ಸೋಮವಾರ, ಮಾರ್ಚ್ 23, 2009

ವಾಹ್! ಕಡೆಗೂ ಭಾರತ್ ಮಹಾನ್!

ಭಾರತ ವಿಶ್ವದ ಡಯಾಬಿಟಿಸ್ ಕೇಂದ್ರ; ಹೃದ್ರೋಗಿಗಳು ಭಾರತದಲ್ಲೇ ಜಾಸ್ತಿ; ಭಾರತದಲ್ಲಿ ಕುರುಡರು ಜಾಸ್ತಿ -ಇವೆಲ್ಲ ಆಗಾಗ್ಗೆ ಪತ್ರಿಕೆಗಳಲ್ಲಿ ಕಂಡುಬರುವ ಹೇಳಿಕೆಗಳು. ಈ ಮಾತುಗಳು ಎಷ್ಟು ನಿಜ, ಎಷ್ಟು ಉತ್ಪ್ರೇಕ್ಷೆ ಎಂಬುದು ಚಚರ್ಾವಿಷಯ. ಆದರೆ ಈಗ ಒಂದಂತೂ ನೂರಕ್ಕೆ ನೂರು ಸತ್ಯ. ಅದು- `ವಿಶ್ವದಲ್ಲೇ ಅತಿಹೆಚ್ಚು ಅಪರಾಧ ಜರುಗುತ್ತಿರುವ ದೇಶ ಭಾರತ'! ಋಷಿಗಳ ನಾಡು ಈಗ ಅಪರಾಧಿಗಳ ತವರಾಗಿದೆ.

ಈ ಅಂಕಿಅಂಶ ಗಮನಿಸಿ: 2006ರಲ್ಲಿ ಭಾರತದಲ್ಲಿ ನಡೆದ ಕೊಲೆಗಳ ಸಂಖ್ಯೆ 32,481. ಅಂದರೆ, ಪ್ರತಿ ಗಂಟೆಗೆ 3-4 ಕೊಲೆಗಳು! ರಷ್ಯಾದಲ್ಲಿ ನಡೆದ ಕೊಲೆಗಳ ಸಂಖ್ಯೆ 28,904. ಕೊಲಂಬಿಯಾದಲ್ಲಿ 26,539. ದಕ್ಷಿಣ ಆಫ್ರಿಕಾದಲ್ಲಿ 21,995, ಮೆಕ್ಸಿಕೋದಲ್ಲಿ 13,828 ಹಾಗೂ ಅಮೆರಿಕದಲ್ಲಿ 12,658. ಅಂದರೆ, ಜಗತ್ತಿನ ಎಲ್ಲ ದೇಶಗಳಿಗಿಂತಲೂ ಅತಿ ಹೆಚ್ಚು ಕೊಲೆಗಳು ನಡೆದಿರುವುದು ಭಾರತದಲ್ಲಿ!

ಇದು ವಿಮಾನಗಳ ಬಿಸಿನೆಸ್ ಕ್ಲಾಸ್ನಲ್ಲಿ ಹಾರಾಡಿಕೊಂಡು, ಪಂಚತಾರಾ ಹೊಟೇಲುಗಳಲ್ಲಿ ಬಡತನದ ಬಗ್ಗೆ ಸೆಮಿನಾರ್ ನಡೆಸುವ ಎನ್ಜಿಒ `ತಜ್ಞ'ರ ಅಂಕಿಅಂಶವಲ್ಲ. ಭಾರತ ಸಕರ್ಾರದ ಗೃಹ ಸಚಿವಾಲಯ ಅಧಿಕೃತವಾಗಿ ಕಲೆಹಾಕಿರುವ ಅಂಕಿಅಂಶ. ದೇಶದ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಅಪರಾಧ ಪ್ರಕರಣ ದಾಖಲೆಗಳ ಬ್ಯೂರೋ (ಡಿಸಿಆರ್ಬಿ) ಕೆಲಸಮಾಡುತ್ತಿದೆ. ಇಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಸಕಲ ದೂರುಗಳನ್ನೂ, ಎಲ್ಲ ರೀತಿಯ ಅಪರಾಧ ಪ್ರಕರಣಗಳನ್ನೂ ಕಂಪ್ಯೂಟರ್ ಸಾಫ್ಟ್ವೇರ್ ನೆರವಿನಿಂದ ವಗರ್ೀಕರಿಸಿ, ಸಂಸ್ಕರಿಸಿ ದಾಖಲಿಸಲಾಗುತ್ತದೆ. ಜಿಲ್ಲೆಗಳ ಮಾಹಿತಿ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋಗೆ ಹೋಗುತ್ತದೆ. ರಾಜ್ಯಮಟ್ಟದ ಅಂಕಿಅಂಶ ಇಲ್ಲಿ ಸಿಗುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ) ಇಡೀ ದೇಶದ ಅಪರಾಧ ಚಿತ್ರಣವನ್ನು ತಯಾರಿಸಿ ಪ್ರಕಟಿಸುತ್ತದೆ. ಈಚೆಗೆ 2006ಕ್ಕೆ ಸಂಬಂಧಿಸಿದ `ಕ್ರೈಮ್ ಇನ್ ಇಂಡಿಯಾ' ವಾಷರ್ಿಕ ವರದಿ ಪ್ರಕಟವಾಗಿದೆ. ಅದು ನೀಡುತ್ತಿರುವ ದೇಶದ ಅಪರಾದ ಚಿತ್ರಣ ದಿಗಿಲು ಹುಟ್ಟಿಸುವಂತಿದೆ.

ಮೊದಲ `ಕ್ರೈಮ್ ಇನ್ ಇಂಡಿಯಾ' ವಾಷರ್ಿಕ ವರದಿ ಸಿದ್ಧವಾಗಿದ್ದು 1953ರಲ್ಲಿ. ಇತ್ತೀಚಿನ ವರದಿ 54ನೆಯದು. ಅದು ಕೇವಲ ದಾಖಲಿತ ಅಪರಾಧ ಪ್ರಕರಣಗಳ ಬಗ್ಗೆ ಮಾತ್ರ ವಿವರ ನೀಡುತ್ತದೆ. ಆದರೆ ದಾಖಲೆಗೆ ಸಿಗದೇ ಹೋದ ಅಪರಾಧ ಪ್ರಕರಣಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ ಎನ್ನುವುದು ಸರ್ವವಿದಿತ. ಅದೇನೇ ಇದ್ದರೂ ಅಧಿಕೃತ ವರದಿಯ ಪ್ರಕಾರವೇ ದೇಶದಲ್ಲಿ ವರ್ಷಕ್ಕೆ 32 ಸಾವಿರ ಕೊಲೆಗಳಾಗುತ್ತಿವೆ ಎಂದರೆ ಏನರ್ಥ?

2006ಕ್ಕೆ ಸಂಬಂಧಿಸಿದ ಕೆಲವು ಅಪರಾಧ ವಿವರಗಳನ್ನು ನೋಡೋಣ. ದೇಶದಲ್ಲಿ ನಡೆದ ಒಟ್ಟು ಅಪರಾಧಗಳ ಸಂಖ್ಯೆ 51,02,460!! ಅಂದರೆ, ಪ್ರತಿ 200 ಜನರ ಮಧ್ಯದಲ್ಲೊಂದು ಅಪರಾಧ ಪ್ರಕರಣ! ಇದರಲ್ಲಿ ಇಂಡಿಯನ್ ಪೀನಲ್ ಕೋಡ್ (ಭಾರತೀಯ ದಂಡ ಸಂಹಿತೆ) ಅಡಿ ಬರುವ ಅಪರಾಧಗಳು, ಇತರ ಕಾನೂನುಗಳ ಅಡಿ ಬರುವ ಅಪರಾಧಗಳು (ಮಹಿಳೆಯರ ಮೇಲಿನ ದೌರ್ಜನ್ಯಗಳು, ಆಥರ್ಿಕ ಅಪರಾದಗಳು, ಆಸ್ತಿ ಅಪರಾಧಗಳು, ಜಾತಿ ಆಧಾರಿತ ಅಪರಾಧಗಳು, ಮಕ್ಕಳ ಮೇಲಿನ ಅಪರಾಧಗಳು) -ಹೀಗೆ ವಿವಿಧ ರೀತಿಯ ವಗರ್ೀಕರಣಗಳಿವೆ. ಇ ಪೈಕಿ 18,78,293 ಐಪಿಸಿ ಅಪರಾಧಗಳು ನಡೆದಿವೆ.

ಇಲ್ಲಿ ಎಲ್ಲ ಅಪರಾದಗಳ ಪಟ್ಟಿ ಹಾಕುವುದು ಕಷ್ಟ. ಹಿಂಸಾ ಅಪರಾದಗಳ ಪೈಕಿ: ಕೊಲೆಗಳು 32,481. ಕೊಲೆಯ ಪ್ರಯತ್ನಗಳು 27,230 (ಕೊಲೆಯ ಪ್ರಯತ್ನಗಳಿಗಿಂತಲೂ ಕೊಲೆಗಳೇ ಜಾಸ್ತಿ. ಅಂದರೆ ಕೊಲೆಗಾರರ ಸಕ್ಸ್ಸ್ ರೇಟ್ ಹೆಚ್ಚು!). ಕಲ್ಪಬಲ್ ಹೋಮಿಸೈಡ್ (ಕೊಲೆಯಲ್ಲದ ಹತ್ಯೆಗಳು) 3,535. ಅಪಹರಣ 23,991. ಡಕಾಯಿತಿ 4747. ಡಕಾಯಿತಿ ಪ್ರಯತ್ನ 3129. ದರೋಡೆ 18,456. ದಂಗೆ, ದೊಂಬಿ 56,641. ದಾಳಿ 8480. ವರದಕ್ಷಿಣೆ ಸಾವು 7618.

ಉಳಿದಂತೆ ಕೆಲವನ್ನು ಮಾತ್ರ ನೋಡೋಣ. ಅತ್ಯಾಚಾರ (ರೇಪ್) 19,348. ಮಹಿಳೆ, ಹುಡುಗಿಯರ ಅಪಹರಣ 17,414. ಲೈಂಗಿಕ ಚೇಷ್ಟೆ 36,617. ಲೈಂಗಿಕ ಕಿರುಕುಳ 9,966. ಮೋಸಗಾರಿಕೆ 58,076. ಕನ್ನಗಳ್ಳತನ 91,666. ಕಳ್ಳತನ 2,74,354. ಮಕ್ಕಳ ಮೇಲಿನ ಅಪರಾಧಗಳು 18,967.

ಮಧ್ಯಪ್ರದೇಶ ದೇಶದಲ್ಲೇ ಅತಿ ಹೆಚ್ಚು ಅಪರಾಧ ದಾಖಲಿಸಿರುವ (ಶೇ. 10.4 - ಇದು ಸಾಧನೆಯಲ್ಲ, ನಾಚಿಕೆಗೇಡಿನ ವಿಷಯ) ರಾಜ್ಯ. ಅನಂತರದ ಸ್ಥಾನ ಮಹಾರಾಷ್ಟದ್ದು (ಶೇ. 10.2) ಅನಂತರ ಆಂಧ್ರಪ್ರದೇಶ (ಶೇ. 9.3). ನಗರಗಳ ಪೈಕಿ ಮೊದಲ ಮೂರು ನಗರಗಳು ದೆಹಲಿ, ಮುಂಬೈ ಹಾಗೂ ಬೆಂಗಳೂರು. ದೇಶದ ಒಟ್ಟು ಅಪರಾಧಗಳ ಪೈಕಿ ಶೇ. 16.2 ರಷ್ಟು ಅಪರಾಧಗಳು ಈ ಮೂರು ನಗರಗಳಲ್ಲಿ ನಡೆದಿವೆ! ಈಶಾನ್ಯ ರಾಜ್ಯಗಳಲ್ಲಿ ಅತಿ ಕಡಿಮೆ ಅಪರಾಧಗಳು ದಾಖಲಾಗಿವೆ!

2006ರಲ್ಲಿ ಬಂಧಿಸಲ್ಪಟ್ಟ ಆಪಾದಿತರ ಸಂಖ್ಯೆ 62,07,945!! ಅಂದರೆ, ದೇಶದ ಒಟ್ಟು ಜನರ ಪೈಕಿ ಪ್ರತಿ 160 ಜನರಿಗೆ ಒಬ್ಬರು ಬಂಧನಕ್ಕೆ ಒಳಗಾಗಿದ್ದಾರೆ!!

ನನ್ನ ಬಳಿ 1953ರಿಂದ ಈಚೆಗಿನ ಅಂಕಿಅಂಶಗಳೆಲ್ಲ ಇವೆ. 1953ರಲ್ಲಿ ದಾಖಲಾದ ಅಪರಾಧಗಳು 6 ಲಕ್ಷ. ಈಗ ಹತ್ತು ಪಟ್ಟು ಹೆಚ್ಚು ಅಪರಾಧಗಳು ದಾಖಲಾಗಿವೆ! ಅಪರಾಧ ಪ್ರಕರಣಗಳು ಏರುಗತಿಯಲ್ಲಿದ್ದು ಪ್ರತಿ ವರ್ಷವೂ ಹೆಚ್ಚಿನ ಪ್ರಗತಿ, ಹೆಚ್ಚಿನ ಬೆಳವಣಿಗೆ ತೋರಿಸುತ್ತಿವೆ! ಇದಕ್ಕಿಂತ ಹೆಚ್ಚಿನ ಅಂಕಿಅಂಶಗಳ ಗೋಜಲು ಈಗ ಬೇಡ.

`ಭಾರತ ಅತ್ಯಂತ ಸಭ್ಯರ ನಾಡು, ಇಲ್ಲಿ ಅಪರಾಧ ಪ್ರಕರಣಗಳು ಯೂರೋಪಿನಷ್ಟಿಲ್ಲ. ಇಲ್ಲಿನ ಕಳ್ಳರೂ ಪ್ರಾಮಾಣಿಕರೇ' ಎಂದು 18ನೇ ಶತಮಾನದ ಪೋಚರ್ುಗೀಸ್ ದಾಖಲೆಗಳಲ್ಲಿ ವಿವರಿಸಲಾಗಿದೆ. ಚಿಕ್ಕ ಅಪರಾಧಗಳಿಗೆ ಬಂಧನಕ್ಕೊಳಗಾದ ವ್ಯಕ್ತಿಗಳು ಪೊಲೀಸರಿಂದ ಅನುಮತಿ ಪಡೆದು ಕಾಡುಗಳ ಮಾರ್ಗದಲ್ಲಿ ಅನೇಕ ದಿನಗಳು ನಡೆದುಹೋಗಿ ತಮ್ಮ ಮನೆಯವರಿಗೆ ವಿಷಯ ತಿಳಿಸಿ ಅನಂತರ ಪೊಲೀಸ್ ಠಾಣೆಗೆ ಮರಳಿ ಬಂದು ಬಂಧನಕ್ಕೊಳಗಾಗುತ್ತಿದ್ದರು (ಹೋದರೆ ಹೋಗಲಿ ಎಂದೇ ಇವರನ್ನು ಬಿಟ್ಟಿದ್ದರೂ!) ಎನ್ನುತ್ತವೆ ಕೆಲವು ಪೋಚರ್ುಗೀಸ್ ದಾಖಲೆಗಳು!!

ಇಂತಹ ದೇಶವನ್ನು ಈಗ ಯಾವ ಮಟ್ಟಕ್ಕೆ ತರಲಾಗಿದೆ ನೋಡಿದಿರಾ? ಕಾನೂನು ಸುವ್ಯವಸ್ಥೆ ಎಲ್ಲಿದೆ?

ಕೋಟರ್ುಗಳಲ್ಲಿ ಪ್ರಕರಣಗಳ ಇತ್ಯರ್ಥ ವಿಳಂಬವಾಗಿ ಆಪಾದಿತರಿಗೆ ಶಿಕ್ಷೆ ವಿಧಿಸುವುದು ಸಮರ್ಪಕವಾಗಿ ನಡೆಯುತ್ತಿಲ್ಲ. ಅಪರಾದ ಹೆಚ್ಚಲು ಇದೂ ಕಾರಣ. 1961ರಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ. 30ರಷ್ಟು ಪ್ರಕರಣಗಳ ವಿಚಾರಣೆ ಮಾತ್ರ ಮುಗಿದಿತ್ತು. ಅವುಗಳ ಪೈಕಿ ಶೇ. 61ರಷ್ಟು ಪ್ರಕರಣಗಳಲ್ಲಿ ಮಾತ್ರ ಆಪಾದಿತರಿಗೆ ಶಿಕ್ಷೆ ವಿಧಿಸಲಾಗಿದೆ. 2006ರಲ್ಲಿ ಶೇ. 15.5ರಷ್ಟು ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗಿದೆ. ಈ ಪೈಕಿ ಶಿಕ್ಷಾಪ್ರಮಾಣ ಶೇ. 42 ಅಷ್ಟೇ. ಇದರರ್ಥ ಏನು? ಎಲ್ಲ ದಾಖಲಿತ ಪ್ರಕರಣಗಳ ವಿಚಾರಣೆ ಕೋಟರ್ಿನಲ್ಲಿ ಸಂಪೂರ್ಣವಾಗಿ ನಡೆಯುವುದಿಲ್ಲ ಎನ್ನುವುದೇ ವಾಸ್ತವ. ಒಂದೆಡೆ ದಿನದಿನಕ್ಕೆ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಅವುಗಳ ವಿಚಾರಣೆ ನಡೆಸುವುದು ಕಷ್ಟವಾಗುತ್ತಿದೆ. ಈ ಇಳಿಮುಖದ ಟ್ರೆಂಡಿನಿಂದಾಗಿ ನ್ಯಾಯಾಲಯಕ್ಕೆ ಹೋದರೆ ತಮಗೆ ಶಿಕ್ಷೆ ಖಾತ್ರಿ ಎಂದು ಯಾರೂ ಹೆದರುತ್ತಿಲ್ಲ.

ನ್ಯಾಯಾಂಗದ, ಪೊಲೀಸ್ ವ್ಯವಸ್ಥೆಯ ಸುಧಾರಣೆ ಶಾಶ್ವತವಾಗಿ ನೆನೆಗುದಿಗೆ ಬಿದ್ದಿರುವುದು ಅಪರಾಧಿಗಳಿಗೆ ವರವಾಗಿ ಪರಿಣಮಿಸಿದೆ. ನ್ಯಾಯಾಂಗದ ಅನೇಕರ, ಪೊಲೀಸ್ ವ್ಯವಸ್ಥೆಯ ಹಲವರ ಭ್ರಷ್ಟಾಚಾರ ಅಪರಾದ ಹೆಚ್ಚಳಕ್ಕೆ ಇನ್ನೊಂದು ಕಾರಣ. ಅರಾಧಿಗಳಿಗೂ ರಾಜಕಾರಣಿಗಳಿಗೂ ನಡುವಿನ ಅಂತರ ಕಿರಿದಾಗುತ್ತಿರುವುದು ಅತ್ಯಂತ ಪ್ರಮುಖ ಕಾರಣ. ವಾಸ್ತವವಾಗಿ ಅಪರಾಧಿಗಳೇ ಆಳುವವರಾಗುತ್ತಿದ್ದಾರೆ ಎನ್ನುವುದೇ ಈ ಹೊತ್ತಿನ ಸತ್ಯ. ಎನ್.ಎನ್. ವೋಹ್ರಾ ಸಮಿತಿಯ ವರದಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ನಾಳೆ ಮುತ್ತುಲಕ್ಷ್ಮೀ, ನಳಿನಿ, ಅಫ್ಜಲ್ ಗುರು, ದಾವೂದ್ ಇಬ್ರಾಹಿಮ್ ಚುನಾವಣೆಗೆ ನಿಂತರೂ ಆಶ್ವರ್ಯವಿಲ್ಲ. ಭಾರತದಲ್ಲಿ ಇಂತಹ `ಪವಾಡ'ಗಳಿಗೆ ಬರವಿಲ್ಲ!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ