ಇವರು ಇತರರಿಗೆ ಕಾಣದ್ದನ್ನು ನೋಡಬಲ್ಲ ಸೂಕ್ಷ್ಮದಶರ್ಿಯೆ? ತನ್ನ ದೇಶದ, ತನ್ನ ಓರಗೆಯ ಅನೇಕರು ಗ್ರಹಿಸಲಾಗದ ವಾಸ್ತವವನ್ನು ಇವರು ಸ್ವಲ್ಪ ಮಟ್ಟಿಗಾದರೂ ಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆಯೆ?
- ಅವರ 1993ರ ಪ್ರಬಂಧವನ್ನು ಓದಲು ಆರಂಭಿಸಿದಾಗ ನನ್ನ ಮನಸ್ಸಿನಲ್ಲಿ ತಕ್ಷಣ ಎದ್ದಿದ್ದ ಪ್ರಶ್ನೆಗಳು ಇವು. ಅನಂತರ 1998ರಲ್ಲಿ ಅವರ ಪುಸ್ತಕವನ್ನೂ ಓದಿದ ನಂತರ ಅವರ ವಿಚಾರ ಹೆಚ್ಚು ಸ್ಪಷ್ಟವಾಯಿತು.
ಅವರು ವಿಶ್ವದ ಬಹು ಚಚರ್ಿತ ಲೇಖಕಲ್ಲೊಬ್ಬರು. ತನ್ನ ಕೃತಿ `ದಿ ಕ್ಲ್ಯಾಶ್ ಆಫ್ ಸಿವಿಲೈಝೇಷನ್ಸ್: ರಿಮೇಕಿಂಗ್ ಆಫ್ ವಲ್ಡರ್್ ಆರ್ಡರ್' (ನಾಗರಿಕತೆಗಳ ಸಂಘರ್ಷ: ವಿಶ್ವವ್ಯವಸ್ಥೆಯ ಮರುನಿಮರ್ಾಣ) ಮೂಲಕ ತೀವ್ರ ಸಂಚಲನ ಸೃಷ್ಟಿಸಿ ಮನೆಮಾತಾದ ಹಾರ್ವಡರ್್ ಪ್ರೊಫೆಸರ್. ಅವರ ಹೆಸರು: ಸ್ಯಾಮ್ಯುಯೆಲ್ ಪಿ. ಹಂಟಿಗ್ಟನ್.
ಈಗ ಸ್ಯಾಮ್ಯುಯೆಲ್ ಹಂಟಿಗ್ಟನ್ ಬಗ್ಗೆ ಬರೆಯಲು ಕಾರಣ ಇಷ್ಟೇ. ಈ ವಿದ್ವಾಂಸ ಈಚೆಗೆ (ಡಿಸೆಂಬರ್24, 2008) ತನ್ನ 82ನೇ ವರ್ಷದಲ್ಲಿ ವಿಧಿವಶರಾದರು. ಅವರ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ಈಗ ಕಾಲವೇ ಉತ್ತರ ಹೇಳಲು ಆರಂಭಿಸಿದೆ. ಅವರ ಬರಹಗಳು ಇನ್ನೂ ಹಲವಾರು ವರ್ಷಗಳ ಕಾಲ ಚಚರ್ಿಸಲ್ಪಡುತ್ತವೆ. ಅವರ ವಿಚಾರ ಪೂರ್ಣವಾಗಿ ತಳ್ಳಿಹಾಕುವಂತಹುದಲ್ಲ ಎಂಬ ಅಭಿಪ್ರಾಯ ಈಗ ಬಲ ಪಡೆಯುತ್ತಿದೆ. ಅವರು ಸೂಕ್ಷ್ಮದಶರ್ಿ ಹಾಗೂ ದೂರದಶರ್ಿ ಎಂದು ನಾವು ಒಪ್ಪಲೇಬೇಕಾಗುತ್ತದೆ.
ಶೀತಲ ಸಮರೋತ್ತರ ಕಾಲದಲ್ಲಿ ಜನರ ಮತೀಯ ಹಾಗೂ ಸಾಂಸ್ಕೃತಿಕ ಅಸ್ಮಿತೆಗಳೇ (ಐಡೆಂಟಿಟಿಸ್) ಜಾಗತಿಕ ಮಟ್ಟದ ಸಂಘರ್ಷಗಳಿಗೆ ಕಾರಣವಾಗುತ್ತವೆ ಎಂಬುದು ಅವರ ಸಿದ್ಧಾಂತವಾಗಿತ್ತು. ಅದರಲ್ಲೂ ವಿಶೇಷವಾಗಿ ಇಸ್ಲಾಮೀ ಮೂಲಭೂತವಾದ ಜಾಗತಿಕ ಸಮಸ್ಯೆಯಾಗಿ ಪರಿಣಮಿಸುತ್ತದೆ ಎಂಬುದು ಅವರ ಪ್ರತಿಪಾದನೆಯಾಗಿತ್ತು. ಅವರು 1993ರಲ್ಲಿ ಮೊದಲಬಾರಿಗೆ ಇದನ್ನು ಬರೆದಾಗ `ಅದೆಲ್ಲ ಸಾಧ್ಯವೇ ಇಲ್ಲ' ಎಂದು ತಳ್ಳಿಹಾಕಿದವರೇ ಹೆಚ್ಚುಮಂದಿ. ಇದಕ್ಕೆ ಕಾರಣ ಅಂದಿನ ಪರಿಸ್ಥಿತಿ.
1991-92ರಲ್ಲಿ ಸೋವಿಯತ್ ಒಕ್ಕೂಟ ಸಂಪೂರ್ಣವಾಗಿ ಪತನವಾದಾಗ ಶೀತಲ ಸಮರಕ್ಕೆ `ಅಧಿಕೃತ' ತೆರೆ ಬಿದ್ದಂತಾಯಿತು. ಅಮೆರಿಕ ತಾನೇ ವಿಜಯಿ ಎಂದು ಭಾವಿಸಿತು. ಚೀನಾ ಇನ್ನೂ ಏಷ್ಯಾದ ದೈತ್ಯ ಎನಿಸಿರಲಿಲ್ಲ. ಭಾರತದಲ್ಲಿ ಆಗಷ್ಟೇ ಆಥರ್ಿಕ ಸುಧಾರಣೆಗಳು ಆರಂಭವಾಗಿದ್ದವು. ಚಿನ್ನ ಒತ್ತೆ ಇಟ್ಟು ದೇಶ ದಿವಾಳಿಯಾಗಿತ್ತು. ಲೈಸೆನ್ಸ್-ಕೋಟಾ ವ್ಯವಸ್ಥೆಯಿಂದ ಹೊರಬಂದು ಸರಾಗವಾಗಿ ಉಸಿರಾಡುವುದೇ ನಮ್ಮ ಅಂದಿನ ಆಥರ್ಿಕ ಆದ್ಯತೆಯಾಗಿತ್ತು. ಇನ್ನು ಜಪಾನ್ ಆಥರ್ಿಕವಾಗಿ ದೈತ್ಯನಾದರೂ ಒಂದು ಮಿಲಿಟರಿ ಶಕ್ತಿಯಾಗಿ ಅಮೆರಿಕದ ಅವಲಂಬಿಯೇ. ಜೊತೆಗೆ ಪಶ್ಚಿಮ ಏಷ್ಯಾದಲ್ಲಿ ಸದ್ದಾಂ ಹುಸೇನ್ ಯುದ್ಧದಿಂದ ನಲುಗಿದ್ದ. ಸೌದಿ ದೊರೆ ಅಮೆರಿಕದ ಮುಲಾಜಿಲ್ಲದೇ ಏನೂ ಮಾಡಲಾರದವನಾಗಿದ್ದ.
ಈ ಪರಿಸ್ಥಿತಿ ನೋಡಿದಾಗ ಏನು ಅನಿಸುತ್ತದೆ? ಜಗತ್ತು ಮುಂದೆ ಯಾವ ರೀತಿಯಲ್ಲಿ ಮುನ್ನಡೆಯುತ್ತದೆ ಎಂದು ಕೇಳಿದರೆ ಏನು ಹೇಳಬಹುದು? ಈ ಕುರಿತು ಸಾಮಾನ್ಯವಾಗಿ ಯಾವ ರೀತಿಯ ವಿಶ್ಲೇಷಣೆ ಹೊರಹೊಮ್ಮುತ್ತದೆ?
ಅನೇಕರು ಭಾವಿಸಿದ್ದು ಹೀಗೆ: ಅಮೆರಿಕಕ್ಕೆ ಸವಾಲು ಹಾಕುವ ಎಲ್ಲ ಶಕ್ತಿಗಳೂ ದುರ್ಬಲವಾಗಿವೆ; ವಿಶ್ವದಲ್ಲಿ ಅಮೆರಿಕ ಏಕೈಕ ಪ್ರಬಲ ರಾಷ್ಟ್ರವಾಗಿದೆ; ವಿಶ್ವ `ಯೂನಿಪೋಲಾರ್' ಆಗಿದೆ; ಅಮೆರಿಕದ ನಾಯಕತ್ವದಲ್ಲಿ ಸಂಘರ್ಷರಹಿತ ಹಾಗೂ ಹಿಂಬಾಲಕ ನಾಗರಿಕತೆ ವಿಶ್ವದಲ್ಲಿ ಮುನ್ನಡೆಯುತ್ತದೆ.
ಈ ರೀತಿಯ `ಮುನ್ಸೂಚನೆ' ಪಡೆದು ತಮ್ಮ `ಮುನ್ನೋಟ' ಬೀರಿದವರ ಪೈಕಿ ಪ್ರಮುಖನೆಂದರೆ ಫ್ರಾನ್ಸಿಸ್ ಫೂಕುಯಾಮಾ. ಅಮೆರಿಕದ ಈ ಪ್ರಭಾವಶಾಲಿ ರಾಜಕೀಯ-ಆಥರ್ಿಕ ತಜ್ಞ 1989ರಲ್ಲಿ `ನ್ಯಾಷನಲ್ ಇಂಟೆರೆಸ್ಟ್' ನಿಯತಕಾಲಿಕದಲ್ಲಿ ಒಂದು ಪ್ರಬಂಧ ಬರೆದ. ಅದರ ಶೀಷರ್ಿಕೆ `ದಿ ಎಂಡ್ ಆಫ್ ಹಿಸ್ಟರಿ'. ಮುಂದೆ 1992ರಲ್ಲಿ ಅದೇ ಪ್ರಬಂಧವನ್ನು ವಿಸ್ತರಿಸಿ ಆತ ಬರೆದ ಪುಸ್ತಕದ ಶೀಷರ್ಿಕೆ: `ದಿ ಎಂಡ್ ಆಫ್ ಹಿಸ್ಟರಿ ಅಂಡ್ ದಿ ಲಾಸ್ಟ್ ಮ್ಯಾನ್'. ಆತನ ಆಲೋಚನೆಗಳು ಅನೇಕರನ್ನು ಪ್ರಭಾವಿಸಿದವು.
ಮನುಷ್ಯಕುಲದ ವೈಚಾರಿಕ ವಿಕಾಸ ಈಗ ಮುಗಿದಿದೆ; ಪಶ್ಚಿಮದ ಉದಾರವಾದಿ ಪ್ರಜಾತಂತ್ರವೇ ಮನುಕುಲ ಸೃಷ್ಸಿಸಿದ ಅಂತಿಮ ವೈಚಾರಿಕತೆ. ಅದೇ ಮುಂದಿನ ಕಾಲಕ್ಕೆ ದಾರಿದೀಪ. ಅದೇ ಮಾನವ ಸಕರ್ಾರದ ಅಂತಿಮ ರೂಪ -ಎಂಬುದು ಅವನ ವಾದವಾಗಿತ್ತು. ಅಮೆರಿಕಕ್ಕೆ ಸವಾಲು ಹಾಕುವವರು ಯಾರೂ ಇಲ್ಲ. ಅದರ ನಾಯಕತ್ವದಲ್ಲೇ ಜಗತ್ತು ಮುನ್ನಡೆಯುತ್ತದೆ ಎಂಬುದು ಅವನ `ಮುನ್ನೋಟ'ವಾಗಿತ್ತು.
`ನಾವು ಬರೀ ಶೀತಲಸಮರದ ಅಂತ್ಯವನ್ನು ಮಾತ್ರ ನೋಡುತ್ತಿಲ್ಲ. ಅಥವಾ ಶೀತಲ ಯುದ್ದೋತ್ತರ ಅವಧಿಯ ಇತಿಹಾಸದ ಮುನ್ನಡೆಯನ್ನು ಮಾತ್ರವೇ ಕಾಣುತ್ತಿಲ್ಲ. ನಾವು ವಾಸ್ತವವಾಗಿ ಈಗ ಕಾಣುತ್ತಿರುವುದು ಸ್ವಯಂ ಇತಿಹಾಸದ ಅಂತ್ಯವನ್ನು. ಅಂದರೆ ಇದು ಮಾನವ ಕುಲದ ವೈಚಾರಿಕ ವಿಕಾಸದ ಅಂತಿಮ ಹಂತ. ಇಲ್ಲಿಂದ ಮುಂದಕ್ಕೆ ಪಶ್ಚಿಮದ ಉದಾರವಾದಿ ಪ್ರಜಾತಂತ್ರ ಮಾನವಕುಲದ ಅಂತಿಮ ಸಕರ್ಾರೀ ಸ್ವರೂಪವಾಗಿ ಸರ್ವವ್ಯಾಪಿಯಾಗುತ್ತದೆ' ಎಂದು ಫೂಕುಯಾಮಾ ಬರೆದಿದ್ದ. `ಇಲ್ಲಿಗೆ ಕಥೆ ಮುಗಿಯಿತು. ಅನಂತರ ಎಲ್ಲರೂ ರಾಜನ ನೆರಳಿನಲ್ಲಿ ಸುಖವಾಗಿದ್ದರು' ಎಂಬ ಅಜ್ಜಿಕಥೆ ಮಕ್ಕಳಲ್ಲಿ ನೀಡುವಂತಹ ತೃಪ್ತಿಯನ್ನು ಫೂಕುಯಾಮಾ ನೀಡಿದ್ದ ವಿಶ್ಲೇಷಣೆ ಅನೇಕರಲ್ಲಿ ಮೂಡಿಸಿತ್ತು. ಮುಂದೆ ಮತೀಯತೆ ಒಡ್ಡಬಹುದಾದ ಜಾಗತಿಕ ಸವಾಲುಗಳ ಸುಳಿವು ಫುಕೂಯಾಮಾ ಮತ್ತು ಅವನ ತರಹದ ಅಮೆರಿಕನ್ ಚಿಂತಕರಿಗೆ ಸಿಗಲಿಲ್ಲ. ಆ ಸುಳಿವು ಸಿಕ್ಕಿದ್ದು ಬನರ್ಾಡರ್್ ಲೂಯಿಸ್ ಹಾಗೂ ಸ್ಯಾಮ್ಯುಯೆಲ್ ಹಂಟಿಗ್ಟನ್ಗೆ.
1990 ರಲ್ಲಿ ಬನರ್ಾಡ್ ಲೂಯಿಸ್, ಮುಸ್ಲಿಮರು ಏಕೆ ಪಶ್ಚಿಮವನ್ನು ದ್ವೇಷಿಸುತ್ತಾರೆ ಎಂದು ವಿಶ್ಲೇಷಿಸಿದ್ದಲ್ಲದೇ ಈ ದ್ವೇಷ ಬಹುಬೇಗ ರಾಜಕೀಯ ಹಾಗೂ ಮಿಲಿಟರಿ ಆಯಾಮವನ್ನು ತೆಗೆದುಕೊಳ್ಳುತ್ತದೆ ಎಂದೂ ಬರೆದಿದ್ದರು. ಆದರೆ ಅನಂತರ ಬಂದ ಫೂಕುಯಾಮಾನ ಬಿರುಗಾಳಿಯಲ್ಲಿ ಅದು ತೂರಿಹೋಯಿತು. ಫೂಕುಯಾಮಾ ವಾದವನ್ನು ಒಪ್ಪದ ಹಂಟಿಗ್ಟನ್ 1993ರಲ್ಲಿ `ಪಾರಿನ್ ಅಫೇರ್ಸ್' ನಿಯತಕಾಲಿಕದಲ್ಲಿ `ಕ್ಲ್ಯಾಶ್ ಆಫ್ ಸಿವಿಲೈಝೇಷನ್ಸ್?' ಎಂಬ ಪ್ರಬಂಧ ಬರೆದರು. 1996ರಲ್ಲಿ ಈ ಪ್ರಬಂಧವನ್ನು ವಿಸ್ತರಿಸಿ ಮೇಲೆ ಹೆಸರಿಸಿದ ಪುಸ್ತಕ ಬರೆದು ತಮ್ಮ ಸಿದ್ಧಾಂತ ಮಂಡಿಸಿದರು.
1927ರಲ್ಲಿ ನ್ಯೂಯಾಕರ್್ ನಗರದಲ್ಲಿ ಜನಿಸಿದ ಹಂಟಿಗ್ಟನ್ 18ನೇ ವರ್ಷದಲ್ಲೇ ಪದವಿಧರರಾದವರು. ತಕ್ಷಣ ಪಿಎಚ್ಡಿ ಪಡೆದುಕೋಂಡು 23ನೇ ವರ್ಷಕ್ಕೇ ಹಾರ್ವಡರ್್ ವಿಶ್ವವಿದ್ಯಾಲಯದಲ್ಲಿ ಬೋಧಕರಾದವರು. ಅನಂತರ ವಿದೇಶಾಂಗ ಇಲಾಖೆ, ಶ್ವೇತಭವನಗಳಿಗೆ ಸುರಕ್ಷೆ, ವಿದೇಶ ನೀತಿಗಳ ಸಲಹೆಗಾರರಾದರು. 8 ಪುಸ್ತಕಗಳನ್ನು ಹಾಗೂ ಅಸಂಖ್ಯಾತ ಲೇಖನಗಳನ್ನು ಬರೆದರು. ಅವರ `ಕ್ಲ್ಯಾಶ್...' ಪುಸ್ತಕ ವಿಶ್ವಾದ್ಯಂತ ಮನೆಮಾತಾಯಿತು. ಅವರ ಈಚಿನ (2004) ಪುಸ್ತಕ `ಹೂ ಆರ್ ವಿ?' ಅಮೆರಿಕದ ಐಡೆಂಟಿಟಿ ಸಮಸ್ಯೆಗಳನ್ನು ಕುರಿತಾದದ್ದು.
ಜಗತ್ತಿನ ಮಟ್ಟದಲ್ಲಿ ಐಡೆಟಿಟಿ ಪಾಲಿಟಿಕ್ಸ್ ಬಹಳ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು 1990ರ ದಶಕದಲ್ಲಿ ಬಹುತೇಕರು ಊಹಿಸಿರಲಿಲ್ಲ. ಭಯೋತ್ಪಾದನೆಯ ಪರಿಚಯ ಇದ್ದವರೂ ಅದು ಜಾಗತಿಕ ಸಮಸ್ಯೆಯಾಗಲಾರದು ಎಂದೇ ನಂಬಿದ್ದರು. 2001ರ ಸೆಪ್ಟೆಂಬರ್ 11ಕ್ಕೂ ಮೊದಲು ಭಯೋತ್ಪಾದನೆಯ ವಿಷಯದಲ್ಲಿ ತಾನು ಅನುಸರಿಸುತ್ತಿರುವ `ಕಂಟೇನ್ಮೆಂಟ್' ನೀತಿ ವಿಫಲವಾಗುತ್ತದೆ ಎಂಬುದನ್ನು ಸ್ವತಃ ಅಮೆರಿಕ ಸಕರ್ಾರ ಗಂಭಿರವಾಗಿ ಭಾವಿಸಿರಲಿಲ್ಲ. ಮತೀಯ ಸಂಘರ್ಷ ಕ್ರಮೇಣ ಜಾಗತಿಕ ಸ್ವರೂಪ ಪಡೆದುಕೊಳ್ಳುತ್ತದೆ ಎಂಬ ವಾದವನ್ನು ಈಗಲೂ ಬಹುತೇಕರು ನಂಬುವುದಿಲ್ಲ. ಜಾಗತಿಕ ಮಟ್ಟದಲ್ಲಿ ಮತೀಯ, ಸಾಂಸ್ಕೃತಿಕ ಅಥವಾ ನಾಗರಿಕತೆಗಳ ಧ್ರುವೀಕರಣ ಪ್ರಕ್ರಿಯೆ ಹಂತ ಹಂತವಾಗಿ ನಡೆದು ಹೊಸ ಜಾಗತಿಕ ಸಂಘರ್ಷ ಸೃಷ್ಟಿಸುತ್ತದೆ ಎಂಬುದು ಬಹುತೇಕರ ಕಲ್ಪನೆಗೆ ಮೀರಿದ್ದು.
ಆದರೆ ಬನರ್ಾಡರ್್ ಲೂಯಿಸ್ ಮತ್ತು ಹಂಟಿಗ್ಟನ್ ವಿಚಾರಗಳು ಭಾರತೀಯರಿಗೆ ಆಶ್ಚರ್ಯ ಉಂಟುಮಾಡಬೇಕಿಲ್ಲ. ಪಾಕಿಸ್ತಾನ, ಅದರ ಜಿಹಾದ್, ಜಾಗತಿಕ ಸಮಸ್ಯೆಯಾಗುತ್ತದೆ ಎಂದು ನಾವು ಮೊದಲಿನಿಂದಲೂ ಪ್ರತಿಪಾದಿಕೊಂಡು ಬಂದಿದ್ದೇವೆ. ಆ ಕುರಿತು ಬರೆದೂ ಇದ್ದೇವೆ. ಆದರೆ ಹಂಟಿಗ್ಟನ್ ತರಹ ಅಕ್ಯಾಡೆಮಿಕ್ ಆಗಿ, ಸೊಫಿಸ್ಟಿಕೆಟೆಡ್ ಆಗಿ, ಸಮಗ್ರ ಜಾಗತಿಕ ಮುನ್ನೋಟ ಮಂಡಿಸಲು ಹೋಗಲಿಲ್ಲ.
ಹಾಗೆಂದು ನಾವು ಹಂಟಿಗ್ಟನ್ ಬರಹಗಳ ಬಗ್ಗೆ ನಾಸ್ಟ್ರಡಾಮಸ್ ಪುಸ್ತಕಗಳ ಹಾಗೆ ಚಚರ್ಿಸಬೇಕಿಲ್ಲ. ಅವರ ಎಲ್ಲ ವಿಚಾರಗಳೂ ನಮ್ಮದಾಗಬೇಕಿಲ್ಲ. ಅವರ ಚಿಂತನೆಗಳು, ವಿಚಾರಗಳು ಮೂಲತಃ ಪಶ್ಚಿಮ-ಕೇಂದ್ರಿತವಾದವುಗಳು. ಜಾಗತಿಕ ಸಂಘರ್ಷದಲ್ಲಿ ಪಶ್ಚಿಮ ಗೆಲ್ಲುವುದು ಹೇಗೆ ಎಂಬುದೇ ಅವರ ಮನದಾಳದ ತುಡಿತವಾಗಿತ್ತು. ಅವರ ಈ ಕಾಳಜಿ ಭಾರತದ ಕಾಳಜಿಯಾಗಬೇಕಿಲ್ಲ. ಆದರೆ ವಿಶ್ವದಲ್ಲಿ ಸ್ವಾತಂತ್ರ್ಯ ಮತ್ತು ಮಾನವಹಕ್ಕುಗಳನ್ನು ಉಳಿಸುವುದು ಹೇಗೆ ಎಂಬುದು ಎಲ್ಲರ ಕಾಳಜಿಯೂ ಹೌದು. ಒಂದು ವೇಳೆ ನಾಗರಿಕತೆಗಳ (ಅಥವಾ `ಅನಾಗರಿಕತೆಗಳ' ಎಂದು ಬೇಕಾದರೂ ಅನ್ನಿ) ಬೃಹತ್ ಸಂಘರ್ಷ ಅನಿವಾರ್ಯವಾದರೆ ಆ ಸಂಧರ್ಭದಲ್ಲಿ ಭಾರತದ ಸ್ಥಾನ ಯಾವುದಿರುತ್ತದೆ ಎಂಬ `ಮುನ್ನೋಟ' ಈ ಹೊತ್ತು ನಮಗೆ ಬೇಕಾಗುತ್ತದೆ.
ಮುಂದಿನ 50-100 ವರ್ಷಗಳ ಅವಧಿಯಲ್ಲಿ ಏನಾಗುತ್ತದೆ ಎಂಬುದು ನಮ್ಮ ಕಲ್ಪನೆಗೆ ನಿಲುಕುವುದು ಕಷ್ಟ. ಆದರೂ 15-20 ವರ್ಷಗಳಲ್ಲಿ ವಿಶ್ವವ್ಯವಸ್ಥೆ ಯಾವ ಸ್ವರೂಪ ತಳೆಯಬಹುದು ಎಂಬುದನ್ನು ತುಸು ಸೂಕ್ಷ್ಮನೋಟ ಇರುವವರು ಊಹಿಸಬಹುದು. ಈ ದೃಷ್ಟಿಯಿಂದ ನೋಡಿದಾಗ ಹಂಟಿಗ್ಟನ್ ಜಾಗತಿಕ ವಾಸ್ತವ ಗ್ರಹಿಕೆ ಮಾಡುವಲ್ಲಿ ಸಾಕಷ್ಟು ಯಶಸ್ವಿಯಾದರು ಎನಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ