`ಪಬ್ ಭರೋ' ಚಳವಳಿಗಾರರಿಗೆ ಇಲ್ಲಿದೆ ಸಂತಸದ ಸುದ್ದಿ! ದೇಶದ ಉಳಿದ ನಾಗರಿಕರಿಗೆ ಇದು ಆತಂಕದ ಸುದ್ದಿ.
ನವದೆಹಲಿಯ ಒಂದು ಪ್ರತಿಷ್ಠಿತ ಹೈಸ್ಕೂಲ್ ಅದು. ತರಗತಿಯೊಂದರ `ಮಾನಿಟರ್' ಹುಡುಗ (ರೇಣುಕಾ ಚೌಧರಿ ತರಹದ ಶ್ರೀಮಂತರ ಮನೆ ಹುಡುಗ) ಶಾಲೆಗೆ ಕೋಲಾ ಮತ್ತು ವಿಸ್ಕಿ ತಂದ. ಅವನು ಮತ್ತು ಅವನ ಗೆಳೆಯ ಹಾಗೂ ಗೆಳತಿಯರು ತಾವು ಕುಳಿತ ತರಗತಿಯಲ್ಲೇ `ಪಾಟರ್ಿ' ಮಾಡಲು ನಿರ್ಧರಿಸಿದರು. ಎಲ್ಲ 15-16 ವಯಸ್ಸಿನವರು. ಬಹುಬೇಗ ನಶೆ ಏರಿತು.
ತರಗತಿಗೆ ಟೀಚರ್ ಬಂದರು. ಅವರಿಗೆ ವಿದ್ಯುತ್ ಶಾಕ್ ಹೊಡೆದಂತಾಯಿತು. ಅವರು ಪ್ರಶ್ನಿಸುವ ಮೊದಲೇ ಕುಡಿದ ವಿದ್ಯಾಥರ್ಿನಿಯರಿಂದ ಟೀಚರ್ಗೆ ಅಶ್ಲೀಲ ಬೈಗುಳದ ಸುರಿಮಳೆ ಆರಂಭವಾಯಿತು. ವಿದ್ಯಾಥರ್ಿಗಳ ಅಟ್ಟಹಾಸ ಛಾವಣಿಗೇರಿತು. ಪ್ರಿನ್ಸಿಪಾಲ್ ಬಂದರು. ಮಾನಿಟರ್ ಹುಡುಗನ ಬ್ಯಾಡ್ಜ್ ಕಿತ್ತುಕೊಂಡರು. ಕುಡಿತ ಎಲ್ಲ ವಿದ್ಯಾಥರ್ಿ(?), ವಿದ್ಯಾಥರ್ಿನಿ(?) ಯರನ್ನು ಒಂದು ವಾರದ ಕಾಲ ಶಾಲೆಯಿಂದ ಸಸ್ಪೆಂಡ್ ಮಾಡಿದರು.
ಇದು ಕೇವಲ ಒಂದೆರಡು ವಾರಗಳ ಹಿಂದಷ್ಟೇ ದೆಹಲಿಯ ಪತ್ರಿಕೆಗಳಲ್ಲಿ ವರದಿಯಾದ ಸುದ್ದಿ. `ಪಬ್ ಭರೋ' ಚಳವಳಿ ಆರಂಭವಾದ ನಂತರದ ಬೆಳವಣಿಗೆ. ಮುಂದೆ ಓದಿ. ಸಸ್ಪೆಂಡ್ ಆದ ಮಕ್ಕಳು ಒಂದು ವಾರ ಕಳೆದ ನಂತರ ಮತ್ತೆ ಶಾಲೆಗೆ ಬಂದರು. ಯಾರಲ್ಲೂ ಯಾವುದೇ ತರಹದ ವಿಷಾದ ಇರಲಿಲ್ಲ. ಯಾರಿಗೂ ತಾವು ತಪ್ಪು ಮಾಡಿದ್ದೇವೆ ಎಂದು ಅನಿಸಿಯೇ ಇಲ್ಲ. ತಾವು ಮಾಡಿದ್ದು ತಪ್ಪೇನಲ್ಲ ಎಂದು ಅವರೆಲ್ಲ ಸಂದರ್ಶನಗಳಲ್ಲಿ ಹೇಳಿಕೆ ನೀಡಿದ್ದಾರೆ!
ಇದು `ಪಬ್ ಭರೋ' ಆಂದೋಲನದ ಫಲಶ್ರುತಿ. ಈಗ ಯಾರಿಗೂ ಯಾವುದರಲ್ಲೂ ಸಂಕೋಚ ಇಲ್ಲ. ಇದ್ದ ಚೂರುಪಾರು ಸಂಕೋಚಗಳೆಲ್ಲ ಮಾಧ್ಯಮಗಳ ಪ್ರಚಂಡ ಒತ್ತಾಸೆಯಿಂದಾಗಿ ಮರೆಯಾಗಿವೆ. ತಾವು ಏನೂ ಮಾಡಿದರೂ ತಪ್ಪಿಲ್ಲ ಎಂಬ ಧಾಷ್ಟ್ರ್ಯ ಈಗ ಮೂಡಲಾರಂಭಿಸಿದೆ. ಇದಕ್ಕೆ ರೇಣುಕಾ ಚೌಧರಿಯ `ದೃಷ್ಟಿ'ದೋಷ ಅಥವಾ `ನಾಲಿಗೆ'ದೋಷ ಕಾರಣವೋ ಅಥವಾ ಪ್ರಮೋದ್ ಮುತಾಲಿಕರ `ಹಸ್ತ'ದೋಷ ಕಾರಣವೋ ಹೇಳಲಾಗದು.
ವಾಸ್ತವವಾಗಿ ಇದು ಸ್ವಲ್ಪ ಹಳೆಯ ಸಮಸ್ಯೆಯೇ. ಯುವಜನರ ಮಧ್ಯದಲ್ಲಿ `ಪಬ್ ಭರೋ' ಪ್ರಕ್ರಿಯೆ ಕೆಲವು ವರ್ಷಗಳಿಂದಲೇ ನಡೆಯುತ್ತಿದೆ. ಆದರೆ ಅದಕ್ಕೆ ಒಂದು `ಚಳವಳಿ'ಯಂತಹ `ಸ್ಥಾನಮಾನ' ಹಾಗೂ `ಗೌರವ-ಘನತೆ' ಈಗ ಒದಗಿರಬಹುದು.
`ಕ್ಯಾಂಪೇನ್ ಎಗೇನ್ಸ್ಟ್ ಡ್ರಿಂಕಿಂಗ್ ಅಂಡ್ ಡ್ರೈವಿಂಗ್' (ಸಿಎಡಿಡಿ) ಸಂಸ್ಥೆ ಡಿಸೆಂಬರ್ 2008 ಮತ್ತು ಜನವರಿ 2009ರಲ್ಲಿ ಒಂದು ರಾಷ್ಟ್ರೀಯ ಸಮೀಕ್ಷೆ ನಡೆಸಿದೆ. ಅದರ ಪ್ರಕಾರ, ದೇಶಾದ್ಯಂತ ಈಗ ಕುಡಿತದ ಕ್ರ್ರಾಂತಿಯೇ ಆರಂಭವಾಗಿದೆ. 1990ರಲ್ಲಿ ಕುಡಿಯುವವರ ಪೈಕಿ ಕನಿಷ್ಠ ವಯೋಮಾನ 28 ವರ್ಷವಾಗಿತ್ತು. ಈಗ ಅದು 19 ವರ್ಷಕ್ಕೆ ಇಳಿದಿದೆ. ಇನ್ನು 5 ವರ್ಷಗಳಲ್ಲಿ ಇದು 15 ವರ್ಷಕ್ಕೆ ಇಳಿಯುವ ಸಾಧ್ಯತೆಗಳಿವೆ. ಈಚೆಗೆ ದೆಹಲಿ, ಬೆಂಗಳೂರು ಮುಂತಾದ ಮಹಾನಗರಗಳ ಶ್ರೀಮಂತರ ಹದಿಹರೆಯದ ಮಕ್ಕಳು ಮನೆ, ಶಾಲೆ ಎನ್ನದೇ ಎಲ್ಲೆಂದರಲ್ಲಿ ರಾಜಾರೋಷವಾಗಿ ಕುಡಿಯಲು ಶುರು ಮಾಡಿಕೊಂಡಿದ್ದಾರೆ. ಇನ್ನು 5 ವರ್ಷಗಳಲ್ಲಿ ಈ ವ್ಯಾಧಿ ಮಧ್ಯಮವರ್ಗಕ್ಕೂ ಬಡಿಯುತ್ತದೆ.
ಈ ಸಮೀಕ್ಷಾ ಅಧ್ಯಯನದ ಪ್ರಕಾರ ಈಗ ನಗರಗಳ ಪಬ್ಗಳಲ್ಲಿ ಕುಡಿಯುವವರ ಪೈಕಿ ಶೇ. 80 ರಷ್ಟು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಶೇ. 67ರಷ್ಟು 21 ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನವರು. 18-21ರ ನಡುವಣ ಪ್ರಾಯದ ಕುಡುಕರ ಪೈಕಿ ಶೇ. 96 ರಷ್ಟು ಮಂದಿ ಒಂದು ಬಾರಿಗೆ ಐದಕ್ಕಿಂತಲೂ ಹೆಚ್ಚು ಡ್ರಿಂಕ್ಗಳನ್ನು ತೆಗೆದುಕೊಳ್ಳುತ್ತಿದ್ದಾರೆ! ನೆನಪಿರಲಿ, ಎರಡು ಡ್ರಿಂಕ್ಗಳಿಗಿಂತಲೂ ಹೆಚ್ಚು ತೆಗೆದುಕೊಳ್ಳುವುದು ಆರೋಗ್ಯವಂತ ವಯಸ್ಕ ಪುರುಷರಿಗೂ ಅಪಾಯಕಾರಿ.
ಪ್ರಾಸಂಗಿಕವಾಗಿ ಹೇಳುವುದಾದರೆ, ಇದೇ ವರ್ಷದ ಜನವರಿ 12 ರಂದು ಬ್ರಿಟನ್ನಿನಾದ್ಯಂತ 20 ವರ್ಷ ತುಂಬಿದ 13,30,000 ಯುವಜನರು `ಹುರ್ರೇ' ಎಂದು ಖುಷಿಪಟ್ಟರು. ದೇಶಾದ್ಯಂತ ಸಮಾರಂಭಗಳು ನಡೆದವು. ಭಾಗವಹಿಸಿದ ತರುಣ-ತರುಣಿಯರೆಲ್ಲ `ನಾವೂ ವಯಸ್ಕರಾದೆವು' ಎಂದು ಸಾರ್ವಜನಿಕವಾಗಿ ಘೋಷಿಸಿ ಖುಷಿಪಟ್ಟರು! ಏಕೆ ಈ ಸಡಗರ? ಸೈನ್ಯ ಸೇರಲು ಅರ್ಹತೆ ಲಭಿಸಿತು ಎಂದಲ್ಲ. ಇನ್ನುಮುಂದೆ ತಮಗೆ ಕುಡಿಯಲು ಅನುಮತಿ ಸಿಗುತ್ತದೆ ಎಂಬ ಸಂಭ್ರಮ ಅದು! (ವಿಪಯರ್ಾಸವೆಂದರೆ, ಜನವರಿ 12 ವಿಶ್ವಕ್ಕೇ ಅದ್ಭುತ ಜೀವನ ಸಂದೇಶ ನೀಡಿದ ಸ್ವಾಮಿ ವಿವೇಕಾನಂದರ ಜನ್ಮದಿನ!).
ಬ್ರಿಟನ್ ವಿಷಯ ಬಿಡಿ. ಅಲ್ಲಿ 20ಕ್ಕೂ ಕಡಿಮೆ ವಯಸ್ಸಿನವರಿಗೆ ಆಲ್ಕೋಹಾಲ್ ನೇರವಾಗಿ ಮಾರುವುದಿಲ್ಲ. ಅವರು ಬೇರೆ ವಯಸ್ಕರಿಂದ ತರಿಸಿಕೊಂಡು ಕುಡಿಯಬಹುದು! ಅಮೆರಿಕದಲ್ಲಿ ಸ್ವಲ್ಪ ಸ್ಟ್ರಿಕ್ಟ್. ಅಲ್ಲಿ ಆಲ್ಕೋಹಾಲ್ ಕೊಳ್ಳಲು ಹಾಗೂ ಕುಡಿಯಲು 21 ವರ್ಷಗಳಾಗಿರಲೇಬೇಕು. ಅದಕ್ಕೂ ಚಿಕ್ಕ ಪ್ರಾಯದವರಿಗೆ ಪಬ್ಗಳ ಒಳಗೂ ಬಿಡುವುದಿಲ್ಲ. ಸ್ವಲ್ಪ ಅನುಮಾನ ಬಂದರೂ ವಯಸ್ಸಿನ ದೃಡೀಕರಣ ಕೇಳುತ್ತಾರೆ. ಯಾವುದಾದರೂ ಸ್ವೀಕಾರಾರ್ಹ ಐಡೆಂಟಿಟಿ ಕಾಡರ್್ಗಳನ್ನು ತೋರಿಸಬೇಕಾಗುತ್ತದೆ.
ಆದರೆ ಭಾರತದಲ್ಲಿ 16 ವರ್ಷದವರು ಪಬ್ಗೆ ಹೋದರೂ ಮುಕ್ತ ಸ್ವಾಗತ ಸಿಗುತ್ತದೆ. ಇಲ್ಲೂ ಅಪ್ರಾಪ್ತ ವಯಸ್ಕರಿಗೆ ಆಲ್ಕೋಹಾಲ್ ಡ್ರಿಂಕ್ಗಳನ್ನು ಮಾರುವುದು ಕಾನೂನು ಪ್ರಕಾರ ಅಪರಾಧವೇ. ಆದರೆ ಅದೆಲ್ಲ ವಾಸ್ತವದಲ್ಲಿ ನಡೆಯುತ್ತಿಲ್ಲ. ಸಿಎಡಿಡಿ ಸಮೀಕ್ಷೆಯಲ್ಲಿ ತಿಳಿದುಬಂದಿರುವ ಹಾಗೆ ಶೇ. 33.9 ರಷ್ಟು 16 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳು ಸಕರ್ಾರದಿಂದ ಲೈಸೆನ್ಸ್ ಪಡೆದ ಬಾರ್ಗಳಿಂದಲೇ, ಪಬ್ಗಳಿಂದಲೇ ಸುಲಭವಾಗಿ ಮದ್ಯ ಕೊಂಡು ತರುತ್ತಿದ್ದಾರೆ! ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಮಾಡಿದ ಹಾಗೆ ಮಧ್ಯರಾತ್ರಿಯಲ್ಲಿ ರೆಸ್ಟೋರೆಂಟ್ ನೌಕರರಿಗೆ ಹೊಡೆದರೂ ಇಲ್ಲಿ ಕೇಳುವವರು ಇಲ್ಲ. ನಿಮ್ಮ ಕಿಸೆಯಲ್ಲಿರುವ ದುಡ್ಡು, ನಿಮ್ಮ ಅಪ್ಪನ ಸ್ಥಾನಮಾನ ಇಷ್ಟೇ ಪರಿಗಣನೆಗೆ ಬರುವುದು.
ಪ್ರತಿವರ್ಷ 21 ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನ ಸುಮಾರು 2000 ಯುವಜನರು ಕುಡಿತದ ಪರಿಣಾಮವಾಗಿ ಅಪಘಾತಗಳಲ್ಲಿ ಸಾಯುತ್ತಿದ್ದಾರೆ ಎನ್ನುತ್ತದೆ ಸಮೀಕ್ಷೆ. ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ ಆಲ್ಕೋಹಾಲ್ ವಯಸ್ಕ ಪುರುಷರಿಗಿಂತಲೂ ಮಹಿಳೆ ಮತ್ತು ಮಕ್ಕಳಿಗೆ ತೀವ್ರ ಹಾನಿಕಾರಕವಾಗಿದೆ ಎಂಬುದು ಹಲವು ವರ್ಷಗಳ ವೈಜ್ಞಾನಿಕ ಸಂಶೋಧನೆಗಳಿಂದ ಖಚಿತವಾಗಿರುವ ಸಂಗತಿ.
ಆದರೆ ನಮ್ಮ ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯ ಪ್ರಕಾರ, `ಪಬ್ ಭರೋ' ಚಳವಳಿಯೇ `ತಾಲಿಬಾನೀಕರಣ'ಕ್ಕೆ ಸರಿಯಾದ, ಪರಿಣಾಮಕಾರಿಯಾದ ಮದ್ದು! ಈಗ ಅವರು ಮತ್ತು ಅವರ `ಲೂಸ್ ಅಂಡ್ ಫಾರ್ವಡರ್್' ಬಂಧು-ಮಿತ್ರರು ಖುಷಿಪಡಲು ಅಡ್ಡಿಯಿಲ್ಲ. ನಮಗೆ ನಿಮಗೆ ಮಾತ್ರ ಆತಂಕ.
ಮುತಾಲಿಕ್, ರೇಣುಕಾ ಮತ್ತು ಕೆಲವು ಮಾಧ್ಯಮಗಳು ಅನಾವಶ್ಯಕ ತರಲೆ ತೆಗೆಯದಿದ್ದಲ್ಲಿ ಈ ಕುರಿತು ಒಂದು ಒಳ್ಳೆಯ ಚಚರ್ೆ ಸಾಧ್ಯವಾಗುತ್ತಿತ್ತೇನೋ. ಈಗ ಮಂಗಳೂರು ಪ್ರಕರಣವನ್ನು ಶ್ರೀಮಂತ ಹುಡುಗರು ತಮ್ಮದೇ ರೀತಿಯಲ್ಲಿ ಅಥರ್ೈಸಿಕೊಳ್ಳತೊಡಗಿದ್ದಾರೆ. ಅವರ ಪಾಲಿಗೆ ಈಗ ಪಬ್, ಆಲ್ಕೋಹಾಲ್ ನಿಂದಕರೆಲ್ಲ ಬರೀ ಮುತಾಲಿಕ್ಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ