ಸೋಮವಾರ, ಮಾರ್ಚ್ 23, 2009

ಓಟಿಗಾಗಿ ಸಿಮಿಯ ಸೆರಗು ಹಿಡಿಯುವುದೆ?

ನಮ್ಮ ಕೋಮುವಾದಿ ರಾಜಕೀಯ ಯಾವ ಮಟ್ಟದಲ್ಲಿದೆ ನೋಡಿ.

`ಇಸ್ಲಾಂ ನಮ್ಮ ದೇಶವೇ ಹೊರತು ಭಾರತ ಅಲ್ಲ' -ಹೀಗೆಂದು ಗುಡುಗಿದವನು ಮಹಮ್ಮದ್ ಅಮೀರ್ ಶಕೀಲ್. ಸಂದರ್ಭ: ಔರಂಗಾಬಾದ್ ಸಮಾವೇಶ. 2001ರಲ್ಲಿ ನಿಷೇಧಿತವಾದ ಉಗ್ರವಾದಿ ಜಿಹಾದಿ ಸಂಘಟನೆ, `ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಅಫ್ ಇಂಡಿಯಾ' (ಸಿಮಿ) 1999ರಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ಅದು.

`ಸಿಮಿ ಭಯೋತ್ಪಾದಕ ಸಂಘಟನೆ ಅಲ್ಲ. ಅದನ್ನು ನಿಷೇಧಿಸಿದವರೇ ಭಯೋತ್ಪ್ಪಾದಕರು' - ಎಂದು ದೇಶದ ದೊಡ್ಡ `ಸೆಕ್ಯುಲರ್' ಪಕ್ಷದಿಂದ ಹಿಡಿದು ಚಿಕ್ಕ ಸೆಕ್ಯುಲರ್ ಪಕ್ಷಗಳ ಅನೇಕ ರಾಜಕಾರಣಿಗಳು ಗುಡುಗಿದ್ದಾರೆ.

ಮೂರು ದಶಕಗಳಿಂದ ಈ ಸಂಘಟನೆ ತನ್ನ ದೇಶವಿರೋಧಿ ಹಾಗೂ ಮಾನವ ವಿರೋಧಿ ಚಟುವಟಿಕೆಗಳಿಂದ ಗಮನ ಸೆಳೆಯುತ್ತಲೇ ಇದೆ. ಆದರೂ ಅದಕ್ಕೆ ರಾಜಕೀಯ ಬೆಂಬಲ ಒದಗಿಸಲು ಮುಂದೆ ಬರುವ `ನಾಯಕರು' ಬಹಳ ಮಂದಿ ಇದ್ದಾರೆ.

ಈಗಂತೂ ಸಿಮಿ ಮನೆಮಾತಾಗಿದೆ. ಭಾರತದ ಎಲ್ಲ ರಾಜ್ಯಗಳಲ್ಲೂ ಅದರ ಬೇರು ಹರಡಿದೆ. ಕನರ್ಾಟಕದಲ್ಲಿ ಸಿಮಿಗೆ ಸೇರಿದ ಉಗ್ರವಾದಿ ಯುವಕರು ಸಿಕ್ಕಿಬಿದ್ದಿದ್ದಾರೆ. ತೀರಾ ಈಚೆಗೆ, ಅಂದರೆ ಇದೇ ಏಪ್ರಿಲ್ 7, ಚಾಂದ್ರಮಾನ ಯುಗಾದಿ ಹಬ್ಬದಂದು ಸಿಮಿಯ 6 ಉಗ್ರರನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಮಾಚರ್್ 27ರಂದು ಸಂಘಟನೆಯ ಪ್ರದಾನ ಕಾಯದಶರ್ಿ ಸಫ್ದರ್ ನಾಗೋರಿ ಸಹ ಸಿಕ್ಕಿಬಿದ್ದಿದ್ದಾನೆ. 2000ನೇ ಆಗಸ್ಟ್ 15 ರಿಂದ ಈವರೆಗೆ ಸರಣಿ ಬಾಂಬ್ ದಾಳಿ ಮೊದಲಾದ ಅನೇಕ ಭಯೋತ್ಪಾದಕ ಹಾಗೂ ದೇಶವಿರೋಧಿ ಚಟುವಟಿಕೆಗಳ ಹಾಗೂ ಸಂಚಿನ ಆರೋಪದ ಮೇಲೆ ನೂರಾರು, ಸಾವಿರಾರು ಸಿಮಿ ಕಾರ್ಯಕರ್ತರು ವಿವಿಧ ರಾಜ್ಯಗಳಲ್ಲಿ ಬಂಧಿಸಲ್ಪಟ್ಟಿದ್ದಾರೆ. ಬಂಧಿತರಿಂದ ಅನೇಕ ಸಂಚುಗಳು ಬಯಲಾಗಿವೆ. ಅನೇಕ ಸಿಮಿ ತರಬೇತಿ ಶಿಬಿರಗಳನ್ನು ಪೊಲೀಸರು ನಾಶಮಾಡಿದ್ದಾರೆ. ಅನೇಕ ಬಂಧಿತ ಉಗ್ರರಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದೆ.

2001ರ ಸೆಪ್ಟೆಂಬರ್ 21 ರಂದು ಈ ಸಂಘಟನೆಯನ್ನು ಕೇಂದ್ರ ಸಕರ್ಾರ ನಿಷೇಧಿಸಿತು. ಮರುದಿನ `ಈ ನಿಷೇಧ ಸಮರ್ಥನೀಯವಲ್ಲ' ಎಂಬ ಧಾಟಿಯಲ್ಲಿ ಕೆಲವು ಇಂಗ್ಲಿಷ್ ಪತ್ರಿಕೆಗಳು ಬರೆದವು. `ಇದು ರಾಜಕೀಯ ಪ್ರೇರಿತ ನಿಷೇಧ', `ಕೋಮುವಾದಿಗಳ ಅಪಾಯಕಾರಿ ಕ್ರಮ' ಎಂದು ಜರಿಯಲಾಯಿತು. ಮಾಜಿ ಪ್ರಧಾನಿಯೊಬ್ಬರು ಸಿಮಿ ಪರವಾಗಿ ಕಣ್ಣೀರಿಟ್ಟು ಬೀದಿ ಮೆರವಣಿಗೆಯನ್ನೂ ನಡೆಸಿದರು. ಸಂಘಟನೆಯ ಪರವಾಗಿ ವಕೀಲರಂತೆ ವಾದಿಸಿದರು!

2006ರ ಏಪ್ರಿಲ್ 21ರಂದು ಮತ್ತೆ ಕೇಂದ್ರ ಸಕರ್ಾರ ಸಿಮಿಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಬೇಕಾಯಿತು. ದೊಡ್ಡ ಸೆಕ್ಯುಲರ್ ಪಕ್ಷ ತನಗೆ ಎದುರಾದ ಅನಿವಾರ್ಯತೆಗೆ ಪರಿಹಾರವಾಗಿ ತನ್ನ ಕೆಲವು ಚಿಕ್ಕ ನಾಯಕರಿಂದ ಸಿಮಿ ಪರವಾದ ಹೇಳಿಕೆ ಕೊಡಿಸಿತು! ಆದರೆ ಅದೇ ವರ್ಷ ಜುಲೈ 6ರಂದು `ಸಿಮಿ ಭಯೋತ್ಪಾದಕ ಸಂಘನೆಯಲ್ಲ' ಎಂಬ ವಾದವನ್ನು ತಳ್ಳಿಹಾಕಿದ ಸುಪ್ರೀಂ ಕೋಟರ್್ ಸಂಘಟನೆಯ ಮೇಲಿನ ನಿಷೇಧವನ್ನು ಎತ್ತಿಹಿಡಿಯಿತು. ನಿಷೇಧದ ಅಗತ್ಯವನ್ನು ಕುರಿತು ಪರಿಶೀಲಿಸಲು ನಿಯುಕ್ತವಾಗಿದ್ದ ನ್ಯಾಯಾಧಿಕರಣ ಸಹ ಅದೇ ವರ್ಷ ಆಗಸ್ಟ್ 6ರಂದು ಈ ನಿಷೇಧವನ್ನು ಮಾನ್ಯಮಾಡಿತು.

2007ರ ಫೆಬ್ರವರಿ 15ರಂದು `ಸಿಮಿ ದೇಶವಿರೋಧಿ ಸಂಘಟನೆ' ಮತ್ತು `ದೇಶ ಒಡೆಯುವ ಪ್ರತ್ಯೇಕತಾವಾದಿ ಸಂಘಟನೆ' ಎಂದು ಸ್ವಯಂ ಸುಪ್ರೀಂ ಕೋಟರ್್ ಝಾಡಿಸಿದೆ. `ನೀವು ಪ್ರತ್ಯೇಕತಾವಾದಿ ಸಂಘಟನೆ. ದೇಶವನ್ನು ಹೋಳುಗಳಾಗಿ ಮಾಡುವವರು. ನಿಮ್ಮ ಇಂತಹ ದೇಶವಿರೋಧಿ ಚಟುವಟಕೆಗಳನ್ನು ನೀವಿನ್ನೂ ನಿಲ್ಲಿಸಿಲ್ಲ' ಎಂದು ನಿಷೇಧವನ್ನು ರದ್ದುಮಾಡುವಂತೆ ಕೋರಿದ್ದ ಸಂಘಟನೆಯ ಮುಖಕ್ಕೆ ರಾಚುವಂತೆ ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

ಈ ವಿಷಯದಲ್ಲಿ ಅನುಮಾನ ಏನು? `ಸಿಮಿ ಒಂದು ಭಯೋತ್ಪ್ಪಾದಕ ಸಂಘಟನೆ' ಎಂಬುದು ಯಾವಾಗಲೋ ಸಾಬೀತಾಗಿರುವ ಅಂಶವಲ್ಲವೆ? ವಾಸ್ತವವಾಗಿ ಇದು ಭಾರತದ ಹಸಿ ಹಸಿ ಮೂಲಭೂತವಾದಿ ಸಂಘಟನೆ. ಕಮ್ಯುನಿಸ್ಟರಿಗೆ ನಕ್ಸಲ್ ಆಯಾಮವಿದ್ದಂತೆ ಇಸ್ಲಾಮಿಸ್ಟರಿಗೆ ಸಿಮಿ.

ಉತ್ತರ ಪ್ರದೇಶದ ಅಲಿಗಢದಲ್ಲಿ ಏಪ್ರಿಲ್ 25, 1977ರಂದು ಅದರ ಜನನವಾಯಿತು. ಅದರ ಜನಕ ಜರ್ನಲಿಸಂ ಪ್ರೊಫೆಸರ್ ಮಹಮ್ಮದ್ ಅಹ್ಮದುಲ್ಲಹ್ ಸಿದ್ದಿಕಿ. ಮುಸ್ಲಿಂ ಯುವಕರನ್ನು ಆಕಷರ್ಿಸಿ ಸೆಳೆದುಕೊಂಡು ಭಾರತವನ್ನು ಇಸ್ಲಾಮೀ ದೇಶ (ದಾರುಲ್ ಇಸ್ಲಾಮ್) ಮಾಡಬೇಕು ಎಂಬುದು ಅದರ ಉದ್ದೇಶ. ಪ್ರಸ್ತುತ ಉತ್ತರಪ್ರದೇಶ, ದೆಹಲಿ, ಮಧ್ಯಪ್ರದೇಶ, ಗುಜರಾತ್, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಳ್ಲಿ ಅದರ ಜಾಲ ಪ್ರಬಲವಾಗಿದೆ ಎನ್ನಲಾಗಿದೆ. ಕೇರಳದಲ್ಲಿ ಅದು 12 ವಿವಿಧ ಸಂಸ್ಥೆಗಳ ತೆರೆಮರೆಯಲ್ಲಿ ಸಕ್ರಿಯವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮೇಲೆ ಯಾವುದೋ ಸಂಸ್ಥೆಯ ಫ್ರಂಟ್ ಆಫಿಸ್. ಅದರ ಹಿಂದೆ ಸಿಮಿಯ ಕೆಲಸ! ಕನರ್ಾಟಕದಲ್ಲೂ ಅದರ ಜಾಲ ಹರಡಿರುವ ಅಂಶ ಈಚೆಗೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ 3000 ಮದರಸಾಗಳ ಪೈಕಿ ಬಹುತೇಕ ಮದರಸಾಗಳು ಸಿಮಿ ಕಾರ್ಯಕ್ಷೇತ್ರ್ರವಾಗಿವೆ ಎಂಬುದು ಗೂಢಚಾರ ಇಲಾಖೆಯ ಮಾಹಿತಿ.

ಓಸಾಮಾ ಬಿನ್ ಲಾಡೆನ್ ಸಿಮಿಯ ಹೀರೋ. ಮುಸ್ಲಿಮೇತರ ದೇಶಕ್ಕೆ ಹಿಂಸಾತ್ಮಕ ಜಿಹಾದ್ ಒಂದೇ ಮದ್ದು ಎಂದು ಅದು ದೃಢವಾಗಿ ಭಾವಿಸಿದೆ ಎನ್ನುತ್ತಾರೆ ತಜ್ಞರು. ಭಾರತ ದೇಶದ ವಿರುದ್ಧ `ಜಿಹಾದ್' ಘೊಷಿಸಿರುವ ಈ ಸಂಘಟನೆಗೆ ಪಾಕಿಸ್ತಾನದ ಲಷ್ಕರ್-ಎ-ತೋಯ್ಬಾದಿಂದ ಹಿಡಿದು ಅನೇಕ ವಿದೇಶಿ ಭಯೋತ್ಪಾದಕ ಹಾಗೂ ಗೂಢಚಾರಿ ಸಂಸ್ಥೆಗಳೊಂದಿಗೆ ಸಂಬಂಧವಿರುವುದನ್ನು ನ್ಯಾಯಾಲಯಗಳೂ ಗುರುತಿಸಿವೆ.

ಕಾಲ ಹೇಗೆ ತಿರುಗಿದೆ ನೋಡಿ. ಈಗಂತೂ ಪತ್ರಿಕೆಗಳ ತುಂಬ ಬರೀ ಸಿಮಿ ಚಟುವಟಿಕೆಗಳ ವರದಿಗಳೇ. ಆದರೆ ಅದಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ನೇಮಿಸಿಕೊಳ್ಳುವುದು ಹೇಗೆ ಸಾಧ್ಯವಾಯಿತು? ಹೇಗೆ ಇಷ್ಟೆಲ್ಲಾ ಬೇರು ಬಿಡಲು ಸಾಧ್ಯವಾಯಿತು? ಎನ್ನುವುದೇ ಮುಖ್ಯವಾದ ಪ್ರಶ್ನೆಗಳು. ಇದಕ್ಕೆ ಉತ್ತರ ಸುಲಭ. ಪ್ರಮುಖ ರಾಜಕೀಯ ನಾಯಕರ ಬೆಂಬಲ ಅಥವಾ ನಿರ್ಲಕ್ಷ್ಯ - ಈ ಎರಡರಲ್ಲಿ ಒಂದು ಲಭ್ಯವಿದ್ದರೆ ಮಾತ್ರ ಇದು ಸಾಧ್ಯ.

2006ರಲ್ಲಿ ರಾಷ್ಟ್ರೀಯ ಉದರ್ು ಪ್ರವರ್ತನಾ ಮಂಡಳಿಯ ಕಾರ್ಯಕ್ರಮದ ನೆಪದಲ್ಲಿ ಸಿಮಿ ಸಂಘಟನೆ ತನ್ನ ಹೊಸ ಪದಾಧಿಕಾರಿಗಳನ್ನು ಆರಿಸಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಮತೀಯ ಹಾಗೂ ರಾಜಕೀಯ ಮುಖಂಡರ ನೆರವು ಪಡೆದುಕೊಂಡು ಹೇಗಾದರೂ 2001ರ ನಿಷೇಧವನ್ನು ರದ್ದುಮಾಡಿಸಿಕೊಳ್ಳುವ ನಿರ್ಣಯವನ್ನು ಇದೇ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. `ಸೆಕ್ಯುಲರ್' ರಾಜಕಾರಣಿಗಳಿಗೆ ಮುಸ್ಲಿಂ ಓಟು ಹಾಕಿಸುವ ಭರವಸೆ ಇತ್ತು ಅವರ ಬೆಂಬಲವನ್ನು ಸುಲಭವಾಗಿ ಪಡೆಯಬಹುದು ಎಂಬುದು ಅದರ ಅನುಭವ. ನಕ್ಸಲ್ ಸಂಘಟನೆಗಳು ಈ ರೀತಿಯ ತಂತ್ರಗಾರಿಕೆಯನ್ನು ಬಹಳ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿವೆ.

ಆದರೆ ಒಂದಿಷ್ಟು ಓಟಿಗಾಗಿ ದೇಶಕ್ಕೇ ಬರೆ ಎಳೆಯುವ `ನಾಯಕರು' ಎಂತಹವರು? ಈಗಲೂ ಸಿಮಿ ಪರವಾಗಿ ಮಾತನಾಡುವ ರಾಜಕಾರಣಿಗಳಿಗೆ ಕೊರತೆ ಇಲ್ಲ. ನಿಮಗೆ ಕೆಲವರ ಹೆಸರುಗಳು ಬೇಕೇ ಬೇಕು ಎಂದರೆ 2001ರ ಸೆಪ್ಟೆಂಬರ್ ತಿಂಗಳ ಇಂಗ್ಲಿಷ್ ಪತ್ರಿಕೆಗಳನ್ನು ತೆರೆದು ನೋಡಿ. ಒಂದು ಹಿಂಟ್: ಈಚೆಗೂ ಮಾಜಿ ಪ್ರಧಾನಿಗಳು ಸಿಮಿ ಪರವಾಗಿ ಮಾತನಾಡಿದ ವರದಿಗಳು ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ