಾಪಿಸಿದ್ದು ಇತಿಹಾಸ. ಹೀಗಿರುವಾಗ ಟೋನಿ ಬ್ಲೇರ್ರಂತಹ ರಾಜಕೀಯ ನಾಯಕ, ಮಾಜಿ ಪ್ರಧಾನಿ ಮತ್ತೆ ಪೋಪ್ ತೆಕ್ಕೆಗೆ ಹೋಗುವುದಾಗಿ ಘೊಷಿಸಿದಾಗ ಬ್ರಿಟನ್ನಿನಲ್ಲಿ ಬಿಸಿ ಚಚರ್ೆಯಾಯಿತು. ಆಂಗ್ಲಿಕನ್ ಜನರು ಹೌಹಾರಿದರು. `ಬ್ಲೇರ್ ತಮ್ಮ ಪತ್ನಿಯ ಪ್ರಭಾವಕ್ಕೆ ಒಳಗಾದರು' ಎಂದು ಮಾಧ್ಯಮಗಳು ಬರೆದವು.
ಇಲ್ಲಿ ನಾವು ಮಾತ್ರ ಒಂದೇ ಕ್ರೈಸ್ತ ಮತದ ಬಗ್ಗೆ ಮುಗ್ಧರಾಗಿ ಮಾತನಾಡುತ್ತೇವೆ. ಆದರೆ ಒಂದೇ ಕ್ರೈಸ್ತ ಮತ ಎಂಬುದು ಎಲ್ಲಿದೆ? ಭಾರತೀಯ ಹಿಂದೂಗಳ ದೃಷ್ಟಿಯಲ್ಲಿ ಟೋನಿ ಬ್ಲೇರ್ ಆಂಗ್ಲಿಕನ್ ಆಗಿದ್ದಾಗಲೂ ಕ್ರೈಸ್ತ. ರೋಮನ್ ಕ್ಯಾಥೋಲಿಕ್ ಆಗಿದ್ದಾಗಲೂ ಕ್ರೈಸ್ತ. ಆದರೆ ಆಂಗ್ಲಿಕನ್ ಚಚರ್್ ದೃಷ್ಟಿಯಲ್ಲಿ ಅವರ ಮತಾಂತರ ತನ್ನ ಒಬ್ಬ ಪ್ರಮುಖ, ಪ್ರಭಾವಿ `ಸದಸ್ಯ'ನೋರ್ವನ ನಷ್ಟ. ಆದರೆ ಅದೇ ಕ್ಯಾಥೋಲಿಕ್ಕರಿಗೆ ಪ್ರೈಜ್ ಕ್ಯಾಚ್!
ಮತಾಂತರ ಹೊಂದುವಾಗ ಬ್ಲೇರ್ ನಾನು ಕ್ರಿಸ್ತನ ಅನುಯಾಯಿಯಾಗುತ್ತೇನೆ ಎಂದು ಘೋಷಿಸಲಿಲ್ಲ. ಅವರು ಮೊದಲೂ ಕ್ರಿಸ್ತನ ಅನುಯಾಯಿಯೇ ಆಗಿದ್ದರು. ಅವರು ಘೋಷಿಸಿದ್ದು: `ನಾನು ರೋಮನ್ ಕ್ಯಾಥೊಲಿಕ್ ಚಚರ್ು ಹೊಂದಿರುವ ಎಲ್ಲ ನಂಬಿಕೆಗಳನ್ನೂ ನನ್ನದಾಗಿಸಿಕೊಂಡಿದ್ದೇನೆ' ಎಂದು! ಈ ಮಾತು ಆಂಗ್ಲಿಕನ್ನರನ್ನು ಸಹಜವಾಗಿ ಕೆರಳಿಸಿತ್ತು.
ಕ್ರೈಸ್ತ ಮತದ ಸಂಘಟನಾತ್ಮಕ ಸ್ವರೂಪ ತಿಳಿಯದಿರುವ ಜನರಿಗೆ ಇದರಿಂದ ಆಶ್ಚರ್ಯವಾಗಬಹುದು. ಆದರೆ ವಾಸ್ತವವಾಗಿ ನೀವು ಕ್ರೈಸ್ತ ಮತಕ್ಕೆ ಮತಾಂತರ ಹೊಂದಿದರೆ ಕ್ರಿಸ್ತನ ಹೆಸರಿನ ಬೋಧನೆಯನ್ನು, ನಂಬಿಕೆಗಳನ್ನು ಸ್ವೀಕರಿಸಿದಿರಿ ಎಂದು ಮಾತ್ರ ಅಲ್ಲ. ನೀವು ನಿಮ್ಮನ್ನು ಮತಾಂತರ ಮಾಡಿದ ಚಚರ್ಿನ ನಂಬಿಕೆಗಳನ್ನು ಒಪ್ಪಬೇಕಾಗುತ್ತದೆ. ಇಲ್ಲಿ ತಿಳೀಯಬೇಕಾದ ಸಂಗತಿ ಇದು: ಮತಾಂತರ ನಡೆಯುವುದು ಕ್ರೈಸ್ತ ಮತಕ್ಕಲ್ಲ. ಕ್ರೈಸ್ತ ಮತಕ್ಕೆ ಸೇರಿಸಿಕೊಳ್ಳುವ ಕ್ರಮ ಎಲ್ಲೂ ಇಲ್ಲವೇ ಅಲ್ಲ. ಮತಾಂತರ ನಡೆಯುವುದು ಚಚರ್ಿಗೆ. ವಾಸ್ತವವಾಗಿ `ಮತಾಂತರ' ಎಂದರೆ ಒಂದು ಚಚರ್ಿನ ಸದಸ್ಯರಾಗಿ ಅಧಿಕೃತವಾಗಿ ಸೇರುವ ಕ್ರಮ. ಈ ಚಚರ್ು ನಿಮ್ಮನ್ನು ಮತಾಂತರ ಮಾಡಿದರೆ ಆ ಚಚರ್ು ಕೆಂಗಣ್ಣಿನಿಂದ ನೋಡುತ್ತದೆ. `ಸುಲಭವಾಗಿ ಈ ಚಚರ್ಿನವರು ಬೇಟೆ ಹೊಡೆದುಬಿಟ್ಟರಲ್ಲ' ಎಂಬು ಆ ಚಚರ್ು ಕೊರಗುತ್ತದೆ.
ಕ್ಯಾಥೊಲಿಕ್ಕರನ್ನು ಪ್ರೊಟೆಸ್ಟೆಂಟ್ ಕ್ರೈಸ್ತರಾಗಿ `ಮತಾಂತರ' ಮಾಡುವುದು ತೀರಾ ಹೆಚ್ಚಾದಾಗ ಏಷ್ಯಾದಲ್ಲಿ ಶಿಲುಬೆ ನೆಡಲು ಹೇಳಿದ್ದ ಅದೇ ಪೋಪ್ ಎರಡನೇ ಜಾನ್ ಪಾಲ್, ಪ್ರೊಟೆಸ್ಟೆಂಟ್ ಮಿಷನರಿಗಳನ್ನು ಮತ್ತು ಚಚರ್್ ನಾಯಕರನ್ನು `ರ್ಯಾಪೇಶಿಯಸ್ ವೂಲ್ವ್ಸ್' (ಬೇಟೆಗಾಗಿ, ದಾಳಿಗಾಗಿ ನಾಲಿಗೆ ಚಾಚಿ ತಹತಹಿಸುವ ತೋಳಗಳು) ಎಂದು ಬಹಳ ಕಠಿಣ ಪದಗಳಿಂದ ನಿಂದಿಸಿದರು. ತನ್ನ ಚಚರ್ಿನ ಸದ್ಯಸ್ಯರನ್ನು ತನ್ನದೇ ಕ್ರಿಸ್ತನ ಇತರ ಅನುಯಾಯಿ ಚಚರ್ುಗಳು ಮತಾಂತರ ಮಾಡುವುದನ್ನು ಈ ಪುಣ್ಯಾತ್ಮ ಸಹಿಸಲಿಲ್ಲ!
ಹೀಗಿರುವಾಗ ಜಗತ್ತಿನ ಕ್ರೈಸ್ತೇತರ, ಅಧ್ಯಾತ್ಮವಾದಿ ಧರ್ಮಗಳು ಅನ್ಯಾಯದ `ಮತಾಂತರ'ವನ್ನು ಏಕೆ ಸಹಿಸಬೇಕು? ಪೋಪ್ ಶಬ್ದಗಳನ್ನೇ ಬಳಸಿ ಹೇಳುವುದಾರೆ ಎಲ್ಲ ಮತಾಂತರವಾದಿ ಮಿಷನರಿಗಳೂ ಸಹ `ರ್ಯಾಪೇಶಿಯಸ್ ವೂಲ್ವ್ಸ್'ಗಳೇ ಅಲ್ಲವೆ?
ಅದಿರಲಿ, ಮೂಲ ವಿಷಯಕ್ಕೆ ಬರೋಣ. ವಾಸ್ತವವಾಗಿ ಹೇಳುವುದಾರೆ ಚಚರ್ುಗಳಿಂದ ಆಚೆಗೆ ಕ್ರೈಸ್ತ ಮತಕ್ಕೆ ಅಸ್ತಿತ್ವವೇ ಇಲ್ಲ. ಏಕೆಂದರೆ ಇಂದು ನಾವು ನೋಡುವ ಮತವನ್ನು ಸೃಷ್ಟಿಸಿದ್ದೇ ಚಚರ್ುಗಳು. ಏಸು ಕ್ರಿಸ್ತ (ಐತಿಹಾಸಿಕ ವ್ಯಕ್ತಿಯಾಗಿದ್ದಲ್ಲಿ) ಎಂದೂ ಯಾವ ಚರ್ಚನ್ನೂ ಸ್ಥಾಪಿಸಲಿಲ್ಲ. ಇಂದು ನಾವು ಓದುವ ನ್ಯೂ ಟೆಸ್ಟಮೆಂಟ್ ಬೈಬಲ್ ಯೇಸು ಕ್ರಿಸ್ತ ಸೃಷ್ಟಿಸಿದ ಗ್ರಂಥವಲ್ಲ. ಚಚರ್ುಗಳು ಸೃಷ್ಟಿಸಿದ್ದು. ಅದರಲ್ಲಿ ನಾಲ್ಕು ಗಾಸ್ಪೆಲ್ಗಳಿವೆ. (ಜಾನ್, ಮ್ಯಾಥ್ಯೂ, ಮಾಕರ್್, ಲೂಕ್. ಕನ್ನಡ ಅನುವಾದದಲ್ಲಿ `ಸುವಾತರ್ೆಗಳು' ಎನ್ನುತ್ತಾರೆ). ಆದರೆ ಆ ಕಾಲದಲ್ಲಿ ಇನ್ನೂ ಅನೇಕ ಗಾಸ್ಪೆಲ್ಗಳು ಚಾಲ್ತಿಯಲ್ಲಿದ್ದವು (ಉದಾಹರಣೆಗೆ, ನಾಸ್ಟಿಕ್ ಗಾಸ್ಪೆಲ್ಸ್). ಮಹಿಳೆಯರಿಗೂ ಗೌರವಾದರ ಇದ್ದ ಕ್ರೈಸ್ತ ಸಂಪ್ರದಾಯಗಳಿದ್ದವು. ಆದರೆ ರೋಮನ್ ಚಚರ್ು ಬರೀ ನಾಲ್ಕೇ ಗಾಸ್ಪೆಲ್ಗಳನ್ನು ಮಾನ್ಯ ಮಾಡಿತು. ಉಳಿದ ಕ್ರೈಸ್ತ ಗಾಸ್ಪೆಲ್ಗಳನ್ನು ಹೊಸಕಿಹಾಕಿತು. ಅನೇಕ ರೀತಿಗಳ ಕ್ರಿಸ್ತನ ಪೂಜೆಗಳನ್ನು ನಿರ್ಬಂಧಿಸಿತು. ತಾನು ಮಾನ್ಯ ಮಾಡಿದ್ದು ಮಾತ್ರ ನಿಜವಾದ ಬೈಬಲ್ ಎಂದು ಹುಕುಂ ಮಾಡಿತು. ಅದೆಲ್ಲ ಬೇರೆ ದೀರ್ಘ ಇತಿಹಾಸ. ಆದರೆ ಇವೆಲ್ಲ ತಿಳಿಯದವರು, ಅಥವಾ ನಾವು ತಿಳಿಯಬಾರದೆಂದು ಇಚ್ಛಿಸುವವರು `ಕ್ರೈಸ್ತ್ತ ಮತದಲ್ಲಿ ಸಮಾನತೆ ಇದೆ. ಹಿಂದೂ ಧರ್ಮದಲ್ಲಿ ಜಾತೀಯತೆ ಇದೆ. ಕ್ರೈಸ್ತರಾಗಿ ಮತಾಂತರ ಹೊಂದಿದವರು ಉದ್ಧಾರವಾಗಿಬಿಡುತ್ತಾರೆ' ಎಂದು ಮಿಥ್ಯಾ ತುತ್ತೂರಿ ಊದುತ್ತಲೇ ಇದ್ದಾರೆ.
ಎಲ್ಲ ಮಿಷನರಿಗಳೂ ತಮ್ಮ ಪಂಗಡದವರು ಚಚರ್ು ಬದಲಾಯಿಸುವುನ್ನು, ಅಥರ್ಾತ್ `ಚಚರ್ಾಂತರ' ಮಾಡುವುದನ್ನು (ಇಂಟರ್ ಡಿನಾಮಿನೇಷನಲ್ ಕನ್ವರ್ಷನ್) ಒಪ್ಪುವುದಿಲ್ಲ. ಆದರೆ ನಾವು, ನೀವು ಮಾತ್ರ ನಮ್ಮ ಸಾವಿರಾರು ವರ್ಷಗಳ ಮೂಲಧರ್ಮವನ್ನೇ ಬಿಟ್ಟು ಚಚರ್ುಗಳಿಗೆ ಮತಾಂತರ ಹೊಂದಿಬಿಡಬೇಕು!

ಮತ ವಿಸ್ತರಣೆಗಾಗಿ `ಕುರಿ ಬೇಟೆ'

ಇಸ್ಲಾಮಿಗೆ ಜಿಹಾದ್ ಹೇಗೋ ಹಾಗೆ ಕ್ರಿಶ್ಚಿಯಾನಿಟಿಗೆ ಮತಾಂತರ, ಇವೆರಡೂ ಮತ ವಿಸ್ತರಣಾ ಕ್ರಮಗಳು. ಕೆಲವು ಮುಸ್ಲಿಂ ಪಂಗಡಗಳು ತಾವೇ ಪ್ರವಾದಿಗಳ ನಿಜವಾದ ಅನುಯಾಯಿಗಳು ಎಂದು ಭಾವಿಸುತ್ತವೆ. ಅಹ್ಮದಿಯಾ ಮೊದಲಾದ ಇತರ ಪಂಗಡಗಳನ್ನು ಅವು ಮುಸ್ಲಿಂ ಅಲ್ಲವೇ ಅಲ್ಲ ಎಂದು ವಾದಿಸಿ ಅವುಗಳ ವಿರುದ್ಧವೂ ಜಿಹಾದ್ ಘೋಷಿಸುತ್ತವೆ. ಹಾಗೆಯೇ ಪ್ರೊಟೆಸ್ಟೆಂಟ್ ಪಂಗಡಗಳು ಪೋಪ್ ಪರಮಾಧಿಕಾರವನ್ನು ಒಪ್ಪುವುದಿಲ್ಲ. ಬೈಬಲ್ಲೇ ಅಂತಿಮ ಅದರ ಒಂದೊಂದು ವಾಕ್ಯವೂ ಅಕ್ಷರಶಃ ಜಾರಿಗೆ ಬರಬೇಕು ಎಂದು ನಂಬುವ ತೀವ್ರವಾದಿ ಕ್ರೈಸ್ತ ಪಂಗಡಗಳೂ ಇವೆ. `ಸೇಕ್ರೆಡ್ ಫೆಮೆನೈನನ್' ಅನ್ನು ಮರಳಿ ತರಬೇಕೆಂಬ ಕೂಗೂ ಇದೆ. ಬೈಬಲ್ ಕೈಲಿ ಹಿಡಿದು ಯಾವ ಮಾರ್ಗದಿಂದಾದರೂ ಆಕ್ರಮಣಕಾರಿ ಮತಂತರ ಮಾಡುವ ಕೆಲವು ತೀವ್ರವಾದಿ ಪಂಗಡಗಳಿವೆ. ಈ ಪಂಗಡಗಳನ್ನು `ಬಾನರ್್ ಎಗೇನ್' ಪಂಗಡಗಳು ಎಂದು ಗುರುತಿಸಲಾಗುತ್ತದೆ. ಬಾನರ್್ ಎಗೇನ್ ಪಂಗಡಗಳನ್ನು ಇತರ ಚಚರ್ುಗಳೂ ದ್ವೇಷಿಸುತ್ತವೆ. ಇವು ಮತಾಂತರ ಚಟುವಟಿಕೆಯಲ್ಲಿ ಉಳಿದ ಚಚರ್ುಗಳಿಗಿಂತಲೂ ಆಕ್ರಮಣಕಾರಿಯಾಗಿವೆ.
ಹೇಗೆ ಸುನ್ನಿ ವಹಾಬಿ ಮುಸ್ಲಿಂ ಪಂಗಡ ಶಿಯಾ, ಅಹ್ಮದಿಯಾಗಳನ್ನು `ನಿನಗಿಂತಲೂ ನಾನೇ ಶುದ್ಧ ಮುಸ್ಲಿಂ' ಎಂದು ಜರಿಯುತ್ತದೋ ಹಾಗೆಯೇ ಬಾನರ್್ ಎಗೇನ್ ಕ್ರೈಸ್ತ ಪಂಗಡಗಳು ಉಳಿದ ಚಚರ್ುಗಳನ್ನು ಜರಿಯುತ್ತವೆ. ಈ ಚಚರ್ುಗಳು ಆ ಚಚರ್ುಗಳನ್ನು ಜರಿಯುತ್ತವೆ. ಇದೆಲ್ಲ ನಮ್ಮ ಸೆಕ್ಯುಲರ್ ರಾಜಕಾರಣಿಗಳಿಗೆ ಗೊತ್ತಿದೆಯೋ ಇಲ್ಲವೋ!

`ಎಥಿಕಲ್ ಕನ್ವರ್ಷನ್'

ಮತಾಂತರದಿಂದ ಕ್ರೈಸ್ತೇತರ ಸಮುದಾಯಗಳು ಮಾತ್ರ ಸಮಸ್ಯೆ ಎದುರಿಸುತ್ತಿಲ್ಲ. ಮತಾಂತರಕ್ಕೆ ಹೊಸ `ಕುರಿಗಳು' ಸಿಗದಿದ್ದಾಗ ಚಚರ್ಾಂತರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ತಮ್ಮ ಸದಸ್ಯರು ಮತ್ತೊಂದು ಚಚರ್ಿನ ಸದಸ್ಯರಾಗದಂತೆ ತಡೆಯುವುದು ಹೇಗೆ ಎಂಬುದೇ ಈಗ ಎಲ್ಲ ಚಚರ್ುಗಳ ಮುಖಂಡರನ್ನು ಕಾಡುತ್ತಿರುವ ಸಮಸ್ಯೆ. ಈ ಸಮಸ್ಯೆಯ ಜೊತೆಗೆ ಇನ್ನೂ ಒಂದು ಸಮಸ್ಯೆ ಇದೆ.
ಅದೇ ಹೊಸ `ಕುರಿಗಳ ಬೇಟೆ'ಗಾಗಿ ಚಚರ್ುಗಳ ನಡುವೆ ನಡೆಯುತ್ತಿರುವ ಪೈಪೋಟಿ. ಒಂದೇ ಸಮುದಾಯವನ್ನು ಮತಾಂತರಿಸಲು ಎರಡು ಮೂರು ವಿವಿಧ ಪಂಗಡಗಳ ಚಚರ್ುಗಳು ಮುನ್ನುಗ್ಗಿ ಪರಸ್ಪರ ಹೊಡೆದಾಡುವುದುಂಟು! ಬೇಟೆಗಾಗಿ ತೋಳಗಳು ಹೊಡೆದಾಟಿದಂತೆ. ಇದು ಉತ್ಪ್ರೇಕ್ಷೆಯಲ್ಲ. ಈ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಚಚರ್ುಗಳ ತಲೆ ಕೆಡಿಸುತ್ತಿದೆ. ಅಮೆರಿಕನ್ ಇವ್ಯಾಂಜೆಲಿಕಲ್ ಚಚರ್ುಗಳ ಆಕ್ರಮಣದಿಂದ ಸ್ವತಃ ವ್ಯಾಟಿಕನ್ ಕಂಗೆಟ್ಟಿದೆ. ಈಗ ಚಚರ್ುಗಳ ನಡುವೆ ಹೊಂದಾಣಿಕೆ ಸ್ಥಾಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. `ಎಥಿಕಲ್ ಕನ್ವರ್ಷನ್ ಕೋಡ್' (ನೈತಿಕ ಮತಾಂತರ ಸಂಹಿತೆ) ರಚಿಸಿಕೊಳ್ಳಲು ಯತ್ನಿಸಲಾಗುತ್ತಿದೆ.
ಕಳೆದ ವರ್ಷ ಆಗಸ್ಟ್ ಎರಡನೇ ವಾರದಲ್ಲಿ ವ್ಯಾಟಿಕನ್ ಮತ್ತು `ವಲ್ಡರ್್ ಕೌಂಸಿಲ್ ಆಫ್ ಚರ್ಚಸ್'ಗಳ ಸಂಯುಕ್ತ ಆಶ್ರಯದಲ್ಲಿ ಫ್ರಾನ್ಸ್ ದೇಶದ ತೋಲೂಸ್ ನಲ್ಲಿ ಭಾರಿ ಮತೀಯ ಸಮಾವೇಶ ನಡೆಯಿತು. ಅದರಲ್ಲಿ ಎಲ್ಲ ಪ್ರಮುಖ ಚಚರ್ುಗಳ ಪ್ರತಿನಿಧಿಗಳೂ ಇದ್ದರು. 2010ರ ವೇಳೆಗೆ ಮತಾಂತರ ಸಂಹಿತೆ ಅಳವಡಿಸಿಕೊಳ್ಳಲು ಈ ಸಭೆಯಲ್ಲಿ ತೀಮರ್ಾನಿಸಲಾಯಿತು. ವಿವಿಧ ಚಚರ್ುಗಳು ಕ್ರೈಸ್ತೇರರನ್ನು ಹಂಚಿಕೊಂಡು ಮತಾಂತರಿಸಬೇಕು ಎಂಬುದೇ ಈ ಯೋಜನೆ.
ಇವೆಲ್ಲ ಏನೂ ತಿಳಿಯದೇ ಅಥವಾ ಇವುಗಳನ್ನೆಲ್ಲ ಮರೆಮಾಚಿ ಮಾತನಾಡುವವರೇ ನಮ್ಮಲ್ಲಿ ಹೆಚ್ಚು. ಮತಾಂತರಗಳ ಹಿಂದೆ ಯಾವುದೇ ಪ್ಲಾನ್ ಇಲ್ಲ, ಯಾವುದೇ ಬಜೆಟ್ ಇಲ್ಲ. ಜಗತ್ತಿನ ಜನರೆಲ್ಲ ತಾವಾಗಿ ತಮ್ಮ ಮೂಲಧರ್ಮ ತ್ಯಜಿಸಿ ಕ್ರೈಸ್ತರಾಗುತ್ತಿದ್ದಾರೆ ಎನ್ನುವಂತೆ ವಾದಿಸಲಾಗುತ್ತದೆ. ಯಾರಾದರೂ ತಾವಾಗಿ ಕ್ರೈಸ್ತರಾದರೆ ತಪ್ಪೇನು? ಎಂದು ಕೇಳಲಾಗುತ್ತದೆ. ಇದು ಮುಗ್ಧತನ. ಇಲ್ಲವೇ ಮುರ್ಖತನ. ಅಪ್ರಾಮಾಣಿಕತೆ. ಅದೂ ಅಲ್ಲದಿದ್ದರೆ ಹಸಿಹಸೀ ಬೆಂಬಲ.
`ಜೋಶುವಾ ಪ್ರಾಜೆಕ್ಟ್' ಎಂಬುದು ಹಲವು ಮಿಷನರಿ ಜಾಲಗಳು ಸೃಷ್ಟಿಸಿರುವ ಮಹಾನ್ ಮತಾಂತರ ಯೋಜನೆ. ಭಾರತದ ಮತ್ತು ಏಷ್ಯಾದ `ಅನ್ರೀಚ್ಡ್' (ಇನ್ನೂ ತಾವು ತಲುಪಲಾಗದಿರುವ) ಸಮುದಾಯಗಳನ್ನು ಗುರಿ ಮಾಡಿಕೊಂಡು ಹೇಗೆ ಮತಾಂತರಿಸಬೇಕು ಎಂದು ಈ ಯೋಜನೆಯಡಿ ತಂತ್ರ ರೂಪಿಸಲಾಗಿದೆ. ಸೆಕೆಂಡ್ ವ್ಯಾಟಿಕನ್ ಕೌಂಸಿಲ್ ನಂತರ ಕ್ಯಾಥೋಲಿಕ್ ಚಚರ್ು ತನ್ನ ಹಳೆಯ ತಂತ್ರಗಳನ್ನು ಬಳಸಿ ಹೊಸ ತಂತ್ರಗಳನ್ನು ರೂಪಿಸಿಕೊಂಡಿದೆ. ವ್ಯಾಟಿಕನ್ನಿನ ರಹಸ್ಯ ಗುಪ್ತಚಾರ ಸಂಸ್ಥೆ `ಓಪಸ್ ಡೈ' ಹೆಚ್ಚು ಸಕ್ರಿಯವಾಗಿದೆ. ಅಮೆರಿಕನ್ ಚಚರ್ುಗಳು `10/40 ವಿಂಡೋ' ಹೆಸರಿನಲ್ಲಿ 21ನೇ ಶತಮಾನಕ್ಕೆ ಟಾಗರ್ೆಟ್ ಇಟ್ಟುಕೊಂಡು ಹೊಸ ಮತಾಂತರ ಕಾರ್ಯಕ್ರಮ ರೂಪಿಸಿ ಅದರಂತೆ ಆಕ್ರಮಣಕಾರಿಯಾಗಿ ಕೆಲಸ ಮಾಡುತ್ತಿವೆ. ಭೂಮಿಯ ಅಕ್ಷಾಂಶದ 10ನೇ ಡಿಗ್ರಿಯಿಂದ 40ನೇ ಡಿಗ್ರಿ ಒಳಗಿನ ದೇಶಗಳ ಜನರನ್ನು ಸಂಪೂರ್ಣವಾಗಿ ಮತಾಂತರಿಸುವುದು ಇವರ ಗುರಿ. ಪಶ್ಮಿಮ ಏಷ್ಯಾದ ಇಸ್ಲಾಮಿಕ್ ದೇಶಗಳು, ಭಾರತ, ಚೀನಾ, ಉತ್ತರ ಆಪ್ರಿಕಾದ ಮುಸ್ಲಿಂ ರಾಷ್ಟ್ರಗಳು, ಜಪಾನ್ ಎಲ್ಲ ಈ 10/40 ವಿಂಡೋ ವ್ಯಾಪ್ತಿಗೆ ಬರುತ್ತವೆ. ಇದರ ಮೂಲಕ ಹೊಸ ಜಾಗತಿಕ ಸಂಘರ್ಷಕ್ಕೆ ಮಿಷನರಿಗಳು ಕಾರಣರಾದರೆ ಆಶ್ಚರ್ಯವಿಲ್ಲ;.
ಯಾವುದೋ ವ್ಯಕ್ತಿಯ ಮಟ್ಟದ ಮತಾಂತರವನ್ನು ಯಾರೂ ಪ್ರಶ್ನಿಸುವುದಿಲ್ಲ. ಅಂತಹ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಮತಾಂತರದ ಮೂಲಕ ಜಗತ್ತನ್ನೇ `ಕ್ರಿಸ್ತನ ಮರು ಬರುವಿಕೆಗೆ' ಸಜ್ಜುಗೊಳಿಸುತ್ತೇವೆ ಎಂದು ಪ್ರಯತ್ನಿಸುವುದು ತಪ್ಪು. ಇದು ಬರೀ ಬಾಹ್ಯ ತಪ್ಪು ಮಾತ್ರವಲ್ಲ, ಅಪಾಯಕಾರಿ ನಂಬಿಕೆಯೂ ಹೌದು.
ಅಂದಹಾಗೆ ನಮ್ಮ ಸೆಕ್ಯುಲರಿಸ್ಟರಿಗೆ ಒಂದು ಪ್ರಶ್ನೆ. ಒಂದುವೇಳೆ ಮತಾಂತರ ವಿಷಯ ಇಟ್ಟುಕೊಂಡು ಭಾರತದ ಮೌಲ್ವಿಗಳ ಹಾಗೂ ಮಿಷನರಿಗಳ ನಡುವೆ ಸಂಘರ್ಷವಾದರೆ (ಪಾಕಿಸ್ತಾನದಲ್ಲಿ ಆಗುತ್ತಿದೆ) ನಿಮ್ಮ ಬೆಂಬಲ ಯಾರಿಗೆ?