ಗುರುವಾರ, ಜೂನ್ 04, 2009

ಯಾರ ಗೆಲುವು? ಯಾರ ಸೋಲು?

ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಯುಪಿಎ ಸಕರ್ಾರ ಮತ್ತೆ ವಿಜಯಿಯಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಬಲವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ನಾಮಕಾವಸ್ಥೆಯ ತೃತೀಯ ರಂಗ ಧೂಳೀಪಟವಾಗಿದೆ. ಎಡಪಕ್ಷಗಳು ಮೂಲೆಗುಂಪಾಗಿವೆ.

ಯಾವುದೇ ರೀತಿಯ `ಆ್ಯಂಟಿ ಇನ್ಕಮ್ಬೆನ್ಸಿ' (ಆಳುವವರ ಮೇಲಿನ ಅತೃಪ್ತಿ) ಈ ಚುನಾವಣೆಯಲ್ಲಿ ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಬೆಲೆಯೇರಿಕೆ, ಭಯೋತ್ಪಾದನೆ, ಸುರಕ್ಷೆ, ಸ್ವಿಸ್ ಬ್ಯಾಂಕ್, ಕ್ವಟ್ರೋಚಿ, ಯುಪಿಎ ಒಳಜಗಳ, ಅಮರ್ ಸಿಂಗ್ ಲಂಚ ಪ್ರಕರಣ, ಮುಲಾಯಂ ಸಿಬಿಐ ಪ್ರಕರಣ, ಅಫ್ಜಲ್ ಗುರು, ಅಜ್ಮಲ್ ಕಸಬ್ - ಯಾವುದೂ ಕಾಂಗ್ರೆಸ್ ಬೆಳವಣಿಗೆಗೆ ಅಡ್ಡಿಯಾಗಿಲ್ಲ. ಇದು ಗಮನಾರ್ಹ ಸಂಗತಿ.

ಇದು ಆಶ್ಚರ್ಯಕರ ಸಂಗತಿಯೂ ಹೌದು. ಹೇಗೆ ಕಾಂಗ್ರೆಸ್ `ಆ್ಯಂಟಿ ಇನ್ಕಮ್ಬೆನ್ಸಿ' ಪಡೆಯಲಿಲ್ಲ ಎಂಬುದು ಗಂಭೀರ ಅಧ್ಯಯನವನ್ನು ಬೇಡುತ್ತದೆ. ಈ ಚುನಾವಣೆಯಲ್ಲಿ ಸಕರ್ಾರದ ವಿರುದ್ಧದ ಮತಗಳು ಅಷ್ಟಾಗಿ ಚಲಾವಣೆಯಾಗಿಲ್ಲ ಎಂದುಕೊಂಡರೆ, ಯುಪಿಎ ಒಕ್ಕೂಟದ ಸ್ಥಾನದಲ್ಲಿ ಒಂದು ಪರಿಣಾಮಕಾರಿಯಾದ ಹಾಗೂ ಆಕರ್ಷಕವಾದ ಪಯರ್ಾಯವಾಗಿ ತನ್ನನ್ನು ಬಿಂಬಿಸಿಕೊಳ್ಳುವಲ್ಲಿ ಎನ್ಡಿಎ ಅಥವಾ ಬಿಜೆಪಿ ವಿಫಲವಾಗಿದೆ ಎಂದು ಹೇಳಬೇಕಾಗುತ್ತದೆ.

ಬೆಲೆಯೇರಿಕೆಗೆ ಪ್ರತಿಯಾಗಿ ಸಕರ್ಾರದ ರೈತರ ಸಾಲಮನ್ನಾ ಯೋಜನೆ ಕೆಲಸ ಮಾಡಿರಬಹುದು. ಆದರೆ ಒಂದು ವಿರೋಧಪಕ್ಷವಾಗಿ ಬಿಜೆಪಿ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಎನ್ನುವುದಂತೂ ಸ್ಪಷ್ಟ. ಕಳೆದ ಐದು ವರ್ಷಗಳಲ್ಲಿ ಅದರ ಅಸ್ತಿತ್ವದ ಅರಿವೇ ಜನರಿಗೆ ತಟ್ಟಿರಲಿಲ್ಲ. `ಆ್ಯಂಟಿ ಇನ್ಕಮ್ಬೆನ್ಸಿ' ಸೃಷ್ಟಿಸುವಲ್ಲಿ ಅದು ವಿಫಲವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಆಡ್ವಾಣಿ ದಿಢೀರೆಂದು ಪ್ರತ್ಯಕ್ಷರಾದದ್ದು.

2004ಕ್ಕೆ ಹೋಲಿಸಿದರೆ ಯುಪಿಎ ಅಂಗಪಕ್ಷಗಳು ಅಷ್ಟಾಗಿ ಲಾಭಗಳಿಸಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಇಲ್ಲಿ ಸಾಕಷ್ಟು ಬಲವರ್ಧನೆ ಆಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಇತ್ತ ಎನ್ಡಿಎ ಒಕ್ಕೂಟದಲ್ಲಿ ಶಿವಸೇನೆಯನ್ನು ಬಿಟ್ಟು ಉಳಿದ ಬಿಜೆಪಿಯ ಮಿತ್ರಪಕ್ಷಗಳು ಅಂತಹ ನಷ್ಟವನ್ನೇನೂ ಅನುಭವಿಸಿಲ್ಲ. ಇಲ್ಲಿ ಬಿಜೆಪಿಯೇ ಹೆಚ್ಚು ನಷ್ಟ ಅನುಭವಿಸಿದೆ. ಒಂದು ಒಕ್ಕೂಟವಾಗಿ ಎನ್ಡಿಎ ಸುಮಾರು 20ಕ್ಕೂ ಕಡಿಮೆ ಸ್ಥಾನಗಳನ್ನು ಕಳೆದುಕೊಂಡಿದ್ದರೆ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿಯ ಮತ್ತು ಯುಪಿಎ ಅಂಗಪಕ್ಷಗಳ ನಷ್ಟದ ಪೂರ್ಣ ಪ್ರಯೋಜನ ಕಾಂಗ್ರೆಸ್ಸಿಗೆ ಲಭಿಸಿದೆ. ಅದು 2004ಕ್ಕಿಂತಲೂ ಈ ಬಾರಿ 50ಕ್ಕೂ ಹೆಚ್ಚು ಸ್ಥಾನಗಳನ್ನು ಹೆಚ್ಚಾಗಿ ಗಳಿಸುವ ಮೂಲಕ ಮಹತ್ವಪೂರ್ಣ ವಿಜಯ ಸಾಧಿಸಿದೆ.

ರಾಜ್ಯಗಳ ಮಟ್ಟದಲ್ಲಿ ನೋಡಿದರೆ, ದೇಶದ ಹೆಚ್ಚು ರಾಜ್ಯಗಳು ಎನ್ಡಿಎ ಆಡಳಿತವನ್ನು ಹೊಂದಿವೆ. 2004ರ ನಂತರ ಕಾಂಗ್ರೆಸ್ ಒಂದರ ನಂತರ ಒಂದು ರಾಜ್ಯವನ್ನು ಕಳೆದುಕೊಳ್ಳುತ್ತಲೇ ಬಂದಿತ್ತು. ಈ ಟ್ರೆಂಡ್ ನೋಡಿದಾಗ ಕೇಂದ್ರದಲ್ಲಿಯೂ ಅದರ ಪ್ರಾಬಲ್ಯ ಕುಂಠಿತವಾಗಬಹುದೆಂಬ ನಿರೀಕ್ಷೆ ಸಾಮಾನ್ಯವಾಗಿತ್ತು. ಆದರೆ ಕಾಂಗ್ರೆಸ್ ಈ ಬಾರಿ ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಗೆದ್ದಿದೆ. ಕನರ್ಾಟಕ, ಗುಜರಾತ್ ಹಾಗೂ ಬಿಹಾರ - ಈ ಮೂರು ರಾಜ್ಯಗಳು ಮಾತ್ರ ಬಿಜೆಪಿಯ ಪಾಲಿಗೆ ಅನುಕೂಲಕರವಾಗಿವೆ.

ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಪ್ರಚಾರ ಫಲಕೊಟ್ಟಂತೆ ಕಾಣುತ್ತದೆ. ರಾಷ್ಟ್ರೀಯ ರಾಜಕಾರಣದ ತಕ್ಕಡಿಯಲ್ಲಿ ಮಹತ್ವದ ಪಾತ್ರ ವಹಿಸುವ ಉತ್ತರ ಪ್ರದೇಶ ಕಳೆದ ದಶಕದಲ್ಲಿ ಬಿಜೆಪಿಯ ಅಡ್ಡೆಯಾಗಿತ್ತು. ನವದೆಹಲಿಯ ದಬರ್ಾರಿನಲ್ಲಿ ಬಿಜೆಪಿಯು ಕಾಂಗ್ರೆಸ್ಸಿಗೆ ಸಮಾನವಾಗಿ ಬೆಳೆಯಲು ಕಾರಣವಾಗಿದ್ದೇ ಉತ್ತರ ಪ್ರದೇಶದ ಮತದಾರರು. 1997ರಲ್ಲಿ ರಾಜ್ಯದ ಒಟ್ಟು 80 ಸ್ಥಾನಗಳ ಪೈಕಿ 50 ಸ್ಥಾನಗಳನ್ನು ಬಿಜೆಪಿ ಗಳಿಸಿತ್ತು. ಆದರೆ ಈಗ ಅದು ನಾಲ್ಕನೆಯ ಸ್ಥಾನಕ್ಕೆ ಕುಸಿದಿದೆ. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಕ್ರಮೇಣ ಹಿಡಿತ ಸಾಧಿಸುತ್ತಿದೆ.

1999ರಲ್ಲಿ ಎನ್ಡಿಎ 24 ಪಕ್ಷಗಳ ದೊಡ್ಡ ಒಕ್ಕೂಟವಾಗಿತ್ತು. ಆದರೆ ಪ್ರಸ್ತುತ ಜೆಡಿಯು ಹಾಗೂ ಶಿವಸೇನೆಗಳನ್ನು ಬಿಟ್ಟರೆ ಅದಕ್ಕೆ ಹೇಳಿಕೊಳ್ಳುವಂತಹ ಮಿತ್ರ ಪಕ್ಷಗಳೇ ಇರಲಿಲ್ಲ. ದಕ್ಷಿಣದಲ್ಲಂತೂ (ಕನರ್ಾಟಕವನ್ನು ಬಿಟ್ಟು) ಎನ್ಡಿಎ ನಗಣ್ಯವಾಗಿದೆ. ಮಿತ್ರಪಕ್ಷಗಳನ್ನು ಕಳೆದುಕೊಂಡಿದ್ದು ಅದಕ್ಕೆ ದೊಡ್ಡ ನಷ್ಟವಾಗಿ ಪರಿಣಮಿಸಿದೆ. ಪ್ರಬಲ ರಾಜಕೀಯ ಮೈತ್ರಿಯ ಕೊರತೆ ಅರ ಸೋಲಿಗೆ ಪ್ರಮುಖ ಕಾಣಿಕೆ ಸಲ್ಲಿಸಿದೆ. ಅದರ ಬಹುತೇಕ ಮಿತ್ರಪಕ್ಷಗಳೆಲ್ಲ ತೃತೀಯ ರಂಗ ಸೇರಿ ಕಾಂಗ್ರೆಸ್ ವಿರೋಧಿ ಮತಗಳು ಹಂಚಿಹೋಗಲು ಕಾರಣವಾಗಿದ್ದರಿಂದ ಅಂತಿಮವಾಗಿ ಕಾಂಗ್ರೆಸ್ಸಿಗೇ ಅನುಕೂಲವಾಗಿದೆ.

ಆದರೆ ವೈಯಕ್ತಿಕ ಮಟ್ಟದಲ್ಲಿ ಬಿಜೆಪಿ ಗಳಿಸಿರುವ ಹಿನ್ನಡೆ ಗಮನಾರ್ಹ. ಅದಕ್ಕೆ ಸರಿಯಾದ ಕಾರಣಗಳನ್ನು ತಿಳಿಯಬೇಕಾದ ಅಗತ್ಯವಿದೆ. ಒಂದು ಆಡ್ವಾಣಿಯವರ ವಯಸ್ಸು ಹಾಗೂ ವರ್ಚಸ್ಸು ಎರಡೂ ಕೈಕೊಟ್ಟಿರಬಹುದು. ಇಂಟರ್ನೆಟ್ ಸಮೀಕ್ಷೆಗಳಲ್ಲಿ ಆಡ್ವಾಣಿ ಕೈ ಮೇಲಾಗಿಯೇ ಕಂಡುಬರುತ್ತಿತ್ತು. ಆದರೆ ಇಂಟರ್ನೆಟ್ ಚಾಟ್ ರೂಮ್ಗಳಲ್ಲಿ ಅವರೊಂದಿಗೆ ಕಾಲ ಕಳೆದವರ ಪೈಕಿ ಬಹುಮಂದಿ ಮತಗಟ್ಟೆಗೇ ಬರಲಿಲ್ಲ!

ಜಿನ್ನಾ ಪ್ರಕರಣದ ನಂತರ ಎರಡನೆ ಬಾರಿಗೆ ಆಡ್ವಾಣಿ ಹಾಗೂ ಸುಧೀಂದ್ರ ಕುಲಕಣರ್ಿ ಜೋಡಿಯ ರಣತಂತ್ರ ಕೈಕೊಟ್ಟಿದೆ. ವೈಯಕ್ತಿಕ ವೆಬ್ಸೈಟುಗಳ ಮೂಲಕ ಆಡ್ವಾಣಿ ಪ್ರಚಾರ ಹೈ-ಟೆಕ್ ಆಗಿದ್ದುದರಲ್ಲಿ ಅನುಮಾನವಿಲ್ಲ. ಅದು ಪಾರದರ್ಶಕವೂ ಆಗಿತ್ತು. ಆದರೆ ಮತಗಳನ್ನು ಸೆಳೆಯುವಲ್ಲಿ ವಿಫಲವಾಯಿತು. ಐಟಿ, ಬಿಟಿ ಹುಡುಗರ ಬೇಟೆಯ ಭರಾಟೆಯಲ್ಲಿ ಅದು ತನ್ನ ಎಂದಿನ `ಬಿಜೆಪಿತನ'ವನ್ನು ಕಳೆದುಕೊಂಡಿತ್ತು. ಯುವ, ಇಂಟರ್ನೆಟ್ ಪೀಳಿಗೆಯನ್ನು ಸೆಳೆಯುವ ಕಸರತ್ತಿನಲ್ಲಿ ಸಾರ್ವಜನಿಕರನ್ನು ಹಾಗೂ ತನ್ನ ಶಾಶ್ವತ ಮತದಾರರನ್ನು ಸೆಳೆಯುವಲ್ಲಿ ವಿಫಲವಾಯಿತು.

`ಆಡ್ವಾಣಿಯವರನ್ನು ಪ್ರಧಾನಿಯಾಗಿಸಬೇಕು' ಎನ್ನುವುದನ್ನು ಬಿಟ್ಟರೆ ಈ ಚುನಾವಣೆಯಲ್ಲಿ ಎನ್ಡಿಎ ಮುಂದೆ ಇತರ ಪ್ರಬಲ ವಿಷಯಗಳು ಇರಲಿಲ್ಲ. ಆಥರ್ಿಕತೆ ಹಾಗೂ ಸುರಕ್ಷೆ ಈ ಬಾರಿ ಪ್ರಮುಖ ಚುನಾವಣಾ ವಿಷಯಗಳಾಗಿರಲೇ ಇಲ್ಲ. `ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸಕರ್ಾರ ಯಾವ ರೀತಿ ಕೆಲಸ ಮಾಡಿತು' ಎಂಬುದು ಸಾಮಾನ್ಯ ಚಚರ್ಾವಸ್ತುವಾಗಬೇಕಿತ್ತು. ಆದರೆ ಅದಕ್ಕೆ ಬದಲು ಸ್ವಯಂ ಆಡ್ವಾಣಿಯೇ ಜನರ ಮುಂದೆ ಚಚರ್ಾವಸ್ತುವಾದರು. ಸಕರ್ಾರದ ದಕ್ಷತೆ, ಅದಕ್ಷತೆಗಳಿಗೆ ಬದಲು ಆಡ್ವಾಣಿಯ ವರ್ಚಸ್ಸು, ವಯಸ್ಸು ಸಾರ್ವಜನಿಕವಾಗಿ ಹೆಚ್ಚು ಗಮನ ಸೆಳೆಯಿತು. ಅಧ್ಯಕ್ಷೀಯ ಮಾದರಿಯ ಏಕಮುಖ ಪ್ರಚಾರತಂತ್ರ ಬಿಜೆಪಿ ಪಾಲಿಗೆ ಮುಳುವಾಗಿರಬಹುದು.

ಕಾಂಗ್ರೆಸ್ ಈ ಬಾರಿಯ ಚುನಾವಣೆಯನ್ನು ಸಾಕಷ್ಟು ಮಿತ್ರಪಕ್ಷಗಳ ಒಡಗೂಡಿಯೇ ಎದುರಿಸಿತು. ಆರ್ಜೆಡಿ ಮಾಡಿದ ತಕರಾರು ಬಿಟ್ಟರೆ ಉಳಿದಂತೆ ಹೆಚ್ಚೇನೂ ತಕರಾರು ಇರಲಿಲ್ಲ. ಬಿಜೆಪಿ ಪಾಲಿಗೆ ಗುಜರಾತಿನ ನರೇಂದ್ರ ಮೋದಿ ಇದ್ದಂತೆ ಕಾಂಗ್ರೆಸ್ ಪಾಲಿಗೆ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಮತ ಸೆಳೆಯುವ ಸೂಜಿಗಲ್ಲಾದರು. ದಕ್ಷಿಣದಲ್ಲಿ ಶ್ರೀಲಂಕಾ ತಮಿಳರ ವಿಷಯ ಕರುಣಾನಿಧಿಯನ್ನು ರಕ್ಷಿಸಿದ್ದೂ ಯುಪಿಎಗೆ ವರದಾನವಾಯಿತು. ಯುಪಿಎ ವಿರುದ್ಧದ ಮತಗಳು ಹಂಚಿಹೋಗಲು ಕಾರಣವಾಗಿದ್ದಷ್ಟೇ ತಮಿಳುನಾಡಿನ ವಿಜಯಕಾಂತ್ ಹಾಗೂ ಆಂಧ್ರದ ಚಿರಂಜೀವಿ ಮಾಡಿದ ಸಾಧನೆ.

ಒಟ್ಟಿನಲ್ಲಿ ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಗಳಿಸಿರುವ ಸ್ಥಾನಗಳ ಒಟ್ಟು ಸಂಖ್ಯೆ 320ರ ಗಡಿಯನ್ನು ದಾಟುತ್ತದೆ. ಇದು ಒಳ್ಳೆಯ ಬೆಳವಣಿಗೆ. ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಾದೇಶಿಕ, ಚಿಲ್ಲರೆ ಪಕ್ಷಗಳ ಪಾತ್ರ ಕಡಿಮೆಯಾಗುವುದು ಒಳ್ಳೆಯದು. ಆದರೆ ಅವುಗಳ ಮೈತ್ರಿ ಇಲ್ಲದೇ ಈ ಬೆಳವಣಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವು ಇನ್ನೂ ನಗಣ್ಯವಾಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ