ಗುರುವಾರ, ಜೂನ್ 04, 2009

ಅಮೆರಿಕದ ಹಣದಿಂದ ಪಾಕಿಸ್ತಾನ ಅಣು ಬಾಂಬ್ ತಯಾರಿಸುತ್ತಿದೆ!

ನಾವು ಚುನಾವಣೆಯಲ್ಲಿ ಮುಳುಗಿದ್ದಾಗ ಪಾಕಿಸ್ತಾನದಿಂದ ಎರಡು ಆಘಾತಕರ ಸುದ್ದಿಗಳು ಬಂದಿವೆ. ಒಂದು, ಆ ದೇಶ ಈಗ ಇದ್ದಕ್ಕಿದ್ದ ಹಾಗೆ ಭಾರಿ ಸಂಖ್ಯೆಯಲ್ಲಿ ಪರಮಾಣು ಬಾಂಬ್ಗಳನ್ನು ತಯಾರಿಸಲು ಆರಂಭಿಸಿದೆ. ಇನ್ನೊಂದು, ತಾಲಿಬಾನ್, ಅಲ್ ಖೈದಾ ಭಯೋತ್ಪಾದಕರ ಕೈಗೆ ಈಗಾಗಲೇ ಪರಮಾಣು ಬಾಂಬ್ಗಳು ಸಿಕ್ಕಿರಬಹುದಾದ ಸಾಧ್ಯತೆಗಳಿವೆ.

ಎರಡನೇ ಬಾರಿಗೆ ಅಧಿಕಾರ ಹಿಡಿದಿರುವ `ಪ್ರಬಲ' ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಅವರ `ಪ್ರಬಲ' ಹಾಗೂ `ಯುವ' ಸಹೋದ್ಯೋಗಿಗಳಾದ ಪಿ. ಚಿದಂಬರಂ, ಎ. ಕೆ. ಆ್ಯಂಟನಿ, ಎಸ್. ಎಂ .ಕೃಷ್ಣ - ಈ ಆತಂಕಕ್ಕೆ ಹೇಗೆ ಸ್ಪಂದಿಸುತ್ತಾರೋ ಗೊತ್ತಿಲ್ಲ.

ಅಮೆರಿಕ ಸಕರ್ಾರವೇ ದಿಕ್ಕು ತೋಚದೇ ಕೈಚೆಲ್ಲಿ ಕುಳಿತಿದೆ. ತಾಲಿಬಾನ್ ಪಾಕಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಮುಂಚೆ ಆ ದೇಶದ ಪರಮಾಣು ಅಸ್ತ್ರಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೆರಿಕ ಹೆಣಗುತ್ತಿದೆ. ಈವರೆಗೆ ಪಾಕ್ ಸುಮಾರು 100 ಪರಮಾಣು ಬಾಂಬ್ಗಳನ್ನು ಹೊಂದಿದೆ ಎಂಬ ಅಂದಾಜಿದೆ. ಈ ಪೈಕಿ 2-3 ಬಾಂಬ್ಗಳು ಉಗ್ರರಿಗೆ ಸಿಕ್ಕರೂ ಭಾರಿ ಅಪಾಯ ತಪ್ಪಿದ್ದಲ್ಲ.

ಈಗ ಅಮೆರಿಕದ ಮುಂದೆ ಇರುವ ಕೆಲವು ಆಯ್ಕೆಗಳು: ಮೊದಲು ಪಾಕ್ ಸಕರ್ಾರ ಉರುಳದಂತೆ ನೋಡಿಕೊಳ್ಳುವುದು; ಅನಂತರ ತಾಲಿಬಾನ್, ಅಲ್-ಖೈದಾ ಬೆಳವಣಿಗೆ ತಡೆಯುವುದು; ತನ್ನ ಪರಮಾಣು ಅಸ್ತ್ರಗಳು ಉಗ್ರರ ಕೈಗೆ ಜಾರದಂತೆ ಭದ್ರಪಡಿಸಿಕೊಳ್ಳಲು ಪಾಕ್ ಸಕರ್ಾರಕ್ಕೆ ನೆರವಾಗುವುದು; ಹಾಗೂ ಕಡೆಯದಾಗಿ, ಮೇಲಿನ ಎಲ್ಲ ತಂತ್ರಗಳು ಕೈಕೊಟ್ಟರೆ, ಪಾಕ್ ಪರಮಾಣು ಅಸ್ತ್ರಗಳನ್ನು ಸ್ವತಃ ತನ್ನ ಕೈವಶ ಮಾಡಿಕೊಳ್ಳುವುದು.

ಯೋಜನೆ ಕೇಳಲು ಚೆನ್ನಾಗಿದೆ. ಆದರೆ ವಾಸ್ತವ ಏನೆಂದರೆ, ಈ ಯಾವುದರಲ್ಲೂ ಅಮೆರಿಕ ಯಶಸ್ಸು ಕಾಣುವ ಲಕ್ಷಣಗಳಿಲ್ಲ. ಇಲ್ಲಿ ಅಮೆರಿಕ ಪಾಕ್ ಕುರಿತುನ ಯೋಜನೆಗಳನ್ನು ಹಾಕುತ್ತಿದೆಯೋ, ಅಥವಾ ಪಾಕಿಸ್ತಾನವೇ ಅಮೆರಿಕದ ಅಸಹಾಯಕತೆಯನ್ನು ಬಳಸಿಕೊಳ್ಳುತ್ತಿದೆಯೋ ಎಂಬುದು ಚಿಂತಿಸಬೇಕಾದ ವಿಷಯ.

ಹೀಗೆ ಹೇಳಲು ಕಾರಣಗಳು ಹಲವಾರು. ಮೊದಲನೆಯದಾಗಿ, ಪಾಕಿಸ್ತಾನದ ಸಕರ್ಾರ, ಮಿಲಿಟರಿ ಹಾಗೂ ಐಎಸ್ಐ ಒಳಗೇ ತಾಲಿಬಾನ್ ಪರವಾದ ಶಕ್ತಿಗಳಿವೆ. ಈ ಶಕ್ತಿಗಳನ್ನು ಎದುರಿಸುವುದು, ಅಥವಾ ಅವುಗಳ ವಿರೋಧ ಕಟ್ಟಿಕೊಳ್ಳುವುದು ಪಾಕಿಸ್ತಾನದ ಯಾವ ರಾಜಕಾರಣಿಗೂ ಬೇಕಿಲ್ಲ. ಹೀಗಾಗಿ ತಾಲಿಬಾನ್ ಬೆಳವಣಿಗೆಯನ್ನು ತಡೆಯುವುದು ಸಕರ್ಾರಿ ಮುಖಂಡರಿಂದ ಅಸಾಧ್ಯ. ಆದರೂ ಅವರು ಅಮೆರಿಕಕ್ಕೆ, ಅಂತಾರಾಷ್ಟ್ರೀಯ ಸಮುದಾಯಕ್ಕೆ ಹುಸಿ ಭರವಸೆ ಕೊಡುತ್ತಿದ್ದಾರೆ. ಹಾಗೆ ಭರವಸೆ ಕೊಡುವ ಮೂಲಕ ಅಪಾರವಾದ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ!

ಎರಡನೆಯದಾಗಿ, ಪಾಕಿಸ್ತಾನದ ಬಳಿ ಎಷ್ಟು ಪರಮಾಣು ಅಸ್ತ್ರಗಳಿವೆ, ಅವೆಲ್ಲ ಎಲ್ಲೆಲ್ಲಿವೆ ಎಂಬ ಖಚಿತ ಮಾಹಿತಿ ಅಮೆರಿಕದ ಬಳಿ ಇಲ್ಲ. `ನಮ್ಮ ಬಳಿ ಅಂತಹ ಮಾಹಿತಿ ಇಲ್ಲ' ಎಂದು ಸ್ವತಃ ಸಿಐಎ ನಿದರ್ೇಶಕರೇ ಅಮೆರಿಕ ಸಕರ್ಾರಕ್ಕೆ ವರದಿ ಕಳುಹಿಸಿದ್ದಾರೆ. ಹೀಗಿರುವಾಗ ಅವುಗಳಲ್ಲಿ ಈ ಬಾಂಬ್ಗಳ ಪೈಕಿ ಎಷ್ಟು ಉಗ್ರರ ವಶವಾಗಿವೆ, ಎಷ್ಟು ಸುರಕ್ಷಿತವಾಗಿವೆ ಎಂದು ಹೇಳುವುದು ಕಷ್ಟ. ಸಕರ್ಾರದ ವಶದಲ್ಲಿ ಎಷ್ಟು ಅಸ್ತ್ರಗಳಿವೆ ಎಂಬ ಕುರಿತು ಯಾವುದೇ ದಾಖಲೆಗಳು ಲಭ್ಯವಿಲ್ಲದೇ ಅವುಗಳ ಹಸ್ತಾಂತರದ ಬಗ್ಗೆ ಮಾತುಕತೆ ನಡೆಸುವುದೂ ಅಸಾಧ್ಯವಾಗುತ್ತದೆ.

ಪಾಕಿಸ್ತಾನದ ಪರಮಾಣು ಅಸ್ತ್ರಗಳ ಸಂಪೂರ್ಣ ವಿವರ ತಿಳಿದಿರುವುದು ಐಎಸ್ಐಗೆ ಮಾತ್ರ. ಮಿಲಿಟರಿ ಹಾಗೂ ಐಎಸ್ಐಗಳೆರಡೂ ವೀಲಿನವಾಗಿರುವ ಒಂದು ಉನ್ನತ ವಿಭಾಗ ಈ ವಿಷಯವನ್ನು ನಿರ್ವಹಿಸುತ್ತಿದೆ. ಉಳಿದಂತೆ ಇತರ ಮಿಲಿಟರಿ ಅಧಿಕಾರಿಗಳಿಗೂ ಪೂರ್ಣ ಚಿತ್ರಣ ತಿಳಿದಿರುವ ಸಾಧ್ಯತೆಯಿಲ್ಲ. ವಾಸ್ತವದಲ್ಲಿ ಐಎಸ್ಐ ಹಾಗೂ ತಾಲಿಬಾನ್ ನಡುವಿನ ಗೆರೆ ಅಗೋಚರ. ಐಎಸ್ಐ ಒಳಗೆ ತಾಲಿಬಾನ್ ಶಕ್ತಿಗಳದೇ ಕಾರುಬಾರು.

ಪಾಕ್ ಪರಮಾಣು ಶಸ್ತ್ರಗಳನ್ನು ಕಾಪಾಡಲು ಐಎಸ್ಐ ಜೊತೆಗೇ ಅಮೆರಿಕ ಕೆಲಸ ಮಾಡಬೇಕು. ಅದು ಹೇಳುವುದನ್ನೇ ನಂಬಬೇಕು! ಈಗಾಗಲೆ ಐಎಸ್ಐಗೆ ಅಮೆರಿಕ ಸಕರ್ಾರ ಪರಮಾಣು ಬಾಂಬ್ ಸಂರಕ್ಷಣೆಯ ಆಧುನಿಕ ತಂತ್ರಜ್ಞಾನ ಒದಗಿಸಿದೆ. ಪರಮಾಣು ಶಸ್ತ್ರಗಳನ್ನು ಸುರಕ್ಷಿತವಾಗಿಡುವ ವಿಶೇಷ ಲಾಕ್ಗಳನ್ನು (ಅವುಗಳನ್ನು ಪಮರ್ಿಸಿವ್ ಆಕ್ಸೆಸ್ ಲಿಂಕ್ಸ್ ಎನ್ನುತ್ತಾರೆ) ನೀಡಿದೆ. ಜೊತೆಗೆ 10 ಕೋಟಿ ಅಮೆರಿಕನ್ ಡಾಲರ್ಗಳಷ್ಟು ಹಣದ ನೆರವನ್ನೂ ನೀಡಿದೆ.

ಮುಂಬೈ ಮೇಲೆ ಭಯೋತ್ಪಾದಕ ದಾಳಿಯಾದ ನಂತರ ಪಿ. ಚದಂಬರಂ ಫೈಲು ಹಿಡಿದುಕೊಂಡು ಅಮೆರಿಕಕ್ಕೆ ಹೋಗಿಬಂದರು. `ನೋಡುತ್ತಿರಿ, ಇನ್ನು ಪಾಕಿಸ್ತಾನಕ್ಕೆ ಯಾರೂ ಬೆಂಬಲ ನೀಡುವ ಹಾಗಿಲ್ಲ' ಎಂದು ಮನಮೋಹನ್ ಸಿಂಗ್ ಹೇಳಿದ್ದರು. ಆದರೆ 26/11ರ ನಂತರ ಯಾವ ಪರಿಸ್ಥಿತಿಯೂ ಬದಲಾಗಿಲ್ಲ. ಪಾಕಿಸ್ತಾನದ ಕೂದಲೂ ಕೊಂಕಿಲ್ಲ. ಅಂತಾರಾಷ್ಟ್ರೀಯ ಸಮುದಾಯದಿಂದ ದಿಗ್ಬಂಧನ ಎದುರಿಸುವ ಬದಲು ಪಾಕಿಸ್ತಾನ ಅಪಾರ ಹಣದ ರಾಶಿಯನ್ನೇ ಪಡೆಯುತ್ತಿದೆ.

`ಪಾಕಿಸ್ತಾನ್ ಎಕನಾಮಿಕ್ ಸವರ್ೇ' ಅಂಕಿಅಂಶಗಳ ಪ್ರಕಾರ, 1952 ರಿಂದ 2008ರ ವರೆಗಿನ 56 ವರ್ಷಗಳ ಕಾಲಾವಧಿಯಲ್ಲಿ ಪಾಕಿಸ್ತಾನ ಪಡೆದಿರುವ ಒಟ್ಟು ವಿದೇಶಿ ನೆರವು 73 ಶತಕೋಟಿ ಡಾಲರ್. ಆದರೆ ನವೆಂಬರ್ 2008ರ ಮುಂಬೈ (26/11) ಜಿಹಾದಿ ದಾಳಿಯ ನಂತರ, ಕಳೆದ 5-6 ತಿಂಗಳಷ್ಟು ಕಡಿಮೆ ಅವಧಿಯಲ್ಲಿಯೇ, ಪಾಕಿಸ್ತಾನಕ್ಕೆ 23.3 ಶತಕೋಟಿ ಡಾಲರ್ ವಿದೇಶಿ ಹಣ ಹರಿದು ಬಂದಿದೆ!!

ಇದರಲ್ಲಿ ಐಎಂಎಫ್ ನೀಡಿರುವ ಹಣವೇ 7 ಶತಕೋಟಿ ಡಾಲರ್. ಚೀನಾ ಅಂತೂ ಪಾಕಿಸ್ತಾನಕ್ಕೆ ಸಾಕಷ್ಟು ಹಣ ನೀಡುತ್ತಲೇ ಬರುತ್ತಿದೆ. ಅದನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ. `ಪಾಕಿಸ್ತಾನಕ್ಕೆ ಮುಂದಿನ ಐದು ವರ್ಷಗಳಲ್ಲಿ 5 ಶತಕೋಟಿ ಡಾಲರ್ ನೀಡುತ್ತೇವೆ' ಎಂದು ಒಬಾಮಾ ಆಡಳಿತ ಈಚೆಗೆ ಟೋಕ್ಯೋದಲ್ಲಿ ನಡೆದ ಡೋನರ್ಸ್ ಕಾನ್ಫರೆನ್ಸಿನಲ್ಲಿ ಒಪ್ಪಿಕೊಂಡಿದೆ. ತಕ್ಷಣಕ್ಕೆ ಒಂದು ಶತಕೋಟಿ ಡಾಲರ್ ಹಣವನ್ನೂ ಬಿಡುಗಡೆ ಮಾಡಿದೆ. `ಸಮಯ ಬಂದರೆ, ಪಾಕ್ ಸಕರ್ಾರಕ್ಕೆ ಖಾಲಿ ಚೆಕ್ ಅನ್ನು ನೀಡಲೂ ಹಿಂಜರಿಯುವುದಿಲ್ಲ' ಎಂಬ ಮಾತನ್ನೂ ಅಮೆರಿಕ ಆಡುತ್ತಿದೆ! ಆದರೆ ಈ ಹಣವೆಲ್ಲ ಹೇಗೆ ಖಚರ್ಾಗುತ್ತಿದೆ ಎಂಬುದನ್ನು ಕೇಳುವುದು ಮಾತ್ರ ಯಾರಿಂದಲೂ ಸಾಧ್ಯವಾಗಿಲ್ಲ.

`ನನ್ನ ದೌರ್ಬಲ್ಯ ಜಗತ್ತಿನ ಪಾಲಿಗೆ ಗಂಡಾಂತರಕಾರಿ. ಆದ್ದರಿಂದ ನನ್ನನ್ನು ಕೈಹಿಡಿದು ಕಾಪಾಡಿ, ನೀವೂ ಬದುಕಿಕೊಳ್ಳಿ. ಇಲ್ಲದಿದ್ದರೆ ನಿಮಗೇ ತೊಂದರೆ' ಎಂಬ ರೀತಿಯ ಸಂದೇಶಗಳನ್ನು ಬಿಂಬಿಸಿ ಹಣ ಹೊಡೆಯುವ ರಾಜತಾಂತ್ರಿಕ ಪಟ್ಟುಗಳನ್ನು ಪಾಕ್ ಎಂದೋ ಕರಗತ ಮಾಡಿಕೊಂಡಿದೆ. ಅದಕ್ಕೆ ಹಣ ಕೊಡುವುದನ್ನು ಬಿಟ್ಟು ಇತರ ಮಾರ್ಗಗಳಾವುವೂ ಅಮೆರಿಕ್ಕಾಗಲೀ, ಅಂತಾರಾಷ್ಟ್ರೀಯ ಸಮುದಾಯಕ್ಕಾಗಲೀ ಹೊಳೆಯುತ್ತಿಲ್ಲ. ಪಾಕಿಸ್ತಾನದ ಪಾಲಿಗೆ ಅದರ ದೌರ್ಬಲ್ಯವೇ ಅದರ ಶಕ್ತಿ! ಚಿನ್ನದ ಮೊಟ್ಟೆಯಿಡುವ ಕೋಳಿ.
ಈಗ ಹಣದ ರಾಶಿ ಬರುತ್ತಿರುವ ಹಾಗೆ ಪಾಕ್ ಇನ್ನೂ ಹೆಚ್ಚು ಪರಮಾಣು ಬಾಂಬ್ಗಳನ್ನು ಉತ್ಪಾದಿಸುತ್ತಿದೆ ಎಂದು ಸಿಐಎ ಹೇಳಿರುವುದು ಆತಂಕಕಾರಿ. ಇದೇ ವಿಷಯ ಅಮೆರಿಕದ ಸೆನೆಟ್ನಲ್ಲಿಯೂ ಚಚರ್ೆಗೆ ಬಂದಿತ್ತು. `ನಾವು ಕೊಡುತ್ತಿರುವ ಹಣವನ್ನು ಪಾಕ್ ಸಕರ್ಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ' ಎಂಬ ಆಕ್ಷೇಪಣೆಗಳು ಕೇಳಿಬಂದವು.

`ಪಾಕಿಸ್ತಾನಕ್ಕೆ ಹಣ ಕೊಡುವುದನ್ನು ಬಿಟ್ಟು ಬೇರೆನೂ ಜಾಜರ್್ ಬುಷ್ಗೆ ಗೊತ್ತಿಲ್ಲ' ಎಂದು ಲೇವಡಿ ಮಾಡುತ್ತ ಅಧಿಕಾರ ಹಿಡಿದ ಬರಾಕ್ ಒಬಾಮಾ, ಅನಂತರ ಬುಷ್ಗಿಂತಲೂ ಹೆಚ್ಚಿನ ಕೊಡುಗೈ ದಾನಕ್ಕೆ ಮುಂದಾಗಿದ್ದಾರೆ. ಅದೇ ಪಾಕ್ ಚಾಣಾಕ್ಷತನ.
ಈಗ ಪರಮಾಣು ಬಾಂಬ್ಗಳು ಖೈದಾ, ತಾಲಿಬಾನ್ ವಶವಾಗುತ್ತಿರಬಹುದು ಎಂಬ ವರದಿಗಳು ಭಯಾನಕವಾಗಿವೆ. ಆದರೆ ಮೊದಲು ಬೆಚ್ಚಿಬೀಳಬೇಕಾದ ಭಾರತ ಸಕರ್ಾರ ಮಾತ್ರ ಈ ಕುರಿತು ಕಳವಳವನ್ನೇ ವ್ಯಕ್ತಪಡಿಸಿಲ್ಲ. ಈ ವಿಷಯದಲ್ಲಿ ನಮ್ಮ ರಣತಂತ್ರಗಳೇನು? ಪ್ರತಿತಂತ್ರಗಳೇನು? ನಮ್ಮ ಸಿದ್ಧತೆಗಳೆಷ್ಟು? - ಎನ್ನುವುದು ತಿಳಿಯುತ್ತಿಲ್ಲ. ನಮ್ಮ ಸಕರ್ಾರದ ಯಾವ ಮುಖಂಡನೂ ದೇಶದ ಪ್ರಜೆಗಳಿಗೆ ಸುರಕ್ಷೆಯ ಭರವಸೆಯನ್ನು ನೀಡುತ್ತಿಲ್ಲ.

ಒಂದೆಡೆ ತಾಲಿಬಾನ್ ನೇರ ಪ್ರಭಾವ ಪಾಕಿಸ್ತಾನದಲ್ಲಿ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಪಾಕ್ ಸಕರ್ಾರ ಕೈಚೆಲ್ಲಿ ಕೂತಿದೆ. ಅದರ `ಅಸಹಾಯಕತೆ'ಯ ಪ್ರದರ್ಶನದಿಂದ, ಅಂತಾರಾಷ್ಟ್ರೀಯ ಸಮುದಾಯದ ರೂಪದಲ್ಲಿ, ಅದಕ್ಕೆ ಚಿನ್ನದ ಮೊಟ್ಟೆ ಇಡುವ ಕೋಳಿಯೇ ದೊರಕಿದೆ. ವಿದೇಶಗಳಿಂದ ಪಾಕಿಸ್ತಾನಕ್ಕೆ ಹಿಂದೆಂದೂ ಕಂಡರಿಯಷ್ಟು ಮಟ್ಟದಲ್ಲಿ ಹಣದ ಪ್ರವಾಹವೇ ಹರಿದು ಬರುತ್ತಿದೆ. ಅದನ್ನೇ ಬಳಸಿಕೊಂಡು ಆ ದೇಶ ಇನ್ನಷ್ಟು ಅಣು ಬಾಂಬ್ಗಳನ್ನು ತಯಾರಿಸುತ್ತಿದೆ. ಇದರಿಂದ ಅವೆಲ್ಲ ಎಲ್ಲಿ ಉಗ್ರರ ಪಾಲಾಗುತ್ತವೋ ಎಂಬ ಆತಂಕ ಶುರುವಾಗಿದೆ. ಈ ಆತಂಕ ನಿವಾರಿಸಲು ಪಾಕಿಸ್ತಾನಕ್ಕೆ ಇನ್ನಷ್ಟು ಹಣವನ್ನು ನೀಡಲಾಗುತ್ತಿದೆ. ಆ ಹಣ ಏನಾಗುತ್ತಿದೆಯೋ ಗೊತ್ತಿಲ್ಲ. ಆತಂಕವಂತೂ ಇದ್ದೇ ಇದೆ.

ಈ ವಿಷವತರ್ುಲ ಹೀಗೇ ಮುಂದುವರಿಯುತ್ತಿದ್ದರೆ, ಭಾರತ ಸಕರ್ಾರ ಮಾತ್ರ `ಇದಕ್ಕೂ ನಮಗೂ ಏನು ಸಂಬಂಧ' ಎಂದು ತಣ್ಣಗೆ ಕೂತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ