ಸೋಮವಾರ, ಮಾರ್ಚ್ 30, 2009

ವರುಣ್ ವಿರುದ್ಧ `ಸೆಕ್ಯೂಲರ್' ಮಾಧ್ಯಮಗಳ ಸಮರ?

ವರುಣ್ ಗಾಂಧಿ ಈಗ `ಸೆಕ್ಯುಲರ್' ಮಾಧ್ಯಮಗಳ ಬಲಿಪಶು ಎನ್ನುವುದರಲ್ಲಿ ಸಂಶಯವೇ ಇಲ್ಲ. ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡಬೇಕೆಂದು ವದಿಸುವ ಸೆಕ್ಯೂಲರ್ ಬುದ್ಧಿಜೀವಿಗಳು ವರುಣ್ ವಿರುದ್ಧ ರಾಷ್ಟ್ರೀಯ ಸುರಕ್ಷಾ ಕಾಯ್ದೆಯನ್ನು ಅನ್ವಯಿಸಿರುವುದನ್ನು ಸ್ವಾಗತಿಸಿದ್ದಾರೆ. ಅವರ ನೆಚ್ಚಿನ ಯುವನೇತಾರ ರಾಹುಲ್ ಗಾಂಧಿ. ಇದು ಮಹಾಭಾರತ ಕುರುಕ್ಷೇತ್ರ ಸಮಯದ ದಾಯಾದಿ ಕಲಹದ ವಾತಾವರಣವನ್ನೇ ಹೋಲುತ್ತದೆ.

ನಮ್ಮ ಸೆಕ್ಯುಲರ್ ಚಾನೆಲ್ಗಳ ದ್ವಿಮುಖ ನೀತಿ ತಿಳಿಯಲೊಂದು ಉದಾಹರಣೆ ನೋಡೋಣ. ವರುಣ್ ಮಾಡಿದರೆನ್ನಲಾದ ವಿವಾದಿತ (ಹಾಗೂ ಆಪಾದಿತ) ಭಾಷಣದ ವೀಡಿಯೋ ತೋರಿಸುವ ಮೊದಲು ಸಿಎನ್ಎನ್-ಐಬಿಎನ್ ಚಾನೆಲ್ ಒಂದು ಸ್ವಲ್ಪವೂ ಹಿಂಜರಿಯಲಿಲ್ಲ. ಆದರೆ ಮನಮೋಹನ್ ಸಿಂಗ್ ಸಕರ್ಾರ ಈಚೆಗೆ ವಿಶ್ವಾಸ ಮತ ಯಾಚಿಸಿದ್ದಾಗ ನಡೆಸಲಾದ `ಸ್ಟಿಂಗ್ ಆಪರೇಷನ್'ನಲ್ಲಿ ಭಾಗಿಯಾಗಿದ್ದೂ ಸಹ ಅಮರ್ ಸಿಂಗ್ ಲಂಚಾವತರಾದ ವೀಡಿಯೋ ತೋರಿಸಲು ಚಾನೆಲ್ ನಿರಾಕರಿಸಿತ್ತು!

ಸಕರ್ಾರದ ಪರವಾಗಿ ಮತಹಾಕಲು ಅಥವಾ ಮತದಾನದಲ್ಲಿ ಪಾಲುಗೊಳ್ಳದೇ ಇರಲು ತನ್ನ ಸಂಸದರಿಗೆ ಅಮರ್ ಸಿಂಗ್ ಕೋಟಿ ರೂಪಾಯಿ ಲಂಚ ನೀಡಿದರೆಂದು ಬಿಜೆಪಿ ಲೋಕಸಭಾಧ್ಯಕ್ಷ ಸೋಮನಾಥ ಚಟಜರ್ಿಗೆ ಅಧಿಕೃತವಾಗಿ ದೂರು ನೀಡಿ ಕೋಟಿ ರೂಪಾಯಿಗಳ ನೋಟಿನ ಕಟ್ಟುಗಳನ್ನು ಲೋಖಸಭೆಯಲ್ಲಿ ತೋರಿಸಿತ್ತು. `ಲಂಚದ ಘಟನಾವಳಿಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಸಿಎನ್ನ್-ಐಬಿಎನ್ ವಾಹಿನಿಯಲ್ಲಿ ಬರುತ್ತೆ, ನೋಡುತ್ತಿರಿ' ಎಂದು ಬಿಜೆಪಿ ಒಂದು ಹಂತದಲ್ಲಿ ಪ್ರಕಟಿಸಿತ್ತು. ಆದರೆ ಟಿವಿ ವಾಹಿನಿ ಈ ದೃಶ್ಯಗಳನ್ನು ಪ್ರಸಾರ ಮಾಡಲೇ ಇಲ್ಲ!

ರಾಜದೀಪ್ ಹಾಗೆ ಮಾಡಿದ್ದರೆ ಇಡೀ ದೇಶದ ತುಂಬಾ ಲಂಚಾವತಾರದ ದೃಶ್ಯಗಳು ರಾರಾಜಿಸುತ್ತಿದ್ದವು. ಮನಮೋಹನ್ ಸಕರ್ಾರ ಗೆಲ್ಲುವುದು ಕಷ್ಟವಾಗುತ್ತಿತ್ತು. ಅವರು ಹಾಗೆ ಮಾಡದಿದ್ದುದರಿಂದ ಸಕರ್ಾರಕ್ಕೆ ಅನುಕೂಲವಾಯಿತು. ಬಿಜೆಪಿ ಬಹಳ ಕಷ್ಟಪಟ್ಟು ಸ್ಟಿಂಗ್ ಆಪರೇಷನ್ ನಡೆಸಿತ್ತು. ಅದರ ಚಿತ್ರೀಕರಣದ ಹೊಣೆಯನ್ನು ಐಬಿನ್ ಮುಖ್ಯ ಸಂಪಾದಕ ಸದರ್ೇಸಾಯಿಗೆ ವಹಿಸಲಾಗಿತ್ತು. ಹಾಗಿದ್ದರೂ ಆ ದೃಶ್ಯಗಳನ್ನು ಟಿವಿಯಲ್ಲಿ ತೋರಿಸಲಿಲ್ಲ! `ಈ ಸ್ಟಿಂಗ್ ಆಪರೇಷನ್ನಲ್ಲಿ ನಾವು `ಗೋಡೆಯ ಮೇಲಿನ ನೊಣಗಳು' ಅಷ್ಟೇ. ನಡೆಯುತ್ತಿದ್ದ ಘಟನೆಗಳನ್ನು ಮೂರನೆಯವರಾಗಿ ಚಿತ್ರೀಕರಿಸಿದ್ದೇವೆ. ನಾವು ಘಟನೆಯಲ್ಲಿ ಭಾಗಿಗಳಲ್ಲ. ನಮ್ಮ ತನಿಖೆ ಅಪೂರ್ಣವಾಗಿತ್ತು, ಟೇಪು ಮತ್ತು ಅದರ ಲಿಪ್ಯಂತರ ಪ್ರತಿಗಳನ್ನು ವಕೀಲ ಹರೀಶ್ ಸಾಳ್ವೆಗೆ ತೋರಿಸಿದೆವು. ಅವರು ತನಿಖೆ ಅಪೂರ್ಣವಾಗಿದೆ, ಇದನ್ನು ಪ್ರಸಾರ ಮಾಡಬೇಡಿ ಎಂದು ಸಲಹೆ ನೀಡಿದರು. ಆದ್ದರಿಂದ ನಾವದನ್ನು ಪ್ರಸಾರ ಮಾಡಲಿಲ್ಲ. ಒಂದು ಸ್ವಲ್ಪವೂ ಎಡಿಟಿಂಗ್ ಮಾಡದೇ ಎಲ್ಲ ಟೇಪುಗಳನ್ನೂ ಸ್ಪೀಕರ್ಗೆ ಪ್ರಾಮಾಣಿಕವಾಗಿ ಕೊಟ್ಟಿದ್ದೇವೆ. ನಾವು ತನಿಖೆ ಮುಗಿಸುವವರೆಗೂ ಬಿಜೆಪಿಯವರು ಕಾಯದೇ ಲೋಕಸಭೆಯಲ್ಲಿ ಹಣದ ಕಟ್ಟುಗಳನ್ನು ತೋರಿಸಿಬಿಟ್ಟರು'' ಎಂಬುದು ರಾಜದೀಪ್ ಚಾನೆಲ್ ನೀಡಿದ ಸಮಜಾಯಿಷಿ. ಆದರೆ ಇಂತಹ ಯಾವುದೇ ಸಬೂಬುಗಳನ್ನು ವರುಣ್ ಗಾಂಧಿ ವಿಷಯದಲ್ಲಿ ಮಾತ್ರ ಅವರು ನೀಡಲಿಲ್ಲ! ಚುನಾವಣಾ ಆಯೋಗಕ್ಕೆ ಸಿಡಿ ಕೊಡುತ್ತೇವೆ, ಟಿವಿಯಲ್ಲಿ ತೋರಿಸುವುದಿಲ್ಲ ಎಂದು ಹೇಳಲಿಲ್ಲ. ಸಂಸದರ ಲಂಚಾವತಾರದ ಪ್ರಕರಣ ಸಕರ್ಾರದ ಪಾಲಿಗೆ ಮುಳುವಾಗುವ ಸಾಧ್ಯತೆ ಇದ್ದಾಗ ಸಿಡಿಯನ್ನು ಪ್ರಸಾರ ಮಾಡದೇ ಸಕರ್ಾರಕ್ಕೆ ನೆರವಾದ ರಾಜ್ದೀಪ್ ವರುಣ್ ವಿಷಯದಲ್ಲಿ ಸಿಡಿಯನ್ಬು ಪ್ರಸಾರ ಮಾಡುವ ಮೂಲಕ ಕಾಂಗ್ರೆಸ್ಸಿಗೆ ನೆರವಾದರು.

ಬಿಜೆಪಿಯ ನೈತಿಕತೆ ಕುರಿತೂ ಪ್ರಶ್ನೆಗಳಿವೆ. ಅದು ಬೇರೆ ವಿಷಯ. ಆದರೆ ಯಾರ ಹೊಲಸು ಸಿಕ್ಕರೂ ಅದನ್ನು ಬಹಿರಂಗ ಪಡಿಸಬೇಕಾದ್ದು ಸಾರ್ವಜನಿಕ ಹಿತಾಸಕ್ತಿಗೆ ಬದ್ಧವಾದ ಪತ್ರಿಕೋದ್ಯಮ. ಸಾರ್ವಜನಿಕ ಹಿತಾಸಕ್ತಿಯೇ ಪತ್ರಿಕೋದ್ಯಮದ ಮೂಲ ಉದ್ದೇಶ. ಪತ್ರಕರ್ತರಿಗೆ ಯಾವ ಪಕ್ಷದ ಮುಲಾಜೂ ಇರಕೂಡದು. ಹಾಗೇ ಇನ್ಯಾವ ಪಕ್ಷದ ಮೇಲೆ ದ್ವೇಷವೂ ಇರಬಾರದು. ಕಂಡಿದ್ದನ್ನು ಕಂಡ ಹಾಗೆ ವರದಿ ಮಾಡುವುದು ಪತ್ರಕರ್ತರ ಧರ್ಮ. ಆದರೆ ಲಭ್ಯವಾದ ಮಾಹಿತಿ ಸತ್ಯವೋ ಅಲ್ಲವೋ ಎಂಬ ಪರಿಶೀಲನೆ ಖಂಡಿತ ಬೇಕು. ವರುಣ್ ವಿಷಯದಲ್ಲೇಕೆ ಕಾನೂನು ತಜ್ಞರ ಸಲಹಯನ್ನು ನಮ್ಮ ಸೆಕ್ಯೂಲರ್ ಮಾಧ್ಯಮ ಮಿತ್ರರು ಕೇಳಲಿಲ್ಲ?

ವರುಣ್ ವಿಷಯದಲ್ಲಿ ಇವರುಗಳು ಕಾಂಗ್ರೆಸ್ಸಿಗೆ ಎರಡು ಉಪಕಾರಗಳನ್ನು ಮಾಡಿದ್ದಾರೆ. ಮೊದಲನೆಯದಾಗಿ, ರಾಹುಲ್ ಮತ್ತು ವರುಣ್ - ನೆಹರೂ/ಗಾಂಧಿ ಪರಿವಾರದ ಈ ದಾಯಾದಿಗಳ ಕಲಹದಲ್ಲಿ, ದಾಯಾದಿಗಳ ರಾಜಕೀಯ ಮೇಲಾಟದಲ್ಲಿ ಪಾತ್ರವಹಿಸಿದ್ದಾರೆ. ಎರಡನೆಯದು ಕಾಂಗ್ರೆಸ್ಸಿಗೆ ಮುಸ್ಲಿಂ ವೋಟ್ ಬ್ಯಾಂಕ್ ಕೈತಪ್ಪದೇ ಇರುವಂತೆ ಸಹಕರಿಸಿದ್ದಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ