ಸೋಮವಾರ, ಮಾರ್ಚ್ 23, 2009

`ಡೋಂಟ್ ಅಟ್ಯಾಕ್ ಅಸ್ ಪ್ಲೀ...ಸ್........'

ಸದ್ಯದಲ್ಲೇ ಪಾಕಿಸ್ತಾನದ ಟಿವಿ ಚಾನೆಲ್ಗಳಲ್ಲಿ ವಿಶೇಷ ಜಾಹೀರಾತುಗಳು ಬಿತ್ತರವಾಗಲಿವೆ. ಈ ಜಾಹೀರಾತುಗಳನ್ನು ಹಾಕಿಸುತ್ತಿರುವುದು ಯಾವುದೋ ಬಹುರಾಷ್ಟ್ರೀಯ ಕಂಪೆನಿಯಲ್ಲ. ಇವು ಯಾವುದೋ ಗ್ರಾಹಕ ಬಳಕೆಯ ವಸ್ತುಗಳ ಜಾಹೀರಾತುಗಳಲ್ಲ. ಇವುಗಳನ್ನು ತಯಾರಿಸಿರುವುದು ಸ್ವತಃ ಬ್ರಿಟನ್ ಸಕರ್ಾರ! ತನ್ನ ಜಾಹೀರಾತುಗಳ ಮೂಲಕ ಅದು ಏನನ್ನೂ ಪ್ರಚಾರ ಮಾಡುತ್ತಿಲ್ಲ. ತನ್ನ ದೇಶದ `ವಿಕ್ಟೋರಿಯನ್ ವ್ಯಾಲ್ಯೂ'ಗಳ ಪ್ರಚಾರಕ್ಕೆ ಟೊಂಕಕಟ್ಟಿ ನಿಂತಿಲ್ಲ. ಬದಲಾಗಿ ತಗ್ಗಿಬಗ್ಗಿ ಮನವಿ ಮಾಡಿಕೊಳ್ಳುತ್ತಿದೆ! ಬೊಬ್ಬೆಯಿಟ್ಟು ಬೇಡಿಕೊಳ್ಳುತ್ತಿದೆ!

ಏನೆಂದು ಗೊತ್ತೆ? `ದಯವಿಟ್ಟು ಕೇಳಿ. ಬ್ರಿಟನ್ ಇಸ್ಲಾಮ್ ಮತದ ವಿರುದ್ಧವಾಗಿಲ್ಲ. ಮುಸ್ಲಿಮರು ನಮ್ಮ ಸಮಾಜದ ಅವಿಭಾಜ್ಯ ಅಂಗ. ದಯವಿಟ್ಟು ನಮ್ಮ ಮೇಲೆ ದಾಳಿ ಮಾಡಬೇಡಿ. ಪ್ಲೀಸ್.. ಪ್ಲೀಸ್ ಡೋಂಟ್ ಅಟ್ಯಾಕ್ ಅಸ್!' - ಎಂದು. ಈ ಜಾಹೀರಾತುಗಳ ಮೂಲಕ ಪಾಕಿಸ್ತಾನದ ಜಿಹಾದಿಗಳನ್ನು ಬ್ರಿಟಿಷ್ ಸಕರ್ಾರ ಗೋಗರೆದು ಕೇಳಿಕೊಳ್ಳಲಿದೆ. ಈ ಉದ್ದೇಶಕ್ಕಾಗಿಯೇ ತಲಾ 40 ಸೆಕೆಂಡುಗಳ 10 ಜಾಹೀರಾತುಗಳನ್ನು ಚಿತ್ರೀಕರಿಸಲಾಗಿದೆ. `ಹೌದು ಬ್ರಿಟನ್ ಪಾಲಿಗೆ ಮುಸ್ಲಿಮರು ದೇವರಿದ್ದಂತೆ' ಎಂದು ಮುಸ್ಲಿಮರಿಂದಲೇ ಹೇಳಿಸಲು ಕೆಲವು ಬ್ರ್ರಿಟಿಷ್ ಮುಸ್ಲಿಮ್ ಮಾಡೆಲ್ಗಳಿಗೆ ಅಪಾರವಾದ ಹಣನೀಡಿ ಅವರ ಹೇಳಿಕೆಯನ್ನು ಚಿತ್ರೀಕರಿಸಿಕೊಳ್ಳಲಾಗಿದೆ.

`ಭಯೋತ್ಪಾದನೆಯ ವಿರುದ್ಧ ಸಮರ' ಸಾರಿದ್ದ ಬ್ರಿಟನ್ ಈಗ ಈ ಹಂತಕ್ಕೆ ಬಂದು ನಿಂತಿದೆ. `ಸೂರ್ಯನು ಮುಳುಗದ ಸಾಮ್ರಾಜ್ಯದ' ಹಮ್ಮಿನಲ್ಲಿದ್ದ ದೇಶ ಈಗ ಅಲ್-ಖೈದಾಕ್ಕೆ ಬೆದರಿ ಬೆಂಡಾಗಿದೆ. ಕಳೆದ 10-15 ವರ್ಷಗಳಲ್ಲಿ ಅಲ್-ಖೈದಾ ಹಾಗೂ ಪಾಕಿಸ್ತಾನಗಳ ಹಿಂಸಾಚಾರದಿಂದ ಹೈರಾಣಾಗಿ ಹೋಗಿದೆ. ಸಮರ ಎದುರಿಸಿ ಗೆಲ್ಲುವ ನೈತಿಕ ಸ್ಥೈರ್ಯ, ಎದೆಗಾರಿಕೆ, ತಾಕತ್ತನ್ನೇ ಕಳೆದುಕೊಂಡು ನಿವರ್ೀರ್ಯವಾಗಿಬಿಟ್ಟಿದೆ. ಅಲ್ಲಿನ ಪ್ರಧಾನಿಗಳು ಮೇಲೆ ಒಮ್ಮೊಮ್ಮೆ ಗಜರ್ಿಸಿದರೂ ಒಳಗೊಳಗೇ ಪುಕ್ಕಲುಗಳಾಗಿದ್ದಾರೆ. ದೇಶದ ಅನೇಕ ಕಾನೂನುಗಳನ್ನು ಪಾಕಿಸ್ತಾನದ ಮುಸ್ಲಿಮರಿಗಾಗಿ ಬದಲಾಯಿಸಲಾಗಿದೆ. ಅವರಿಗೆ ಅನೇಕ ನಿಯಮಗಳಿಂದ ವಿನಾಯಿತಿ ಕೊಡಲಾಗಿದೆ. ಹೀಗೆಲ್ಲ ತುಷ್ಟೀಕರಿಸುವ ಮೂಲಕ ಜಿಹಾದಿಗಳನ್ನು ಸಂತುಷ್ಟಗೊಳಿಸಬಹುದು. ಆಗ ಅವರು ನಮ್ಮ ತಂಟೆಗೆ ಬರುವುದಿಲ್ಲ ಎಂಬ ಲೆಕ್ಕಚಾರ ಅವರದು. ಹೀಗಾಗಿ ಬ್ರಿಟನ್ ಈಗ ಕಾಂಗ್ರೆಸ್ಸಿನ ಭಾರತಕ್ಕಿಂತ ಹೆಚ್ಚು ಅಧ್ವಾನವೆದ್ದು ಹೋಗಿದೆ.

ಕಳೆದ 10-15 ವರ್ಷಗಳಲ್ಲಿ ಬ್ರಿಟನ್ ದೇಶದ ಮುಸ್ಲಿಂ ಜನಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಇದರಲ್ಲಿ ಬಹುತೇಕರು ಪಾಕಿಸ್ತಾನದ ಅಕ್ರಮ ವಲಸಿಗರು. ಲಂಡನ್ ನಗರದ ಮಸೀದಿಗಳಲ್ಲಿ, ಅದರಲ್ಲೂ ಪಾಲರ್ಿಮೆಂಟಿನ ಮೂಗಿನ ಅಡಿಯಲ್ಲೇ ಇರುವ ಹೈಡ್ ಪಾಕರ್್ ಮಸೀದಿಯಲ್ಲಿ, ಪ್ರತಿ ಶುಕ್ರವಾರ ಈಗ ಬಹಿರಂಗವಾಗಿಯೇ ಜಿಹಾದ್ ಕರೆ ನೀಡಲಾಗುತ್ತಿದೆ. ಬ್ರಿಟನ್ ಕಾಲೇಜ್ ಕ್ಯಾಂಪಸ್ಗಳಲ್ಲಿ ಖೈದಾ ತರುಣರು ಮೊರೆಯುತ್ತಿದ್ದಾರೆ. ಹೆಚ್ಚು ಹೆಚ್ಚು ಮುಸ್ಲಿಮೇತರ ವಿದ್ಯಾಥರ್ಿನಿಯರನ್ನು `ಲವ್' ಮಾಡಲು ಅವರಿಗೆ ಸೂಚನೆ ನೀಡಲಾಗಿದೆ ಎಂಬ ವಿಷಯ ಕಳೆದ ವರ್ಷ ಪಾಲರ್ಿಮೆಂಟಿನಲ್ಲಿ ಭಾರಿ ವಿವಾದ ಎಬ್ಬಿಸಿತ್ತು. ಈಗಂತೂ ದೇಶಾದ್ಯಂತ ಕೂತರೆ, ನಿಂತರೆ ಖೈದಾಗಳಿಂದ ಪ್ರತಿಭಟನೆ, ಮೆರವಣಿಗೆ, ಕಲ್ಲು ತೂರಾಟ, ಬಾಂಬ್ ತೂರಾಟ ಸಾಮಾನ್ಯವಾಗಿಬಿಟ್ಟಿದೆ. ಮೊದಲೇ ಧಿಮ್ಮಿ ಡಿಎನ್ಎ ಹೊಂದಿರುವ ರಾಜಕಾರಣಿಗಳು ಈಗ ಬಹಳ ಬಸವಳಿದಿದ್ದಾರೆ. `ದೇಶವೊಂದನ್ನು ಬಿಟ್ಟು ಅವರು ಇನ್ನೇನು ರಿಯಾಯಿತಿ, ವಿನಾಯಿತಿ ಕೇಳಿದರೂ ಕೊಟ್ಟು ಶಾಂತಿ, ನೆಮ್ಮದಿ ಖರೀದಿಸೋಣ' ಎಂಬ ನೀತಿಯನ್ನು ಸಕರ್ಾರ ಪಾಲಿಸಲು ಶುರು ಮಾಡಿದೆ.

ಮೂರು-ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ಗುರುಚಿನ ಚೀಟಿಗಳಲ್ಲಿ, ಡ್ರೈವಿಂಗ್ ಲೈಸೆನ್ಸ್ಗಳಲ್ಲಿ `ನಮ್ಮ ಮಹಿಳೆಯರ' ಭಾವಚಿತ್ರ ಹಾಕಕೂಡದು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಆರ್ಭಟಿಸಿದವು. ಸಕರ್ಾರ ಅದಕ್ಕೂ `ಅಸ್ತು' ಎಂದಿತು! `ಭಾವಚಿತ್ರ ಬೇಡ, ಬೆರಳಚ್ಚು ತೆಗೆಸಿಕೊಡಬಹುದು' ಎಂದು ಹಲ್ಲು ಗಿಂಜಿ ಅಂಗಲಾಚಿತು. ಅದೇ ಸಮಯದಲ್ಲಿ ಡಬರ್ಿ ನಗರದ ಉದ್ಯಾನದಲ್ಲಿ ಸುಮಾರು 100 ವರ್ಷಗಳಿಂದ ಇದ್ದ ಹಂದಿಯ ವಿಗ್ರಹಕ್ಕೆ ಕುತ್ತು ಬಂತು. `ಹಂದಿ ನಮ್ಮ ಮತೀಯ ನಂಬಿಕೆಗಳಿಗೆ ವಿರುದ್ಧವಾಗಿದೆ' ಎಂದು ಕೆಲವರು ರಂಪ ಆರಂಭಿಸಿದರು. ಪ್ರತಿಭಟನೆ ಶುರುವಾಯಿತು. ಸರಿ ತಕ್ಷಣ ಆಡಳಿತ ಆ ಹಂದಿಯ ತಲೆಯನ್ನೇ ತೆಗೆದಿಟ್ಟು, `ನೋಡಿ, ಇದೂ ಒಂಥರಾ ಕಲಾಕೃತಿಯೇ' ಎಂದು ಪೆಚ್ಚು ಹೇಳಿಕೆ ಕೊಟ್ಟಿತು!

ಈಗ ಲಂಡನ್ನಂತಹ ನಗರಗಳಲ್ಲಿ ಪ್ರತ್ಯೇಕ ಮುಸ್ಲಿಂ ಏರಿಯಾಗಳಿವೆ. ಅಲ್ಲಿಗೆ ಕ್ರೈಸ್ತ ಮಿಷನರಿಗಳು ಕಾಲಿಡುವಂತಿಲ್ಲ. ಅವರು `ಅಯ್ಯೋ. ಇದು ಲಂಡನ್. ಲಂಡನಿಸ್ತಾನ್ ಅಲ್ಲ' ಎಂದು ಬೊಬ್ಬೆಯಿಡುತ್ತಿದ್ದಾರೆ. ಆದರೆ ಸಕರ್ಾರ ಕಿವುಡಾಗಿದೆ. ಲಂಡನ್ನ ಹೈಡ್ ಪಾಕರ್್ ಮಸೀದಿಗೂ ಪಾಕಿಸ್ತಾನದ ಲಾಲ್ ಮಸೀದಿಗೂ ಯಾವುದೇ ವ್ಯತಾಸವಿಲ್ಲ. ಎರಡೂ ಖೈದಾ ಅಡ್ಡೆಗಳೇ ಆಗಿವೆ. ಬಮರ್ಿಂಗ್ ಹ್ಯಾಮ್ ನಗರದ ಆಲಂ ರಾಕ್ ಅಂತೂ ಈಗ ಕಾಶ್ಮೀರವಾಗಿಬಿಟ್ಟಿದೆ. ಸದ್ಯದಲ್ಲೇ ದೇಶದಲ್ಲಿ ಪ್ರತ್ಯೇಕ ಶರಿಯಾ ವೈಯಕ್ತಿಕ ಕಾನೂನಿಗೆ ಮಾನ್ಯತೆ ನೀಡಲು ಕೆಲವು ಬ್ರಿಟಿಷ್ ಸಂಸದರು ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಕುರಿತು ಕೆಲವು ನ್ಯಾಯಾಧೀಶರುಗಳು ಈಗಾಗಲೇ ಸಕಾರಾತ್ಮಕವಾದ ರೂಲಿಂಗ್ ನೀಡಿಯಾಗಿದೆ!

ನೆದರ್ಲ್ಯಾಂಡ್ಸ್ ದೇಶದ ಸಂಸದ ಗೀಟರ್್ ವೈಲ್ಡರ್ಸ್ ಪ್ರಕರಣ ಬ್ರಿಟನ್ ಮಾನಸಿಕತೆಗೆ ಕನ್ನಡಿ ಹಿಡಿಯುತ್ತಿದೆ. ಇಸ್ಲಾಮ್ ವಿರುದ್ಧ ಮಾತನಾಡಿದ ಎಂಬ ಕಾರಣಕ್ಕಾಗಿ ಆತ ಬ್ರಿಟನ್ ಪ್ರವೇಶಿಸದಂತೆ ಬ್ರ್ರಿಟಿಷ್ ಸಕರ್ಾರ ನಿಷೇಧ ಹಾಕಿದೆ. ಅದು ನೆದರ್ಸ್ಲ್ಯಾಂಡ್ಸಿನ ಪ್ರತಿಭಟನೆಯನ್ನೂ ಸಹ ಲೆಕ್ಕಿಸಿಲ್ಲ. ಹೆನ್ಪೆಕ್ಡ್ಗಳು ಜಗತ್ತನ್ನೇ ಕಳೆದುಕೊಂಡಾರು, ಆದರೆ ಹೆಂಡತಿಯ ಹುಕುಂ ಪಾಲಿಸದೇ ಇರರು! ಇಂತಹ ಬ್ರಿಟನ್ ಹೆನ್ಪೆಕ್ಡ್ಗಳು ಹೆಂಡತಿಯನ್ನು ಸಹಿಸಿಕೊಂಡಂತೆ ಹೈಡ್ ಪಾಕರ್ಿನ ಜಿಹಾದಿ ಭಾಷಣಕಾರರನ್ನು ಸಹಿಸಿಕೊಂಡಿದೆ! ಅವರಿಗೆ ಯಾವ ನಿಷೇಧವೂ ಇಲ್ಲ. ಬಹಿಷ್ಕಾರವೂ ಇಲ್ಲ. ಅವರು ಅನ್ಯಮತ ದ್ವೇಷಿಗಳಲ್ಲ!

ಸಲ್ಮಾನ್ ರಷ್ದೀ ಬದುಕಿಕೊಂಡ. ಅವನ ಮೇಲೆ ಮೇಲೆ ಇರಾನಿನ ಖೋಮೇನಿ ಫತ್ವಾ ಹಾಕಿದ್ದಾಗ ಬ್ರಿಟನ್ ಅನ್ನು ಆಳುತ್ತಿದ್ದದು ಗಟ್ಟಿ ಹೆಂಗಸು ಎನಿಸಿದ್ದ ಮಾರ್ಗರೇಟ್ ಥ್ಯಾಚರ್. ಆಕೆ ಒಂದು ತರಹ ವಿಕ್ಟೋರಿಯಾ ತಳಿಯವಳು. ಅದೇ ಈಚಿನ ಬ್ಲೇರ್ ಅಥವಾ ಈಗಿನ ಬ್ರೌನ್ ಆಳುತ್ತಿದ್ದಲ್ಲಿ ಆತ ಎಂದೋ ದೇಶಭ್ರಷ್ಟನಾಗಿರುತ್ತಿದ್ದ.

ವಾಸ್ತವವಾಗಿ ಇದು ಧಿಮ್ಮಿತ್ವ. ಇಸ್ಲಾಮೀ ಉಗ್ರವಾದಕ್ಕೆ ಶರಣಾಗಿ ಅದರ ಅಧೀನ ದಾಸತ್ವ ಸ್ವೀಕರಿಸಿ `ಬದುಕಿದೆಯಾ ಬಡಜೀವವೆ' ಎಂದು ಖುಷಿಪಟ್ಟುಕೊಳ್ಳುವ ಮಾನಸಿಕತೆ ಇದು. ಐತಿಹಾಸಿಕವಾಗಿ ಜಗತ್ತಿನಾದ್ಯಂತ ಮುಸ್ಲಿಂ ದೊರೆಗಳು ಮುಸ್ಲ್ಲಿಮೇತರ ಪ್ರಜೆಗಳಿಗೆ ವಿಶೇಷ ಕರಾರುಗಳನ್ನು (ಧಿಮ್ಮಾಹ್) ಹಾಕಿದ್ದರು. ಅವರಿಗೆ ಎರಡನೇ ದಜರ್ೆಯ ಪೌರತ್ವ ನೀಡಿದ್ದರು. ಮುಸ್ಲಿಂ ಪ್ರಜೆಗಳಿಗೆ ಇದ್ದ ನಾಗರಿಕ ಹಾಗೂ ಮತೀಯ ಹಕ್ಕುಗಳು ಧಿಮ್ಮಿಗಳಿಗೆ ಇರಲಿಲ್ಲ. ಇದು ಅವರ ಆಡಳಿತದ ಸಿದ್ಧ ಸೂತ್ರವಾಗಿತ್ತು. ಆದರೆ ವಿಶೇಷ ಅದಲ್ಲ. ಜಗತ್ತಿನ ಅನೇಕ ಸಮಾಜಿಗಳು ತಮಗೆ ಒದಗಿ ಬಂದ ಇತಂಹ ಗುಲಾಮ ಅವಸ್ಥೆಯನ್ನು ಕ್ರಮೆಣ ರಕ್ತಗತ ಮಾಡಿಕೊಂಡವು! ಅದೇ ವಿಶೇಷ. ಗುಲಾಮ ಡಿಎನ್ಎ, ಹೆದರಿಕೆಯ ಮನೋಭಾವ ಸೃಷ್ಟಿಯಾಗಿ ಕ್ರಮೇಣ `ಅದೇ ಸರಿ, ಅದೇ ಸಹಜ' ಎಂಬ ಮಾನಸಿಕತೆಯಾಗಿ ಮಾರ್ಪಟ್ಟಿತು. ಪ್ರತಿಯೊಂದನ್ನೂ ಮುಸ್ಲಿಮರ ದೃಷ್ಟಿಯಿಂದ ಯೋಚಿಸುವುದು; ಅವರಿಗೆ ಇದು ಒಪ್ಪಿಗೆಯೆ? ಇಲ್ಲವೆ? ಎಂದು ತಾಳೆ ಹಾಕುವುದು; ಅವರ ಮತೀಯ ಭಾವನೆಗಳಿಗೆ ತಕ್ಕಂತೆ ನಾವು ವತರ್ಿಸಲೇಬೇಕು ಎಂಬ ಸ್ವಯಂ ನಿಬಂಧನೆಗಳನ್ನು ಹಾಕಿಕೊಳ್ಳುವುದು ರೂಢಿಯಾಯಿತು. ಇಲ್ಲದಿದ್ದರೆ ಏನೋ? ಹೇಗೋ? ಎಂಬ ಭಯ ಮನಸಿನ ಮೂಲೆಯಲ್ಲಿ ಭದ್ರವಾಗಿತ್ತು. ಈ ಮಾನಸಿಕತೆ ಐರೋಪ್ಯ ಸಮಾಜಗಳಲ್ಲಿ ಬಹುಕಾಲದಿಂದ ಬೇರೂರಿರುವುದನ್ನು ಗುರುತಿಸಿ ಅನೇಕ ವಿದ್ವತ್ಪೂರ್ಣ ಗ್ರಂಥಗಳನ್ನು ಬರೆದವಳು ಈಜಿಪ್ಟ್ ಮೂಲದ ಬಹುದೊಡ್ಡ ವಿದ್ವಾಂಸೆ ಬಾತ್ ಇಯೋರ್. ಈ ಮಾನಸಿಕತೆಗೆ ಆಕೆ `ಧಿಮ್ಮಿಟ್ಯೂಡ್' ಎಂದು ಹೆಸರುಕೊಟ್ಟಳು. ಭಾರತೀಯ ಸಂದರ್ಭದಲ್ಲಿ ಅಧ್ಯಯನಗಳನ್ನು ಮಂಡಿಸುವಾಗ ನಾನು ಇದನ್ನೇ `ಧಿಮ್ಮಿತ್ವ' ಎಂದು ಕರೆದೆ. ಇದೇ ಧಿಮ್ಮಿತ್ವವನ್ನು ನಮ್ಮಲ್ಲಿ ಗೌರವಯುತವಾಗಿ `ಸೆಕ್ಯೂಲರಿಸಂ' ಎಂದುಕೊಳ್ಳುತ್ತೇವೆ!

ಒಟ್ಟಿನಲ್ಲಿ, ಒಂದು ಕಾಲದಲ್ಲಿ ಅರ್ಧ ವಿಶ್ವವನ್ನೇ ಬಡಿದು ಬಾಯಿಗೆ ಹಾಕಿಕೊಂಡಿದ್ದ ಬ್ರಿಟನ್ ಇಂದು ಕಂಗಾಲಾಗಿ ಕುಳಿತಿದೆ. ತನ್ನ ಧಿಮ್ಮಿತ್ವವನ್ನು ಭಾರತದಲ್ಲಿ ಬಿತ್ತಿ ಹೋದ ನಂತರ ಈಗ ಅದರ ವಿಷಫಲವನ್ನು ಉಣ್ಣುತ್ತಿದೆ.

1 ಕಾಮೆಂಟ್‌:

  1. ಸಾಲ! ಸಾಲ!! ಸಾಲ!!!
    ನೀವು ಜೀವಿತಾವಧಿಯ ಅವಕಾಶಕ್ಕೆ ಸಾಲ ನೀಡುವ ಒಬ್ಬ ಪ್ರಸಿದ್ಧ ಮತ್ತು ಮಾನ್ಯತೆ ಪಡೆದ ಖಾಸಗಿ ಸಾಲ ಕಂಪನಿಗಾಗಿ ನೋಡುತ್ತಿರುವಿರಾ. ನಾವು ತ್ವರಿತ ಮತ್ತು ಸುಲಭವಾದ ರೀತಿಯಲ್ಲಿ, ವೈಯಕ್ತಿಕ ಸಾಲ, ಕಾರ್ ಸಾಲ, ಮನೆ ಸಾಲ, ವಿದ್ಯಾರ್ಥಿ ಸಾಲ, ಉದ್ಯಮ ಸಾಲ, ಹೂಡಿಕೆಯ ಸಾಲ, ಸಾಲ ಬಲವರ್ಧನೆ ಮತ್ತು ಹೆಚ್ಚಿನವುಗಳಲ್ಲಿ ಎಲ್ಲ ರೀತಿಯ ಸಾಲವನ್ನು ಒದಗಿಸುತ್ತೇವೆ. ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ನೀವು ತಿರಸ್ಕರಿಸಿದ್ದೀರಾ? ನಿಮಗೆ ಬಲವರ್ಧನೆ ಸಾಲ ಅಥವಾ ಅಡಮಾನ ಅಗತ್ಯವಿದೆಯೇ? ನಿಮ್ಮ ಎಲ್ಲ ಹಣಕಾಸಿನ ತೊಂದರೆಯನ್ನೂ ಹಿಂದೆಂದೂ ಮಾಡಿಕೊಳ್ಳಲು ನಾವು ಇಲ್ಲಿದ್ದಂತೆ ಹುಡುಕುವುದಿಲ್ಲ. ನಾವು 2% ದರದಲ್ಲಿ ಹಣಕಾಸು ನೆರವು ಅಗತ್ಯವಿರುವ ವ್ಯಕ್ತಿಗಳಿಗೆ ಮತ್ತು ವ್ಯವಹಾರಗಳಿಗೆ ಸಾಲವನ್ನು ನೀಡುತ್ತೇವೆ. ಯಾವುದೇ ಸಾಮಾಜಿಕ ಭದ್ರತೆ ಸಂಖ್ಯೆ ಅಗತ್ಯವಿಲ್ಲ ಮತ್ತು ಯಾವುದೇ ಕ್ರೆಡಿಟ್ ಪರಿಶೀಲನೆಯ ಅಗತ್ಯವಿಲ್ಲ, 100% ಭರವಸೆ. ನಾವು ವಿಶ್ವಾಸಾರ್ಹ ಮತ್ತು ಫಲಾನುಭವಿಯ ಸಹಾಯವನ್ನು ಸಲ್ಲಿಸುತ್ತೇವೆ ಎಂದು ತಿಳಿಸಲು ಈ ಮಾಧ್ಯಮವನ್ನು ಬಳಸಲು ನಾನು ಬಯಸುತ್ತೇನೆ ಮತ್ತು ನಿಮಗೆ ಸಾಲವನ್ನು ನೀಡಲು ನಾವು ಸಂತೋಷಪಡುತ್ತೇವೆ.
    ಆದ್ದರಿಂದ ಇಂದು ನಮಗೆ ಇಮೇಲ್ ಮಾಡಿ: (victoriaemmanuelloan@gmail.com) ಸಾಲಕ್ಕಾಗಿ ಈಗ ಅರ್ಜಿ ಸಲ್ಲಿಸಲು.

    ಪ್ರತ್ಯುತ್ತರಅಳಿಸಿ