ಗುರುವಾರ, ಜೂನ್ 04, 2009

ಭಯೋತ್ಪಾದರಿಗಾಗಿ ಭಾರತ ನಾಯಕರ ಕಣ್ಣೀರು!

ಚಿಕ್ಕ ದೇಶವಾದ ಶ್ರೀಲಂಕಾ ಜಗತ್ತಿನ ಅತ್ಯಂತ ಸುವ್ಯವಸ್ಥಿತ, ಸೊಪೀಸ್ಟಿಕೇಟೆಡ್ ಭಯೋತ್ಪಾದಕ ಸಂಘಟನಯನ್ನು ಮಟ್ಟಹಾಕುವುದು ಸಾಧ್ಯವಾದರೆ ಭಾರತಕ್ಕೇಕೆ ನಕ್ಸಲರನ್ನು, ಎಲ್ಟಿಟಿಇಗಳನ್ನು ಹಾಗೂ ಜಿಹಾದಿಗಳನ್ನು ಮಟ್ಟಹಾಕುವುದು ಸಾಧ್ಯವಾಗುತ್ತಿಲ್ಲ?

ಆರು ದಶಕಗಳಿಂದ ಭಯೋತ್ಪಾದನೆಗೆ ಭಾರತ ಗುರಿಯಾಗಿದೆ. ವರ್ಷದಿಂದ ವರ್ಷಕ್ಕೆ ಭಯೋತ್ಪಾದಕರ ಶಕ್ತಿ ವಧರ್ಿಸುತ್ತಲೇ ಇದೆ. ಭಯೋತ್ಪಾದನಯ ವಿರುದ್ಧ ನಮ್ಮ ದೇಶ ಜಯ ಗಳಿಸುವುದು ಯಾವಾಗ?

ನಮ್ಮ ದೇಶದ ಮುಂದೆ ಎರಡು ಉದಾಹರಣೆಗಳಿವೆ. ಎರಡೂ ನಮ್ಮ ನೆರೆ ರಾಷ್ಟ್ರಗಳದು. ಒಂದು, ಅಸಾಮಾನ್ಯ ಧೈರ್ಯ ಹಾಗೂ ರಾಜಕೀಯ ಇಚ್ಛಾಶಕ್ತಿಯಿಂದ ಉಗ್ರರನ್ನು ಮಟ್ಟಹಾಕಿದ ಶ್ರೀಲಂಕಾದ ಉದಾಹರಣೆ. ಉಗ್ರರ ಮುಂದೆ ರಾಜಕೀಯ ಪಕ್ಷಗಳೆಲ್ಲ ಸೋತು ಕೈಕಟ್ಟಿ ಶರಣಾಗಿ ಉಗ್ರರಿಗೇ ಅಧಿಕಾರ ನೀಡಿದ ನೇಪಾಳದ ಉದಾಹರಣೆ ಎರಡನೆಯದು. ಈ ಎರಡರ ಪೈಕಿ ಭಾರತ ನೇಪಾಳದ ಹಾದಿ ಹಿಡಿಯುತ್ತಿರುವುದು ದುರದೃಷ್ಟ.

ಜಗತ್ತಿನ ಯಾವ ದೇಶವೂ ಇಷ್ಟು ವರ್ಷಗಳ ಕಾಲ ಭಯೋತ್ಪಾದನೆಯನ್ನು ಸಹಿಸಿಕೊಂಡಿಲ್ಲ. ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷವೂ ನಿಣರ್ಾಯಕ ಘಟ್ಟ ಮುಟ್ಟಿದೆ. ಉತ್ತರ ಐರ್ಲ್ಯಾಂಡ್ ಭಯೋತ್ಪಾದನೆ ಬಗೆಹರಿದಿದೆ. ಶ್ರೀಲಂಕಾ ಎಲ್ಟಿಟಿಇ ವಿರುದ್ಧ ವಿಜಯ ಸಾಧಿಸಿದೆ.

ಆದರೆ ಭಾರತದಲ್ಲೇನಾಗುತ್ತಿದೆ? ಎಲ್ಟಿಟಿಇ ಅನ್ನು ರಕ್ಷಿಸಬೇಕೆಂಬ ಮಾತನ್ನು ಪ್ರಮುಖ ರಾಜಕಾರಣಿಗಳೇ ಆಡುತ್ತಿದ್ದಾರೆ! ಅವರ ವಿರುದ್ಧ ಯಾರೂ ದನಿಯೆತ್ತುತ್ತಿಲ್ಲ.

`ಎಲ್ಟಿಟಿ ಪ್ರಭಾಕರನ್ ಭಯೋತಾದಕನಲ್ಲ. ಆತ ನನ್ನ ಮಿತ್ರ. ನಾನು ಭಯೋತ್ಪಾದಕನೆ? ಹಾಗೆಯೇ ಅವನೂ ಭಯೋತ್ಪಾದಕನಲ್ಲ' ಎಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಊಳಿಡುತ್ತಿದ್ದರೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ತುಟಿ ಪಿಟಕ್ ಎನ್ನಲಿಲ್ಲ.

ಅದು ಯಾರೋ ಒಬ್ಬ ಕರುಣಾನಿಧಿ ಎಂಬ ಸಾಮಾನ್ಯ ವ್ಯಕ್ತಿಯ ಹೇಳಿಕೆಯಲ್ಲ. ಈ ಮನುಷ್ಯ ಒಂದು ರಾಜ್ಯದ ಮುಖ್ಯಮಂತ್ರಿ. `ಭಾರತದ ಸಂವಿಧಾನ, ಅಖಂಡತೆ ಹಾಗೂ ಸಾರ್ವಭೌಮತೆಗೆ ಬದ್ಧವಾಗಿದ್ದು ಅವುಗಳನ್ನು ಎತ್ತಿಹಿಡಿಯುತ್ತೇನೆ' ಎಂದು ಸಂವಿಧಾನಬದ್ಧವಾಗಿ ಪ್ರಮಾಣವಚನ ತೆಗೆದುಕೊಂಡು ಸಾಂವೈಧಾನಿಕ ಅಧಿಕಾರ ಹಿಡಿದ ವ್ಯಕ್ತಿ. ಎಲ್ಟಿಟಿಇ ಅನ್ನು ಜಗತ್ತಿನ 31 ದೇಶಗಳು ಭಯೋತಾದಕ ಸಂಘಟನೆ ಎಂದು ಘೋಷಿಸಿವೆ. ಭಾರತದಲ್ಲೂ ಅದು ನಿಷೇಧಿತ ಸಂಘಟನೆ. ಅದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಹತ್ಯೆ ಮಾಡಿರುವ ಸಂಘಟನೆ ಎಂದು ಸುಪ್ರೀಮ್ ಕೋಟರ್್ ಘೋಷಿಸಿದೆ. ಹೀಗಿರುವಾಗ ಸಂವೈಧಾನಿಕ ಹುದ್ದೆಯಲ್ಲಿರುವವರು ಅದರ ಪರವಾಗಿ ಹೇಳಿಕೆ ಕೊಡುತ್ತಿದ್ದರೆ ರಾಜೀವರ ಪತ್ನಿ ಮತ್ತು ಆಡಳಿತ ಮೈತ್ರಿಕೂಟದ ಅಧ್ಯಕ್ಷೆ ಎನಿಸಿಕೊಂಡಿರುವ, ಜಗತ್ತಿನ ಇತರ ವಿಷಯಗಳ ಮಾತೆಲ್ಲ ಆಡುವ, ಸೋನಿಯಾ ಹಾಗೂ ಅವರ ಪ್ರಕಾರ, `ಅತ್ಯಂತ ಪ್ರಬಲ ಹಾಗೂ ದಕ್ಷ ಪ್ರಧಾನಿ' ಎನಿಸಿದ್ದ ಮನಮೋಹನ್ ತುಟಿ ಎರಡು ಮಾಡದೇ ಏಕೆ ಸುಮ್ಮನಿದ್ದರು?

ಕರುಣಾನಿಧಿ ಸಹಕಾರದಿಂದ ಸಕರ್ಾರ ನಡೆಸಬೇಕು ಎಂಬ `ಪ್ರಬಲ' ಇಚ್ಛೆಯೆ? ಅಧಿಕಾರ ಇವತ್ತು ಇರುತ್ತದೆ, ಇನ್ನೊಮ್ಮೆ ಹೋಗುತ್ತದೆ. ಅದರ ಸಲುವಾಗಿ ದೇಶದ ಮಾಜಿ ಪ್ರಧಾನಿಯನ್ನು ಕೊಂದ, ಸಾವಿರಾರು ನಾಗರಿಕರನ್ನು ಹತ್ಯೆ ಮಾಡಿದ, ದೇಶದ ವಿರುದ್ಧ ಯುದ್ಧ ಘೋಷಿಸಿದ, ಹಾಗೂ ದೇಶದ ವಿರುದ್ಧ ಸಮರ ನಡೆಸುತ್ತಿರುವ ಇತರ ಭಯೋತ್ಪಾದಕ ಸಂಘಟನೆಗಳಿಗೆ ಸಹಕಾರ ನೀಡುತ್ತಿರುವ ಒಂದು ದೊಡ್ಡ ಭಯೋತ್ಪಾದಕ ಸಂಘಟನೆಯ ಪರವಾಗಿ ದೇಶದ ಒಬ್ಬ `ಸಂವಿಧಾನಬದ್ಧ' ಮುಖ್ಯಮಂತ್ರಿ ಹೇಳಿಕೆ ಕೊಡುತ್ತಿದ್ದರೆ ಅದನ್ನು ಕೇವಲ `ನಮಗೆ ಅಧಿಕಾರ ಸಿಗಲಿ' ಎಂಬ ಆಸೆಯಿಂದ ಸಹಿಸಬೇಕೆ?

ಇಂತಹ ಹೇಳಿಕೆ ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ (ಯುಎಪಿಎ) ಪ್ರಕಾರ ದಂಡಾರ್ಹ ಅಪರಾಧ. ದೇಶದ ಯಾವುದೇ ಪ್ರಜೆಯನ್ನೂ ಇವುಗಳ ಆಧಾರದ ಮೇಲೆ ಶಿಕ್ಷಿಸಬಹುದು ಎಂದು ಕಾನೂನುಗಳು ಹೇಳುತ್ತಿವೆ. ಹೀಗಿರುವಾಗ ಸಂವಿಧಾನವನ್ನು ರಕ್ಷಿಸುವ ಹಾಗೂ ಅದನ್ನು ಜಾರಿಮಾಡುವ ಹುದ್ದೆಯಲ್ಲಿರುವ ಅಪರಾಧಿಗಳಿಗೆ ಹೆಚ್ಚಿನ ಶಿಕ್ಷೆಯಾಗಬೇಕು. ಆದರೆ ಕರುಣಾನಿಧಿಯ ಹೇಳಿಕೆಗಳನ್ನು ಮೌನವಾಗಿ ಸಹಿಸಿಕೊಂಡಿದ್ದು ಮಾತ್ರವಲ್ಲ, ಅವರ ತಾಳಕ್ಕೆ ತಕ್ಕಂತೆ ಮನಮೋಹನ್-ಸೋನಿಯಾ ಜೋಡಿ ಕುಣಿದಿದ್ದು ಏಕೆ?

ತಮಿಳು ಜನರಿಗೆ ಸಮಾನ ಹಕ್ಕುಗಳು ಬೇಕು ನಿಜ. ಆದರೆ ಎಲ್ಟಿಟಿಇ ತಮಿಳರ ಪ್ರತಿನಿಧಿಯಲ್ಲ. ಅದರದು ಅಹಿಂಸಾ ಹೋರಾಟವೂ ಅಲ್ಲ. ಅದು ಸಾಮಾಜಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಾಗರಿಕ ಸಂಘಟನೆಯಲ್ಲ. ಚಿಕ್ಕ ದೇಶವಾದ ಶ್ರೀಲಂಕಾ ಮೊದಲಬಾರಿಗೆ ಅಷ್ಟು ದೊಡ್ಡ ಭಯೋತ್ಫಾದಕ ಸಂಘಟನೆಯನ್ನು ಬಡಿಯುತ್ತಿದ್ದರೆ ಅದನ್ನು ಮೆಚ್ಚಬೇಕಾದ್ದು ಮೊದಲ ಕರ್ತವ್ಯ. ಆದರೆ ತಮಿಳರ ಹೆಸರು ಹೇಳಿಕೊಂಡು ಪ್ರಭಾಕರನ್ ಪರವಾಗಿ ವಕಾಲತ್ತು ವಹಿಸುವ ಕರುಣಾನಿಧಿಯಂತಹವರು ಈ ದೇಶದ ನಾಯಕರೆ?

ಇದೇ ಡಿಎಂಕೆಯ ಸಕರ್ಾರಗಳನ್ನು ಹಿಂದೆ ಎರಡು ಬಾರಿ ಭ್ರಷ್ಟಾಚಾರ ಹಾಗೂ ದೇಶವಿರೋಧಿ ಚಟುವಟಿಕೆಗಳ ಕಾರಣದಿಂದ ವಜಾ ಮಾಡಲಾಗಿತ್ತು. 1991ರಲ್ಲಿ ರಾಜೀವ್ ಹತ್ಯೆ ಮಾಡಿದ ಎಲ್ಟಿಟಿಇಗೆ ಕರುಣಾನಿಧಿ ಸಕರ್ಾರ ಬಹಳ ಸಹಕಾರ ನೀಡಿತ್ತು ಎಂದು ಜೈನ್ ಆಯೋಗ ಸ್ಪಷ್ಟವಾಗಿ ಹೇಳಿದೆ. ಇಂತಹ ಡಿಎಂಕೆ ಹಾಗೂ ಕರುಣಾನಿಧಿಯನ್ನು ಗಾಂಧಿ ಕುಟುಂಬೇತರ ಕಾಂಗ್ರೆಸ್ ಅಧ್ಯಕ್ಷರುಗಳು ದೂರವಿಟ್ಟಿದ್ದರು. ಆದರೆ ಸೋನಿಯಾ ಗಾಂಧಿ ಎಲ್ಲವನ್ನೂ ಮರೆತು, ಕ್ಷಮಿಸಿ ಆದರದಿಂದ ಬರಮಾಡಿಕೊಂಡು ಅಧಿಕಾರ ಹಂಚಿಕೊಂಡರು.

ಸೋನಿಯಾರನ್ನು ಎಲ್ಟಿಟಿಇ ಭಯ ಕಾಡುತ್ತಿರಬಹುದು. ಹಾಗೆಂದ ಮಾತ್ರಕ್ಕೆ ಈ ಸಂಘಟನೆಗೆ ಹತ್ತಿರವಾದವರನ್ನು ಅವರ ಕುಟುಂಬ ಏಕೆ ಸದಾ ಕ್ಷಮಿಸುತ್ತಲೇ ಇರಬೇಕು?

ವಾಸ್ತವವಾಗಿ ಕಾಂಗ್ರೆಸ್ ಎಂದೂ ಭಯೋತ್ಪದಕರನ್ನು ಮಣಿಸಿಲ್ಲ. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಸುಮಾರು 50 ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ ಅದರ ಅಧಿಕಾರದ ಅವಧಿಯಲ್ಲಿ ಭಯೋತ್ಫಾದನೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಪಾಕಿಸ್ತಾನ ಪ್ರೇರಿತ ಸಿಖ್ ಭಯೋತ್ಪಾದಕರನ್ನು ಇಂದಿರಾ ಗಾಂಧಿ ಕಾಲದಲ್ಲಿ ಓಲೈಸಲಾಗಿತ್ತು. ಕಡೆಗೆ ಅದು ಅವರ ಕುತ್ತಿಗೆಗೇ ಬಂದಿತು. ಆದರೂ ಇಂದಿರಾ ಕಡೆಘಳಿಗೆಯಲ್ಲಿ ಒಂದಿಷ್ಟು ಧೈರ್ಯ ತೋರಿ ಬ್ರಿಂಧನ್ವಾಲೆಯನ್ನು ನಿನರ್ಾಮ ಮಾಡಿ ಸತ್ತರು.

ಸಾವಿರಾರು ಮುಗ್ಧ ಸಿಖ್ಖರ ನರಮೇಧದ ನಡುವೆ ಸಿಂಹಾಸನವೇರಿದ ರಾಜೀವ್ ಗಾಂಧಿ ಕಾಲದಲ್ಲಿ ಪಂಜಾಬ್ ಪ್ರತ್ಯೇಕತಾವಾದಕ್ಕೆ ಪೊಲೀಸ್ ಪರಿಹಾರವೇ ಸೂಕ್ತ ಮದ್ದಾಯಿತು. ಆದರೆ ಅವರು ಎಲ್ಟಿಟಿಇ ಅನ್ನು ಬೆಳೆಸಿದರು. ಕ್ವಾಟ್ರೋಚಿಯಂತಹ ತಮ್ಮ ಪತ್ನಿಯ ಸಂಗಾತಿಗಳನ್ನು ಓಲೈಸಿದರು. ಕಡೆಗೆ ಎಲ್ಟಿಟಿಇ ಅನ್ನು ನಿನರ್ಾಮ ಮಾಡುವ ಮೊದಲೇ ತಾವೇ ಅದಕ್ಕೆ ಬಲಿಯಾದರು.

1940 ಮತ್ತು 1960ರ ದಶಕಗಳಲ್ಲಿ ಆರಂಭವಾದ ಎಡಪಂಥೀಯ ಭಯೋತ್ಪಾದನೆಯನ್ನು, 1950ರ ದಶಕದಲ್ಲಿ ಆರಂಭವಾದ ಪಾಕ್ ಪ್ರೇರಿತ ಜಿಹಾದಿ ಭಯೋತ್ಪಾದನೆಯನ್ನು ಮಟ್ಟಹಾಕುವುದು ಕಾಂಗ್ರೆಸ್ ಸಕರ್ಾರಗಳಿಂದ ಸಾಧ್ಯವಾಗಿಲ್ಲ. ಬದಲಾಗಿ ಆಗಿಂದಾಗ್ಗೆ ಈ ಉಗ್ರವಾದಗಳ ಓಲೈಕೆ, ನವೀಕರಣಗಳೇ ನಡೆಯುತ್ತ ಬಂದಿವೆ. ಪಂಜಾಬ್ ಭಯೋತ್ಪಾದನೆ ಅತಿಯಾದಾಗ 1985ರಲ್ಲಿ ರಾಜೀವ್ ಸಕರ್ಾರ ಜಾರಿಗೆ ತಂದಿದ್ದ ಟಾಡಾ ವಿಶೇಷ ಕಾಯ್ದೆಯನ್ನು ಉಗ್ರರ ವಿರುದ್ಧ ಬಳಕೆ ಮಾಡಿದ್ದು ಬಹಳ ಕಡಿಮೆ.

ಆದರೆ ರಾಜೀವ್ ಜಾರಿಗೊಳಿಸಿದ್ದ ಟಾಡಾ ಅವರ ಹತ್ಯೆಯ ಸಂಚುಗಾರರನ್ನು ಹಿಡಿಯಲು ನೆರವಿಗೆ ಬಂದಿತು. ಈ ವಿಶೇಷ ಕಾಯ್ದೆ ಇಲ್ಲದಿದ್ದ ಪಕ್ಷದಲ್ಲಿ ರಾಜೀವ್ ಹತ್ಯೆಯ ಸಂಚಿನ ಆರೋಪಗಳ್ಯಾವುವೂ ಸಾಬೀತಾಗುತ್ತಿರಲಿಲ್ಲ. ಯಾರಿಗೂ ಶಿಕ್ಷೆಯಾಗುತ್ತಿರಲಿಲ್ಲ. ಆದರೂ ಕಾಂಗ್ರೆಸ್ಸಿನ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲು ಅದನ್ನು ಬಳಸಲಾಗುತ್ತಿದೆ ಎಂಬ ತೀವ್ರ ವಿವಾದದ ನಡುವೆ 1995ರಲ್ಲಿ ಅದನ್ನು ಮುಗಿಸಲಾಯಿತು.

ಭಯೋತಾದನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕಾಂಗ್ರೆಸ್ಸು ಅತಿ ದುರ್ಬಲತೆಯನ್ನು ತೋರುತ್ತ ಬಂದಿದೆ. ನೆಹರೂ ಮತ್ತು ಇಂದಿರಾಗೆ ಎಡಪಂಥೀಯ ಒಲವು ತೀವ್ರವಾಗಿತ್ತು. ಹೀಗಾಗಿ ಅವರ ಜೊತೆ ಓಡಾಡಿಕೊಂಡಿದ್ದವರೇ ನಕ್ಸಲ್ ಉಗ್ರವಾದವನ್ನು ಬೆಳೆಸಿದರು. ತೀರಾ ಈಚಿನವರೆಗೂ, ಮತ್ತು ಈಗಲೂ, `ನಕ್ಸಲ್ವಾದ ಭಯೋತ್ಪಾದನೆಯಲ್ಲ, ಅದು ಜನಪರವಾದ ಸಾಮಾಜಿಕ ಚಳವಳಿ' ಎಂದು ವಾದಿಸುವ ಕಾಂಗ್ರೆಸ್ಸಿಗರಿದ್ದಾರೆ! ಹಾಗೆ ನೋಡಿದರೆ, ಅಲ್ ಖೈದಾ ಸಹ ಭಯೋತ್ಪಾದಕ ಸಮಘಟನೆಯಲ್ಲ. ಅದು ಧರ್ಮ ಸಂಸ್ಥಾಪನೆಗೆ ಬದ್ಧವಾಗಿರುವ ದೈವಿಕವಾದ ಸಂಘಟನೆ ಎನ್ನಬೇಕಾಗುತ್ತದೆ!

ಮುಸ್ಲಿಂ ತುಷ್ಟೀಕಕರಣಕ್ಕಾಗಿ ನೆಹರೂ, ಇಂದಿರಾ, ರಾಜೀವ್ ಹಾಗೂ ನರಸಿಂಹರಾವ್ ಜಿಹಾದಿ ಭಯೋತ್ಪಾದಕತೆಯನ್ನು ಸಹಿಸಿಕೊಂಡರು. ಅದನ್ನು ಮೃದುವಾದ ಹಸ್ತಗಳಿಂದ `ಎದುರಿಸಲಾಯಿತು'. ಆದರೆ ಸೊನಿಯಾ ಗಾಂಧಿ ಕಾಲದಲ್ಲಿ ತೋರುತ್ತಿರುವಷ್ಟು ದೌರ್ಬಲ್ಯವನ್ನು ಹಿಂದಿನ ಯಾವ ಕಾಂಗ್ರೆಸ್ ಸಕರ್ಾರವೂ ತೋರಿಸಿರಲಿಲ್ಲ ಎಂದೇ ಹೆಳಬೇಕು. ಸೋನಿಯಾ ಎಲ್ಲ ಹಳೆಯ ಕಾಂಗ್ರಸಸ್ ದಾಖಲೆಗಳನ್ನು ಮುರಿದಿದ್ದಾರೆ.

ಸೋನಿಯಾ ಕಾಲದಲ್ಲಿ ಪಾಲರ್ಿಮೆಂಟಿನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ನೇಣಿಗೆರುವುದನ್ನು ತಡೆಯಲಾಯಿತು. ಬೋಫೋಸರ್್ ಹಗರಣದ ಫಲಾನುಭವಿ, ಇಟಲಿಯ ಒಟ್ಟಾವಿಯೋ ಕ್ವಾಟ್ರೋಚಿಯನ್ನು ನಿರಪರಾಧಿ ಎಂದು ಸಾರಿ ಫೈಲನ್ನು ಮುಚ್ಚಲಾಯಿತು. ಯಾವುದೇ ಸರಿಯಾದ ಕಾರಣವಿಲ್ಲದೇ ಪೋಟಾ ಕಾಯ್ದೆಯನ್ನು ರದ್ದುಮಾಡಲಾಯಿತು. ಎಲ್ಟಿಟಿಇಯನ್ನು ಅವರ ಕುಟುಂಬದ ಸದಸ್ಯರು ಧಾರಾಳವಾಗಿ `ಕ್ಷಮಿಸಿದರು'. ಪ್ರಿಯಂಕಾ ನಳಿನಿಯನ್ನು ಭೇಟಿ ಮಾಡಿ ತಬ್ಬಿಕೊಂಡು ಅತ್ತರು. ಅನಂತರ ಪ್ರಭಾಕರನ್ ಅನ್ನೂ ಕ್ಷಮಿಸಿರುವುದಾಗಿ ವಿಚಿತ್ರ ಹೇಳಿಕೆ ಕೊಟ್ಟರು! (ಈಗ ಕಸಬ್ ಮುಗ್ಧ ಬಾಲಕ ಎಂದು ವಾದಿಸಲಾಗುತ್ತಿದೆ. ಅವನನ್ನು ಬಿಡಿಸಿ ಕಳುಹಿಸುವ ಏಪರ್ಾಟು ನಡೆದಿದೆ! ಅವನನ್ನು ಜೀವಂತ ಹಿಡಿದಿದ್ದೇ ದೊಡ್ಡ ತಪ್ಪ್ಪಾಯಿತಲ್ಲ ಎನ್ನುವಂತಾಗಿದೆ.)

ಇವೆಲ್ಲ ಏತಕ್ಕಾಗಿ? ಸೋನಿಯಾ ಪರಿವಾರ ವಿಚಿತ್ರ ಹಾಗೂ ಅಸಹಜವಾದ ಹೇಳಿಕೆಗಳನ್ನು ಕೊಡುತ್ತಿದೆ. ಇಲ್ಲವೇ ಮೌನಕ್ಕೆ ಶರಣಾಗಿದೆ? ಈ ಪರಿವಾರ ಯಾರಿಗೇಕೆ ಹೆದರಬೇಕು? ಇಡೀ ದೇಶವೇ ಅವರ ಜೊತೆಗಿದೆ. ತೆರಿಗೆದಾರರ ವೆಚ್ಚದಲ್ಲಿ ವೈಯಕ್ತಿಕ ಸುರಕ್ಷೆಯನ್ನೂ ಅವರಿಗೆ ನೀಡಲಾಗಿದೆ. ಉಗ್ರರ ವಿಷಯದಲ್ಲಿ ಅವರು ಧೈರ್ಯವನ್ನೇಕೆ ತೋರುತ್ತಿಲ್ಲ? ಆರ್ಎಸ್ಎಸ್ ಮುಂತದ ಹಿಂದೂ ಸಂಘಟನೆಗಳನ್ನು ವಾಚಾಮಗೋಚರವಾಗಿ ನಿಂದಿಸುವವರು ಎಲ್ಟಿಟಿಇ ಅನ್ನು ಕ್ಷಮಿಸುವುದೇಕೆ? ಅಂತಹ ಅಗತ್ಯವಾದರೂ ಏನಿದೆ? ಇಂತಹ ಹೇಳಿಕೆಗಳನ್ನು ಕೊಡದೇ ಸುಮ್ಮನೆ ಏಕಿರಬಾರದು?

ತಮಿಳುನಾಡಿನ ರಾಜಕಾರಣದ ಮೇಲೆ ಎಲ್ಟಿಟಿಇ ಛಾಯೆ ದಟ್ಟವಾಗಿದೆ. ವಾಸ್ತವವಾಗಿ ಪ್ರಭಾಕರನ್ ತಪ್ಪಿಸಿಕೊಳ್ಳಲಿ ಎಂಬುದೇ ಅಲ್ಲಿನ ಕೆಲವು ಪ್ರಮುಖ ರಾಜಕಾರಣಿಗಳ ಬಯಕೆ. ಪ್ರಭಾಕರನ್ ಸತ್ತು, ಅವನ ಯಾವುದಾದರೂ ಡೈರಿ ಸಿಕ್ಕರೆ ಏನು ಗತಿ - ಎಂಬ ಭಯ ಹಲವರಿಗೆ ಇರಬಹುದು. ಅಥವಾ ಅವನು ಸೆರೆಸಿಕ್ಕಿ ಬಾಯಿಬಿಟ್ಟರೇನು? - ಎಂಬ ಭಯವೂ ಇರಬಹುದು. ಹೀಗಾಗಿ ಅವನು ತಪ್ಪಿಕೊಳ್ಳಲಿ ಎಂದು ಹಾರೈಸುವ ರಾಜಕಾರಣಿಗಳಿಗೆ ನಮ್ಮಲ್ಲಿ ಕೊರತೆಯಿಲ್ಲ.

ನಮ್ಮಲ್ಲಿ ಬಿನ್ ಲಾಡೆನ್ಗಾಗಿ, ದಾವೂದ್ ಇಬ್ರಾಹಿಮ್ಗಾಗಿ, ಪ್ರಭಾಕರನ್ಗಾಗಿ ಕಣ್ಣೀರಿಡುವ `ನಾಯಕ'ರಿದ್ದಾರೆ. ದೇಶದಲ್ಲಿ ಇಂತಹ ನಾಯಕರು ಇರುವಾಗ, ಜನಗಳಿಗೂ ಕಣ್ಣೀರೇ ಗತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ