ಸೋಮವಾರ, ಮಾರ್ಚ್ 30, 2009

`ಮುಜಾಹಿದ್ದೀನ್' ತಾಳಕ್ಕೆ ವಿಶ್ವಸಂಸ್ಥೆಯ ಹೆಜ್ಜೆ!!

ಮಹತ್ವದ ಘಟನೆಯೊಂದು ಸದ್ದಿಲ್ಲದೇ ನಡೆಯುತ್ತಿದೆ. ಅದು ನಡೆಯುತ್ತಿರುವ ಸ್ಥಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆ. ಅದೇನಾದರೂ ಯಶಸ್ವಿಯಾದರೆ ಜಗತ್ತಿನ ವಿವೇಚನಾಶೀಲ ಜನರನೇಕರು ಹಿಂದೆಂದೂ ಕಾಣದ ರೀತಿಯಲ್ಲಿ ಮಾನವಹಕ್ಕು ಕಳೆದುಕೊಳ್ಳುತ್ತಾರೆ. ಅನೇಕ ದೇಶಗಳ ಜನರ ಬೌದ್ಧಿಕ ಚಿಂತನೆಯ ಹಕ್ಕು ಮೊಟಕುಗೊಳ್ಳುತ್ತದೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ. ಮನಃಸಾಕ್ಷಿ ಮೂಲೆಗುಂಪಾಗುತ್ತದೆ.

ಆದರೂ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವೀರರು ತುಟಿ ಎರಡು ಮಾಡುತ್ತಿಲ್ಲ. ಕಾರಣ ಅದು ನಡೆಯುತ್ತಿರುವುದು ಇಸ್ಲಾಮಿನ ಹೆಸರಿನಲ್ಲಿ. ಅದನ್ನು ನಡೆಸುತ್ತಿರುವುದು ಆರ್ಗನೈಸೇಷನನ್ ಆಫ್ ದಿ ಇಸ್ಲಾಮಿಕ್ ಕಾನ್ಫರೆನ್ಸ್ (ಒವೈಸಿ) - 56 ಮುಸ್ಲಿಂ ದೇಶಗಳ ಒಕ್ಕೂಟ. ನಮ್ಮ `ಸೆಕ್ಯೂಲರ್'ಗಳು ಓವೈಸಿಯನ್ನು ಎದುರಿಸಿ ನಿಲ್ಲುವುದು ಎಲ್ಲಾದರೂ ಉಂಟೆ?

ಯಾವುದು ಆ ಮಹಾ ಘಟನೆ? ಮೊದಲು ಒಂದಿಷ್ಟು ಹಿನ್ನೆಲೆಯ ಮೂಲಕ ವಿಷಯಕ್ಕೆ ಬರೋಣ.

1979ರ ಇರಾನ್ ಇಸ್ಲಾಮೀ ಕ್ರಾಂತಿಯ ನಂತರ ಜಗತ್ತಿನಲ್ಲಿ ಇಸ್ಲಾಮೀ ಭಯೋತ್ಪಾದನೆ ಮೊದಲಿಗಿಂತಲೂ ಬಹಳ ತೀವ್ರಗೊಂಡಿದ್ದು ಹಾಗೂ ಕ್ರಮೇಣ ಜಾಗತಿಕ ಮಟ್ಟದ ಜಿಹಾದ್ಗಳು ಘೊಷಣೆಯಾಗಿದ್ದು ಬಹಳ ಜನರಿಗೆ ಗೊತ್ತಿರುವ ವಿಷಯವೇ. ಆದರೆ ಈ ಬೆಳವಣಿಗೆಗಳ ಫಲಿತವಾಗಿ ಇಸ್ಲಾಮ್ ಮತವನ್ನು ಸಾರ್ವತ್ರಿಕ ವಿಮಶರ್ೆಗೆ ಒಳಪಡಿಸುವ ಬೆಳವಣಿಗೆಳೂ ಆದವು. ಪರಿಣಾಮವಾಗಿ ಇಸ್ಲಾಮ್ ಚಚರ್ಾವಸ್ತುವಾಯಿತು. ಇದು ಮೂಲಭೂತವಾದಿಗಳಿಗೆ ನುಂಗಲಾರದ ತುತ್ತಾಯಿತು.

`ಇಸ್ಲಾಮ್ ಎಂದೂ ಸಹ ಚಚರ್ಿಸಲ್ಪಡಕೂಡದು. ಅದನ್ನು ಸಮಗ್ರವಾಗಿ ಎಲ್ಲರೂ ಸ್ವೀಕರಿಸಬೇಕು. ಉಲೇಮಾಗಳು, ಮೌಲಾನಾಗಳು ಕಾಲಕಾಲಕ್ಕೆ ತಿಳಿಸುವ ಹಾಗೆ ನಡೆದುಕೊಳ್ಳುತ್ತಾ ಹೋಗಬೇಕು' ಎಂಬುದು ಮೂಲಭೂತವಾದಿಗಳ ಲಾಗಾಯ್ತಿನ ನಿಲುವು. ಮಧ್ಯಯುಗದಲ್ಲಿ ಮತ್ತು ತೀರಾ ಈಚಿನವರೆಗೂ ಈ ರೀತಿ ಮಾಡುವಲ್ಲಿ ಈ ಮುಜಾಹಿದ್ದೀನ್ಗಳು (ಮತದ ಪರವಾದ ಹೋರಾಟಗಾರರು, ಸೈನಿಕರು) ಯಶಸ್ವಿಯಾಗಿದ್ದರು. ಔರಂಗಜೇಬನ ಅಟ್ಟಹಾಸದ ನಡುವೆಯೂ ಇಸ್ಲಾಮ್ ವಿಮಶರ್ಾ ವಸ್ತುವಾಗಲೇ ಇಲ್ಲ, ಎಂಬುದು ಗಮನಾರ್ಹ.

ಆದರೆ ಇದು ಮಾಹಿತಿ ಯುಗ. ಜೊತೆಗೆ ವಿವೇಚನಾಶೀಲತೆಯ ಕ್ರಾಂತಿ 19-20ನೇ ಶತಮಾನಗಳಲ್ಲಿ ಆಗಿಹೋಗಿದೆ. ಹಿಂದೂ ಧರ್ಮ, ಕ್ರೈಸ್ತ ಮತ - ಎಲ್ಲವೂ ವಿಚಾರವಿಮಶರ್ೆಗೆ ಒಳಗಾಗಿವೆ, ಆಗುತ್ತಲೇ ಇವೆ. ಇಂತಹ ವೈಚಾರಿಕತೆಯ ಫಲಿತವಾಗಿ ನಮ್ಮಲ್ಲಿ ಸಾಕಷ್ಟು ಸುಧಾರಣೆಗಳೂ ಆಗುತ್ತಿವೆ.

ಈಗ ವಿಚಾರ-ವಿಮಶರ್ೆಗಳನ್ನು ತಡೆಯುವುದು ಅಸಾಧ್ಯ. ಒಂದೆಡೆ ಜಿಹಾದಿ ಗುಂಪುಗಳು ಬಹಿರಂಗವಾಗಿ ಇಸ್ಲಾಮಿನ ಆಡಳಿತ ಸ್ಥಾಪನೆಗಾಗಿ ಕರೆಕೊಡುತ್ತಿದ್ದರೆ, ಈ ಮಾಹಿತಿ ಯುಗದಲ್ಲಿ ಜನರು `ಹೌದಾ, ಇಸ್ಲಾಮಿನಲ್ಲಿ ಹಾಗೆ ಹೇಳಲಾಗಿದೆಯಾ?' ಎಂಬ ಕುತೂಹಲದಿಂದ ಅಧ್ಯಯನ ಮಾಡೇ ಮಾಡುತ್ತಾರೆ. ತಮ್ಮ ಅಭಿಪ್ರಾಯ ಹೇಳೇಹೇಳುತ್ತಾರೆ. ವಾಸ್ತವವಾಗಿ ನಡೆಯುತ್ತಿರುವುದು ಇದೇ.

ಆದರೆ ಚಚರ್್ಗಳಿಗೆ ಮತ್ತು ಮೌಲಾನಾಗಳಿಗೆ ತಮ್ಮ ಮತಗಳ ವಿಚಾರ-ವಿಮಶರ್ೆ ಬೇಕಿಲ್ಲ. ಮತಗಳ ಸಂಪೂರ್ಣ ಹೂರಣ ಬಟಾಬಯಲಾಗಿ ಚಚರ್ಿಸಲ್ಪಡುತ್ತಿದ್ದರೆ ಅವರಿಗೇನು ಕಿಮ್ಮತ್ತು ಸಿಗುತ್ತದೆ? ಯಾವಾಗ ಮತೀಯ ವಿಚಾರವಿಮಶರ್ೆ ತೀವ್ರವಾಯಿತೋ ಆಗ `ಇಸ್ಲಾಮ್ ಮತಕ್ಕೂ ಜಿಹಾದಿ ಗುಂಪುಗಳ ಕ್ರಿಯೆಗಳಿಗೂ ಸಂಬಂಧವಿಲ್ಲ' ಎಂಬ ಪ್ರಚಾರವನ್ನು ನಡೆಸಬೇಕಾದ ಅನಿವಾರ್ಯತೆ ಕೆಲವರಿಗೆ ಉಂಟಾಯಿತು. `ಹಾಗಾದರೆ ಅದು ಹೇಗೆ? ಇಲ್ಲಿ ಹೀಗೆ ಹೇಳಿದೆಯಲ್ಲ? - ಎಂಬ ಪ್ರಶ್ನೆಗಳೂ ಎದುರಾದವು. ಎಷ್ಟೋ ಧೈರ್ಯವಂತ ಸ್ವಮತೀಯರೂ ಸುಧಾರಣೆಯ ಕುರಿತು ಬಹಿರಂಗವಾಗಿ ಮಾತನಾಡತೊಡಗಿದರು.

ಸಮಸ್ಯೆ ಶುರುವಾಗಿದ್ದೇ ಇಲ್ಲಿ. ಮತಧರ್ಮಗಳನ್ನು ಕುರಿತ, ಅದರಲ್ಲೂ ಇಸ್ಲಾಮ್ ಮತವನ್ನು ಕುರಿತ ವಿಚಾರವಿಮಶರ್ೆಗಳಿಗೆ ಹೇಗಾದರೂ ಮಂಗಳ ಹಾಡಬೇಕು ಎಂಬ ಪ್ರಯತ್ನವನ್ನು ಓವೈಸಿ 1999ರಲ್ಲಿ ಆರಂಭಿಸಿತು. `ಇಸ್ಲಾಮಿನ ಅವಹೇಳನ ನಡೆಯುತ್ತಿದೆ' ಎಂದು 56 ದೇಶಗಳು ಒಟ್ಟಾಗಿ ಬೊಬ್ಬೆಯಿಟ್ಟವು. ಈಗ ನಿಷ್ಕ್ರಿಯವಾಗಿರುವ ಮಾವನಹಕ್ಕು ಆಯೋಗದಲ್ಲಿ ಪ್ರತಿ ವರ್ಷವೂ ಇಸ್ಲಾಮಿನ ಪರವಾಗಿ ನಿರ್ಣಯಗಳನ್ನು ಮಂಡಿಸಿ ಅನುಮೋದಿಸಲಾಯಿತು. ಈ ಪ್ರಕ್ರಿಯೆ 2001ರ ಸೆಪ್ಟೆಂಬರ್ 11ರ ಭಯೋತ್ಪಾದಕ ಕೃತ್ಯದ ನಂತರದ ಸ್ವಲ್ಪ ಕಳೆಗುಂದಿತು. ಆದರೆ 2005ರ ಡ್ಯಾನಿಷ್ ಪತ್ರಿಕೆಯ ಮುಹಮ್ಮದ್ ವ್ಯಂಗ್ಯಚಿತ್ರಗಳ ಗಲಾಟೆಯ ನಂತರ ಮತ್ತೆ ಹೊಸ ಹುರುಪು ಪಡೆಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ಲಾಮ್ ಕುರಿತ ವಿಮಶರ್ೆಗಳಿಗೆ ಸಂಪೂರ್ಣ ನಿಷೇಧ ಹಾಕಿಸಲು ರಾಜತಾಂತ್ರಿಕ ಚಟುವಟಿಕೆಗಳು ಬಿರುಸುಗೊಂಡವು. ಈ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಜನರಲ್ ಅಸೆಂಬ್ಲಿ) ನಿರ್ಣಯಗಳನ್ನು ಮಂಡಿಸಲಾಯಿತು.

`ಜಗತ್ತಿನಲ್ಲಿ ಮತ-ಧರ್ಮಗಳ ನಿಂದನೆ, ಅವಹೇಳನ ತೀವ್ರವಾಗುತ್ತಿದೆ. ಅದನ್ನು ತಡೆಗಟ್ಟಬೇಕು. ಈ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧ ಹಾಕಬೇಕು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಈ ಕುರಿತು ಕಾನೂನುಗಳನ್ನು ಸೃಷ್ಟಿಸಲು ಅವುಗಳ ಮೇಲೆ ಒತ್ತಡ ಹಾಕಬೇಕು' ಎಂಬ ಧ್ವನಿಯುಳ್ಳ ಈಚಿನ ನಿರ್ಣಯದ ಕರಡನ್ನು ( ಈ ಕರಡಿನ ಪ್ರತಿ ನನ್ನ ಬಳಿ ಇದೆ) ಓವೈಸಿ ಪರವಾಗಿ ಪಾಕಿಸ್ತಾನ ಸಿದ್ಧಪಡಿಸಿದೆ. 2008ರ ಡಿಸೆಂಬರ್ನಲ್ಲಿ ಮತಕ್ಕೆ ಹಾಕಿದಾಗ ಈ ನಿರ್ಣಯವನ್ನು ಅಂಗೀಕರಿಸಿದ ರಾಷ್ಟಗಳದೇ ಮೇಲುಗೈ ಆಗಿದೆ!

ಇದು ಆಘಾತಕಾರಿ ಸುದ್ದಿ. ಈಚೆಗೆ ಈ ನಿರ್ಣಯದ ಹೊಸ ಕರಡನ್ನು ಪಾಕಿಸ್ತಾನ ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ (ಯೂಎನ್ ಹ್ಯೂಮನ್ ರೈಟ್ಸ್ ಕೌಂಸಿಲ್) ರಾಜತಾಂತ್ರಿಕರಿಗೆ ವಿತರಿಸಿದೆ. ಮಾಚರ್್ ಅಂತ್ಯದಲ್ಲಿ (ನೀವು ಈ ಲೇಖನ ಓದುವ ಹೊತ್ತಿಗೆ) ಅದನ್ನು ಮತಕ್ಕೆ ಹಾಕುವ ನಿರೀಕ್ಷೆ ಇದೆ.

ಇನ್ನೂ ಒಂದು ಆಘಾತಕಾರಿ ಸುದ್ದಿಯಿದೆ. ಕಳೆದ ಡಿಸೆಂಬರ್ನಲ್ಲಿ ಇದನ್ನು ಮತಕ್ಕೆ ಹಾಕಿದಾಗ ಎಮ್. ಎಫ್. ಹುಸೇನನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದ್ದ `ಮಹಾನ್' ಭಾರತ ಸಕರ್ಾರ ಈ ನಿರ್ಣಯವನ್ನು ವಿರೋಧಿಸಲಿಲ್ಲ. ಕಡೇ ಘಳಿಗೆಯಲ್ಲಿ ಯಾವ ಪಕ್ಷಕ್ಕೂ ಮತ ಹಾಕದೇ ತಟಸ್ಥವಾಗಿ ಉಳಿಯಿತು. ಇದರಿಂದ ಅದು ನಿರ್ಣಯವನ್ನು ಪರೋಕ್ಷವಾಗಿ ಬೆಂಬಲಿಸದಂತೆಯೇ ಆಯಿತು.

ಓವೈಸಿಯ 56 ದೇಶಗಳ ಜೊತೆಗೆ ಕಮ್ಯೂನಿಸ್ಟ್ ಚೀನಾ, ಕ್ಯೂಬಾ ಹಾಗೂ ರಷ್ಯಾ ಸಿಂಗಪುರ, ಥಾಯ್ಲ್ಯಾಂಡ್, ನಿಕಾರಾಗುವಾ, ವೆನಿಜ್ಯೂಯೇಲಾ, ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳು ನಿರ್ಣಯದ ಪರವಾಗಿ ಮತ ಹಾಕಿದವು. ಪಶ್ಚಿಮದ ದೇಶಗಳು, ಆಸ್ಟ್ರೇಲಿಯಾ, ಉಕ್ರೇನ್ ವಿರುದ್ಧವಾಗಿ ಮತ ಹಾಕಿದವು. ಭಾರತ, ಜಪಾನ್, ಬ್ರೆಜಿಲ್, ಮೆಕ್ಸಿಕೋ ಮೊದಲಾದ ಕೆಲವು ದೇಶಗಳು ತಟಸ್ಥ (ಶಿಖಂಡಿ) ಮಾರ್ಗ ಹಿಡಿದವು. ನ್ಯೂಜಿಲೆಂಡ್ ಮತ್ತು ಕೆಲವು ಚಿಲ್ಲರೆ ದೇಶಗಳು ಗೈರುಹಾಜರಾಗುವ ಮೂಲಕ ಪರೋಕ್ಷವಾಗಿ ನಿರ್ಣಯದ ಪರವಾದ ಬಲವನ್ನೇ ಹೆಚ್ಚಿಸಿದವು.

ಆದರೆ ಈ ನಿರ್ಣಯ ಮತದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಭಯೋತ್ಪಾದನೆಯ ಕುರಿತು ಮೌನವಹಿಸಿದೆ. ಪಾಕಿಸ್ತಾನದ ಮಾನವಹಕ್ಕುವಾದಿಗಳೂ ಸೇರಿದಂತೆ ವಿಶ್ವಾದ್ಯಂತ ಮಾನವಹಕ್ಕುವಾದಿಗಳು ಅದನ್ನು ವಿರೋಧಿಸಿದ್ದಾರೆ. ಮಹಿಳೆಯರ ಸ್ಥಾನಮಾನದ ಬಗ್ಗೆಯೂ ಅದು ಚಕಾರವೆತ್ತಿಲ್ಲ. ಕುರಾನ್ ಸೇರಿದಂತೆ ಎಷ್ಟೋ ಮತೀಯ ಗ್ರಂಥಗಳಲ್ಲೇ ಇತರ ಮತಧರ್ಮಗಳ ನಿಂದನೆ, ಟೀಕೆ ಕಂಡುಬರುತ್ತದೆ. ಕುರಾನ್ನಲ್ಲಿ ಕ್ರೈಸ್ತರನ್ನು ಟೀಕಿಸಲಾಗಿದೆ. ಯಹೂದ್ಯ ಮತವನ್ನು ವಾಚಾರಗೋಚರವಾಗಿ ನಿಂದಿಸಲಾಗಿದೆ. ಎಲ್ಲಕ್ಕಿಂತಲೂ ತೀವ್ರವಾಗಿ ವಿಗ್ರಹಪೂಜೆ ಮಾಡುವ ಹಿಂದೂ ಧರ್ಮದಂತಹ ಧರ್ಮಗಳನ್ನು ಅವಹೇಳನ ಮಾಡಿ, ಖಂಡಿಸಿದ್ದಲ್ಲದೇ ಅವುಗಳ ಮೇಲೆ ಯುದ್ಧವನ್ನೂ ಸಾರಲಾಗಿದೆ. ಹೀಗಿರುವಾಗ ಈ ಕುರಿತು ಓವೈಸಿ ನಿರ್ಣಯ ಏನನ್ನೂ ಹೇಳದೇ ಮಣವವಾಗಿರುವುದು ಏಕೆ?

ಮತಗಳ ಅವಹೇಳವನ್ನು ತಡೆಯಬೇಕಾದರೆ ಮೊದಲು ಮತೀಯ ಗ್ರಂಥಗಳ ಮೂಲವೇ ಆರಂಭಿಸಬೇಕಾಗುತ್ತದೆ. ಅನ್ಯಮತಗಳ ವಿಮಶರ್ೆ ಮಾಡದ ಹೊಸ ಮತಗಳು ಯಾವುವು? ಹಳೆಯ ಮತಗಳ ಅವಹೇಳನ, ಮೂದಲಿಕೆ ಮಾಡದ ಹೊಸ ಪ್ರವಾದಿಗಳು ಯಾರು? ಹೀಗಾಗಿ ಮತೀಯ ಗ್ರಂಥಗಳ ಪರಿಷ್ಕಾರ ಹಾಗೂ ಪುನರ್ ಸಂಕಲನದ ಮೂಲಕವೇ ಮತಗಳ ಅವಹೇಳನ ತಡೆಯುವುದು ಒಳ್ಳೆಯ ಕ್ರಮ, ಅಲ್ಲವೆ?

ಒಂದುವೇಳೆ ಈ ನಿರ್ಣಯ ಸಂಪೂರ್ಣವಾಗಿ ಜಾರಿಗೆ ಬಂದಲ್ಲಿ ಏನಾಗುತ್ತದೆ? ಪಾಕಿಸ್ತಾನದಲ್ಲಿರುವ ಮತೀಯ ಕಾನೂನುಗಳು ಇನ್ನಷ್ಟು ಬಿಗಿಯಾಗುತ್ತವೆ. ಅಲ್ಲಿನ ಸಾಮಾನ್ಯ ಜನರು ತಾಲಿಬಾನ್ ಅನ್ನು ನಿಂದಿಸುವುದೂ ಅಸಾಧ್ಯವಾಗುತ್ತದೆ. ಸೌದಿ ಅರೇಬಿಯಾ ಇನ್ನಷ್ಟು ಅಧ್ವಾನವೆದ್ದು ಹೋಗುತ್ತದೆ. `ಸೆಕ್ಯೂಲರ್' ಭಾರತದಲ್ಲಿ ಮೊದಲೇ ಸಾಚಾರ್ ಶಕೆ ಆರಂಭವಾಗಿದೆ. ಜೊತೆಗೆ ದೇವಬಂದ್ ಫತ್ವಾಗಳೂ ಸೆಕ್ಯೂಲರ್ ಧುರಿಣರೂ ಸೇರಿಕೊಂಡು ಏನೇನು ಹೊಸ ಕಾನೂನುಗಳನ್ನು ಮಾಡುತ್ತಾರೋ ಹೇಳಲಾಗದು.

ಅಂದಹಾಗೆ, ಜೀನಿವಾದ `ಹ್ಯೂಮನ್ ರೈಟ್ಸ್ ಕೌಂಸಿಲ್'ನಲ್ಲಿ ಇಸ್ಲಾಮಿಕ್ ರಾಷ್ಟ್ರಗಳದೇ ಮೆಜಾರಿಟಿ! ಜೊತೆಗೆ ರಷ್ಯಾ, ಚೀನಾ, ಕ್ಯೂಬಾಗಳಂತಹ ಪ್ರಜಾತಂತ್ರ ವಿರೋಧಿ ರಾಷ್ಟ್ರಗಳ ಬೆಂಬಲದಿಂದ ನಿರ್ಣಯ ಅಂಗೀಕಾರವಾಗುವುದರಲ್ಲಿ ಸಂಶಯವೇ ಇಲ್ಲ.

ಇದರಿಂದ ಕ್ರಮೇಣ ಏನಾಗುತ್ತದೆ? ಒಂದು ಬೆಳವಣಿಗೆ ಎಂದರೆ, ಎಷ್ಟೋ ದೇಶಗಳಲ್ಲಿ `ಮಾನವ ಹಕ್ಕು' ಮತ್ತು `ಮುಕ್ತ ವಿವೇಚನಾ ಸ್ವಾತಂತ್ರ್ಯ' ಎಂಬ ಪರಿಕಲ್ಪನೆಗಳೇ ಮಾಯವಾಗುತ್ತವೆ; `ಮತಗಳ ಮಾನನಷ್ಟ' ತಡೆಯಲು ಹೋಗಿ ಮನುಷ್ಯರ ಮನುಷ್ಯತ್ವಕ್ಕೇ ಭಂಗ ಬರಬಹುದು. ಇನ್ನೊಂದು ಬೆಳವಣಿಗೆ ಎಂದರೆ ಕೆಲವು ಬಿಡಿ ಬಿಡಿ ದೇಶಗಳು ಮನುಷ್ಯತ್ವವನ್ನೇ ಎತ್ತಿಹಿಡಿಯಲು ನಿರ್ಧರಿಸುತ್ತವೆ; ಇದರಿಂದ ಕೋಮುವಾದಿಗಳ ಜೊತೆಗಿನ ವೈರತ್ವ ಹೆಚ್ಚಾಗುತ್ತದೆ; ಮತೀಯ ಸಂಘರ್ಷ ಇನ್ನಷ್ಟು ತೀವ್ರವಾಗುತ್ತದೆ.
ವಿಷಮ ಪರಿಸ್ಥಿತಿಗಳಿಗೆ ಕಾರಣವಾಗುವ ಇಂತಹ ಒಂದು ಮತೀಯ ನಿರ್ಣಯ ಬೇಕಿತ್ತೆ? `ಹೌದು' ಎಂಬುದೇ ಮೂಲಭೂತವಾದಿಗಳು ಕೊಡುವ ಉತ್ತರ. ಅದು ನಿರೀಕ್ಷಿತವೇ. ಆದರೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅದನ್ನು ವಿಶ್ವಸಂಸ್ಥೆಯ ಅಂಗಳದಲ್ಲಿ ಬೆಂಬಲಿಸುತ್ತಿರುವ ಇತರ ದೇಶಗಳನ್ನು ಏನೆಂದು ಕರೆಯಬೇಕೋ ತಿಳಿಯುತ್ತಿಲ್ಲ. ದುರದೃಷ್ಟವೆಂದರೆ ಈ ಗುಂಪಿನಲ್ಲಿ ಭಾರತವೂ ಸೇರಿಕೊಂಡಿರುವುದು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ