ಸೋಮವಾರ, ಮಾರ್ಚ್ 23, 2009

ಮತಾಂತರ ಎಂಬುದು ಕ್ರೈಸ್ತ ಜಿಹಾದ್

ಮತಾಂತರ ಇಂದು ನಿನ್ನೆಯ ಸಮಸ್ಯೆಯಲ್ಲ. ಅದು ಬರೀ ಬೆಂಗಳೂರು, ಮಂಗಳೂರು, ಕಂಧಮಾಲ್, ಕೇರಳಗಳ ಸಮಸ್ಯೆಯಲ್ಲ. ಬರೀ ಭಾರತದ ಸಮಸ್ಯೆಯೂ ಅಲ್ಲ. ಅದು ಜಾಗತಿಕ ಸಮಸ್ಯೆ. ಇಡೀ ಜಗತ್ತಿನಲ್ಲಿ ಯಾರೂ ಮತಾಂತರವನ್ನು ಲಘುವಾಗಿ ಪರಿಗಣಿಸಿಲ್ಲ. ಅದು ಎಂದಿಗೂ ಎಲ್ಲ ಸಮಾಜಗಳಲ್ಲೂ ಬಿಸಿ ವಸ್ತುವೇ ಆಗಿದೆ.
`ಮತಾಂತರ' ಇಲ್ಲದೇ ಮಿಷನರಿಗಳಿಗೆ ನೌಕರಿಯಿಲ್ಲ; ಜಿಹಾದ್ ಇಲ್ಲದೇ ಮುಜಾಹಿದ್ಗಳಿಲ್ಲ. `ಜಿಹಾದ್' ಒಂದು ಮತೀಯ ಕರ್ತವ್ಯ ಎಂಬುದು ಮುಜಾಹಿದೀನ್ ನಂಬಿಕೆ. ಮತಾಂತರ ಬೈಬಲ್ ಆದೇಶ, ಆದ್ದರಿಂದ ಅದು ತಮ್ಮ ಕರ್ತವ್ಯ ಎಂಬುದು ಮಿಷನರಿಗಳ ನಂಬಿಕೆ. ಅದನ್ನು ಅವರು `ಗ್ರೇಟ್ ಕಮಿಷನ್' (ಮ್ಯಾಥ್ಯೂ. 28-19) ಎಂದು ಕರೆಯುತ್ತಾರೆ.
ಇದು ನಿಮಗೆ ತಿಳಿದಿರಲಿ. ಮಿಷನರಿಗಳ ಸಾಹಿತ್ಯದಲ್ಲಿ ಮತಾಂತರ ಮಾಡಬೇಕಾಗಿರುವ ಅನ್ಯಧಮರ್ೀಯರನ್ನು ಮತ್ತು ತಮ್ಮ ಚಚರ್ಿನ ಹದ್ದುಬಸ್ತಿನಲ್ಲಿರುವ ಸದಸ್ಯರನ್ನು `ಶೀಪ್' (ಕುರಿ) ಎಂದು ಕರೆಯುವುದು ವಾಡಿಕೆ! ಹೊಸಬರನ್ನು ನಮ್ಮ `ಫ್ಲಾಕ್'ಗೆ (ಮಂದೆಗೆ) ಸೇರಿಸಿಕೊಳ್ಳಬೇಕು ಎನ್ನುವುದು ಅವರ ಭಾಷೆ!
ಮೂಲಭೂತವಾದಿ ಮಿಷನರಿಗಳಿಗೂ ಜಿಹಾದಿಗಳಿಗೂ ಒಂದು ವ್ಯತ್ಯಾಸವಿದೆ. ನಾಳೆಯೇ ಜಗತ್ತಿನಾದ್ಯಂತ ಶರಿಯತ್ ತರಬಲ್ಲೆವು ಎಂದು ನಂಬುವ ಮುಜಾಹಿದ್ಗಳು ಸಾವಿರಾರು ಮಂದಿ ಇದ್ದಾರೆ. ಆದರೆ ಮಿಷನರಿಗಳದು ವ್ಯವಸ್ಥಿತವಾದ, ನೂರಾರು ವರ್ಷಗಳ ದೀಘರ್ಾವಧಿ ಯೋಜನೆ. ಅದಕ್ಕೇ `ಈ ಸಹಸ್ರಮಾನದಲ್ಲಿ' ಏಷ್ಯಾದಾದ್ಯಂತ ಸಂಪೂರ್ಣವಾಗಿ ಶಿಲುಬೆ ನೆಟ್ಟು ಏಷ್ಯಾವನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು 1999ರಲ್ಲಿ ಅಂದಿನ ಪೋಪ್ ಎರಡನೇ ಜಾನ್ ಪಾಲ್ ಕರೆ ನೀಡಿದ್ದು.
ಕಾನ್ಸ್ಟೆಂಟೈನ್ ದೊರೆಯ ಕತ್ತಿಯಿಂದ ಹಿಡಿದು ಪೋಪ್ಗಳು ಶತಮಾನಗಳ ಕಾಲ ನಡೆಸಿದ ಕ್ರೂಸೇಡ್ ಯುದ್ಧಗಳವರೆಗೆ, ವಿವಿಧ ದೇಶಗಳಲ್ಲಿ ಇನ್ಕ್ವಿಸಿಷನ್ ಹೆಸರಿನಲ್ಲಿ ನಡೆಸಿದ ನರಮೇಧದಿಂದ ಹಿಡಿದು 1960ರ ದಶಕದ ಸೆಕೆಂಡ್ ವ್ಯಾಟಿಕನ್ ಕೌಂಸಿಲ್ವರೆಗೆ ಮತಾಂತರ ಒಂದು ಬಿಸಿ ಚಚರ್ಾವಸ್ತುವಾಗಿ ಉಳಿದುಬಂದಿದೆ. ಅದಕ್ಕಾಗಿ ಮಹಾಯುದ್ಧಗಳಾಗಿವೆ. ಅದಕ್ಕೆ ದೀರ್ಘವಾದ, ಕರಾಳವಾದ ಇತಿಹಾಸವಿದೆ. ವ್ಯಾಟಿಕನ್ನಿನ `ಕ್ಯಾನನ್ ಲಾ' ದಂತಹ `ಅಧಿಕೃತ ಸಂಹಿತೆ'ಯೂ ಇದೆ.
ಇಂದು ಬ್ರಾಹ್ಮಣರಾಗಿವವರು ನಾಳೆ `ನಾವು ಹರಿಜನರು' ಎಂದರೆ ನಮ್ಮ ಸಕರ್ಾರವೇ ಒಪ್ಪುವುದಿಲ್ಲ. ನಮ್ಮ ಈಗಿನ `ಜಾತ್ಯತೀತ' ಸಕರ್ಾರಿ ವ್ಯವಸ್ಥೆಯ ಪ್ರಕಾರ ಒಬ್ಬರ ಜಾತಿ ಎಂದೆಂದಿಗೂ ಶಾಶ್ವತ. ಏನು ಮಾಡಿದರೂ ಅದು ಬದಲಾಗದು. ಆದರೆ ಅವರ ಮತಧರ್ಮ ಮಾತ್ರ ಶಾಶ್ವತವಲ್ಲ. ದಿನಕ್ಕೊಂದು ಬಾರಿ ನೀವು ಮತಾಂತರ ಹೊಂದುತ್ತಲೇ ಇರಬಹುದು!!

ಅಕ್ರಮ ಮತಾಂತರ ನಿಷೇಧ

ಕ್ರೈಸ್ತರ ಮತಾಂತರವನ್ನು ಸೌದಿ ಅರೇಬಿಯಾ, ಪಾಕಿಸ್ತಾನ, ಇರಾನ್, ಮುಂತಾದ ಮುಸ್ಲಿಂ ದೇಶಗಳು ಶಾಸನಾತ್ಮಕವಾಗಿ ನಿಷೇಧಿಸಿವೆ. ಚೀನಾದಲ್ಲಿಯೂ ಮತಾಂತರ ನಿಷೇಧ ಇದೆ. ನಿಮಗೆ ಗೊತ್ತೆ? ಬಹುಸಂಖ್ಯಾತ ಕ್ರೈಸ್ತರ ದೇಶವಾದ ಗ್ರೀಸ್ನಲ್ಲೂ ಮತಾಂತರ ನಿಷೇಧ ಇದೆ! ಹಾಗೆಯೇ ಮುಸ್ಲಿಂ ಆಗಿ ಕ್ರೈಸ್ತರು ಮತಾಂತರ ಹೊಂದುವುದನ್ನು ಕ್ರೈಸ್ತ ದೇಶಗಳು ಒಪ್ಪುವುದಿಲ್ಲ. `ಬರಾಕ್ ಒಬಾಮಾ ಮುಸ್ಲಿಂ ಅಂತೆ' ಎಂಬುದು ಅಮೆರಿಕದಲ್ಲಿ ಬಿಸಿ ಚಚರ್ೆಯ ವಸ್ತುವಾಗಿತ್ತು. ಕೊನೆಗೆ ಅವರು ತಮ್ಮ ಚಚರ್ಿನ ಮುಖಂಡರಿಂದ ತಾವು ಕ್ರಿಶ್ಚಿಯನ್ ಎಂದು ಹೇಳಿಸಬೇಕಾಯಿತು. ಫ್ರಾನ್ಸ್, ಸ್ಪೇನ್ಗಳಲ್ಲಿ ಮುಸ್ಲಿಂ-ಕ್ರಿಶ್ಚಿಯಾನಿಟಿ ನಡುವೆ ಮತಾಂತರ ಸಂಘರ್ಷ ಈಗಲೂ ತೀವ್ರವಾಗಿದೆ.
ಭಾರತದಲ್ಲಿಯೂ ಮತಾಂತರ ನಿಷೇಧ ಇಂದಿನ ಕೂಗಲ್ಲ. ಬ್ರಿಟಿಷ್ ಆಡಳಿತದ ಭಾರತದಲ್ಲಿ ಮತಾಂತರ ನಿಷೇಧ ಕಾಯ್ದೆ ಇರಲಿಲ್ಲವಾದರೂ ಕೆಲವು ಪ್ರಾಂತ್ಯಗಳ ರಾಜರುಗಳು ಅಕ್ರಮ ಮತಾಂತರ ನಿಷೇಧಿಸಿದ್ದರು. ರಾಯಗಢ್ ಸ್ಟೇಟ್ ಕನ್ವರ್ಷನ್ ಆ್ಯಕ್ಟ್ 1936, ಪಾಟ್ನಾ ಫ್ರೀಡಮ್ ಆಫ್ ರಿಲಿಜನ್ ಆ್ಯಕ್ಟ್ 1942, ಸಗರ್ುಜ ಸ್ಟೇಟ್ ಅಪೋಸ್ಟೆಸಿ ಆ್ಯಕ್ಟ್ 1945, ಉದೈಪುರ್ ಸ್ಟೇಟ್ ಆ್ಯಂಟಿ ಕನ್ವರ್ಷನ್ ಆ್ಯಕ್ಟ್ 1946 - ಕೆಲವು ಉದಾಹರಣೆಗಳು. ಹಾಗೆಯೇ ಬಿಕನೇರ್, ಜೋಧ್ಪುರ್, ಕಾಲಹಂಡಿ ಮತ್ತು ಕೋಟಾಗಳಲ್ಲೂ ಕ್ರೈಸ್ತ ಮತಕ್ಕೆ ಅಕ್ರಮ ಮತಾಂತರ ಮಾಡುವುದನ್ನು ನಿಷೇಧಿಸಲಾಗಿತ್ತು.
1950ರ ದಶಕದಲ್ಲಿ ವಿದೇಶಿ ಮಿಷನರಿ ಚಟುವಟಿಕೆಗಳು ತೀವ್ರವಾಗಿದ್ದು ಅಂತರ ಧಮರ್ೀಯ ಸಾಮರಸ್ಯಕ್ಕೆ ಧಕ್ಕೆಯಾಗುವ ಪರಿಸ್ಥಿತಿ ತಲೆದೋರಿದಾಗ ಅಂದಿನ ಮಧ್ಯಪ್ರದೇಶದ ಕಾಂಗ್ರೆಸ್ ಸಕರ್ಾರ ನಾಗಪುರ ಹೈಕೋಟರ್ಿನ ನಿವೃತ್ತ ಮುಖ್ಯ ನ್ಯಾಯಾಧೀಶ ಭವಾನಿ ಶಂಕರ್ ನಿಯೋಗಿಯವರ ನೇತೃತ್ವದಲ್ಲಿ ಒಂದು ತನಿಖಾ ಸಮಿತಿ ನೇಮಿಸಿತು. ನಿಯೋಗಿ ಸಮಿತಿ 700ಕ್ಕೂ ಹೆಚ್ಚು ಹಳ್ಳಿಗಳನ್ನು ಸಂದಶರ್ಿಸಿ, 11,360 ಜನರನ್ನು ವಿಚಾರಿಸಿ ಬಹಳ ಕೂಲಂಕಷವಾಗಿ ತನಿಖೆ ಮಾಡಿತು. 99 ಪ್ರಶ್ನೆಗಳಿದ್ದ ವಿವರವಾದ ಪ್ರಶ್ನಾವಳಿ ತಯಾರಿಸಿ ಎಲ್ಲರಿಂದಲೂ ಉತ್ತರ ಪಡೆಯಿತು. ಸಮಿತಿಗೆ 375 ಲಿಖಿತ ಹೇಳಿಕೆಗಳು ಬಂದವು. ಸಮಿತಿಯನ್ನು ವಿರೋಧಿಸಿ ರೋಮನ್ ಕ್ಯಾಥೋಲಿಕ್ ಚಚರ್್ ಹೈಕೋಟರ್್ ಮೆಟ್ಟಿಲು ಹತ್ತಿತು. ಆದರೆ ಕೋಟರ್್ ಅದರ ಅಜರ್ಿಯನ್ನು ವಜಾ ಮಾಡಿತು.
ವಿದೇಶಿ ಮಿಷನರಿಗಳಿಂದ ಮತಾಂತರ ಪ್ರಯತ್ನ ಹಾಗೂ ಹಿಂದೂ ದೇವರುಗಳ ಅವಹೇಳನ ತೀವ್ರವಾಗಿ ನಡೆಯುತ್ತಿರುವುದನ್ನು ಸಮಿತಿಯ ತನಿಖೆ ಖಚಿತಪಡಿಸಿತು. ಮಿಷನರಿಗಳ ಚಟುವಟಿಕೆ, ಸಾಹಿತ್ಯ, ಭಾಷಣ ಎಲ್ಲವನ್ನೂ ಸಮಿತಿಯ ವರದಿಯಲ್ಲಿ ವಿವರವಾಗಿ ದಾಖಲಿಸಲಾಗಿದೆ. `ಮತಾಂತರದ ದುರುದ್ದೇಶ ಇಟ್ಟುಕೊಂಡು ಆಸ್ಪತ್ರೆ ಹಾಗೂ ಶಾಲೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ' ಎಂದು ದೃಢಪಡಿಸಿದ ನಿಯೋಗಿ ಸಮಿತಿ ಮತಾಂತರಗಳನ್ನು ಶಾಸನಾತ್ಮಕವಾಗಿ ನಿಷೇಧಿಸಬೇಕು ಎಂದು ಶಿಫಾರಸು ಮಾಡಿತು.
1954ರಲ್ಲಿ ಮತಾಂತರ ತಡೆ ಕಾಯ್ದೆ ಹಾಗೂ ಹಿಂದುಳಿದ ಸಮುದಾಯಗಳ ಸಂರಕ್ಷಣಾ ಕಾಯ್ದೆಗಳನ್ನು ಸಂಸತ್ತು ಪರಿಗಣಿಸಿತ್ತು. ಆದರೆ ಬೆಂಬಲ ಸಾಲದೇ ಈ ಕಾಯ್ದೆಗಳು ಅಂಗೀಕೃತವಾಗಲಿಲ್ಲ. ಸಂಸತ್ತಿನಲ್ಲಿ ಈ ಶಾಸನಗಳು ಜಾರಿಗೆ ಬರದಿದ್ದರೂ ಅಕ್ರಮ ಮತಾಂತರ ತಡೆಯುವ ಶಾಸನಗಳು 1967ರಲ್ಲಿ ಒರಿಸ್ಸಾ ಹಾಗೂ 1968ರಲ್ಲಿ ಮಧ್ಯಪ್ರದೇಶಗಳಲ್ಲಿ ಜಾರಿಗೆ ಬಂದವು. 1978ರಲ್ಲಿ ಅರುಣಾಚಲ ಪ್ರದೇಶದಲ್ಲೂ ಈ ಕಾಯ್ದೆ ಜಾರಿಯಾಯಿತು,. ಕ್ರಮೇಣ ದೇಶದ 7 ರಾಜ್ಯಗಳಲ್ಲಿ ಅಕ್ರಮ ಮತಾಂತರ ನಿಷೇಧ ಕಾಯ್ದೆ ಜಾರಿಯಾಯಿತು. ಈ ಪೈಕಿ 4 ರಾಜ್ಯಗಳಲ್ಲಿ ಈ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷದ ಸಕರ್ಾರಗಳು. ಆದರೆ ಈ ಕಾಯ್ದೆಯನ್ನು ಸಮರ್ಪಕವಾಗಿ ಅನ್ವಯಗೊಳಿಸಲು ನಮ್ಮ `ಸೆಕ್ಯುಲರಿಸಂ' ಇನ್ನೂ ಬಿಟ್ಟಿಲ್ಲ.
ಅಕ್ರಮ ಮತಾಂತರ ನಡೆದಿದ್ದರೆ ಯಾಕೆ ಕಾನೂನು ಕ್ರಮ ಜರುಗಿಸಿಲ್ಲ? ಎಂದು ಮತಾಂತರ ಸಮರ್ಥಕರು ಪದೇ ಪದೇ ಕೇಳುತ್ತಾರೆ. ದೂರುಗಳು ದಾಖಲಾಗಿಲ್ಲ ಎಂಬುದು ಅವರ ವಾದ. ಎಷ್ಟು ರಾಜ್ಯಗಳಲ್ಲಿ ಎಷ್ಟು ದೂರುಗಳು ದಾಖಲಾಗಿವೆ ಎಂಬ ಅಂಕಿಅಂಶ ಅವರ ಬಳಿ ಇದೆಯೆ? ಒಂದಿಷ್ಟು ಸ್ಥೂಲ ವಿವರ ಹುಡುಕಿದರೆ ಸಿಗುತ್ತದೆ. ದೆಹಲಿಯ ಶಾಹಿ ಇಮಾಮ್ ಬುಖಾರಿಯ ವಿರುದ್ಧ ಎರಡು ಬಾರಿ ಜಾಮೀಣು ರಹಿತ ವಾರೆಂಟ್ ಜಾರಿಯಾಗಿತ್ತು. ಆದರೂ ಅವರನ್ನು ಬಂಧಿಸುವ ಧೈರ್ಯವನ್ನು ನಮ್ಮ ಸೆಕ್ಯುಲರ್ ಸಕರ್ಾರಗಳು ಮಾಡಲಿಲ್ಲ. ನಮ್ಮ ಸೆಕ್ಯುಲರಿಸಂ ಪ್ರಕಾರ ದೊಡ್ಡ ಮಿಷನರಿಗಳು ಭೂಲೋಕದ ದೇವರುಗಳು. ಆದರೆ ಕಂಚೀ ಆಚಾರ್ಯರನ್ನು ಮಾತ್ರ ಮುಲಾಜಿಲ್ಲದೇ ಬಂಧಿಸಲಾಯಿತು.
ಇನ್ನು ಸುಪ್ರೀಮ್ ಕೋಟರ್್ ವಿಷಯಕ್ಕೆ ಬರೋಣ. `ಯಾರೊಬ್ಬರನ್ನೂ ತಮ್ಮ ಮತಕ್ಕೆ ಮತಾಂತರ ಮಾಡುವ ಹಕ್ಕು ಮತ್ಯಾರಿಗೂ ಇಲ್ಲ' ಎಂದು 1977ರಲ್ಲಿ ಭಾರತದ ಸುಪ್ರೀಂ ಕೋಟರ್್ ಸ್ಪಷ್ಟವಾಗಿ ಘೋಷಿಸಿದೆ. ಮತಾಂತರಕ್ಕೆ ಸಂಬಂಧಿಸಿದ ಕ್ರ್ರಿಮಿನಲ್ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳ್ಳುವವರೆಗೆ ವಿಚಾರಣೆಯನ್ನು ಹೈಕೋಟರ್ುಗಳು ರದ್ದುಪಡಿಸುವಂತಿಲ್ಲ ಎಂದೂ ಸುಪ್ರೀಮ್ ಕೋಟರ್್ 2006ರಲ್ಲಿ ಆದೇಶಿಸಿದೆ. ಬೆಂಗಳೂರಿನ ಪೇಸ್ಟರ್ ರಾಜು ಎಂಬುವವರು ಹಿಂದೂಗಳನ್ನು ಮತಾಂತರ ಮಾಡಲು ಯತ್ನಿಸಿದ್ದ ಆಪಾದನೆ ಅದು. ಸಕರ್ಾರದ ಪೂವರ್ಾನುಮತಿ ಪಡೆದು ಕೇಸನ್ನು ದಾಖಲಿಸಿಲ್ಲ ಎಂದು ಹೇಳಿ ಕನರ್ಾಟಕ ಹೈಕೋಟರ್ು ವಿಚಾರಣೆಯನ್ನು ರದ್ದುಪಡಿಸಿತ್ತು. ಆದರೆ ಸುಪ್ರೀಮ್ ಕೋಟರ್ು ವಿಚಾರಣೆ ಮುಂದುವರಿಸಲು ಆದೇಶಿಸಿತು.
ಮತಾಂತರಗಳನ್ನು ನಿಷೇಧಿಸಬೇಕು ಎಂದು ಮಹಾತ್ಮ ಗಾಂಧಿ ಸ್ಪಷ್ಟವಾಗಿ ಹೇಳಿದ್ದು ಸರ್ವವಿದಿತ. `ನೀವು ಕ್ರೈಸ್ತರಾಗಬೇಕು' ಎಂದು ಕೆಲವು ಮಿಷನರಿಗಳು ಗಾಂಧಿಯವರನ್ನೂ ಪುಸಲಾಯಿಸಿದ್ದೂ ಸರ್ವವಿದಿತ. ಮತಾಂತರ ರಾಷ್ಟ್ರಾಂತರವೂ ಹೌದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದೂ ಸರ್ವವಿದಿತ. ಅಂಬೇಡ್ಕರ್ ಸಹ ಚಚರ್ುಗಳ ವಿದೇಶ ನಿಷ್ಠೆಯನ್ನು ಖಂಡಿಸಿದ್ದರು. ಅವರು ಕ್ರೈಸ್ತರಾಗಿ ಮತಾಂತರ ಹೊಂದಲು ನಿರಾಕರಿಸಿದ್ದಕ್ಕೆ ಇದೂ ಒಂದು ಕಾರಣ. ಮತಾಂತರದ ಮೂಲಕ ಸ್ಪಷ್ಟ ರಾಜಕೀಯ ಸಂದೇಶ ಕೊಡಲು ಬಯಸಿದ್ದ ಅವರು ಕ್ರೈಸ್ತ ಮತಕ್ಕೆ ತಾವೇಕೆ ಮತಾಂತರ ಹೊಂದಲಿಲ್ಲ ಎಂದು ವಿವರಿಸಿದ್ದಾರೆ. ವ್ಯವಸ್ಥಿತ ಮತಾಂತರಗಳನ್ನು ಸಮಥರ್ಿಸುವ ನಮ್ಮ `ಜಾತ್ಯತೀತ' ಬುದ್ಧಿಜೀವಿಗಳು ಇವೆಲ್ಲವನ್ನೂ ಮರೆಮಾಚಿ ಜಾಣ ಕುರುಡು ಪ್ರದಶರ್ಿಸುತ್ತಾರೆ.

ಇದು ಬರೀ ಭಾರತದ ಸಮಸ್ಯೆಯಲ್ಲ

`ಹಿಂದೂಗಳಲ್ಲಿ ಜಾತಿ ಪದ್ಧತಿ ಇರುವವರೆಗೆ ಮತಾಂತರಗಳು ನಡೆಯುತ್ತಲೇ ಇರುತ್ತವೆ' ಎಂದು ಮಾಜಿ ಪ್ರಧಾನಿಯೊಬ್ಬರು ಈಚೆಗೆ ಅಪ್ಪಣೆಕೊಡಿಸಿದ್ದಾರೆ. ಅಂದರೆ ಮಿಷನರಿಗಳು ಜಾತಿಪದ್ಧತಿ ಅಳಿಸಲು ಬಂದಿರುವ ಮಹಾತ್ಮರು ಎಂದು ನಾವು ನಂಬಬೇಕೆ? ಜಾತಿ ರಾಜಕೀಯ ಮಾಡುವ ಈ ರಾಜಕಾರಣಿಗಳು ಇರುವವರೆಗೆ ಜಾತೀಯತೆ ಅಪ್ರಸ್ತುತವಾಗುವುದಾದರೂ ಎಲ್ಲಿ?
ಮಾಜಿ ಪ್ರಧಾನಿಗಳ ಹೇಳಿಕೆಯಲ್ಲಿ ರಾಜಕೀಯದ ಜೊತೆಗೆ ಅಜ್ಞಾನವೂ ಅಡಗಿದೆ. ತಾವು ಅಧ್ಯಯನ ಮಾಡಿಲ್ಲದ ವಿಷಯಗಳನ್ನು ಕುರಿತು ಆರ್ಭಟಿಸಿ ಮಾತನಾಡುವುದು ನಮ್ಮ ರಾಜಕಾರಣಿಗಳ ಉದ್ಧಟತನ.
ಹೇಗೆ ವಿಶ್ವಪ್ರಸಿದ್ಧ ಗ್ರೀಕ್ ನಾಗರಿಕತೆಯನ್ನು ಮಿಷನರಿ ಚಚರ್್ ಹೊಸಕಿ ಹಾಕಿ ನಾಮಾವಶೇಷ ಮಾಡಿತು ಎಂಬುದು ಗಮನಾರ್ಹ. ಅಲ್ಲೆಲ್ಲ ಜಾತಿಪದ್ಧತಿಯಂತಹ ದೋಷಗಳು ಇದ್ದವೆ? ಮಿಷನರಿಗಳು ತಮ್ಮ ಮತ ವಿಸ್ತರಣೆಯನ್ನು ಸಮಥರ್ಿಸಲು ಒಂದೊಂದು ದೇಶದಲ್ಲಿ ಒಂದೊಂದು ಕಾರಣ ಕೊಡುತ್ತಾರೆ. ಅದನ್ನು ಆಯಾ ದೇಶಗಳ ಹುಂಬರು, ಮನೆಮುರುಕರು ಬೆಂಬಲಿಸುತ್ತಾರೆ.
ಕ್ರೈಸ್ತ ಚಚರ್ುಗಳು ಈಗ ದಕ್ಷಿಣ ಕೊರಿಯಾದ ಬೌದ್ಧಮತದ ಮೇಲೆ ಹೇಗೆ ಆಕ್ರಮಣ ಮಾಡುತ್ತಿವೆ ಎಂಬುದೂ ಗಮನಾರ್ಹ. ಈಗಾಗಲೇ ಆ ದೇಶದಲ್ಲಿ ಕ್ರೈಸ್ತರ ಸಂಖ್ಯೆ ಬಹಳ ಹೆಚ್ಚಾಗಿದೆ. ವಿದೇಶಿ ಚಚರ್ಿನ ಆಡಳಿತವನ್ನು ಬಹುಮಟ್ಟಿಗೆ ಸ್ಥಾಪಿಸಿಯಾಗಿದೆ. ಎರಡು ವಾರಗಳ ಹಿಂದಷ್ಟೇ ದಕ್ಷಿಣ ಕೊರಿಯಾದ 6200 ಬೌದ್ಧ ಭಿಕ್ಷುಗಳು ಕ್ರೈಸ್ತ ಮಿಷನರಿಗಳ ಆಕ್ರಮಣದ ವಿರುದ್ಧ ಪಂಜಿನ ಪ್ರತಿಭಟನಾ ಮೆರವಣಿಗೆ ನಡೆಸಿದರು. ``ನಮ್ಮ ದೇಶವನ್ನು ಮಧ್ಯಯುಗದ ಕ್ರೈಸ್ತ ಮತೀಯ ಸಾಮ್ರಾಜ್ಯವನ್ನಾಗಿ ಪರಿವತರ್ಿಸಲು ಬಿಡುವುದಿಲ್ಲ'' ಎಂದು ಪ್ರತಿಜ್ಞೆ ಮಾಡಿದರು. ಮತಾಂತರದ ವಿರುದ್ಧ ಬರೀ ಭಾರತದ ಹಿಂದೂ ಸಂಘಟನೆಗಳು ಮಾತ್ರ ಪ್ರತಿಭಟಿಸುತ್ತಿವೆ ಎಂಬ ವಾದ ಮೂರ್ಖತನದ ಪರಮಾವಧಿ.
`ಹೇಗೆ ಮೊದಲ ಸಹಸ್ರಮಾನದಲ್ಲಿ ಯೂರೋಪಿನಲ್ಲಿ ಶಿಲುಬೆ ನೆಡಲಾಯಿತೋ, ಎರಡನೇ ಸಹಸ್ರಮಾನದಲ್ಲಿ ಅಮೆರಿಕ ಖಂಡಗಳು ನಮ್ಮ ತೆಕ್ಕೆಗೆ ಬಂದವೋ ಹಾಗೆಯೇ ಮೂರನೆಯ ಸಹಸ್ರಮಾನದಲ್ಲಿ ಏಷ್ಯಾ ಸಂಪೂರ್ಣವಾಗಿ ನಮ್ಮದಾಗಬೇಕು' ಎಂದು 1999ರಲ್ಲಿ ಪೋಪ್ ಭಾರತದ ನೆಲದಲ್ಲಿ ನಿಂತು ಹೇಳಿದ್ದು ನೆನಪಿರಬಹುದು. ಇದರ ಅರ್ಥವೇನು? ಇದು ಸೇವಾ ಧುರಂಧರನ ವಾಣಿಯೋ? ಮತೀಯ ಆಕ್ರಮಣದ ಕರೆಯೋ?
ಹೀಗೆ ಆಕ್ರಮಣದ ಕರೆ ನೀಡುವುದರಿಂದ ಚಚರ್ುಗಳಿಗೆ ಸಂಖ್ಯಾ ಲಾಭವಿದೆ, ರಾಜಕೀಯ ಲಾಭವಿದೆ, ಆಥರ್ಿಕ ಲಾಭವೂ ಇದೆ. ಮದರ್ ತೆರೇಸಾ ಸತ್ತು ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಜರ್ಮನಿಯ ಪ್ರಖ್ಯಾತ ನಿಯತಕಾಲಿಕ `ಸ್ಟನರ್್' ಒಂದು ಸುದೀರ್ಘ ಸಂಶೊಧನಾತ್ಮಕ ಲೇಖನವನ್ನು ಪ್ರಕಟಿಸಿತು (ಸೆಪ್ಟೆಂಬರ್ 10, 1998ರ ಸಂಚಿಕೆ). ಸ್ಟನರ್್ ಯೂರೋಪಿನಲ್ಲಿ ಅತಿ ಹೆಚ್ಚು ಪ್ರಸಾರ ಸಂಖ್ಯೆಯುಳ್ಳ ನಿಯತಕಾಲಿಕ. ಕ್ಯಾಥೊಲಿಕ್ ಚಚರ್ಿನ ವಿರುದ್ಧ ಪೂವರ್ಾಗ್ರಹ ಹೊಂದಿದೆ ಎಂದು ಭಾವಿಸಲ್ಪಟ್ಟಿರುವ ಪತ್ರಿಕೆಯೇನಲ್ಲ. ಅದು ಪ್ರಕಟಿಸಿದ್ದ ಲೇಖನದ ಶೀಷರ್ಿಕೆ: `ಮದರ್ ತೆರೆಸಾರ ಕೋಟ್ಯಂತರ ಸಂಪತೆಲ್ಲಿ?'. ಲೇಖನದ ಉದ್ದಕ್ಕೂ ತೆರೇಸಾ ಅವರು ಸೇವೆಯ ಹೆಸರಿನಲ್ಲಿ ಹೇಗೆ ಹಣ ಸಂಗ್ರಹಿಸಿದರು? ಅದನ್ನು ಹೇಗೆ ವ್ಯಾಟಿಕನ್ ಬ್ಯಾಂಕಿನಲ್ಲಿ ಜಮಾ ಮಾಡಿ ಭದ್ರಪಡಿಸಲಾಯಿತು ಎಂಬ ವಿವರಗಳಿವೆ. ಈ ಆಪಾದನೆಗಳಿಗೆ ದಾಖಲೆಗಳನ್ನು ಒದಗಿಸಲಾಗಿದೆ. ಹೀಗೆ ಭಾರತದ ಹಣ, ಜಗತ್ತಿನ ಹಣ ವ್ಯಾಟಿಕನ್ ಸೇರಿದೆ. ಚಚರ್ುಗಳ ಆಥರ್ಿಕ ಲಾಭಕ್ಕೆ ಇದು ಕೇವಲ ಒಂದು ಉದಾಹರಣೆಯಷ್ಟೇ. ಅನೇಕ ದೇಶಗಳಲ್ಲಿ ಚಚರ್ುಗಳು ಪ್ರತ್ಯೇಕ ತೆರಿಗೆ ಸಂಗ್ರಹಿಸುತ್ತವೆ. ಇದನ್ನು ಇಸ್ಲಾಮಿನ `ಜಕಾತ್' ಹಾಗೂ `ಜಿಸ್ಯಾ' ತೆರಿಗೆಗಳಿಗೆ ಹೋಲಿಸಬಹುದು.
ಇನ್ನು ರಾಜಕೀಯ ಲಾಭದ ವಿಷಯಕ್ಕೆ ಬಂದರೆ, ಇತಿಹಾಸದಿಂದ ಸಾಕಷ್ಟು ಉದಾಹರಣೆಗಳನ್ನು ಕೊಡುತ್ತಲೇ ಇರಬಹುದು. ನಮ್ಮ ದೇಶದ ಒಂದು ತಾಜಾ ಉದಾಹರಣೆಯನ್ನೇ ನೋಡೋಣ. ಕೇರಳ ಸಕರ್ಾರ ಈಗ ಸೈರೋ-ಮಲಬಾರ್ ಚಚರ್ಿನ 13 ಬಿಷಪ್ಗಳ ವಿರುದ್ಧ ದೇಶದ್ರೋಹದ ಆಪಾದನೆ ಮೇಲೆ ತನಿಖೆ ನಡೆಸಲು ಆದೇಶ ನೀಡಿದೆ. ಅವರ ಚಚರ್ು ಭಾರತದ ಸಂವಿಧಾನವನ್ನು ಧಿಕ್ಕರಿಸಿ ವ್ಯಾಟಿಕನ್ ವಿದೇಶೀ ಸಕರ್ಾರದ ಮತೀಯ ಕಾನೂನುಗಳನ್ನು ಮತದ ಹೆಸರಿನಲ್ಲಿ ಜಾರಿಗೆ ತರುತ್ತಿದೆ ಎಂಬುದು ಆರೋಪ. ಈ ಬಿಷಪ್ಪರ ವಿರುದ್ಧ ಕ್ಯಾಥೋಲಿಕ್ ಲೇಮನ್ಸ್ ಅಸೋಸಿಯೇಷನ್ (ಸಿಎಲ್ಎ) ಎಂಬ ಕ್ರೈಸ್ತ ಜನಸಾಮಾನ್ಯರ ಸಂಸ್ಥೆಯೊಂದು ಅಧಿಕೃತವಾಗಿ ದೂರು ಕೊಟ್ಟಿದೆ. ಈ ಚಚರ್ು ತೆರಿಗೆಗಳ್ಳತನವನ್ನೂ ಮಾಡುತ್ತಿದೆ ಎಂದೂ ಸಿಎಲ್ಎ ಆರೋಪಿಸಿದೆ.

ಕ್ರೈಸ್ತರಲ್ಲೂ ಜಾತಿಗಳಿವೆ

ಈಗ ಜಾತೀಯತೆಯ ವಿಷಯಕ್ಕೆ ಬರೋಣ. ಕ್ರೈಸ್ತರಲ್ಲಿ ಜಾತೀಯತೆಯೇ ಇಲ್ಲ, ಅದೊಂದು ಪದರಗಳಿಲ್ಲದ, ಸಮಾನತೆ ಸಾಧಿಸಿದ, ಏಕಶಿಲಾ ಘಟ್ಟಿ ಎನ್ನುವಂತೆ ಮಾತನಾಡುವುದು ಹಲವರ ಅಭ್ಯಾಸ. ಭಾರತದಲ್ಲಿ ಎಷ್ಟು ಹಿಂದೂ ಜಾತಿಗಳಿವೆಯೋ ಅಷ್ಟೇ ಕ್ರೈಸ್ತ್ತ ಜಾತಿಗಳಿವೆ. ದಲಿತ ಕ್ರೈಸ್ತರಿಗೆ ಪ್ರತ್ಯೇಕ ದ್ವಾರಗಳಿರುವ ಚಚರ್ುಗಳಿವೆ. ಪ್ರತ್ಯೇಕ ಚಚರ್ುಗಳೂ ಇವೆ. ದಲಿತ ಕ್ರೈಸ್ತರ ಮನೆಗಳ ಜೊತೆ ಉಳಿದ ಕ್ರೈಸ್ತರು ವೈವಾಹಿಕ ಸಂಬಂಧ ಬೆಳೆಸುವುದಿಲ್ಲ. ಇವೆಲ್ಲ ಸರ್ವವಿದಿತ.
ಆದರೆ ಜಾಗತಿಕ ವಿಷಯಕ್ಕೆ ಬಂದರೆ ಪರಿಸ್ಥಿತಿ ಇನ್ನೂ ಘೋರವಾಗಿದೆ. ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಪ್ರಕಾರ ಕ್ರೈಸ್ತರಲ್ಲಿ ಒಂದಲ್ಲ, ಎರಡಲ್ಲ, 22,000 ಒಳ ಪಂಗಡಗಳಿವೆ!! ಒಂದು ಪಂಗಡಕ್ಕೂ ಇನ್ನೊಂದಕ್ಕೂ ನಾನಾ ಭೇದಗಳಿವೆ. ಪರಸ್ಪರ ಅಸಹನೆ ಇದೆ. ಮುಸ್ಲಿಮರ ಶಿಯಾ-ಸುನ್ನಿ ಸಂಘರ್ಷದಂತಹ ಸಮಸ್ಯೆಗಳಿವೆ. ಪರಸ್ಪರ ಮತಾಂತರ ಮಾಡುವ ಪೈಪೋಟಿ ಇದೆ.
ಯೂರೋಪ್, ಅಮೆರಿಕದಂತಹ ಪಶ್ಚಿಮದ ದೇಶಗಳಲ್ಲಿ `ರಿಲಿಜನ್' ಎಂದರೆ ಯಾರೂ `ಕ್ರಿಶ್ಚಿಯಾನಿಟಿ' ಎಂದು ಬರೆಸುವುದಿಲ್ಲ. ಬದಲಾಗಿ ಕ್ಯಾಥೋಲಿಕ್, ಲ್ಯೂಥೆರನ್, ಯೂನಿಟೇರಿಯನ್, ಪೆಂಟಕೋಸ್ಟಲ್, ಬೀಚ್ ಚಚರ್್, ಬ್ಯಾಪ್ಟಿಸ್ಟ್, ಮೆಥಾಡಿಸ್ಟ್, ನ್ಯೂ ಲೈಫ್, ಇವ್ಯಾಂಜೆಲಿಕಲ್ -ಹೀಗೆ ತಮ್ಮ ಚಚರ್ಿನ ಹೆಸರನ್ನು, ಒಳ ಪಂಗಡವನ್ನು ಹೇಳುತ್ತಾರೆ. ಅದೇ ತಮ್ಮ ಮತ ಎನ್ನುತ್ತಾರೆ. `ಕ್ರಿಶ್ಚಿಯಾನಿಟಿ' ಎಂಬ ಒಂದೇ ಘನ-ಘಟ್ಟಿ ಮತ ಅಲ್ಲೆಲ್ಲೂ ಹೆಸರಿಗೂ ಇಲ್ಲ.
ಈಚೆಗೆ ಬ್ರಿಟನ್ ದೇಶದ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅಂಗ್ಲಿಕನ್ ಚಚರ್್ನಿಂದ ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಮತಾಂತರಗೊಂಡರು. ಬ್ರಿಟನ್ನಿನಲ್ಲಿ ಆಂಗ್ಲಿಕನ್ ಚಚರ್ು ರಾಜಕೀಯ ಮಹತ್ವ ಇರುವ ಚಚರ್ು. ಅದರ ಅನುಯಾಯಿಗಳೇ ಬಹುಸಂಖ್ಯಾತರು. ರಾಜಮನೆತನದ ಚಚರ್ು ಅದು. ಪೋಪ್ ಅಧಿಕಾರಶಾಹಿಯ ವಿರುದ್ಧ ಸಿಡಿದೆದ್ದ ಬ್ರಿಟಿಷ್ ರಾಜಪ್ರಭುತ್ವ ಚಚರ್್ ಆಫ್ ಇಂಗ್ಲೆಂಡ್ ಎಂಬ ಸ್ವತಂತ್ರ ರಾಷ್ಟ್ರೀಯ ಚಚರ್್ ಸ್ಥಾಪಿಸಿದ್ದು ಇತಿಹಾಸ. ಹೀಗಿರುವಾಗ ಟೋನಿ ಬ್ಲೇರ್ರಂತಹ ರಾಜಕೀಯ ನಾಯಕ, ಮಾಜಿ ಪ್ರಧಾನಿ ಮತ್ತೆ ಪೋಪ್ ತೆಕ್ಕೆಗೆ ಹೋಗುವುದಾಗಿ ಘೊಷಿಸಿದಾಗ ಬ್ರಿಟನ್ನಿನಲ್ಲಿ ಬಿಸಿ ಚಚರ್ೆಯಾಯಿತು. ಆಂಗ್ಲಿಕನ್ ಜನರು ಹೌಹಾರಿದರು. `ಬ್ಲೇರ್ ತಮ್ಮ ಪತ್ನಿಯ ಪ್ರಭಾವಕ್ಕೆ ಒಳಗಾದರು' ಎಂದು ಮಾಧ್ಯಮಗಳು ಬರೆದವು.
ಇಲ್ಲಿ ನಾವು ಮಾತ್ರ ಒಂದೇ ಕ್ರೈಸ್ತ ಮತದ ಬಗ್ಗೆ ಮುಗ್ಧರಾಗಿ ಮಾತನಾಡುತ್ತೇವೆ. ಆದರೆ ಒಂದೇ ಕ್ರೈಸ್ತ ಮತ ಎಂಬುದು ಎಲ್ಲಿದೆ? ಭಾರತೀಯ ಹಿಂದೂಗಳ ದೃಷ್ಟಿಯಲ್ಲಿ ಟೋನಿ ಬ್ಲೇರ್ ಆಂಗ್ಲಿಕನ್ ಆಗಿದ್ದಾಗಲೂ ಕ್ರೈಸ್ತ. ರೋಮನ್ ಕ್ಯಾಥೋಲಿಕ್ ಆಗಿದ್ದಾಗಲೂ ಕ್ರೈಸ್ತ. ಆದರೆ ಆಂಗ್ಲಿಕನ್ ಚಚರ್್ ದೃಷ್ಟಿಯಲ್ಲಿ ಅವರ ಮತಾಂತರ ತನ್ನ ಒಬ್ಬ ಪ್ರಮುಖ, ಪ್ರಭಾವಿ `ಸದಸ್ಯ'ನೋರ್ವನ ನಷ್ಟ. ಆದರೆ ಅದೇ ಕ್ಯಾಥೋಲಿಕ್ಕರಿಗೆ ಪ್ರೈಜ್ ಕ್ಯಾಚ್!
ಮತಾಂತರ ಹೊಂದುವಾಗ ಬ್ಲೇರ್ ನಾನು ಕ್ರಿಸ್ತನ ಅನುಯಾಯಿಯಾಗುತ್ತೇನೆ ಎಂದು ಘೋಷಿಸಲಿಲ್ಲ. ಅವರು ಮೊದಲೂ ಕ್ರಿಸ್ತನ ಅನುಯಾಯಿಯೇ ಆಗಿದ್ದರು. ಅವರು ಘೋಷಿಸಿದ್ದು: `ನಾನು ರೋಮನ್ ಕ್ಯಾಥೊಲಿಕ್ ಚಚರ್ು ಹೊಂದಿರುವ ಎಲ್ಲ ನಂಬಿಕೆಗಳನ್ನೂ ನನ್ನದಾಗಿಸಿಕೊಂಡಿದ್ದೇನೆ' ಎಂದು! ಈ ಮಾತು ಆಂಗ್ಲಿಕನ್ನರನ್ನು ಸಹಜವಾಗಿ ಕೆರಳಿಸಿತ್ತು.
ಕ್ರೈಸ್ತ ಮತದ ಸಂಘಟನಾತ್ಮಕ ಸ್ವರೂಪ ತಿಳಿಯದಿರುವ ಜನರಿಗೆ ಇದರಿಂದ ಆಶ್ಚರ್ಯವಾಗಬಹುದು. ಆದರೆ ವಾಸ್ತವವಾಗಿ ನೀವು ಕ್ರೈಸ್ತ ಮತಕ್ಕೆ ಮತಾಂತರ ಹೊಂದಿದರೆ ಕ್ರಿಸ್ತನ ಹೆಸರಿನ ಬೋಧನೆಯನ್ನು, ನಂಬಿಕೆಗಳನ್ನು ಸ್ವೀಕರಿಸಿದಿರಿ ಎಂದು ಮಾತ್ರ ಅಲ್ಲ. ನೀವು ನಿಮ್ಮನ್ನು ಮತಾಂತರ ಮಾಡಿದ ಚಚರ್ಿನ ನಂಬಿಕೆಗಳನ್ನು ಒಪ್ಪಬೇಕಾಗುತ್ತದೆ. ಇಲ್ಲಿ ತಿಳೀಯಬೇಕಾದ ಸಂಗತಿ ಇದು: ಮತಾಂತರ ನಡೆಯುವುದು ಕ್ರೈಸ್ತ ಮತಕ್ಕಲ್ಲ. ಕ್ರೈಸ್ತ ಮತಕ್ಕೆ ಸೇರಿಸಿಕೊಳ್ಳುವ ಕ್ರಮ ಎಲ್ಲೂ ಇಲ್ಲವೇ ಅಲ್ಲ. ಮತಾಂತರ ನಡೆಯುವುದು ಚಚರ್ಿಗೆ. ವಾಸ್ತವವಾಗಿ `ಮತಾಂತರ' ಎಂದರೆ ಒಂದು ಚಚರ್ಿನ ಸದಸ್ಯರಾಗಿ ಅಧಿಕೃತವಾಗಿ ಸೇರುವ ಕ್ರಮ. ಈ ಚಚರ್ು ನಿಮ್ಮನ್ನು ಮತಾಂತರ ಮಾಡಿದರೆ ಆ ಚಚರ್ು ಕೆಂಗಣ್ಣಿನಿಂದ ನೋಡುತ್ತದೆ. `ಸುಲಭವಾಗಿ ಈ ಚಚರ್ಿನವರು ಬೇಟೆ ಹೊಡೆದುಬಿಟ್ಟರಲ್ಲ' ಎಂಬು ಆ ಚಚರ್ು ಕೊರಗುತ್ತದೆ.
ಕ್ಯಾಥೊಲಿಕ್ಕರನ್ನು ಪ್ರೊಟೆಸ್ಟೆಂಟ್ ಕ್ರೈಸ್ತರಾಗಿ `ಮತಾಂತರ' ಮಾಡುವುದು ತೀರಾ ಹೆಚ್ಚಾದಾಗ ಏಷ್ಯಾದಲ್ಲಿ ಶಿಲುಬೆ ನೆಡಲು ಹೇಳಿದ್ದ ಅದೇ ಪೋಪ್ ಎರಡನೇ ಜಾನ್ ಪಾಲ್, ಪ್ರೊಟೆಸ್ಟೆಂಟ್ ಮಿಷನರಿಗಳನ್ನು ಮತ್ತು ಚಚರ್್ ನಾಯಕರನ್ನು `ರ್ಯಾಪೇಶಿಯಸ್ ವೂಲ್ವ್ಸ್' (ಬೇಟೆಗಾಗಿ, ದಾಳಿಗಾಗಿ ನಾಲಿಗೆ ಚಾಚಿ ತಹತಹಿಸುವ ತೋಳಗಳು) ಎಂದು ಬಹಳ ಕಠಿಣ ಪದಗಳಿಂದ ನಿಂದಿಸಿದರು. ತನ್ನ ಚಚರ್ಿನ ಸದ್ಯಸ್ಯರನ್ನು ತನ್ನದೇ ಕ್ರಿಸ್ತನ ಇತರ ಅನುಯಾಯಿ ಚಚರ್ುಗಳು ಮತಾಂತರ ಮಾಡುವುದನ್ನು ಈ ಪುಣ್ಯಾತ್ಮ ಸಹಿಸಲಿಲ್ಲ!
ಹೀಗಿರುವಾಗ ಜಗತ್ತಿನ ಕ್ರೈಸ್ತೇತರ, ಅಧ್ಯಾತ್ಮವಾದಿ ಧರ್ಮಗಳು ಅನ್ಯಾಯದ `ಮತಾಂತರ'ವನ್ನು ಏಕೆ ಸಹಿಸಬೇಕು? ಪೋಪ್ ಶಬ್ದಗಳನ್ನೇ ಬಳಸಿ ಹೇಳುವುದಾರೆ ಎಲ್ಲ ಮತಾಂತರವಾದಿ ಮಿಷನರಿಗಳೂ ಸಹ `ರ್ಯಾಪೇಶಿಯಸ್ ವೂಲ್ವ್ಸ್'ಗಳೇ ಅಲ್ಲವೆ?
ಅದಿರಲಿ, ಮೂಲ ವಿಷಯಕ್ಕೆ ಬರೋಣ. ವಾಸ್ತವವಾಗಿ ಹೇಳುವುದಾರೆ ಚಚರ್ುಗಳಿಂದ ಆಚೆಗೆ ಕ್ರೈಸ್ತ ಮತಕ್ಕೆ ಅಸ್ತಿತ್ವವೇ ಇಲ್ಲ. ಏಕೆಂದರೆ ಇಂದು ನಾವು ನೋಡುವ ಮತವನ್ನು ಸೃಷ್ಟಿಸಿದ್ದೇ ಚಚರ್ುಗಳು. ಏಸು ಕ್ರಿಸ್ತ (ಐತಿಹಾಸಿಕ ವ್ಯಕ್ತಿಯಾಗಿದ್ದಲ್ಲಿ) ಎಂದೂ ಯಾವ ಚರ್ಚನ್ನೂ ಸ್ಥಾಪಿಸಲಿಲ್ಲ. ಇಂದು ನಾವು ಓದುವ ನ್ಯೂ ಟೆಸ್ಟಮೆಂಟ್ ಬೈಬಲ್ ಯೇಸು ಕ್ರಿಸ್ತ ಸೃಷ್ಟಿಸಿದ ಗ್ರಂಥವಲ್ಲ. ಚಚರ್ುಗಳು ಸೃಷ್ಟಿಸಿದ್ದು. ಅದರಲ್ಲಿ ನಾಲ್ಕು ಗಾಸ್ಪೆಲ್ಗಳಿವೆ. (ಜಾನ್, ಮ್ಯಾಥ್ಯೂ, ಮಾಕರ್್, ಲೂಕ್. ಕನ್ನಡ ಅನುವಾದದಲ್ಲಿ `ಸುವಾತರ್ೆಗಳು' ಎನ್ನುತ್ತಾರೆ). ಆದರೆ ಆ ಕಾಲದಲ್ಲಿ ಇನ್ನೂ ಅನೇಕ ಗಾಸ್ಪೆಲ್ಗಳು ಚಾಲ್ತಿಯಲ್ಲಿದ್ದವು (ಉದಾಹರಣೆಗೆ, ನಾಸ್ಟಿಕ್ ಗಾಸ್ಪೆಲ್ಸ್). ಮಹಿಳೆಯರಿಗೂ ಗೌರವಾದರ ಇದ್ದ ಕ್ರೈಸ್ತ ಸಂಪ್ರದಾಯಗಳಿದ್ದವು. ಆದರೆ ರೋಮನ್ ಚಚರ್ು ಬರೀ ನಾಲ್ಕೇ ಗಾಸ್ಪೆಲ್ಗಳನ್ನು ಮಾನ್ಯ ಮಾಡಿತು. ಉಳಿದ ಕ್ರೈಸ್ತ ಗಾಸ್ಪೆಲ್ಗಳನ್ನು ಹೊಸಕಿಹಾಕಿತು. ಅನೇಕ ರೀತಿಗಳ ಕ್ರಿಸ್ತನ ಪೂಜೆಗಳನ್ನು ನಿರ್ಬಂಧಿಸಿತು. ತಾನು ಮಾನ್ಯ ಮಾಡಿದ್ದು ಮಾತ್ರ ನಿಜವಾದ ಬೈಬಲ್ ಎಂದು ಹುಕುಂ ಮಾಡಿತು. ಅದೆಲ್ಲ ಬೇರೆ ದೀರ್ಘ ಇತಿಹಾಸ. ಆದರೆ ಇವೆಲ್ಲ ತಿಳಿಯದವರು, ಅಥವಾ ನಾವು ತಿಳಿಯಬಾರದೆಂದು ಇಚ್ಛಿಸುವವರು `ಕ್ರೈಸ್ತ್ತ ಮತದಲ್ಲಿ ಸಮಾನತೆ ಇದೆ. ಹಿಂದೂ ಧರ್ಮದಲ್ಲಿ ಜಾತೀಯತೆ ಇದೆ. ಕ್ರೈಸ್ತರಾಗಿ ಮತಾಂತರ ಹೊಂದಿದವರು ಉದ್ಧಾರವಾಗಿಬಿಡುತ್ತಾರೆ' ಎಂದು ಮಿಥ್ಯಾ ತುತ್ತೂರಿ ಊದುತ್ತಲೇ ಇದ್ದಾರೆ.
ಎಲ್ಲ ಮಿಷನರಿಗಳೂ ತಮ್ಮ ಪಂಗಡದವರು ಚಚರ್ು ಬದಲಾಯಿಸುವುನ್ನು, ಅಥರ್ಾತ್ `ಚಚರ್ಾಂತರ' ಮಾಡುವುದನ್ನು (ಇಂಟರ್ ಡಿನಾಮಿನೇಷನಲ್ ಕನ್ವರ್ಷನ್) ಒಪ್ಪುವುದಿಲ್ಲ. ಆದರೆ ನಾವು, ನೀವು ಮಾತ್ರ ನಮ್ಮ ಸಾವಿರಾರು ವರ್ಷಗಳ ಮೂಲಧರ್ಮವನ್ನೇ ಬಿಟ್ಟು ಚಚರ್ುಗಳಿಗೆ ಮತಾಂತರ ಹೊಂದಿಬಿಡಬೇಕು!

ಮತ ವಿಸ್ತರಣೆಗಾಗಿ `ಕುರಿ ಬೇಟೆ'

ಇಸ್ಲಾಮಿಗೆ ಜಿಹಾದ್ ಹೇಗೋ ಹಾಗೆ ಕ್ರಿಶ್ಚಿಯಾನಿಟಿಗೆ ಮತಾಂತರ, ಇವೆರಡೂ ಮತ ವಿಸ್ತರಣಾ ಕ್ರಮಗಳು. ಕೆಲವು ಮುಸ್ಲಿಂ ಪಂಗಡಗಳು ತಾವೇ ಪ್ರವಾದಿಗಳ ನಿಜವಾದ ಅನುಯಾಯಿಗಳು ಎಂದು ಭಾವಿಸುತ್ತವೆ. ಅಹ್ಮದಿಯಾ ಮೊದಲಾದ ಇತರ ಪಂಗಡಗಳನ್ನು ಅವು ಮುಸ್ಲಿಂ ಅಲ್ಲವೇ ಅಲ್ಲ ಎಂದು ವಾದಿಸಿ ಅವುಗಳ ವಿರುದ್ಧವೂ ಜಿಹಾದ್ ಘೋಷಿಸುತ್ತವೆ. ಹಾಗೆಯೇ ಪ್ರೊಟೆಸ್ಟೆಂಟ್ ಪಂಗಡಗಳು ಪೋಪ್ ಪರಮಾಧಿಕಾರವನ್ನು ಒಪ್ಪುವುದಿಲ್ಲ. ಬೈಬಲ್ಲೇ ಅಂತಿಮ ಅದರ ಒಂದೊಂದು ವಾಕ್ಯವೂ ಅಕ್ಷರಶಃ ಜಾರಿಗೆ ಬರಬೇಕು ಎಂದು ನಂಬುವ ತೀವ್ರವಾದಿ ಕ್ರೈಸ್ತ ಪಂಗಡಗಳೂ ಇವೆ. `ಸೇಕ್ರೆಡ್ ಫೆಮೆನೈನನ್' ಅನ್ನು ಮರಳಿ ತರಬೇಕೆಂಬ ಕೂಗೂ ಇದೆ. ಬೈಬಲ್ ಕೈಲಿ ಹಿಡಿದು ಯಾವ ಮಾರ್ಗದಿಂದಾದರೂ ಆಕ್ರಮಣಕಾರಿ ಮತಂತರ ಮಾಡುವ ಕೆಲವು ತೀವ್ರವಾದಿ ಪಂಗಡಗಳಿವೆ. ಈ ಪಂಗಡಗಳನ್ನು `ಬಾನರ್್ ಎಗೇನ್' ಪಂಗಡಗಳು ಎಂದು ಗುರುತಿಸಲಾಗುತ್ತದೆ. ಬಾನರ್್ ಎಗೇನ್ ಪಂಗಡಗಳನ್ನು ಇತರ ಚಚರ್ುಗಳೂ ದ್ವೇಷಿಸುತ್ತವೆ. ಇವು ಮತಾಂತರ ಚಟುವಟಿಕೆಯಲ್ಲಿ ಉಳಿದ ಚಚರ್ುಗಳಿಗಿಂತಲೂ ಆಕ್ರಮಣಕಾರಿಯಾಗಿವೆ.
ಹೇಗೆ ಸುನ್ನಿ ವಹಾಬಿ ಮುಸ್ಲಿಂ ಪಂಗಡ ಶಿಯಾ, ಅಹ್ಮದಿಯಾಗಳನ್ನು `ನಿನಗಿಂತಲೂ ನಾನೇ ಶುದ್ಧ ಮುಸ್ಲಿಂ' ಎಂದು ಜರಿಯುತ್ತದೋ ಹಾಗೆಯೇ ಬಾನರ್್ ಎಗೇನ್ ಕ್ರೈಸ್ತ ಪಂಗಡಗಳು ಉಳಿದ ಚಚರ್ುಗಳನ್ನು ಜರಿಯುತ್ತವೆ. ಈ ಚಚರ್ುಗಳು ಆ ಚಚರ್ುಗಳನ್ನು ಜರಿಯುತ್ತವೆ. ಇದೆಲ್ಲ ನಮ್ಮ ಸೆಕ್ಯುಲರ್ ರಾಜಕಾರಣಿಗಳಿಗೆ ಗೊತ್ತಿದೆಯೋ ಇಲ್ಲವೋ!

`ಎಥಿಕಲ್ ಕನ್ವರ್ಷನ್'

ಮತಾಂತರದಿಂದ ಕ್ರೈಸ್ತೇತರ ಸಮುದಾಯಗಳು ಮಾತ್ರ ಸಮಸ್ಯೆ ಎದುರಿಸುತ್ತಿಲ್ಲ. ಮತಾಂತರಕ್ಕೆ ಹೊಸ `ಕುರಿಗಳು' ಸಿಗದಿದ್ದಾಗ ಚಚರ್ಾಂತರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ತಮ್ಮ ಸದಸ್ಯರು ಮತ್ತೊಂದು ಚಚರ್ಿನ ಸದಸ್ಯರಾಗದಂತೆ ತಡೆಯುವುದು ಹೇಗೆ ಎಂಬುದೇ ಈಗ ಎಲ್ಲ ಚಚರ್ುಗಳ ಮುಖಂಡರನ್ನು ಕಾಡುತ್ತಿರುವ ಸಮಸ್ಯೆ. ಈ ಸಮಸ್ಯೆಯ ಜೊತೆಗೆ ಇನ್ನೂ ಒಂದು ಸಮಸ್ಯೆ ಇದೆ.
ಅದೇ ಹೊಸ `ಕುರಿಗಳ ಬೇಟೆ'ಗಾಗಿ ಚಚರ್ುಗಳ ನಡುವೆ ನಡೆಯುತ್ತಿರುವ ಪೈಪೋಟಿ. ಒಂದೇ ಸಮುದಾಯವನ್ನು ಮತಾಂತರಿಸಲು ಎರಡು ಮೂರು ವಿವಿಧ ಪಂಗಡಗಳ ಚಚರ್ುಗಳು ಮುನ್ನುಗ್ಗಿ ಪರಸ್ಪರ ಹೊಡೆದಾಡುವುದುಂಟು! ಬೇಟೆಗಾಗಿ ತೋಳಗಳು ಹೊಡೆದಾಟಿದಂತೆ. ಇದು ಉತ್ಪ್ರೇಕ್ಷೆಯಲ್ಲ. ಈ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಚಚರ್ುಗಳ ತಲೆ ಕೆಡಿಸುತ್ತಿದೆ. ಅಮೆರಿಕನ್ ಇವ್ಯಾಂಜೆಲಿಕಲ್ ಚಚರ್ುಗಳ ಆಕ್ರಮಣದಿಂದ ಸ್ವತಃ ವ್ಯಾಟಿಕನ್ ಕಂಗೆಟ್ಟಿದೆ. ಈಗ ಚಚರ್ುಗಳ ನಡುವೆ ಹೊಂದಾಣಿಕೆ ಸ್ಥಾಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. `ಎಥಿಕಲ್ ಕನ್ವರ್ಷನ್ ಕೋಡ್' (ನೈತಿಕ ಮತಾಂತರ ಸಂಹಿತೆ) ರಚಿಸಿಕೊಳ್ಳಲು ಯತ್ನಿಸಲಾಗುತ್ತಿದೆ.
ಕಳೆದ ವರ್ಷ ಆಗಸ್ಟ್ ಎರಡನೇ ವಾರದಲ್ಲಿ ವ್ಯಾಟಿಕನ್ ಮತ್ತು `ವಲ್ಡರ್್ ಕೌಂಸಿಲ್ ಆಫ್ ಚರ್ಚಸ್'ಗಳ ಸಂಯುಕ್ತ ಆಶ್ರಯದಲ್ಲಿ ಫ್ರಾನ್ಸ್ ದೇಶದ ತೋಲೂಸ್ ನಲ್ಲಿ ಭಾರಿ ಮತೀಯ ಸಮಾವೇಶ ನಡೆಯಿತು. ಅದರಲ್ಲಿ ಎಲ್ಲ ಪ್ರಮುಖ ಚಚರ್ುಗಳ ಪ್ರತಿನಿಧಿಗಳೂ ಇದ್ದರು. 2010ರ ವೇಳೆಗೆ ಮತಾಂತರ ಸಂಹಿತೆ ಅಳವಡಿಸಿಕೊಳ್ಳಲು ಈ ಸಭೆಯಲ್ಲಿ ತೀಮರ್ಾನಿಸಲಾಯಿತು. ವಿವಿಧ ಚಚರ್ುಗಳು ಕ್ರೈಸ್ತೇರರನ್ನು ಹಂಚಿಕೊಂಡು ಮತಾಂತರಿಸಬೇಕು ಎಂಬುದೇ ಈ ಯೋಜನೆ.
ಇವೆಲ್ಲ ಏನೂ ತಿಳಿಯದೇ ಅಥವಾ ಇವುಗಳನ್ನೆಲ್ಲ ಮರೆಮಾಚಿ ಮಾತನಾಡುವವರೇ ನಮ್ಮಲ್ಲಿ ಹೆಚ್ಚು. ಮತಾಂತರಗಳ ಹಿಂದೆ ಯಾವುದೇ ಪ್ಲಾನ್ ಇಲ್ಲ, ಯಾವುದೇ ಬಜೆಟ್ ಇಲ್ಲ. ಜಗತ್ತಿನ ಜನರೆಲ್ಲ ತಾವಾಗಿ ತಮ್ಮ ಮೂಲಧರ್ಮ ತ್ಯಜಿಸಿ ಕ್ರೈಸ್ತರಾಗುತ್ತಿದ್ದಾರೆ ಎನ್ನುವಂತೆ ವಾದಿಸಲಾಗುತ್ತದೆ. ಯಾರಾದರೂ ತಾವಾಗಿ ಕ್ರೈಸ್ತರಾದರೆ ತಪ್ಪೇನು? ಎಂದು ಕೇಳಲಾಗುತ್ತದೆ. ಇದು ಮುಗ್ಧತನ. ಇಲ್ಲವೇ ಮುರ್ಖತನ. ಅಪ್ರಾಮಾಣಿಕತೆ. ಅದೂ ಅಲ್ಲದಿದ್ದರೆ ಹಸಿಹಸೀ ಬೆಂಬಲ.
`ಜೋಶುವಾ ಪ್ರಾಜೆಕ್ಟ್' ಎಂಬುದು ಹಲವು ಮಿಷನರಿ ಜಾಲಗಳು ಸೃಷ್ಟಿಸಿರುವ ಮಹಾನ್ ಮತಾಂತರ ಯೋಜನೆ. ಭಾರತದ ಮತ್ತು ಏಷ್ಯಾದ `ಅನ್ರೀಚ್ಡ್' (ಇನ್ನೂ ತಾವು ತಲುಪಲಾಗದಿರುವ) ಸಮುದಾಯಗಳನ್ನು ಗುರಿ ಮಾಡಿಕೊಂಡು ಹೇಗೆ ಮತಾಂತರಿಸಬೇಕು ಎಂದು ಈ ಯೋಜನೆಯಡಿ ತಂತ್ರ ರೂಪಿಸಲಾಗಿದೆ. ಸೆಕೆಂಡ್ ವ್ಯಾಟಿಕನ್ ಕೌಂಸಿಲ್ ನಂತರ ಕ್ಯಾಥೋಲಿಕ್ ಚಚರ್ು ತನ್ನ ಹಳೆಯ ತಂತ್ರಗಳನ್ನು ಬಳಸಿ ಹೊಸ ತಂತ್ರಗಳನ್ನು ರೂಪಿಸಿಕೊಂಡಿದೆ. ವ್ಯಾಟಿಕನ್ನಿನ ರಹಸ್ಯ ಗುಪ್ತಚಾರ ಸಂಸ್ಥೆ `ಓಪಸ್ ಡೈ' ಹೆಚ್ಚು ಸಕ್ರಿಯವಾಗಿದೆ. ಅಮೆರಿಕನ್ ಚಚರ್ುಗಳು `10/40 ವಿಂಡೋ' ಹೆಸರಿನಲ್ಲಿ 21ನೇ ಶತಮಾನಕ್ಕೆ ಟಾಗರ್ೆಟ್ ಇಟ್ಟುಕೊಂಡು ಹೊಸ ಮತಾಂತರ ಕಾರ್ಯಕ್ರಮ ರೂಪಿಸಿ ಅದರಂತೆ ಆಕ್ರಮಣಕಾರಿಯಾಗಿ ಕೆಲಸ ಮಾಡುತ್ತಿವೆ. ಭೂಮಿಯ ಅಕ್ಷಾಂಶದ 10ನೇ ಡಿಗ್ರಿಯಿಂದ 40ನೇ ಡಿಗ್ರಿ ಒಳಗಿನ ದೇಶಗಳ ಜನರನ್ನು ಸಂಪೂರ್ಣವಾಗಿ ಮತಾಂತರಿಸುವುದು ಇವರ ಗುರಿ. ಪಶ್ಮಿಮ ಏಷ್ಯಾದ ಇಸ್ಲಾಮಿಕ್ ದೇಶಗಳು, ಭಾರತ, ಚೀನಾ, ಉತ್ತರ ಆಪ್ರಿಕಾದ ಮುಸ್ಲಿಂ ರಾಷ್ಟ್ರಗಳು, ಜಪಾನ್ ಎಲ್ಲ ಈ 10/40 ವಿಂಡೋ ವ್ಯಾಪ್ತಿಗೆ ಬರುತ್ತವೆ. ಇದರ ಮೂಲಕ ಹೊಸ ಜಾಗತಿಕ ಸಂಘರ್ಷಕ್ಕೆ ಮಿಷನರಿಗಳು ಕಾರಣರಾದರೆ ಆಶ್ಚರ್ಯವಿಲ್ಲ;.
ಯಾವುದೋ ವ್ಯಕ್ತಿಯ ಮಟ್ಟದ ಮತಾಂತರವನ್ನು ಯಾರೂ ಪ್ರಶ್ನಿಸುವುದಿಲ್ಲ. ಅಂತಹ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಮತಾಂತರದ ಮೂಲಕ ಜಗತ್ತನ್ನೇ `ಕ್ರಿಸ್ತನ ಮರು ಬರುವಿಕೆಗೆ' ಸಜ್ಜುಗೊಳಿಸುತ್ತೇವೆ ಎಂದು ಪ್ರಯತ್ನಿಸುವುದು ತಪ್ಪು. ಇದು ಬರೀ ಬಾಹ್ಯ ತಪ್ಪು ಮಾತ್ರವಲ್ಲ, ಅಪಾಯಕಾರಿ ನಂಬಿಕೆಯೂ ಹೌದು.
ಅಂದಹಾಗೆ ನಮ್ಮ ಸೆಕ್ಯುಲರಿಸ್ಟರಿಗೆ ಒಂದು ಪ್ರಶ್ನೆ. ಒಂದುವೇಳೆ ಮತಾಂತರ ವಿಷಯ ಇಟ್ಟುಕೊಂಡು ಭಾರತದ ಮೌಲ್ವಿಗಳ ಹಾಗೂ ಮಿಷನರಿಗಳ ನಡುವೆ ಸಂಘರ್ಷವಾದರೆ (ಪಾಕಿಸ್ತಾನದಲ್ಲಿ ಆಗುತ್ತಿದೆ) ನಿಮ್ಮ ಬೆಂಬಲ ಯಾರಿಗೆ?

1 ಕಾಮೆಂಟ್‌: