ಸೋಮವಾರ, ಮಾರ್ಚ್ 23, 2009

ವ್ಯಾಪಾರ `ಸತ್ಯಂ', ರಾಜಕೀಯ `ಸುಂದರಂ'!

ಸತ್ಯಂ ಕಂಪೆನಿ ದೇಶದಲ್ಲಿ ಸಾರ್ವಜನಿಕವಾಗಿ ಕಳಂಕ ಹೊತ್ತ ಮೊದಲ ಸಂಸ್ಥೆಯಲ್ಲ. ಕೊನೆಯದೂ ಅಲ್ಲ. ದೇಶದ ದೊಡ್ಡ ಕಳಂಕಿತ ವ್ಯವಸ್ಥೆ ಎಂದರೆ ನಮ್ಮ ರಾಜಕೀಯ. ಆಯಕಟ್ಟಿನ ಸ್ಥಳದಲ್ಲಿರುವ ರಾಜಕಾರಣಿಗಳ ಕೃಪೆ ಇಲ್ಲದೇ ನಮ್ಮಲ್ಲಿ ಒಂದು ತರಗೆಲೆಯೂ ಅಲುಗುವುದಿಲ್ಲ. ಕಾಪರ್ೋರೇಷನ್ ಅಧಿಕಾರಿಗಳ ಕೃಪೆ ಇಲ್ಲದೇ ಇದ್ದರೆ ಕತ್ತಲಲ್ಲಿ ಒಂದು ನಾಯಿಯೂ ಬೊಗಳುವುದಿಲ್ಲ.

`ಕಂಪೆನಿಯ ವ್ಯವಹಾರಗಳನ್ನು ಮುನ್ನಡೆಸಲು ಕೆಲವು ಭರವಸೆಗಳನ್ನು ಕೊಟ್ಟು 1230 ಕೋಟಿ ರೂಪಾಯಿ ಹಣವನ್ನು ಪಡೆದೆ' ಎಂದು ಸತ್ಯಂ ಆಡಳಿತ ಮಂಡಳಿಗೆ ಜನವರಿ 7, 2009ರಲ್ಲಿ ರಂದು ಬರೆದ ಪತ್ರದಲ್ಲಿ ರಾಮಲಿಂಗ ರಾಜು ತಿಳಿಸಿದ್ದಾರೆ. ಈ ಹಣವನ್ನು ಬ್ಯಾಂಕುಗಳು ಕೊಟ್ಟಿಲ್ಲ. ಹಾಗಾದರೆ ಕೊಟ್ವವರು ಯಾರು? ರಾಜಕಾರಣಿಗಳ ಕಪ್ಪು ಹಣವೇನಾದರೂ ಹರಿದುಬಂದಿದೆಯೆ? ಅವರಿಗೆ ಯಾವ ಯಾವ ಭರವಸೆಗಳನ್ನು ನೀಡಲಾಯಿತು? ಇದು ತನಿಖೆಯಾಗಬೇಕಾದ ಅಂಶ.

ಭ್ರಷ್ಟ ರಾಜಕಾರಣಿಗಳು, ಮಾಫಿಯಾ-ಕ್ರಿಮಿನಲ್-ಭೂಗತ ದೊರೆಗಳು, ಭ್ರಷ್ಟ ಸಕರ್ಾರಿ ಅಧಿಕಾರಿಗಳು ತಮ್ಮ ಕಪ್ಪು ಹಣವನ್ನು ಮುಖ್ಯವಾಹಿನಿಯಲ್ಲಿರುವ `ಪ್ರತಿಷ್ಠಿತ' ಉದ್ಯಮಗಳಲ್ಲಿ ಹರಿಯಬಿಡುವುದು ಹೊಸ ಸಂಗತಿ ಏನಲ್ಲ. ಈ ಕುರಿತು ಅಸಂಖ್ಯಾತ ವರದಿಗಳು ಸಿಗುತ್ತವೆ.

ಒಂದು ಉದಾಹರಣೆ. `ಅಬು ಸಲೇಂ, ದಾವೂದ್ ಇಬ್ರಾಹಿಂ ಮುಂತಾದ ದುಬೈ ಮೂಲದ ಭೂಗತ ದೊರೆಗಳು ತಮ್ಮ ಕಪ್ಪು (ಹಾಗೂ ಕ್ರಿಮಿನಲ್) ಹಣವನ್ನು ಭಾರತದ ಜೆಟ್ ಏರ್ವೇಸ್ ಕಂಪೆನಿಯಲ್ಲಿ ತೊಡಗಿಸಿದ್ದಾರೆ ಎಂಬ ಗುಪ್ತಚಾರ ಮಾಹಿತಿ ಸಕರ್ಾರಕ್ಕೆ ಬಂದಿದೆ' ಎಂದು 2002ರ ಏಪ್ರಿಲ್ನಲ್ಲಿ ಪತ್ರಿಕೆಗಳು ವರದಿ ಮಾಡಿದ್ದವು. ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಇಂಟೆಲಿಜೆನ್ಸ್ ಬ್ಯೂರೋ ಈ ಕುರಿತು ಸೂಚನೆ ನೀಡಿತ್ತು. ಗೃಹ ಸಚಿವಾಲಯದೊಡನೆ ಸಮಾಲೋಚಿಸಿ ಮುಂದಿನ ಕ್ರಮದ ಬಗ್ಗೆ ಯೋಚಿಸುವುದಾಗಿ ವಿಮಾನಯಾನ ಸಚಿವಾಲಯ ತಿಳಿಸಿತ್ತು. ಮುಂದೇನಾಯಿತು? ಜೆಟ್ ಏರ್ವೇಸ್ ಮೇಲಿನ ಆಪಾದನೆ ರುಜುವಾತಾಯಿತೆ? ಉತ್ತರ ನಿಮಗೂ ಗೊತ್ತು. ನಮಗೂ ಗೊತ್ತು. ಒಂದು ವೇಳೆ ಇಂಟೆಲಿಜೆನ್ಸ್ ಬ್ಯೂರೋ ಸುಳ್ಳು ಮಾಹಿತಿ ನೀಡಿತ್ತೆ? ಹಾಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಕೇಳಲಾಯಿತೆ? ಆ ಕುರಿತು ಯಾವುದೇ ವರದಿಗಳನ್ನು ಓದಿದ ನೆನಪು ನನಗಿಲ್ಲ. ಒಂದು ವಿಷಯ ಗಮನಾರ್ಹ. ಸತ್ಯ ಹೇಳಿದ್ದಕ್ಕಾಗಿ ಮಾರ್ಗರೇಟ್ ಆಳ್ವ ಪದವಿ ಕಳೆದುಕೊಂಡರು. ಸುಳ್ಳು ಹೇಳಿದರೂ ಅಬ್ದುಲ್ ರೆಹಮಾನ್ ಅಂತುಲೆ ತಮ್ಮ ಅಧಿಕಾರ ಉಳಿಸಿಕೊಂಡರು. ಇದು ನಮ್ಮ ದೇಶದ ಸ್ಥಿತಿ.

ಪ್ರತಿ ಉದ್ಯಮಿಗೂ ರಾಜಕೀಯ ನಾಯಕರ ಗೆಳೆತನ ಇದ್ದೇ ಇರುತ್ತದೆ. ಆಳುವವರನ್ನು ಯಾವ ಉದ್ಯಮಿಯೂ ಎದುರು ಹಾಕಿಕೊಳ್ಳುವುದಿಲ್ಲ. ಹಾಗೆಯೇ ಕೆಲವರ ನಡುವೆ ಎವರ್ಗ್ರೀನ್ ಸಂಬಂಧ ಇರುತ್ತದೆ. ಅಂಬಾನಿ, ಸುಬ್ರತೋ ರಾಯ್, ಅಮರ್ ಸಿಂಗ್ ಮುಂತಾದವರ ಗೆಳೆತನ ರಜತ ಪರದೆಯ ಮೇಲೆಯೇ ಕಂಗೊಳಿಸಿದರೆ ಅನೇಕರ ಗೆಳೆತನ `ಪೇಜ್ 3' ಸರಕು. ಇಂತಹ ಗೆಳೆತನ-ನಂಬಿಕೆಗಳಿಕೆ ಕಾನೂನಿನ ತೊಡಕೇನಿಲ್ಲ. ಸ್ನೇಹದಲ್ಲಿ ಯಾವ ತಪ್ಪೂ ಇಲ್ಲ. ಆದರೆ ಇದು ಬರೀ ಕಾಫಿ-ಚಿಪ್ಸ್ ಗೆಳೆತನ ಎಂದುಕೊಳ್ಳುವವರು ಮಧ್ಯಮವರ್ಗದ ಸಂಬಳಗಾರರು ಮಾತ್ರ.

ಭಾರತದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಇತರೆ ಕಪ್ಪು ಹಣದ `ಕಪ್ಪು ಶ್ರೀಮಂತ'ರು ಸ್ವಿಸ್ ಬ್ಯಾಂಕುಗಳಲ್ಲಿ, ಇತರ ವಿದೇಶಿ ಬ್ಯಾಂಕುಗಳಲ್ಲಿ ಹಣ ಇಡುವುದು ಹೊಸದೇನಲ್ಲ. ಸ್ವಿಸ್ ಬ್ಯಾಂಕುಗಳಲ್ಲಿ ಹಣವಿಟ್ಟ ಜಗತ್ತಿನ ಎಲ್ಲ ಕಪ್ಪು ಶ್ರೀಮಂತರ ಪೈಕಿ ಮೊದಲ ಸ್ಥಾನದಲ್ಲಿರುವುದು ಬಡ ಭಾರತದ ಕಪ್ಪು ಶ್ರೀಮಂತರು! `ಸ್ವಿಸ್ ಬ್ಯಾಂಕಿಂಗ್ ಅಸೋಸಿಯೇಷನ್' 2006ರಲ್ಲಿ ನೀಡಿದ ವರದಿಯ ಪ್ರಕಾರ ಸ್ವಿಸ್ ಬ್ಯಾಂಕುಗಳಲ್ಲಿರುವ ಕಪ್ಪು ಹಣದ ಭಾರತೀಯರ ಒಟ್ಟು ಹಣ 1456 ಶತಕೋಟಿ ಡಾಲರ್! ಅಂದರೆ ನಮ್ಮ ರಾಷ್ಟ್ರದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಸಮನಾದಷ್ಟು ಹಣ! ಅಂದರೆ ಸುಮಾರು 70,000 ಶತಕೋಟಿ ರೂಪಾಯಿಗಳು!!

ಆದರೂ ನಮ್ಮ ಸಕರ್ಾರ ಏಕೆ ಕಪ್ಪು ಹಣದ ವಿವರ ತರಿಸುವುದಿಲ್ಲ? ಎಲ್ಲ ಕಪ್ಪು ಶ್ರೀಮಂತರ ಬಳಿ ಲೆಕ್ಕ ಕೇಳುವುದಿಲ್ಲ? ಏಕೆ ಕಪ್ಪು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ? ಏಕೆಂದರೆ ವಿದೇಶಿ ಬ್ಯಾಂಕುಗಳಲ್ಲಿರುವವರ ಹಣದಲ್ಲಿ ಬಹುಪಾಲು ಸ್ವತಂತ್ರ ಭಾರತದ `ಸ್ವತಂತ್ರ' ರಾಜಕಾರಣಿಗಳದು! ಗಾಜಿನ ಮನೆಯಲ್ಲಿರುವವರು ಎಂದಿಗೂ ಪಕ್ಕದ ಮನೆಯ ಮೇಲೆ ಕಲ್ಲೆಸೆಯುವುದು ಸಾಧ್ಯವಿಲ್ಲ.

ನಮ್ಮ ಪ್ರಧಾನಿ ಒಬ್ಬ ಅರ್ಥಶಾಸ್ತ್ರಜ್ಞ. `ಬ್ಲ್ಯಾಕ್ ಎಕಾನಮಿ'ಯ ದುಷ್ಪರಿಣಾಮಗಳನ್ನು ಕುರಿತು ಓದಿದವರು, ಬೋಧಿಸಿದವೆರು. ಆದರೆ ಅವರು ಮಾಡಿದ್ದೇನು? ಮುಂದೆ ಓದಿ.

ಆಸ್ಟ್ರಿಯಾ ಹಾಗೂ ಸ್ವಿಡ್ಜರ್ಲ್ಯಾಂಡಿನ ಮಧ್ಯೆ ಇರುವ ಚಿಕ್ಕ ಗುಡ್ಡಗಾಡು ದೇಶದ ಹೆಸರು ಲೀಚ್ಟೆನ್ಸ್ಟೈನ್. ಮಧ್ಯಮವರ್ಗದ ಜನರು ಸಾಮಾನ್ಯವಾಗಿ ಈ ದೇಶದ ಹೆಸರನ್ನೇ ಕೇಳಿರುವುದಿಲ್ಲ. ಆದರೆ ಜಗತ್ತಿನ ಕಪ್ಪು ಶ್ರೀಮಂತರಿಗೆಲ್ಲ ಈ ದೇಶ ಸುಪರಿಚಿತ. ಇಲ್ಲಿ ನೂರಾರು ಭಾರತೀಯ ಕಪ್ಪು ಶ್ರೀಮಂತರು ಹಣ ಇಟ್ಟಿದ್ದಾರೆ. ಈಚೆಗೆ ಜರ್ಮನಿಯ ಸಕರ್ಾರ ಲೀಚ್ಟೆನ್ಸ್ಟೈನ್ ದೇಶದ ಎಲ್ಟಿಜಿ ಬ್ಯಾಂಕಿನಲ್ಲಿ ಜಗತ್ತಿನ ಯಾವ ಯಾವ ದೇಶದ ಕಪ್ಪು ಧನಿಕರು ಎಷ್ಟೆಷ್ಡು ಹಣ ಇಟ್ಟಿದ್ದಾರೆ ಎಂಬ ಪಟ್ಟಿಯನ್ನು ತರಿಸಿಕೊಂಡಿತು.
`ನಮ್ಮ ಬಳಿ ಇಂತಹ ಪಟ್ಟಿ ಇದೆ. ಅದರಲ್ಲಿ ನಿಮ್ಮ ದೇಶದ ಖಾತೆದಾರರ ಬಗ್ಗೆಯೂ ಮಾಹಿತಿ ಇದೆ. ನೀವು ಅಧಿಕೃತವಾಗಿ ಕೇಳಿದರೆ ನಿಮಗೆ ಈ ಮಾಹಿತಿ ನೀಡುತ್ತೇವೆ' ಎಂದು ಜರ್ಮನ್ ಸಕರ್ಾರ ಅನೇಕ ದೇಶಗಳ ಸಕರ್ಾರಕ್ಕೆ ಸಂದೇಶ ಕಳುಹಿಸಿತು. ಭಾರತಕ್ಕೂ ಸಂದೇಶ ಬಂತು. ಅಮೆರಿಕ, ಬ್ರಿಟನ್, ಕೆನಡಾ, ಇಟಲಿ, ಸ್ವೀಡನ್, ನಾವರ್ೆ, ಫಿನ್ಲ್ಯಾಂಡ್, ಐರ್ಲ್ಯಾಂಡ್ ಮೊದಲಾದ ದೇಶಗಳು ಜರ್ಮನ್ ಸಂದೇಶಕ್ಕೆ ಪ್ರತಿಕ್ರಿಯಿಸಿದವು. ಮಾಹಿತಿ ಕೇಳಿ ತಮ್ಮ ದೇಶದ ಕಪ್ಪು ಶ್ರೀಮಂತರ ಹಣಕಾಸು ವ್ಯವಹಾರ ಕುರಿತ ಮಾಹಿತಿ ತರಿಸಿಕೊಂಡವು.

ಭಾರತ ಏನು ಮಾಡಿತು ಎಂಬ ಕಥೆ ಹೇಳುವ ಅಗತ್ಯವಿದೆಯೆ? `ಖಂಡಿತವಾಗಿಯೂ ಇದೆ, ಮುಂದೇನಾಯಿತು ಎಂದು ಊಹಿಸುವುದು ನಮ್ಮಿಂದ ಸಾಧ್ಯವಿಲ'್ಲ ಎನ್ನುವಿರಾದರೆ, ಕೇಳಿ. ಜರ್ಮನ್ ಸಕರ್ಾರಕ್ಕೆ ಯಾವ ಉತ್ತರವನ್ನೂ ಬರೆಯುವ ಗೋಜಿಗೆ ಭಾರತ ಹೋಗಿಲ್ಲ. ನಮ್ಮ ಅರ್ಥಶಾಸ್ರ್ತಜ್ಞ ಪ್ರಧಾನಿ ಬಹಳ ಬ್ಯುಸಿಯಾಗಿದ್ದಾರೆ (ಯಾವುದರಲ್ಲಿ ಎಂಬುದು ಮಾತ್ರ ಗೊತ್ತಿಲ್ಲ). ಅವರಿಗೆ ಇದಕ್ಕೆಲ್ಲ ಉತ್ತರ ಕೊಡುವಷ್ಟು ಪುರಸೊತ್ತಿಲ್ಲ. ಒಂದಿಷ್ಟು ಪುಸ್ತಕಗಳನ್ನು ಓದಲೂ ಪುರಸೊತ್ತಿಲ್ಲವಂತೆ. ಆದರೆ ಅವರ ಕಚೇರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಜನಪಥದ ಹತ್ತನೇ ನಂಬರ್ ಮನೆಯನ್ನು ಕಾಯುತ್ತಿದ್ದಾರೆಯೆ?

ಹೀಗಿದೆ ಪರಿಸ್ಥಿತಿ. ಹೀಗಿರುವಾಗ ಈ ಹಣದ ಬಹುಪಾಲು ನಮ್ಮ ರಾಜಕಾರಣಿಗಳದು ಮತ್ತು ಅವರ ಗೆಳೆಯರದು ಎಂಬ ಸಂಶಯ ಮೂಡುವುದಿಲ್ಲವೆ? ಸ್ವಿಡ್ಜರ್ಲ್ಯಾಂಡ್, ಸೇಂ. ಕಿಟ್ಸ್, ಕ್ಯಾನರಿ ಐಲ್ಯಾಂಡ್ಸ್, ಆಂಟಿಗುವಾ, ಬಹಾಮಾಸ್, ಲೀಚ್ಟೆನ್ಸ್ಟೈನ್ - ಇವೆಲ್ಲ ನಮ್ಮ ಕಪ್ಪು ಶ್ರೀಮಂತರು ಆಗಾಗ್ಗೆ ರಜೆ ಕಳೆಯುವ ಸ್ವರ್ಗಗಳು. ಅಷ್ಟು ಮಾತ್ರವಲ್ಲ ಅವರ ಕಪ್ಪು ನಿಧಿಯನ್ನು ಕಾಯುತ್ತಿರುವ ಕುಪ್ರಸಿದ್ಧ ಬ್ಯಾಂಕಿಂಗ್ ತಾಣಗಳು. ಡ್ರಗ್ಸ್, ಟೆರರಿಸಂ, ಬ್ಲ್ಯಾಕ್ ಬಿಸಿನೆಸ್ -ಇವುಗಳಿಗೆಲ್ಲ ಹಣದ ಹೊಳೆ ಹರಿಯುವುದು ಇಲ್ಲಿನ ಬ್ಯಾಂಕ್ ಖಾತೆಗಳಿಂದಲೇ.

ರಾಜು ಪುತ್ರರ ಮೇಟಾಸ್ ಕಂಪೆನಿ ಹೈದರಾಬಾದ್ ಮೆಟ್ರೋ ಯೋಜನೆಯಲ್ಲಿ ಅವವ್ಯಹಾರ ನಡೆಸಿದ ಬಗ್ಗೆ ಎಂದು ದೆಹಲಿ ಮೆಟ್ರೋ ಮುಖ್ಯಸ್ಥ, ಪ್ರಾಮಾಣಿಕ ಎಂಜಿನಿಯರ್, ಇ. ಶ್ರೀಧರನ್ ಕಳೆದ ವಷರ್ಾರಂಭದಲ್ಲೇ ಕಹಳೆ ಊದಿ ಆಂಧ್ರ ಸಕರ್ಾರದ ಅವಕೃಪೆಗೆ ಪಾತ್ರರಾಗಿದ್ದರು. ಮೇಟಾಸ್ ಪರವಾಗಿ ನಿಂತ ಆಂಧ್ರದ ವೈಎಸ್ಆರ್ ಸಕರ್ಾರ ಶ್ರೀಧರನ್ ವಿರುದ್ಧವೇ ಆಪಾದನೆಗಳ ಮಳೆ ಸುರಿಸಿ ರಣಕಹಳೆ ಊದಿತ್ತು!

ಸುಬ್ರತೋ ರಾಯ್ನ ಸಹಾರಾ ಇಂಡಿಯಾದಲ್ಲಿ ರಾಜಕಾರಣಿಗಳ ಕಪ್ಪು ದುಡ್ಡಿದೆ ಎಂಬ ಗುಲ್ಲು ಬಹಳ ಹಿಂದಿನಿಂದ ಇದೆ. ಇಂತಹ ಯಾವ ಆಪಾದನೆಗಳೂ ಸಾಬೀತಾಗಿಲ್ಲ. ಏಕೆಂದರೆ ಯಾರ ವಿರುದ್ಧವೂ ಸರಿಯಾದ ಕಾನೂನು ಕ್ರಮಗಳನ್ನು ಜರುಗಿಸಿಯೇ ಇಲ್ಲ!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ