ಮಾವೋವಾದಿಗಳ ಗೆರಿಲ್ಲಾ ಯುದ್ಧ ಪುರಾಣಗಳ ಮಾಯಯುದ್ಧದ ಹಾಗೆ. ಇಲ್ಲಿ ಶತ್ರು ಭೌತಿಕವಾಗಿ ಮುಖಾಮುಖಿಯಾಗುವುದಿಲ್ಲ. ಆದರೂ ಪೆಟ್ಟು ಕೊಡುತ್ತಾನೆ.
ಇದು `ಮೊಬೈಲ್' ಯುದ್ಧ ತಂತ್ರ (ಮಾವೋ ಭಾಷೆಯಲ್ಲಿ `ಯುಂಡಾಂಗ್ ಝಾನ್'). ಇದರಲ್ಲಿ `ಅಧಿಕೃತ' ಸಮರಾಂಗಣವಿಲ್ಲ. ಗಡಿ ಬಳಿ ಸೈನ್ಯ ಜಮಾವಣೆಯಿಲ್ಲ. ಶತ್ರುಗಳು ಉಪಗ್ರಹಗಳಿಗೆ ಕಾಣ ಸಿಗುವುದಿಲ್ಲ. ಅವರ ಮೇಲೆ ವೈಮಾನಿಕ ದಾಳಿ ಸಾಧ್ಯವಿಲ್ಲ. ಹಠಾತ್ ದಾಳಿ ಮಾಡಿ ಜೀವಹಾನಿ, ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವುದು; ಅನಂತರ ಕಣ್ಮರೆಯಾಗುವುದು ಗೆರಿಲ್ಲಾಗಳ ಕ್ರಮ.
ನಮ್ಮ ಸುರಕ್ಷಾ ಯೋಧರು ಹಾಗಲ್ಲ. ಅವರ ನೆಲೆಗಳು ಕಣ್ಣಿಗೆ ಕಾಣುತ್ತವೆ. ಅವರು ಅಗೋಚರರಲ್ಲ, `ಮೊಬೈಲ್' ಅಲ್ಲ. ಹೀಗಾಗಿ ಗೆರಿಲ್ಲಾಗಳು ಪೊಲೀಸರ ಮೇಲೂ ದಾಳಿ ಮಾಡುವ ದಾಷ್ಟ್ರ್ಯ ತೋರುತ್ತಾರೆ.
ಇಲ್ಲಿ `ಯುದ್ಧಭೂಮಿ' ಯಾವುದಾಗಿರಬೇಕು ಎಂಬುದನ್ನು ನಿರ್ಧರಿಸುವವರೂ ಗೆರಿಲ್ಲಾಗಳೇ. ಅವರು ತಮಗೆ ಅನುಕೂಲವಾದ ಯಾವುದೋ ಕಾಡಿನಲ್ಲೋ, ಗುಡ್ಡಪ್ರದೇಶದಲ್ಲೋ ಘರ್ಷಣೆ ಸೃಷ್ಟಿಸುತ್ತಾರೆ. ಈ ಕಾಡು, ಈ ಪ್ರದೇಶ ಪೊಲೀಸರಿಗೆ ಅಪರಿಚಿತ. ಇಂತಹ ಕಡೆಗಳಲ್ಲಿ ಹೋರಾಡುವ ತರಬೇತಿಯೂ ಅನೇಕ ಯೋಧರಿಗೆ ಇರುವುದಿಲ್ಲ. ಆದರೂ ದೇಶಭಕ್ತಿಯಿಂದ, ರಾಷ್ಟ್ರನಿಷ್ಠೆಯಿಂದ ನಮ್ಮ ಸುರಕ್ಷಾ ಯೋಧರು ಹೋರಾಡುತ್ತಿದ್ದಾರೆ. ಇದು ಶ್ಲéಾಘನೀಯ.
ಎದುರಾಳಿಗಳಿಗೆ ಅನಾನುಕೂಲಕರವಾದ ಸ್ಥಳಗಳಲ್ಲಿಯೇ ಸಂಘರ್ಷ ನಡೆಯುವಂತೆ ಮಾಡುವುದು, ದುರ್ಬಲ ಗುರಿಗಳನ್ನು ಗುರುತಿಸಿ ಹಠಾತ್ ದಾಳಿ ಮಾಡಿ ಅನಂತರ ತಲೆತಪ್ಪಿಸಿಕೊಳ್ಳುವುದು ಸ್ಟ್ಯಾಂಡಡರ್್ ಗೆರಿಲ್ಲಾ ತಂತ್ರ. ಅದರ ಜೊತೆಗೆ ಪ್ರಾಪಗ್ಯಾಂಡಾ ವಾರ್, ಸೈಕಲಾಜಿಕಲ್ ವಾರ್ -ಇವೆಲ್ಲ ಗೆರಿಲ್ಲಾ ಯುದ್ಧ ಸಿದ್ಧಾಂತಗಳ ಅವಿಭಾಜ್ಯ ಅಂಗಗಳು. ಈ ಕುರಿತು ಮಾವೋ, ಚೆ ಗೆವಾರಾ, ಕಾಲರ್ೋಸ್, ಹೊ ಚಿ ಮಿನ್ಹ್ ಮೊದಲಾದವರು ವಿವರಿಸಿದ್ದಾರೆ.
`ಆನ್ ಗೆರಿಲ್ಲಾ ವಾರ್ಫೇರ್' (`ಯೂಜಿ ಝಾನ್') ಎಂಬುದು ಮಾವೋನ ಕುಖ್ಯಾತ ಪುಸ್ತಕ. ಅವನ ಪ್ರಕಾರ, ಗೆರಿಲ್ಲಾ ಸಮರಕ್ಕೆ ಮೂರು ಹಂತಗಳಿರುತ್ತವೆ. ಮೊದಲ ಹಂತದಲ್ಲಿ ಗೆರಿಲ್ಲಾಗಳು ಪ್ರಚಾರ ತಂತ್ರಗಳನ್ನು ಬಳಸಿ ಜನರ ಬೆಂಬಲ ಗಳಿಸಿಕೊಳ್ಳಲು ಪ್ರಯತ್ನಿಸಬೇಕು. ಅಂದರೆ, ನಕ್ಸಲರು ಬಡವರ ಪರ; ಶ್ರೀಮಂತರ ವಿರುದ್ಧ; ಆಥರ್ಿಕ, ಸಾಮಾಜಿಕ ಅಸಮಾನತೆ ವಿರುದ್ಧ ಅವರ ಹೋರಾಟ; ಅವರು ದೇಶದ್ರೋಹಿಗಳಲ್ಲ; ಆಳುವ ವರ್ಗದವರೇ ದೇಶದ್ರೋಹಿಗಳು; ನಕ್ಸಲರು ಅನ್ಯಾಯ ಕಂಡು ಕ್ರೋಧದಿಂದ ಗನ್ನು ಎತ್ತಿಕೊಂಡಿದ್ದಾರೆ; ಅನ್ಯಾಯ ಸರಿಪಡಿಸಿದರೆ ಶಾಂತರಾಗುತ್ತಾರೆ -ಹೀಗೆ ಸುಳ್ಳುಗಳನ್ನೇ ನಿಜ ಎಂದು ನಂಬಿಸುವ ಪ್ರಚಾರ ತಂತ್ರ ಸಾಗುತ್ತದೆ.
ಈ ಪ್ರಚಾರ ಯುದ್ಧ ಗೆರಿಲ್ಲಾಗಳು ಮಾಡಲೇಬೇಕಾದ ಕರ್ತವ್ಯ. ಅದನ್ನು ಮಾವೋ ಸ್ಪಷ್ಟವಾಗಿ ಹೇಳಿದ್ದಾನೆ. ಜನರ ಬ್ರೈನ್ವಾಷ್ ಮಾಡದೇ ಗೆರಿಲ್ಲಾಗಳಿಗೆ ಯಶಸ್ಸು ಸಾಧ್ಯವಿಲ್ಲ. ಕಡೆಯ ಪಕ್ಷ ತಾವು ನೆಲೆಸಿರುವ ಪ್ರದೇಶದ ಜನರ ತಲೆ ಕೆಡಿಸುವ ಪ್ರಯತ್ನವನ್ನಾದರೂ ಮಾವೋಗಳು ಮಾಡೇ ಮಾಡುತ್ತಾರೆ.
ಈ (ಅಪ)ಪ್ರಚಾರಕ್ಕಾಗಿ ಸಮಾಜದ ಗಣ್ಯರ, ಪ್ರಭಾವಿಗಳ ನೆರವನ್ನೂ ತೆಗೆದುಕೊಳ್ಳಲಾಗುತ್ತದೆ. ಹಲವರ ನೆರವನ್ನು ಅವರಿಗೆ ಅರಿವಿಲ್ಲದಂತೆ ಪಡೆದುಕೊಳ್ಳಲೂಬಹುದು! ಉದಾಹರಣೆಗೆ, ಜಾಗತೀಕರಣದ ವಿರುದ್ಧ ಆಂದೋಲನ ಎಂದರೆ ಹಲವರು ಬರುತ್ತಾರೆ. ಅದನ್ನೇ ನಕ್ಸಲರ ಪರವಾದ ಇಮೇಜು ಸೃಷ್ಟಿಸಲು ಬಳಸಿಕೊಂಡರೆ ಅವರಿಗೆ ತಿಳಿಯುವುದೇ ಇಲ್ಲ!!
ಪುಸ್ತಕಗಳು, ಪತ್ರಿಕೆಗಳು, ಇತರ ಮಾಧ್ಯಮ, ಹಾಡುಗಳು, ನಾಟಕಗಳು, ಬೀದಿ ನಾಟಕಗಳು, ಚಲನಚಿತ್ರಗಳು, ಜನಪ್ರಿಯ ಚಲನಚಿತ್ರ ನಟರುಗಳ ಇಮೇಜು, ವಿಶ್ವವಿದ್ಯಾಲಯಗಳು, ಹೊಲಿಗೆ ತರಬೇತಿ ಶಾಲೆಗಳು, ಮಹಿಳಾ ಸಮಾಜಗಳು, ಕಾಖರ್ಾನೆಗಳು, ಸೆಮಿನಾರುಗಳು -ಹೀಗೆ ಸಾಧ್ಯವಾಗುವ ಎಲ್ಲವನ್ನೂ ಗೆರಿಲ್ಲಾಗಳ ಅನುಕೂಲಕ್ಕಾಗಿ, ಅವರ ಬಗ್ಗೆ ಒಳ್ಳೆಯ ಇಮೇಜು ಸೃಷ್ಟಿಸಲು ಬಳಸಿಕೊಳ್ಳಲಾಗುತ್ತದೆ.
ಸಕರ್ಾರದ ಗುರಿಗಳ ಮೇಲೆ ದಾಳಿ ಮಾಡುವುದೂ (ಉದಾಹರಣೆಗೆ ಪೊಲೀಸ್ ಸ್ಟೇಷನ್) ಸಹ ಮಾವೋ ತಂತ್ರದ ಪ್ರಕಾರ ಮೊದಲ ಹಂತದ ಕೆಲಸವೇ. ಯಾವುದೋ ಪೊಲೀಸ್ ಅಧಿಕಾರಿ ಮೇಲೆ ಕೋಪವಿರುವ ಕೆಲವು ಸ್ಥಳೀಯ ಮುಗ್ಧರಿಗೆ ಇಂತಹ ಕೆಲಸಗಳಿಂದ ಖುಷಿಯಾಗುತ್ತದೆ. ಈ ಕೆಲಸ ಮಾಡಿದವರನ್ನು ಅವರು ಭಯಭಕ್ತಿಯಿಂದ ಕಾಣುತ್ತಾರೆ. ಹಾಗೆ ಸಹಾನುಭೂತಿ ಉಳ್ಳವರನ್ನು ಸೃಷ್ಟಿಸಿಕೊಳ್ಳಬೇಕು ಎಂದು ಮಾವೋ ಸ್ಪಷ್ಟ ಸೂಚನೆ ನೀಡಿದ್ದಾನೆ. ಇದು ಕೇವಲ ಒಂದು ತಂತ್ರ. ಎಷ್ಟೋ ಮುಗ್ಧ ಜನರು ತಮಗರಿವಿಲ್ಲದೆಯೇ ಈ ತಂತ್ರಗಾರರನ್ನು ನಂಬುತ್ತಾರೆ!
ಎರಡನೇ ಹಂತದಲ್ಲಿ ಸಕರ್ಾರದ ಗುರಿಗಳ ಮೇಲಿನ, ಮಿಲಿಟರಿ, ಪೊಲೀಸ್ ಗುರಿಗಳ, ಪ್ರಮುಖ ವ್ಯವಸ್ಥೆಗಳ (ಉದಾಹರಣೆಗೆ, ರೈಲ್ವೆ ಸೇತುವೆ ಇತ್ಯಾದಿ) ಮೇಲಿನ ದಾಳಿ ಇನ್ನಷ್ಟು ತೀವ್ರವಾಗುತ್ತದೆ. ಜನರ ಮೇಲೂ ದಾಳಿಗಳಾಗುತ್ತವೆ. ಮೂರನೇ ಹಂತದಲ್ಲಿ ಸಾಂಪ್ರದಾಯಿಕ, ಪೂರ್ಣ ಪ್ರಮಾಣದ ಸಮರವನ್ನೇ ನಡೆಸಿ ನಗರಗಳನ್ನು, ಭೂಪ್ರದೇಶಗಳನ್ನು ವಶಕ್ಕೆ ತೆಗೆದುಕೊಳ್ಳಬೇಕೆಂದು ಮಾವೋ ಹೇಳುತ್ತಾನೆ.
ಅವನ `ಆನ್ ಗೆರಿಲ್ಲಾ ವಾರ್ಫೇರ್' ಪುಸ್ತಕವನ್ನು ವಿಯೆಟ್ನಾಂನಲ್ಲಿ ವ್ಯಾಪಕವಾಗಿ ವಿತರಿಸಿ ಅದರ ತಂತ್ರಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಯಿತು. ಅಲ್ಲಿನ ವೋ ಗುಯೆನ್ ಜಿಯಾಪ್ ಸ್ಥಾಪಿಸಿರುವ `ಪೀಪಲ್ಸ್ ವಾರ್, ಪೀಪಲ್ಸ್ ಆಮರ್ಿ' ಸಂಘಟನೆ ಮಾವೋ ತಂತ್ರಗಳನ್ನು ವ್ಯಾಪಕವಾಗಿ, ಸೂಕ್ತ ಸಾಂಧಭರ್ಿಕ ಮಾಪರ್ಾಡಿನೊಡನೆ, ಈಗಲೂ ಬಳಸಿಕೊಳ್ಳುತ್ತಿದೆ.
ಕೆಲವು ಮಾವೋ ಬಣಗಳು ಮಾವೋ ತಂತ್ರಗಳಲ್ಲಿ ತಮ್ಮ ಸಂದರ್ಭ ಹಾಗೂ ಚಿಂತನೆಗೆ ತಕ್ಕ ಹಾಗೆ ಕೆಲವು ಬದಲಾವಣೆ ಮಾಡಿಕೊಳ್ಳುವುದು ಮಾಮೂಲು.
ಮಾವೋ ಗೆರಿಲ್ಲಾಗಳಲ್ಲಿ ಪ್ರಧಾನ ಪಡೆ -ಮೇಯ್ನ್ ಫೋಸರ್್ ರೆಗ್ಯುಲರ್ಸ್; ಪ್ರ್ರಾದೇಶಿಕ ಹೋರಾಟಗಾರರು -ರೀಜನಲ್ ಫೈಟರ್ಸ್; ಅರೆಕಾಲಿಕ ಗೆರಿಲ್ಲಾಗಳು -ಪಾಟರ್್ ಟೈಮ್ ಗೆರಿಲ್ಲಾಗಳು ಎಂಬ ಮೂರು ವಿಧವಾದ ಉಗ್ರಪಡೆಗಳಿವೆ. ಮೂರು ಹಂತದ, ಮೂರು ವಿಧದ ಪಡೆಗಳ, ಮೂರು ಪದರಗಳ ಸಮರ ತಂತ್ರ ಇದು.
ಜನರ ಜೊತೆಗಿನ ಸಂಬಂಧ ಹೇಗಿರಬೇಕು ಎಂಬುದನ್ನು ಗೆರಿಲ್ಲಾ ಸಿದ್ಧಾಂತವೀರರೆಲ್ಲರೂ ವಿವರಿಸಿದ್ದಾರೆ. ಅಮೆರಿಕ-ವಿಯೆಟ್ನಾಂ ಯುದ್ಧ ಸಮಯದಲ್ಲಿ ಗೆರಿಲ್ಲಾಗಳಿಗೆ ಜನರ ಅಪಾರ ಬೆಂಬಲ ದೊರಕಿತು. ಆಶ್ರಯ, ಆಹಾರ ಎಲ್ಲವೂ ಲಭಿಸಿದವು. ಜನರ ಬೆಂಬಲ ಇಲ್ಲದ ಕಡೆಗಳಲ್ಲಿ ಅದನ್ನು ಸೃಷ್ಟಿಸಿಕೊಳ್ಳಲು ಮಾವೋಗಳು ಹೆಣಗುತ್ತಾರೆ. ಏಕೆಂದರೆ ಸ್ಥಳಿಯ ಜನರಿಂದ ಆಶ್ರಯ, ಆಹಾರ ಸಿಗದೇ ಹೋದರೆ ಅವರ ಆಟ ನಡೆಯುವುದು ಬಹಳ ಕಷ್ಟ. ಹೀಗಾಗಿ ಜನರ ಬೆಂಬಲ ಪಡೆಯಲು ತಾವು `ಜನಪರ' ಎಂಬ ಸೋಗು, ನಾಟಕ ಆಡಬೇಕಾಗುತ್ತದೆ. `ಜನರ ವಿಮೋಚನೆಗಾಗಿಯೇ' ತಮ್ಮ ಹೋರಾಟ ಎಂಬ ಆಟ ಕಟ್ಟಬೇಕಾಗುತ್ತದೆ. ಅದು ಫಲಕೊಡದಿದ್ದಾಗ ಜನರನ್ನು ಹೆದರಿಸಿ ಅಂಕೆಯಲ್ಲಿಕೊಂಡು ಸಹಕಾರ ಪಡೆಯುವ ಯತ್ನಗಳೂ ನಡೆಯುತ್ತವೆ. ಇವೆಲ್ಲಾ ಮಾವೋಗಳ ಯೋಜನಾಬದ್ಧ ತಂತ್ರಗಳು.
ಮಾವೋ ಪ್ರಕಾರ, ಗೆರಿಲ್ಲಾಗಳು ತಮ್ಮ ಸಶಸ್ತ್ರ ಚಟುವಟಿಕೆಗಳನ್ನು ಗ್ರಾಮೀಣ, ಗುಡ್ಡಗಾಡು ಪ್ರದೇಶಗಳಲ್ಲೇ ಆರಂಭಿಸಬೇಕು. ಆದರೆ ನಗರ, ಪಟ್ಟಣಗಳಲ್ಲಿ ಗಣ್ಯ, ಬುದ್ಧಿಜೀವಿ ಬೆಂಬಲಿಗರು ಇರುತ್ತಾರೆ. ಒಂದು ಕಡೆ ಗನ್ನುಗಳು, ಇನ್ನೊಂದು ಕಡೆ ಸ್ಲೋಗನ್ನುಗಳು ಏಕಕಾಲಕ್ಕೆ ಮೊರೆಯುತ್ತವೆ!!
ಮಾವೋಗಳ ದಮನಕ್ಕೆ ಅವರ ಗನ್ನುಗಳ ಜೊತೆಗೆ ಅವರ ಸ್ಲೋಗನ್ನುಗಳನ್ನೂ ಸಮರ್ಥವಾಗಿ ಎದುರಿಸಬೇಕು. ಇದು ಎಲ್ಲ ಭಯೋತ್ಪಾದಕರ ವಿಷಯದಲ್ಲೂ ಅನ್ವಯಿಸಬೇಕಾದ ಮಾತು. ಉಗ್ರರ ದಮನವಾಗಬೇಕು; ಪ್ರಚಾರಯುದ್ಧದಲ್ಲಿಯೂ ಅವರನ್ನು ಸೋಲಿಸಬೇಕು; ಗದ್ದರ್ನಂತಹ ಉಗ್ರವಾದಿ ಪ್ರಚಾರಕರನ್ನು ಸರಿಯಾಗಿ, ದಕ್ಷವಾಗಿ ಸೂಕ್ತರೀತಿಯಲ್ಲಿ ನಿಭಾಯಿಸಬೇಕು. ಪರೋಕ್ಷ್ಷ ಮಾರ್ಗಗಳಿಂದ ಉಗ್ರರ ಪರವಾಗಿ ಕೆಲಸಮಾಡುವ ಪ್ರೊಫೆಸರುಗಳು ಹಾಗೂ ಇತರ ಬುದ್ಧಿಜೀವಿಗಳನ್ನು ಮಟ್ಟಹಾಕುವ ತಂತ್ರಗಳನ್ನೂ ಸಕರ್ಾರ ರೂಪಿಸಬೇಕು.
ಆದರೆ ಗದ್ದರ್ಗೆ ನಮ್ಮ ಮುರುಘರಾಜೇಂದ್ರ ಮಠಾಧಿಪತಿ `ಬಸವಶ್ರೀ' ಪ್ರಶಸಿ ಕೊಡುತ್ತಾರೆ! ಮಾವೋ ಉಗ್ರರ ಬೆಂಬಲಿಗ ಬುಧ್ಧಿಜೀವಿಗಳ ಪರವಾಗಿ ರಾಜಕಾರಣಿಗಳು ಹೇಳಿಕೆ ನೀಡುತ್ತಾರೆೆ! ವಾಸ್ತವ ಹೇಗಿದೆ ಎಂಬುದನ್ನು ಅರಿಯಲು ಕನರ್ಾಟಕದ ಈ ಎರಡು ಉದಾಹರಣೆಗಳು ಸಾಕು.
ರಾಜಕಾರಣಿಗಳ, ಸಮುದಾಯಗಳ ಮತ್ತು ಸಮಾಜದ ಪ್ರಮುಖರ ಬೆಂಬಲ ಅಥವಾ ನಿರ್ಲಕ್ಷ್ಯಗಳಿಲ್ಲದೇ ಭಯೋತ್ಪಾದನೆ ಬೇರೂರುವುದು ಕಷ್ಟ. ಇದನ್ನು ಭಯೋತ್ಪಾದಕರು ಚೆನ್ನಾಗಿ ಅರಿತಿದ್ದಾರೆ. ಮತದ ನಾಮಬಲ ಇರದ ಮಾವೋಗಳು ಜನಬೆಂಬಲ ಗಳಿಸಲು `ಜನಪರ'ರಾಗುತ್ತಾರೆ! ತಮ್ಮ ಭಯೋತ್ಪಾದನೆಯನ್ನು `ಪೀಪಲ್ಸ್ ವಾರ್' ಎನ್ನುತ್ತಾರೆ. ಮಾವೋ ಜೆಡಾಂಗ್ 1920ರ ಮತ್ತು 30ರ ದಶಕದಲ್ಲಿ ಗ್ರಾಮೀಣ ಚೀನಾದಲ್ಲಿ ತನ್ನ `ಪ್ರೊಟ್ರ್ಯಾಕ್ಟೆಡ್ ಪೀಪಲ್ಸ್ ವಾರ್' ತಂತ್ರಗಳನ್ನು ಅನುಸರಿಸಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾದ. ರೈತ ಸಮುದಾಯವನ್ನು ತನ್ನ ರಣತಂತ್ರದ ಸಾಧನವಾಗಿ ಬಳಸಿಕೊಂಡ ಪರಿಣಾಮವಾಗಿ ಸಿಸಿಪಿ ಚೀನಾದ ಅಧಿಕಾರ ಸೂತ್ರವನ್ನು ತನ್ನ ಕೈವಶ ಮಾಡಿಕೊಂಡಿತು.
``ರಾಜಕೀಯ ಅಧಿಕಾರ ಸಿಗುವುದೇ ಗನ್ ಬ್ಯಾರೆಲ್ಲುಗಳ ಮೂಲಕ'' ಎಂಬುದು ಮಾವೋನ (ಕು)ಪ್ರಸಿದ್ಧ ಹೇಳಿಕೆ. ಅವನ ಸಿದ್ಧಾಂತಗಳ ಕಿರುಸಂಗ್ರಹವಾದ `ಲಿಟಲ್ ರೆಡ್ ಬುಕ್' ಅನ್ನು ಚೀನಾದಲ್ಲಿ ಶಿಕ್ಷಣದ ಅಂಗವಾಗಿ ಎಲ್ಲರೂ ಕಡ್ಡಾಯವಾಗಿ ಓದಲೇಬೇಕು. ಸೌದಿ ಅರೇಬಿಯಾದ ಮದರಸಾಗಳಿಗೂ ಚೀನಾದ ಕಮ್ಯೂನಿಸ್ಟ್ ಮದರಸಾಗಳಿಗೂ ನೀತಿರಚನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅವನ `ಗೆರಿಲ್ಲಾ ವಾರ್ಫೇರ್' ಪುಸ್ತಕವನ್ನು ಎಲ್ಲ ಮಾವೋ ಉಗ್ರರೂ ಓದಿರುತ್ತಾರೆ. ಅವರನ್ನು ದಮನಿಸಬೇಕಾದವರೂ ಅದನ್ನು ಓದಬೇಕಾಗುತ್ತದೆ.
ನೆನಪಿಡಿ, ನಕ್ಸಲೀಯರು ಬಡವರನ್ನು ಕಾಪಾಡಲು ಆಕಾಶದಿಂದ ಉದುರಿಬಿದ್ದವರಲ್ಲ. ಸೋವಿಯತ್ ಮತ್ತು ಚೀನಾಗಳ ಹಣಾಹಣಿಯ ಫಲಿತವಾಗಿ ಭಾರತದ ಕಮ್ಯೂನಿಸ್ಟ್ ಪಾಳೆಯದಲ್ಲಿ ಉಂಟಾದ ಒಡಕಿನ ಫಲವಾಗಿ ಉದಿಸಿದ ಚೀನಾ ಬೀಜಾಸುರರು ಅವರು. ವೈಚಾರಿಕವಾಗಿ ಅವರು ವಿವಿಧ ಮಾವೋ ಬಣಗಳನ್ನು ಪ್ರತಿನಿಧಿಸುತ್ತಾರೆ.
ಆರಂಭದಲ್ಲಿ ಪಶ್ಚಿಮ ಬಂಗಾಲ ನಕ್ಸಲ್ ಚಟುವಟಿಕೆಗಳ ಕೇಂದ್ರವಾಗಿತ್ತು. ಈಗ ನಕ್ಸಲರು ಭಾರತದ 18 ರಾಜ್ಯಗಳ 180 ಜಿಲ್ಲೆಗಳನ್ನು ವ್ಯಾಪಿಸಿದ್ದಾರೆ. 15000-20000 ಬಲದ ಉಗ್ರಪಡೆ ಹೊಂದಿದ್ದಾರೆ. ಭಾರತದ ಅರಣ್ಯಗಳಲ್ಲಿ ಐದನೇ ಒಂದು ಭಾಗ ನಕ್ಸಲ್ ನಿಯಂತ್ರಣದಲ್ಲಿದೆ. ಕಮ್ಯೂನಿಸ್ಟ್ ಪಾಟರ್ಿ ಆಫ್ ಇಂಡಿಯಾ -ಮಾಕ್ಸರ್ಿಸ್ಟ್,ಲೆನಿನಿಸ್ಟ್ (ಸಿಪಿಐ-ಎಂಎಲ್), ಪೀಪಲ್ಸ್ ವಾರ್ ಗ್ರೂಪ್ (ಪಿಡಬ್ಲೂಜಿ), ಮಾವೋಯಿಸ್ಟ್ ಕಮ್ಯೂನಿಸ್ಟ್ ಸೆಂಟರ್ (ಎಂಸಿಸಿ) ಗಳು 2004ರ ಸೆಪ್ಟೆಂಬರ್ 21ರಂದು ವಿಲೀನವಾಗಿ ಕಮ್ಯೂನಿಸ್ಟ್ ಪಾಟರ್ಿ ಆಫ್ ಇಂಡಿಯಾ (ಮಾವೋಯಿಸ್ಟ್) ಎಂಬ ಹೆಸರಿನಲ್ಲಿ ಸಕ್ರಿಯವಾಗಿ (ಇದು ನಿಷೇಧಿತ ಸಂಘಟನೆ) `ಪ್ರೊಟ್ರ್ಯಾಕ್ಟೆಡ್ ವಾರ್' ಮುಂದುವರಿಸಿವೆ. ಸಿಪಿಐ (ಮಾವೋ) ಉಗ್ರರು ಸಾವಿರಾರು ಸಂಖ್ಯೆಯಲ್ಲಿ ದಾಳಿ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ (ಉದಾ: ಜೆಹಾನಾಬಾದ್ ಜೈಲು ದಾಳಿ ಪ್ರಕರಣ). ಈ ಸಂಘಟನೆ `ದೇಶದ ಅತಿದೊಡ್ಡ ಆಂತರಿಕ ಸುರಕ್ಷಾ ಆತಂಕ'ವಾಗಿ ಮಾರ್ಪಟ್ಟಿದೆ ಎಂದು ಸ್ವತಃ `ಶಾಂತಿದೂತ' ಪ್ರಧಾನಿ ಮನಮೋಹನ್ ಸಿಂಗ್ ಒಪ್ಪಿಕೊಂಡಿದ್ದಾರೆ.
ಆದರೂ ನಕ್ಸಲರು ಭಯೋತ್ಪಾದಕರೇ ಅಲ್ಲವೇ ಎಂಬ ಅರ್ಥಹೀನ (ಹಾಗೂ ಅಪಾಯಕಾರಿ) ಚಚರ್ೆಗಳು ಇನ್ನೂ ಜಾರಿಯಲ್ಲಿವೆ! ಅನೇಕ ರಾಜಕೀಯ ಪ್ರಮುಖರುಗಳೇ ಗೊಂದಲಮಯ ಹೇಳಿಕೆ ನೀಡುತ್ತಾ ಜನರನ್ನು ದಾರಿತಪ್ಪಿಸುತ್ತಿದ್ದಾರೆ.
ಕೇರಳದಿಂದ ನೇಪಾಳದವರೆಗೆ ಭೂಭಾಗಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು `ರೆಡ್ ಕಾರಿಡಾರ್' (ಕೆಂಪು ಪಟ್ಟಿ) ಅಥವಾ `ಕಾಂಪ್ಯಾಕ್ಟ್ ರೆವೆಲ್ಯೂಷನರಿ ಝೋನ್' ಸ್ಥಾಪಿಸುವುದು; ಅನಂತರ ಅದನ್ನು ಸಂಪೂರ್ಣವಾಗಿ ಗೆದ್ದುಕೊಳ್ಳುವುದು ಮಾವೋ ಉಗ್ರರಿಗೆ ಪ್ರಿಯವಾದ ಯೋಜನೆ. ಈ ಕೆಂಪು ಪಟ್ಟಿಯಡಿ ಬಿಹಾರ, ಜಾರ್ಖಂಡ್, ಒರಿಸ್ಸಾ, ಮಧ್ಯಪ್ರದೇಶ, ಆಂಧ್ರ್ರಪ್ರದೇಶ, ಕನರ್ಾಟಕ, ತಮಿಳುನಾಡು ಹಾಗೂ ಕೇರಳಗಳು ಬರುತ್ತವೆ.
ಆದರೆ ಈಗ ಮಾವೋಗಳ ಈ ರಣತಂತ್ರ ಬದಲಾಗಿದೆ ಎನ್ನಲಾಗುತ್ತಿದೆ. ಕೆಂಪುಪಟ್ಟಿಗೆ ಬದಲು ಇಡೀ ಭಾರತವನ್ನು ಹಂತಹಂತವಾಗಿ ಆವರಿಸಿಕೊಂಡು ಆಕ್ರಮಿಸುವ ಯೋಜನೆ ರೂಪಿಸಲಾಗಿದೆ ಎನ್ನಲಾಗುತ್ತಿದೆ. ನಗರ ಪ್ರದೇಶಗಳ ಮಧ್ಯಮ ವರ್ಗದ ಜನರಿಗೂ ಮಂಕುಬೂದಿ ಎರಚಿ ನಗರಗಳಲ್ಲೂ ಬೇರುಗಳನ್ನು ಹುಡುಕುವತ್ತ ತಾವು ಗಮನ ಹರಿಸಿರುವುದಾಗಿ ಸಿಪಿಐ (ಮಾವೋ) ಮುಖ್ಯಸ್ಥ ಗಣಪತಿ ಸ್ವತಃ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. `ನಾವು ಹಿಂಸಾತ್ಮಕ ಹಾಗೂ ಅಹಿಂಸಾತ್ಮಕ ಎರಡೂ ರೀತಿಯ ಹೋರಾಟ ಮಾಡುತ್ತೇವೆ' ಎಂದು ಆತ ಹೇಳಿದ್ದಾನೆ.
ಫೆಬ್ರವರಿ 2007ರಲ್ಲಿ ನಡೆದ ಮಾವೋವಾದಿಗಳ ಒಂಬತ್ತನೇ ಮಹಾಧಿವೇಶನ ಸಂದರ್ಭದ ವರದಿಗಳ ಪ್ರಕಾರ, ಹೊಸ ಮಾವೋ ರಣತಂತ್ರಗಳು ಯೋಜನಾ ಹಂತವನ್ನು ದಾಟಿ ಅನುಷ್ಠಾನದ ಹಂತವನ್ನು ಎಂದೋ ತಲುಪಿವೆ. ಮಾವೋಗಳು ನೇಪಾಳದಲ್ಲಿ ಕಂಡ ಯಶಸ್ಸು ಅನೇಕ ಹೊಸ ಕ್ರಮಗಳಿಗೆ ಚಾಲನೆ ನೀಡಿದೆ. ``ಭಾರತ ಸಕರ್ಾರದ ಶಕ್ತಿ ಹಾಗೂ ದೌರ್ಬಲ್ಯಗಳೆರಡನ್ನೂ ಆಳವಾಗಿ ಅಧ್ಯಯನ ಮಾಡಿದ್ದೇವೆ. ಎಂತಹ ಶಕ್ತಿಶಾಲಿ ಶತ್ರುವಿಗೂ ಕೆಲವು ದುರ್ಬಲ ಅಂಶಗಳು ಇದ್ದೇ ಇರುತ್ತವೆ. ಅವುಗಳನ್ನು ನಾವು ಸರಿಯಾಗಿ ಗುರುತಿಸಿ ಭಾರಿ ಹೊಡೆತಗಳನ್ನು ಕೊಟ್ಟರೆ ವಿಜಯ ಸಿಕ್ಕೇ ಸಿಗುತ್ತದೆ'' ಎಂದು ಗಣಪತಿ ಹೇಳಿರುವುದಾಗಿ ಉದ್ಧರಿಸಲಾಗಿದೆ. ಈಗಾಗಲೇ ಮಾವೋ ಉಗ್ರರು ಭಾರಿ ದಾಳಿಯ ಸಂಪ್ರದಾಯ ಆರಂಭಿಸಿದ್ದಾರೆ. ಇದು ನೇಪಾಳದ ಮಾದರಿಯ ಅನುಕರಣೆ. 2004ರಲ್ಲಿ ಒರಿಸ್ಸಾದ ಕೋರಾಪಟ್ನಲ್ಲಿ ಭಾರಿ ದಾಳಿ ನಡೆಯಿತು. 2005ರಲ್ಲಿ 3 ದಾಳಿ ನಡೆಯಿತು. 2006ರಲ್ಲಿ 9 ದಾಳಿ ನಡೆದಿದೆ. ಜೂನ್ 2007ರ ಹೊತ್ತಿಗೆ 12 ಭಾರಿ ದಾಳಿಗಳು ನಡೆದಿವೆ. ಇದು ಹೊಸ ಮಾವೋ ಟ್ರೆಂಡ್. ಇವನ್ನೆಲ್ಲ ಗೃಹ ಸಚಿವಾಲಯ ಜೂನ್ 28, 2007ರಲ್ಲಿ ಸಿದ್ಧಪಡಿಸಿರುವ ವರದಿಯಲ್ಲಿಯೇ ವಿಶ್ಲೇಷಿಸಲಾಗಿದೆ.
ವಾಸ್ತವ ನಮಗೆ ಗೊತ್ತೇ ಇದೆ. ಸುರಕ್ಷಾ ತಜ್ಷರೇನೋ ವರದಿ ಸಿದ್ಧಪಡಿಸುತ್ತಾರೆ. ಆದರೆ ರಾಜಕಾರಣಿಗಳು ಅದರ ಮೇಲೆ ಭದ್ರವಾಗಿ, ಅಲ್ಲಾಡದೇ ಕುಳಿತುಬಿಡುತ್ತಾರೆ.
ಇಂತಹ ಮುಖಂಡರಿರುವ ದೇಶಕ್ಕೆ ಬೇರೆ ಶತ್ರುಗಳೇಕೆ ಬೇಕು?
ಇವರೇ ಸಾಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ