ಸೋಮವಾರ, ಮಾರ್ಚ್ 23, 2009

ಕ್ಯಾಥೋಲಿಕ್ ಚಚರ್ಿನ ಕತ್ತಲೆಯ ಬದುಕು

ಭಾರತದ ರೋಮನ್ ಕ್ಯಾಥೊಲಿಕ್ ಪಾದ್ರಿಗಳ ಕತ್ತಲೆಯ ಬದುಕಿನ ಅನಾವರಣ ಪರ್ವ ಆರಂಭವಾಗಿದೆ. ಕೇರಳದ ನನ್ಗಳು ಒಬ್ಬೊಬ್ಬರಾಗಿ ತಮ್ಮ ತಮ್ಮ ಕಾನ್ವೆಂಟಿನ ಹಾಗೂ ಚಚರ್ಿನ ಕತ್ತಲೆಯ ಬದುಕಿನತ್ತ ಬೆಳಕು ಚೆಲ್ಲಲಾರಂಭಿಸಿದ್ದಾರೆ. ಇಂತಹ ಅನೇಕ ನನ್ಗಳು ಅನುಮಾನಾಸ್ಪದವಾದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅನೇಕ ಪಾದ್ರಿಗಳ `ಒಳ ವಿಷಯಗಳು' ಬೆಳಕಿಗೆ ಬರಲಾರಂಭಿಸಿವೆ. ಕೆಲವು ಪ್ರಕರಣಗಳು ನ್ಯಾಯಾಲಯಗಳ ಕಟಕಟೆ ಏರಿವೆ. ಮತ್ತೆ ಕೆಲವು ಬೀದಿ ರಂಪ ಆಗಿವೆ. ಈಗಲೂ ನಾಗರಿಕ ಸಮಾಜ ಸುಮ್ಮನಿರುವುದು ಸಾಧ್ಯವಿಲ್ಲ. `ಛೀ..ಥೂ..' ಎನ್ನದೇ ಇರಲು ಆಗುವುದಿಲ್ಲ.

ರೋಮನ್ ಕ್ಯಾಥೊಲಿಕ್ ಪಾದ್ರಿಗಳ ವಿಕೃತ ಕಾಮಲೀಲೆಗಳ ಸುದ್ದಿ 2001-02ರಲ್ಲಿ ಉತ್ತರ ಅಮೆರಿಕ ಖಂಡದಿಂದ ಅಲೆಅಲೆಯಾಗಿ ತೇಲಿಬಂದವು. ಅಪ್ರಾಪ್ತ ಮಕ್ಕಳ ಮೇಲೆ ವಿಕೃತ ಕಾಮುಕ ಪಾದ್ರಿಗಳು ಅವ್ಯಾಹತವಾಗಿ ನಡೆಸಿಕೊಂಡು ಬಂದಿದ್ದ ಲೈಂಗಿಕ ದೌರ್ಜನ್ಯ ಆ ವರ್ಷ ಬಟಾ ಬಯಲಾಯಿತು. ತನಿಖೆಗಳು ನಡೆದವು. ಕಳೆದ 30-40 ವರ್ಷಗಳಿಂದ ಅನೇಕ ಪಾದ್ರಿಗಳು ಮತ್ತು ನನ್ಗಳು ಕಾಪಾಡಿಕೊಂಡು ಬಂದಿದ್ದ ಕಳ್ಳಸಂಬಂಧಗಳು, ಪಾದ್ರಿಗಳು ನಡೆಸಿದ ಅತ್ಯಾಚಾರಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು, ಸಲಿಂಗ ಕಾಮದ ಕಥೆಗಳು - ಎಲ್ಲ ಹೊರಬಂದವು. ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಯಾಥೋಲಿಕ್ ಮತಾಧಿಕಾರಿಗಳ ಪೈಕಿ ಶೇ. 4ರಷ್ಟು ಮಂದಿ ವಿಕೃತ ಕಾಮಿಗಳಾಗಿದ್ದುದು ಖಚಿತವಾಯಿತು! `ಯುಎಸ್ ಕಾನ್ಫರೆನ್ಸ್ ಆಫ್ ಕ್ಯಾಥೋಲಿಕ್ ಬಿಷಪ್ಸ್' ನಡೆಸಿದ `ಅಧಿಕೃತ' ತನಿಖೆಯಲ್ಲೇ 4,392 ಪಾದ್ರಿಗಳು ಸಿಕ್ಕಿಬಿದ್ದರು! ಅವರ ಮೇಲಿನ ಅಪವಾದ ಸುಳ್ಳಲ್ಲ ಎಂಬುದು ಖಚಿತವಾಯಿತು. ಇಡೀ ವಿಶ್ವ ವ್ಯಾಟಿಕನ್ನಿನತ್ತ ಹೇಸಿಗೆಯ ದೃಷ್ಟಿಯಿಂದ ನೋಡಿತು. ಪೋಪ್ ತಲೆ ತಗ್ಗಿಸಿದರು. ಕ್ಷಮೆ ಕೇಳಿದರು. ನ್ಯಾಯಾಲಯದ ಕಟಕಟೆ ಏರಿದ್ದ ಪ್ರಕರಣಗಳ ಇತ್ಯರ್ಥಕ್ಕಾಗಿ ನೂರಾರು ಕೋಟಿ ಡಾಲರ್ಗಳನ್ನು ಸುರಿದರು. ಬಲಿಪಶುಗಳಿಗೆ ಹಣದ ಪರಿಹಾರ ಕೊಟ್ಟರು. ಕೆಲವು ಪಾದ್ರ್ರಿಗಳು ರಾಜೀನಾಮೆ ನೀಡಿದರು. ಅನೇಕರು ಜೈಲು ಸೇರಿದರು. ಮತ್ತೆ ಕೆಲವರನ್ನು, ಏನೂ ಆಗಿಲ್ಲವೇನೋ ಎಂಬಂತೆ, ಚಚರ್ಿಗೆ ಪುನಃ ಸೇರಿಸಿಕೊಳ್ಳಲಾಯಿತು (ನಮ್ಮ ಲೋಕಾಯುಕ್ತ ದಾಳಿಗಳಿಗೆ ಒಳಗಾದ ಸಕರ್ಾರಿ ಅಧಿಕಾರಿಗಳ ಹಾಗೆ)!

ಇದೀಗ ಭಾರತದ ಸರದಿ. ಇಲ್ಲೂ ಕೆಲವು ಪಾದ್ರಿಗಳ ದುರಾಚಾರ ಹಳೆಯ ಕಥೆಯೇ. ಆದರೆ ಈಚೆಗೆ ಹೊರಬರುತ್ತಿರುವ ಕೇರಳದ ಕ್ಯಾಥೊಲಿಕ್ ಕರಾಳತೆ ಒಂದು ಕೊನೆಯಿಲ್ಲದ ಮೆಗಾ ಸೀರಿಯಲ್! ಈ ಸರಣಿ ಸಿಸ್ಟರ್ ಅಭಯಾ ಅವರ ಕೊಲೆಯ ಆರೋಪದಿಂದ ಆರಂಭವಾಗುತ್ತದೆ. ಈ ಕಥಾಮಾಲಿಕೆಯ ಈಚಿನ ಟ್ವಿಸ್ಟ್ ಅಂದರೆ, 52 ವರ್ಷದ ಮಾಜಿ ನನ್, ಡಾ. ಸಿಸ್ಟರ್ ಜಸ್ಮೀ ಬರೆದು ಈಗಷ್ಟೇ ಪ್ರಕಟಿಸಿರುವ ಆತ್ಮಚರಿತ್ರೆ, `ಆಮೆನ್: ಆ್ಯನ್ ಆಟೋಬಯೋಗ್ರಫಿ ಆಫ್ ಎ ನನ್'.

`ನನ್ನ ನೋವನ್ನು ಹೊರ ಪ್ರಕಟಿಸಲು ಈ ಪುಸ್ತಕ ಬರೆದಿದ್ದೇನೆ. ಮತೀಯ ಕೆಲಸ ಬಿಟ್ಟು ನನ್ನ ಜೀವನದ ಎರಡನೇ ಘಟ್ಟವನ್ನು ಹೊಸದಾಗಿ ಆರಂಭಿಸುತ್ತಿದ್ದೇನೆ. ಆದರೆ ಸಿಸ್ಟರ್ಗಳಿಗೆ ಏನಾಗುತ್ತಿದೆ ಎಂಬ ಸತ್ಯ ಸಂಗತಿಯನ್ನು ತಿಳಿಯುವ ಹಕ್ಕು ಸಮಾಜಕ್ಕೆ ಇದೆ. ಅದಕ್ಕಾಗಿ ಲೇಖನಿ ಹಿಡಿದೆ' ಎಂದಿದ್ದಾರೆ ಜಸ್ಮೀ. `ನನ್ನ 33 ವಷಗಳ ನನ್ ಹುದ್ದೆಯ ಅನುಭವಗಳನ್ನು 180 ಪುಟಗಳ ಪುಟ್ಟ ಪುಸ್ತಕದಲ್ಲಿ ತಿಳಿಸುವುದು ಕಷ್ಟ. ಆದರೂ ಕ್ಯಾಪಿಟೇಷನ್ ಶುಲ್ಕದ ಅವ್ಯವಹಾರದಿಂದ ಹಿಡಿದು ಚಚರ್ಿನ ಒಳಗಡೆ ಲಾಸ್ಯವಾಡುತ್ತಿರುವ ಸಲಿಂಗ ಕಾಮ, ವಿಲಿಂಗ ಕಾಮ, ಎಲ್ಲ ದುರಾಚಾರಗಳಿಗೆ ಕನ್ನಡಿ ಹಿಡಿದಿದ್ದೇನೆ' ಎನ್ನುತ್ತಾರೆ ಅವರು.

30 ವರ್ಷಗಳ ಹಿಂದೆ ಅವರು ನನ್ ಆದಾಗ ಹೊಸ ಹುಡುಗಿಯರ ಮೇಲೆ ಪಾದ್ರಿಗಳು ಅತ್ಯಾಚಾರ ನಡೆಸಿದ್ದು; ಅನೇಕ ನನ್ಗಳ ಹಾಗೂ ಪಾದ್ರಿಗಳ ನಡುವೆ ಏರ್ಪಟ್ಟ ಒಳಸಂಬಂಧ; ನನ್ಗಳ ನಡುವಿನ ಸಲಿಂಗ ಕಾಮ; ಒತ್ತಡ ಮತ್ತು ಒತ್ತಾಯ ತಾಳಲಾರದ ನನ್ಗಳ ಅಸಹಾಯಕ ಸ್ಥಿತಿ, ಆತ್ಮಹತ್ಯೆ, ಕೊಲೆ...- ಇತ್ಯಾದಿ ಸಂಗತಿಗಳು ಅವರ ಪುಸ್ತಕದ ವಸ್ತು. ಬೆಂಗಳೂರಿನ ಹಿರಿಯ ಪಾದ್ರಿಯೊಬ್ಬ ಲಾಲ್ಬಾಗ್ಗೆ ಕರೆದೋಯ್ದು ಅಲ್ಲಿ ಕುಳಿತಿದ್ದ ಯುವ ಜೋಡಿಗಳನ್ನು ತಮಗೆ ತೋರಿಸಿದ್ದು; ಅನಂತರ ಕೋಣೆಗೆ ಕರೆತಂದು ತಮ್ಮನ್ನು ವಿವಸ್ತ್ರಗೊಳಿಸಿದ್ದು -ಎಲ್ಲವನ್ನೂ ಆಕೆ ತೆರೆದಿಟ್ಟಿದ್ದಾರೆ. ಆದರೆ ಭಾರತದ ಕ್ಯಾಥೋಲಿಕ್ ಬಿಷಪ್ ಕಾನ್ಫರೆನ್ಸ್ ಇನ್ನೂ ಯಾವುದೇ ತನಿಖೆ ಆರಂಭಿಸಿಲ್ಲ. ಪೋಪ್ ಇನ್ನೂ ಕ್ಷಮೆ ಕೇಳಿಲ್ಲ.

ಸಿಸ್ಟರ್ ಜಸ್ಮೀ ಸಾಮಾನ್ಯ ಹುಡುಗಿಯಲ್ಲ. ತಾನೇನು ಬರೆದಿದ್ದೇನೆ ಎಂಬ ಪರಿಜ್ಞಾನ, ವಿವೇಚನೆ ಇರುವ ವಿದ್ಯಾವಂತ ಪೌಢ ಮಹಿಳೆ ಅವರು. ತ್ರಿಸ್ಸೂರಿನ ಸೇಂಟ್ ಮೇರಿಸ್ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದವರು. ಕಳೆದ ವರ್ಷ `ಮೇಲಿನವರ ಕಿರುಕುಳ ತಾಳಲಾರದೇ' ಕೆಲಸ ಬಿಟ್ಟರು. ಚಚರ್ಿನ ಅವ್ಯವಹಾರಗಳನ್ನು ಬಯಲಿಗೆ ಎಳೆಯುವುದಾಗಿ ಶಪಥ ತೊಟ್ಟರು. ಅವರನ್ನು ಚಚರ್ು `ಹುಚ್ಚಿ' ಎಂದಿತು! ಅವರನ್ನು ಹುಚ್ಚಾಸ್ಪತ್ರೆಗೆ ಹಾಕಿಸಲು ಪಾದ್ರಿಗಳು ಎರಡು ಬಾರಿ ಯತ್ನಿಸಿದರಂತೆ!

ಅಪಸ್ವರ ತೆಗದು ಸತ್ಯ ಬಯಲುಮಾಡುವವರಿಗೆಲ್ಲ `ಹುಚ್ಚರ ಪಟ್ಟ' ಕಟ್ಟುವುದು ಹೊಸ ವಿಷಯವೇನಲ್ಲ. ಕೇರಳದ ಮತ್ತೊಬ್ಬ ನನ್, 59 ವರ್ಷದ ತ್ರೀಸಾ ಥಾಮಸ್ ಸಹ ಇದೇ ಸಮಸ್ಯೆ ಎದುರಿಸಿದ್ದರು. ಕೊಲ್ಲಮ್ ಜಿಲ್ಲೆಯ ಆಂಚಲ್ನಲ್ಲಿರುವ ಡಿವೈನ್ ಮೇರಿ ಕಾನ್ವೆಂಟಿನವರು ಆಕೆ. ತಮ್ಮ ಕಾನ್ವೆಂಟಿನ ಅವ್ಯವಹಾರಗಳ ಬಗ್ಗೆ ಆಕೆ ಬರೆಯಲು ಹೊರಟಾಗ ಆಕೆಯನ್ನು ಬಲವಂತವಾಗಿ ಹೊತ್ತೋಯ್ದು ಒಂದು ತಿಂಗಳ ಕಾಲ ಹುಚ್ಚಾಸ್ಪತ್ರೆಯಲ್ಲಿ ಬಂಧಿಸಿ ಇಡಲಾಗಿತ್ತು! ಕೊನೆಗೆ ರಾಜ್ಯ ಸಕರ್ಾರದ ಮಹಿಳಾ ಆಯೋಗದ ಸದಸ್ಯರು ಖುದ್ದಾಗಿ ಬಂದು `ತ್ರೀಸಾ ಆರೋಗ್ಯವಾಗಿದ್ದಾರೆ' ಎಂದು ದೃಡೀಕರಿಸಬೇಕಾಯಿತು!

1992ರಲ್ಲಿ ಸಿಸ್ಟರ್ ಅಭಯಾ ಕೊಲೆಯಾದರು. ಅವರ ಶವ ಕೇರಳದ ಕೊಟ್ಟಾಯಂ ಕಾನ್ವೆಂಟಿನ ಬಾವಿಯಲ್ಲಿ ಬಿದ್ದಿತ್ತು. `ಇದು ಆತ್ಮಹತ್ಯೆ' ಎಂದು ಚಚರ್್ ಅಧಿಕಾರಿಗಳು ಹೇಳಿಕೆ ನೀಡಿದರು. ಆದರೆ ಆಕೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದುದು ಮರಣೋತ್ತರ ತನಿಖೆಯಿಂದ ತಿಳಿದುಬಂದಿತು! ಅನಂತರ 12 ತನಿಖೆಗಳು ನಡೆದವು. ಚಚರ್ು ತನಿಖಾಧಿಕಾರಿಗಳಿಗೆ ಸಹಕಾರ ನೀಡಲಿಲ್ಲ. ತನಿಖೆಗಳೂ ಸಮರ್ಪಕವಾಗಿರಲಿಲ್ಲ. ಅಭಯಾ ಕುರಿತ ವೈದ್ಯಕೀಯ ವರದಿಗಳನ್ನು ತಿರುಚಲಾಗಿದೆ ಎಂಬ ವರದಿಗಳೂ ಬಂದವು. ಪ್ರಭಾವಿಗಳೆಲ್ಲ ಸೇರಿ ಕೇಸನ್ನು ಮುಚ್ಚಿಹಾಕುತ್ತಿದ್ದಾರೆ ಎಂಬ ದನಿ ಜೋರಾದ ನಂತರ ಕಳೆದ ವರ್ಷ ಕೇರಳ ಹೈಕೋಟರ್್ ಸಿಬಿಐ ತನಿಖೆಗೆ ಆದೇಶ ನೀಡಿತು. ಅನಂತರ ಅಭಯಾ ಕೇಸು ಸಿಬಿಐ ಕೈಗೆ ಬಂದಿತು. ಇಬ್ಬರು ಕ್ಯಾಥೋಲಿಕ್ ಪಾದ್ರಿಗಳನ್ನು ಬಂಧಿಸಲಾಯಿತು. ಮೊಕದ್ದಮೆಯ ತನಿಖೆ ಇನ್ನೂ ನಡೆಯುತ್ತಿದೆ.

ಇದು ಕರಾಳ ವಾಸ್ತವತೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಅಮೆರಿಕದ ಕ್ಯಾಥೋಲಿಕ್ ಕಾಮಲೀಲೆಗಳನ್ನೂ ಮೀರಿಸುವ ಕಾಮಲೀಲೆಗಳು ಭಾರತದಲ್ಲಿ ಚಚರ್ುಗಳಲ್ಲಿ ಇರಬಹುದು ಎನಿಸದಿರದು. ಕಳೆದ 20 ವರ್ಷಗಳಲ್ಲಿ ಕೇರಳದ ಹಲವಾರು ನನ್ಗಳು `ಆತ್ಮಹತ್ಯೆ'ಗೆ ತುತ್ತಾದ ವರದಿಗಳು ಸ್ಥಳಿಯ ಮಾಧ್ಯಮಗಳಲ್ಲಿ ಬಂದಿವೆ. ಕಳೆದ ಎರಡು ವರ್ಷಗಳಲ್ಲೇ ಇಂತಹ 10-12 ವರದಿಗಳು ಪ್ರಕಟವಾಗಿವೆ.

ಒಂದು ಉದಾಹರಣೆ. ನೋಡೋಣ. ಕಳೆದ ವರ್ಷ ಕೊಲ್ಲಮ್ ಪಟ್ಟಣದಲ್ಲಿ 24 ವರ್ಷದ ಸಿಸ್ಟರ್ ಅನೂಪಾ ಮೇರಿ `ಆತ್ಮಹತ್ಯೆ'ಗೆ ಶರಣಾದಳು. ಆಕೆಯ ಶವ ಕಾನ್ವೆಂಟಿನಲ್ಲಿ ನೇತಾಡುತ್ತಿತ್ತು. ಆಕೆಯ ತಂದೆ ಅದೇ ಚಚರ್ಿನಲ್ಲಿ ಅಡುಗೆ ಮಾಡುತ್ತಿದ್ದ. ಅನೂಪಾ ತನ್ನ ಕಾನ್ವೆಂಟಿನ ಪ್ರಮುಖಳ ವಿಕೃತ ಸಲಿಂಗ ಕಾಮಕ್ಕೆ ಬಲಿಯಾದಳು ಎನ್ನುತ್ತಾನೆ ಆತ. ಅದನ್ನೇ ಸೂಚಿಸುವ ಹಾಗೆ ಸ್ವತಃ ಅನೂಪಾ ಚೀಟಿ ಬರೆದಿಟ್ಟಿದ್ದಳು.

ಇಂತಹ ಕೆಲವು ಪ್ರಕರಣಗಳು ಕೇರಳದ ಮಹಿಳಾ ಆಯೋಗದ ಗಮನವನ್ನು ಸೆಳೆದಿವೆ. ಈ ಕುರಿತು ವಿವರವಾದ ತನಿಖೆ ಆಗಲೇಬೆಕೆಂದು ಆಯೋಗ ಒತ್ತಾಯ ಮಾಡುತ್ತಲೇ ಬಂದಿದೆ. ಆದರೆ ನಮ್ಮ ದೇಶದಲ್ಲಿ ಚಚರ್ು, ಮಸೀದಿಗಳ ಒಳವಿಷಯಗಳ ತನಿಖೆ ಎಂದಾದರೂ ಆಗಿದೆಯೆ? ಶಂಕರಾಚಾರ್ಯರನ್ನು ಬಂಧಿಸುವ `ಸೆಕ್ಯೂಲರ್' ರಾಜಕಾರಣಿಗಳು ಮೌಲಾನಾ, ಆಚರ್್ಬಿಷಪ್ಗಳ ಕಡೆ ತಲೆಯಿಟ್ಟೂ ಮಲಗುವುದಿಲ್ಲ.

ಈಗ ಯೂರೋಪಿನಲ್ಲಿ ನನ್ಗಳಾಗಲು ಯಾವ ಬಿಳಿ ಮಹಿಳೆಯೂ ಮುಂದೆ ಬರುತ್ತಿಲ್ಲ. ಜಗತ್ತಿಗೆಲ್ಲ ನನ್ಗಳನ್ನು ಒದಗಿಸುವ ಹೊಣೆಯನ್ನು ಕೇರಳದ ಚಚರ್ುಗಳು ಹೊತ್ತುಕೊಂಡಿವೆ. ಹೀಗಾಗಿ ರಾಜ್ಯದ ಬಡ ಹೆಣ್ಣುಮಕ್ಕಳನ್ನು ಬಲವಂತವಾಗಿ ನನ್ಗಳನ್ನಾಗಿ ಮಾಡಲಾಗುತ್ತಿದೆ, ಅವರ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ವರದಿಗಳಿವೆ. ಈ ಕುರಿತು ರಾಜ್ಯದ ಮಹಿಳಾ ಆಯೋಗವೂ ದನಿ ಎತ್ತಿದೆ. ಆದರೆ ಅದು ರಾಜಕಾರಣಿಗಳಿಗೆ ಮಾತ್ರ ಕೇಳಿಸಿಲ್ಲ.

ಕ್ಯಾಥೊಲಿಕ್ ಚಚರ್ಿನ, ಕಾನ್ವೆಂಟಿನ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿರುವುದಾದರೂ ಏನು? ಕೇರಳದ ಕ್ಯಾಥೋಲಿಕ್ ಚಚರ್ು ಕಾಮುಕರ, ಕ್ರಿಮಿನಲ್ಗಳ ಅಡ್ಡೆಯಾಗಿದೆಯೆ? ದೇವರ ಹೆಸರಿನಲ್ಲಿ ಬ್ರಹ್ಮಚರ್ಯದ ಪ್ರಮಾಣ ಮಾಡುವವರ ಕಾಮಾಗ್ನಿ ಏಕೆ ಇಷ್ಟೊಂದು ಪ್ರಖರವಾಗಿದೆ?

ಸ್ವಲ್ಪವಾದರೂ ಮಯರ್ಾದೆ ಉಳಿಯಬೇಕಾದರೆ ರೋಮನ್ ಕ್ಯಾಥೋಲಿಕ್ ಚಚರ್ು ಈ ಕುರಿತು ತನಿಖೆ ಮಾಡಬೇಕು. ಅಮೆರಿಕದಂತೆ ಭಾರತದಲ್ಲಿಯೂ ಅದು ತನ್ನ ಜವಾಬ್ದಾರಿ ಅರಿತು ವತರ್ಿಸಬೇಕು. ಜೊತೆಗೆ ತನ್ನ ಹಳೆಯ ನಿಯಮವನ್ನು ಬದಲಿಸಿ ಪಾದ್ರಿಗಳಿಗೆ ಮತ್ತು ನನ್ಗಳಿಗೆ ವಿವಾಹವಾಗಲು ಅನುಮತಿ ನೀಡುವುದು ಒಳ್ಳೆಯದು. ಇಲ್ಲದಿದ್ದರೆ ಅತೃಪ್ತ, ವಿಕೃತ ಮತಾಧಿಕಾರಿಗಳು ಚಚರ್ಿನ ಹಾಗೂ ಜನರ ಮಯರ್ಾದೆ ಉಳಿಸುವುದಿಲ್ಲ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ